ರಾಷ್ಟ್ರೀಯ ನ್ಯೂಸ್

 ಎ.30ರವರೆಗೆ ಲಾಕ್ ಡೌನ್ ಮುಂದುವರಿಕೆ: ಒಡಿಶಾ ಸಿಎಂ ಘೋಷಣೆ

ಹೊಸದಿಲ್ಲಿ, ಎ.9: ಕೊರೋನ ವೈರಸ್ ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿರುವ 21 ದಿನಗಳ ಲಾಕ್ ಡೌನ್ ಎಪ್ರಿಲ್ 14ರಂದು ಅಂತ್ಯಗೊಳ್ಳಲಿದೆ. ಏತನ್ಮಧ್ಯೆ ದೇಶಾದ್ಯಂತ ಲಾಕ್ ಡೌನ್ ಮುಂದುವರಿಯಲಿದೆಯೇ ಎಂಬ ಜಿಜ್ಞಾಸೆ ಮೂಡಿದೆ. ಮತ್ತೊಂದೆಡೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಎಪ್ರಿಲ್ 30ರವರೆಗೆ ಲಾಕ್ ಡೌನ್ ಮುಂದುವರಿಸುವಂತೆ ಆದೇಶ ಹೊರಡಿಸಿದ್ದಾರೆ ಎಂದು ವರದಿ ತಿಳಿಸಿದೆ. ಕೋವಿಡ್ 19 ವೈರಸ್ ಕ್ಷಿಪ್ರವಾಗಿ ಹರಡುತ್ತಿರುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ರಾಜ್ಯಗಳ ಮುಖ್ಯಮಂತ್ರಿ ಜತೆ ವಿಡಿಯೋ ಕಾನ್ಫರೆನ್ಸ್ […]

 ಎ.30ರವರೆಗೆ ಲಾಕ್ ಡೌನ್ ಮುಂದುವರಿಕೆ: ಒಡಿಶಾ ಸಿಎಂ ಘೋಷಣೆ Read More »

ರಾಷ್ಟ್ರೀಯ ನ್ಯೂಸ್

24 ಗಂಟೆಯಲ್ಲಿ ವಿಶ್ವದಾದ್ಯಂತ 84,000ಕ್ಕೂ ಹೆಚ್ಚು ಕೊರೋನ ಪ್ರಕರಣ ದೃಢ

ಹೊಸದಿಲ್ಲಿ, ಎ.9: ಬುಧವಾರ ಒಂದೇ ದಿನ  84,000ಕ್ಕೂ ಹೆಚ್ಚು ಕೊರೋನ ಧನಾತ್ಮಕ ಪ್ರಕರಣಗಳು ವಿಶ್ವದಾದ್ಯಂತ ವರದಿಯಾಗಿದ್ದು, ಒಟ್ಟು ಪ್ರಕರಣಗಳು 1.5 ಮಿಲಿಯನ್ ದಾಟಿದೆ. ಕರೋನ ವೈರಸ್‌ನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 88,502ರಷ್ಟಿದೆ. ನಿನ್ನೆ ಒಂದೇ ದಿನದಲ್ಲಿ ಅಮೆರಿಕಾದಲ್ಲಿ ಹೆಚ್ಚಿನ ಸಂಖ್ಯೆಯ ಕೋವಿಡ್ -19 ಪ್ರಕರಣ ಅಂದರೆ 31,935 ಕರೋನ ವೈರಸ್ ದೃಢಪಟ್ಟಿರುವ ಬಗ್ಗೆ ವರದಿಯಾಗಿದೆ. ಈಗಾಗಲೇ ಅಮೆರಿಕಾದಲ್ಲಿ 4,35,128 ಮಂದಿಯಲ್ಲಿ ಕೊರೋನಾ ಪತ್ತೆಯಾಗಿದ್ದು, ಮೃತರ ಸಂಖ್ಯೆ 14,795ಕ್ಕೆ ಏರಿಕೆಯಾಗಿದೆ. ಸ್ಪೇನ್ನಲ್ಲಿ 148,220 ಪ್ರಕರಣಗಳು ಮತ್ತು 14,792 ಸಾವುಗಳು ವರದಿಯಾಗಿದೆ.

24 ಗಂಟೆಯಲ್ಲಿ ವಿಶ್ವದಾದ್ಯಂತ 84,000ಕ್ಕೂ ಹೆಚ್ಚು ಕೊರೋನ ಪ್ರಕರಣ ದೃಢ Read More »

ಅಂತರ್ರಾಷ್ಟ್ರೀಯ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಲಯಾಳಂ ಹಾಸ್ಯ ನಟ ಶಶಿ ಕಳಿಂಗ ನಿಧನ

ಕೋಝಿಕ್ಕೋಡ್, ಎ.7: ರಂಗಭೂಮಿಯ ಜನಪ್ರಿಯ ನಟ, ಮಲಯಾಳಂ ಚಿತ್ರರಂಗದ ಖ್ಯಾತ ಹಾಸ್ಯ ನಟ ಶಶಿ ಕಳಿಂಗ ಅಲಿಯಾಸ್ ವಿ. ಚಂದ್ರಕುಮಾರ್ (59) ಮಂಗಳವಾರ ಮುಂಜಾನೆ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ. 2009ರಲ್ಲಿ ಬಿಡುಗಡೆಯಾದ ಕೇರಳ ಕೆಫೆ ಸಿನಿಮಾದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದರು. ಈ ವರೆಗೆ ಸುಮಾರು 30 ಮಲಯಾಳಂ ಸಿನಿಮಾದಲ್ಲಿ ನಟಿಸಿದ್ದರು. 2010ರಲ್ಲಿ ಬಿಡುಗಡೆಯಾಗಿದ್ದ ‘‘ಪ್ರಾಂಚಿಯೆಟ್ಟನ್ ಆ್ಯಂಡ್ ದ ಸೈಂಟ್’’ ಸಿನಿಮಾದಲ್ಲಿ ಕಾಳಿಂಗ ನಟನೆ ಅತ್ಯುತ್ತಮವಾಗಿತ್ತು. ಈ ಸಿನಿಮಾದಲ್ಲಿ ಸೂಪರ್

ಮಲಯಾಳಂ ಹಾಸ್ಯ ನಟ ಶಶಿ ಕಳಿಂಗ ನಿಧನ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಲಾಕ್‌ಡೌ‌ನ್ ಎಫೆಕ್ಟ್: ಎಪ್ರಿಲ್ 30ರವರೆಗೂ ಬುಕ್ಕಿಂಗ್ ಸ್ಥಗಿತಗೊಳಿಸಿದ ಏರ್ ಇಂಡಿಯಾ

ಹೊಸದಿಲ್ಲಿ, ಎ.4: ಕೊರೋನ ನಿಗ್ರಹಕ್ಕೆ ಘೋಷಿಸಲಾಗಿದ್ದ ಎ.14ರವರೆಗಿನ ಎಲ್ಲಾ ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಯಾನ ಸೇವೆಗಳನ್ನು ಇತ್ತೀಚೆಗೆ ನಿರ್ಬಂಧಿಸಲಾಗಿತ್ತು. ಆದರೆ, ಮಹತ್ವದ ಬೆಳವಣಿಗೆಯೊಂದರಲ್ಲಿ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ತನ್ನ ದೇಶೀಯ ಮತ್ತು ಅಂತರಾಷ್ಟ್ರೀಯ ಹಾರಾಟಗಳಿಗೆ ಟಿಕೆಟ್ ಬುಕ್ಕಿಂಗ್ ನಿಷೇಧವನ್ನು ಏ.30ರವರೆಗೂ ವಿಸ್ತರಿಸಿದೆ. ಇದು ಲಾಕ್ ಲೌನ್ ಅವಧಿಯ ಬಳಿಕವೂ ಮತ್ತೆ ಒಂದು ವಾರದ ಅವಧಿಯಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಮತ್ತಷ್ಟು ದಿನಗಳ ಕಾಲ ಎಲ್ಲಾ ರೀತಿಯ ವಿಮಾನಯಾನ ಸೇವೆಗಳನ್ನು ನಿಷೇಧಿಸಬಹುದು ಎಂಬ ವದಂತಿಗಳು ಹರಡಲು ಆರಂಭವಾಗಿದೆ.

ಲಾಕ್‌ಡೌ‌ನ್ ಎಫೆಕ್ಟ್: ಎಪ್ರಿಲ್ 30ರವರೆಗೂ ಬುಕ್ಕಿಂಗ್ ಸ್ಥಗಿತಗೊಳಿಸಿದ ಏರ್ ಇಂಡಿಯಾ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ನೀಟ್​ ಪಠ್ಯಕ್ರಮದಲ್ಲಿ ಬದಲಾವಣೆಯಿಲ್ಲ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಸ್ಪಷ್ಟನೆ

ಹೊಸದಿಲ್ಲಿ, ಎ.4: ವೈದ್ಯಕೀಯ ಪದವಿ ಕೋರ್ಸ್​ಗಳಿಗೆ ಪ್ರವೇಶ ಬಯಸುವ ಆಕಾಂಕ್ಷಿಗಳು ಬರೆಯಬೇಕಾದ ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ (ನೀಟ್​) ಪಠ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ಪರೀಕ್ಷೆಗಳನ್ನು ಸಂಘಟಿಸುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್​ಟಿಎ) ಸ್ಪಷ್ಟಪಡಿಸಿದೆ. ಪಠ್ಯಕ್ರಮ ಬದಲಾಗಿದೆ ಎಂದು ಸುದ್ದಿ ಹರಿದಾಡುತ್ತಿರುವುದು ಏಜೆನ್ಸಿ ಗಮನಕ್ಕೆ ಬಂದಿದೆ. ಇಂಥ ಸುಳ್ಳು ಸುದ್ದಿಗಳನ್ನು ನಂಬಬಾರದು ಎಂದು ಎಜೆನ್ಸಿ ಮನವಿ ಮಾಡಿದೆ. ಇಷ್ಟಕ್ಕೂ ಎನ್​ಟಿಎ ಪಠ್ಯಕ್ರಮವನ್ನು ನಿರ್ಧರಿಸುವ ಸಂಸ್ಥೆಯಲ್ಲ. ಭಾರತೀಯ ವೈದ್ಯಕೀಯ ಮಂಡಳಿ ರೂಪಿಸುವ ಪಠ್ಯಕ್ರಮದ ಲಿಂಕ್​ಅನ್ನು ಮಾತ್ರ ಎನ್​ಟಿಎ

ನೀಟ್​ ಪಠ್ಯಕ್ರಮದಲ್ಲಿ ಬದಲಾವಣೆಯಿಲ್ಲ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಸ್ಪಷ್ಟನೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೊರೋನ ವಿರುದ್ಧ ಹೋರಾಟಕ್ಕೆ ರಾಜ್ಯಗಳಿಗೆ 11,092 ಕೋ.ರೂ.ನೆರವು ನೀಡಿದ ಕೇಂದ್ರ

ಹೊಸದಿಲ್ಲಿ, ಎ.4: ಕೊರೋನ ವೈರಸ್ ಹರಡುವಿಕೆಯನ್ನು ಪರಿಶೀಲಿಸಲು, ಕ್ವಾರಂಟೈನ್ ಸೌಲಭ್ಯಗಳ ಸ್ಥಾಪನೆ ಸಹಿತ ಇತರ ಸೌಲಭ್ಯಗಳನ್ನು ಒದಗಿಸಲು ರಾಜ್ಯ ವಿಪತ್ತು ಅಪಾಯ ನಿರ್ವಹಣಾ ನಿಧಿ(ಎಸ್‌ಡಿಆರ್‌ಎಂಎಫ್)ಅಡಿ ಎಲ್ಲ ರಾಜ್ಯಗಳಿಗೆ 11,092 ಕೋ.ರೂ.ವನ್ನು ಬಿಡುಗಡೆ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಅನುಮೋದನೆ ನೀಡಿದ್ದಾರೆ.   ಗುರುವಾರ ವೀಡಿಯೊ ಕಾನ್ಫರೆನ್ಸ್ ವೇಳೆ ಮುಖ್ಯಮಂತ್ರಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ನಿಧಿಗೆ ಅನುಮೋದನೆ ನೀಡಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ. 2020-21ರ ಎಸ್‌ಡಿಆರ್‌ಎಂಎಫ್‌ನ ಮೊದಲ ಕಂತಿನ

ಕೊರೋನ ವಿರುದ್ಧ ಹೋರಾಟಕ್ಕೆ ರಾಜ್ಯಗಳಿಗೆ 11,092 ಕೋ.ರೂ.ನೆರವು ನೀಡಿದ ಕೇಂದ್ರ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಭಾರತದಲ್ಲಿ ಮುಂದುವರಿದ ಕೊರೋನ ರೌದ್ರನರ್ತನ: ಸೋಂಕಿತರ ಸಂಖ್ಯೆ 2301ಕ್ಕೆ ಏರಿಕೆ

ಹೊಸದಿಲ್ಲಿ, ಎ.3: ಚೀನಾದ ವುಹಾನ್ ನಲ್ಲಿ ಕಾಣಿಸಿಕೊಂಡು ನಂತರ ವಿಶ್ವಾದ್ಯಂತ ಹರಡಿ ಸುಮಾರು 50ಸಾವಿರಕ್ಕೂ ಮಂದಿಯನ್ನು ಈವರೆಗೆ ಬಲಿ ಪಡೆದಿರುವ ಕೊರೋನ ವೈರಸ್ ಭಾರತದಲ್ಲಿ ತನ್ನ ರೌದ್ರ ನರ್ತನವನ್ನು ಮುಂದುವರಿಸಿದ್ದು, ಈವರೆಗೂ ಸೋಂಕಿತರ ಸಂಖ್ಯೆ 2,301ಕ್ಕೆ ಏರಿಕೆಯಾಗಿದೆ. ಮಹಾಮಾರಿ ಕೊರೋನ ಈ ವರೆಗೂ ಓರ್ವ ವಲಸಿಗ ಸೇರಿದಂತೆ ಒಟ್ಟು 56 ಮಂದಿಯನ್ನು ಬಲಿಪಡೆದುಕೊಂಡಿದೆ. 2,301 ಮಂದಿಯಲ್ಲಿ ವೈರಸ್ ದೃಢಪಟ್ಟಿದ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ರಾಜಸ್ತಾನ ಒಂದೇ ರಾಜ್ಯದಲ್ಲು ಶುಕ್ರವಾರ

ಭಾರತದಲ್ಲಿ ಮುಂದುವರಿದ ಕೊರೋನ ರೌದ್ರನರ್ತನ: ಸೋಂಕಿತರ ಸಂಖ್ಯೆ 2301ಕ್ಕೆ ಏರಿಕೆ Read More »

ರಾಷ್ಟ್ರೀಯ ನ್ಯೂಸ್

ಕೋರ್ಟ್ ಗೆ ಹೋಗಿದ್ದ ತನ್ನನ್ನು ನಿಝಾಮುದ್ದೀನ್ ಪ್ರಕರಣಕ್ಕೆ ತಳುಕು ಹಾಕಬೇಡಿ ➤ ಉಪ್ಪಿನಂಗಡಿಯ ವಕೀಲರಿಂದ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಎ.01. ದೆಹಲಿಯ ನಿಝಾಮುದ್ದೀನ್ ಮಸೀದಿಯಲ್ಲಿ ನಡೆದ ಧಾರ್ಮಿಕ ಸಮಾವೇಶದಲ್ಲಿ ಉಪ್ಪಿನಂಗಡಿಯ ವ್ಯಕ್ತಿ ಭಾಗವಹಿಸಿದ ಬಗ್ಗೆ ಪ್ರಕಟವಾಗುತ್ತಿರುವ ವರದಿಯ ಬಗ್ಗೆ ಸ್ವತಃ ವಕೀಲರಾಗಿರುವ ಶಂಕಿತ ವ್ಯಕ್ತಿಯೇ ಸ್ಪಷ್ಟನೆ ನೀಡಿದ್ದು, ಮಾಧ್ಯಮದ ವರದಿಯು ಕಪೋಲಕಲ್ಪಿತವಾಗಿದೆ ಎಂದಿದ್ದಾರೆ. ತಾನು ನ್ಯಾಯವಾದಿಯಾಗಿದ್ದು ಸುಪ್ರಿಂಕೋರ್ಟ್ ನಲ್ಲಿ ವ್ಯವಹರಿಸುವ ಸಲುವಾಗಿ ದೆಹಲಿಗೆ ಹೋಗಿದ್ದು, ಅಲ್ಲಿ ಕೊರೋನಾ ತಪಾಸಣೆ ನಡೆಸುವ ದೃಶ್ಯದಲ್ಲಿ ತನ್ನ ಪೋಟೋ ಇದ್ದು ಹಿಂದಿ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಕಳೆದ ಹನ್ನೆರಡು ದಿನಗಳ ಹಿಂದೆ ದೆಹಲಿಯಿಂದ ವಿಮಾನ ಮೂಲಕ ಬೆಂಗಳೂರಿಗೆ

ಕೋರ್ಟ್ ಗೆ ಹೋಗಿದ್ದ ತನ್ನನ್ನು ನಿಝಾಮುದ್ದೀನ್ ಪ್ರಕರಣಕ್ಕೆ ತಳುಕು ಹಾಕಬೇಡಿ ➤ ಉಪ್ಪಿನಂಗಡಿಯ ವಕೀಲರಿಂದ ಸ್ಪಷ್ಟನೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವಿದ್ಯುತ್ ಬಳಕೆದಾರರಿಗೆ ಶುಭ ಸುದ್ದಿ ➤ 3 ತಿಂಗಳ ಕಾಲ ವಿದ್ಯುತ್ ಬಿಲ್ ಕಟ್ಟಬೇಕಾಗಿಲ್ಲ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಮಾ. 28. ದೇಶದಾದ್ಯಂತ ಲಾಕ್ ಡೌನ್ ಕಾರಣದಿಂದಾಗಿ ಬಳಕೆದಾರರಿಗೆ ಮೂರು ತಿಂಗಳುಗಳ ವಿದ್ಯುತ್ ಬಿಲ್ ವಿನಾಯಿತಿ ನೀಡುವಂತೆ ಕೇಂದ್ರ ಸರಕಾರ ಎಲ್ಲಾ ರಾಜ್ಯ ಸರಕಾರಗಳಿಗೆ ಸೂಚನೆ ನೀಡಿದೆ. ವಿದ್ಯುತ್ ಉಚಿತವಲ್ಲದ ಕಾರಣ ಮೂರು ತಿಂಗಳ ಬಳಿಕ ವಿದ್ಯುತ್ ಬಿಲ್ ಕಟ್ಟಬೇಕು, ಮೂರು ತಿಂಗಳು ಕಳೆದು ಬಿಲ್ ಕಟ್ಟಿದವರಿಗೆ ಯಾವುದೇ ದಂಡ ವಿಧಿಸಬಾರದು ಎಂದು ಕೇಂದ್ರ ಸರಕಾರ ಸ್ಪಷ್ಟನೆ ನೀಡಿದೆ.

ವಿದ್ಯುತ್ ಬಳಕೆದಾರರಿಗೆ ಶುಭ ಸುದ್ದಿ ➤ 3 ತಿಂಗಳ ಕಾಲ ವಿದ್ಯುತ್ ಬಿಲ್ ಕಟ್ಟಬೇಕಾಗಿಲ್ಲ Read More »

ರಾಷ್ಟ್ರೀಯ ನ್ಯೂಸ್

ಕೇರಳದಲ್ಲಿ ಕೊರೋನ ಸೋಂಕಿಗೆ ಮೊದಲ ಬಲಿ

(ನ್ಯೂಸ್ ಕಡಬ) newskadaba.com ಕೊಚ್ಚಿ, ಮಾ.28. ಕೊರೋನ ವೈರಸ್ ಗೆ ಬೆಚ್ಚಿಬಿದ್ದಿರುವ ಕೇರಳದಲ್ಲಿ ಕೊರೋನಾ ಸೋಂಕಿಗೆ ಮೊದಲನೇ ಬಲಿಯಾಗಿದೆ‌. ದುಬೈಯಿಂದ ಹುಟ್ಟೂರಿಗೆ ವಾಪಸಾಗಿದ್ದ ಕೊಚ್ಚಿ ಮೂಲದ 69 ವರ್ಷದ ವೃದ್ಧರೊಬ್ಬರನ್ನು ನ್ಯುಮೋನಿಯಾ ಬಾಧಿಸಿದ ಹಿನ್ನೆಲೆಯಲ್ಲಿ ಮಾರ್ಚ್ 22 ರಂದು ಆಸ್ಪತ್ರೆಗೆ ದಾಖಲಾಗಿತ್ತು. ಹೃದಯ ರೋಗದೊಂದಿಗೆ ಅಧಿಕ ರಕ್ತದೊತ್ತಡ ಸಮಸ್ಯೆ ಎದುರಿಸುತ್ತಿದ್ದ ಅವರು ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅದರೊಂದಿಗೆ ಕೊರೋನಾ ವಕ್ಕರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಕೇರಳದಲ್ಲಿ ಕೊರೋನ ಸೋಂಕಿಗೆ ಮೊದಲ ಬಲಿ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top