ರಾಷ್ಟ್ರೀಯ ನ್ಯೂಸ್

ಅನಂತ್ ನಾಗ್: ಭದ್ರತೆ ಪಡೆಯ ಗುಂಡಿಗೆ ಬಲಿಯಾದ ನಾಲ್ವರು ಉಗ್ರರು

ಜಮ್ಮು, ಮಾ.15: ದಕ್ಷಿಣ ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಭಾನುವಾರ ಬೆಳಿಗ್ಗೆ ಆರಂಭಿಸಿದ ತೀವ್ರ ಶೋಧ ಕಾರ್ಯಾಚರಣೆ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಲಷ್ಕರ್-ಎ-ತೊಯ್ಬೆ (ಎಲ್‌ಇಟಿ) ಉಗ್ರರು ಹತರಾಗಿದ್ದಾರೆ ಎಂದು ವರದಿಯಾಗಿದೆ. ಉಗ್ರರು ಅಡಗಿರುವ ಬಗ್ಗೆ ನಿರ್ದಿಷ್ಟ ಮಾಹಿತಿ ಪಡೆದ ನಂತರ, ಜಮ್ಮು- ಕಾಶ್ಮೀರ ಪೊಲೀಸ್, ರಾಷ್ಟ್ರೀಯ ರೈಫಲ್ಸ್, ವಿಶೇಷ ಕಾರ್ಯಾಚರಣೆ ತಂಡ (ಎಸ್‌ಒಜಿ) ಮತ್ತು ಸಿಆರ್‌ಪಿಎಫ್ ಜಂಟಿಯಾಗಿ ಇಂದು ಮುಂಜಾನೆ ಅನಂತ್‌ನಾಗ್‌ನ ವಾಟರಿಗಮ್‌ನಲ್ಲಿ ಆರಂಭಿಸಿದ್ದವು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಶೋಧ […]

ಅನಂತ್ ನಾಗ್: ಭದ್ರತೆ ಪಡೆಯ ಗುಂಡಿಗೆ ಬಲಿಯಾದ ನಾಲ್ವರು ಉಗ್ರರು Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಜೋಧ್‌ಪುರ: ಭೀಕರ ರಸ್ತೆ ಅಪಘಾತಕ್ಕೆ 11 ಮಂದಿ ಬಲಿ

ಜೋಧ್‌ಪುರ, ಮಾ.14: ಜೀಪ್ ಹಾಗೂ ಟ್ರಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನವದಂಪತಿಗಳು ಸೇರಿ 11 ಮಂದಿ ಮೃತಪಟ್ಟು ಮೂವರು ಗಂಭೀರ ಗಾಯಗೊಂಡ ಘಟನೆ ರಾಜಸ್ತಾನದ ಜೋಧ್ಪುರ ಜಿಲ್ಲೆಯಲ್ಲಿ ಶನಿವಾರ ಸಂಭವಿಸಿದೆ. ಮೃತರಲ್ಲಿ 6 ಮಹಿಳೆಯರು, 1 ಮಗು ಹಾಗೂ 4 ಮಂದಿ ಪುರುಷರು ಸೇರಿದ್ದು ಇದರಲ್ಲಿ ಕಳೆದ ಫೆಬ್ರವರಿ 27ರಂದು ಮದುವೆಯಾದ ನವ ಜೋಡಿಗಳು ಸೇರಿದ್ದಾರೆ ಎಂದು ತಿಳಿದು ಬಂದಿದೆ. ಬಲೋತ್ರ ಗ್ರಾಮದ ನಿವಾಸಿಗಳು ರಾಮ ದೇವೋರ್ ಪ್ರದೇಶದಲ್ಲಿರುವ ರಾಮದೇವೋ ದೇವರಿಗೆ ಪೂಜೆ ಸಲ್ಲಿಸಲು

ಜೋಧ್‌ಪುರ: ಭೀಕರ ರಸ್ತೆ ಅಪಘಾತಕ್ಕೆ 11 ಮಂದಿ ಬಲಿ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ರಾಜ್ಯಾದ್ಯಂತ ನಾಳೆಯಿಂದ 1 ವಾರ ಮಾಲ್, ಚಿತ್ರಮಂದಿರ, ಮದುವೆ ಸಮಾರಂಭಗಳು ಬಂದ್

ಬೆಂಗಳೂರು, ಮಾ.13: ಕೊರೋನ ವೈರಸ್ ಹರಡದಂತೆ ತಡೆಯಲು ಶನಿವಾರದಿಂದ ಒಂದು ವಾರ ರಾಜ್ಯಾದ್ಯಂತ ಮಾಲ್, ಚಿತ್ರಮಂದಿರ, ಶಾಲಾ, ಕಾಲೇಜುಗಳು, ವಿಶ್ವವಿದ್ಯಾನಿಲಯಗಳನ್ನು ಬಂದ್ ಮಾಡುವಂತೆ ಮತ್ತು ಮದುವೆ, ಸಭೆ-ಸಮಾರಂಭಗಳಲ್ಲಿ 100ಕ್ಕಿಂತಲೂ ಹೆಚ್ಚು ಜನ ಸೇರದಂತೆ ನಿರ್ಬಂಧ ವಿಧಿಸಿ ರಾಜ್ಯ ಸರಕಾರ ಶುಕ್ರವಾರ ಆದೇಶ ಹೊರಡಿಸಿದೆ. ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ಒಂದು ವಾರಗಳ ಕಾಲ ಕ್ರೀಡಾ ಕಾರ್ಯಕ್ರಮಗಳು, ನೈಟ್ ಕ್ಲಬ್, ಪಬ್, ಮೇಳ, ಸೆಮಿನಾರ್ ಗಳು ಮತ್ತು ಜಾತ್ರೆಗಳನ್ನು ಬಂದ್

ರಾಜ್ಯಾದ್ಯಂತ ನಾಳೆಯಿಂದ 1 ವಾರ ಮಾಲ್, ಚಿತ್ರಮಂದಿರ, ಮದುವೆ ಸಮಾರಂಭಗಳು ಬಂದ್ Read More »

ರಾಷ್ಟ್ರೀಯ ನ್ಯೂಸ್

ಎನ್‌ಪಿಆರ್‌ಗೆ ದಾಖಲೆ ಸಲ್ಲಿಸುವ ಅಗತ್ಯವಿಲ್ಲ ರಾಜ್ಯಸಭೆಯಲ್ಲಿ ಅಮಿತ್ ಶಾ

ಹೊಸದಿಲ್ಲಿ, ಮಾ.13: ಎನ್‌ಪಿ‌ಆರ್‌ಗೆ ಯಾವುದೇ ದಾಖಲೆ ಸಲ್ಲಿಸುವ ಅಗತ್ಯವಿಲ್ಲ. ಇದರಿಂದ ಯಾರನ್ನೂ ಅನುಮಾನಾಸ್ಪದವಾಗಿ ಕಾಣುವುದಿಲ್ಲ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಬಗ್ಗೆ ಯಾರೂ ಚಿಂತಿಸಬೇಕಾದ ಅಗತ್ಯವಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ. “ಎನ್‌ಪಿಆರ್ ಬಗ್ಗೆ ಭಯಪಡುವ ಅಗತ್ಯವಿಲ್ಲ, ಯಾರನ್ನೂ ಅನುಮಾನಾಸ್ಪದವಾಗಿ ಕಾಣುವುದಿಲ್ಲ. ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು ನವೀಕರಿಸಲು ಯಾವುದೇ ದಾಖಲೆಯನ್ನು ಪಡೆಯಲಾಗುವುದಿಲ್ಲ. ಅಲ್ಲದೆ ಕೆಲ ಮಾಹಿತಿ ಒದಗಿಸುವುದು ಐಚ್ಚಿಕ ವಿಷಯವಾಗಿರಲಿದೆ”ಶಾ ಹೇಳಿದರು. ರಾಜ್ಯಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ದೆಹಲಿಯಲ್ಲಿ ಇತ್ತೀಚೆಗೆ ನಡೆದ

ಎನ್‌ಪಿಆರ್‌ಗೆ ದಾಖಲೆ ಸಲ್ಲಿಸುವ ಅಗತ್ಯವಿಲ್ಲ ರಾಜ್ಯಸಭೆಯಲ್ಲಿ ಅಮಿತ್ ಶಾ Read More »

ರಾಷ್ಟ್ರೀಯ ನ್ಯೂಸ್

ಮಧ್ಯೆಪ್ರದೇಶ ರಾಜಕೀಯ ಬಿಕ್ಕಟ್ಟು: 12 ಶಾಸಕರಿಗೆ ನೋಟಿಸ್ ನೀಡಿದ ಸ್ಪೀಕರ್

ಭೂಪಾಲ್, ಮಾ.13: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಧ್ಯಪ್ರದೇಶದ 12 ಕಾಂಗ್ರೆಸ್ ಬಂಡಾಯ ಶಾಸಕರುಗಳಿಗೆ ವಿಧಾನಸಭೆ ಸ್ಪೀಕರ್ ಎನ್.ಪಿ. ಪ್ರಜಾಪತಿ ನೋಟಿಸ್ ನೀಡಿದ್ದು, ನಾಳೆಯೊಳಗೆ ತಮ್ಮ ಮುಂದೆ ಹಾಜರಾಗುವಂತೆ ಸೂಚಿಸಿದ್ದಾರೆ. ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಿದ್ದಾರೆಯೇ ಅಥವಾ ಬಲವಂತದಿಂದ ರಾಜೀನಾಮೆ ನೀಡಿದ್ದಾರೆಯೇ ಎಂಬುದರ ಬಗ್ಗೆ ಸ್ಪಷ್ಟನೆ ನೀಡುವಂತೆ ಸ್ಪೀಕರ್ ಸೂಚಿಸಿರುವುದಾಗಿ ವಿಧಾನಸಭೆಯ ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ. ಈ ಮಧ್ಯೆ ಮಾರ್ಚ್16 ರಂದು ಬಿಜೆಪಿ ವಿಶ್ವಾಸ ಮತ ಯಾಚನೆಗೆ ಕೋರಿದ್ದು, 22 ಶಾಸಕರ ನಿರ್ಧಾರದ ಆಧಾರದ ಮೇಲೆ ವಿಶ್ವಾಸ

ಮಧ್ಯೆಪ್ರದೇಶ ರಾಜಕೀಯ ಬಿಕ್ಕಟ್ಟು: 12 ಶಾಸಕರಿಗೆ ನೋಟಿಸ್ ನೀಡಿದ ಸ್ಪೀಕರ್ Read More »

ರಾಷ್ಟ್ರೀಯ ನ್ಯೂಸ್

ಮಧ್ಯೆಪ್ರದೇಶ ರಾಜಕೀಯ ಹೈಡ್ರಾಮಾ: ಸಿಂಧಿಯಾ ಗುಂಪಿನಲ್ಲಿ ಬಿರುಕು

ಭೋಪಾಲ್, ಮಾ.11: ಜ್ಯೋತಿರಾಧಿತ್ಯ ಸಿಂಧಿಯಾ ರಾಜೀನಾಮೆಯಿಂದಾಗಿ ಕಮಲ್‌ನಾಥ್ ಸರಕಾರ ಅಲ್ಪಮತಕ್ಕೆ ಕುಸಿದಿದ್ದು ಮಧ್ಯಪ್ರದೇಶದಲ್ಲಿ ರಾಜಕೀಯ ಹೈಡ್ರಾಮಾ ನಡೆದಿತ್ತು. ಆದರೆ ಸಿಂಧಿಯಾ ಬಿಜೆಪಿ ಸೇರ್ಪಡೆಗೆ ಅವರ ಗುಂಪಿನಲ್ಲೇ ಅಪಸ್ವರ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ. ಕಾಂಗ್ರೆಸ್ ನ 19ಕ್ಕೂ ಹೆಚ್ಚು ಶಾಸಕರು ಮಧ್ಯಪ್ರದೇಶದಿಂದ ಬೆಂಗಳೂರಿಗೆ ಬಂದು ವಾಸ್ತವ್ಯ ಹೂಡಿದ್ದಾರೆ. ನಿನ್ನೆ ಸಿಂಧಿಯಾ ಅವರು ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ ಎಂಬ ವಿಚಾರ ಇದೀಗ ಸಿಂಧಿಯಾ ಕ್ಯಾಂಪ್ ನಲ್ಲಿ ಬಿರುಕಿಗೆ ಕಾರಣವಾಗಿದೆ ಎನ್ನಲಾಗಿದೆ. ಮಧ್ಯಪ್ರದೇಶ ಕಾಂಗ್ರೆಸ್‌ನ ಪ್ರಮುಖ ಮೂಲಗಳ ಪ್ರಕಾರ,

ಮಧ್ಯೆಪ್ರದೇಶ ರಾಜಕೀಯ ಹೈಡ್ರಾಮಾ: ಸಿಂಧಿಯಾ ಗುಂಪಿನಲ್ಲಿ ಬಿರುಕು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಭಾರತದಲ್ಲಿ ಕೊರೋನ ಪೀಡಿತರ 62ಕ್ಕೆ ಏರಿಕೆ

ಹೊಸದಿಲ್ಲಿ, ಮಾ.11: ಭಾರತದಲ್ಲಿ ದಿನೇ ದಿನೇ ಕೊರೋನ ಭೀತಿ ಹೆಚ್ಚಾಗುತ್ತಲೇ ಇದ್ದು, ಮತ್ತೆ 14 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಪೈಕಿ 8 ಪ್ರಕರಣಗಳು ಕೇರಳದಲ್ಲಿ, ಕರ್ನಾಟಕದಲ್ಲಿ 3 ಹಾಗೂ ಮಹಾರಾಷ್ಟ್ರದ ಪುಣೆಯಲ್ಲಿ 3 ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ದೇಶದಲ್ಲಿ ಕೊರೋನ ಪೀಡಿತರ ಸಂಖ್ಯೆ 62ಕ್ಕೆ ಏರಿಕೆಯಾಗಿದೆ. ಒಂದೇ ದಿನ ಇಷ್ಟು ದೊಡ್ಡ ಪ್ರಮಾಣದಲ್ಲಿ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗಿರುವುದು ಸಹಜವಾಗಿಯೇ ದೇಶದಾದ್ಯಂತ, ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳಲ್ಲಿ ಆತಂಕವನ್ನು ಹುಟ್ಟುಹಾಕಿದೆ. ಮಂಗಳವಾರ 8 ಹೊಸ

ಭಾರತದಲ್ಲಿ ಕೊರೋನ ಪೀಡಿತರ 62ಕ್ಕೆ ಏರಿಕೆ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಭಾರೀ ಇಳಿಕೆ

ಹೊಸದಿಲ್ಲಿ, ಮಾ.11: ವಿಶ್ವಾದ್ಯಂತ ಕೊರೊನಾ ವೈರಸ್ ಪ್ರಭಾವ, ಸೌದಿ-ರಷ್ಯಾ ತೈಲ ದರ ಸಮರದ ಕಾರಣದಿಂದ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಉಂಟಾಗಿರುವ ಭಾರೀ ಕುಸಿತದ ಪರಿಣಾಮದಿಂದ ದೇಶದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಗಳಲ್ಲಿ ಭಾರೀ ಇಳಿಕೆ ಉಂಟಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರದಲ್ಲಿ 2.69 ರೂಪಾಯಿಗಳಷ್ಟು ಇಳಿಕೆಯಾಗಿದ್ದು ಡಿಸೇಲ್ ದರ 2.33 ರೂಪಾಯಿಗಳಷ್ಟು ಇಳಿದಿದೆ. ಬುಧವಾರದಂದು ದೆಹಲಿಯಲ್ಲಿ ಪೆಟ್ರೋಲ್ ದರ ಪ್ರತೀ ಲೀಟರ್ ಗೆ 70.29 ಇದ್ದರೆ ಡಿಸೇಲ್ ದರ ಪ್ರತೀ ಲೀಟರ್ ಗೆ 63.01 ರೂಪಾಯಿಗಳಾಗಿತ್ತು.

ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಭಾರೀ ಇಳಿಕೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

Breaking news ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್‌ಗೆ ಗುಡ್ ಬೈ

ಹೊಸದಿಲ್ಲಿ, ಮಾ.10: ಮಧ್ಯಪ್ರದೇಶ ಕಾಂಗ್ರೆಸ್‌ನ ಪ್ರಭಾವಿ ಯುವ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕಾಂಗ್ರೆಸ್ ಪಕ್ಷದಲ್ಲಿನ ತನ್ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸಿಂಧಿಯಾ ಅವರು ತಮ್ಮ ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂ‍ಧಿ ಅವರಿಗೆ ಕಳುಹಿಸಿಕೊಟ್ಟಿದ್ದಾರೆ. ಹೊಸದಿಲ್ಲಿಯಲ್ಲಿ ಇಂದು ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ಈ ಅಚ್ಚರಿಯ ಬೆಳವಣಿಗೆ ನಡೆದಿದೆ. ಜ್ಯೋತಿರಾದಿತ್ಯ ಸಿಂಧಿಯಾ ಅವರ

Breaking news ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್‌ಗೆ ಗುಡ್ ಬೈ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೇರಳದ ಒಂದೇ ಕುಟುಂಬದ ಐವರಿಗೆ ಕೊರೋನ ವೈರಸ್ ಪತ್ತೆ

ಭಾರತದಲ್ಲಿ ಕೊರೋನ ಪೀಡಿತರ ಸಂಖ್ಯೆ 39ಕ್ಕೇರಿಕೆ ತಿರುವನಂತಪುರಂ, ಮಾ.8: ಕೇರಳದ ಒಂದೇ ಕುಟುಂಬದ ಐವರಿಗೆ ಕೊರೋನ ಸೋಂಕು ತಗುಲಿರುವ ಕುರಿತು ಆರೋಗ್ಯ ಸಚಿವೆ ಕೆ.ಕೆ ಶೈಲಜಾ ಖಚಿತಪಡಿಸಿದ್ದಾರೆ. ಆ ಮೂಲಕ ದೇಶದಲ್ಲಿ ಒಟ್ಟಾರೆಯಾಗಿ 39 ಜನರಿಗೆ ವೈರಸ್ ತಗುಲಿರುವುದು ಧೃಡಪಟ್ಟಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ. ಇತ್ತೀಚಿಗಷ್ಟೇ ಕೇರಳದ ಮೂವರು ವ್ಯಕ್ತಿಗಳು ಇಟಲಿಗೆ ತೆರಳಿ ಹಿಂದಿರುಗಿದ್ದರು. ಇವರಿಂದ ಇಬ್ಬರು ಸಂಬಂಧಿಕರಿಗೂ ಕೂಡ ಸೋಂಕು ತಗುಲಿದೆ ಎಂದು ಆರೋಗ್ಯ ಸಚಿವೆ ಶೈಲಜಾ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ. ಇಟಲಿಗೆ ತೆರಳಿದ್ದ ವ್ಯಕ್ತಿಗಳು

ಕೇರಳದ ಒಂದೇ ಕುಟುಂಬದ ಐವರಿಗೆ ಕೊರೋನ ವೈರಸ್ ಪತ್ತೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top