ರಾಷ್ಟ್ರೀಯ ನ್ಯೂಸ್

ಐರನ್ ಮ್ಯಾನ್ ಸವಾಲು ಜಯಿಸಿದ ತೇಜಸ್ವಿ ಸೂರ್ಯ: ಪ್ರಧಾನಿ ಮೋದಿ ಅಭಿನಂದನೆ

(ನ್ಯೂಸ್ ಕಡಬ) newskadaba.com ನವದೆಹಲಿ, ಅ.28. ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಭಾನುವಾರ ಐರನ್ ಮ್ಯಾನ್ 70.3 ಸವಾಲನ್ನು ಸಮರ್ಥವಾಗಿ ಜಯಿಸಿದ್ದಾರೆ. ಗೋವಾದಲ್ಲಿ ನಡೆದ ಈ ಟ್ರಯತ್ಲಾನ್ ಸ್ಪರ್ಧೆಯಲ್ಲಿ 1.9 ಕಿಲೋಮೀಟರ್ ಈಜು, 90 ಕಿಲೋಮೀಟರ್ ಸೈಕ್ಲಿಂಗ್ ಮತ್ತು 21.1 ಕಿಲೋಮೀಟರ್ ಓಟ ಹೀಗೆ 113 ಕಿಲೋಮೀಟರ್ (70.3 ಮೈಲು) ಕ್ರಮಿಸಬೇಕು. ಇದನ್ನು ಯಶಸ್ವಿಯಾಗಿ ಪೂರೈಸುವ ಮೂಲಕ ತೇಜಸ್ವಿಸೂರ್ಯ ಈ ಸಾಧನೆ ಮಾಡಿದ ಮೊಟ್ಟಮೊದಲ ಸಂಸದ ಎನಿಸಿಕೊಂಡಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾಗಿರುವ ತೇಜಸ್ವಿ ಸೂರ್ಯ, ತಮ್ಮ […]

ಐರನ್ ಮ್ಯಾನ್ ಸವಾಲು ಜಯಿಸಿದ ತೇಜಸ್ವಿ ಸೂರ್ಯ: ಪ್ರಧಾನಿ ಮೋದಿ ಅಭಿನಂದನೆ Read More »

ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್

ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ- ಕನ್ನಡದ ‘ವೆಂಕ್ಯಾ’ ಸಿನಿಮಾ ಆಯ್ಕೆ

(ನ್ಯೂಸ್ ಕಡಬ) newskadaba.com ಅ.26. ನವೆಂಬರ್ 20ರಿಂದ 28ರ ವರೆಗೆ ಗೋವಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವವು ಗೋವಾದ ಪಣಜಿಯಲ್ಲಿ ನಡೆಯಲಿದ್ದು, ಈ ಚಲನಚಿತ್ರೋತ್ಸವಕ್ಕೆ ಕನ್ನಡದ ‘ವೆಂಕ್ಯಾ’ ಸಿನಿಮಾ ಆಯ್ಕೆಯಾಗಿದೆ. ಇದರಲ್ಲಿ ದೇಶ ವಿದೇಶದ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಜಾಗತಿಕ ಮಟ್ಟದಲ್ಲಿ ಮನ್ನಣೆ ಹೊಂದಿರುವ ಈ ಸಿನಿಮೋತ್ಸವದಲ್ಲಿ ‘ವೆಂಕ್ಯಾ’ ಸಿನಿಮಾ ಪ್ರದರ್ಶನ ಕಾಣಲಿವೆ. ಪವನ್ ಒಡೆಯರ್ ಹಾಗೂ ಸಾಗರ್ ಪುರಾಣಿಕ್ ಕಾಂಬಿನೇಷನ್‌ನಲ್ಲಿ ‘ವೆಂಕ್ಯಾ’ ಚಿತ್ರ ಮೂಡಿ ಬಂದಿದೆ. ಈ ಸಿನಿಮಾಗೆ ಸಾಗರ್ ಪುರಾಣಿಕ್ ನಿರ್ದೇಶನದ ಜೊತೆಗೆ ನಾಯಕನಾಗಿಯೂ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಸಾಗರ್

ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ- ಕನ್ನಡದ ‘ವೆಂಕ್ಯಾ’ ಸಿನಿಮಾ ಆಯ್ಕೆ Read More »

ರಾಷ್ಟ್ರೀಯ ನ್ಯೂಸ್, ಸಿನಿಮಾ

ನಾಯಿಗೂ, ಅಡುಗೆ ಸಿಬ್ಬಂದಿಗೂ ಆಸ್ತಿ ಬರೆದಿಟ್ಟ ರತನ್ ಟಾಟಾ..!

(ನ್ಯೂಸ್ ಕಡಬ) newskadaba.com ಅ.26. ಇತ್ತೀಚೆಗೆ ನಿಧನ ಹೊಂದಿರುವಂತಹ ಭಾರತದ ಶ್ರೇಷ್ಠ ಉದ್ಯಮಿ ರತನ್ ಟಾಟಾ ಅವರು ನಾಯಿಗಳನ್ನು ತುಂಬಾ ಪ್ರೀತಿಸುತ್ತಿದ್ದರು. ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ, ರತನ್ ಟಾಟಾ ಅವರು 10,000 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆಂದು ಅಂದಾಜಿಸಲಾಗಿದೆ. ಅವರ ವಿಲ್ನಲ್ಲಿ, ಅವರು ತಮ್ಮ ಫೌಂಡೇಶನ್, ಸಹೋದರ ಜಿಮ್ಮಿ ಟಾಟಾ, ಮಲ-ಸಹೋದರಿಯರಾದ ಶಿರೀನ್ ಮತ್ತು ದೀನಾ ಜೆಜೀಬಾಯ್ ಮತ್ತು ಮನೆಯ ಸಿಬ್ಬಂದಿ ಸೇರಿದಂತೆ ವಿವಿಧ ಫಲಾನುಭವಿಗಳಿಗೆ ತಮ್ಮ ಆಸ್ತಿಗಳನ್ನು ಬರೆದಿಟ್ಟಿದ್ದಾರೆ. ಜೊತೆಗೆ ತನಗೆ ಅಡುಗೆ

ನಾಯಿಗೂ, ಅಡುಗೆ ಸಿಬ್ಬಂದಿಗೂ ಆಸ್ತಿ ಬರೆದಿಟ್ಟ ರತನ್ ಟಾಟಾ..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಲಾರೆನ್ಸ್ ಬಿಷ್ಣೋಯ್‌ ಸಂದರ್ಶನ ಪ್ರಕರಣ- 2 ಡಿಎಸ್‌ಪಿ ಸೇರಿ 7 ಪಂಜಾಬ್ ಪೊಲೀಸರ ಅಮಾನತು

(ನ್ಯೂಸ್ ಕಡಬ) newskadaba.com ನವದೆಹಲಿ, ಅ.26. ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್‌ 2022 ರಲ್ಲಿ ಜೈಲಿನಿಂದ ಮಾಧ್ಯಮಕ್ಕೆ ಸಂದರ್ಶನ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಪ ಅಧೀಕ್ಷಕ ಶ್ರೇಣಿಯ ಅಧಿಕಾರಿಗಳು ಮತ್ತು ಏಳು ಪಂಜಾಬ್ ಪೊಲೀಸರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿದೆ ಎಂದು ವರದಿಯಾಗಿದೆ. ಶುಕ್ರವಾರ ರಾಜ್ಯ ಗೃಹ ಕಾರ್ಯದರ್ಶಿ ಗುರುಕಿರತ್ ಕಿರ್ಪಾಲ್ ಸಿಂಗ್ ಅವರು ಅಮಾನತು ಆದೇಶವನ್ನು ಹೊರಡಿಸಿದ್ದಾರೆ. ಅಮಾನತುಗೊಂಡ ಇತರ ಪೊಲೀಸರಲ್ಲಿ ಸಬ್-ಇನ್‌ಸ್ಪೆಕ್ಟರ್ ರೀನಾ, ಸಿಐಎ, ಖರಾರ್, ಸಬ್-ಇನ್‌ಸ್ಪೆಕ್ಟರ್ ಜಗತ್ಪಾಲ್ ಜಂಗು, ಎಜಿಟಿಎಫ್, ಸಬ್-ಇನ್‌ಸ್ಪೆಕ್ಟರ್ ಶಗಂಜಿತ್ ಸಿಂಗ್

ಲಾರೆನ್ಸ್ ಬಿಷ್ಣೋಯ್‌ ಸಂದರ್ಶನ ಪ್ರಕರಣ- 2 ಡಿಎಸ್‌ಪಿ ಸೇರಿ 7 ಪಂಜಾಬ್ ಪೊಲೀಸರ ಅಮಾನತು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸೆಲ್ಫಿ ತೆಗೆಯಲು ಮುಂದಾದ ಕಾರ್ಮಿಕನ ಮೇಲೆ ಕಾಡಾನೆ ದಾಳಿ

(ನ್ಯೂಸ್ ಕಡಬ) newskadaba.com ಮಹಾರಾಷ್ಟ್ರ, ಅ.25. ಸೆಲ್ಫಿ ತೆಗೆಯಲು ಮುಂದಾದ ಕಾರ್ಮಿಕನನ್ನು ಕಾಡಾನೆಯೊಂದು ತುಳಿದು ಕೊಂದಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಶ್ರೀಕಾಂತ್ ರಾಮಚಂದ್ರ ಸಾತ್ರೆ(23) ಎಂದು ಗುರುತಿಸಲಾಗಿದೆ. ಶ್ರೀಕಾಂತ್ ಸಾತ್ರೆ ನವೆಗಾಂವ್ನಿಂದ ಕೇಬಲ್ ಅಳವಡಿಕೆ ಕೆಲಸಕ್ಕಾಗಿ ಗಡ್ಚಿರೋಲಿಗೆ ತನ್ನ ಸ್ನೇಹಿತರೊಂದಿಗೆ ಬಂದಿದ್ದರು. ತನ್ನ ಇಬ್ಬರು ಸ್ನೇಹಿತರ ಜೊತೆ ಗುರುವಾರ ಬೆಳಿಗ್ಗೆ ಮಹಾರಾಷ್ಟ್ರದ ಗಡ್ಚಿರೋಲಿಯ ಅಬಾಪುರ ಅರಣ್ಯಕ್ಕೆ ಕಾಡಾನೆಯನ್ನು ನೋಡಲು ತೆರಳಿದ್ದರು. ಅರಣ್ಯದಲ್ಲಿ ಸೆಲ್ಫಿ ತೆಗೆಯುವಾಗ ಶ್ರೀಕಾಂತ್ ಮೇಲೆ ಕಾಡಾನೆ ದಾಳಿ ಮಾಡಿದೆ. ಈ

ಸೆಲ್ಫಿ ತೆಗೆಯಲು ಮುಂದಾದ ಕಾರ್ಮಿಕನ ಮೇಲೆ ಕಾಡಾನೆ ದಾಳಿ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಅಧಿಕೃತ ನಿವಾಸದಲ್ಲಿ ಅಯೋಧ್ಯೆ ಎಂಡಿಎಂ ಮೃತದೇಹ ಪತ್ತೆ..!

(ನ್ಯೂಸ್ ಕಡಬ) newskadaba.com ಲಕ್ನೋ, ಅ.25. ಅಯೋಧ್ಯೆಯ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್(ಎಂಡಿಎಂ) ತಮ್ಮ ಅಧಿಕೃತ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸುರ್ಜಿತ್ ಸಿಂಗ್ (58) ಕೊತ್ವಾಲಿ ನಗರದ ಸಿವಿಲ್ ಲೈನ್ಸ್ ಪ್ರದೇಶದ ಸುರ್ಸಾರಿ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಅ.24ರಂದು ನಿಗೂಢವಾಗಿ ಮೃತಪಟ್ಟಿದ್ದಾರೆ. ಮೂಲಗಳ ಪ್ರಕಾರ ಸಿಂಗ್ ಮೃತದೇಹ ಪತ್ತೆಯಾದ ಕೋಣೆಯ ಸುತ್ತ ನೆಲದ ಮೇಲೆ ರಕ್ತ ಕಂಡುಬಂದಿದೆ. ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ತಂಡವೂ ಆಗಮಿಸಿದೆ. ಅವರ ಸಾವು ಆತ್ಮಹತ್ಯೆಯೋ ಅಥವಾ ಕೊಲೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ತನಿಖೆ ಹಾಗೂ

ಅಧಿಕೃತ ನಿವಾಸದಲ್ಲಿ ಅಯೋಧ್ಯೆ ಎಂಡಿಎಂ ಮೃತದೇಹ ಪತ್ತೆ..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ತಾರತಮ್ಯ- ಜಾತಿ ಹಿಂಸಾಚಾರ ಪ್ರಕರಣ: ದೇಶದಲ್ಲಿ ಮೊದಲ ಬಾರಿಗೆ 98 ಮಂದಿಗೆ ಸಾಮೂಹಿಕ ಶಿಕ್ಷೆ ಪ್ರಕಟ

(ನ್ಯೂಸ್ ಕಡಬ) newskadaba.com ಕೊಪ್ಪಳ, ಅ.25. ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ದಲಿತರನ್ನು ಗುರಿಯಾಗಿಸಿಕೊಂಡು 2014ರಲ್ಲಿ ನಡೆದ ತಾರತಮ್ಯ ಮತ್ತು ಜಾತಿ ಹಿಂಸಾಚಾರ ಪ್ರಕರಣದಲ್ಲಿ 98 ಮಂದಿಗೆ ಜೀವಾವಧಿ ಶಿಕ್ಷೆ ಹಾಗೂ ಮೂವರಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿ ಸೆಷನ್ಸ್ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ. ನ್ಯಾಯಾಧೀಶ ಚಂದ್ರಶೇಖರ್ ಸಿ ಪ್ರಕರಣದಲ್ಲಿ 101 ಜನರಿಗೆ ಶಿಕ್ಷೆ ವಿಧಿಸಿದರು. ಇದು ಜಾತಿ ಸಂಬಂಧಿತ ಪ್ರಕರಣಗಳಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ಸಾಮೂಹಿಕ ಶಿಕ್ಷೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಪಬ್ಲಿಕ್

ತಾರತಮ್ಯ- ಜಾತಿ ಹಿಂಸಾಚಾರ ಪ್ರಕರಣ: ದೇಶದಲ್ಲಿ ಮೊದಲ ಬಾರಿಗೆ 98 ಮಂದಿಗೆ ಸಾಮೂಹಿಕ ಶಿಕ್ಷೆ ಪ್ರಕಟ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

UPSC ಪರೀಕ್ಷೆಯಲ್ಲಿ 71ನೇ ರ್‍ಯಾಂಕ್‌ ಗಳಿಸಿದ ಫಾಬಿ ರಶೀದ್ ಅವರ ಯಶೋಗಾಥೆ

(ನ್ಯೂಸ್ ಕಡಬ) newskadaba.com ಕೇರಳ, ಅ.25. ಯುಪಿಎಸ್ ಸಿಯಲ್ಲಿ ಮೊದಲ ಪ್ರಯತ್ನದಲ್ಲೇ ಪರೀಕ್ಷೆಯಲ್ಲಿ ಟಾಪರ್‌ ಆಗಿ ಪಾಸ್‌ ಆದ ಫಾಬಿ ರಶೀದ್ ಅವರ ಯಶೋಗಾಥೆ ಇಲ್ಲಿದೆ. ಫಾಬಿ ರಶೀದ್ ಕೇರಳದ ಅಲಪ್ಪುಳದ ನಿವಾಸಿಯಾಗಿದ್ದು, 1999ರ ಜೂನ್ 23ರಂದು ಜನಿಸಿದ್ದಾರೆ. ಅವರು 10 ನೇ ಮತ್ತು 12 ನೇ ತರಗತಿ ಪರೀಕ್ಷೆಗಳಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಅವರ ಪೋಷಕರಿಬ್ಬರೂ ವೈದ್ಯರು. ಫಾಬಿಯ ತಾಯಿ ಮಕ್ಕಳ ತಜ್ಞೆ, ಇತ್ತೀಚೆಗಷ್ಟೇ ಸರ್ಕಾರಿ ಕೆಲಸದಿಂದ ನಿವೃತ್ತಿಯಾಗಿದ್ದಾರೆ. ಫಾಬಿಯ ತಂದೆ ಆಯುರ್ವೇದ ತಜ್ಞರಾಗಿದ್ದು, ಅವರೂ ಸರ್ಕಾರಿ

UPSC ಪರೀಕ್ಷೆಯಲ್ಲಿ 71ನೇ ರ್‍ಯಾಂಕ್‌ ಗಳಿಸಿದ ಫಾಬಿ ರಶೀದ್ ಅವರ ಯಶೋಗಾಥೆ Read More »

ರಾಷ್ಟ್ರೀಯ ನ್ಯೂಸ್

ಒಡಿಶಾ ಕರಾವಳಿಗೆ ಅಪ್ಪಳಿಸಿದ ಡಾನಾ ಚಂಡಮಾರುತ

(ನ್ಯೂಸ್ ಕಡಬ) newskadaba.com ಕೊಲ್ಕತ್ತಾ, ಅ.25. ಡಾನಾ ಚಂಡಮಾರುತವು ಒಡಿಶಾ ಕರಾವಳಿಗೆ ಅಪ್ಪಳಿಸಿದ್ದು, ಇದರಿಂದಾಗಿ ಹಲವಾರು ಪ್ರದೇಶಗಳಲ್ಲಿ ಭಾರೀ ಮಳೆ ಮತ್ತು ಬಲವಾದ ಗಾಳಿ ಬೀಸುತ್ತಿದೆ. ಚಂಡಮಾರುತ ತೀವ್ರ ಸ್ವರೂಪ ಪಡೆದಿದ್ದು ಒಡಿಶಾ, ಬಂಗಾಳದ ತೀರ ಪ್ರದೇಶಗಳಲ್ಲಿ ಬಿರುಗಾಳಿಯೊಂದಿಗೆ ಭಾರೀ ಮಳೆಯಾಗುತ್ತಿದೆ. ಗಂಟೆಗೆ 120 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು ಉತ್ತರ ವಾಯುವ್ಯ ದಿಕ್ಕಿನತ್ತ ಚಲಿಸುತ್ತಿದೆ. ಜನಜೀವನ ತತ್ತರಿಸಿದೆ. ವಿಮಾನಯಾನ, ರೈಲ್ವೇ ಸಂಚಾರವನ್ನು ರದ್ದುಗೊಳಿಸಲಾಗಿದ್ದು ಮುಂಜಾಗ್ರತಾ ಕ್ರಮವಾಗಿ 10ಲಕ್ಷ ಜನರನ್ನು ಸ್ಥಳಾಂತರಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.  

ಒಡಿಶಾ ಕರಾವಳಿಗೆ ಅಪ್ಪಳಿಸಿದ ಡಾನಾ ಚಂಡಮಾರುತ Read More »

ರಾಷ್ಟ್ರೀಯ ನ್ಯೂಸ್

ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ಸಂಜೀವ್ ಖನ್ನಾ ನೇಮಕ

(ನ್ಯೂಸ್ ಕಡಬ) newskadaba.com ನವದೆಹಲಿ, ಅ.25. ಸಂಜೀವ್ ಖನ್ನಾ ಅವರು ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿಯಾಗಿ ನವೆಂಬರ್ 11ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹಾಲಿ ಸಿಜೆಐ ಚಂದ್ರಚೂಡ್ ರವರು ನವೆಂಬರ್ 10ರಂದು ನಿವೃತ್ತರಾಗಲಿದ್ದು, ಡಿ ವೈ ಚಂದ್ರಚೂಡ್‌ ಅವರು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಸಂಜೀವ್‌ ಖನ್ನಾ ಅವರ ಹೆಸರನ್ನು ಶಿಫಾರಸು ಮಾಡಿದ್ದರು. 2005ರಲ್ಲಿ ದೆಹಲಿ ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ನ್ಯಾ. ಸಂಜೀವ್‌ ಖನ್ನಾ ಅವರನ್ನು ಒಂದು ವರ್ಷದ ಬಳಿಕ ಖಾಯಂ ನ್ಯಾಯಮೂರ್ತಿಯಾಗಿ ನೇಮಿಸಲಾಯಿತು.

ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ಸಂಜೀವ್ ಖನ್ನಾ ನೇಮಕ Read More »

ರಾಷ್ಟ್ರೀಯ ನ್ಯೂಸ್
Scroll to Top