ರಾಷ್ಟ್ರೀಯ ನ್ಯೂಸ್

ತೆಲಂಗಾಣ: ಮರ್ಯಾದ ಹತ್ಯೆ ಪ್ರಕರಣದ ಆರೋಪಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಹೊಸದಿಲ್ಲಿ,  ಮಾ.8: ದೇಶವನ್ನೇ ಬೆಚ್ಚಿಬೀಳಿಸಿದ 2018ರ ತೆಲಂಗಾಣದ ಮರ್ಯಾದೆಗೇಡು ಹತ್ಯೆ ಪ್ರಕರಣದ ಆರೋಪಿ, ಯುವತಿಯ ತಂದೆ ಮಾರುತಿ ರಾವ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಎಂದು ಪೊಲೀಸರು ಶಂಕಿಸಿದ್ದಾರೆ. 2018ರಲ್ಲಿ ತನ್ನ ಪುತ್ರಿಯನ್ನು ಪ್ರೀತಿಸಿ ಮದುವೆಯಾದ ಪ್ರಣಯ್ ಪೆರುಮಳ್ಳ ಎಂಬ ಯುವಕನನ್ನು ಮಾರುತಿ ರಾವ್ ಸುಪಾರಿ ನೀಡಿ ಕೊಲೆ ಮಾಡಿಸಿದ್ದರು. ಪ್ರಣಯ್ ದಲಿತ ಸಮುದಾಯಕ್ಕೆ ಸೇರಿದವನಾಗಿದ್ದರೆ, ಅಮೃತಾ ಮೇಲ್ಜಾತಿಗೆ ಸೇರಿದ ಯುವತಿಯಾಗಿದ್ದಳು. 2018ರ ಸೆಪ್ಟಂಬರ್ 14ರಂದು ಮಾರುತಿ ರಾವ್ 1 ಕೋಟಿ ರೂ. ಸುಪಾರಿ ನೀಡಿ ಪ್ರಣಯ್ […]

ತೆಲಂಗಾಣ: ಮರ್ಯಾದ ಹತ್ಯೆ ಪ್ರಕರಣದ ಆರೋಪಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ದಿಲ್ಲಿ ಹಿಂಸಾಚಾರ ವರದಿ ಮಾಡಿದ ಮಲಯಾಳಂನ ‘ಮೀಡಿಯಾ ಒನ್’, ‘ಏಷ್ಯಾನೆಟ್’ ಚಾನೆಲ್‌ಗೆ 48 ಗಂಟೆ ನಿಷೇಧ ಹೇರಿದ ಕೇಂದ್ರ ಸರಕಾರ

ಹೊಸದಿಲ್ಲಿ, ಮಾ.7: ಈಶಾನ್ಯ ದಿಲ್ಲಿಯ ಕೋಮುಗಲಭೆಯ ವರದಿ ಪ್ರಸಾರ ಮಾಡಿದ ಆರೋಪದ ಮೇಲೆ ಮಲಯಾಳಂ ಸುದ್ದಿ ವಾಹಿನಿಗಳಾದ ಮೀಡಿಯಾ ಒನ್ ಹಾಗೂ ಏಷ್ಯಾನೆಟ್‌ಗೆ ಎರಡು ದಿನ ಪ್ರಸಾರ ನಿರ್ಬಂಧ ವಿಧಿಸಲಾಗಿದೆ. ಮುಂದಿನ 48 ಗಂಟೆಗಳ ಕಾಲ ಯಾವುದೇ ಪ್ರಸಾರ ಮಾಡದಂತೆ ಮಲಯಾಳಂನ ಈ ಎರಡು ಸುದ್ದಿ ವಾಹಿನಿಗಳ ಮೇಲೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನಿರ್ಬಂಧ ವಿಧಿಸಿದೆ. ಈಶಾನ್ಯ ದಿಲ್ಲಿಯ ಹಿಂಸಾಚಾರವನ್ನು ತಪ್ಪಾಗಿ ವರದಿ ಮಾಡಿದೆ ಎಂಬ ಆರೋಪದ ಮೇಲೆ ಮಲಯಾಳಂ ಸುದ್ದಿ ವಾಹಿನಿಗಳಾದ ಏಷ್ಯಾನೆಟ್

ದಿಲ್ಲಿ ಹಿಂಸಾಚಾರ ವರದಿ ಮಾಡಿದ ಮಲಯಾಳಂನ ‘ಮೀಡಿಯಾ ಒನ್’, ‘ಏಷ್ಯಾನೆಟ್’ ಚಾನೆಲ್‌ಗೆ 48 ಗಂಟೆ ನಿಷೇಧ ಹೇರಿದ ಕೇಂದ್ರ ಸರಕಾರ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಎಎಪಿ ಕೌನ್ಸಿಲರ್ ತಾಹಿರ್ ಹುಸೈನ್ ನ್ಯಾಯಾಲಯಕ್ಕೆ ಶರಣು

ಹೊಸದಿಲ್ಲಿ, ಮಾ.6: ಪೌರತ್ವ ತಿದ್ದುಪಡಿ ಕಾಯ್ದೆ ಸಂಬಂಧ ದಿಲ್ಲಿಯಲ್ಲಿ ನಡೆದ ಹಿಂಸಾಚಾರದ ವೇಳೆ ಗುಪ್ತಚರ ಇಲಾಖೆ(ಐಬಿ)ಯ ಅಧಿಕಾರಿಯನ್ನು ಹತ್ಯೆಗೈದ ಆರೋಪ ಎದುರಿಸುತ್ತಿರುವ ಆಮ್ ಆದ್ಮಿ ಪಕ್ಷದ ಕೌನ್ಸಿಲರ್ ತಾಹಿರ್ ಹುಸೈನ್ ನ್ಯಾಯಾಲಯಕ್ಕೆ ಶರಣಾದರು. ಈಶಾನ್ಯ ದಿಲ್ಲಿಯಲ್ಲಿ ಗುಪ್ತಚರ ಇಲಾಖೆಯ ಅಧಿಕಾರಿ ಅಂಕಿತ್ ಶರ್ಮಾ ಹತ್ಯೆಗೀಡಾಗಿದ್ದರು. ಈ ಆರೋಪದ ಮೇಲೆ ತಾಹಿರ್ ಹುಸೈನ್ ವಿರುದ್ಧ ಕೊಲೆ ಮತ್ತು ಗಲಭೆ ಪ್ರಕರಣ ದಾಖಲಾಗಿತ್ತು. ಅಂಕಿತ್ ಶರ್ಮಾ ಹತ್ಯೆ ಹಿಂದೆ ತಾಹಿರ್ ಕೈವಾಡ ಇದೆ ಎಂದು ತಂದೆ ರವೀಂದ್ರ ಶರ್ಮಾ ಆರೋಪಿಸಿದ್ದರು.

ಎಎಪಿ ಕೌನ್ಸಿಲರ್ ತಾಹಿರ್ ಹುಸೈನ್ ನ್ಯಾಯಾಲಯಕ್ಕೆ ಶರಣು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಾ.20ರಂದು ನಿರ್ಭಯಾ ಅಪರಾಧಿಗಳಿಗೆ ಗಲ್ಲು

ಹೊಸದಿಲ್ಲಿ, ಮಾ.6: ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಅಪರಾಧಿಗಳಿಗೆ ಮಾ.20ರಂದು ಗಲ್ಲು ನೀಡಲು ದಿಲ್ಲಿಯ ಪಟಿಯಾಲ ಕೋರ್ಟ್ ಹೊಸ ಡೆತ್ ವಾರೆಂಟ್ ಜಾರಿಮಾಡಲಾಗಿದೆ. ಮಾರ್ಚ್ 20ರಂದು ಬೆಳಗ್ಗೆ 6 ಗಂಟೆಗೆ ನಾಲ್ವರು ಅಪರಾಧಿಗಳನ್ನೂ ನೇಣಿಗೇರಿಸಲು ನ್ಯಾಯಾಲಯ ಆದೇಶಿಸಿದೆ. ನಿರ್ಭಯಾ ಅತ್ಯಾಚಾರಿ ಆರೋಪಿ ಪವನ್ ಸಲ್ಲಿಸಿದ್ದ ಕ್ಷಮಾಧಾನ ಅರ್ಜಿಯನ್ನು ಕಳೆದ ನಿನ್ನೆಯಷ್ಟೇ ರಾಷ್ಟ್ರಪತಿಗಳು ತಿರಸ್ಕರಿಸಿದ್ದರು. ಇದಕ್ಕೂ ಪೂರ್ವದಲ್ಲಿ ಆರೋಪಿಗಳು ಸಲ್ಲಿಸಿದ್ದ ಕ್ಷಮಾಧಾನ ಕೋರಿದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಪಾಟಿಯಾಲ ಕೋರ್ಟ್, ಗಲ್ಲು ಶಿಕ್ಷೆಯನ್ನು ಮುಂದೂಡಿತ್ತು. ಈಗಾಗಲೇ

ಮಾ.20ರಂದು ನಿರ್ಭಯಾ ಅಪರಾಧಿಗಳಿಗೆ ಗಲ್ಲು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಠೇವಣಿ ಮೇಲಿನ ಬಡ್ಡಿ ದರ ಇಳಿಸಿದ ಇಪಿಎಫ್‌ಐ

ಹೊಸದಿಲ್ಲಿ, ಮಾ.6: ಇಪಿಎಫ್‌ಒ ಬಡ್ಡಿದರಗಳನ್ನು ಕಡಿತಗೊಳಿಸಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕಾರ್ಮಿಕರ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿದರವನ್ನು ಏಳು ವರ್ಷಗಳಲ್ಲಿ ಕಡಿಮೆ ಎನ್ನಲಾದ ಶೇ. 8. 5ರಷ್ಟು ಪಾವತಿಸಲು ಇಪಿಎಫ್‌ಒ ನಿರ್ಧರಿಸಿದೆ. 2018-19ರಲ್ಲಿ ಶೇ. 8. 65 ರಷ್ಟು ಬಡ್ಡಿದರವನ್ನು ಸುಮಾರು 6 ಕೋಟಿ ಗ್ರಾಹಕರಿಗೆ ಇಪಿಎಫ್ ಒ ಪಾವತಿಸಿತ್ತು. 2019-20ರ ಹಣಕಾಸು ವರ್ಷಕ್ಕೆ ಬಡ್ಡಿದರಗಳನ್ನು ಶೇಕಡಾ 8.50 ಕ್ಕೆ ಇಳಿಸಲು ಕೇಂದ್ರೀಯ ಟ್ರಸ್ಟಿಗಳ ಸಭೆಯಲ್ಲಿ ನಿರ್ಧರಿಸಲಾಗಿದೆ. ಸಿಬಿಟಿಯನ್ನು ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಅವರ

ಠೇವಣಿ ಮೇಲಿನ ಬಡ್ಡಿ ದರ ಇಳಿಸಿದ ಇಪಿಎಫ್‌ಐ Read More »

ರಾಷ್ಟ್ರೀಯ ನ್ಯೂಸ್

ಭಾರತದಲ್ಲಿ 28 ಜನರಿಗೆ ಕೊರೋನ ದೃಢ

ಹೊಸದಿಲ್ಲಿ, ಮಾ.5: ಡೆಡ್ಲಿ ಕೊರೋನ ವೈರಸ್ ಭಾರತದಲ್ಲಿ ತನ್ನ ಕಬಂದಬಾಹುವನ್ನು ಚಾಚುತ್ತಿದ್ದು, ಇದುವರೆಗೆ 28 ಜನರಲ್ಲಿ ಸೋಂಕು ದೃಢಪಟ್ಟಿದೆ ಎಂದು ವರದಿಯಾಗಿದೆ. ಭಾರತದ ಪ್ರವಾಸಕ್ಕೆ ಬಂದಿರುವ 16 ಮಂದಿ ಇಟಲಿ ಪ್ರವಾಸಿಗರಲ್ಲಿ ಕೊರೋನ ವೈರಸ್ ಸೋಂಕು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಜೈಪುರಕ್ಕೆ ಪ್ರವಾಸಕ್ಕೆ ಬಂದಿರುವ ಇಟಲಿ ಮಹಿಳೆಯೋರ್ವರಿಗೆ ಮಂಗಳವಾರ ಕೊರೊನಾ ವೈರಸ್ ಸೋಂಕು ಪತ್ತೆಯಾಗಿತ್ತು. ದಿಲ್ಲಿಯ ಓರ್ವ ಪ್ರಜೆಗೆ ಸೋಂಕು ತಗುಲಿದ್ದು, ಆತನ ಸಂಪರ್ಕಕ್ಕೆ ಬಂದಿದ್ದ ಆಗ್ರಾದ ಒಂದು ಕುಟುಂಬದ ಸದಸ್ಯರಿಗೆ ಕೊರೋನ ಸೋಂಕು ಖಚಿತವಾಗಿದೆ.

ಭಾರತದಲ್ಲಿ 28 ಜನರಿಗೆ ಕೊರೋನ ದೃಢ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ನಿರ್ಭಯಾ ಅಪರಾಧಿ ಪವನ್ ಸಲ್ಲಿಸಿದ ಕ್ಷಮದಾನ ಅರ್ಜಿ ತಿರಸ್ಕಾರಗೊಳಿಸಿದ ರಾಷ್ಟ್ರಪತಿ

ಹೊಸದಿಲ್ಲಿ, ಮಾ.5: ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ಅಪರಾಧಿಯಾಗಿರುವ ಪವನ್ ಗುಪ್ತಾ ಕ್ಷಮದಾನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಬುಧವಾರ ತಿರಸ್ಕಾರ ಮಾಡಿದ್ದಾರೆ. ಈ ಮೂಲಕ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಖಾಯಂ ಆಗಿದೆ. ನಿರ್ಭಯಾ ಪ್ರಕರಣದ ಅಪರಾಧಿಗಳಲ್ಲಿ ಓರ್ವನಾದ ಪವನ್ ಗುಪ್ತಾ , ಸೋಮವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಕೋರ್ಟ್ ತಿರಸ್ಕಾರ ಮಾಡಿದೆ. ಆ ಬಳಿಕ ಆತ ಕ್ಷಮದಾನವನ್ನು ಕೋರಿ ರಾಷ್ಟ್ರಪತಿಯವರಿಗೆ ಅರ್ಜಿ ಸಲ್ಲಿಸಿದ್ದ. ಇಂದು ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್

ನಿರ್ಭಯಾ ಅಪರಾಧಿ ಪವನ್ ಸಲ್ಲಿಸಿದ ಕ್ಷಮದಾನ ಅರ್ಜಿ ತಿರಸ್ಕಾರಗೊಳಿಸಿದ ರಾಷ್ಟ್ರಪತಿ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ತಂದೆಯ ಕೊಲೆ ಪ್ರಕರಣದಲ್ಲೂ ಮಾಜಿ ಬಿಜೆಪಿ ಶಾಸಕ ಸೆಂಗಾರ್ ದೋಷಿ

ಹೊಸದಿಲ್ಲಿ, ಮಾ.4: ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ತಂದೆಯ ಹತ್ಯೆ ಪ್ರಕರಣದಲ್ಲೂ ಮಾಜಿ ಬಿಜೆಪಿ ಶಾಸಕ ಕುಲದೀಪ್ ಸೆಂಗಾರ್ ದೋಷಿ ಎಂದು ದಿಲ್ಲಿಯ ತೀಸ್ ಹಜಾರಿ ನ್ಯಾಯಾಲಯ ತೀರ್ಪು ನೀಡಿದೆ. ಅತ್ಯಾಚಾರ ಪ್ರಕರಣದಲ್ಲಿ ಸೆಂಗಾರ್ ಈಗಾಗಲೇ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. 2018ರ ಎಪ್ರಿಲ್‌ನಲ್ಲಿ ಸಂತ್ರಸ್ತೆಯ ತಂದೆಗೆ ಸೆಂಗಾರ್ ಸಹೋದರ ಅಟುಲ್ ಸೆಂಗಾರ್ ಮತ್ತು ಸಹಚರರು ಮನಸೋ ಇಚ್ಛೆ ಥಳಿಸಲಾಗಿತ್ತು. ನಂತರ ಪೊಲೀಸರು ಅವರನ್ನು ಆಸ್ಪತ್ರೆಗೆ ಸಾಗಿಸುವ ಬದಲು ಠಾಣೆಗೆ ಕರೆದೊಯ್ದಿದ್ದರು. ಇದಾದ ಎರಡು ದಿನಗಳ ಬಳಿಕ ಅವರು ಠಾಣೆಯಲ್ಲಿ

ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ತಂದೆಯ ಕೊಲೆ ಪ್ರಕರಣದಲ್ಲೂ ಮಾಜಿ ಬಿಜೆಪಿ ಶಾಸಕ ಸೆಂಗಾರ್ ದೋಷಿ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸಿಎಎ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್

ಇದು ಭಾರತದ ಆಂತರಿಕ ವಿಚಾರವೆಂದ ಕೇಂದ್ರ ಸರಕಾರದಿಂದ ಹೊಸದಿಲ್ಲಿ, ಮಾ.4: ಭಾರತದ ಪೌರತ್ವ ತಿದ್ದುಪಡಿ ಕಾಯ್ದೆ ಸಂಬಂಧ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್‌ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯಸ್ಥಿಕೆ ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ಜಿನಿವಾದಲ್ಲಿರುವ ಭಾರತೀಯ ಶಾಶ್ವತ ನಿಯೋಗಕ್ಕೆ ತಿಳಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ಆದರೆ ಪೌರತ್ವ ತಿದ್ದುಪಡಿ ಕಾಯ್ದೆ ಭಾರತದ ಆಂತರಿಕ ವಿಚಾರವಾಗಿದ್ದು, ದೇಶದ ಸಂಸತ್ತು ಈ ಬಗ್ಗೆ ಕಾನೂನು ತರುವ ಸ್ವಾಯತ್ತ ಹಕ್ಕನ್ನು ಹೊಂದಿದೆ ಎಂದು ವಿಶ್ವಸಂಸ್ಥೆ ಮಾನವ ಹಕ್ಕು ಆಯೋಗಕ್ಕೆ

ಸಿಎಎ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್ Read More »

ರಾಷ್ಟ್ರೀಯ ನ್ಯೂಸ್

ಪವನ್ ಗುಪ್ತಾ ಅರ್ಜಿ ವಜಾ: ನಿರ್ಭಯಾ ಅಪರಾಧಿಗಳಿಗೆ ಗಲ್ಲು ಖಾಯಂ

ಹೊಸದಿಲ್ಲಿ, ಮಾ.2: ನಿರ್ಭಯಾ ಪ್ರಕರಣದ ಅಪರಾಧಿಗಳಲ್ಲಿ ಓರ್ವನಾದ ಪವನ್ ಗುಪ್ತಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ತಿರಸ್ಕಾರಗೊಳಿಸಿದ್ದು, ನಿರ್ಭಯಾ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಖಚಿತವಾಗಿದೆ. ದಿಲ್ಲಿಯ ಪಟಿಯಾಲ ಹೌಸ್ ಕೋರ್ಟ್ ಫೆ.17ರಂದು ಹೊಸ ಡೆತ್ ವಾರಂಟ್ ಹೊರಡಿಸಿದ್ದು, ಅದರಂತೆ ಮಾರ್ಚ್ 3ರಂದು ಗಲ್ಲು ನಿಗದಿಯಾಗಿತ್ತು. ಆದರೆ ಹೊಸ ಡೆತ್ ವಾರೆಂಟ್ ಬರುವವರೆಗೆ ಗಲ್ಲು ನೀಡದಂತೆ ಕೋರ್ಟ್ ತಡೆಹಿಡಿದಿದೆ. ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸುವಂತೆ ಕೋರಿ ಪವನ್ ಗುಪ್ತಾ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ

ಪವನ್ ಗುಪ್ತಾ ಅರ್ಜಿ ವಜಾ: ನಿರ್ಭಯಾ ಅಪರಾಧಿಗಳಿಗೆ ಗಲ್ಲು ಖಾಯಂ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top