ಕರ್ನಾಟಕ

ಉಡುಪಿ : ನಡು ರಸ್ತೆಯಲ್ಲೇ ವ್ಯಕ್ತಿಯ ಬರ್ಬರ ಹತ್ಯೆ..!!

(ನ್ಯೂಸ್ ಕಡಬ) newskadaba.com ಉಡುಪಿ, ಸೆ. 24:    ಸಂಬಂಧಿಕರ ಮನೆಗೆ ತೆರಳಿದ್ದ ಕಾರ್ಕಳ ತಾಲೂಕು ಇನ್ನಾ ಗ್ರಾಮದ ಕಿಶನ್ ಹೆಗ್ಡೆ ಎಂಬುವವರನ್ನು ಹಿರಿಯಡ್ಕ ಸಮೀಪದಲ್ಲಿ ಇಂದು (ಸೆ.24) ದುಷ್ಕರ್ಮಿಗಳ ತಂಡವೊಂದು ,ನಡು ರಸ್ತೆಯಲ್ಲೆ ಹಾಡಹಗಲೇ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ.   ಕೊಲೆಗೆ ನಿಖರವಾದ ಕಾರಣ ಏನೆಂಬುವುದು ಇನ್ನಷ್ಟೆ ತಿಳಿದು ಬರಬೇಕಿದೆ, ಘಟನಾ ಸ್ಥಳಕ್ಕೆ ಹಿರಿಯಡ್ಕ ಪೊಲೀಸರು ಧಾವಿಸಿದ್ದು ತನಿಖೆ ನಡೆಸುತ್ತಿದ್ದಾರೆ.  

ಉಡುಪಿ : ನಡು ರಸ್ತೆಯಲ್ಲೇ ವ್ಯಕ್ತಿಯ ಬರ್ಬರ ಹತ್ಯೆ..!! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಅಂಚೆ ಕಛೇರಿಯಿಂದ ಮನೆ ಬಾಗಿಲಿಗೆ ಬ್ಯಾಂಕಿಂಗ್‌ ➤1 ನಿಮಿಷದಲ್ಲಿ ಮನೆ ಬಾಗಿಲಲ್ಲೇ ಖಾತೆ ಓಪನ್.!

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ.24: ಭಾರತ ಸರಕಾರ ಅಂಚೆ ಕಛೇರಿಯಿಂದ ಬ್ಯಾಂಕಿಂಗ್‌ ಮನೆ ಬಾಗಿಲಿಗೆ ಅಭಿಯಾನ ಎಲ್ಲಾ ಅಂಚೆ ಕಛೇರಿಗಳಲ್ಲೂ ಸೆ.29 ರಂದು ನಡೆಯಲಿದೆ.   ಸ್ಥಳೀಯ ಅಂಚೆ ಕಛೇರಿಯ ಅಂಚೆ ವಿತರಕರ ಮೂಲಕ 1 ನಿಮಿಷದಲ್ಲಿ ಮನೆ ಬಾಗಿಲಲ್ಲೇ ಖಾತೆ ತೆರೆಯುವ ಅಭಿಯಾನ ಇದಾಗಿದ್ದು, ಕಾಗದ ರಹಿತ, ಪಾಸ್ಬುಕ್‌ ರಹಿತ ಪೂರ್ಣ ಡಿಜಿಟಲ್‌ ಖಾತೆ ಹಾಗೂ ಶೂನ್ಯ ಮೊತ್ತದ ಖಾತೆಗೆ ಇದರಲ್ಲಿ ಅವಕಾಶವಿದೆ. ಖಾತೆ ತೆರೆಯುವವರ ಆಧಾರ್‌ ಕಾರ್ಡ್‌ ಹಾಗೂ ಮೊಬೈಲ್‌ ಸಂಖ್ಯೆ ಹೊಂದಿರಬೇಕು.

ಅಂಚೆ ಕಛೇರಿಯಿಂದ ಮನೆ ಬಾಗಿಲಿಗೆ ಬ್ಯಾಂಕಿಂಗ್‌ ➤1 ನಿಮಿಷದಲ್ಲಿ ಮನೆ ಬಾಗಿಲಲ್ಲೇ ಖಾತೆ ಓಪನ್.! Read More »

ಕರಾವಳಿ, ಕರ್ನಾಟಕ

ಮತ್ತೆ ಕರ್ನಾಟಕದಲ್ಲಿ ಲಾಕ್ ಡೌನ್ ಇಲ್ಲ ➤ ಡಿಸಿಎಂ ಅಶ್ವತ್ಥ್ ನಾರಾಯಣ್ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com  ಬೆಂಗಳೂರು, ಸೆ. 24:  ಕೊರೋನಾ ಸೋಂಕಿನ ಪ್ರಕರಣಗಳು ರಾಜ್ಯದಲ್ಲಿ ದಿನೇ ದಿನೇ ಏರಿಕೆಯಾಗುತ್ತಿರುವ ಕಾರಣ, ಕಳೆದ ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರು ಸಿಎಂ ಯಡಿಯೂರಪ್ಪ ಜೊತೆಗೆ ವೀಡಿಯೋ ಕಾನ್ಫೆರೆನ್ಸ್ ನಲ್ಲಿ ಕೊರೋನಾ ಕಂಟ್ರೋಲ್ ಗಾಗಿ ಲಾಕ್ ಡೌನ್ ಸಲಹೆ ನೀಡಿದ್ದರು. ಹೀಗಾಗಿ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಆಗಲಿದೆ ಎನ್ನುವ ಕುರಿತಂತೆ ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಡಾ.ಸಿಎನ್ ಅಶ್ವತ್ಥ್ ನಾರಾಯಣ್, ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡೋದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.  

ಮತ್ತೆ ಕರ್ನಾಟಕದಲ್ಲಿ ಲಾಕ್ ಡೌನ್ ಇಲ್ಲ ➤ ಡಿಸಿಎಂ ಅಶ್ವತ್ಥ್ ನಾರಾಯಣ್ ಸ್ಪಷ್ಟನೆ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಮಂಗಳೂರು: ಇಂದಿನಿಂದ ಪಿಲಿಕುಳ ನಿಸರ್ಗಧಾಮವು ಸಾರ್ವಜನಿಕ ವೀಕ್ಷಣೆಗೆ ಮುಕ್ತ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 23. ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದವನ್ನು ಇಂದಿನಿಂದ ಸಾರ್ವಜನಿಕರ ವೀಕ್ಷಣೆಗೆ ಮುಕ್ತ ಪ್ರವೇಶ ನೀಡಲಾಗುವುದು ಎಂದು ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ. ನಿಸರ್ಗಧಾಮದ ಮೃಗಾಲಯ, ಲೇಕ್‍ ಗಾರ್ಡನ್, ಹರ್ಬೇರಿಯಂ ಮತ್ತು ಬೊಟಾನಿಕಲ್ ಮ್ಯೂಸಿಯಂ, ಸಂಸ್ಕೃತಿ ಗ್ರಾಮವನ್ನು (ವಿಜ್ಞಾನಕೇಂದ್ರ ಮತ್ತು ತಾರಾಲಯ ಹೊರತುಪಡಿಸಿ) ಸಾರ್ವಜನಿಕರ ವೀಕ್ಷಣೆಗೆ ತೆರೆಯಲಾಗುವುದು ಎಂದು ತಿಳಿಸಿದೆ. ವೀಕ್ಷಕರು ಸರಕಾರದ ಆದೇಶದಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ವೀಕ್ಷಿಸಬಹುದು ಹಾಗೂ ಪ್ರತೀ ಸೋಮವಾರ

ಮಂಗಳೂರು: ಇಂದಿನಿಂದ ಪಿಲಿಕುಳ ನಿಸರ್ಗಧಾಮವು ಸಾರ್ವಜನಿಕ ವೀಕ್ಷಣೆಗೆ ಮುಕ್ತ Read More »

ಕರಾವಳಿ, ಕರ್ನಾಟಕ

ಹಿರಿಯ ನಟ ರಾಕ್​ಲೈನ್ ಸುಧಾಕರ್ ನಿಧನ..!!

(ನ್ಯೂಸ್ ಕಡಬ) newskadaba.com ಬೆಂಗಳೂರು,ಸೆ. 24:  ತಮ್ಮ ವಿಶಿಷ್ಟ ಕಾಮಿಡಿ ನಟನೆಯ ಮೂಲಕ ಸ್ಯಾಂಡಲ್ ವುಟ್ ಚಿತ್ರರಂಗದಲ್ಲಿ ನಟರಾಗಿ ಗುರ್ತಿಸಿಕೊಂಡಿದ್ದಂತ ನಟ ರಾಕ್ ಲೈನ್ ಸುಧಾಕರ್ ಹೃದಯಾಘಾತದಿಂದ ನಿಧನರಾಗಿದ್ದಾರೆ.   ಶೂಟಿಂಗ್​ ಸಮಯದಲ್ಲೇ ಹೃದಯಾಘತ ಸಂಭವಿಸಿದ್ದರಿಂದ ಹಿರಿಯ ನಟ ರಾಕ್​ಲೈನ್​ ಸುಧಾಕರ್​ ಮೃತಪಟ್ಟಿದ್ದಾರೆ. ಕನ್ನಡದಲ್ಲಿ ಸಾಕಷ್ಟು ಪೋಷಕ ಪಾತ್ರ ಹಾಗೂ ಕಾಮಿಡಿ ಪಾತ್ರಗಳಲ್ಲಿ ಅವರು ನಟಿಸಿದ್ದರು. ಅವರ ಅಗಲಿಕೆ ಇಡೀ ಚಿತ್ರರಂಗವೇ ಶೋಕ ವ್ಯಕ್ತಪಡಿಸಿದೆ. ಕೆಲ ದಿನಗಳ ಹಿಂದಷ್ಟೇ ಸುಧಾಕರ್​ಗೆ ಕೊರೋನಾ ಸೋಂಕು ತಗುಲಿತ್ತು. ಇದಕ್ಕಾಗಿ ಅವರು

ಹಿರಿಯ ನಟ ರಾಕ್​ಲೈನ್ ಸುಧಾಕರ್ ನಿಧನ..!! Read More »

ಕರ್ನಾಟಕ

ಉಡುಪಿ – ಚಿಕ್ಕಮಗಳೂರು ಸಂಯುಕ್ತ ಖಾಝಿ ಬೇಕಲ್ ಉಸ್ತಾದ್ ನಿಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.24. ಉಡುಪಿ, ಚಿಕ್ಕಮಗಳೂರು, ಹಾಸನ ಸಂಯುಕ್ತ‌ ಖಾಝಿ, ಪ್ರಖ್ಯಾತ ವಿದ್ವಾಂಸ, ಸೂಫೀವರ್ಯ ಶೈಖುನಾ ತಾಜುಲ್ ಫುಖಹಾಅ್ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅಸೌಖ್ಯದ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಅವರು ಉಡುಪಿ, ಚಿಕ್ಕಮಗಳೂರು, ಹಾಸನ, ಮಂಗಳೂರು ಸೇರಿದಂತೆ ವಿವಿಧ ಮಹಲ್ಲಿನ ಸಂಯುಕ್ತ ಖಾಝಿಯಾಗಿ ಕರ್ತವ್ಯದಲ್ಲಿದ್ದರು.

ಉಡುಪಿ – ಚಿಕ್ಕಮಗಳೂರು ಸಂಯುಕ್ತ ಖಾಝಿ ಬೇಕಲ್ ಉಸ್ತಾದ್ ನಿಧನ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ನೇಕಾರ ಲಕ್ಷ್ಮಣ ಶೆಟ್ಟಿಗಾರ್ ಅವರ ನೆರವಿಗೆ ನಿಂತ ಕೇಂದ್ರ ಸಚಿವೆ ಸ್ಮೃತಿ ಇರಾನಿ

(ನ್ಯೂಸ್ ಕಡಬ) newskadaba.com ಉಡುಪಿ, ಸೆ. 24: ಉಡುಪಿಯಲ್ಲಿ ಸುರಿದ ಮಹಾಮಳೆಗೆ ಬದುಕಿಗೆ ಆಧಾರವಾಗಿದ್ದ ಕೈಮಗ್ಗ ಹಾಳಾಗಿ ಸಂಕಷ್ಟಕ್ಕೆ ಸಿಲುಕಿದ್ದ ಕಟಪಾಡಿ ಮಟ್ಟುವಿನ ಲಕ್ಷ್ಮಣ ಶೆಟ್ಟಿಗಾರ್ ಅವರಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೂಡಾ ಸಹಾಯಕ್ಕೆ ನಿಂತಿದ್ದಾರೆ. ಲಕ್ಷ್ಮಣ್‌ ಶೆಟ್ಟಿಗಾರ್‌ ಕುಟುಂಬಕ್ಕೆ ತಕ್ಷಣ ನೆರವು ನೀಡುವಂತೆ ಕೇಂದ್ರ ಸರಕಾರದ ಟೆಕ್ಸ್‌ಟೈಲ್‌ ಇಲಾಖೆಯ ಅಧೀನದಲ್ಲಿರುವ ಬೆಂಗಳೂರು ನೇಕಾರರ ಸೇವಾ ಕೇಂದ್ರಕ್ಕೆ ಅವರು ನಿರ್ದೇಶನ ನೀಡಿದ್ದಾರೆ. ಉಡುಪಿಯಲ್ಲಿ ಸುರಿದ ಮಹಾಮಳೆ ಸಂದರ್ಭ ಲಕ್ಷ್ಮಣ ಶೆಟ್ಟಿಗಾರ್ ಅವರು ಪತ್ನಿ ಜತೆ ನೆರೆ

ನೇಕಾರ ಲಕ್ಷ್ಮಣ ಶೆಟ್ಟಿಗಾರ್ ಅವರ ನೆರವಿಗೆ ನಿಂತ ಕೇಂದ್ರ ಸಚಿವೆ ಸ್ಮೃತಿ ಇರಾನಿ Read More »

ಕರಾವಳಿ, ಕರ್ನಾಟಕ

ಕುಕ್ಕೆಯಲ್ಲಿ ದಿನಕ್ಕೆ 225 ಆಶ್ಲೇಷ ಪೂಜೆ ಮಾಡಲು ಅವಕಾಶ ➤ ಆಡಳಿತಾಧಿಕಾರಿ ರೂಪಾ ಎಂ.ಜೆ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಸೆ. 24:  ಕುಕ್ಕೆ ಸುಬ್ರಹ್ಮಣ್ಯದಲ್ಲಿ ದಿನಕ್ಕೆ 225 ಶ್ಲೇಷ ಪೂಜೆ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿ ರೂಪಾ ಎಂ ಜೆ ರವರು ತಿಳಿಸಿದ್ದಾರೆ.   ಕುಕ್ಕೆ ಯಲ್ಲಿ ನಡೆಯುತ್ತಿರುವ ಕಾಮಗಾರಿ ವೀಕ್ಷಣೆ ಬಳಿಕ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.  ಪೂಜೆಗಳ ಬಗ್ಗೆ ಮಾಹಿತಿ ನೀಡಿದ್ದು, ಆಶ್ಲೇಷ ಬಲಿ ಪೂಜೆ ಮೂರು ಬ್ಯಾಚ್ ಮಾಡಿ ತಲಾ 75ರಂತೆ ದಿನಕ್ಕೆ 225 ಆಶ್ಲೇಷ ಪೂಜೆ ನಡೆಸಲು ಅವಕಾಶ ಕಲ್ಪಿಸಿದ್ದು, ಬೆಳಗ್ಗೆ

ಕುಕ್ಕೆಯಲ್ಲಿ ದಿನಕ್ಕೆ 225 ಆಶ್ಲೇಷ ಪೂಜೆ ಮಾಡಲು ಅವಕಾಶ ➤ ಆಡಳಿತಾಧಿಕಾರಿ ರೂಪಾ ಎಂ.ಜೆ ಸ್ಪಷ್ಟನೆ Read More »

ಕರಾವಳಿ, ಕರ್ನಾಟಕ

ಮಾಸ್ಕ್, ಕಡ್ಡಾಯ ತಪ್ಪಿದ್ದಲ್ಲಿ ಬೀಳುತ್ತೆ “ಈ” ಮೊತ್ತ ➤ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಮಂಗಳೂರು , ಸೆ. 24:  ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಗ್ರಾಮಾಂತರ, ನಗರ ಸ್ಥಳೀಯ ಸಂಸ್ಥೆ ಹಾಗೂ ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾಸ್ಕ್ ಬಳಕೆ ಕಡ್ಡಾಯ ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.     ಹೊಟೇಲ್‌, ರೆಸ್ಟೋರೆಂಟ್‌ಗಳು, ವಾಣಿಜ್ಯ ಸಂಕೀರ್ಣಗಳು, ಮಾಲ್‌ಗಳು, ಅಂಗಡಿಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಿಬಂದಿ ಹಾಗೂ ಸಾರ್ವಜನಿಕರು ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರವನ್ನು ಕಡ್ಡಾಯ. ಪ್ರತಿ ಅಂಗಡಿ ಮಾಲಕರು ಸಾಮಾಜಿಕ ಅಂತರ ನಿಯಮಗಳನ್ನು ಕಟ್ಟುನಿಟ್ಟಾಗಿ

ಮಾಸ್ಕ್, ಕಡ್ಡಾಯ ತಪ್ಪಿದ್ದಲ್ಲಿ ಬೀಳುತ್ತೆ “ಈ” ಮೊತ್ತ ➤ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ ಸ್ಪಷ್ಟನೆ Read More »

ಕರಾವಳಿ, ಕರ್ನಾಟಕ

ಉಪ್ಪಿನಂಗಡಿ: ಅಂಗನವಾಡಿ ಕೇಂದ್ರದ ಬಳಿ ಅಪಾಯಕಾರಿ ವಿದ್ಯುತ್ ತಂತಿ ಸಂಪರ್ಕ ➤ ಎಸ್.ಡಿ.ಪಿ.ಐ ಪೆರಿಯಡ್ಕ ಬ್ರಾಂಚ್ ವತಿಯಿಂದ ಮೆಸ್ಕಾಂ ಮನವಿ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ. 23. ಪೆರಿಯಡ್ಕ ಸಮೀಪದ ನೆಡ್ಚಿಲ್ ಅಂಗನವಾಡಿ ಕೇಂದ್ರದ ಮೇಲ್ಬಾಗದಲ್ಲಿ ಅಪಾಯಕಾರಿ ವಿದ್ಯುತ್ ತಂತಿ ಹಾದು ಹೋಗಿದ್ದು, ಇದರಿಂದಾಗಿ ಮಕ್ಕಳ ಜೀವಕ್ಕೆ ಅಪಾಯ ಒದಗುವ ಮುನ್ನ ಸ್ಥಳಾಂತರ ಮಾಡಬೇಕೆಂದು ಎಸ್ಡಿಪಿಐ ಪೆರಿಯಡ್ಕ ಬ್ರಾಂಚ್ ವತಿಯಿಂದ ಮೆಸ್ಕಾಂ ಕಛೇರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಎಸ್ಡಿಪಿಐ ಉಪ್ಪಿನಂಗಡಿ ವಲಯಾಧ್ಯಕ್ಷರಾದ ಮುಸ್ತಫಾ ಲತೀಫಿ ಮಾತನಾಡಿ, ನೆಡ್ಚಿಲ್ ಅಂಗನವಾಡಿ ಕೇಂದ್ರದಲ್ಲಿ ಕೊರೋನಾ ಮುಂಜಾಗ್ರತೆಗಾಗಿ ಸರಕಾರ ಮಕ್ಕಳಿಗೆ ರಜೆ ನೀಡಿದೆ. ಪುಟ್ಟ ಮಕ್ಕಳು ಮುಂದಿನ ದಿನಗಳಲ್ಲಿ ಅಂಗನವಾಡಿ

ಉಪ್ಪಿನಂಗಡಿ: ಅಂಗನವಾಡಿ ಕೇಂದ್ರದ ಬಳಿ ಅಪಾಯಕಾರಿ ವಿದ್ಯುತ್ ತಂತಿ ಸಂಪರ್ಕ ➤ ಎಸ್.ಡಿ.ಪಿ.ಐ ಪೆರಿಯಡ್ಕ ಬ್ರಾಂಚ್ ವತಿಯಿಂದ ಮೆಸ್ಕಾಂ ಮನವಿ Read More »

ಕರಾವಳಿ, ಕರ್ನಾಟಕ
Scroll to Top