ರಾಷ್ಟ್ರೀಯ ನ್ಯೂಸ್

ದೆಹಲಿ: 10 & 12ನೇ ತರಗತಿ ವಿದ್ಯಾರ್ಥಿಗಳಿಗೆ ತರಗತಿ ಸ್ಥಗಿತ; ಸುಪ್ರೀಂ ಸೂಚನೆ

(ನ್ಯೂಸ್ ಕಡಬ) newskadaba.com  ನ. 19.ದೆಹಲಿ: ದೆಹಲಿಯಲ್ಲಿ ಗಾಳಿಯ ಗುಣಮಟ್ಟ ತೀವ್ರಇಳಿಕೆಯಾಗಿದ್ದು, ಈ ಕುರಿತಾಗಿ  ಸರ್ಕಾರವು ಈಗಾಗಲೇ 10 ಮತ್ತು 12 ನೇ ತರಗತಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಿಲ್ಲಿಸಿದ್ದು, ಹೀಗಾಗಿ 10 ಮತ್ತು 12 ನೇ ತರಗತಿ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಿಲ್ಲಿಸಲು ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಎನ್‌ಸಿಆರ್ ಪ್ರದೇಶದಲ್ಲಿ ವಾಯುಮಾಲಿನ್ಯವನ್ನು ತಡೆಯಲು ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಅರ್ಜಿಯನ್ನು ನ್ಯಾಯಮೂರ್ತಿ ಅಭಯ್ ಎಸ್ ಓಕಾ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ […]

ದೆಹಲಿ: 10 & 12ನೇ ತರಗತಿ ವಿದ್ಯಾರ್ಥಿಗಳಿಗೆ ತರಗತಿ ಸ್ಥಗಿತ; ಸುಪ್ರೀಂ ಸೂಚನೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ದಿಲ್ಲಿಯಲ್ಲಿ ಮತ್ತಷ್ಟು ಕುಸಿದ ವಾಯುಗುಣಮಟ್ಟ: ನಿರ್ಮಾಣ ಕಾಮಗಾರಿ, ಟ್ರಕ್ ಗಳಿಗೆ ನಿರ್ಬಂಧ

(ನ್ಯೂಸ್ ಕಡಬ) newskadaba.com  ನ. 18.  ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ವಾಯು ಗುಣಮಟ್ಟ ಮತ್ತಷ್ಟು ಹದಗೆಟ್ಟಿದೆ. ಕಲುಷಿತ ಹೊಗೆಯು ಸೋಮವಾರ ದಟ್ಟವಾಗಿ ಆವರಿಸಿದ್ದು, ಗಾಳಿಯ ಗುಣಮಟ್ಟ ಕನಿಷ್ಠ ಮಟ್ಟ ಎಂದರೆ ಎಕ್ಯೂಐ ಸೂಚ್ಯಂಕ 481ಕ್ಕೆ ಕುಸಿದಿದೆ. ಗಾಳಿ ಗುಣಮಟ್ಟ ಹದಗೆಡುತ್ತಿರುವ ಹಿನ್ನೆಲೆ ಪರಿಸ್ಥಿತಿಯನ್ನು ಹತೋಟಿಗೆ ತರಲು ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್(GRAP) ಹಂತ IVರ ಅಡಿಯಲ್ಲಿ ಅಡಿಯಲ್ಲಿ ಕಠಿಣವಾದ ಮಾಲಿನ್ಯ ವಿರೋಧಿ ಕ್ರಮಗಳನ್ನು ಏರ್ ಕ್ವಾಲಿಟಿ ಮ್ಯಾನೇಜ್ಮೆಂಟ್(CAQM) ಆಯೋಗವು ತೆಗೆದುಕೊಂಡಿದೆ. ದಿಲ್ಲಿಗೆ ಅಗತ್ಯ ಸರಕುಗಳನ್ನು ಸಾಗಿಸುವ ಟ್ರಕ್

ದಿಲ್ಲಿಯಲ್ಲಿ ಮತ್ತಷ್ಟು ಕುಸಿದ ವಾಯುಗುಣಮಟ್ಟ: ನಿರ್ಮಾಣ ಕಾಮಗಾರಿ, ಟ್ರಕ್ ಗಳಿಗೆ ನಿರ್ಬಂಧ Read More »

ರಾಷ್ಟ್ರೀಯ ನ್ಯೂಸ್

ಕೇರಳ: ಆ್ಯಂಬುಲೆನ್ಸ್‌ ಸಂಚಾರಕ್ಕೆ ಅಡ್ಡಿಪಡಿಸಿದ ಚಾಲಕನಿಗೆ 2.5 ಲಕ್ಷ ರೂ. ದಂಡ

(ನ್ಯೂಸ್ ಕಡಬ) newskadaba.com ತಿರುವನಂತಪುರ, ನ. 18. ಕೇರಳದ ಚಲಕುಡಿಯಲ್ಲಿ ಕಾರು ಚಾಲಕನೊಬ್ಬ ಆ್ಯಂಬುಲೆನ್ಸ್‌ಗೆ ಮುಂದೆ ಹೋಗಲು ಅಡ್ಡಿಪಡಿಸಿದ ಹಿನ್ನೆಲೆ ಆತನ ಲೈಸೆನ್ಸ್‌ ರದ್ದು ಪಡಿಸಿ 2.5 ಲಕ್ಷ ರೂ. ದಂಡವಿಧಿಸಿದ್ದಾರೆ. ಆ್ಯಂಬುಲೆನ್ಸ್‌ನಲ್ಲಿ ರೋಗಿಯೊಬ್ಬರನ್ನು ಆಸ್ಪತ್ರೆಗೆ ಸಾಗಿಸುವಾಗ ರಸ್ತೆಯಲ್ಲಿ ಕಾರಿನ ಚಾಲಕ ಮುಂದೆ ಹೋಗಲು ಬಿಡದೆ ಅಡ್ಡ ಹಾಕಿದ್ದಾನಂತೆ. ಇದನ್ನು ಆ್ಯಂಬುಲೆನ್ಸ್‌ನಲ್ಲಿದ್ದ ವ್ಯಕ್ತಿಯೊಬ್ಬರು ವಿಡಿಯೊ ಮಾಡಿದ್ದಾರೆ. ಕಾರಿನಲ್ಲಿರುವವನು ಎರಡು ನಿಮಿಷಗಳಿಗೂ ಹೆಚ್ಚು ಕಾಲ ಆ್ಯಂಬುಲೆನ್ಸ್‌ಗೆ ಮುಂದೆ ಹೋಗಲು ಬಿಡದೆ ಅಡ್ಡಹಾಕಿದ್ದಾನಂತೆ. ಆ್ಯಂಬುಲೆನ್ಸ್‌ ಚಾಲಕನ ಪದೇ ಪದೇ ಹಾರ್ನ್ ಮತ್ತು

ಕೇರಳ: ಆ್ಯಂಬುಲೆನ್ಸ್‌ ಸಂಚಾರಕ್ಕೆ ಅಡ್ಡಿಪಡಿಸಿದ ಚಾಲಕನಿಗೆ 2.5 ಲಕ್ಷ ರೂ. ದಂಡ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

”ಭಾರತ್ ಗ್ಲೋಬಲ್ ಕಲ್ಚರಲ್ ಎಕ್ಸ್ಪೊ” ಲೋಗೋ ಅನಾವರಣ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 18. ದೇಶ ವಿದೇಶಗಳ ಸಂಸ್ಕೃತಿಯನ್ನು ಪ್ರತಿನಿಧಿಸುವ ’ಭಾರತ್ ಗ್ಲೋಬಲ್ ಕಲ್ಚರಲ್ ಎಕ್ಸ್‌ಪೋ ’ದ ಲೋಗೋವನ್ನು ಸುಪ್ರೀಂ ಕೋರ್ಟ್ ಹಾಗೂ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿಗಳಾದ ಸಂತೋಷ ಹೆಗಡೆ ಅನಾವರಣ ಮಾಡಿದರು.ಮಿರಾಯ ಇವೆಂಟ್ಸ್ ಪ್ರೈವೇಟ್ ಲಿಮಿಟೆಡ್ ಇವರ ವತಿಯಿಂದ ಹಾಗು ಕರ್ನಾಟಕದ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಇವರ ಸಹಯೋಗದೊಂದಿಗೆ ’ಭಾರತ್ ಗ್ಲೋಬಲ್ ಕಲ್ಚರಲ್ ಎಕ್ಸ್ಪೋ ’ ಎನ್ನುವ ಶೀರ್ಷಿಕೆಯನ್ನು ಹೊಂದಿರುವ ವಿನೂತನ ಕಾರ್ಯಕ್ರಮ ೨೦೨೫ರ ಏಪ್ರಿಲ್ ೯ ರಿಂದ ೧೪ರವರೆಗೆ ಬೆಂಗಳೂರಿನ ಅರಮನೆ

”ಭಾರತ್ ಗ್ಲೋಬಲ್ ಕಲ್ಚರಲ್ ಎಕ್ಸ್ಪೊ” ಲೋಗೋ ಅನಾವರಣ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಪ್ರಧಾನಿ ಮೋದಿಗೆ ನೈಜೀರಿಯಾದ ಎರಡನೇ ಅತ್ಯುನ್ನತ ನಾಗರೀಕ ಗೌರವ

(ನ್ಯೂಸ್ ಕಡಬ) newskadaba.com ನೈಜೀರಿಯಾ , ನ. 18. ಪ್ರಧಾನಿ ನರೇಂದ್ರ ಮೋದಿಯವರು ನೈಜೀರಿಯಾ ಪ್ರವಾಸದಲ್ಲಿದ್ದು, ಇದೀಗ ಅಲ್ಲಿನ ಸರ್ಕಾರ ತನ್ನ ದೇಶದ 2ನೇ ಅತ್ಯುತ್ತಮ ನಾಗರಿಕ ಪ್ರಶಸ್ತಿಯಾದ ‘ದಿ ಗ್ರಾಂಡ್‌ ಕಮಾಂಡರ್‌ ಆಫ್‌ ದಿ ಆರ್ಡರ್ ಆಫ್‌ ದಿ ನೈಗರ್‌’ ಬ ಪ್ರಶಸ್ತಿ ನೀಡಿ ಗೌರವಿಸಿದೆ. 3 ದೇಶಗಳ ಪ್ರವಾಸ ಕೈಗೊಂಡಿರುವ ಮೋದಿ ಮೊದಲ ಭಾಗವಾಗಿ ನೈಜಿರಿಯಾ ಪ್ರಧಾನಿ ಬೋಲಾ ಅಹ್ಮದ್ ಟಿನುಬು ಆಹ್ವಾನದ ಮೇರೆಗೆ ನೈಜೀರಿಯಾಗೆ ಬಂದಿದ್ದಾರೆ. 17 ವರ್ಷದ ಬಳಿಕ ಭಾರತದ ಪ್ರಧಾನಿಯೊಬ್ಬರು

ಪ್ರಧಾನಿ ಮೋದಿಗೆ ನೈಜೀರಿಯಾದ ಎರಡನೇ ಅತ್ಯುನ್ನತ ನಾಗರೀಕ ಗೌರವ Read More »

ರಾಷ್ಟ್ರೀಯ ನ್ಯೂಸ್

ಹಬ್ಬಗಳಲ್ಲಿ ಆನೆಗಳ ಬಳಕೆಗೆ ಕಡಿವಾಣ ಹಾಕಬೇಕು ಕೇರಳ ಹೈಕೋರ್ಟ್ ಮಹತ್ವದ ನಿರ್ಧಾರ

(ನ್ಯೂಸ್ ಕಡಬ) newskadaba.com ನ. 16. ಕೇರಳ: ಸಮಾರಂಭ ಹಬ್ಬಗಳಲ್ಲಿ ಆನೆಗಳ ಬಳಕೆಗೆ ಕಡಿವಾಣ ಹಾಕಬೇಕು ಎಂದು ಕೇರಳದ ಹೈಕೋರ್ಟ್ ಸೂಚನೆ ನೀಡಿದ್ದು, ಹಬ್ಬಗಳಲ್ಲಿ ಆನೆಗಳನ್ನು ಬಳಸುವುದನ್ನುಯಾವುದೇ ಧರ್ಮವು ಕಡ್ಡಾಯಗೊಳಿಸುವುದಿಲ್ಲ ಎಂದು ಹೇಳಿದೆ. ಉತ್ಸವಗಳಲ್ಲಿ ಮೆರವಣಿಗೆ ನಡೆಸುವ ಆನೆಗಳ ಯೋಗಕ್ಷೇಮದ ಬಗ್ಗೆ ಕಳವಳ ವ್ಯಕ್ತಪಡಿಸಿದ ಕೇರಳ ಹೈಕೋರ್ಟ್, ಆನೆಗಳ ಮೆರವಣಿಗೆಗೆ ಸಮಯದ ಮಿತಿ ಸೇರಿದಂತೆ ಮಾರ್ಗಸೂಚಿಗಳನ್ನು ಹೊರಡಿಸಿದೆ. ಪ್ರಾಣಿಗಳ ಹಕ್ಕುಗಳ ರಕ್ಷಣೆಯಲ್ಲಿ ಸರ್ಕಾರದ ನಿಷ್ಕ್ರಿಯತೆಗೆ ಸಂಬಂಧಿಸಿದ ಸ್ವಯಂ ಪ್ರೇರಿತವಾಗಿ ಕೈಗೆತ್ತಿಕೊಂಡ ಅರ್ಜಿ ವಿಚಾರಣೆಯ ಸಮಯದಲ್ಲಿ ನ್ಯಾಯಮೂರ್ತಿಗಳಾದ ಎ

ಹಬ್ಬಗಳಲ್ಲಿ ಆನೆಗಳ ಬಳಕೆಗೆ ಕಡಿವಾಣ ಹಾಕಬೇಕು ಕೇರಳ ಹೈಕೋರ್ಟ್ ಮಹತ್ವದ ನಿರ್ಧಾರ Read More »

ರಾಷ್ಟ್ರೀಯ ನ್ಯೂಸ್

ಮಸ್ಕ್‌ ಒಡೆತನದ ಸ್ಟಾರ್‌ಲಿಂಕ್‌ ಗೆ ಅನುಮತಿ ನೀಡುವ ಮುನ್ನ ನಿರ್ಧಾರ ಪರಿಶೀಲಿಸುವಂತೆ ಕೇಂದ್ರಕ್ಕೆ ಜಿಯೋ ಪತ್ರ

(ನ್ಯೂಸ್ ಕಡಬ) newskadaba.com ನ. 16. ವಿಶ್ವದ ನಂಬರ್‌ ಒನ್‌ ಶ್ರೀಮಂತ ಎಲಾನ್‌ ಮಸ್ಕ್‌ ಒಡೆತನದ ಸ್ಟಾರ್‌ಲಿಂಕ್‌ಗೆ ಅನುಮತಿ ನೀಡುವ ಮುನ್ನ ಸಂಭಾವ್ಯ ವ್ಯಾಪ್ತಿಯನ್ನು ಪರಿಶೀಲಿಸುವಂತೆ ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಜಿಯೋ ಸರ್ಕಾರವನ್ನು ಕೇಳಿಕೊಂಡಿದೆ. ಸ್ಟಾರ್‌ಲಿಂಕ್‌ಗೆ ಅನುಮತಿ ನೀಡಿದರೆ ದೇಶೀಯ ಕಂಪನಿಗಳಿಗೆ ಸಮಸ್ಯೆಯಾಗುವ ಸಾಧ್ಯತೆ ಇರುವ ಕಾರಣ ನಿರ್ಧಾರವನ್ನು ಪರಿಶೀಲಿಸುವಂತೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರಕ್ಕೆ ಜಿಯೋ ಪತ್ರ ಬರೆದಿದೆ.    

ಮಸ್ಕ್‌ ಒಡೆತನದ ಸ್ಟಾರ್‌ಲಿಂಕ್‌ ಗೆ ಅನುಮತಿ ನೀಡುವ ಮುನ್ನ ನಿರ್ಧಾರ ಪರಿಶೀಲಿಸುವಂತೆ ಕೇಂದ್ರಕ್ಕೆ ಜಿಯೋ ಪತ್ರ Read More »

ರಾಷ್ಟ್ರೀಯ ನ್ಯೂಸ್

ರಾಜ್ಯದ ಹಿರಿಯ ನಾಗರಿಕರಿಗೆ ಬಸ್‌‍ ಟಿಕೆಟ್‌ ದರದಲ್ಲಿ ಶೇ.25 ರಷ್ಟು ರಿಯಾಯಿತಿ ಘೋಷಣೆ

(ನ್ಯೂಸ್ ಕಡಬ) newskadaba.com ನ. 16. ಎಲ್ಲಾ ರಾಜ್ಯದ ಹಿರಿಯ ನಾಗರಿಕರಿಗೆ ಬಸ್‌‍ ಟಿಕೆಟ್‌ ದರದಲ್ಲಿ ಶೇ.25 ರಷ್ಟು ರಿಯಾಯಿತಿ ನೀಡುವುದಾಗಿ ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ ಘೋಷಿಸಿದೆ. 60 ವರ್ಷ ಮೇಲ್ಪಟ್ಟವರು ತಮ ಪ್ರಯಾಣದ ವೇಳೆ ವಯಸ್ಸಿನ ಪುರಾವೆಯಾಗಿ ಆಧಾರ್‌ಕಾರ್ಡ್‌, ಹಿರಿಯ ನಾಗರಿಕರ ಗುರುತಿನ ಚೀಟಿ, ಪಾನ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ, ಪಾಸ್‌‍ಪೋರ್ಟ್‌ ಅಥವಾ ಪಡಿತರ ಚೀಟಿಯನ್ನು ಭೌತಿಕವಾಗಿ ಅಥವಾ ಡಿಜಿಟಲ್‌ ರೂಪದಲ್ಲಿ ತೋರಿಸಿ ಶೇ.25 ರಷ್ಟು ರಿಯಾಯಿತಿ ಪಡೆಯಬಹುದು ಎಂದು ಅಧಿಕಾರಿಗಳು

ರಾಜ್ಯದ ಹಿರಿಯ ನಾಗರಿಕರಿಗೆ ಬಸ್‌‍ ಟಿಕೆಟ್‌ ದರದಲ್ಲಿ ಶೇ.25 ರಷ್ಟು ರಿಯಾಯಿತಿ ಘೋಷಣೆ Read More »

ರಾಷ್ಟ್ರೀಯ ನ್ಯೂಸ್

ಮಣಿಪುರ: ಅಸ್ಸಾಂ ಗಡಿಯಲ್ಲಿ 3 ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ನ. 16. ಇಂಫಾಲ: ಮಣಿಪುರದ ಜಿರಿಬಾಮ್ ಜಿಲ್ಲೆಯಿಂದ ಶಂಕಿತ ಕುಕಿ ಬಂಡುಕೋರರು ಒಂದೇ ಕುಟುಂಬದ 6 ಮಂದಿಯನ್ನು ಅಪಹರಿಸಿದ 3 ದಿನಗಳ ಬಳಿಕ ಶಿಶು ಸೇರಿದಂತೆ ಇಬ್ಬರು ಮಕ್ಕಳು ಮತ್ತು ಮಹಿಳೆಯ ಕೊಳೆತ ಶವ ಮಣಿಪುರ-ಅಸ್ಸಾಂ ಗಡಿಯ ಬಳಿ ನ.15 ರಂದು ಪತ್ತೆಯಾಗಿದೆ. ಸದ್ಯ ಜಿರಿಬಾಮ್ ಜಿಲ್ಲೆಯಲ್ಲಿ ತೀವ್ರ ನಿಗಾ ಇರಿಸಲಾಗಿದೆ. ನ. 11ರಂದು ಮೂವರು ಮಹಿಳೆಯರು ಸಹಿತ 6 ಮಂದಿಯನ್ನು ಅಪಹರಿಸಲಾಗಿತ್ತು. ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ.ಅಪಹರಣ ನಡೆದ ಗ್ರಾಮದಿಂದ ಸುಮಾರು

ಮಣಿಪುರ: ಅಸ್ಸಾಂ ಗಡಿಯಲ್ಲಿ 3 ಮೃತದೇಹ ಪತ್ತೆ Read More »

ರಾಷ್ಟ್ರೀಯ ನ್ಯೂಸ್

ಉತ್ತರಪ್ರದೇಶ: ಆಸ್ಪತ್ರೆಯಲ್ಲಿ ಅಗ್ನಿ ಅವಘಡ; 10 ನವಜಾತ ಶಿಶುಗಳ ಸಜೀವ ದಹನ

(ನ್ಯೂಸ್ ಕಡಬ) newskadaba.com ನ. 16. ಉತ್ತರ ಪ್ರದೇಶ: ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ಸ್ಥಳೀಯ ವೈದ್ಯಕೀಯ ಕಾಲೇಜಿನ ಮಕ್ಕಳ ವಾರ್ಡ್‌ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ದುರ್ಘಟನೆಯಲ್ಲಿ 10 ನವಜಾತ ಶಿಶುಗಳು ಸಜೀವ ದಹನವಾಗಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಆಸ್ಪತ್ರೆಯಲ್ಲಿ ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಬೆಂಕಿಯು ಶಿಶು ತೀವ್ರ ನಿಗಾ ಘಟಕದ ಸುತ್ತಲೂ ಆವರಿಸಿದೆ. ಬೆಂಕಿ ಹೊತ್ತಿಕೊಂಡಂತೆಯೇ ಕಂಗೆಟ್ಟ ಮಕ್ಕಳ ಪೋಷಕರು ಜೋರಾಗಿ ಕಿರುಚಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಕೂಡ ಆಘಾತಗೊಂಡಿದ್ದು, ವೈದ್ಯರು

ಉತ್ತರಪ್ರದೇಶ: ಆಸ್ಪತ್ರೆಯಲ್ಲಿ ಅಗ್ನಿ ಅವಘಡ; 10 ನವಜಾತ ಶಿಶುಗಳ ಸಜೀವ ದಹನ Read More »

ರಾಷ್ಟ್ರೀಯ ನ್ಯೂಸ್
Scroll to Top