ಕರ್ನಾಟಕ

ಮಂಜೇಶ್ವರ: ಬೈಕ್ ಗಳ ನಡುವೆ ಮುಖಾಮುಖಿ ಢಿಕ್ಕಿ ➤ ಓರ್ವ ಮೃತ್ಯು, ಮತ್ತೋರ್ವ ಗಂಭೀರ

(ನ್ಯೂಸ್ ಕಡಬ) Newskadaba.com ಮಂಜೇಶ್ವರ, ಮೇ. 25. ಬೈಕ್ ಗಳ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿದ ಪರಿಣಾಮ ಓರ್ವ ಮೃತಪಟ್ಟು, ಮತ್ತೋರ್ವ ಗಾಯಗೊಂಡ ಘಟನೆ ಬದಿಯಡ್ಕ ಎಂಬಲ್ಲಿ ನಡೆದಿದೆ. ಮೃತಪಟ್ಟವರನ್ನು ನಿನ್ನೆ ರಾತ್ರಿ ಬದಿಯಡ್ಕ ಸಮೀಪದ ಕನ್ಯಾನ ಮೂಲದ ರಝಾಕ್(23) ಎಂದು ಗುರುತಿಸಲಾಗಿದೆ. ಪಿಲಾಂಕಟೈ ಎಂಬಲ್ಲಿ ಸೋಮವಾರ ರಾತ್ರಿ ವೇಳೆ ಈ ಅಪಘಾತ ಸಂಭವಿಸಿದ್ದು, ಮತ್ತೊಂದು ಬೈಕಿನಲ್ಲಿ ಸಂಚರಿಸುತ್ತಿದ್ದ ಕುಂಬ್ಡಾಜೆಯ ಸಂಜೀವ ಎಂಬವರು ಗಂಭೀರ ಗಾಯಗೊಂಡಿದ್ದಾರೆ. ಇವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಬದಿಯಡ್ಕ ಠಾಣೆಯಲ್ಲಿ […]

ಮಂಜೇಶ್ವರ: ಬೈಕ್ ಗಳ ನಡುವೆ ಮುಖಾಮುಖಿ ಢಿಕ್ಕಿ ➤ ಓರ್ವ ಮೃತ್ಯು, ಮತ್ತೋರ್ವ ಗಂಭೀರ Read More »

ಕರಾವಳಿ, ಕರ್ನಾಟಕ

ಫೀಸ್ ಕಟ್ಟದೆ ಆನ್‌ಲೈನ್ ಕ್ಲಾಸಿಗೆ ಬರುವಂತಿಲ್ಲ ಎಂಬ ಕಾಲೇಜು ನಿಯಮಗಳ ವಿರುದ್ದ ಕ್ಯಾಂಪಸ್ ಫ್ರಂಟ್ ವತಿಯಿಂದ ಸುಳ್ಯ ತಹಶಿಲ್ದಾರ್ ಗೆ ಮನವಿ

(ನ್ಯೂಸ್ ಕಡಬ) Newskadaba.com ಸುಳ್ಯ, ಮೇ. 25. ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೊಳಗಾಗಿ ಹಲವು ವಿದ್ಯಾರ್ಥಿಗಳಿಗೆ ಕಾಲೇಜು ಫೀಸು ಪಾವತಿಸಲು ಸಮಯಾವಕಾಶ ನೀಡುವಂತೆ ಒತ್ತಾಯಿಸಿ ಕ್ಯಾಂಪಸ್ ಫ್ರಂಟ್ ವತಿಯಿಂದ ತಹಶೀಲ್ದಾರ್‌ರಿಗೆ ಮನವಿ ಸಲ್ಲಿಸಲಾಯಿತು. ಲಾಕ್‌ಡೌನ್‌ನಲ್ಲಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ಪ್ರಾರಂಭಿಸಲಾಗಿದ್ದು, ಆದರೆ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಹಲವಾರು ವಿದ್ಯಾರ್ಥಿಗಳು ಕಾಲೇಜು ಶುಲ್ಕ ಪಾವತಿ ಮಾಡದ ಕಾರಣ ಶಿಕ್ಷಕರು ಆನ್‌ಲೈನ್ ತರಗತಿಗೆ ಸೇರಿಸದೆ ವಿದ್ಯಾರ್ಥಿಗಳಿಗೆ ಒತ್ತಡ ಹೇರುತ್ತಿದ್ದಾರೆ. ಇದರಿಂದ ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಭವಿಷ್ಯದ ಬಗ್ಗೆ ಆತಂಕಕ್ಕೊಳಗಾಗಿದ್ದಾರೆ. ಹಾಗಾಗಿ

ಫೀಸ್ ಕಟ್ಟದೆ ಆನ್‌ಲೈನ್ ಕ್ಲಾಸಿಗೆ ಬರುವಂತಿಲ್ಲ ಎಂಬ ಕಾಲೇಜು ನಿಯಮಗಳ ವಿರುದ್ದ ಕ್ಯಾಂಪಸ್ ಫ್ರಂಟ್ ವತಿಯಿಂದ ಸುಳ್ಯ ತಹಶಿಲ್ದಾರ್ ಗೆ ಮನವಿ Read More »

ಕರಾವಳಿ, ಕರ್ನಾಟಕ

ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..! ➤ ವೀಡಿಯೋದಲ್ಲಿ ಇರುವುದು ನಾನೇ ಎಂದು ಒಪ್ಪಿಕೊಂಡ ಮಾಜಿ ಸಚಿವ..?

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.24. ರಾಜ್ಯ ರಾಜಕಾರಣವನ್ನೇ ಬೆಚ್ಚಿ ಬೀಳಿಸಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸೆಕ್ಸ್ ಸಿಡಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ದೊರೆತಿದ್ದು, ಸಿಡಿಯಲ್ಲಿರುವುದು ನಾನೇ ಎಂದು ರಮೇಶ್ ಜಾರಕಿಹೊಳಿ ತನಿಖಾಧಿಕಾರಿಗಳ ಮುಂದೆ ಒಪ್ಪಿಕೊಂಡಿರುವುದಾಗಿ ಪ್ರಮುಖ ಮಾಧ್ಯಮಗಳು ವರದಿ ಮಾಡಿವೆ. ವೀಡಿಯೋದಲ್ಲಿರುವ ಯುವತಿಗೆ ಯಾವುದೋ ಪ್ರಾಜೆಕ್ಟ್ ಗೆ ಸಂಬಂಧಿಸಿ ನನ್ನ ಪರಿಚಯವಾಗಿತ್ತು. ನಾವು ಕೆಲವು ಸಲ ಭೇಟಿಯಾಗಿದ್ದೆವು. ಆದರೆ ನಾನು ಆಕೆಯನ್ನು ಅತ್ಯಾಚಾರ ಮಾಡಿಲ್ಲ. ಬದಲಾಗಿ ಆಕೆಯ ಸಹಮತದೊಂದಿಗೆ ಲೈಂಗಿಕ ಸಂಪರ್ಕ ಮಾಡಿರುವುದಾಗಿದೆ.

ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..! ➤ ವೀಡಿಯೋದಲ್ಲಿ ಇರುವುದು ನಾನೇ ಎಂದು ಒಪ್ಪಿಕೊಂಡ ಮಾಜಿ ಸಚಿವ..? Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿಗೆ ಅಡಚಣೆ ➤ ಕ್ಯಾಂಪಸ್ ಫ್ರಂಟ್ ಪುತ್ತೂರು ಜಿಲ್ಲಾ ಸಮಿತಿ ವತಿಯಿಂದ ಮನವಿ

(ನ್ಯೂಸ್ ಕಡಬ) Newskadaba.com ಪುತ್ತೂರು, ಮೇ. 24. ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೊಳಗಾಗಿ ಹಲವು ವಿದ್ಯಾರ್ಥಿಗಳು ಕಾಲೇಜು ಫೀಸು ಪಾವತಿ ಮಾಡಲು ಸಮಯಾವಕಾಶ ನೀಡುವಂತೆ ಒತ್ತಾಯಿಸಿ ಕ್ಯಾಂಪಸ್ ಫ್ರಂಟ್ ವತಿಯಿಂದ ತಹಶೀಲ್ದಾರ್‌ರವರಿಗೆ ಮನವಿ ಸಲ್ಲಿಸಲಾಯಿತು. ಲಾಕ್‌ಡೌನ್‌ನಲ್ಲಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ಪ್ರಾರಂಭಿಸಲಾಗಿದ್ದು, ಆದರೆ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಹಲವಾರು ವಿದ್ಯಾರ್ಥಿಗಳು ಕಾಲೇಜು ಶುಲ್ಕ ಪಾವತಿ ಮಾಡದಿರುವ ಕಾರಣ ಆನ್‌ಲೈನ್ ತರಗತಿಗೆ ಸೇರಿಸದೆ ವಿದ್ಯಾರ್ಥಿಗಳಿಗೆ ಒತ್ತಡ ಹೇರುತ್ತಿದೆ. ಇದರಿಂದ ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಭವಿಷ್ಯದ ಬಗ್ಗೆ ಆತಂಕಕ್ಕೊಳಗಾಗಿದ್ದಾರೆ. ಹಾಗಾಗಿ

ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿಗೆ ಅಡಚಣೆ ➤ ಕ್ಯಾಂಪಸ್ ಫ್ರಂಟ್ ಪುತ್ತೂರು ಜಿಲ್ಲಾ ಸಮಿತಿ ವತಿಯಿಂದ ಮನವಿ Read More »

ಕರಾವಳಿ, ಕರ್ನಾಟಕ

ಸುಳ್ಯ: ಅಕ್ರಮ ಜೂಜಾಟ ➤ ಮಾಜಿ ಜಿ.ಪಂ ಸದಸ್ಯ ಸೇರಿ 10 ಮಂದಿಯ ಬಂಧನ

(ನ್ಯೂಸ್ ಕಡಬ) Newskadaba.com ಸುಳ್ಯ, ಮೇ. 24. ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿ ಅಕ್ರಮವಾಗಿ ಜೂಜಾಟದಲ್ಲಿ ನಿರತರಾಗಿದ್ದ ಮಾಜಿ ಜಿ.ಪಂ. ಸದಸ್ಯನ ಸಹಿತ 10 ಮಂದಿಯನ್ನು ಪೊಲೀಸರು ಬಂಧಿಸಿದ‌ ಘಟನೆ ಎಲಿಮಲೆ‌ಸಮೀಪದ ನೆಲ್ಲೂರು ಕೆಮ್ರಾಜೆಯ ಮೋಂಟಡ್ಕ ಎಂಬಲ್ಲಿ ನಡೆದಿದೆ. ಬಂಧಿತರನ್ನು ಮಾಜಿ ಜಿಪಂ ಸದಸ್ಯ ಗಂಗಾಧರ ಕೇಪಳಕಜೆ, ಗೋಪಾಲಕೃಷ್ಣ, ಗಂಗಾಧರ, ಚಂದ್ರಶೇಖರ, ರಾಮ, ಸೋಮಶೇಖರ, ಜನಾರ್ದನ, ದೀಪಕ್, ಮೋಹನದಾಸ್, ಅಶೋಕ, ದಯಾನಂದ ಬಂಧಿತರು. ಆರೋಪಿಗಳು ಮೇ. 23ರಂದು ಜೂಜಾಟದಲ್ಲಿ ನಿರತರಾಗಿದ್ದ ವೇಳೆ ಕರ್ತವ್ಯದಲ್ಲಿದ್ದ ಸುಳ್ಯ ಎಸ್

ಸುಳ್ಯ: ಅಕ್ರಮ ಜೂಜಾಟ ➤ ಮಾಜಿ ಜಿ.ಪಂ ಸದಸ್ಯ ಸೇರಿ 10 ಮಂದಿಯ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಅರ್ಚಕರಿಗೆ ಕೋವಿಡ್ ಪರಿಹಾರ ನೀಡಿದಂತೆ ಇಮಾಮರಿಗೂ ಪರಿಹಾರ ಘೋಷಿಸಿ ➤ ಅಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಆಗ್ರಹ

(ನ್ಯೂಸ್ ಕಡಬ) Newskadaba.com ಬೆಂಗಳೂರು, ಮೇ‌ 23. ಕೋವಿಡ್ ನಿಗ್ರಹಕ್ಕಾಗಿ ವಿಧಿಸಲಾಗಿರುವ ಲಾಕ್ ಡೌನ್ ವೇಳೆ ರಾಜ್ಯ ಸರಕಾರವು ದೇವಸ್ಥಾನಗಳ ಅರ್ಚಕರಿಗೆ ಪರಿಹಾರ ನೀಡಿದಂತೆ ಮಸ್ಜಿದ್ ಇಮಾಮರಿಗೂ ಪರಿಹಾರ ಘೋಷಿಸಬೇಕೆಂದು ಅಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಜ್ಯಾಧ್ಯಕ್ಷ ಮೌಲಾನಾ ಅತೀಕುರ್ರಹ್ಮಾನ್ ಅಶ್ರಫಿ ಆಗ್ರಹಿಸಿದ್ದಾರೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ದೇವಾಲಯದ ಅರ್ಚಕರು ಮತ್ತು ಸಿಬ್ಬಂದಿಗೆ ನೆರವಾಗುವ ನಿಟ್ಟಿನಲ್ಲಿ ಸರಕಾರವು ಪರಿಹಾರವನ್ನು ಘೋಷಿಸಿದೆ. 33.45 ಕೋಟಿ ರೂಪಾಯಿ ಮುಂಗಡ ತಸ್ದೀಕ್ ಜೊತೆಗೆ 4.50 ಕೋಟಿ ರೂ.ವರ್ಷಾಸನವನ್ನೂ ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ.

ಅರ್ಚಕರಿಗೆ ಕೋವಿಡ್ ಪರಿಹಾರ ನೀಡಿದಂತೆ ಇಮಾಮರಿಗೂ ಪರಿಹಾರ ಘೋಷಿಸಿ ➤ ಅಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಆಗ್ರಹ Read More »

ಕರ್ನಾಟಕ

ಜೀವ ಪಣಕ್ಕಿಟ್ಟು ದೇಶ ಪ್ರೇಮ ತೋರಿಸಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ

(ನ್ಯೂಸ್ ಕಡಬ) Newskadaba.com ಸಿರುಗುಪ್ಪ, ಮೇ. 23. ತಾಲೂಕಿನಲ್ಲಿ ಕೊರೋನಾ ಸೋಂಕಿತರ ಮೃತದೇಹ ಮತ್ತು ಅನಾಥ ಮೃತದೇಹಗಳ ಗೌರವದ ಅಂತ್ಯಕ್ರಿಯೆ ಮಾಡುವ ಕಾರ್ಯವನ್ನು ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಕಾರ್ಯಕರ್ತರು ನಡೆಸುತ್ತಿದ್ದಾರೆ. ಕೊರೋನಾದಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಗೌರವಯುತವಾಗಿ ನಡೆಸಲು ಪ್ರತೀಯೊಬ್ಬ ಕುಟುಂಬದ ಸದಸ್ಯರು ಇಚ್ಚೆಪಡುತ್ತಾರೆ, ಆದರೆ ಕೊರೋನಾ ಸೋಂಕು ಹರಡುತ್ತದೆ ಎನ್ನುವ ಭಯದಿಂದ ಸರ್ಕಾರವು ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಅಂತ್ಯಸಂಸ್ಕಾರ ಮಾಡಲು ಪಾರ್ಥಿವ ಶರೀರವನ್ನು ಕುಟುಂಬದವರಿಗೆ ಒಪ್ಪಿಸದೇ ತಾವೇ ಬೇಕಾಬಿಟ್ಟಿಯಾಗಿ ಅಂತ್ಯಸಂಸ್ಕಾರ ಮಾಡುತ್ತಿದ್ದರು. ಕಳೆದ

ಜೀವ ಪಣಕ್ಕಿಟ್ಟು ದೇಶ ಪ್ರೇಮ ತೋರಿಸಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ Read More »

ಕರ್ನಾಟಕ

ರಾಜ್ಯದಲ್ಲಿ ಮತ್ತೆ 14 ದಿನಗಳ ಕಾಲ ಲಾಕ್‍ಡೌನ್ ವಿಸ್ತರಣೆ..? ➤ ಜೂನ್ 07 ರ ವರೆಗೆ ಕರುನಾಡು ಸಂಪೂರ್ಣ ಲಾಕ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.01. ರಾಜ್ಯದಲ್ಲಿ ಜೂನ್ 07 ರ ವರೆಗೆ ಲಾಕ್‍ಡೌನ್ ವಿಸ್ತರಿಸಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಿಸಿದ್ದಾರೆ. ಇದುವರೆಗೆ ಮೇ 24 ರ ವರೆಗೆ ರಾಜ್ಯದಲ್ಲಿ ಲಾಕ್‍ಡೌನ್ ಘೋಷಣೆ ಮಾಡಲಾಗಿತ್ತು. ಇದೀಗ ಕೊರೋನಾ ಸೋಂಕು ಹತೋಟಿಗೆ ಬಾರದ ಹಿನ್ನೆಲೆಯಲ್ಲಿ ತಜ್ಞರ ವರದಿಯನುಸಾರ ಮತ್ತೆ 14 ದಿನಗಳ ಕಾಲ ಲಾಕ್‍ಡೌನ್ ಮುಂದುವರಿಸಲಾಗಿದ್ದು, ಜೂನ್ 07 ರ ವರೆಗೆ ಕರುನಾಡು ಸಂಪೂರ್ಣ ಸ್ತಬ್ಧವಾಗಲಿದೆ ಎಂದು ಸಿಎಂ ಯಡಿಯೂರಪ್ಪ ಘೋಷಿಸಿರುವುದಾಗಿ ದೃಶ್ಯ ಮಾಧ್ಯಮವೊಂದು ವರದಿ ಮಾಡಿದೆ.  

ರಾಜ್ಯದಲ್ಲಿ ಮತ್ತೆ 14 ದಿನಗಳ ಕಾಲ ಲಾಕ್‍ಡೌನ್ ವಿಸ್ತರಣೆ..? ➤ ಜೂನ್ 07 ರ ವರೆಗೆ ಕರುನಾಡು ಸಂಪೂರ್ಣ ಲಾಕ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಳ್ಳಾರೆಯಲ್ಲಿ ಕೊರೋನಾ ಸ್ಫೋಟ..‼️ ➤ ಸುಳ್ಳು ಸುದ್ದಿ ರವಾನಿಸಿದ ಕಿಡಿಗೇಡಿಗಳು

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಮೇ.20. ಬೆಳ್ಳಾರೆಯಲ್ಲಿ ಕೊರೋನಾ ಸ್ಪೋಟ, ಬೆಳ್ಳಾರೆಯ ಕಾವಿನಮೂಲೆ ಮೋರಿಯಲ್ಲಿ ಕುಳಿತುಕೊಳ್ಳುವ ಹುಡುಗರೇ ಸೋಂಕು ಹರಡಲು ಕಾರಣ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದ್ದು, ಯಾರೋ ಕಿಡಿಗೇಡಿಗಳು ಮಾಡಿದ ದುಷ್ಕೃತ್ಯದಿಂದ ನಾಗರಿಕರು ಕೆಲಕಾಲ ಆತಂಕಕ್ಕೆ ಒಳಗಾದ ಘಟನೆ ಗುರುವಾರದಂದು ನಡೆದಿದೆ. ಟಿವಿ9 ದೃಶ್ಯ ಮಾಧ್ಯಮದ ಲೋಗೋ ಬಳಸಿ ಬೇರೆ ಸುದ್ದಿಯನ್ನು ಅಳಿಸಿ ಆ ಜಾಗದಲ್ಲಿ ಬೆಳ್ಳಾರೆಯ ವಿಚಾರವನ್ನು ಸೇರಿಸಿ ವಾಟ್ಸ್ಅಪ್ ಮೂಲಕ ಶೇರ್ ಮಾಡಲಾಗಿತ್ತು. ಇದು ಸುಳ್ಳು ಸುದ್ದಿಯಾಗಿದ್ದು, ಯಾರೋ ಕಿಡಿಗೇಡಿಗಳು ವಾಟ್ಸ್ಅಪ್

ಬೆಳ್ಳಾರೆಯಲ್ಲಿ ಕೊರೋನಾ ಸ್ಫೋಟ..‼️ ➤ ಸುಳ್ಳು ಸುದ್ದಿ ರವಾನಿಸಿದ ಕಿಡಿಗೇಡಿಗಳು Read More »

ಕರ್ನಾಟಕ

ರಾಜ್ಯ ಸರಕಾರದ ವಿಶೇಷ ಪ್ಯಾಕೇಜ್ ಒತ್ತಡದ ಹಾಗೂ ಒಲ್ಲದ ಮನಸ್ಸಿನಿಂದ ಘೋಷಿಸಿರುವ ಪ್ಯಾಕೇಜ್ ➤ ಕೆಪಿಸಿಸಿ ವಕ್ತಾರ ಶೌವಾದ್ ಗೂನಡ್ಕ

(ನ್ಯೂಸ್ ಕಡಬ) Newskadaba.com ಸುಳ್ಯ, ಮೇ. 20. ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರವು 1,250 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಇದು ಕೇವಲ ಘೋಷಣೆಗಷ್ಟೇ ಸೀಮಿತವಾಗದೆ ಸಮರ್ಪಕವಾಗಿ ಜಾರಿಯಾಗಬೇಕು. ಅರ್ಹ ಫಲಾನುಭವಿಗಳಿಗೆ ಇದರ ಉಪಯೋಗ ಸಿಗಬೇಕೆಂದು ಕೆ.ಪಿ.ಸಿ.ಸಿ. ವಕ್ತಾರ ಶೌವಾದ್ ಗೂನಡ್ಕರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಳೆದ ವರ್ಷ ಘೋಷಿಸಿದ ಪ್ಯಾಕೇಜ್ ನಿಂದ ಅರ್ಹರಿಗೆ ಉಪಯೋಗವಾಗಿಲ್ಲ. ಪ್ರತಿಪಕ್ಷಗಳ ಹಾಗೂ ಸಾರ್ವಜನಿಕ ಒತ್ತಡದ ಮೇರೆಗೆ ಸರ್ಕಾರವು ಒಲ್ಲದ ಮನಸ್ಸಿನಿಂದ ಈ

ರಾಜ್ಯ ಸರಕಾರದ ವಿಶೇಷ ಪ್ಯಾಕೇಜ್ ಒತ್ತಡದ ಹಾಗೂ ಒಲ್ಲದ ಮನಸ್ಸಿನಿಂದ ಘೋಷಿಸಿರುವ ಪ್ಯಾಕೇಜ್ ➤ ಕೆಪಿಸಿಸಿ ವಕ್ತಾರ ಶೌವಾದ್ ಗೂನಡ್ಕ Read More »

ಕರ್ನಾಟಕ
Scroll to Top