ರಾಷ್ಟ್ರೀಯ ನ್ಯೂಸ್

ಭಾರತದಲ್ಲಿ ಕೊರೋನಾಗೆ 19 ಸಾವಿರದ 693 ಸಾವು ➤ ರಷ್ಯಾವನ್ನು ಹಿಂದಿಕ್ಕಿರುವ ಭಾರತ.!!!

(ನ್ಯೂಸ್ ಕಡಬ) newskadaba.com ನವದೆಹಲಿ, ಜು.06.,ಭಾರತದಲ್ಲಿ ಕೊರೋನ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕಳೆದ 24 ಗಂಟೆಗಳಲ್ಲಿ 24 ಸಾವಿರದ 248 ಹೊಸ ಪ್ರಕರಣಗಳು ವರದಿಯಾಗಿದ್ದು 425 ಮಂದಿಯನ್ನು ಬಲಿ ತೆಗೆದು ಕೊಂಡಿದೆ. 6,97,413 ಪಾಸಿಟಿವ್ ಕೇಸುಗಳಿದ್ದು ಅವುಗಳಲ್ಲಿ 2,53,287 ಸಕ್ರಿಯ ಕೇಸುಗಳಾಗಿವೆ, 4,24,433 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದುವರೆಗೆ ಭಾರತದಲ್ಲಿ ಒಟ್ಟು 19 ಸಾವಿರದ 693 ಸಾವು ಸಂಭವಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿ ಅಂಶ ತಿಳಿಸಿದೆ. ಕೋವಿಡ್-19 […]

ಭಾರತದಲ್ಲಿ ಕೊರೋನಾಗೆ 19 ಸಾವಿರದ 693 ಸಾವು ➤ ರಷ್ಯಾವನ್ನು ಹಿಂದಿಕ್ಕಿರುವ ಭಾರತ.!!! Read More »

ರಾಷ್ಟ್ರೀಯ ನ್ಯೂಸ್

ತಯಾರಾಯ್ತು 2.89 ಲಕ್ಷ ಮೌಲ್ಯದ ಚಿನ್ನದ ಮಾಸ್ಕ್.!!

(ನ್ಯೂಸ್ ಕಡಬ) newskadaba.com., ಮುಂಬೈ.ಜು.04., ಮಹಾಮಾರಿ ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಸ್ಯಾನಿಟೈಸರ್ ಹಾಗೂ ಮಾಸ್ಕ್ ಬಳಕೆ ಕಡ್ಡಾಯ ಮಾಡಲಾಗಿದೆ. ಇದೀಗ ವ್ಯಕ್ತಿಯೊಬ್ಬರು 2.89 ಲಕ್ಷ ಬೆಲೆ ಬಾಳುವ ಮಾಸ್ಕ್ ತಯಾರಿಸಿ ಅದನ್ನು ಧರಿಸುವ ಮೂಲಕ ಸುದ್ದಿಯಾಗಿದ್ದಾರೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪಿಂಪ್ರಿ ಚಿಂಚ್ವಾಡ್ ನಿವಾಸಿ ಶಂಕರ್ ಕುರಡೆ ಎಂಬವರು 2.89 ಲಕ್ಷ ಮೌಲ್ಯದ ಮಾಸ್ಕ್ ತಯಾರಿಸಿ, ತಾನೇ ಧರಿಸಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಬಗ್ಗೆ ಮಾತನಾಡಿರುವ ಶಂಕರ್, ಈ

ತಯಾರಾಯ್ತು 2.89 ಲಕ್ಷ ಮೌಲ್ಯದ ಚಿನ್ನದ ಮಾಸ್ಕ್.!! Read More »

ರಾಷ್ಟ್ರೀಯ ನ್ಯೂಸ್

ನಭೋ ಮಂಡಲದಲ್ಲಿ ಚಂದ್ರನ ಕೌತುಕ ➤ ಜುಲೈ5ರಂದು ಚಂದ್ರಗ್ರಹಣ

(ನ್ಯೂಸ್ ಕಡಬ) newskadaba.com ನವದೆಹಲಿ,ಜು.04: ಮತ್ತೊಮ್ಮೆ ನಭೋ ಮಂಡಲದಲ್ಲಿ ಕೌತುಕಗೊಳ್ಳಲಿದೆ.ಇತ್ತೀಚೆಗಷ್ಟೇ ಬಾನಂಗಳದಲ್ಲಿ ಕಂಕಣ ಸೂರ್ಯಗ್ರಹಣ ಸಂಭವಿಸಿತ್ತು. ಇದೀಗ ಪ್ರಸಕ್ತ ವರ್ಷದ ಮೂರನೇ ತೆಳು ಛಾಯೆಯ ಚಂದ್ರಗ್ರಹಣ ಜುಲೈ 5ರ ಭಾನುವಾರ ಸಂಭವಿಸಲಿದೆ. 2020ರಲ್ಲಿ ಎರಡು ಬಾರಿ ಚಂದ್ರಗ್ರಹಣ, ಒಂದು ಬಾರಿ ಸೂರ್ಯಗ್ರಹಣ ಗೋಚರಿಸಿದ್ದು, ನಾಲ್ಕನೇ ಗ್ರಹಣ ಜುಲೈ 5ರಂದು ಗೋಚರಿಸಲಿದೆ. ಇದು ಆಫ್ರಿಕಾ, ಉತ್ತರ ಅಮೆರಿಕಾ, ಫೆಸಿಫಿಕ್, ಅಟ್ಲಾಂಟಿಕ್, ಅಂಟಾರ್ಟಿಕಾದಲ್ಲಿ ಹೆಚ್ಚು ಗೋಚರವಾಗಲಿದೆ.ಜುಲೈ 5ರ ಭಾನುವಾರ ಸಂಭವಿಸುವ ತೆಳುಛಾಯೆ ಚಂದ್ರಗ್ರಹಣ ಬೆಳಗ್ಗೆ 8.37ಕ್ಕೆ ಆರಂಭವಾಗಿ 11.22ಕ್ಕೆ ಗ್ರಹಣ

ನಭೋ ಮಂಡಲದಲ್ಲಿ ಚಂದ್ರನ ಕೌತುಕ ➤ ಜುಲೈ5ರಂದು ಚಂದ್ರಗ್ರಹಣ Read More »

ಕರಾವಳಿ, ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಕೊರೊನಾ ರಣಕೇಕೆ ➤ ಮೂರನೇ ಸ್ಥಾನದತ್ತ ಮುನ್ನುಗ್ಗುತ್ತಿರುವ ಭಾರತ!

(ನ್ಯೂಸ್ ಕಡಬ) newskadaba.com ನವದೆಹಲಿ, ಜು.03., ದೇಶದಲ್ಲಿ ಕೊರೊನಾ ಸೋಂಕು ಅಬ್ಬರಿಸಿ ರಣಕೇಕೆ ಹಾಕುತ್ತಿದೆ. ಪ್ರತಿ ನಿತ್ಯ ಸರಿ ಸುಮಾರು 20 ಸಾವಿರ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಹೀಗೆ ಹೆಚ್ಚಾಗುತ್ತಿರುವ ಸೋಂಕು ಭಾರತವನ್ನು ಇನ್ನು ಮೂರೇ ದಿನದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂನರೇ ಸ್ಥಾನಕ್ಕೆ ತಂದು ನಿಲ್ಲಿಸುವ ಎಲ್ಲಾ ಲಕ್ಷಣಗಳು ದಟ್ಟವಾಗಿವೆ. ಹೌದು. ದೇಶದಲ್ಲಿ ಹಬ್ಬುತ್ತಿರುವ ಮಹಾಮಾರಿ ಸೋಂಕು ಭಾರತವನ್ನು ಕೊರೊನಾ ಪೀಡಿತ ರಾಷ್ಟ್ರಗಳಲ್ಲಿ ಅಗ್ರಗಣ್ಯ ಸ್ಥಾನಕ್ಕೆ ಕರೆದೊಯ್ಯುತ್ತಿದೆ. ದೇಶದಲ್ಲಿ ಸೋಂಕು ಹಬ್ಬುತ್ತಿರುವ ವೇಗ ಹೆಚ್ಚಾಗಿದ್ದು ಪ್ರತಿದಿನ 20 ಸಾವಿರ

ಕೊರೊನಾ ರಣಕೇಕೆ ➤ ಮೂರನೇ ಸ್ಥಾನದತ್ತ ಮುನ್ನುಗ್ಗುತ್ತಿರುವ ಭಾರತ! Read More »

ರಾಷ್ಟ್ರೀಯ ನ್ಯೂಸ್

‘ಏಕ್ ದೋ ತೀನ್’ ಖ್ಯಾತಿಯ ಬಾಲಿವುಡ್ ನೃತ್ಯ ಸಂಯೋಜಕಿ ಸರೋಜ್ ಖಾನ್ ನಿಧನ

(ನ್ಯೂಸ್ ಕಡಬ) newskadaba.com ಮುಂಬೈ,ಜು.03:  ಬಾಲಿವುಡ್‌ ಮಾಸಿ- ಕ್ಲಾಸಿ ನೃತ್ಯ ಸಂಯೋಜಕಿ ಸರೋಜ್ ಖಾನ್ ಇಂದು (ಜುಲೈ 3) ಹೃದಯಾಘಾತದಿಂದ ಕೊನೆ ಉಸಿರೆಳೆದಿದ್ದಾರೆ. ಕಳೆದ ಒಂದು ತಿಂಗಳಿನಿಂದ ಮುಂಬೈನ ಗುರು ನಾನಕ್ ಆಸ್ಪತ್ರೆಯಲ್ಲಿ ಉಸಿರಾಟದ ತೊಂದರೆಗೆ ಚಿಕಿತ್ಸೆಪಡೆಯುತ್ತಿದ್ದರು.   2000 ಸಾವಿರಕ್ಕೂ ಹೆಚ್ಚು ಸಿನಿಮಾ ಹಾಡುಗಳಿಗೆ ನೃತ್ಯ ಸಂಯೋಜಿಸಿರುವ ಸರೋಜ್‌ ಖಾನ್‌ ಅವರನ್ನು ಬಿ-ಟೌನ್‌ನಲ್ಲಿ ಎಲ್ಲರೂ ‘ಮಾಸ್ಟರ್‌ಜಿ’ ಎಂದೇ ಸಂಬೋಧಿಸುತ್ತಿದ್ದರು. ಸರೋಜ್‌ ಖಾನ್‌ಗೆ ಕೋವಿಡ್‌-19 ಪರೀಕ್ಷೆ ಮಾಡಲಾಗಿದ್ದು, ವರದಿ ನೆಗೆಟಿವ್ ಬಂದಿತ್ತು ಎಂದು ತಿಳಿದು ಬಂದಿದೆ. .

‘ಏಕ್ ದೋ ತೀನ್’ ಖ್ಯಾತಿಯ ಬಾಲಿವುಡ್ ನೃತ್ಯ ಸಂಯೋಜಕಿ ಸರೋಜ್ ಖಾನ್ ನಿಧನ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ವಯನಾಡು: ವಿದ್ಯಾರ್ಥಿಗಳಿಗೆ 175 ಸ್ಮಾರ್ಟ್ ಟಿವಿ ನೀಡಿದ ರಾಹುಲ್‌ ಗಾಂಧಿ

(ನ್ಯೂಸ್ ಕಡಬ) newskadaba.com ವಯನಾಡು ,ಜು.02:ಕೊರೊನಾ ವೈರಸ್‌ ಕಾರಣದಿಂದ ಕೇರಳದಲ್ಲಿ ಆನ್‌ಲೈನ್‌ ಶಿಕ್ಷಣವನ್ನು ಆರಂಭ ಮಾಡಲಾಗಿದ್ದು ಈ ನಿಟ್ಟಿನಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಯನಾಡು ಜಿಲ್ಲೆಯ ಕಲ್ಪೆಟ್ಟ ಪಟ್ಟಣದ ಬುಡಕಟ್ಟು ವಿದ್ಯಾರ್ಥಿಗಳಿಗೆ 175 ಸ್ಮಾರ್ಟ್ ಟಿವಿಗಳನ್ನು ನೀಡಿದ್ದಾರೆ.   ಕೇರಳದಲ್ಲಿ ಫಸ್ಟ್‌ ಬೆಲ್‌ ಆನ್‌ಲೈನ್‌ ತರಗತಿಗಳನ್ನು ನಡೆಸುತ್ತಿದ್ದು ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳು ಈ ಶಿಕ್ಷಣದಿಂದ ವಂಚಿತರಾಗಬಾರದು ಎಂದು ವಯನಾಡು ಸಂಸದರಾಗಿರುವ ರಾಹುಲ್‌ ಗಾಂಧಿ ಬುಡಕಟ್ಟು ವಿದ್ಯಾರ್ಥಿಗಳಿಗೆ 175 ಸ್ಮಾರ್ಟ್ ಟಿವಿಗಳನ್ನು ಒದಗಿಸಿದ್ದಾರೆ.  

ವಯನಾಡು: ವಿದ್ಯಾರ್ಥಿಗಳಿಗೆ 175 ಸ್ಮಾರ್ಟ್ ಟಿವಿ ನೀಡಿದ ರಾಹುಲ್‌ ಗಾಂಧಿ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಟಿಕ್ ಟಾಕ್ ನಿಷೇಧದ ಬೆನ್ನಲ್ಲೇ ಭಾರತದ ಚಿಂಗಾರಿ ಆ್ಯಪ್ ಗೆ ಭಾರಿ ಬೇಡಿಕೆ ➤ ಗಂಟೆಗೆ 1 ಲಕ್ಷ ಡೌನ್ ಲೋಡ್

(ನ್ಯೂಸ್ ಕಡಬ) newskadaba.com ಬೆಂಗಳೂರು,ಜು.01: ಭಾರತದಲ್ಲಿ ಟಿಕ್ ಟಾಕ್ ನಿಷೇಧಗೊಂಡ ಬೆನ್ನಲ್ಲೇ, ಅದೇ ಮಾದರಿಯ ಭಾರತೀಯ ಆಪ್ ಗಳಿಗೆ ಬೇಡಿಕೆ ಹೆಚ್ಚಿದೆ. ಈ ಪೈಕಿ ಅತ್ಯಂತ ಲಾಭ ಪಡೆದಿರುವುದು ಬೆಂಗಳೂರು ಮೂಲದ ಯುವಕರು ಪ್ರಾರಂಭಿಸಿರುವ ಚಿಂಗಾರಿ ಆಪ್. ಟಿಕ್ ಟಾಕ್ ನಿಷೇಧದ ಬೆನ್ನಲ್ಲೇ ಚಿಂಗಾರಿ ಆಪ್ ಡೌನ್ ಲೋಡ್ ಗೆ ಜನರು ಮುಗಿಬಿದ್ದಿದ್ದು ಪ್ರತಿ ಗಂಟೆಗೆ 1 ಲಕ್ಷ ಡೌನ್ ಲೋಡ್ ಹಾಗೂ 2 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದೆ. ಟಿಕ್ ಟಾಕ್ ನಿಷೇಧಕ್ಕೂ ಮುನ್ನವೇ ಚಿಂಗಾರಿ ಆಪ್

ಟಿಕ್ ಟಾಕ್ ನಿಷೇಧದ ಬೆನ್ನಲ್ಲೇ ಭಾರತದ ಚಿಂಗಾರಿ ಆ್ಯಪ್ ಗೆ ಭಾರಿ ಬೇಡಿಕೆ ➤ ಗಂಟೆಗೆ 1 ಲಕ್ಷ ಡೌನ್ ಲೋಡ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಇಂದು ಸಂಜೆ 4ಕ್ಕೆ ಮೋದಿ ಭಾಷಣ ➤ ಎಲ್ಲರ ಚಿತ್ತ ಪ್ರಧಾನಿಯತ್ತ

(ನ್ಯೂಸ್ ಕಡಬ) newskadaba.com ನವದೆಹಲಿ,ಜೂ.30:  ಮಂಗಳವಾರ ಪ್ರಧಾನ ನರೇಂದ್ರ ಮೋದಿ ಅವರು ಮತ್ತೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಬಗ್ಗೆ ಪ್ರಧಾನಿ ಕಚೇರಿ ಟ್ವಿಟರ್ ಖಾತೆ ಮಾಹಿತಿ ಹಂಚಿಕೊಂಡಿದ್ದು, ಸಂಜೆ 4 ಗಂಟೆಗೆ ಪ್ರಧಾನಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಹೇಳಿದ್ದಾರೆ. ಒಂದನೇ ಹಂತದ ಅನ್ಲಾಕ್ ಪ್ರಕ್ರಿಯೆಯ ದಿನ ಕೊನೆಗೊಳ್ಳುವ ದಿನದಂತೆ ಪ್ರಧಾನಿ ಮೋದಿ ಭಾಷಣ ಮಾಡುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇನ್ನು ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಸೋಮವಾರ ಒಂದೇ ದಿನ 18584 ಪ್ರಕರಣಗಳು

ಇಂದು ಸಂಜೆ 4ಕ್ಕೆ ಮೋದಿ ಭಾಷಣ ➤ ಎಲ್ಲರ ಚಿತ್ತ ಪ್ರಧಾನಿಯತ್ತ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

 21 ವರ್ಷದ ಟಿಕ್ ಟಾಕ್ ಸ್ಟಾರ್ ಕೊಲೆ ➤ ಉಸಿರುಗಟ್ಟಿಸಿ ಕೊಲೆ ಮಾಡಿದ ಪ್ರೇಮಿ.!

(ನ್ಯೂಸ್ ಕಡಬ) newskadaba.com ನವದೆಹಲಿ,ಜೂ.29:   ಒನ್ ಸೈಡ್ ಲವ್​ನಿಂದ ಕ್ರೋದಗೊಂಡ ಯುವಕನೊಬ್ಬ 21 ವರ್ಷದ ಟಕ್ ಟಾಕ್ ಸ್ಟಾರ್ ಶಿವಾನಿಯನ್ನ ಕೊಂದಿರುವ ಘಟನೆ ಹರಿಯಾಣ ಜಿಲ್ಲೆಯ ಸೋನೆಪತ್ ಜಿಲ್ಲೆಯಲ್ಲಿ ನಡೆದಿದೆ. ಅರಿಫ್ ಎಂಬಾತ ತನ್ನ ಮಗಳನ್ನ ಕೊಂದಿದ್ದಾನೆ ಎಂದು ಶಿವಾನಿಯ ತಂದೆ ವಿನೋದ್ ಅವರು ಕುಂಡ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ಧಾರೆ. ನಿನ್ನೆ ಭಾನುವಾರ ಶಿವಾನಿಯನ್ನ ಉಸಿರುಗಟ್ಟಿಸಿ ಕೊಲೆ ಮಾಡಲಾಗಿರುವುದು ತಿಳಿದುಬಂದಿದೆ. ಪೊಲೀಸರು ಆರೋಪಿ ಆರಿಫ್​ನನ್ನು ಹಿಡಿಯಲು ಬಲೆ ಬೀಸಿದ್ಧಾರೆ.   ಕುಂಡ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ

 21 ವರ್ಷದ ಟಿಕ್ ಟಾಕ್ ಸ್ಟಾರ್ ಕೊಲೆ ➤ ಉಸಿರುಗಟ್ಟಿಸಿ ಕೊಲೆ ಮಾಡಿದ ಪ್ರೇಮಿ.! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ದುಬೈನಿಂದ ಆಗಮಿಸಿದ್ದ 20 ಮಂದಿ ಕ್ವಾರಂಟೈನ್ ಗೆ ಒಳಗಾಗದೇ ಪರಾರಿ ➤ ಕೊಡಗು ಹಾಗೂ ಮಂಗಳೂರಿಗೆ “ಕೊರೋನಾ” ಭೀತಿ

(ನ್ಯೂಸ್ ಕಡಬ)newskadaba.com ಮಂಗಳೂರು, ಜೂ.29, ದುಬೈನಿಂದ ಖಾಸಗಿ ವಿಮಾನದಲ್ಲಿ ಮಂಗಳೂರಿಗೆ ಹೊರಟಿದ್ದ 150 ಮಂದಿ ಪ್ರಯಾಣಿಕರಿಗೆ ಕರ್ನಾಟಕ ಸರಕಾರ ಪ್ರವೇಶ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಅವರು ಕಣ್ಣೂರು ವಿಮಾನ ನಿಲ್ದಾಣದಲ್ಲಿ ಇಳಿದಿದ್ದು, ಅವರಿಗೆ ಕಾಸರಗೋಡು ಜಿಲ್ಲಾಡಳಿತ ಕಾಸರಗೋಡಿನ ಸುತ್ತಮುತ್ತಲಿನ ಲಾಡ್ಜ್ ಗಳಲ್ಲಿ ಕ್ವಾರಂಟೈನ್ ಮಾಡಿದ್ದು, ಈ ವೇಳೆ 20 ಮಂದಿ ದುಬೈ ಯಾನಿಗಳು ಕ್ವಾರಂಟೈನ್ ಆಗದೆ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ. ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲಾಡಳಿತಕ್ಕೆ ಇದು ಹೊಸ ತಲೆನೋವು ತಂದಿಟ್ಟಿದ್ದು, ಪರಾರಿಯಾದವರು ಕೊಡಗು ಮತ್ತು ಮಂಗಳೂರಿಗೆ

ದುಬೈನಿಂದ ಆಗಮಿಸಿದ್ದ 20 ಮಂದಿ ಕ್ವಾರಂಟೈನ್ ಗೆ ಒಳಗಾಗದೇ ಪರಾರಿ ➤ ಕೊಡಗು ಹಾಗೂ ಮಂಗಳೂರಿಗೆ “ಕೊರೋನಾ” ಭೀತಿ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top