ಕ್ರೀಡಾ ನ್ಯೂಸ್

86.18 ಮೀಟರ್ ದೂರ ಜಾವೆಲಿನ್ ಎಸೆದು ಚೊಚ್ಚಲ ಎನ್‌ಸಿ‌ ಕ್ಲಾಸಿಕ್‌ ಗೆದ್ದ ನೀರಜ್‌ ಚೋಪ್ರಾ

(ನ್ಯೂಸ್‌ ಕಡಬ) newskadaba.com ಜು.06:  ವರ್ಲ್ಡ್ ಅಥ್ಲೆಟಿಕ್ಸ್‌ನಿಂದ ಅನುಮೋದಿತ ಚೊಚ್ಚಲ‌ ಆವೃತ್ತಿಯ ಎನ್‌ಸಿ‌ ಕ್ಲಾಸಿಕ್‌ ಪಂದ್ಯಾವಳಿಯಲ್ಲಿ ಭಾರತೀಯ ಜಾವೆಲಿನ್ ತಾರೆ ನೀರಜ್ ಚೋಪ್ರಾ ಚಾಂಪಿಯನ್ ಆಗಿ‌ ಹೊರಹೊಮ್ಮಿದ್ದಾರೆ. 86.18 ಮೀಟರ್ ದೂರ ಎಸೆಯುವ ಮೂಲಕ ನೀರಜ್ ಚೋಪ್ರಾ ಅಗ್ರಸ್ಥಾನ ಗಳಿಸಿದರು. ಅಲ್ಲದೇ, ತಮ್ಮ ಹೆಸರಿನಲ್ಲೇ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಸ್ಪರ್ಧೆಯನ್ನು ಆಯೋಜಿಸಿ, ಅದರಲ್ಲಿಯೇ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹಿರಿಮೆಗೂ ಪಾತ್ರರಾದರು. 2015ರ ವಿಶ್ವ ಚಾಂಪಿಯನ್ ಕೀನ್ಯಾದ ಜೂಲಿಯಸ್ ಯೆಗೊ 84.51 ಮೀಟರ್ ಅತ್ಯುತ್ತಮ ಎಸೆತದೊಂದಿಗೆ ದ್ವಿತೀಯ […]

86.18 ಮೀಟರ್ ದೂರ ಜಾವೆಲಿನ್ ಎಸೆದು ಚೊಚ್ಚಲ ಎನ್‌ಸಿ‌ ಕ್ಲಾಸಿಕ್‌ ಗೆದ್ದ ನೀರಜ್‌ ಚೋಪ್ರಾ Read More »

ಕ್ರೀಡಾ ನ್ಯೂಸ್

ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ನೀರಜ್ ಚೋಪ್ರಾ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 03. ಅವಳಿ ಒಲಿಂಪಿಕ್ಸ್ ಪದಕ ವಿಜೇತ, ವಿಶ್ವದ ನಂಬರ್ ಒನ್ ಜಾವೆಲಿನ್ ಎಸೆತಗಾರರಾದ ನೀರಜ್ ಚೋಪ್ರಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಇಂದು ಸೌಹಾರ್ದ ಭೇಟಿ ಮಾಡಿ ಶುಭ ಹಾರೈಸಿದರು.   ಈ ಸಂದರ್ಭ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷರಾದ ವಿಧಾನ‌ ಪರಿಷತ್ ಸದಸ್ಯ ಗೋವಿಂದರಾಜು ಅವರು ಉಪಸ್ಥಿತರಿದ್ದರು. ಕಂಠೀರವ ಕ್ರೀಡಾಂಗಣದಲ್ಲಿ ಜುಲೈ 5ರಂದು ನಡೆಯಲಿರುವ ನೀರಜ್ ಚೋಪ್ರಾ ಕ್ಲಾಸಿಕ್ ಜಾವೆಲಿನ್ ಸ್ಪರ್ಧೆಯಲ್ಲಿ ಅವರು ಭಾಗವಹಿಸಲಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ನೀರಜ್ ಚೋಪ್ರಾ..! Read More »

ಕ್ರೀಡಾ ನ್ಯೂಸ್

RCB ಯಶ್‌ ದಯಾಳ್‌ ವಿರುದ್ಧ ಮಹಿಳೆಯಿಂದ ಮತ್ತೊಂದು ಆರೋಪ !

(ನ್ಯೂಸ್‌ ಕಡಬ) newskadaba.com ಜು.02: ಆರ್​ಸಿಬಿ ಸ್ಟಾರ್ ಯಶ್ ದಯಾಳ್, ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದಾರೆ. ದಯಾಳ್ ವಿರುದ್ಧ ಆರೋಪಗಳನ್ನು ಮಾಡಿರುವ ಯುವತಿ, ಇದೀಗ ದಯಾಳ್ ಮಾಡಿರುವ ವಿಡಿಯೋ ಕರೆಗಳ ಸ್ಕ್ರೀನ್​ಶಾಟ್​ಗಳನ್ನು ಮತ್ತು ಹಳೆಯ ಚಾಟ್​​ಗಳನ್ನು ಹಂಚಿಕೊಂಡಿದ್ದಾಳೆ. ಬೆನ್ನಲ್ಲೇ ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಯಶ್ ದಯಾಳ್ ಅವರ ಗೆಳತಿ ಎನ್ನಲಾದ ಯುವತಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಫೋಟೋಗಳು 2022 ರದ್ದಾಗಿದ್ದು, ಆಗ ಯಶ್ ಗುಜರಾತ್ ಟೈಟಾನ್ಸ್‌ನಲ್ಲಿದ್ದರು. ನಾನು ನಿನ್ನನ್ನು

RCB ಯಶ್‌ ದಯಾಳ್‌ ವಿರುದ್ಧ ಮಹಿಳೆಯಿಂದ ಮತ್ತೊಂದು ಆರೋಪ ! Read More »

ಕ್ರೀಡಾ ನ್ಯೂಸ್

ರಕ್ಷಿಸಿದ ನಾಯಿಯಿಂದಲೇ ಪ್ರಾಣ ಕಳೆದುಕೊಂಡ ಖ್ಯಾತ ಕಬಡ್ಡಿ ಆಟಗಾರ..!

(ನ್ಯೂಸ್ ಕಡಬ) newskadaba.com ಜು. 02. ತಾನು ರಕ್ಷಿಸಿದ್ದ ಬೀದಿ ನಾಯಿಯಿಂದಲೇ ಖ್ಯಾತ ಕಬ್ಬಡಿ ಆಟಗಾರನೋರ್ವ ಮೃತಪಟ್ಟ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ನಡೆದಿದೆ. ಮೃತರನ್ನು ಬ್ರಿಜೇಶ್ ಸೋಲಂಕಿ ಎಂದು ಗುರುತಿಸಲಾಗಿದೆ. ಇವರು ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ನಾಯಿ ಕಡಿತದಿಂದ ರಾಜ್ಯ ಮಟ್ಟದ ಕಬಡ್ಡಿ ಆಟಗಾರ ಬ್ರಿಜೇಶ್ ಸೋಲಂಕಿ ಸಾವನ್ನಪ್ಪಿದ್ದಾರೆ. ಬ್ರಿಜೇಶ್ ಅವರು ಕಳೆದ ಮಾರ್ಚ್ ತಿಂಗಳಿನಲ್ಲಿ ಚರಂಡಿಯಲ್ಲಿ ಬಿದ್ದಿದ್ದ ಬೀದಿ ನಾಯಿಯೊಂದನ್ನು ರಕ್ಷಿಸುವ ಸಂದರ್ಭ ಅದು ಅವರ ಬಲಗೈಗೆ

ರಕ್ಷಿಸಿದ ನಾಯಿಯಿಂದಲೇ ಪ್ರಾಣ ಕಳೆದುಕೊಂಡ ಖ್ಯಾತ ಕಬಡ್ಡಿ ಆಟಗಾರ..! Read More »

ಕ್ರೀಡಾ ನ್ಯೂಸ್

UAE ಏಷ್ಯಾಕಪ್ ಟೂರ್ನಿ: ಸೆ.7ರಂದು ಬಾರತ್-ಪಾಕ್ ಹಣಾಹಣಿ

(ನ್ಯೂಸ್ ಕಡಬ) newskadaba.com ಜು. 02. ಸೆಪ್ಟೆಂಬರ್ ಐದರಿಂದ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಆರಂಭವಾಗಲಿದ್ದು, ಸೆಪ್ಟೆಂಬರ್ 21ರಂದು ಫೈನಲ್ ಪಂದ್ಯ ನಡೆಯಲಿದೆ. 17 ದಿನಗಳ ಟೂರ್ನಿಯ ವೇಳಾಪಟ್ಟಿ ಇದೀಗ ಬಹುತೇಕ ಪೂರ್ಣಗೊಂಡಿದ್ದು, ಏಷ್ಯಾ ಕ್ರಿಕೆಟ್ ಮಂಡಳಿಯ ಆರಂಭಿಕ ವೇಳಾಪಟ್ಟಿಯ ಪ್ರಕಾರ, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಸೆಪ್ಟೆಂಬರ್ 7ರಂದು ನಡೆಯಲಿದೆ. ಟೂರ್ನಿಯ ಅಧಿಕೃತ ಆತಿಥ್ಯ ವಹಿಸುವ ಭಾರತ ಸೇರಿದಂತೆ ಟೂರ್ನಿಯಲ್ಲಿ ಭಾಗವಹಿಸುವ ಎಲ್ಲ ದೇಶಗಳು ಟೂರ್ನಿಯಲ್ಲಿ ಭಾಗವಹಿಸಲು ತಮ್ಮ

UAE ಏಷ್ಯಾಕಪ್ ಟೂರ್ನಿ: ಸೆ.7ರಂದು ಬಾರತ್-ಪಾಕ್ ಹಣಾಹಣಿ Read More »

ಕ್ರೀಡಾ ನ್ಯೂಸ್

ಯುಎಸ್‌ ಓಪನ್‌ 2025 ಬ್ಯಾಡ್ಮಿಂಟನ್‌ – ಚಾಂಪಿಯನ್‌ ಆಗಿ ಹೊರಹೊಮ್ಮಿದ ಕಾರ್ಕಳ ಮೂಲದ ಆಯುಷ್‌ ಶೆಟ್ಟಿ

(ನ್ಯೂಸ್ ಕಡಬ) newskadaba.com ಜು. 01. ಯುಎಸ್‌ ಓಪನ್‌ BWF Super 300 ಬ್ಯಾಡ್ಮಿಂಟನ್‌ ಚಾಂಪಿಯನ್‌ ಶಿಪ್‌ನಲ್ಲಿ ಕಾರ್ಕಳ ಮೂಲದ ಆಯೂಷ್‌ ಶೆಟ್ಟಿ(20) ಚಾಂಪಿಯನ್‌ ಆಗಿ ಹೊಮ್ಮಿದ್ದಾರೆ. ಆಯುಷ್ ಫೈನಲ್‌ನಲ್ಲಿ ಕೆನಡಾದ ಬ್ರಿಯಾನ್ ಯಾಂಗ್ ಅವರನ್ನು 21-18, 21-13 ಅಂತರದಿಂದ ಸೋಲಿಸಿ ಮೊದಲ BWF ಟೂರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. 2025ರಲ್ಲಿ ಭಾರತಕ್ಕೆ ಸಿಕ್ಕಿದ ಮೊದಲ ಬಿಡಬ್ಲ್ಯೂಎಫ್ ಟೂರ್ ಪ್ರಶಸ್ತಿ ಇದಾಗಿದೆ.   6 ಅಡಿ 4 ಇಂಚು ಎತ್ತರ ಹೊಂದಿರುವ ಆಯುಷ್‌ ಶೆಟ್ಟಿ ಭರ್ಜರಿ ಸ್ಮ್ಯಾಶ್ ಹೊಡೆಯುವ

ಯುಎಸ್‌ ಓಪನ್‌ 2025 ಬ್ಯಾಡ್ಮಿಂಟನ್‌ – ಚಾಂಪಿಯನ್‌ ಆಗಿ ಹೊರಹೊಮ್ಮಿದ ಕಾರ್ಕಳ ಮೂಲದ ಆಯುಷ್‌ ಶೆಟ್ಟಿ Read More »

ಕ್ರೀಡಾ ನ್ಯೂಸ್

‘5 ವರ್ಷದಿಂದ ಲೈಂಗಿಕವಾಗಿ ಬಳಕೆ’: RCB ಯಶ್ ವಿರುದ್ಧ ಮಹಿಳೆ ಗಂಭೀರ ಆರೋಪ!

(ನ್ಯೂಸ್‌ ಕಡಬ) newskadaba.com ಜು.29 : ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಪ್ರಸಿದ್ಧರಾದ ಭಾರತೀಯ ಕ್ರಿಕೆಟಿಗ ಯಶ್ ದಯಾಳ್ ದೊಡ್ಡ ವಿವಾದಕ್ಕೆ ಸಿಲುಕಿದ್ದಾರೆ. ಇತ್ತೀಚೆಗೆ ಐಪಿಎಲ್ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯಶ್ ದಯಾಳ್ ಅವರ ಮೇಲೆ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ, ಹಿಂಸೆ ಮತ್ತು ವಂಚನೆ ಆರೋಪ ಹೊರಿಸಿದ್ದಾರೆ. ಯಶ್ ದಯಾಳ್ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ಸಂತ್ರಸ್ತ ಮಹಿಳೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಈ ವಿಷಯದಲ್ಲಿ

‘5 ವರ್ಷದಿಂದ ಲೈಂಗಿಕವಾಗಿ ಬಳಕೆ’: RCB ಯಶ್ ವಿರುದ್ಧ ಮಹಿಳೆ ಗಂಭೀರ ಆರೋಪ! Read More »

ಕ್ರೀಡಾ ನ್ಯೂಸ್

ಭಾರತ, ಪಾಕ್‌ ಮಧ್ಯೆ ಜುಲೈ 20 ರಂದು ಹೈವೋಲ್ಟೇಜ್‌ ಮ್ಯಾಚ್‌

(ನ್ಯೂಸ್‌ ಕಡಬ) newskadaba.com ಜೂ.28: ಭಾರತ ಮತ್ತು ಪಾಕಿಸ್ತಾನ ನಡುವಿನ ಬಹುನಿರೀಕ್ಷಿತ ಟಿ-20 ಕ್ರಿಕೆಟ್ ಪೈಪೋಟಿ ಮತ್ತೆ ಆರಂಭವಾಗಲಿದ್ದು ಜುಲೈ 20 ರಂದು ಎರಡು ತಂಡಗಳು ಮುಖಾಮುಖಿಯಾಗಲಿವೆ. ಟೂರ್ನಿಯಲ್ಲಿ ಟೀಂ ಇಂಡಿಯಾದ ಸದಸ್ಯರು ಆಡುತ್ತಿಲ್ಲ. ಬದಲಾಗಿ ಟೀ ಇಂಡಿಯಾಗೆ ನಿವೃತ್ತಿ ಹೇಳಿದ ಹಿರಿಯ ಆಟಗಾರರು ಆಡಲಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ 2025 ರ ಭಾಗವಾಗಿ ಭಾರತ ಚಾಂಪಿಯನ್ಸ್ ಮತ್ತು ಪಾಕಿಸ್ತಾನ ಚಾಂಪಿಯನ್ಸ್ ಮಧ್ಯೆ ಜುಲೈ 20 ರಂದು ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ಲೀಗ್‌ ಪಂದ್ಯ ನಡೆಯಲಿದೆ. ವಿಶ್ವ

ಭಾರತ, ಪಾಕ್‌ ಮಧ್ಯೆ ಜುಲೈ 20 ರಂದು ಹೈವೋಲ್ಟೇಜ್‌ ಮ್ಯಾಚ್‌ Read More »

ಕ್ರೀಡಾ ನ್ಯೂಸ್

ಟಿ20 ಪವರ್ ಪ್ಲೇ ನಿಯಮದಲ್ಲಿ ಬದಲಾವಣೆಗೆ ಮುಂದಾದ ಐಸಿಸಿ

(ನ್ಯೂಸ್ ಕಡಬ) newskadaba.com ಜೂ. 28. ಅಂತರರಾಷ್ಟ್ರೀಯ ಕ್ರಿಕೆಟ್ ಅನ್ನು ಮತ್ತಷ್ಟು ರೋಚಕಗೊಳಿಸುವ ಸಲುವಾಗಿ ಐಸಿಸಿ ತನ್ನ ಹಳೆಯ ನಿಯಮಗಳಲ್ಲಿ ಬದಲಾವಣೆಗಳನ್ನು ತರುವುದರೊಂದಿಗೆ ಹೊಸ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದ್ದು, ಐಸಿಸಿ ಇದೀಗ ಪುರುಷರ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ ಪಂದ್ಯಗಳ ಪವರ್‌ ಪ್ಲೇ ನಿಯಮದಲ್ಲಿ ಪ್ರಮುಖ ಬದಲಾವಣೆ ಮಾಡಿದೆ.   ಹೊಸ ಬದಲಾವಣೆಯ ಪ್ರಕಾರ, ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಮಳೆ ಅಥವಾ ಇನ್ನಾವುದೇ ಕಾರಣದಿಂದಾಗಿ ಇನ್ನಿಂಗ್ಸ್‌ ನ ಓವರ್‌ಗಳನ್ನು ಕಡಿಮೆ ಮಾಡಿದರೆ, ಪವರ್‌ಪ್ಲೇ ಓವರ್‌ಗಳನ್ನು ಓವರ್‌ಗಳ ಬದಲಿಗೆ ಚೆಂಡುಗಳ

ಟಿ20 ಪವರ್ ಪ್ಲೇ ನಿಯಮದಲ್ಲಿ ಬದಲಾವಣೆಗೆ ಮುಂದಾದ ಐಸಿಸಿ Read More »

ಕ್ರೀಡಾ ನ್ಯೂಸ್

ಜರ್ಮನಿಯಲ್ಲಿ ಶಸ್ತ್ರ ಚಿಕಿತ್ಸೆಗೊಳಗಾದ ಸೂರ್ಯಕುಮಾರ್ ಯಾದವ್..!

(ನ್ಯೂಸ್ ಕಡಬ) newskadaba.com ಜೂ. 26. ಭಾರತ ಕ್ರಿಕೆಟ್ ತಂಡದ ಟಿ-20 ನಾಯಕ ಸೂರ್ಯಕುಮಾರ್ ಯಾದವ್ ವಿರಾಮದಲ್ಲಿದ್ದಾರೆ. ಇತ್ತೀಚೆಗಷ್ಟೆ ಸೂರ್ಯಕುಮಾರ್ ಯಾದವ್ ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಇದೀಗ ಹರ್ನಿಯಾಗೆ ಯಶಸ್ವಿ ಶಸ್ತ್ರಚಿಕಿತ್ಸೆ ಆಗಿದೆ ಎಂಬ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.   ಶಸ್ತ್ರಚಿಕಿತ್ಸೆಯಿಂದಾಗಿ ಅವರು ಮುಂಬರುವ ಬಾಂಗ್ಲಾದೇಶ ಪ್ರವಾಸಕ್ಕೆ ಹೋಗುವ ಸಾಧ್ಯತೆ ಕಡಿಮೆಯಿದ್ದು, ಸಂಪೂರ್ಣ ಗುಣಮುಖವಾಗಲು ಅವರಿಗೆ 6 ರಿಂದ 12 ವಾರಗಳು ಬೇಕಾಗುತ್ತದೆ. ಮುಂದಿನ ವರ್ಷ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ 2026

ಜರ್ಮನಿಯಲ್ಲಿ ಶಸ್ತ್ರ ಚಿಕಿತ್ಸೆಗೊಳಗಾದ ಸೂರ್ಯಕುಮಾರ್ ಯಾದವ್..! Read More »

ಕ್ರೀಡಾ ನ್ಯೂಸ್
Scroll to Top