ಕರ್ನಾಟಕ

ಮಂಗಳೂರು: ಫೆ. 06ರಂದು ಉದ್ಯೋಗ ಮೇಳ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 03. ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಮಂಗಳೂರು ಮತ್ತು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐ.ಟಿ.ಐ ಪುರುಷ) ಮಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟೀಯ ವೃತ್ತಿ ಸೇವಾ ಯೋಜನೆಯ ಮಾದರಿ ವೃತ್ತಿಕೇಂದ್ರದ ಅಡಿಯಲ್ಲಿ ಫೆಬ್ರವರಿ 06 ರಂದುಬೆಳಿಗ್ಗೆ 9.30 ಕ್ಕೆ ಕದ್ರಿಹಿಲ್ಸ್‍ ನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಂಗಳೂರು ದೂರವಾಣಿ […]

ಮಂಗಳೂರು: ಫೆ. 06ರಂದು ಉದ್ಯೋಗ ಮೇಳ Read More »

ಕರಾವಳಿ, ಕರ್ನಾಟಕ

ಸಗಟು ಖರೀದಿ ಯೋಜನೆಯಡಿ ಪುಸ್ತಕ ಖರೀದಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 03. ಕನ್ನಡ ಪುಸ್ತಕ ಪ್ರಾಧಿಕಾರವು 2017ನೇ ಸಾಲಿನಲ್ಲಿ ಪ್ರಥಮಾವೃತ್ತಿಯಾಗಿ ಮುದ್ರಣಗೊಂಡ ಕನ್ನಡ ಪುಸ್ತಕಗಳನ್ನು ಪ್ರಾಧಿಕಾರದ ಸಗಟು ಖರೀದಿ ಯೋಜನೆಯಡಿ ಖರೀದಿಸಲು ಅರ್ಜಿಯನ್ನುಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಫೆಬ್ರವರಿ 27 ಕೊನೆಯ ದಿನ, ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್ www.kannadapustakapradhikara.com,, ಅಥವಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ದೂ.ಸಂಖ್ಯೆ: 080-22484516 / 22017704 ನ್ನು ಸಂಪರ್ಕಿಸಬಹುದು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ಪ್ರಕಟಣೆಯಲ್ಲಿ

ಸಗಟು ಖರೀದಿ ಯೋಜನೆಯಡಿ ಪುಸ್ತಕ ಖರೀದಿಗೆ ಅರ್ಜಿ ಆಹ್ವಾನ Read More »

ಕರಾವಳಿ, ಕರ್ನಾಟಕ

ಕನ್ನಡ ಪುಸ್ತಕ ಸೊಗಸು-2020 ಬಹುಮಾನಕ್ಕೆಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 03. ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2020 ರ ಜನವರಿ ಯಿಂದ ಡಿಸೆಂಬರ್ ಅವಧಿಯಲ್ಲಿ ಕನ್ನಡದಲ್ಲಿ ಪ್ರಕಟವಾದ ಕೃತಿಗಳಿಗೆ, ಅವುಗಳ ಮುದ್ರಣ, ಮುಖಪುಟ ವಿನ್ಯಾಸ, ಗುಣಮಟ್ಟವನ್ನು ಪರಿಗಣಿಸಿ ಕನ್ನಡ ಪುಸ್ತಕ ಸೊಗಸು-2020 ಬಹುಮಾನ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಪ್ರಕಾಶಕರು /ಮುದ್ರಕರು/ ಕಲಾವಿದರು / ಲೇಖಕರುಗಳು  ಫೆಬ್ರವರಿ 20 ರೊಳಗೆ ಸ್ವಯಂ ಅರ್ಜಿಯನ್ನು  ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560 002 ಈ ವಿಳಾಸಕ್ಕೆ ಕಳುಹಿಸಬಹುದಾಗಿದೆ.

ಕನ್ನಡ ಪುಸ್ತಕ ಸೊಗಸು-2020 ಬಹುಮಾನಕ್ಕೆಅರ್ಜಿ ಆಹ್ವಾನ Read More »

ಕರಾವಳಿ, ಕರ್ನಾಟಕ

ನೂಜಿಬಾಳ್ತಿಲ; ಅಭಿನಂದನೆ, ಪುಸ್ತಕ ಬಿಡುಗಡೆ ಸಮಾರಂಭ ➤ ಹುಟ್ಟೂರ ಗೌರವಾರ್ಪಣೆ ಸ್ಪೂರ್ತಿದಾಯಕ; ಕತ್ತಲ್ ಸಾರ್

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಫೆ. 03. ಸಾಧನೆ ಮಾಡಿದ ಸಂದರ್ಭದಲ್ಲಿ ಪ್ರಶಸ್ತಿಗಳು, ಗೌರವಗಳು ಸಿಗುವುದು ಸಂತಸದಾಯಕ. ಆದರೆ ಸಾಧಕನಿಗೆ ತನ್ನ ಹುಟ್ಟೂರಿನಲ್ಲಿ ದೊರೆಯುವ ಸಣ್ಣ ಗೌರವ, ಸಮ್ಮಾನವೂ ಅತ್ಯಂತ ದೊಡ್ಡ ಅಭಿನಂದನೆ ಹಾಗೂ ಸ್ಪೂರ್ತಿದಾಯಕ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್‍ ಸಾರ್ ಹೇಳಿದರು. ಕಲ್ಲುಗುಡ್ಡೆ ಜೆ.ಜೆ.ಅಡಿಟೋರಿಯಂನಲ್ಲಿ ಶನಿವಾರ ನೂಜಿಬಾಳ್ತಿಲ ಹಾಗೂ ರೆಂಜಿಲಾಡಿ ಗ್ರಾಮಸ್ಥರ ಪರವಾಗಿ ತ್ರಿಭಾಷಾ ಕವಿ ನೂಜಿಬಾಳ್ತಿಲ ದಿಲೀಪ್ ವೇದಿಕ್ ಅವರ ಅಭಿನಂದನಾ ಸಮಾರಂಭ ಹಾಗೂ ಪುಸ್ತಕ

ನೂಜಿಬಾಳ್ತಿಲ; ಅಭಿನಂದನೆ, ಪುಸ್ತಕ ಬಿಡುಗಡೆ ಸಮಾರಂಭ ➤ ಹುಟ್ಟೂರ ಗೌರವಾರ್ಪಣೆ ಸ್ಪೂರ್ತಿದಾಯಕ; ಕತ್ತಲ್ ಸಾರ್ Read More »

ಕರಾವಳಿ, ಕರ್ನಾಟಕ

ಮಹಿಳೆಯ ಅತ್ಯಾಚಾರವೆಸಗಿ ಉಸಿರುಗಟ್ಟಿಸಿ ಕೊಲೆಗೈದ ಕಿರಾತಕರು

(ನ್ಯೂಸ್ ಕಡಬ) newskadaba.com ಮಂಡ್ಯ, ಫೆ. 03. ಗೃಹಿಣಿಯೋರ್ವರ ಕೈಕಾಲು ಕಟ್ಟಿ ಅತ್ಯಾಚಾರ ನಡೆಸಿದ ಬಳಿಕ ಆಕೆಯನ್ನು ಉಸಿರುಗಟ್ಟಿಸಿ ಕೊಲೆಗೈದಿರುವ ಘಟನೆ ಮದ್ದೂರು ಪಟ್ಟಣದ ವಿವಿ ನಗರದಲ್ಲಿ ನಡೆದಿದೆ. ಮದ್ದೂರು ಪಟ್ಟಣದ 39 ವರ್ಷದ ಮಹಿಳೆ ಕೊಲೆಯಾಗಿದ್ದು, ಮಹಿಳೆಯ ಪತಿ ಅಡುಗೆ ಭಟ್ಟರಾಗಿ ಕೆಲಸ ಮಾಡುತ್ತಿದ್ದರು. ಇವರು ಪತಿ ಜತೆ ಕಳೆದ ಆರು ತಿಂಗಳಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದರೆನ್ನಲಾಗಿದೆ. ಘಟನೆಯಿಂದ ಅಕ್ಕ-ಪಕ್ಕದ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ. ಈ ಕುರಿತು ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ

ಮಹಿಳೆಯ ಅತ್ಯಾಚಾರವೆಸಗಿ ಉಸಿರುಗಟ್ಟಿಸಿ ಕೊಲೆಗೈದ ಕಿರಾತಕರು Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಂಗಳೂರು: ಮುಡಿಪು ಬೆಟ್ಟದಲ್ಲಿ ಸರಸದಲ್ಲಿ ತೊಡಗಿದ್ದ ಅನ್ಯಕೋಮಿನ ಜೋಡಿ..! ➤ ಪೊಲೀಸರಿಗೆ ಒಪ್ಪಿಸಿದ ಹಿಂದೂ ಜಾಗರಣಾ ವೇದಿಕೆ

(ನ್ಯೂಸ್ ಕಡಬ) newskadaba.com ಕೊಣಾಜೆ, ಫೆ. 03. ಮುಡಿಪು ಪವಾಡ ಬೆಟ್ಟದಲ್ಲಿ ಸರಸ ಸಲ್ಲಾಪದಲ್ಲಿ ತೊಡಗಿದ್ದ ಅಂತರ್ಜಾತಿಯ ಜೋಡಿಯೊಂದನ್ನು ಪತ್ತೆ ಹಚ್ಚಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಕೊಣಾಜೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಮೂಡುಬಿದಿರೆ ನಿವಾಸಿ ಮಹಮ್ಮದ್ ಜುನೈದ್ ಎಂಬ ಯುವಕನು ಮುಡಿಪು ಡಿ.ಜಿ ಕಟ್ಟೆ ವಿದ್ಯಾನಗರ ನಿವಾಸಿಯಾದ ಹಿಂದೂ ಯುವತಿಯೊಂದಿಗೆ ಪರಿಚಯ ಬೆಳೆಸಿದ್ದು, ಈ ಜೋಡಿಯು ಮುಡಿಪು ಬೆಟ್ಟದಲ್ಲಿ ಸರಸ ಸಲ್ಲಾಪದಲ್ಲಿದ್ದರು ಎನ್ನಲಾಗಿದೆ. ಈ ಕುರಿತು ಮಾಹಿತಿಯನ್ನು ಕಲೆಹಾಕಿದ ದಾಳಿ ಮಾಡಿದ ಹಿಂದು ಜಾಗರಣ ವೇದಿಕೆ ಸದಸ್ಯರು

ಮಂಗಳೂರು: ಮುಡಿಪು ಬೆಟ್ಟದಲ್ಲಿ ಸರಸದಲ್ಲಿ ತೊಡಗಿದ್ದ ಅನ್ಯಕೋಮಿನ ಜೋಡಿ..! ➤ ಪೊಲೀಸರಿಗೆ ಒಪ್ಪಿಸಿದ ಹಿಂದೂ ಜಾಗರಣಾ ವೇದಿಕೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

Breaking | ಕಡಬ: ನಾಯಿಯನ್ನು ಅಟ್ಟಿಸಿಕೊಂಡು ಶೌಚಾಲಯಕ್ಕೆ ನುಗ್ಗಿದ ಚಿರತೆ

(ನ್ಯೂಸ್ ಕಡಬ) newskadaba.com ಕಡಬ, ಫೆ.03. ಸಾಕು ನಾಯಿಯನ್ನು ಅಟ್ಟಿಸಿಕೊಂಡು ಬಂದ ಚಿರತೆಯೊಂದು ಸಾಕು ನಾಯಿಯ ಜೊತೆ ಮನೆಯ ಶೌಚಾಲಯದಲ್ಲಿ ಬಂಧಿಯಾದ ಘಟನೆ ಬುಧವಾರ ಬೆಳಿಗ್ಗೆ ಕಡಬದ ಕೈಕಂಬದಲ್ಲಿ ನಡೆದಿದೆ. ಸುಬ್ರಹ್ಮಣ್ಯ ಸಮೀಪದ ಕೈಕಂಬ ನಿವಾಸಿ ರೇಗಪ್ಪ ಎಂಬವರ ಮನೆಯ ಸಮೀಪ ಸಾಕು ನಾಯಿಯನ್ನು ಚಿರತೆಯೊಂದು ಅಟ್ಟಿಸಿಕೊಂಡು ಬಂದಿದೆ. ಚಿರತೆಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಸಾಕುನಾಯಿಯು ಮನೆಯ ಹೊರಗಿದ್ದ ಶೌಚಾಲಯಕ್ಕೆ ಹೊಕ್ಕಿದ್ದು, ಚಿರತೆಯು ನಾಯಿಯನ್ನು ಹಿಂಬಾಲಿಸಿ ಶೌಚಾಲಯದ ಒಳಗೆ ಬಂದಿದೆ. ಇದನ್ನು ಗಮನಿಸಿದ ಮನೆಯವರು ಹೊರಗಿನಿಂದ ಶೌಚಾಲಯದ ಬಾಗಿಲನ್ನು

Breaking | ಕಡಬ: ನಾಯಿಯನ್ನು ಅಟ್ಟಿಸಿಕೊಂಡು ಶೌಚಾಲಯಕ್ಕೆ ನುಗ್ಗಿದ ಚಿರತೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬ: ರೋಟರಿ ಕ್ಲಬ್ ವತಿಯಿಂದ ಪೋಲಿಯೋ ಲಸಿಕಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ, ಫೆ. 02. ರೋಟರಿ ಕ್ಲಬ್ ವತಿಯಿಂದ ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮವು ಜ.31ರಂದು ನಡೆಯಿತು. ಕಾರ್ಯಕ್ರಮವನ್ನು ಕಡಬ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಸುಚಿತ್ರ ರಾವ್ ಅವರು ಮಗುವಿಗೆ ಪೋಲಿಯೋ ಲಸಿಕೆ ನೀಡುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕ್ಲಬ್ ಅಧ್ಯಕ್ಷ ವಿ.ಎಂ.ಕುರಿಯನ್, ಕಾರ್ಯದರ್ಶಿ ಇ.ಕೆ.ತೋಮಸ್, ಐ.ಪಿ.ಪಿ.ಅಚ್ಚುತ ಪ್ರಭು, ರೊಟೇರಿಯನ್ ಮಹಮ್ಮದ್ ರಫೀಕ್, ಸಿ.ಪಿ.ಸೈಮನ್, ಚಂದ್ರಶೇಖರ ಕೋಡಿಬೈಲು, ಗ್ರೇಸಿ ತೋಮಸ್ ಹಾಗೂ ಆಸ್ಪತ್ರೆಯ ಶುಶ್ರೂಷಕಿಯರು ಮತ್ತು ಆಶಾ ಕಾರ್ಯಕರ್ತೆಯರು ಮೊದಲಾದವರು ಉಪಸ್ಥಿತರಿದ್ದರು. ಒಟ್ಟು

ಕಡಬ: ರೋಟರಿ ಕ್ಲಬ್ ವತಿಯಿಂದ ಪೋಲಿಯೋ ಲಸಿಕಾ ಕಾರ್ಯಕ್ರಮ Read More »

ಕರಾವಳಿ, ಕರ್ನಾಟಕ

ಕಡಬ: ತಾಲೂಕು ಪಂಚಾಯತ್ ಸಾಮಾನ್ಯ ಸಭೆ

(ನ್ಯೂಸ್ ಕಡಬ) newskadaba.com ಕಡಬ, ಫೆ. 02. ತಾಲೂಕು ಪಂಚಾಯತ್ ಸಾಮಾನ್ಯ ಸಭೆಯು ಕಡಬದ ಅಂಬೇಡ್ಕರ್ ಭವನದಲ್ಲಿ ಮಂಗಳವಾರದಂದು ತಾ.ಪಂ ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ಸಭೆಯಲ್ಲಿ ತಾ.ಪಂ.ಉಪಾಧ್ಯಕ್ಷೆ ಜಯಂತಿ ಆರ್ .ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷೆ ಪಿ.ವೈ ಕುಸುಮಾ, ಕಡಬ ತಹಶೀಲ್ದಾರ್ ಅನಂತ ಶಂಕರ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ, ಜಿ.ಪಂ. ಸದಸ್ಯ ರಾದ ಪಿ.ಪಿ. ವರ್ಗೀಸ್, ಸರ್ವೋತ್ತಮ ಗೌಡ ಹಾಗೂ ತಾ.ಪಂ.ಸದಸ್ಯರಾದ ಉಷಾ ಅಂಚನ್ ಮೊದಲಾದವರು ಉಪಸ್ಥಿತರಿದ್ದರು.

ಕಡಬ: ತಾಲೂಕು ಪಂಚಾಯತ್ ಸಾಮಾನ್ಯ ಸಭೆ Read More »

ಕರಾವಳಿ, ಕರ್ನಾಟಕ

ಕುಮಾರಾಧಾರ ನದಿಯಲ್ಲಿ ಮೀನು ಹಿಡಿಯಲೆಂದು ತೆರಳಿದ್ದ ವ್ಯಕ್ತಿ ನಾಪತ್ತೆ

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ. 02. ಶಾಂತಿಗೋಡು ಸಮೀಪದ ಕುಮಾರಧಾರ ನದಿಗೆ ಮೀನು ಹಿಡಿಯಲೆಂದು ತೆರಳಿದ್ದ ಮೂವರ ಪೈಕಿ ಓರ್ವ ನಾಪತ್ತೆಯಾದ ಘಟನೆ ಇಂದದು ನಡೆದಿದೆ.   ನಾಪತ್ತೆಯಾದವರನ್ನು ಮುಂಡೂರು ನಿವಾಸಿ ಕಾಂತಪ್ಪ ಎಂದು ಗುರುತಿಸಲಾಗಿದೆ. ಇವರು ಶಾಂತಿಗೋಡು ಕುಮಾರಧಾರ ನದಿಗೆ ಮೀನು ಹಿಡಿಯಲೆಂದು ತನ್ನ ಮಗ ಹಾಗೂ ಸಂಬಂಧಿಕರೊಂದಿಗೆ ತೆರಳಿದ್ದ ಸಂದರ್ಭ ಇವರು ನಾಪತ್ತೆಯಾಗಿದ್ದಾರೆ ಎಂದು ಅವರ ಮಗ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಹುಡುಕಾಟ ನಡೆಸುತ್ತಿದ್ದಾರೆ.

ಕುಮಾರಾಧಾರ ನದಿಯಲ್ಲಿ ಮೀನು ಹಿಡಿಯಲೆಂದು ತೆರಳಿದ್ದ ವ್ಯಕ್ತಿ ನಾಪತ್ತೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top