ರಾಷ್ಟ್ರೀಯ ನ್ಯೂಸ್

ಇಚಿಲಂಪಾಡಿ ಚರ್ಚ್ ಸೇರಿದಂತೆ 30ಕ್ಕೂ ಅಧಿಕ ಕಳ್ಳತನ ಪ್ರಕರಣ ಬೇಧಿಸಿದ ಪೊಲೀಸರು ► ಆರೋಪಿಗಳಿಬ್ಬರ ಸೆರೆ – ಪ್ರಮುಖ ಆರೋಪಿ ಪರಾರಿ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜು.29. ಕಳೆದ ಕೆಲವು ದಿನಗಳ ಹಿಂದೆ ಪುತ್ತೂರು ತಾಲೂಕಿನ ಇಚಿಲಂಪಾಡಿ ಸೈಂಟ್ ಜಾರ್ಜ್ ಸಿರಿಯನ್ ಜಾಕೋಬೈಟ್ ಚರ್ಚಿನ ಕಳ್ಳತನ ಪ್ರಕರಣವನ್ನು ಬೇಧಿಸಿರುವ ಬೆಳ್ತಂಗಡಿ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ ಘಟನೆ ಶುಕ್ರವಾರದಂದು ನಡೆದಿದೆ. ಆರೋಪಿಗಳನ್ನು ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಬಾನಸಂದ್ರ ಪಾಳ್ಯ ನಿವಾಸಿ ಉಮೇಶ್ ಬಿ.ಎನ್(30) ಮತ್ತು ಬೆಂಗಳೂರಿನ ಕುಂಬಳಗೋಡು ಗೇರುಪಾಳ್ಯ ನಿವಾಸಿ ವೆಂಕಟೇಶ್(38) ಎಂದು ಗುರುತಿಸಲಾಗಿದೆ. ಪ್ರಮುಖ ಆರೋಪಿ ಬೆಂಗಳೂರು ನಿವಾಸಿ ನವೀನ್ ಪರಾರಿಯಾಗಿದ್ದಾನೆ. ಕಳ್ಳರಿಂದ ಬುಲೆಟ್, ಕೆಟಿಎಂ ಡ್ಯೂಕ್, […]

ಇಚಿಲಂಪಾಡಿ ಚರ್ಚ್ ಸೇರಿದಂತೆ 30ಕ್ಕೂ ಅಧಿಕ ಕಳ್ಳತನ ಪ್ರಕರಣ ಬೇಧಿಸಿದ ಪೊಲೀಸರು ► ಆರೋಪಿಗಳಿಬ್ಬರ ಸೆರೆ – ಪ್ರಮುಖ ಆರೋಪಿ ಪರಾರಿ Read More »

ರಾಷ್ಟ್ರೀಯ ನ್ಯೂಸ್

ಎಲ್ಲಾ ಸವಾಲನ್ನು ಎದುರಿಸಲು ಭಾರತೀಯ ಸೇನೆ ಸಿದ್ಧ: ಅರುಣ್ ಜೇಟ್ಲಿ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಜು.28. ನೆರೆಯ ದೇಶಗಳಿಂದ ತೊಂದರೆ ಎದುರಾದರೆ ಯಾವುದೇ ಸಂದರ್ಭದಲ್ಲಿ ಎದುರಾಗುವ ಸವಾಲನ್ನು ಎದುರಿಸಲು ಭಾರತೀಯ ಸೇನೆ ಸನ್ನದ್ಧವಾಗಿದೆ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಜೇಟ್ಲಿ, ಭಾರತದ ಸೇನೆಗೆ ಶಸ್ತ್ರಾಸ್ತ್ರಗಳ ಕೊರತೆಯಿದೆ ಎಂದು ನಿಯಂತ್ರಕರು ಮತ್ತು ಮಹಾಲೆಕ್ಕಪಾಲರು ವರದಿ ನೀಡಿರುವ ಬಗ್ಗೆ ಉಲ್ಲೇಖಿಸಿ, ಯಾವುದೇ ಆಕಸ್ಮಿಕ ಘಟನೆಯನ್ನೂ ಎದುರಿಸಲು ಸೇನಾಪಡೆಗಳು ಸನ್ನದ್ಧವಾಗಿವೆ. ಶಸ್ತ್ರಾಸ್ತ್ರಗಳ ಕೊರತೆ ಕಂಡುಬಂದರೆ ಕೂಡಲೇ ಅದನ್ನು ಸರಿದೂಗಿಸಲಾಗುವುದು ಎಂದರು. ದೇಶದ ಭದ್ರತೆಗೆ

ಎಲ್ಲಾ ಸವಾಲನ್ನು ಎದುರಿಸಲು ಭಾರತೀಯ ಸೇನೆ ಸಿದ್ಧ: ಅರುಣ್ ಜೇಟ್ಲಿ Read More »

ರಾಷ್ಟ್ರೀಯ ನ್ಯೂಸ್

ಇನ್ಮುಂದೆ ವರದಕ್ಷಿಣೆ ದೂರು ನೀಡಿದಾಕ್ಷಣ ಯಾರನ್ನೂ ಬಂಧಿಸುವಂತಿಲ್ಲ ► ಕಾರಣವೇನೆಂದು ಗೊತ್ತೇ…?

(ನ್ಯೂಸ್ ಕಡಬ) newskadaba.com ನವದೆಹಲಿ, ಜು.28. 1983ರಲ್ಲಿ ರಚನೆಯಾದ ವರದಕ್ಷಿಣೆ ವಿರೋಧಿ ಕಾನೂನನ್ನು ಹಲವು ಮಹಿಳೆಯರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ಹಲವು ವರ್ಷಗಳಿಂದ ದೂರುಗಳು ದಾಖಲಾಗಿರೋ ಹಿನ್ನೆಲೆಯಲ್ಲಿ ವರದಕ್ಷಿಣೆ ಪ್ರಕರಣಗಳಲ್ಲಿ ಪ್ರಾಥಮಿಕ ತನಿಖೆ ನಡೆಸದೆ ಇನ್ಮುಂದೆ ಯಾರನ್ನೂ ಶೀಘ್ರವೇ ಬಂಧಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ. ವಿವಾಹಿತ ಮಹಿಳೆಗೆ ಪತಿ ಅಥವಾ ಆತನ ಕುಟುಂಬದಿಂದಾಗುವ ಹಿಂಸೆಯನ್ನು ತಡೆಯುವ ಸಲುವಾಗಿ ವರದಕ್ಷಿಣೆ ವಿರೋಧಿ ಕಾನೂನನ್ನು ಜಾರಿಗೆ ತರಲಾಗಿದ್ದು, ಕಾನೂನಿನ ದುರ್ಬಳಕೆ ಆಗುತ್ತಿರುವುದರಿಂದ ದೇಶದಾದ್ಯಂತ ಪ್ರತಿ ಜಿಲ್ಲೆಯಲ್ಲೂ ಕುಟುಂಬ ಕಲ್ಯಾಣ ಸಮಿತಿಗಳನ್ನ ಸ್ಥಾಪಿಸಬೇಕು ಎಂದು ನ್ಯಾ. ಎ.ಕೆ

ಇನ್ಮುಂದೆ ವರದಕ್ಷಿಣೆ ದೂರು ನೀಡಿದಾಕ್ಷಣ ಯಾರನ್ನೂ ಬಂಧಿಸುವಂತಿಲ್ಲ ► ಕಾರಣವೇನೆಂದು ಗೊತ್ತೇ…? Read More »

ರಾಷ್ಟ್ರೀಯ ನ್ಯೂಸ್

ಆಧಾರ್ ಕಾರ್ಡಿನ ವೆಬ್‍ಸೈಟಿಗೆ ಕನ್ನ ► ಕೋಟ್ಯಂತರ ಜನರ ಗೌಪ್ಯ ಮಾಹಿತಿ ಸೋರಿಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.27. ಆಧಾರ್ ಕಾರ್ಡ್ ಬಗ್ಗೆ ಕೆಲವು ದಿನಗಳಿಂದ ಸುಪ್ರೀಂಕೋರ್ಟ್ ನಲ್ಲಿ ವಾದ-ಪ್ರತಿವಾದ ನಡೆಯುತ್ತಿರುವ ಬೆನ್ನಲ್ಲೇ, ಆಧಾರ್ ವೆಬ್‍ಸೈಟ್ uidai.gov.in ನ್ನು ಬೆಂಗಳೂರಿನ ಕಂಪೆನಿಯೊಂದು ಹ್ಯಾಕ್ ಮಾಡಿದೆ ಎನ್ನುವ ಆಘಾತಕಾರಿ ವಿಷಯ ಗುರುವಾರ ಸಂಜೆ ತಿಳಿದುಬಂದಿದೆ. ಇ-ಕೆವೈಸಿ ಆ್ಯಂಡ್ರಾಯ್ಡ್ ಅಪ್ಲಿಕೇಶನ್ ಮೂಲಕ ಬೆಂಗಳೂರಿನ ಕ್ವರ್ಥ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಎನ್ನುವ ಕಂಪನಿಯು ಆಧಾರ್‍ನ ಅಧಿಕೃತ ವೆಬ್‍ಸೈಟ್ uidai.gov.in ನ್ನು ಹ್ಯಾಕ್ ಮಾಡಿ ಗೌಪ್ಯ ಮಾಹಿತಿಯನ್ನ ಕಲೆಹಾಕಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಆಧಾರ್

ಆಧಾರ್ ಕಾರ್ಡಿನ ವೆಬ್‍ಸೈಟಿಗೆ ಕನ್ನ ► ಕೋಟ್ಯಂತರ ಜನರ ಗೌಪ್ಯ ಮಾಹಿತಿ ಸೋರಿಕೆ Read More »

ರಾಷ್ಟ್ರೀಯ ನ್ಯೂಸ್

ಭಾರತದ 14ನೇ ರಾಷ್ಟ್ರಪತಿಯಾಗಿ ಇಂದು ಕೋವಿಂದ್ ಪ್ರಮಾಣ ವಚನ

(ನ್ಯೂಸ್ ಕಡಬ) newskadaba.com ನವದೆಹಲಿ, ಜು.25. ಭಾರತದ 14 ನೇ ರಾಷ್ಟ್ರಪತಿಯಾಗಿ ಎನ್ ಡಿಎಯ ರಾಮನಾಥ್ ಕೋವಿಂದ್ ಪಾರ್ಲಿಮೆಂಟಿನ ಸೆಂಟ್ರಲ್ ಹಾಲಿನಲ್ಲಿ ಮಂಗಳವಾರದಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರಿಗೆ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಜೆ.ಎಸ್.  ಖೇಹರ್ ಪ್ರಮಾಣ ವಚನ ಬೋಧಿಸಲಿದ್ದಾರೆ. ಜುಲೈ 17 ರಂದು ನಡೆದಿದ್ದ ರಾಷ್ಟ್ರಪತಿ ಚುನಾವಣೆಯಲ್ಲಿ ಯುಪಿಎ ಅಭ್ಯರ್ಥಿ ಮೀರಾ ಕುಮಾರ್ ಅವರನ್ನು ರಾಮನಾಥ್ ಕೋವಿಂದ್ ಸೋಲಿಸಿದ್ದು, ಭಾರತದ 14ನೇ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ,

ಭಾರತದ 14ನೇ ರಾಷ್ಟ್ರಪತಿಯಾಗಿ ಇಂದು ಕೋವಿಂದ್ ಪ್ರಮಾಣ ವಚನ Read More »

ರಾಷ್ಟ್ರೀಯ ನ್ಯೂಸ್

ನಿಮಗೆ ಬ್ಯಾಂಕಿನಲ್ಲಿ ಸಾಲವಿದ್ದು ಕಂತು ಬಾಕಿಯಾಗಿದೆಯೇ…? ► ಇನ್ನು ಮುಂದೆ ಬ್ಯಾಂಕಿನವರು ಸಾಲ ಮರುಪಾವತಿ ಮಾಡಲು ಒತ್ತಡ ಹೇರುವಂತಿಲ್ಲ.‌‌‌..

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಜು.24. ನೀವು ಬ್ಯಾಂಕಿನಿಂದ ಸಾಲ ತೆಗೆದುಕೊಂಡು ಮರುಪಾವತಿ ಮಾಡಲಾಗದೆ ಒದ್ದಾಡುತ್ತಿದ್ದೀರಾ..? ಬ್ಯಾಂಕಿನವರು ಸಾಲವನ್ನು ಮರುಪಾವತಿ ಮಾಡುವಂತೆ ನಿಮಗೆ ಒತ್ತಡ ಹೇರುತ್ತಿದ್ದಾರೆಯೇ…? ಇನ್ಮುಂದೆ ಇದೆಲ್ಲದಕ್ಕೂ ಬ್ರೇಕ್ ಬೀಳಲಿದೆ. ಬ್ಯಾಂಕ್‌ಗಳಿಂದ ಸಾಲ ಪಡೆದುಕೊಂಡು ತೀರಿಸಲಾಗದೇ ಒದ್ದಾಡುತ್ತಿರುವವರನ್ನು ದಿವಾಳಿ ಎಂದು ಘೋಷಿಸಲು ವಿಧಿವಿಧಾನವೊಂದನ್ನು ರೂಪಿಸುವ ನಿಟ್ಟಿನಲ್ಲಿ ಸರಕಾರವು ಹೊಸ ಕರಡನ್ನು ಸಿದ್ಧಲಡಿಸುತ್ತಿದೆ. ಇದು ಸಾಲಗಾರರು ಬ್ಯಾಂಕುಗಳ ಒತ್ತಡ ತಂತ್ರಗಳಿಗೆ ಸಿಲುಕಿ ನರಳುವುದರ ಬದಲು ತಮ್ಮ ಆರ್ಥಿಕ ಸಂಕಷ್ಟವನ್ನು ಬಗೆಹರಿಸಿ ಕೊಳ್ಳಲು ನೆರವಾಗಲಿದೆ. ಸುಸ್ತಿದಾರರು ವ್ಯವಸ್ಥಿತ ರೀತಿಯಲ್ಲಿ

ನಿಮಗೆ ಬ್ಯಾಂಕಿನಲ್ಲಿ ಸಾಲವಿದ್ದು ಕಂತು ಬಾಕಿಯಾಗಿದೆಯೇ…? ► ಇನ್ನು ಮುಂದೆ ಬ್ಯಾಂಕಿನವರು ಸಾಲ ಮರುಪಾವತಿ ಮಾಡಲು ಒತ್ತಡ ಹೇರುವಂತಿಲ್ಲ.‌‌‌.. Read More »

ರಾಷ್ಟ್ರೀಯ ನ್ಯೂಸ್

ಇನ್ನು ಪಾಸ್‌ಪೋರ್ಟ್ ಪಡೆಯುವುದು ಬಹಳ ಸುಲಭ ► ಇನ್ಮುಂದೆ ಜನನ ಪ್ರಮಾಣ ಪತ್ರ ಅಗತ್ಯವಿಲ್ಲ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಜು.24. ಇನ್ನುಮುಂದೆ ಪಾಸ್‌ಪೋರ್ಟ್ ಪಡೆಯಲು ಜನನ ಪ್ರಮಾಣಪತ್ರ ಅಗತ್ಯವಿಲ್ಲ. ಭಾರತೀಯ ಪ್ರಜೆಗಳಿಗೆಗಾಗಿ ಪಾಸ್‌ಪೋರ್ಟ್ ಅನ್ನು ಸರಳಗೊಳಿಸುವ ಪ್ರಕ್ರಿಯೆ ಆರಂಭಿಸಲಾಗದೆ. ಸಂಸತ್ತಿನಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಸರಕಾರ, ಜನ್ಮ ದಿನಾಂಕ ದಾಖಲೆಗಾಗಿ ಆಧಾರ್, ಪಾನ್ ಕಾರ್ಡ್‌ಗಳನ್ನು ಬಳಸಬಹುದು ಎಂದು ಹೇಳಿದೆ. 1980ರ ಪಾಸ್‌ಪೋರ್ಟ್ ನಿಯಮದ ಪ್ರಕಾರ, 26.01.1989ರಂದು ಹಾಗೂ ಬಳಿಕ ಜನಿಸಿದ ಪಾಸ್‌ಪೋರ್ಟ್ ಅರ್ಜಿದಾರರು ಕಡ್ಡಾಯವಾಗಿ ಜನನ ಪ್ರಮಾಣಪತ್ರ ಸಲ್ಲಿಸಬೇಕು. ಆದರೆ ಇನ್ನು ಮುಂದೆ ಪಾಸ್‌ಪೋರ್ಟ್ ಅರ್ಜಿದಾರರು ಮಾನ್ಯತೆ ಪಡೆದ

ಇನ್ನು ಪಾಸ್‌ಪೋರ್ಟ್ ಪಡೆಯುವುದು ಬಹಳ ಸುಲಭ ► ಇನ್ಮುಂದೆ ಜನನ ಪ್ರಮಾಣ ಪತ್ರ ಅಗತ್ಯವಿಲ್ಲ Read More »

ರಾಷ್ಟ್ರೀಯ ನ್ಯೂಸ್

ಬಾಹ್ಯಾಕಾಶ ವಿಜ್ಞಾನಿ ಉಡುಪಿ ರಾಮಚಂದ್ರ ರಾವ್ ವಿಧಿವಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.24. ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಮತ್ತು ಇಸ್ರೋದ ಮಾಜಿ ಮುಖ್ಯಸ್ಥ ಪದ್ಮವಿಭೂಷಣ ಉಡುಪಿ ರಾಮಚಂದ್ರ ರಾವ್​ (85) ಸೋಮವಾರದಂದು ಬೆಳಗ್ಗೆ ಬೆಂಗಳೂರಿನಲ್ಲಿ ವಿಧಿವಶರಾಗಿದರು. ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಅವರು ಮುಂಜಾನೆ 2.30ರ ಸುಮಾರಿಗೆ ಕೊನೆಯುಸಿರೆಳಿದಿದ್ದಾರೆ. ಭೌತಿಕ ಸಂಶೋಧನಾ ಪ್ರಯೋಗಾಲಯ ಆಡಳಿತ ಮಂಡಳಿ ಹಾಗೂ ತಿರುವನಂತಪುರದ ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಮಾಜಿ ಅಧ್ಯಕ್ಷರೂ ಆಗಿದ್ದ ಅವರು ನಿವೃತ್ತರಾದ ಬಳಿಕವೂ ಹಲವು ಮಹತ್ವದ ಯೋಜನೆಗಳ ಭಾಗವಾಗಿದ್ದರು. ಲಕ್ಷ್ಮೀನಾರಾಯಣ ರಾವ್ ಹಾಗೂ

ಬಾಹ್ಯಾಕಾಶ ವಿಜ್ಞಾನಿ ಉಡುಪಿ ರಾಮಚಂದ್ರ ರಾವ್ ವಿಧಿವಶ Read More »

ರಾಷ್ಟ್ರೀಯ ನ್ಯೂಸ್

ಸಾವು ಹೇಗೆಲ್ಲಾ ಬರುತ್ತದೆಯೆಂದು ಊಹಿಸಲೂ ಸಾಧ್ಯವಿಲ್ಲ…. ► ವಾಕಿಂಗ್ ಹೋಗುತ್ತಿದ್ದ ಮಹಿಳೆಯ ಮೇಲೆ ತೆಂಗಿನ ಮರ ಬಿದ್ದು ಮೃತ್ಯು

(ನ್ಯೂಸ್ ಕಡಬ) newskadaba.com ಮುಂಬೈ, ಜು.23. ಸಾವು ಹೇಗೆಲ್ಲಾ ಬರುತ್ತದೆ ಎಂದು ಊಹಿಸಲೂ ಸಾಧ್ಯವಿಲ್ಲ. ಅದಕ್ಕೆ ನಿದರ್ಶನವೆಂಬಂತೆ ಬೆಳಗ್ಗಿನ ಜಾವ ವಾಕಿಂಗ್ ಹೋಗುತ್ತಿದ್ದಾಗ ತೆಂಗಿನ ಮರವೊಂದು ಮೈಮೇಲೆ ಉರುಳಿ ಬಿದ್ದ ಪರಿಣಾಮವಾಗಿ ದೂರದರ್ಶನದ ಮಾಜಿ ವಾರ್ತಾ ನಿರೂಪಕಿಯೊಬ್ಬರು ಮೃತಪಟ್ಟ ಘಟನೆ ಮುಂಬೈನ ಚೆಂಬೂರ್‌ನಲ್ಲಿ ನಡೆದಿದೆ. ದೂರದರ್ಶನದ ಮಾಜಿ ವಾರ್ತಾ ನಿರೂಪಕಿ ಮತ್ತು ಯೋಗ ಶಿಕ್ಷಕಿ ಕಾಂಚನ್ ನಾಥ್(58) ಎಂಬವರೇ ತೆಂಗಿನ ಮರ ಬಿದ್ದು ಮೃತಪಟ್ಟ ದುರ್ದೈವಿ. ಗುರುವಾರ ಬೆಳಗ್ಗೆ ಕಾಂಚನ್ ನಾಥ್ ಯೋಗ ತರಗತಿ ಮುಗಿಸಿ ಮನೆಗೆ ಸಂತ

ಸಾವು ಹೇಗೆಲ್ಲಾ ಬರುತ್ತದೆಯೆಂದು ಊಹಿಸಲೂ ಸಾಧ್ಯವಿಲ್ಲ…. ► ವಾಕಿಂಗ್ ಹೋಗುತ್ತಿದ್ದ ಮಹಿಳೆಯ ಮೇಲೆ ತೆಂಗಿನ ಮರ ಬಿದ್ದು ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ನಿಷೇಧ ಆಗಲಿದೆಯಾ 2000 ರೂ. ನೋಟು…? ► ಬ್ಯಾಂಕ್‍ಗಳಿಗೆ 500 ರೂ. ನೋಟುಗಳು ಮಾತ್ರ ಪೂರೈಕೆ

(ನ್ಯೂಸ್ ಕಡಬ) newskadaba.com ಮುಂಬೈ, ಜು.21. ಕೇಂದ್ರ ಸರ್ಕಾರ ಮತ್ತೆ 2000 ರು. ಮುಖ ಬೆಲೆಯ ನೋಟುಗಳನ್ನು ರದ್ದು ಮಾಡಲಿದೆ ಎಂಬ ಊಹಾಪೋಹಗಳ ಬೆನ್ನಲ್ಲೇ, ಆರ್‌ಬಿಐ ಕೇವಲ 500 ರು. ಮುಖಬೆಲೆಯ ನೋಟುಗಳನ್ನು ಮಾತ್ರ ಬ್ಯಾಂಕ್‌ಗಳಿಗೆ ವಿತರಣೆ ಮಾಡುತ್ತಿದೆ ಎಂಬ ಮಾಹಿತಿ ಇದೀಗ ಬೆಳಕಿಗೆ ಬಂದಿದೆ. ಇತ್ತೀಚಿನ ದಿನಗಳಲ್ಲಿ 2000 ರೂ. ನೋಟುಗಳ ಅಭಾವವು ಬ್ಯಾಂಕ್ ನೌಕರರು ಮತ್ತು ಎಟಿಎಂ ನಿರ್ವಾಹಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕೆಲವು ವಾರಗಳಿಂದ 2000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ಆರ್‌ಬಿಐ ಇಳಿಮುಖಗೊಳಿಸಿದೆ.

ನಿಷೇಧ ಆಗಲಿದೆಯಾ 2000 ರೂ. ನೋಟು…? ► ಬ್ಯಾಂಕ್‍ಗಳಿಗೆ 500 ರೂ. ನೋಟುಗಳು ಮಾತ್ರ ಪೂರೈಕೆ Read More »

ರಾಷ್ಟ್ರೀಯ ನ್ಯೂಸ್
Scroll to Top