ರಾಷ್ಟ್ರೀಯ ನ್ಯೂಸ್

ಲಡಾಖ್ ಗಡಿಯಲ್ಲಿ ಚೀನಾ ಯೋಧನ ಬಂಧನ

(ನ್ಯೂಸ್ ಕಡಬ) newskadaba.com ಲಡಾಖ್ ಅ. 19: ಲಡಾಖ್‌ನ ಚುಮಾರ್-ಡೆಮ್‌ಚೋಕ್ ಪ್ರದೇಶದಲ್ಲಿ ಚೀನಾದ ಸೇನೆಗೆ ಸೇರಿದ್ದ ಸೈನಿಕನೊಬ್ಬನನ್ನು ಭಾರತೀಯ ಭದ್ರತಾ ಪಡೆ ಬಂಧಿಸಿದೆ. ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಸೈನಿಕ ಅಜಾಗರೂಕತೆಯಿಂದ ಭಾರತೀಯ ಭೂಪ್ರದೇಶವನ್ನು ಪ್ರವೇಶಿಸಿರಬಹುದು ಎನ್ನಲಾಗಿದ್ದು ವಶಕ್ಕೆ ಪಡೆದ ಸೈನಿಕನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ತನಿಖೆ ಮುಗಿದ ನಂತರ ಪ್ರೋಟೋಕಾಲ್ ಪ್ರಕಾರ ಅವನನ್ನು ಚೀನಾಗೆ ವಾಪಾಸ್ ಕಳಿಸಲಾಗುತ್ತದೆ ಎಂದು ಸುದ್ದಿ ಸಂಸ್ಥೆ ಮೂಲಗಳು  ವರದಿ ಮಾಡಿದೆ.ಲಡಾಖ್ ನಲ್ಲಿ ನಡೆಯುತ್ತಿರುವ ಗಡಿ ಸಂಘರ್ಷದ ನಡುವೆ ಈ ಬೆಳವಣಿಗೆ […]

ಲಡಾಖ್ ಗಡಿಯಲ್ಲಿ ಚೀನಾ ಯೋಧನ ಬಂಧನ Read More »

ರಾಷ್ಟ್ರೀಯ ನ್ಯೂಸ್

ಪಬ್​ಜಿ ಆಡಬೇಡ ಅಂದಿದ್ದಕ್ಕೆ ಅಪ್ಪನ ಕತ್ತು ಸೀಳಿ ಬಿಟ್ಟ ಮಗ…!

(ನ್ಯೂಸ್ ಕಡಬ) newskadaba.com ಮೇರಠ್, ಅ.19: ಪಬ್​ಜಿ ಆಡಬೇಡ, ಅದು ಒಳ್ಳೆಯದಲ್ಲ ಎಂದು ಬುದ್ಧಿವಾದ ಹೇಳಿದ್ದಕ್ಕೆ ಕೇಳಿ ಕೇಳಿ ಕೆದರಿದ ಮಗ ಪಕ್ಕದಲ್ಲೇ ಇದ್ದ ಚೂರಿ ತಗೊಂಡು ಅಪ್ಪನ ಕತ್ತು ಸೀಳಿಯೇ ಬಿಟ್ಟ! ಇಂಥದ್ದೊಂದು ವಿಲಕ್ಷಣ ಕೃತ್ಯ ಮೇರಠ್ ಜಿಲ್ಲೆಯ ಖಾರ್​ಖೋಡ ಪಟ್ಟಣದ ಜಾಮ್​ನಗರ ಎಂಬಲ್ಲಿ ನಡೆದಿದೆ. ಆರೋಪಿಯನ್ನು ಆಮಿರ್ ಎಂದು ಗುರುತಿಸಲಾಗಿದೆ.     ಈ ಕೃತ್ಯ ಗುರುವಾರವೇ ನಡೆದಿದೆ. ಆದರೆ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ. ಸುದೀರ್ಘ ಹೊತ್ತು ಗೇಮ್​ನಲ್ಲೇ ಕಾಲಕಳೆಯುತ್ತಿದ್ದ ಆಮಿರ್​ಗೆ ಈ ಬಗ್ಗೆ

ಪಬ್​ಜಿ ಆಡಬೇಡ ಅಂದಿದ್ದಕ್ಕೆ ಅಪ್ಪನ ಕತ್ತು ಸೀಳಿ ಬಿಟ್ಟ ಮಗ…! Read More »

ರಾಷ್ಟ್ರೀಯ ನ್ಯೂಸ್

ನವೆಂಬರ್’ನಲ್ಲಿ ಕಾಲೇಜು ಪುನರಾರಂಭಕ್ಕೆ ಸರ್ಕಾರ ಸಿದ್ಧತೆ

(ನ್ಯೂಸ್ ಕಡಬ) newskadaba.com ಬೆಂಗಳೂರು ಅ. 19: ನವೆಂಬರ್ ತಿಂಗಳಿನಲ್ಲಿ ಕಾಲೇಜು ಪುನರಾರಂಭಕ್ಕೆ ಯುಜಿಸಿ ಗ್ರೀನ್ ಸಿಗ್ನಲ್ ನೀಡಿದ್ದು ಸರ್ಕಾರದಿಂದಲೂ ಕಾಲೇಜು ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಹಂತಹಂತವಾಗಿ ಕಾಲೇಜು ಪುನರಾರಂಭಿಸಲು ಸರ್ಕಾರ ಅನುಮತಿ ನೀಡಿದ್ದು ಇದರ ಬೆನ್ನಲ್ಲೇ ಯುಜಿಸಿ ನವೆಂಬರ್ ನಲ್ಲಿ ಕಾಲೇಜು ಆರಂಭಕ್ಕೆ ಸೂಚಿಸಿದೆ. ಕೇಂದ್ರ ಸರ್ಕಾರ ಅನ್ ಲಾಕ್ 5.0 ಮಾರ್ಗಸೂಚಿಯಲ್ಲಿ ಹಂತ ಹಂತವಾಗಿ ಶಾಲಾ-ಕಾಲೇಜುಗಳನ್ನು ಅಕ್ಟೋಬರ್ 15ರ ನಂತರ ಆರಂಭಿಸುವಂತೆ ಸೂಚಿಸಲಾಗಿತ್ತು. ಈ ಬಳಿಕ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ(ಯುಜಿಸಿ) ಕೂಡ ಹಂತ ಹಂತವಾಗಿ ಶಾಲಾ-ಕಾಲೇಜು

ನವೆಂಬರ್’ನಲ್ಲಿ ಕಾಲೇಜು ಪುನರಾರಂಭಕ್ಕೆ ಸರ್ಕಾರ ಸಿದ್ಧತೆ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಪತ್ನಿಯ ರುಂಡ ಕತ್ತರಿಸಿ ಆಕೆಯ ಪ್ರಿಯಕರನ ಮನೆ ಮುಂದೆ ಇಟ್ಟ ಪತಿರಾಯ

(ನ್ಯೂಸ್ ಕಡಬ) newskadaba.com ತೆಲಂಗಾಣ ಅ. 19: ಪತ್ನಿಗೆ ಅನೈತಿಕ ಸಂಬಂಧ ಇದೆ ಎಂಬ ಸಂಶಯದ ಮೇಲೆ ಬೇಸತ್ತ ಪತಿಯೊಬ್ಬ ಆಕೆಯ ರುಂಡವನ್ನು ಕತ್ತರಿಸಿ ಅದನ್ನು ಪ್ರಿಯಕರನ ಮನೆ ಮುಂದೆ ತಂದಿಟ್ಟು ಹೋಗಿರುವ ಭೀಕರ ಘಟನೆ ತೆಲಂಗಾಣದಲ್ಲಿ ನಡೆದಿದೆ.   ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಅನಂತಸಾಗರ್ ಗ್ರಾಮದ ಜುರ್ರು ಸಾಹಿಲು ತನ್ನ ಪತ್ನಿ 35 ವರ್ಷದ ಅಂಶಮ್ಮ ಎಂಬಾಕೆಯ ರುಂಡವನ್ನು ಕತ್ತರಿಸಿದ್ದಾರೆ. ನಂತರ ಆ ರುಂಡವನ್ನು ಬೈಕ್ ನಲ್ಲಿ ಐದು ಕಿ.ಮೀ ದೂರದಲ್ಲಿರುವ ನಾರಾಯಣ್ ಖೇಡ್ ಗ್ರಾಮಕ್ಕೆ ತೆಗೆದುಕೊಂಡು

ಪತ್ನಿಯ ರುಂಡ ಕತ್ತರಿಸಿ ಆಕೆಯ ಪ್ರಿಯಕರನ ಮನೆ ಮುಂದೆ ಇಟ್ಟ ಪತಿರಾಯ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ನೋಯ್ಡಾ ಪೊಲೀಸರ ಬಲೆಗೆ ಏಲಿಯನ್.!

(ನ್ಯೂಸ್ ಕಡಬ) newskadaba.com ನೋಯ್ಡಾ, ಅ. 18: ಗ್ಯಾಸ್ ತುಂಬಿದ ಈ ಐರನ್ ಮ್ಯಾನ್ ಆಕೃತಿಯ ಬಲೂನ್‌ವೊಂದು ಜನರಲ್ಲಿ ಆತಂಕ ಸೃಷ್ಟಿಸಿದ ಘಟನೆ ಉತ್ತರಪ್ರದೇಶದ ನೋಯ್ಡಾ ಬಳಿ ನಡೆದಿದೆ. ಈ ಬಲೂನ್‌ನನ್ನು ಏಲಿಯನ್ ಎಂದು ಭಾವಿಸಿ ಜನ ಆತಂಕಕ್ಕೀಡಾಗಿದ್ದರು. ಆಗಸದಲ್ಲಿ ಹಾರಾಡುತ್ತಿದ್ದ ಮನುಷ್ಯನಾಕೃತಿಯ ಈ ವಸ್ತುವನ್ನು ನೋಡಿದ ನೋಯ್ಡಾದ ದನ್ಕೌರ್ ಟೌನ್ ಜನ, ಏಲಿಯನ್ ದಾಳಿ ನಡೆದಿದೆ ಎಂದೇ ಭಾವಿಸಿದ್ದರು. ಗ್ಯಾಸ್ ತುಂಬಿದ ಈ ಐರನ್ ಮ್ಯಾನ್ ಆಕೃತಿಯ ಬಲೂನ್ ಇಲ್ಲಿನ ಭಟ್ಟಾ ಪರ್ಸೌಲ್ ಬಳಿಯ ಕೆನಾಲ್

ನೋಯ್ಡಾ ಪೊಲೀಸರ ಬಲೆಗೆ ಏಲಿಯನ್.! Read More »

ರಾಷ್ಟ್ರೀಯ ನ್ಯೂಸ್

ಮಿಥುನ್ ಚಕ್ರವರ್ತಿ ಪುತ್ರನ ವಿರುದ್ಧ ಅತ್ಯಾಚಾರ ಪ್ರಕರಣ ಕೇಸ್ ➤ ಮದ್ವೆಯಾಗೋದಾಗಿ ನಂಬಿಸಿ ದೈಹಿಕ ಸಂಪರ್ಕ

(ನ್ಯೂಸ್ ಕಡಬ) newskadaba.com ಮುಂಬೈ ಅ. 18: ಬಾಲಿವುಡ್ ಹಿರಿಯ ನಟ ಮಿಥುನ್ ಚಕ್ರವರ್ತಿ ಪುತ್ರ ಮಹಾಅಕ್ಷಯ್ ವಿರುದ್ಧ ಮುಂಬೈನ ಓಶಿವಾರಾ ಪೊಲೀಸ್ ಠಾಣೆಯಲ್ಲಿ ಮೋಸ ಮತ್ತು ಅತ್ಯಾಚಾರದ ಪ್ರಕರಣ ದಾಖಲಾಗಿದೆ. ಮಿಥುನ್ ಪತ್ನಿ ಯೋಗಿತಾ ಬಾಲಿ ಅವರನ್ನ ಸಹ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಲಾಗಿದೆ.   ಫಿಲಂ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿಕೊಂಡಿರುವ ಮಾಡೆಲ್ ಕಂ ನಟಿ ಈ ದೂರು ದಾಖಲಿಸಿದ್ದಾರೆ. 2015ರಿಂದ ಮಹಾಅಕ್ಷಯ್ ಜೊತೆ ರಿಲೇಶನ್ ಶಿಪ್ ನಲ್ಲಿದ್ದು, ಮದುವೆಯಾಗೋದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದನು. 2015ರಲ್ಲಿ ಮಹಾಅಕ್ಷಯ್

ಮಿಥುನ್ ಚಕ್ರವರ್ತಿ ಪುತ್ರನ ವಿರುದ್ಧ ಅತ್ಯಾಚಾರ ಪ್ರಕರಣ ಕೇಸ್ ➤ ಮದ್ವೆಯಾಗೋದಾಗಿ ನಂಬಿಸಿ ದೈಹಿಕ ಸಂಪರ್ಕ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ದೇಶದ ಜನತೆಗೆ ನವರಾತ್ರಿ ಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ

(ನ್ಯೂಸ್ ಕಡಬ) newskadaba.com ನವದೆಹಲಿ, ಅ.17: ಇಂದಿನಿಂದ ನವರಾತ್ರಿ ಹಬ್ಬದ ಸಂಭ್ರಮ ಆರಂಭಗೊಂಡಿದ್ದು, ಈ ಹಿನ್ನಲೆಯಲ್ಲಿ ದುರ್ಗಾ ಮಾತೆಯ ವಿವಿಧ ಅವತಾರಗಳನ್ನು ಶ್ರದ್ಧಾ, ಭಕ್ತಿಯಿಂದ ಪೂಜಿಸಲಾಗುವ ನವರಾತ್ರಿ ಹಬ್ಬ ಇಂದಿನಿಂದ ಆರಂಭಗೊಂಡಿರುವ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಪ್ರಧಾನಿ ಮೋದಿಯವರು ಟ್ವೀಟ್ ಮಾಡುವ ಮೂಲಕ ದೇಶದ ಜನತೆಗೆ ಶುಭಾಶಯಗಳನ್ನು ಹೇಳಿದ್ದಾರೆ.     ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು, ಎಲ್ಲರಿಗೂ ನವರಾತ್ರಿ ಹಬ್ಬದ ಶುಭಾಶಯಗಳು. ತಾಯಿ ಜಗದಾಂಬಾ, ನಿಮ್ಮೆಲ್ಲರಿಗೂ ಸಂತೋಷ, ಶಾಂತಿ

ದೇಶದ ಜನತೆಗೆ ನವರಾತ್ರಿ ಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ Read More »

ರಾಷ್ಟ್ರೀಯ ನ್ಯೂಸ್

ಕರ್ನಾಟಕ ಸಂಗೀತ ದಿಗ್ಗಜ ಪಿ.ಎಸ್. ನಾರಾಯಣಸ್ವಾಮಿ ನಿಧನ

(ನ್ಯೂಸ್ ಕಡಬ) newskadaba.com ಚೆನ್ನೈ, ಅ.17: ಕರ್ನಾಟಕ ಸಂಗೀತದ ಅತ್ಯುತ್ತಮ ಗುರುಗಳಲ್ಲಿ ಒಬ್ಬರಾದ, ಪದ್ಮಭೂಷಣ ವಿದ್ವಾನ್ ಪುಲಿಯೂರ್ ಸುಬ್ರಮಣ್ಯಂ ನಾರಾಯಣಸ್ವಾಮಿ(86 ವ.) ಕಳೆದ ದಿನ ರಾತ್ರಿ ತಮ್ಮ ಸ್ವಗೃಹದಲ್ಲಿ ನಿಧನರಾದರು.     ಸಂಗೀತಗಾರ ಪಿ.ಎಸ್. ನಾರಾಯಣಸ್ವಾಮಿ ಅವರು ತಮ್ಮ ಗುರು ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರಿಂದ ಕಲಿತ ಸಂಗೀತದ ಪಾಠದಿಂದ ಅತ್ಯುತ್ತಮ ಸಾಧಕರಾಗಿ ಗುರುತಿಸಿಕೊಂಡಿದ್ದರು. ಇವರು ಭಾರತ ಸರ್ಕಾರದ ಪದ್ಮಭೂಷಣ, ಮತ್ತು ತಮಿಳುನಾಡು ಸರ್ಕಾರದ ಕಲೈಮಣಿ ಸೇರಿದಂತೆ ಅನೇಕ ಪ್ರಶಸ್ತಿಗೆ ಭಾಜನರಾಗಿರುತ್ತಾರೆ. ನಾರಾಯಣಸ್ವಾಮಿ ಅವರು ಶೆಮ್ಮಂಗುಡಿ

ಕರ್ನಾಟಕ ಸಂಗೀತ ದಿಗ್ಗಜ ಪಿ.ಎಸ್. ನಾರಾಯಣಸ್ವಾಮಿ ನಿಧನ Read More »

ರಾಷ್ಟ್ರೀಯ ನ್ಯೂಸ್

ಇನ್ಮುಂದೆ LPG ಸಿಲಿಂಡರ್ ಗೂ ಒಟಿಪಿ ಕಡ್ಡಾಯ

(ನ್ಯೂಸ್ ಕಡಬ) newskadaba.com ನವದೆಹಲಿ, ಅ.17: ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ (ಎಲ್‌ಪಿಜಿ) ಸಿಲಿಂಡರ್ ಗಳ ವಿತರಣೆಯು ಮುಂದಿನ ತಿಂಗಳಿನಿಂದ ಮನೆ ಬಾಗಿಲಿಗೆ ಸರಬರಾಜಾಗುವ ಸಂದರ್ಭದಲ್ಲಿ ಒಟಿಪಿ ಅಥವಾ ಒನ್‌-ಟೈಮ್ ಪಾಸ್‌ವರ್ಡ್ ಕಡ್ಡಾಯವಾಗಿದೆ.     ನ. 1ರಿಂದ ಎಲ್‌ಪಿಜಿ ಸಿಲಿಂಡರ್‌ ಪೂರೈಕೆಯಲ್ಲಿ ಈ ಹೊಸ ಬದಲಾವಣೆ ಜಾರಿಗೆ ಬರಲಿದ್ದು, ಸಿಲಿಂಡರ್‌ ಹಸ್ತಾಂತರವಾಗಬೇಕಾದರೆ ಒಟಿಪಿ ನೀಡುವುದು ಕಡ್ಡಾಯ. ಇದರಿಂದ ಅಡುಗೆ ಅನಿಲ ಕಳ್ಳತನ ತಪ್ಪಿಸುವ ಮತ್ತು ಸರಿಯಾದ ಗ್ರಾಹಕನನ್ನು ಗುರುತಿಸುವ ಉದ್ದೇಶದಿಂದ ತೈಲ ಕಂಪೆನಿಗಳು “ಪೂರೈಕೆ ದೃಢೀಕರಣ ಕೋಡ್‌’

ಇನ್ಮುಂದೆ LPG ಸಿಲಿಂಡರ್ ಗೂ ಒಟಿಪಿ ಕಡ್ಡಾಯ Read More »

ರಾಷ್ಟ್ರೀಯ ನ್ಯೂಸ್

ಐತಿಹಾಸಿಕ ನಾಡಹಬ್ಬಕ್ಕೆ ಚಾಲನೆ ➤ ದಸರಾದಲ್ಲಿ ಆರು ಮಂದಿ ಕೊರೊನಾ ವಾರಿಯರ್ಸ್‌ಗೆ ಸನ್ಮಾನ

(ನ್ಯೂಸ್ ಕಡಬ) newskadaba.com ಮೈಸೂರು ಅ. 17: ಇಡೀ ವಿಶ್ವವೇ ಬೆರಗಾಗಿ ನೋಡುವ ಐತಿಹಾಸಿಕ ಮೈಸೂರು ದಸರಾಗೆ ಇಂದು ಚಾಲನೆ ದೊರೆತಿದೆ. ಖ್ಯಾತ ಹೃದ್ರೋಗ ತಜ್ಞ ಡಾ.ಸಿಎನ್‌ ಮಂಜುನಾಥ್‌ರವರು ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆಗೈಯುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದ್ದಾರೆ. ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೊಂಡ ಬೆನ್ನಲ್ಲೇ ಆರು ಮಂದಿ ಕೊರೊನಾ ವಾರಿಯರ್ಸ್‌ಗೆ  ಸನ್ಮಾನ ಮಾಡಲಾಗಿದೆ. ಈ ಬಾರಿ ಇಡೀ ಜಗತ್ತು ಕೊರೊನಾ ಮಹಾಮಾರಿಯಿಂದ ಸಂಕಷ್ಟಕ್ಕೀಡಾಗಿರುವ ಈ ಸಮಯದಲ್ಲಿ ದಸರಾ ಕೂಡ ಸರಳವಾಗಿ ಆಚರಿಸಲ್ಪಡುತ್ತಿದ್ದು, ಕೊರೊನಾ ವಾರಿಯರ್ಸ್‌ ಅಸಂಖ್ಯಾತ ಜನರ

ಐತಿಹಾಸಿಕ ನಾಡಹಬ್ಬಕ್ಕೆ ಚಾಲನೆ ➤ ದಸರಾದಲ್ಲಿ ಆರು ಮಂದಿ ಕೊರೊನಾ ವಾರಿಯರ್ಸ್‌ಗೆ ಸನ್ಮಾನ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್
Scroll to Top