ರಾಷ್ಟ್ರೀಯ ನ್ಯೂಸ್

ಪ್ರಧಾನಿ ಮೋದಿಯ ವಿರುದ್ಧ ಧ್ವನಿಯೆತ್ತಿದ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ► ಮೂರು ವರ್ಷಗಳಲ್ಲಿ 30 ಪತ್ರ ಬರೆದರೂ ಮೋದಿ ಉತ್ತರಿಸಿಲ್ಲ: ಅಣ್ಣಾ ಹಜಾರೆ

(ನ್ಯೂಸ್ ಕಡಬ) newskadaba.com ನವದೆಹಲಿ, ಜ.24. ತಾನು ನಡೆಸಿದ ಚಳವಳಿಯ ಮೂಲಕ ಸಿಎಂ ಅರವಿಂದ್ ಕೇಜ್ರಿವಾಲ್ ರಾಜಕೀಯಕ್ಕೆ ಪ್ರವೇಶಿಸಿದ್ದಾರೆ ಎಂದು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಅವರು ವಾಗ್ದಾಳಿ ನಡೆಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧವೂ ಧ್ವನಿ ಎತ್ತಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಅಣ್ಣಾ ಹಜಾರೆ, ನಾನು ಪ್ರಧಾನಿ ಮೋದಿಯವರಿಗೆ 30ಕ್ಕೂ ಅಧಿಕ ಪತ್ರಗಳನ್ನು ಬರೆದಿದ್ದೇನೆ, ಆದರೆ ಒಂದಕ್ಕೂ ಪ್ರತಿಕ್ರಿಯೆ ಕೊಟ್ಟಿಲ್ಲ ಎಂದು ಆರೋಪಿಸಿದರು. ಕಳೆದ ಮೂರು ವರ್ಷಗಳಲ್ಲಿ ನಾನು 30ಕ್ಕೂ […]

ಪ್ರಧಾನಿ ಮೋದಿಯ ವಿರುದ್ಧ ಧ್ವನಿಯೆತ್ತಿದ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ► ಮೂರು ವರ್ಷಗಳಲ್ಲಿ 30 ಪತ್ರ ಬರೆದರೂ ಮೋದಿ ಉತ್ತರಿಸಿಲ್ಲ: ಅಣ್ಣಾ ಹಜಾರೆ Read More »

ರಾಷ್ಟ್ರೀಯ ನ್ಯೂಸ್

ಸಾಲು ಸಾಲು ರಜೆಗಳಿಂದಾಗಿ ನಾಳೆಯಿಂದ ಬ್ಯಾಂಕ್ ವ್ಯವಹಾರ ಸ್ಥಗಿತ ► ಬ್ಯಾಂಕ್ ವ್ಯವಹಾರಗಳಿದ್ದಲ್ಲಿ ಇಂದೇ ಮುಗಿಸಿಬಿಡಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.24. ಜನವರಿ 25 ರಂದು ರಾಜ್ಯ ಬಂದ್ ಸೇರಿದಂತೆ ನಾಲ್ಕು ದಿನಗಳ ಕಾಲ ಬ್ಯಾಂಕ್ ಗೆ ಸಾಲು ಸಾಲು ರಜೆಗಳಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ವಹಿವಾಟು ಸೇರಿದಂತೆ, ಎಟಿಎಂ ಸೇವೆಗಳು ಬಹುತೇಕ ಸ್ಥಗಿತಗೊಳ್ಳಲಿದ್ದು, ಈ ನಿಟ್ಟಿನಲ್ಲಿ ನಿಮಗೆ ಬ್ಯಾಂಕ್ ನಲ್ಲಿ ಏನಾದರೂ ಕೆಲಸವಿದ್ದಲ್ಲಿ ಇಂದೇ ನಿಮ್ಮ ಕೆಲಸಗಳನ್ನು ಮುಗಿಸಿಕೊಂಡು ಬಿಡಿ‌. ಜನವರಿ 25 ಗುರುವಾರ ರಾಜ್ಯ ಬಂದ್ ಇರುವುದರಿಂದ ಅಂದು ಬಂದ್ ಹಿನ್ನೆಲೆಯಲ್ಲಿ ಬ್ಯಾಂಕ್ ಗಳು ಕೆಲಸ ಮಾಡುವುದು ಅನುಮಾನವಾಗಿದ್ದು, ಶುಕ್ರವಾರ 26

ಸಾಲು ಸಾಲು ರಜೆಗಳಿಂದಾಗಿ ನಾಳೆಯಿಂದ ಬ್ಯಾಂಕ್ ವ್ಯವಹಾರ ಸ್ಥಗಿತ ► ಬ್ಯಾಂಕ್ ವ್ಯವಹಾರಗಳಿದ್ದಲ್ಲಿ ಇಂದೇ ಮುಗಿಸಿಬಿಡಿ Read More »

ರಾಷ್ಟ್ರೀಯ ನ್ಯೂಸ್

ಇತಿಹಾಸ ಸೃಷ್ಟಿಸಿದ ಇಂಧನ ಬೆಲೆ ► ಪೆಟ್ರೋಲ್ ಲೀ.ಗೆ 80 ರೂ.

(ನ್ಯೂಸ್ ಕಡಬ) newskadaba.com ಮುಂಬಯಿ, ಜ.23. ದಿನೇದಿನೇ ತೈಲ ಬೆಲೆಯು ಗಗನಕ್ಕೇರುತ್ತಿದ್ದು, ಮುಂಬೈನಲ್ಲಿ ಮಂಗಳವಾರದಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 80.25 ರೂ. ಆಗುವುದರ ಮೂಲಕ ಇತಿಹಾಸ ಸೃಷ್ಟಿಸಿದೆ. ತೈಲ ಬೆಲೆ ಏರುಗತಿಯಲ್ಲಿ ಸಾಗುತ್ತಿದ್ದು, ಡೀಸೆಲ್ ಬೆಲೆ ಲೀಟರ್ ಗೆ 67.30 ರೂ. ಏರುವುದರ ಮೂಲಕ ಹೊಸ ದಾಖಲೆ ಬರೆದಿದೆ. ಚೆನ್ನೈ ಮತ್ತು ಕೋಲ್ಕತ್ತದಲ್ಲಿ ಪೆಟ್ರೋಲ್ ಬೆಲೆ 75 ರೂ. ಗಡಿ ದಾಟಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ 72.38 ರೂ. ಆಗಿದ್ದು, ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 75.06

ಇತಿಹಾಸ ಸೃಷ್ಟಿಸಿದ ಇಂಧನ ಬೆಲೆ ► ಪೆಟ್ರೋಲ್ ಲೀ.ಗೆ 80 ರೂ. Read More »

ರಾಷ್ಟ್ರೀಯ ನ್ಯೂಸ್

ಒಪ್ಪಿಗೆ ಇಲ್ಲದೆ ಮಹಿಳೆಯ ಮೈ ಮುಟ್ಟುವಂತಿಲ್ಲ ► ನ್ಯಾಯಾಲಯ ತಾಕೀತು

(ನ್ಯೂಸ್ ಕಡಬ) newskadaba.com ನವದೆಹಲಿ, ಜ.22. ಮಹಿಳೆಯ ಒಪ್ಪಿಗೆ ಇಲ್ಲದೆ ಯಾರೂ ಆಕೆಯ ಮೈಯನ್ನು ಮುಟ್ಟುವಂತಿಲ್ಲ ಎಂದು ದೆಹಲಿ ನ್ಯಾಯಾಲಯ ತಾಕೀತು ಮಾಡಿದೆ. ಒಂಬತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಉತ್ತರ ಪ್ರದೇಶದ ಚಾವಿ ರಾಮ್‌ ಎಂಬ ಅಪರಾಧಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಧೀಶರು, ಮಹಿಳೆಯ ದೇಹ ಆಕೆಯ ವಿಶೇಷ ಸ್ವತ್ತಾಗಿದ್ದು, ಅದರ ಮೇಲೆ ಆಕೆಗಲ್ಲದೇ ಬೇರೆ ಯಾರಿಗೂ ಅಧಿಕಾರ ಇಲ್ಲ. ಆಕೆಯ ಒಪ್ಪಿಗೆ ಇಲ್ಲದೆ ಆಕೆಯ ದೇಹವನ್ನು ಯಾರೂ ಸ್ಪರ್ಶಿಸುವಂತಿಲ್ಲ ಎಂದು ನ್ಯಾಯಾಲಯ

ಒಪ್ಪಿಗೆ ಇಲ್ಲದೆ ಮಹಿಳೆಯ ಮೈ ಮುಟ್ಟುವಂತಿಲ್ಲ ► ನ್ಯಾಯಾಲಯ ತಾಕೀತು Read More »

ರಾಷ್ಟ್ರೀಯ ನ್ಯೂಸ್

ಯುವತಿಯ ಅಪಹರಣ ಪ್ರಕರಣ ► ಮುಂಬೈ ಪೊಲೀಸರಿಂದ ಬಜರಂಗ ದಳ ಮುಖಂಡ ಸುನಿಲ್ ಪಂಪ್ ವೆಲ್ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.19. ಲವ್ ಜಿಹಾದ್ ವದಂತಿ ಸೃಷ್ಟಿಸಿದ್ದ ಕಾಸರಗೋಡಿನ ಕಾನೂನು ವಿದ್ಯಾರ್ಥಿನಿ ರೇಷ್ಮಾ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ದೊರೆತಿದ್ದು, ರೇಷ್ಮಾ ಅವರನ್ನು ಅಪಹರಣ ಮಾಡಿರುವ ಆರೋಪದಲ್ಲಿ ಮಂಗಳೂರಿನ ಭಜರಂಗದಳದ ನಾಯಕ ಸುನೀಲ್ ಪಂಪ್ ವೆಲ್ ನನ್ನು ಮುಂಬೈ ಪೊಲೀಸರು ಗುರುವಾರದಂದು ಬಂಧಿಸಿದ್ದಾರೆ. ಮಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಕಾನೂನು ವಿದ್ಯಾರ್ಥಿನಿಯಾಗಿದ್ದ ಕಾಸರಗೋಡಿನ ಶ್ರೀಮಂತ ಕುಟುಂಬದ ರೇಷ್ಮಾ ಹಾಗೂ ಮೂರು ವರ್ಷಗಳ ಹಿಂದೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಇಕ್ಬಾಲ್ ನಡುವೆ ಪ್ರೇಮಾಂಕುರವಾಗಿತ್ತು. ಇದ್ದಕ್ಕಿದ್ದಂತೆ ನಾಪತ್ತೆಯಾದ ರೇಷ್ಮಾ ಮುಂಬೈನಲ್ಲಿ

ಯುವತಿಯ ಅಪಹರಣ ಪ್ರಕರಣ ► ಮುಂಬೈ ಪೊಲೀಸರಿಂದ ಬಜರಂಗ ದಳ ಮುಖಂಡ ಸುನಿಲ್ ಪಂಪ್ ವೆಲ್ ಬಂಧನ Read More »

ರಾಷ್ಟ್ರೀಯ ನ್ಯೂಸ್

ಮುಂದುವರಿದ ಮಹದಾಯಿ ಬಿಕ್ಕಟ್ಟು ► ಜನವರಿ 27 ರಂದು ಸರ್ವ ಪಕ್ಷಗಳ ಸಭೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.18. ಮಹದಾಯಿ ನೀರಿನ ವಿಚಾರದಲ್ಲಿ ಎರಡು ರಾಜ್ಯಗಳ ನಾಯಕರ ನಡುವೆ ಆರೋಪ – ಪ್ರತ್ಯಾರೋಪ ನಡೆಯುತ್ತಿರುವುದರ ಮಧ್ಯೆಯೇ ಮಹದಾಯಿ ವಿಚಾರವಾಗಿ ಚರ್ಚಿಸಲು ಸರ್ವ ಪಕ್ಷಗಳ ಸಭೆಯನ್ನು ರಾಜ್ಯ ಸರಕಾರ ಕರೆದಿದೆ. ಜನವರಿ 27 ರಂದು ವಿಧಾನಸೌಧದಲ್ಲಿ ನಡೆಯಲಿರುವ ಸರ್ವ ಪಕ್ಷಗಳ ಸಭೆಗೆ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರಿಗೆ ಆಹ್ವಾನ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಆಡಳಿತಾರೂಢ ಕಾಂಗ್ರೆಸ್‌ ಪಕ್ಷವು ಸರ್ವ ಪಕ್ಷಗಳ ಜೊತೆ ಸಭೆ ಸೇರಿ ಮಹದಾಯಿ ವಿಚಾರವಾಗಿ ಮಹತ್ವದ

ಮುಂದುವರಿದ ಮಹದಾಯಿ ಬಿಕ್ಕಟ್ಟು ► ಜನವರಿ 27 ರಂದು ಸರ್ವ ಪಕ್ಷಗಳ ಸಭೆ Read More »

ರಾಷ್ಟ್ರೀಯ ನ್ಯೂಸ್

ಕಂಠಪೂರ್ತಿ ಕುಡಿದು ಬಂದು ವಿಮಾನ ಚಲಾಯಿಸಲೆತ್ನಿಸಿದ ಮಹಿಳಾ ಪೈಲಟ್ ► ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪ್ಪಿದ ಮತ್ತೊಂದು ದುರಂತ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.18. ಕಳೆದ ಹಲವಾರು ಸಮಯಗಳಿಂದ ಪದೇ ಪದೇ ಒಂದಲ್ಲ ಒಂದು ರೀತಿಯ ಎಡವಟ್ಟುಗಳಿಂದಲೇ ಸುದ್ದಿಯಾಗುತ್ತಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದೀಗ ಮತ್ತೊಂದು ಎಡವಟ್ಟು ಸಂಭವಿಸಿದ್ದು, ತಡವಾಗಿ ಸುದ್ದಿಯಾಗಿದೆ. ವಿಮಾನ ಚಲಾಯಿಸಲು ಬಂದ ಮಹಿಳಾ ಪೈಲಟ್‌ ಒಬ್ಬರು ಕಂಠ ಪೂರ್ತಿ ಕುಡಿದು ಅವಾಂತರ ಸೃಷ್ಟಿಸಿದ ಹಿನ್ನೆಲೆಯಲ್ಲಿ ಮಂಗಳೂರು – ದುಬೈ ವಿಮಾನದಲ್ಲಿದ್ದ ಸುಮಾರು 180 ಪ್ರಯಾಣಿಕರು ಮಂಗಳವಾರ ಮಧ್ಯರಾತ್ರಿಯಿಂದ ಬೆಳಗಾಗುವ ತನಕ ನಿಲ್ದಾಣದಲ್ಲೇ ತೂಕ‌ಡಿಸುತ್ತ ಕುಳಿತುಕೊಳ್ಳ ಬೇಕಾದ ಅನಿವಾರ್ಯತೆ ಉಂಟಾಗಿದೆ. ಮಂಗಳೂರು

ಕಂಠಪೂರ್ತಿ ಕುಡಿದು ಬಂದು ವಿಮಾನ ಚಲಾಯಿಸಲೆತ್ನಿಸಿದ ಮಹಿಳಾ ಪೈಲಟ್ ► ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪ್ಪಿದ ಮತ್ತೊಂದು ದುರಂತ Read More »

ರಾಷ್ಟ್ರೀಯ ನ್ಯೂಸ್

ಕಳವು ಪ್ರಕರಣದಲ್ಲಿ ಕೇರಳ ಪೊಲೀಸರಿಂದ ತಪ್ಪಿಸಿ ಕಡಬದಲ್ಲಿ ಅವಿತಿದ್ದ ಆರೋಪಿ ► ಆರೋಪಿಯನ್ನು ಬಂಧಿಸಿ ಕೇರಳ ಪೊಲೀಸರಿಗೆ ಹಸ್ತಾಂತರಿಸಿದ ಕಡಬ ಪೊಲೀಸರು

(ನ್ಯೂಸ್ ಕಡಬ) newskadaba.com ಕಡಬ, ಜ.17. ಕಳವು ಪ್ರಕರಣವೊಂದರಲ್ಲಿ ಕೇರಳದ ಕಣ್ಣೂರು ಸಬ್ ಜೈಲಿನಲ್ಲಿ ಬಂಧಿಯಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಪೊಲೀಸರನ್ನು ತಳ್ಳಿಹಾಕಿ ಪರಾರಿಯಾಗಿದ್ದ ಆರೋಪಿಯನ್ನು ಕಡಬ ಪೊಲೀಸರು ಬಂಧಿಸಿದ ಘಟನೆ ಬುಧವಾರದಂದು ಕೊಯಿಲದಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ಕೇರಳದಿಂದ ತಪ್ಪಿಸಿ ಬಂದು ಕೊಯಿಲ ಗ್ರಾಮದ ಎಲ್ಯಂಗಳ ನಿವಾಸಿ ಅಬ್ಬಾಸ್ ಎಂಬವರ ಮನೆಯಲ್ಲಿ ಅವಿತು ಕುಳಿತಿದ್ದ ಶಿಹಾಬುದ್ದೀನ್(22) ಎಂದು ಗುರುತಿಸಲಾಗಿದೆ. ಈತ 2017 ಡಿಸೆಂಬರ್ 25 ರಂದು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಜೀಪಿನಲ್ಲಿದ್ದ ಪೊಲೀಸರನ್ನು ತಳ್ಳಿ ಪರಾರಿಯಾಗಿ ಕಡಬ ಪರಿಸರದಲ್ಲಿ

ಕಳವು ಪ್ರಕರಣದಲ್ಲಿ ಕೇರಳ ಪೊಲೀಸರಿಂದ ತಪ್ಪಿಸಿ ಕಡಬದಲ್ಲಿ ಅವಿತಿದ್ದ ಆರೋಪಿ ► ಆರೋಪಿಯನ್ನು ಬಂಧಿಸಿ ಕೇರಳ ಪೊಲೀಸರಿಗೆ ಹಸ್ತಾಂತರಿಸಿದ ಕಡಬ ಪೊಲೀಸರು Read More »

ರಾಷ್ಟ್ರೀಯ ನ್ಯೂಸ್

ಹಜ್ ಯಾತ್ರಾರ್ಥಿಗಳ ಸಬ್ಸಿಡಿ ಕಡಿತಗೊಳಿಸಿದ ಕೇಂದ್ರ ಸರ್ಕಾರ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಜ.16. ಹಜ್ ಯಾತ್ರಾರ್ಥಿಗಳಿಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಪ್ರಸಕ್ತ ವರ್ಷದಿಂದ ಕೇಂದ್ರ ಸರಕಾರ ರದ್ದುಪಡಿಸಿದೆ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಮಂಗಳವಾರ ಹೇಳಿದ್ದಾರೆ. ಸ್ವಾತಂತ್ರ್ಯಾ ನಂತರ ಪ್ರಪ್ರಥಮ ಬಾರಿಗೆ 1.75 ಲಕ್ಷ ಹಜ್ ಯಾತ್ರಾರ್ಥಿಗಳು ಸಬ್ಸಿಡಿಯಿಲ್ಲದೆ ಹಜ್ ಯಾತ್ರೆಗೆ ತೆರಳುತ್ತಿದ್ದಾರೆ. ಸಬ್ಸಿಡಿಯನ್ನು ರದ್ದು ಮಾಡುವ ಮೂಲಕ ಸರಕಾರವು 700 ಕೋಟಿ ರೂ.ಗಳನ್ನು ಉಳಿತಾಯ ಮಾಡಲಿದೆ. ಈ ಹಣವನ್ನು ಅಲ್ಪಸಂಖ್ಯಾತ ಸಮುದಾಯದ, ಮುಖ್ಯವಾಗಿ ಹೆಣ್ಮಕ್ಕಳ ಶಿಕ್ಷಣಕ್ಕಾಗಿ ಬಳಸಲಾಗುವುದು ಎಂದವರು ಹೇಳಿದ್ದಾರೆ.

ಹಜ್ ಯಾತ್ರಾರ್ಥಿಗಳ ಸಬ್ಸಿಡಿ ಕಡಿತಗೊಳಿಸಿದ ಕೇಂದ್ರ ಸರ್ಕಾರ Read More »

ರಾಷ್ಟ್ರೀಯ ನ್ಯೂಸ್

ಪುತ್ತೂರು ಧರ್ಮಪ್ರಾಂತ್ಯದ ಸ್ಥಾಪಕ ಧರ್ಮಾಧ್ಯಕ್ಷರು ಇನ್ನಿಲ್ಲ ► ಕೇರಳದಲ್ಲಿ ವಿಧಿವಶರಾದ ಗೀವರ್ಗೀಸ್ ಮಾರ್ ದಿವನ್ನಾಸಿಯೋಸ್

(ನ್ಯೂಸ್ ಕಡಬ) newskadaba.com ಪುತ್ತೂರು, ಜ.16. ಪುತ್ತೂರು ಧರ್ಮಪ್ರಾಂತ್ಯದ ಸ್ಥಾಪಕ ಧರ್ಮಾಧ್ಯಕ್ಷರಾಗಿದ್ದ ಗೀವರ್ಗೀಸ್ ಮಾರ್ ದಿವನ್ನಾಸಿಯೋಸ್ ರವರು ಮಂಗಳವಾರದಂದು ವಿಧಿವಶರಾದರು. ದೀರ್ಘ ಕಾಲದ ಅನಾರೋಗ್ಯದಿಂದಾಗಿ ಕೇರಳದ ಪುಷ್ಪಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಸುಮಾರು 7 ವರ್ಷಗಳ ಕಾಲ ಪುತ್ತೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು‌. ಮೂಲತಃ ಪುತ್ತೂರು ತಾಲೂಕಿನ ಇಚಿಲಂಪಾಡಿ ನಿವಾಸಿಯಾಗಿದ್ದ ಇವರು 2010 ರಲ್ಲಿ ಪುತ್ತೂರು ಧರ್ಮ ಪ್ರಾಂತ್ಯದ ಪ್ರಥಮ ಧರ್ಮಾಧ್ಯಕ್ಷರಾಗಿ ನೇಮಕಗೊಂಡಿದ್ದರು. ಸೈಂಟ್ ಜಾನ್ ಕೆಥೆಡ್ರಲ್ ತಿರುವಲ್ಲದಲ್ಲಿ ಜನವರಿ 18 ರಂದು

ಪುತ್ತೂರು ಧರ್ಮಪ್ರಾಂತ್ಯದ ಸ್ಥಾಪಕ ಧರ್ಮಾಧ್ಯಕ್ಷರು ಇನ್ನಿಲ್ಲ ► ಕೇರಳದಲ್ಲಿ ವಿಧಿವಶರಾದ ಗೀವರ್ಗೀಸ್ ಮಾರ್ ದಿವನ್ನಾಸಿಯೋಸ್ Read More »

ರಾಷ್ಟ್ರೀಯ ನ್ಯೂಸ್
Scroll to Top