ಕರ್ನಾಟಕ

ಹಿರಿಯ ನಟಿ ಕವಿತಾ ಅವರ ಪತಿ-ಪುತ್ರ ಇಬ್ಬರು ಕೊರೊನಾ ಸೋಂಕಿಗೆ ಬಲಿ

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.30:ಬಹುಭಾಷಾ ನಟಿ ಕವಿತಾ ಅವರ ಮಗ, ಪತಿ ಇಬ್ಬರು ಕೊರೊನಾಗೆ ಬಲಿಯಾಗಿದ್ದಾರೆ.ಕೇವಲ 15 ದಿನಗಳಲ್ಲಿ ಗಂಡ ಮತ್ತು ಮಗ ಇಬ್ಬರೂ ಸಾವನ್ನಪ್ಪಿರುವುದು ಕವಿತಾ ಅವರಿಗೆ ದಿಗ್ಭ್ರಮೆ ಮೂಡಿಸಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ ಹಿರಿಯ ನಟಿ ಕವಿತಾ ಅವರು ಕೈ ಹಿಡಿದ ಪತಿ ದಶರಥ ರಾಜ್ ಮತ್ತು ಹೆತ್ತ ಮಗ ಸಂಜಯ್ ರೂಪ್ ಅವರನ್ನು ಕಳೆದುಕೊಂಡ ನಟಿ ಕವಿತಾ ದುಃಖದ ಮಡುವಿನಲ್ಲಿದ್ದಾರೆ.ಮಗ ಸಂಜಯ್ ರೂಪ್ ಎರಡು ವಾರಗಳ ಹಿಂದೆ […]

ಹಿರಿಯ ನಟಿ ಕವಿತಾ ಅವರ ಪತಿ-ಪುತ್ರ ಇಬ್ಬರು ಕೊರೊನಾ ಸೋಂಕಿಗೆ ಬಲಿ Read More »

ಕರ್ನಾಟಕ

ಮಿತಿಮೀರಿದ ಪೊಲೀಸಗ ತಪಾಸಣೆ ವೇಳೆ ಟೆಂಪೋ ಢಿಕ್ಕಿ ಹೊಡೆದೂ ಯುವಕ ಮೃತ್ಯು ➤ ಎಸ್ ವೈಎಸ್ & ಎಸ್ಸೆಸ್ಸೆಫ್ ಆತೂರು ತೀವ್ರ ಖಂಡನೆ

(ನ್ಯೂಸ್ ಕಡಬ) Newskadaba.com ಆತೂರು, ಜೂ. 30. ಕೋವಿಡ್ ನಿಮಿತ್ತ ರಾಜ್ಯದಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು, ಇದೀಗ ಮಧ್ಯಾಹ್ನ 2 ಗಂಟೆಯವರೆಗೆ ಎಲ್ಲಾ ಅಂಗಡಿಗಳು ತರೆಯಲು ಹಾಗೂ ಅಗತ್ಯಕ್ಕಾಗಿ ಹೊರಗಡೆ ತೆರಳಲು ಅನುಮತಿ ದೊರಕಿದೆ. ಹೀಗಿದ್ದೂ ಕೂಡಾ ಆತೂರಿನಲ್ಲಿ 10 ಗಂಟೆಯಾಗುವಷ್ಟರಲ್ಲೇ ಕಡಬ ಪೊಲೀಸರು ಬಿಗಿಯಾದ ತಪಾಸಣೆ ನಡೆಸಿ ಯುವಕನೋರ್ವನ ಸಾವಿಗೆ ನೇರ ಕಾರಣರಾಗಿದ್ದಾರೆ. ದೀರ್ಘ ಸಮಯದ ಲಾಕ್ ಡೌನ್ ನಿಮಿತ್ತ ಉದ್ಯೋಗ ಹಾಗೂ ಅಗತ್ಯಗಳನ್ನು ಕಳೆದುಕೊಂಡಿದ್ದ ಜನರು ಈಗಿನ ಸೀಮಿತ ಅನ್ ಲಾಕ್ ಅವಧಿಗಳಲ್ಲಿ ವ್ಯಾಪಾರ

ಮಿತಿಮೀರಿದ ಪೊಲೀಸಗ ತಪಾಸಣೆ ವೇಳೆ ಟೆಂಪೋ ಢಿಕ್ಕಿ ಹೊಡೆದೂ ಯುವಕ ಮೃತ್ಯು ➤ ಎಸ್ ವೈಎಸ್ & ಎಸ್ಸೆಸ್ಸೆಫ್ ಆತೂರು ತೀವ್ರ ಖಂಡನೆ Read More »

ಕರಾವಳಿ, ಕರ್ನಾಟಕ

ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ ➤ 23 ದನಗಳ ರಕ್ಷಣೆ

(ನ್ಯೂಸ್‌ ಕಡಬ) Newskadaba.com ಕುಂದಾಪುರ, ಜೂ. 28. ಅಕ್ರಮ ಕಸಾಯಿಖಾನೆ ಮೇಲೆ ದಾಳಿ ನಡೆಸಿದ ಪೊಲೀಸರು ಮಾಂಸಕ್ಕಾಗಿ ಕೂಡಿಟ್ಟಿದ್ದ 23 ದನಗಳನ್ನು ರಕ್ಷಿಸಿದ ಘಟನೆ ತಾಲೂಕಿನ ಗುಳ್ವಾಡಿ ಎಂಬಲ್ಲಿ ನಡೆದಿದೆ. ಇತ್ತೀಚಿನ‌ ದಿನಗಳಲ್ಲಿ ಕುಂದಾಪುರ ಪರಿಸರದಲ್ಲಿ ದನಗಳ್ಳತನ ನಡೆಯುತ್ತಿರುವ ಕುರಿತು ದೂರುಗಳು ಕೇಳಿಬರುತ್ತಿದ್ದು, ಈ ಹಿನ್ನೆಲೆ ಗುಳ್ವಾಡಿ ಗ್ರಾಮದ ಅಬೂಬಕ್ಕರ್ ಎಂಬವರ ಮನೆ ಮೇಲೆ ಹಿಂದೂ ಸಂಘಟನೆ ಹಾಗೂ ಪೊಲೀಸರು ದಾಳಿ ನಡೆಸಿದಾಗ ಮಾಂಸಕ್ಕೆಂದು ಕೂಡಿಡಲಾದ 23 ದನಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಕಂಡ್ಲೂರು ಗ್ರಾಮಾಂತರ

ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ ➤ 23 ದನಗಳ ರಕ್ಷಣೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮುಸ್ಲಿಂ ಸಮುದಾಯ ಆರೋಗ್ಯ ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರ ಮಾಡುತ್ತಿರುವುದು ಶ್ಲಾಘನೀಯ ➤ ರಾಮಕುಂಜ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಜೆರಾಲ್ಡ್ ಮಸ್ಕರೇನಸ್

(ನ್ಯೂಸ್ ಕಡಬ) newskadaba.com ಆತೂರು, ಜೂ. 28. ಮುಸ್ಲಿಂ ಸಮುದಾಯವು ರಕ್ತದಾನ ಶಿಬಿರ ಹಾಗೂ ಆರೋಗ್ಯ ಜಾಗೃತಿ ಮೊದಲಾದಂತಹ ಕಾರ್ಯಕ್ರಮವನ್ನು ಎಸ್ ಕೆ ಎಸ್ ಎಸ್ ಎಫ್ ಆತೂರು ಕ್ಲಸ್ಟರ್ ಸಂಘಟನೆಯು ನಡೆಸುತ್ತಿರುವುದು ಶ್ಲಾಘನೀಯ, ಇಂತಹ ಅರೋಗ್ಯ ಜಾಗೃತಿ ಕಾರ್ಯಕ್ರಮಗಳು ಪ್ರತೀ ಸಮುದಾಯದಲ್ಲಿ ನಡೆಯುವುದು ಅಗತ್ಯವಿದೆ ಎಂದು ಆತೂರು ಬದ್ರಿಯಾ ಹಾಲ್ ನಲ್ಲಿ ನಡೆದ ಸಮಸ್ತ ಕೇರಳ ಜಮ್-ಇಯ್ಯತುಲ್ ಉಲಮಾ 95ನೇ ವರ್ಷದ ಪ್ರಯುಕ್ತ ಎಸ್ ಕೆ ಎಸ್ ಎಸ್ ಎಫ್ ಆತೂರು ಕ್ಲಸ್ಟರ್ ಸಮಿತಿ ವತಿಯಿಂದ

ಮುಸ್ಲಿಂ ಸಮುದಾಯ ಆರೋಗ್ಯ ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರ ಮಾಡುತ್ತಿರುವುದು ಶ್ಲಾಘನೀಯ ➤ ರಾಮಕುಂಜ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಜೆರಾಲ್ಡ್ ಮಸ್ಕರೇನಸ್ Read More »

ಕರಾವಳಿ, ಕರ್ನಾಟಕ

ಮಂಗಳೂರಿನಲ್ಲಿ ವೀಕೆಂಡ್ ಕರ್ಫ್ಯೂ ಯಶಸ್ವಿ

(ನ್ಯೂಸ್ ಕಡಬ) newskadaba,ಮಂಗಳೂರು ಜೂ.27: ನಗರದಲ್ಲಿ ವೀಕೆಂಡ್ ಕರ್ಫ್ಯೂ ಯಶಸ್ವಿಯಾಗಿದ್ದು, ಮಂಗಳೂರು ಎಲ್ಲೆಡೆ ಸ್ತಬ್ಧವಾಗಿದೆ. ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿ ಯಾರೂ ಅನಗತ್ಯ ಸಂಚಾರ ನಡೆಸದಂತೆ ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಿದ್ದಾರೆ. ವಾರಾಂತ್ಯ ಕರ್ಫ್ಯೂ ಸಂದರ್ಭ ಹಾಲು, ಮೆಡಿಕಲ್ ಹಾಗೂ ಸರಕಾರಿ ಕಚೇರಿ ಹೊರತುಪಡಿಸಿ ಮಿಕ್ಕೆಲ್ಲವೂ ಬಂದ್ ಮಾಡಲು ಜಿಲ್ಲಾಡಳಿತ ಆದೇಶಿಸಿತ್ತು. ಜನತೆಯಿಂದ ಈ ಆದೇಶಕ್ಕೆ ಉತ್ತಮ ಸ್ಪಂದನೆ ದೊರಕಿದ್ದು, ರಸ್ತೆಯಲ್ಲಿ ವಾಹನಗಳ, ಜನರ ಓಡಾಟವಿಲ್ಲದೆ ಎಲ್ಲಡೆ ಮಂಗಳೂರು ಸ್ತಬ್ಧವಾಗಿದೆ.

ಮಂಗಳೂರಿನಲ್ಲಿ ವೀಕೆಂಡ್ ಕರ್ಫ್ಯೂ ಯಶಸ್ವಿ Read More »

ಕರಾವಳಿ, ಕರ್ನಾಟಕ

ಹಡೀಲು ಭೂಮಿಯಲ್ಲಿ ಸ್ವತಃ ನಾಟಿ ಮಾಡಿ ಗಮನ ಸೆಳೆದ ಶಾಸಕ ಖಾದರ್

(ನ್ಯೂಸ್ ಕಡಬ) newskadaba,ಮಂಗಳೂರು ಜೂ.27: ಹಡೀಲು ಭೂಮಿಯಲ್ಲಿ ಕೃಷಿ ಕಾರ್ಯ ನಡೆಯುತ್ತಿರುವಲ್ಲಿಗೆ ಹೋಗಿದ್ದ ಶಾಸಕ ಯು.ಟಿ.ಖಾದರ್ ಅವರು ಸ್ವತಃ ಗದ್ದೆಗಿಳಿದು ನಾಟಿ ಮಾಡಿ ಕೃಷಿಕರಿಗೆ ಸಾಥ್ ನೀಡಿದ್ದು, ಇದೀಗ ಇದರ ಫೋಟೋಗಳು ವೈರಲ್ ಆಗುತ್ತಿದ್ದು, ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಶುಕ್ರವಾರ ನಗರದ ಕೊಣಾಜೆಯ ಕೆಳಗಿನ ಮನೆಯ ಹಡೀಲು ಬಿದ್ದ ಗದ್ದೆಯಲ್ಲಿ ನಾಗಬ್ರಹ್ಮ ಪ್ರಗತಿಪರ ಸಂಘ ಹಾಗೂ ಊರಿನ ಪ್ರಮುಖರು ಸೇರಿ ಭತ್ತದ ಕೃಷಿ ಮಾಡುವ ಸಂಕಲ್ಪ ಮಾಡಿದ್ದರು. ಇಲ್ಲಿಗೆ ಭತ್ತದ ಪೈರು ನಾಟಿ ಮಾಡಲು ಇಬ್ಬರು ಮಹಿಳೆಯರು ತೆರಳುತ್ತಿದ್ದರು.

ಹಡೀಲು ಭೂಮಿಯಲ್ಲಿ ಸ್ವತಃ ನಾಟಿ ಮಾಡಿ ಗಮನ ಸೆಳೆದ ಶಾಸಕ ಖಾದರ್ Read More »

ಕರಾವಳಿ, ಕರ್ನಾಟಕ

ದೇವಾಲಯದ ಅರ್ಚಕರಿಗೆ ಚಪ್ಪಲಿಯಿಂದ ಹೊಡೆತ ➤ ಆರು ಮಂದಿಯ ವಿರುದ್ದ ಕೇಸ್ ದಾಖಲು

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಜೂ. 27. ಅರ್ಚಕ ಹಾಗೂ ಅಚರ್ಕನ ಪುತ್ರನೋರ್ವನಿಗೆ ಚಪ್ಪಲಿಯಿಂದ ಹೊಡೆದ ಘಟನೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಗಿಜೆಕಟ್ಟೆ ಎಂಬಲ್ಲಿ ನಡೆದಿದೆ. ಇದೀಗ ಅರ್ಚಕರ ಮೇಲಿನ ಹಲ್ಲೆಯ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಲ್ಲೆಗೊಳಗಾದವರನ್ನು ದೇವಾಲಯದ ಅರ್ಚಕ ಚನ್ನಕೇಶವಯ್ಯ ಹಾಗೂ ಪುತ್ರ ರಂಗನಾಥ್ ಎಂದು ಗುರುತಿಸಲಾಗಿದೆ. ಜಾಗದ ವಿಚಾರವಾಗಿ ನಡೆದ ಜಗಳವು ತಾರಕಕ್ಕೇರಿ ಗವಿ ರಂಗನಾಥಸ್ವಾಮಿ ದೇವಾಲಯದ ಎದುರೇ ದೇವಾಲಯದ ಅರ್ಚಕ ಹಾಗೂ ಅವರ ಪುತ್ರನ ಮೇಲೆ ಗುಂಪೊಂದು

ದೇವಾಲಯದ ಅರ್ಚಕರಿಗೆ ಚಪ್ಪಲಿಯಿಂದ ಹೊಡೆತ ➤ ಆರು ಮಂದಿಯ ವಿರುದ್ದ ಕೇಸ್ ದಾಖಲು Read More »

ಕರ್ನಾಟಕ, ಕ್ರೈಮ್ ನ್ಯೂಸ್

ರೈಲಿನಡಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ

(ನ್ಯೂಸ್ ಕಡಬ)Newskadaba.com ಚನ್ನಪಟ್ಟಣ, ಜೂ. 27. ಯುವಕನೋರ್ವ ರೈಲಿನಡಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಚೆನ್ನಪಟ್ಟಣ ಹೊರವಲಯದ ತಿಟ್ಟಮಾರನಹಳ್ಳಿ ಎಂಬಲ್ಲಿ ನಡೆದಿದೆ. ಆತ್ಮಹತ್ಯೆಗೈದ ಯುವಕನನ್ನು ಸುಖೇಶ್ (19) ಎಂದು ಗುರುತಿಸಲಾಗಿದೆ. ಈತ ಸುಖೇಶ್ ಮೈಸೂರಿನ ಕಾಲೇಜೊಂದರಲ್ಲಿ ಎಲ್.ಎಲ್.ಬಿ ವಿದ್ಯಾರ್ಥಿಯಾಗಿದ್ದ ಎನ್ನಲಾಗಿದೆ. ಚನ್ನಪಟ್ಟಣಕ್ಕೆ ಹೋಗಿಬರುತ್ತೇನೆ ಎಂದು ಹೇಳಿಹೋಗಿದ್ದ ಈತ ಮೈಸೂರು ಕಡೆಯಿಂದ ಬಂದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಚನ್ನಪಟ್ಟಣ ರೈಲ್ವೆ ಉಪ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರೈಲಿನಡಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

➤➤ ವಿಶೇಷ ಲೇಖನ ಅಪರಿಚಿತ ವ್ಯಕ್ತಿಗಳ ವಿಡಿಯೋ ಕರೆಗೆ ಉತ್ತರಿಸುವ ಮುನ್ನ ಇದನ್ನು ಓದಿ… ➤ ಹನಿಟ್ರ್ಯಾಪ್ ಗೆ ಬಲಿಯಾಗಿ ಹಣ ಕಳೆದುಕೊಳ್ಳಬೇಡಿ ✍? ಅಬ್ದುಲ್ ರಝಾಕ್ ಮರ್ಧಾಳ

(ನ್ಯೂಸ್ ಕಡಬ) Newskadaba.com ಬೆಂಗಳೂರು, ಜೂ. 27. ಅವಿವಾಹಿತ ಹಾಗೂ ವಿಚ್ಛೇದಿತ ಪುರುಷರಿಗೆ ಫೇಸ್‌ಬುಕ್‌ ಹಾಗೂ ವಾಟ್ಸಾಪ್ ಮೂಲಕ ವಿಡಿಯೋ ಕಾಲ್ ಮಾಡಿ ಹಣಕ್ಕಾಗಿ ಬೇಡಿಕೆ ಇಡುವ ಹೊಸ ಜಾಲವೊಂದು ಕಾರ್ಯನಿರ್ವಹಿಸುತ್ತಿದೆ. ಇವತ್ತು ನನ್ನ ಸ್ನೇಹಿತನಿಗೆ ಫೇಸ್‌ಬುಕ್‌ನಲ್ಲಿ ಅಪರಿಚಿತ ಪೂಜಾ ಕುಮಾರಿ ಎಂಬ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಹಾಗೂ ಮೆಸೇಂಜರ್ ಮೂಲಕ “ಹಾಯ್” ಎಂಬ ಮೆಸೇಜ್ ಬಂತು. ಇದಕ್ಕೆ ಉತ್ತರಿಸಿದ ಐದೇ ನಿಮಿಷದಲ್ಲಿ ವಾಟ್ಸಾಪ್ ಮುಖಾಂತರ ಆತನಿಗೆ ವಿಡಿಯೋ ಕಾಲ್ ಬರುತ್ತೆ, ವಿಡಿಯೋ ಕಾಲ್ ಸ್ವೀಕರಿಸಿದಾಗ ನೀಲಿಚಿತ್ರ

➤➤ ವಿಶೇಷ ಲೇಖನ ಅಪರಿಚಿತ ವ್ಯಕ್ತಿಗಳ ವಿಡಿಯೋ ಕರೆಗೆ ಉತ್ತರಿಸುವ ಮುನ್ನ ಇದನ್ನು ಓದಿ… ➤ ಹನಿಟ್ರ್ಯಾಪ್ ಗೆ ಬಲಿಯಾಗಿ ಹಣ ಕಳೆದುಕೊಳ್ಳಬೇಡಿ ✍? ಅಬ್ದುಲ್ ರಝಾಕ್ ಮರ್ಧಾಳ Read More »

ಕರ್ನಾಟಕ, ಕ್ರೈಮ್ ನ್ಯೂಸ್

“ಬಾಲಕಾರ್ಮಿಕತೆ ನಿಲ್ಲಿಸಿ- ಶಿಕ್ಷಣ ಒದಗಿಸಿ” ➤ ಕ್ಯಾಂಪಸ್ ಫ್ರಂಟ್ ವತಿಯಿಂದ ವಿವಿಧ ಸರಕಾರಿ ಅಧಿಕಾರಿಗಳಿಗೆ ಮನವಿ

(ನ್ಯೂಸ್ ಕಡಬ) Newskadaba.com ಬಳ್ಳಾರಿ, ಜೂ. 27. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯು ಆಯೋಜಿಸಿರುವಂತಹ “ಬಾಲಕಾರ್ಮಿಕತೆ ನಿಲ್ಲಿಸಿ- ಶಿಕ್ಷಣ ಒದಗಿಸಿ” ಅಭಿಯಾನದ ಭಾಗವಾಗಿ ಬಳ್ಳಾರಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಮತ್ತು ಹೊಸಪೇಟೆ ತಹಶೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿ, ಮಕ್ಕಳ ಕಲ್ಯಾಣಾಧಿಕಾರಿ, ಕಾರ್ಮಿಕ ಅಧಿಕಾರಿ ಹಾಗೂ ಸಿರುಗುಪ್ಪ ತಹಶೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿ, ಮಕ್ಕಳ ಕಲ್ಯಾಣಾಧಿಕಾರಿ, ಕಾರ್ಮಿಕ ಅಧಿಕಾರಿಯವರಿಗೆ ಮನವಿಯನ್ನು ನೀಡಲಾಯಿತು. ಗ್ರಾಮದಲ್ಲಿರುವ ಪ್ರತಿಯೊಂದು ವಿದ್ಯಾರ್ಥಿ ಕೂಡಾ ಶಿಕ್ಷಣದಿಂದ ವಂಚಿತರಾಗಬಾರದು.

“ಬಾಲಕಾರ್ಮಿಕತೆ ನಿಲ್ಲಿಸಿ- ಶಿಕ್ಷಣ ಒದಗಿಸಿ” ➤ ಕ್ಯಾಂಪಸ್ ಫ್ರಂಟ್ ವತಿಯಿಂದ ವಿವಿಧ ಸರಕಾರಿ ಅಧಿಕಾರಿಗಳಿಗೆ ಮನವಿ Read More »

ಕರ್ನಾಟಕ
Scroll to Top