ರಾಷ್ಟ್ರೀಯ ನ್ಯೂಸ್

ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣ ➤ 12 ವರ್ಷದ ಬಳಿಕ ಆರೋಪಿ ಅರೇಸ್ಟ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 22:  ಹನ್ನೆರೆಡು ವರ್ಷಗಳ ಹಿಂದೆ ನಗರದಲ್ಲಿ ಎಸಗಿದ್ದ ಸರಣಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿ ಶಂಕಿತ ಉಗ್ರ ಶೋಯಬ್‌ ಎಂಬಾತನನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.   2008ರಲ್ಲಿ ಬೆಂಗಳೂರಿನ ಮಡಿವಾಳ ಸೇರಿದಂತೆ ಹಲವು ಕಡೆ ನಡೆದಿದ್ದ ಸರಣಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಶೋಯಬ್‌ ಭಾಗಿಯಾಗಿದ್ದ.ಘಟನೆ ನಡೆದಾಗಿನಿಂದಲೂ ಆರೋಪಿ ತಲೆಮರೆಸಿ ಕೊಂಡಿದ್ದ. ಆರೋಪಿ ಕೇರಳದಲ್ಲಿ ಇರುವ ಬಗ್ಗೆ ಮಾಹಿತಿ ಆಧರಿಸಿ ರಾಷ್ಟ್ರೀಯ ತನಿಖಾ ದಳಗಳ […]

ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣ ➤ 12 ವರ್ಷದ ಬಳಿಕ ಆರೋಪಿ ಅರೇಸ್ಟ್ Read More »

ಕರ್ನಾಟಕ, ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ನೌಕಾಪಡೆಯಿಂದ ಐತಿಹಾಸಿಕ ನಡೆ ➤ ಯುದ್ಧನೌಕೆಯಲ್ಲಿ ಮಹಿಳಾ ಅಧಿಕಾರಿಗಳ ನಿಯೋಜನೆ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 22:  ದೇಶದ ಇತಿಹಾಸಲ್ಲೇ ಪ್ರಪ್ರಥಮ ಬಾರಿಗೆ ಇಬ್ಬರು ಮಹಿಳಾ ಅಧಿಕಾರಿಗಳನ್ನ ನೌಕಾ ಪಡೆಯ ಯುದ್ಧನೌಕೆಯಲ್ಲಿ ನಿಯೋಜನೆ ಮಾಡಲಾಗ್ತಿದೆ. ಸಬ್​ ಲೆಫ್ಟಿನೆಂಟ್​​ಗಳಾದ​​ ಕುಮುದಿನಿ ತ್ಯಾಗಿ ಹಾಗೂ ರಿತಿ ಸಿಂಗ್​​​ ಯುದ್ಧನೌಕೆಯಲ್ಲಿ ನಿಯೋಜನೆಗಳಲ್ಲಿರೋ ಭಾರತದ ಮೊಟ್ಟ ಮೊದಲ ಮಹಿಳೆಯರೆನಿಸಿಕೊಳ್ಳಲಿದ್ದಾರೆ. ಇವರಿಬ್ಬರೂ ಹೆಲಿಕಾಪ್ಟರ್​​​ ಸ್ಟ್ರೀಮ್​ನಲ್ಲಿ ಅಬ್ಸರ್ವರ್ಸ್​(ಏರ್​​ಬೋರ್ನ್​ ಟ್ಯಾಕ್ಟೀಶಿಯನ್ಸ್)​​ ಆಗಿ ಸೇರ್ಪಡೆಗೊಳ್ಳಲು ಆಯ್ಕೆಯಾಗಿದ್ದಾರೆ. ಮುಂದೆ ಕುಮುದಿನಿ ಹಾಗೂ ರಿತಿ ಅವರು ನೌಕೆಯ ಹೊಸ ಎಂಎಚ್​​-60 ಹೆಲಿಕಾಪ್ಟರ್​​ಗಳ ಹಾರಾಟ ನಡೆಸುವ ನಿರೀಕ್ಷೆ ಇದೆ ಅಂತ ವರದಿಯಾಗಿದೆ. ಕೊಚ್ಚಿಯಲ್ಲಿ

ನೌಕಾಪಡೆಯಿಂದ ಐತಿಹಾಸಿಕ ನಡೆ ➤ ಯುದ್ಧನೌಕೆಯಲ್ಲಿ ಮಹಿಳಾ ಅಧಿಕಾರಿಗಳ ನಿಯೋಜನೆ Read More »

ರಾಷ್ಟ್ರೀಯ ನ್ಯೂಸ್

ಬಹುಮಹಡಿ ಕಟ್ಟಡ ಕುಸಿತ ➤ ಎಂಟು ಮಂದಿ ಮೃತ್ಯು | 25 ಕ್ಕೂ ಅಧಿಕ ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆ

(ನ್ಯೂಸ್ ಕಡಬ) newskadaba.com ಮುಂಬೈ, ಸೆ. 21. ಬಹುಮಹಡಿ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮ ಕನಿಷ್ಟ 8 ಮಂದಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಭಿವಾಂಡಿಯಲ್ಲಿ ನಡೆದಿದೆ. ಘಟನೆಯಲ್ಲಿ ಇನ್ನು 25ಕ್ಕೂ ಹೆಚ್ಚು ಮಂದಿ ಅವಶೇಷಗಳಡಿಯಲ್ಲಿ ಸಿಲುಕಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಥಾಣೆ ಜಿಲ್ಲೆಯ ಭಿವಾಂಡಿಯಲ್ಲಿರುವ ಪಟೇಲ್ ಕಾಂಪೌಂಡ್ ಪ್ರದೇಶದಲ್ಲಿ ಸೋಮವಾರ ಮುಂಜಾನೆ 3.30ರ ಸಮಯದಲ್ಲಿ ಮೂರು ಮಹಡಿ ಕಟ್ಟಡ ಕುಸಿದು ಬಿದ್ದಿದ್ದು, ಅದರಲ್ಲಿ 8 ಮಂದಿ ಮೃತಪಟ್ಟರೆ 20 ಮಂದಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ. ಆದರೆ ಇನ್ನೂ 25ಕ್ಕೂ

ಬಹುಮಹಡಿ ಕಟ್ಟಡ ಕುಸಿತ ➤ ಎಂಟು ಮಂದಿ ಮೃತ್ಯು | 25 ಕ್ಕೂ ಅಧಿಕ ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ರಾಜ್ಯಸಭಾ ಸದಸ್ಯರಾಗಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಹೆಚ್‌.ಡಿ ದೇವೇಗೌಡರು

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ20:  ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರು ರಾಜ್ಯಸಭಾ ಸದಸ್ಯರಾಗಿ ಭಾನುವಾರ ಪ್ರಮಾಣವಚನ ಸ್ವೀಕರಿಸಿದರು.   ರಾಜ್ಯಸಭೆಯ ಸಭಾಧ್ಯಕ್ಷರೂ ಆಗಿರುವ ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಪ್ರಮಾಣವಚನ ಬೋಧಿಸಿದರು. ದೇವೇಗೌಡರು ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದರು. ‘ನಮ್ಮ ಸದನಕ್ಕೆ ಉತ್ತಮ ವ್ಯಕ್ತಿಯ ಸೇರ್ಪಡೆಯಾಗಿದೆ. ಮಾಜಿ ಪ್ರಧಾನಿ ಹಾಗೂ ದೇಶದ ಹಿರಿಯ ರಾಜಕೀಯ ನಾಯಕರಲ್ಲಿ ಒಬ್ಬರಾಗಿರುವ ಎಚ್.ಡಿ. ದೇವೇಗೌಡ ಅವರು ಈಗ ನಮ್ಮ ಸದನಕ್ಕೆ ಬಂದಿದ್ದಾರೆ’ ಎಂದು ಉಪ

ರಾಜ್ಯಸಭಾ ಸದಸ್ಯರಾಗಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಹೆಚ್‌.ಡಿ ದೇವೇಗೌಡರು Read More »

ರಾಷ್ಟ್ರೀಯ ನ್ಯೂಸ್

ಕಾಸರಗೋಡು: ಕೇರಳ ತುಳು ಅಕಾಡೆಮಿಯ ತುಳುಭವನ ಆನ್ ಲೈನ್ ಮೂಲಕ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಕಾಸರಗೋಡು, ಸೆ. 19. ಬಹು ನಿರೀಕ್ಷಿತ ಕೇರಳ ತುಳು ಅಕಾಡೆಮಿಯ ತುಳು ಭವನವನ್ನು ಕೇರಳ ಸಾಂಸ್ಕೃತಿಕ ಸಚಿವ ಎ.ಕೆ ಬಾಲನ್‌ ಅವರು ಆನ್ ಲೈನ್ ಮೂಲಕ ಉದ್ಘಾಟನೆ ಮಾಡಿದರು. ಹೊಸಂಗಡಿ ಸಮೀಪ ನಿರ್ಮಾಣವಾಗಿರುವ ಈ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಕೇರಳ ಕಂದಾಯ ಸಚಿವ ಇ. ಚಂದ್ರ ಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಸಂಶೋಧಕ ಡಾ. ವೆಂಕಟರಾಜ ಪುಣಿಂಚಿತ್ತಾಯ ಅವರ ಹೆಸರಿನ ಗ್ರಂಥಾಲಯವನ್ನು ಶಾಸಕ ಎಂ. ಸಿ ಖಮರುದ್ದೀನ್ ಹಾಗೂ ಸಭಾಂಗಣವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷ

ಕಾಸರಗೋಡು: ಕೇರಳ ತುಳು ಅಕಾಡೆಮಿಯ ತುಳುಭವನ ಆನ್ ಲೈನ್ ಮೂಲಕ ಉದ್ಘಾಟನೆ Read More »

ರಾಷ್ಟ್ರೀಯ ನ್ಯೂಸ್

ರಾಗಿಣಿ-ಸಂಜನಾಗೆ ಇನ್ನೆರಡು ದಿನ ಜೈಲೇ ಫಿಕ್ಸ್​​

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.19:  ಸ್ಯಾಂಡಲ್​ವುಡ್ ಡ್ರಗ್ಸ್​ ಲಿಂಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್​ ಸೋಮವಾರಕ್ಕೆ ಮುಂದೂಡಿದೆ.     ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಪಬ್ಲಿಕ್ ಪ್ರಾಸಿಕ್ಯೂಟರ್​ ಸಮಯಾವಕಾಶ ಕೇಳಿದ ಹಿನ್ನೆಲೆಯಲ್ಲಿ, ವಿಚಾರಣೆಯನ್ನು ಸೆಪ್ಟೆಂಬರ್ 21ಕ್ಕೆ ಎನ್​ಡಿಪಿಎಸ್​​ ಕೋರ್ಟ್​​ ಮುಂದೂಡಿದೆ.ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಇಂದು ಒಟ್ಟು ಐದು ಆರೋಪಿಗಳ ಜಾಮೀನಿನ ವಿಚಾರಣೆ ಇತ್ತು. ಇದರಲ್ಲಿ ಕೆಲವರು ಜೈಲಿನಲ್ಲಿದ್ದರೆ ಇನ್ನೂ

ರಾಗಿಣಿ-ಸಂಜನಾಗೆ ಇನ್ನೆರಡು ದಿನ ಜೈಲೇ ಫಿಕ್ಸ್​​ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸೆಪ್ಟಂಬರ್ 21 ರಿಂದ ಶಾಲೆ ತೆರೆದರೂ ತರಗತಿ ನಡೆಯಲ್ಲ.!!➤ ಸಚಿವ ಸುರೇಶ್‌ ಕುಮಾರ್‌ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಮೈಸೂರು, ಸೆ.18:  ಸೆಪ್ಟಂಬರ್ 21 ರಿಂದ ಶಾಲೆಗಳು ತೆರೆಯುತ್ತೇವೆ ಆದರೆ ತರಗತಿಗಳು ಪ್ರಾರಂಭವಾಗುವುದಿಲ್ಲ ಎಂದು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಸ್ಪಷ್ಟ ಪಡಿಸಿದ್ದಾರೆ.     ಮೈಸೂರಿನ ನಜರ್​​ಬಾದ್​​ನಲ್ಲಿ ನಗರ ಕೇಂದ್ರ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದ ಅವರು, ಸೆಪ್ಟೆಂಬರ್ 21ರಿಂದ ಕೇವಲ ಶಾಲೆಗಳು ತೆರೆಯಲಿವೆ. ಆದರೆ ತರಗತಿಗಳು ಪ್ರಾರಂಭವಾಗುವುದಿಲ್ಲ. ಸೆ.30ರೊಳಗೆ 1ರಿಂದ 10ನೇ ತರಗತಿ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಮುಗಿಯಬೇಕು ಎಂದು ಹೇಳಿದರು. ಮುಂದುವರೆದ ಅವರು, ಖಾಸಗಿ ಶಾಲೆಗಳು ಕೇವಲ ಒಂದು

ಸೆಪ್ಟಂಬರ್ 21 ರಿಂದ ಶಾಲೆ ತೆರೆದರೂ ತರಗತಿ ನಡೆಯಲ್ಲ.!!➤ ಸಚಿವ ಸುರೇಶ್‌ ಕುಮಾರ್‌ ಸ್ಪಷ್ಟನೆ Read More »

ಕರಾವಳಿ, ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಮೂವರು ಉಗ್ರರನ್ನು ಸದೆಬಡಿದ ಭಾರತೀಯ ಸೇನೆ

(ನ್ಯೂಸ್ ಕಡಬ) newskadaba.com ಶ್ರೀನಗರ, ಸೆ. 17. ಹಲವು ಸಮಯಗಳಿಂದ ಉಗ್ರರನ್ನು ಕಾರ್ಯಾಚರಣೆಯ ಮೂಲಕ ಸದೆಬಡಿಯುತ್ತಿರುವ ಸೇನಾಪಡೆಯು ಜಮ್ಮು, ಕಾಶ್ಮೀರದ ಶ್ರೀನಗರದ ಬಟಾಮಲೂ ಎಂಬ ಪ್ರದೇಶದಲ್ಲಿ ಮೂವರು ಉಗ್ರರನ್ನು ಗುರುವಾರ ಹತ್ಯೆಗೈದಿದೆ. ಈ ಪ್ರದೇಶದಲ್ಲಿ ಉಗ್ರರ ನುಸುಳಿಕೆ ಹಾಗೂ ಸಂಶಯಾಸ್ಪದ ಓಡಾಟಗಳ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆ ಗುರುವಾರ ಬೆಳಗ್ಗೆಯೇ ಕಾರ್ಯಚರಣೆಗಿಳಿದ ಭದ್ರತಾಪಡೆಗಳು ಮೂವರು ಉಗ್ರರ ಸದೆಬಡಿದಿದೆ. ಕಾರ್ಯಚರಣೆ ಶುರುವಾಗುತ್ತಿದ್ದಂತೆಯೇ ಯೋಧರ ಮೇಲೆ ಶತ್ರುಪಡೆ ಗುಂಡಿನ ದಾಳಿ ನಡೆಸಿದ್ದು, ತಕ್ಷಣ ಕಾರ್ಯಾಚರಣೆಯನ್ನು ಎನ್‌ ಕೌಂಟರ್‌ ಆಗಿ ಪರಿವರ್ತಿಸಿದ

ಮೂವರು ಉಗ್ರರನ್ನು ಸದೆಬಡಿದ ಭಾರತೀಯ ಸೇನೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಗೋಹತ್ಯೆ ಕಡಿವಾಣಕ್ಕೆ ಕೂಗು ➤ ಪೇಜಾವರ ಶ್ರೀಗಳಿಂದ ರಾಜ್ಯ ಸರ್ಕಾರಕ್ಕೆ ಪತ್ರ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.17:  ಗೋ ಹತ್ಯೆಗೆ ಕಡಿವಾಣ ಹಾಕಲು, ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥರು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ. ಪರಮ ಪೂಜ್ಯ ಪೇಜಾವರ ಶ್ರೀ ಶ್ರೀ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ಯವರಿಂದ, “ರಾಜ್ಯದಲ್ಲಿ ಗೋ ಹತ್ಯಾ ನಿಷೇಧ ಕಾಯಿದೆಯನ್ನು ತಕ್ಷಣ ಜಾರಿಗೊಳಿಸುವಂತೆ ರಾಜ್ಯದ ಮುಖ್ಯಮಂತ್ರಿಯವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.  ಒಂದು ವಾರದ ಹಿಂದೆ ಸಂಘಟನೆಯ ಪ್ರಮುಖರು ಸ್ವಾಮೀಜಿಯವರನ್ನು ಇದೇ ವಿಚಾರದಲ್ಲಿ ಭೇಟಿ ಮಾಡಿ

ಗೋಹತ್ಯೆ ಕಡಿವಾಣಕ್ಕೆ ಕೂಗು ➤ ಪೇಜಾವರ ಶ್ರೀಗಳಿಂದ ರಾಜ್ಯ ಸರ್ಕಾರಕ್ಕೆ ಪತ್ರ Read More »

ಕರಾವಳಿ, ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಪ್ರಧಾನಿ ಮೋದಿಗೆ ಹುಟ್ಟುಹಬ್ಬದ ಸಂಬ್ರಮ ➤ ಸಿಎಂ ಬಿಎಸ್‌ವೈರಿಂದ ಪ್ರಧಾನಿಗೆ ವಿಶ್

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಸೆ.17:  ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ಇಂದು 70ನೇ ವರ್ಷದ ಜನ್ಮದಿನದ ಸಂಭ್ರಮ. ಹೀಗಾಗಿ ದೇಶದ ಮೂಲೆ ಮೂಲೆಗಳಿಂದ ಪ್ರಧಾನಿಗಳಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.ಇನ್ನು ಪ್ರಧಾನಿ  ಮೋದಿ ಅವರ ಹುಟ್ಟುಹಬ್ಬದ ಹಿನ್ನೆಲೆ ಅವರೇ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಇನ್ನು ರಾಜ್ಯದ ಬಿಜೆಪಿ ನಾಯಕರು ಸೇರಿ ಹಲವು ಗಣ್ಯರು ಭಾರತವನ್ನು ಪ್ರತಿನಿಧಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ ಶುಭ ಕಾಮನೆಗಳನ್ನು ಕೋರಿದ್ದಾರೆ.   ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ಜನ್ಮದಿನದ ಅಭಿಮಾನಪೂರ್ವಕ

ಪ್ರಧಾನಿ ಮೋದಿಗೆ ಹುಟ್ಟುಹಬ್ಬದ ಸಂಬ್ರಮ ➤ ಸಿಎಂ ಬಿಎಸ್‌ವೈರಿಂದ ಪ್ರಧಾನಿಗೆ ವಿಶ್ Read More »

ರಾಷ್ಟ್ರೀಯ ನ್ಯೂಸ್
Scroll to Top