ಜಿಲ್ಲೆಯಲ್ಲಿ ಬಾಕಿಯಾಗಿರುವ ವಲಸೆ ಕಾರ್ಮಿಕರು ಹುಟ್ಟೂರಿಗೆ ➤ ಜಾರ್ಖಂಡ್ ಗೆ ಹೊರಟಿತು ಮಂಗಳೂರಿನಿಂದ ವಿಶೇಷ ರೈಲು
(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.10. ಕೊರೊನಾದಿಂದಾಗಿ ಲಾಕ್‌ಡೌನ್ ಆದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಸಿಲುಕಿರುವ ಹೊರ ಊರಿನ ಕಾರ್ಮಿಕರನ್ನು ತಮ್ಮ ಊರಿಗೆ ಕಳುಹಿಸುವ ಕಾರ್ಯ ಆರಂಭಗೊಂಡಿದ್ದು, ಮಂಗಳೂರಿನಿಂದ ಜಾರ್ಖಂಡ್ ಗೆ 1000 ಪ್ರಯಾಣಿಕರನ್ನು ಹೊತ್ತ ಮೊದಲ ರೈಲು ಶನಿವಾರದಂದು ಹೊರಟಿದೆ. ಲಾಕ್‌ಡೌನ್ ನಿಂದಾಗಿ ಬೇರೆ ಬೇರೆ ರಾಜ್ಯದ ವಲಸೆ ಕಾರ್ಮಿಕರು ಮಂಗಳೂರಿನಲ್ಲೇ ಬಾಕಿಯಾಗಿದ್ದು, ಕಾರ್ಮಿಕರಿಗೆ ಮರಳಿ ಊರಿಗೆ ತೆರಳಲು ದಕ್ಷಿಣ ಕನ್ನಡ ಜಿಲ್ಲಾಡಳಿತವು ರೈಲಿನ ವ್ಯವಸ್ಥೆ ಮಾಡುತ್ತಿದೆ. ರೈಲಿನ ಮೂಲಕ ಪ್ರಯಾಣಿಸಲು ಸೇವಾ ಸಿಂಧು ಆ್ಯಪ್ ಮೂಲಕ […]








