ಕರ್ನಾಟಕ

ಚಾಲಿ ಪೊಲೀಲು ಖ್ಯಾತ ನಟ ಸುರೇಂದ್ರ ಬಂಟ್ವಾಳ್ ಬರ್ಬರ ಕೊಲೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಅ. 21. ತುಳು ಸಿನಿಮಾ ನಟ ಹಾಗೂ ಹಿಂದೂ ಸಂಘಟನೆಗಳಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದ್ದ ಸುರೇಂದ್ರ ಬಂಟ್ವಾಳ್ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಇಂದು ಮದ್ಯಾಹ್ನ ಬಂಟ್ವಾಳದಲ್ಲಿ ನಡೆದಿದೆ. ಇವರು ತುಳು ಭಾಷೆಯ ಖ್ಯಾತ ಸಿನಿಮಾ ಚಾಲಿ ಪೋಲೀಲು ಸಿನಿಮಾದಲ್ಲಿ ನಟಿಸಿದ್ದರು, ಅಲ್ಲದೇ ಹಲವು ತುಳು ಸಿನಿಮಾ ಹಾಗೂ ಸವರ್ಣ ದೀರ್ಘ ಸಂಧಿ ಎಂಬ ಕನ್ನಡ ಸಿನಿಮಾದಲ್ಲೂ ನಟಿಸಿದ್ದರು. ಹಿಂದೂ ಸಂಘಟನೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಅವರು. ಬಂಟ್ವಾಳದ ಬಿಸಿ […]

ಚಾಲಿ ಪೊಲೀಲು ಖ್ಯಾತ ನಟ ಸುರೇಂದ್ರ ಬಂಟ್ವಾಳ್ ಬರ್ಬರ ಕೊಲೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕೇವಲ 699 ರೂ. ಮುಂಗಡ ಪಾವತಿಸಿ, ನಿಮ್ಮಿಷ್ಟದ ಟಿವಿಎಸ್ ವಾಹನವನ್ನು ಖರೀದಿಸಿ ➤ ಕಡಬದ ಅಡಿಗ ಮೋಟಾರ್ಸ್ ನಲ್ಲಿ ದಸರಾ ವಿಶೇಷ ಆಫರ್

(ನ್ಯೂಸ್ ಕಡಬ) newskadaba.com ಕಡಬ, ಅ.21. ಕಡಬ ತಾಲೂಕಿನಲ್ಲಿ ಕಳೆದ 5 ವರ್ಷಗಳಿಂದ ಟಿವಿಎಸ್ ವಾಹನಗಳ ಮಾರಾಟ ಹಾಗೂ ಸೇವೆಯಲ್ಲಿ ಹೆಸರುವಾಸಿಯಾಗಿರುವ, ಟಿವಿಎಸ್ ಕಂಪೆನಿಯ ಅಧಿಕೃತ ಡೀಲರ್ ಆಗಿರುವ ಕಡಬದ ಅಡಿಗ ಮೋಟಾರ್ಸ್ ನಲ್ಲಿ ನವರಾತ್ರಿ ಹಬ್ಬದ ಅಮೋಘ ಖರೀದಿ ಆಫರ್ ಗಳು ನಡೆಯುತ್ತಿದೆ. ರೂ 50,000/- ಮೌಲ್ಯದ ಖಚಿತ ಉಡುಗೊರೆಗಳು: ಗ್ರಾಹಕರಿಗೆ ತಮ್ಮ ನೆಚ್ಚಿನ ಟಿವಿಎಸ್ ವಾಹನ ಖರೀದಿಯೊಂದಿಗೆ ರೂ.50000/- ತನಕ ಖಚಿತ ಉಡುಗೊರೆಗಳು ಲಭಿಸಲಿದೆ. ಹಾಗೂ ಪ್ರತೀ ಖರೀದಿಯೊಂದಿಗೆ ಉಚಿತ ಹೆಲ್ಮೆಟ್ ಮತ್ತು ಉಚಿತ

ಕೇವಲ 699 ರೂ. ಮುಂಗಡ ಪಾವತಿಸಿ, ನಿಮ್ಮಿಷ್ಟದ ಟಿವಿಎಸ್ ವಾಹನವನ್ನು ಖರೀದಿಸಿ ➤ ಕಡಬದ ಅಡಿಗ ಮೋಟಾರ್ಸ್ ನಲ್ಲಿ ದಸರಾ ವಿಶೇಷ ಆಫರ್ Read More »

ಕರ್ನಾಟಕ, ತಂತ್ರಜ್ಞಾನ, ಲೈಫ್‍ಸ್ಟೈಲ್

ಉಡುಪಿ: ನಿಂತಿದ್ದ ಕಾರಿಗೆ ರಿಕ್ಷಾ ಢಿಕ್ಕಿ ➤ ಚಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಉಡುಪಿ, ಅ. 20. ನಿಂತಿದ್ದ ಕಾರಿಗೆ ರಿಕ್ಷಾವೊಂದು ಡಿಕ್ಕಿಯಾಗಿ, ರಿಕ್ಷಾ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಗುಂಡಿಬೈಲ್‌ ಎಂಬಲ್ಲಿ ನಡೆದಿದೆ. ಮೃತರನ್ನು ಮೂಡುಬೆಟ್ಟಿನ ಸುನಿಲ್ (44) ಎಂದು ಗುರುತಿಸಲಾಗಿದೆ. ಅಂಬಾಗಿಲಿನಿಂದ ಉಡುಪಿ ಕಡೆಗೆ ಬರುತ್ತಿದ್ದ ರಿಕ್ಷಾವೊಂದು ಗುಂಡಿಬೈಲ್‌ ನಾಗನ ಕಟ್ಟೆ ಬಳಿ ಪಾರ್ಕ್ ಮಾಡಲಾಗಿದ್ದ ಝೆನ್ ಕಾರಿಗೆ ಡಿಕ್ಕಿ ಹೊಡೆದಿತ್ತು ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ರಿಕ್ಷಾ ಪಲ್ಟಿಯಾಗಿ ಚಾಲಕ ರಸ್ತೆಗೆ ಎಸೆಯಲ್ಪಟ್ಟಿದ್ದು, ಇವರ ಮೇಲೆ ರಿಕ್ಷಾ ಬಿದ್ದು ಗಂಭೀರ ಗಾಯಗೊಂಡಿದ್ದರು. ತಕ್ಷಣವೇ ಸ್ಥಳೀಯರು

ಉಡುಪಿ: ನಿಂತಿದ್ದ ಕಾರಿಗೆ ರಿಕ್ಷಾ ಢಿಕ್ಕಿ ➤ ಚಾಲಕ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ತಾಯಿ – ಮಗಳು ನದಿಗೆ ಹಾರಿ ಆತ್ಮಹತ್ಯೆ ➤ ಮೊಮ್ಮಗಳ ರಕ್ಷಣೆ

(ನ್ಯೂಸ್ ಕಡಬ) newskadaba.com ಮೈಸೂರು, ಅ.20: ನಂಜನಗೂಡು ತಾಲ್ಲೂಕಿನ ಮಲ್ಲನಮೂಲೆ ಮಠ ಗ್ರಾಮದಲ್ಲಿ ತಾಯಿ ಹಾಗು ಮಗಳು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಅಕ್ಕಮ್ಮ (60), ರಶ್ಮಿ (35) ಎಂದು ಗುರುತಿಸಲಾಗಿದೆ.     ರಶ್ಮಿ ಶ್ರೀರಂಗಪಟ್ಟಣ ತಾಲ್ಲೂಕಿನ ನಗುವನಹಳ್ಳಿಯ ಡಿಸಿಸಿ ಬ್ಯಾಂಕ್ ಉದ್ಯೋಗಿಯಾಗಿದ್ದು, ಆಕೆಯು ತಾಯಿ ಅಕ್ಕಮ್ಮ ಮತ್ತು ಮಗಳು ಮಿಂಚು ಅವರೊಂದಿಗೆ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ನಂತರ ಮೂವರೂ ಒಟ್ಟಿಗೆ ತೋಳುಗಳಿಗೆ ಬಟ್ಟೆ ಬಿಗಿದುಕೊಂಡು ನದಿಗೆ ಹಾರಿದ್ದಾರೆ.

ತಾಯಿ – ಮಗಳು ನದಿಗೆ ಹಾರಿ ಆತ್ಮಹತ್ಯೆ ➤ ಮೊಮ್ಮಗಳ ರಕ್ಷಣೆ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಹಿರಿಯ ಪತ್ರಕರ್ತ ಶ್ಯಾಮ ಸುಂದರ್ ನಿಧನ

(ನ್ಯೂಸ್ ಕಡಬ) newskadaba.com ಬಳ್ಳಾರಿ, ಅ.20: ದಿ ಹಿಂದು ಪತ್ರಿಕೆ ವರದಿಗಾರರಾಗಿ ಕೆಲಸ ಮಾಡಿದ ಹಿರಿಯ ಪತ್ರಕರ್ತರಾದ  ಶ್ಯಾಮ ಸುಂದರ್(70) ರವರು ಹೃದಯಾಘಾತದಿಂದ ಬಳ್ಳಾರಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.     ಇವರಿಗೆ ಇನ್ವೆಸ್ಟಿಗೇಷನ್ ವರದಿಗಾರಿಕೆಯಲ್ಲಿ ಬಂಗಾರದ ಪದಕ ಪಡೆದು, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪಡೆದಂತ ಹಿರಿಯ ಪತ್ರಕರ್ತರಾಗಿರುತ್ತಾರೆ. ಶ್ಯಾಮ ಸುಂದರ್ ಅವರ ನಿಧನಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಮೃತರು, ಪತ್ನಿ, ಇಬ್ಬರು ಮಕ್ಕಳು, ಅಪಾರ

ಹಿರಿಯ ಪತ್ರಕರ್ತ ಶ್ಯಾಮ ಸುಂದರ್ ನಿಧನ Read More »

ಕರ್ನಾಟಕ

ಭಟ್ಕಳ: 40 ಲಕ್ಷ ರೂ. ಮೌಲ್ಯದ ಆಭರಣ ಕಳವು ➤ ಅರ್ಚಕ ನಾಪತ್ತೆ

(ನ್ಯೂಸ್ ಕಡಬ) newskadaba.com ಭಡ್ಕಳ, ಅ.20: ಭಕ್ತರು ದೇಣಿಗೆ ರೂಪದಲ್ಲಿ ದುರ್ಗಪರಮೇಶ್ವರಿ ದೇವಸ್ಥಾನಕ್ಕೆ ನೀಡಿದ ಸುಮಾರು 40 ಲಕ್ಷ ರೂ. ಮೌಲ್ಯದ ಆಭರಣಗಳು ಕಳುವಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಭಟ್ಕಳದಲ್ಲಿ  ಕಳೆದ ದಿನ ರಾತ್ರಿ ನಡೆದಿದೆ.     ದೇವಾಲಯದಲ್ಲಿ ಕೆಲಸ ಮಾಡುತ್ತಿದ್ದ ಅರ್ಚಕ ಸಹ ನಾಪತ್ತೆಯಾಗಿದ್ದಾನೆ ಎಂದು ದೇವಾಲಯದ ಅಧಿಕಾರಿಗಳು ದೂರಿನಲ್ಲಿ ತಿಳಿಸಿದ್ದಾರೆ. ನಾಪತ್ತೆಯಾದ ಅರ್ಚಕನನ್ನು ಯೆಲ್ಲಾಪುರ ನಿವಾಸಿ ಸತೀಶ್ ಭಟ್ ಎಂದು ಗುರುತಿಸಲಾಗಿದೆ. ದೇವರಿಗೆ ನವರಾತ್ರಿ ಸಮಯ ಆಭರಣಗಳನ್ನು ತೊಡಿಸಲು ದೇವಾಲಯದ ಪ್ರಧಾನ

ಭಟ್ಕಳ: 40 ಲಕ್ಷ ರೂ. ಮೌಲ್ಯದ ಆಭರಣ ಕಳವು ➤ ಅರ್ಚಕ ನಾಪತ್ತೆ Read More »

ಕರ್ನಾಟಕ

ಉಪ್ಪಿನಂಗಡಿ: ರಾಜ್ಯ ಪೈಝೀಸ್ ವತಿಯಿಂದ ನಡೆಯುವ ಮಾಸ ಪೂರ್ತಿ ರಬೀಹ್ ಕ್ಯಾಂಪೈನ್ ಉದ್ಘಾಟನಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕರಾಯ, ಅ. 20. ಪೈಝಿ ಉಲಮಾಗಳ ಪ್ರತಿಷ್ಟಿತ ಸಂಘಟನೆ ಪೈಝೀಸ್ ಅಸೋಶಿಯೇಶನ್ ಇದರ ರಾಜ್ಯ ಘಟಕದ ವತಿಯಿಂದ ತಿಂಗಳು ಪೂರ್ತಿ ರಾಜ್ಯದ ವಿವಿಧ ಕೇಂದ್ರಗಳಲ್ಲಿ ಮೀಲಾದ್ ಪ್ರಯುಕ್ತ “ಸಮಕಾಲೀ‌ನ ಸಮಸ್ಯೆಗೆ ಪ್ರವಾದಿ ಚರ್ಯೆಯಲ್ಲಿ ಪರಿಹಾರ” ಎಂಬ ಪ್ರಮೇಯದೊಂದಿಗೆ ಹಮ್ಮಿಕೊಳ್ಳಲಾದ ರಬೀಅ್ ಕ್ಯಾಂಪಯಿನ್ ಇದರ ಉದ್ಘಾಟನಾ ಕಾರ್ಯಕ್ರಮವು ಉಪ್ಪಿನಂಗಡಿಯ ಕರಾಯ ಮಸೀದಿ ವಠಾರದಲ್ಲಿ ಅದ್ದೂರಿಯಾಗಿ ಜರಗಿತು. ಜಿಲ್ಲೆ ಕಂಡ ಶ್ರೇಷ್ಡ ಪಂಡಿತರೂ ಮುಸ್ಲಿಮರ ಅಭಿಮಾನದ ಕೇಂದ್ರ ಉಳ್ಳಾಲ ಸಯ್ಯಿದ್ ಮದನಿ ಅರಬಿಕ್ ಕಾಲೇಜು ಇದರ

ಉಪ್ಪಿನಂಗಡಿ: ರಾಜ್ಯ ಪೈಝೀಸ್ ವತಿಯಿಂದ ನಡೆಯುವ ಮಾಸ ಪೂರ್ತಿ ರಬೀಹ್ ಕ್ಯಾಂಪೈನ್ ಉದ್ಘಾಟನಾ ಕಾರ್ಯಕ್ರಮ Read More »

ಕರಾವಳಿ, ಕರ್ನಾಟಕ

ಹಾಸ್ಯ ನಟ ಚಿಕ್ಕಣ್ಣ ಉಪಾಧ್ಯಕ್ಷ ಚಿತ್ರದಲ್ಲಿ ನಾಯಕ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.20: ಸ್ಯಾಂಡಲ್ ವುಡ್ ಹಾಸ್ಯನಟ ಚಿಕ್ಕಣ್ಣ ಇದೀಗ ಪೂರ್ಣಪ್ರಮಾಣದಲ್ಲಿ ನಾಯಕರಾಗುತ್ತಿದ್ದಾರೆ. ನಟ ಚಿಕ್ಕಣ್ಣ ಮೊದಲ ಬಾರಿಗೆ ಹೀರೋ ಆಗುತ್ತಿರುವ ಸಿನಿಮಾವನ್ನು ರಾಬರ್ಟ್ ನಿರ್ಮಾಪಕ ಉಮಾಪತಿ ಗೌಡ ನಿರ್ಮಿಸಲಿದ್ದು, ಚಂದ್ರ ಮೋಹನ್ ನಿರ್ದೇಶಿಸುತ್ತಿದ್ದಾರೆ. ಹಾಸ್ಯ ನಟ ಚಿಕ್ಕಣ್ಣ ನಾಯಕನಾಗಿ ನಟಿಸುತ್ತಿರುವ ಉಪಾಧ್ಯಕ್ಷ ಸಿನಿಮಾದ ಮುಹೂರ್ತ ಸಮಾರಂಭ ಬೆಂಗಳೂರಿನಲ್ಲಿ ನಡೆದಿದೆ.     ಕೆಲ ವರ್ಷಗಳ ಹಿಂದೆ ಶರಣ್-ಚಿಕ್ಕಣ್ಣ ಕಾಂಬಿನೇಷನ್‌ನಲ್ಲಿ ಅಧ್ಯಕ್ಷ ಸಿನಿಮಾ ತೆರೆಕಂಡು, ಸೂಪರ್ ಹಿಟ್ ಎನಿಸಿಕೊಂಡಿತ್ತು. ಈ ಚಿತ್ರದಲ್ಲಿ ಶರಣ್ ಅಧ್ಯಕ್ಷನಾಗಿದ್ದರೆ,

ಹಾಸ್ಯ ನಟ ಚಿಕ್ಕಣ್ಣ ಉಪಾಧ್ಯಕ್ಷ ಚಿತ್ರದಲ್ಲಿ ನಾಯಕ..! Read More »

ಕರ್ನಾಟಕ

ರೈಲಲ್ಲಿ ಹೋದ ಕಳ್ಳನನ್ನು ವಿಮಾನವೇರಿ ಹಿಡಿದ ಬೆಂಗಳೂರು ಪೊಲೀಸರು

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.20: ರೈಲಿನಲ್ಲಿ 1.3 ಕೋಟಿ ರೂ. ಮೌಲ್ಯದ ಆಭರಣಗಳನ್ನು ಕದ್ದು ಪರಾರಿಯಾಗುತ್ತಿದ್ದ ಕಳ್ಳನನ್ನು ಬಂಧಿಸಲು ಬೆಂಗಳೂರು ಪೊಲೀಸರು ವಿಮಾನದಲ್ಲಿ ಹೋಗಿರುವ ಅಪರೂಪದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೂಲತಃ ಪಶ್ಚಿಮ ಬಂಗಾಳದ ಬುರ್ದ್ವಾನ್​ನ ಆರೋಪಿ ಎಂದು ಗುರುತಿಸಲಾಗಿದೆ.     ಇದೊಂದು ರೀತಿಯಲ್ಲಿ ಅಸಾಮಾನ್ಯ ಘಟನೆ ಎಂದೇ ಹೇಳಬಹುದು. ಏಕೆಂದರೆ, ಕಳ್ಳನ ಸುದ್ದಿ ತಿಳಿಯುತ್ತಿದ್ದಂತೆಯೇ ಆತ ಸುಲಭದಲ್ಲಿ ಸಿಗುವುದಿಲ್ಲ ಎಂದು ತಿಳಿದ ಪೊಲೀಸರ ಯೋಜನೆಯಿಂದಾಗಿ ಕಳ್ಳ ಅಂತೂ ಸಿಕ್ಕಿಬಿದ್ದಿದ್ದಾನೆ. ವಿಮಾನದಲ್ಲಿ ಹಾರಿದ ಪೊಲೀಸರು

ರೈಲಲ್ಲಿ ಹೋದ ಕಳ್ಳನನ್ನು ವಿಮಾನವೇರಿ ಹಿಡಿದ ಬೆಂಗಳೂರು ಪೊಲೀಸರು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಐಎಂಎ ವಂಚನೆ ಪ್ರಕರಣ ➤ ಮೂವರು ಪೊಲೀಸ್ ಅಧಿಕಾರಿಗಳು ಸಸ್ಪೆಂಡ್

(ನ್ಯೂಸ್ ಕಡಬ) newskadaba.com ಬೆಂಗಳೂರು ಅ. 20: ಬಹುಕೋಟಿ ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಚಾರ್ಜ್‌ಶೀಟ್ ಸಲ್ಲಿಕೆಯಾದ ಬೆನ್ನಲ್ಲೇ ಮೂವರು ಪೊಲೀಸ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಸೋಮವಾರ ಅಮಾನತುಗೊಳಿಸಿದೆ.   ಸಿಐಡಿ ಡಿವೈಎಸ್‌ಪಿ ಆಗಿದ್ದ ಇ.ಬಿ.ಶ್ರೀಧರ್, ಕಮರ್ಷಿಯಲ್ ಸ್ಟ್ರೀಟ್ ಠಾಣೆ ಇನ್‌ಸ್ಪೆಕ್ಟರ್ ಆಗಿದ್ದ ರಮೇಶ್, ಪಿಎಸ್‌ಐ ಗೌರಿಶಂಕರ್ ಅವರನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಅಮಾನತುಗೊಂಡ ಅಧಿಕಾರಿಗಳು ಐಎಂಎ ವಂಚನೆ ಪ್ರಕರಣದ ಬಗ್ಗೆ ಸಮರ್ಪಕವಾಗಿ ತನಿಖೆ ಮಾಡಿಲ್ಲ. ವಂಚನೆ ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿದ್ದಾರೆ ಎಂಬ ಆರೋಪ ಇದೆ.

ಐಎಂಎ ವಂಚನೆ ಪ್ರಕರಣ ➤ ಮೂವರು ಪೊಲೀಸ್ ಅಧಿಕಾರಿಗಳು ಸಸ್ಪೆಂಡ್ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top