ರಾಷ್ಟ್ರೀಯ ನ್ಯೂಸ್

ಸಿ.ಪಿ ರಾಧಾಕೃಷ್ಣನ್ ಇಂದು 15ನೇ ಉಪರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕಾರ

(ನ್ಯೂಸ್‌ ಕಡಬ) newskadaba.com,  ಸೆ.12  ನವದೆಹಲಿ: ಎನ್‌ಡಿಎ ಅಭ್ಯರ್ಥಿ, ಮಹಾರಾಷ್ಟ್ರದ ಮಾಜಿ ರಾಜ್ಯಪಾಲ ಸಿ.ಪಿ ರಾಧಾಕೃಷ್ಣನ್ ಅವರು ಇಂದು (ಸೆ.12) 15ನೇ ಉಪರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮಂಗಳವಾರ ನಡೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ 452 ಮತಗಳಿಸುವ ಮೂಲಕ ಗೆಲವು ಸಾಧಿಸಿದ್ದರು. ಇಂದು ಬೆಳಗ್ಗೆ 10ಗಂಟೆಗೆ 15ನೇ ಉಪರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿ, ಪದಗ್ರಹಣ ಮಾಡಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಮಾಣವಚನ ಬೋಧಿಸಲಿದ್ದಾರೆ. ಪ್ರಮಾಣವಚನ ಕಾರ್ಯಕ್ರಮದಲ್ಲಿ ಒಡಿಶಾ ಸಿಎಂ ಮೋಹನ್ ಚರಣ್ ಮಾಝಿ, ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಆಂಧ್ರ ಸಿಎಂ […]

ಸಿ.ಪಿ ರಾಧಾಕೃಷ್ಣನ್ ಇಂದು 15ನೇ ಉಪರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕಾರ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಆರ್ಜೆಡಿ ನಾಯಕನ ಗುಂಡಿಕ್ಕಿ ಹತ್ಯೆ

(ನ್ಯೂಸ್‌ ಕಡಬ) newskadaba.com,  ಸೆ.11 ಪಾಟನಾ: ಬಿಹಾರ ವಿಧಾನಸಭಾ ಚುನಾವಣೆ ಇನ್ನೇನು ಹತ್ತಿರದಲ್ಲಿ ಇರುವಾಗಲೇ ಪಾಟ್ನಾದಲ್ಲಿ ಆರ್​ಜೆಡಿ ನಾಯಕರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ. ಬುಧವಾರ ರಾತ್ರಿ ಇಬ್ಬರು ಅಪರಿಚಿತರು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ರಾಜ್‌ಕುಮಾರ್ ರೈ ಅಲಿಯಾಸ್ ಅಲ್ಲಾ ರೈ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ಘಟನೆ ಚಿತ್ರಗುಪ್ತದ ಮುನ್ನಾಚಕ್ ಪ್ರದೇಶದಲ್ಲಿ ನಡೆದಿದ್ದು, ಮೂಲಗಳ ಪ್ರಕಾರ ರೈ, ರಾಘೋಪುರ್ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ನಿರೀಕ್ಷೆಯಿತ್ತು. ವಿವರವಾದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು

ಆರ್ಜೆಡಿ ನಾಯಕನ ಗುಂಡಿಕ್ಕಿ ಹತ್ಯೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

‘ಭೌತಚಿಕಿತ್ಸಕರು ಹೆಸರಿನ ಮೊದಲು ‘ಡಾ’ ಶೀರ್ಷಿಕೆಯನ್ನು ಬಳಸುವಂತಿಲ್ಲ ‘- ಆರೋಗ್ಯ ಸೇವೆಗಳ ಮಹಾನಿರ್ದೇಶಕರು ಸ್ಪಷ್ಟನೆ

(ನ್ಯೂಸ್‌ ಕಡಬ) newskadaba.com,  ಸೆ.11 ನವದೆಹಲಿ : ಭೌತಚಿಕಿತ್ಸಕರು ಹೆಸರಿನ ಮೊದಲು ‘ಡಾ’ (ಡಾಕ್ಟರ್‌) ಎಂಬ ಶೀರ್ಷಿಕೆಯನ್ನು ಬಳಸಲು ಅರ್ಹರಲ್ಲ, ಇದು ನೋಂದಾಯಿತ ವೈದ್ಯಕೀಯ ವೃತ್ತಿಪರರಿಗೆ ಮಾತ್ರ ಮೀಸಲಾಗಿದೆ ಎಂದು ಆರೋಗ್ಯ ಸೇವೆಗಳ ಮಹಾನಿರ್ದೇಶಕರು (ಡಿಜಿಹೆಚ್ಎಸ್) ನಿರ್ದೇಶನವನ್ನು ಹೊರಡಿಸಿದ್ದಾರೆ. ಭೌತಚಿಕಿತ್ಸಕರು ‘ಡಾಕ್ಟರ್‌ ಎಂಬ ಶೀರ್ಷಿಕೆಯನ್ನು ಪೂರ್ವಪ್ರತ್ಯಯ ಮತ್ತು ‘ಪಿಟಿ’ ಪ್ರತ್ಯಯವನ್ನು ಬಳಸುವುದರ ಬಗ್ಗೆ ಭಾರತೀಯ ಭೌತಚಿಕಿತ್ಸಾ ಔಷಧ ಮತ್ತು ಪುನರ್ವಸತಿ ಸಂಘ ಸೇರಿದಂತೆ ವೈದ್ಯಕೀಯ ಸಂಸ್ಥೆಗಳಿಂದ ಹಲವಾರು ಪ್ರಾತಿನಿಧ್ಯಗಳು ಮತ್ತು ಆಕ್ಷೇಪಣೆಗಳ ನಂತರ ಈ ಸ್ಪಷ್ಟೀಕರಣ ಬಂದಿದೆ. ಭೌತಚಿಕಿತ್ಸಕರು

‘ಭೌತಚಿಕಿತ್ಸಕರು ಹೆಸರಿನ ಮೊದಲು ‘ಡಾ’ ಶೀರ್ಷಿಕೆಯನ್ನು ಬಳಸುವಂತಿಲ್ಲ ‘- ಆರೋಗ್ಯ ಸೇವೆಗಳ ಮಹಾನಿರ್ದೇಶಕರು ಸ್ಪಷ್ಟನೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಪೃಥ್ವಿ ಶಾಗೆ 100 ರೂ. ದಂಡ ವಿಧಿಸಿದ ಮುಂಬೈ ನ್ಯಾಯಾಲಯ

(ನ್ಯೂಸ್‌ ಕಡಬ) newskadaba.com, ಸೆ.10  ಮುಂಬಯಿ : ಭೋಜಪುರಿ ನಟಿ ಸಪ್ನಾ ಗಿಲ್‌  ಅವರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊರಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರತಿಕ್ರಿಯೆ ಸಲ್ಲಿಸಲು ವಿಫಲವಾದ ಭಾರತೀಯ ಕ್ರಿಕೆಟಿಗ ಪೃಥ್ವಿ ಶಾ(Prithvi Shaw) ಅವರಿಗೆ ಮುಂಬೈನ ಸೆಷನ್ಸ್ ನ್ಯಾಯಾಲಯ 100 ರೂ.ದಂಡ ವಿಧಿಸಿದೆ. ಸಪ್ನಾ ಗಿಲ್‌ ಅವರು ಏಪ್ರಿಲ್ 2024 ರಲ್ಲಿ ದಿನೋಶಿ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಹಿಂದಿನ ಮ್ಯಾಜಿಸ್ಟ್ರೇಟ್ ಆದೇಶದ ವಿರುದ್ಧ ಕ್ರಿಮಿನಲ್ ಪರಿಷ್ಕರಣಾ ಅರ್ಜಿಯನ್ನು ಸಲ್ಲಿಸಿದ್ದರು. ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಪೃಥ್ವಿ

ಪೃಥ್ವಿ ಶಾಗೆ 100 ರೂ. ದಂಡ ವಿಧಿಸಿದ ಮುಂಬೈ ನ್ಯಾಯಾಲಯ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸಿಜೆಐ, ರಾಷ್ಟ್ರಪತಿ, ಉಪ ರಾಷ್ಟ್ರಪತಿ…. ದೇಶದ 3 ಉನ್ನತ ಹುದ್ದೆಯನ್ನು ಪಡೆದ ಏಕೈಕ ವ್ಯಕ್ತಿ

(ನ್ಯೂಸ್‌ ಕಡಬ) newskadaba.com, ಸೆ.10  ನವದೆಹಲಿ: ದೇಶವು ಈಗ ಹೊಸ ಉಪರಾಷ್ಟ್ರಪತಿಯನ್ನು ಸ್ವಾಗತಿಸಲು ಸಜ್ಜಾಗಿದೆ. ಈ ನಡುವೆ ದೇಶದ ಅತ್ಯಂತ ಉನ್ನತ ಹುದ್ದೆಯನ್ನು ಅಲಂಕರಿಸಿರುವ ವ್ಯಕ್ತಿಯೊಬ್ಬರು ನೆನಪಾಗುತ್ತಾರೆ. ಇದೊಂದು ದೇಶದ ಇತಿಹಾಸದಲ್ಲೊಂದು ಗಮನಾರ್ಹ ಅಧ್ಯಾಯ. ಈ ಉನ್ನತ ಹುದ್ದೆಯನ್ನು ಅಲಂಕರಿಸಿದ ಏಕೈಕ ವ್ಯಕ್ತಿ ಎಂದರೆ ನ್ಯಾಯಮೂರ್ತಿ ಮೊಹಮ್ಮದ್ ಹಿದಾಯತುಲ್ಲಾ ಇವರು ದೇಶದ ಮುಖ್ಯ ನ್ಯಾಯಮೂರ್ತಿಯಾಗಿ ಹಂಗಾಮಿ ರಾಷ್ಟ್ರಪತಿಯಾಗಿ ಮತ್ತು ಉಪರಾಷ್ಟ್ರಪತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಮೊಹಮ್ಮದ್ ಹಿದಾಯತುಲ್ಲಾ 1905ರ ಡಿಸೆಂಬರ್ 17ರಂದು ಜನಿಸಿದ ಹಿದಾಯತುಲ್ಲಾ ಅವರು ಕಾನೂನು ವೃತ್ತಿಜೀವನವನ್ನು ಪ್ರಾರಂಭಿಸಿ ಉನ್ನತ

ಸಿಜೆಐ, ರಾಷ್ಟ್ರಪತಿ, ಉಪ ರಾಷ್ಟ್ರಪತಿ…. ದೇಶದ 3 ಉನ್ನತ ಹುದ್ದೆಯನ್ನು ಪಡೆದ ಏಕೈಕ ವ್ಯಕ್ತಿ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಶೋರೂಮ್‌ನಲ್ಲಿ ಹೊಸ ಕಾರು ಸಮೇತ ಕೆಳಮಹಡಿಗೆ ಬಿದ್ದ ಮಹಿಳೆ

(ನ್ಯೂಸ್‌ ಕಡಬ) newskadaba.com, ಸೆ.10  ದೆಹಲಿ : ಹೊಸ ವಾಹನವನ್ನು ಖರೀದಿಸಿದಾಗ ಹಬ್ಬದ ಹರ್ಷ, ಆದರೆ ದೆಹಲಿಯ ನಿರ್ಮಾಣ್ ವಿಹಾರ್‌ನಲ್ಲಿ ಒಂದು ಅಪರೂಪದ ಘಟನೆ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಮಹೀಂದ್ರಾ ಥಾರ್ ಕಾರು ಖರೀದಿಸಿದ ಮಹಿಳೆ ಪೂಜೆಗಾಗಿ ನಿಂಬೆಹಣ್ಣಿನ ಮೇಲೆ ಕಾರು ಚಲಾಯಿಸಲು ಯತ್ನಿಸಿದಾಗ, ಆ ಹೊಸ ಕಾರು ನೇರವಾಗಿ ಶೋರೂಮ್‌ನ ಮೊದಲ ಮಹಡಿಯಿಂದ ಕೆಳಗೆ ಬಿದ್ದು ಭಾರೀ ಅನಾಹುತ ಉಂಟಾದ ಘಟನೆ ನಡೆದಿದೆ. ಮಾನಿ ಪವಾರ್ ಎಂಬ ಮಹಿಳೆ, ದೆಹಲಿಯ ಮಹೀಂದ್ರಾ ಶೋರೂಮ್‌ಗೆ ಬಂದು ರೂ.27 ಲಕ್ಷ ಮೌಲ್ಯದ

ಶೋರೂಮ್‌ನಲ್ಲಿ ಹೊಸ ಕಾರು ಸಮೇತ ಕೆಳಮಹಡಿಗೆ ಬಿದ್ದ ಮಹಿಳೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸಿ.ಪಿ ರಾಧಕೃಷ್ಣನ್ ನೂತನ ಉಪ ರಾಷ್ಟ್ರಪತಿಯಾಗಿ ಆಯ್ಕೆ

(ನ್ಯೂಸ್‌ ಕಡಬ) newskadaba.com,  ಸೆ.10  ನವದೆಹಲಿ : ಎನ್‌ಡಿಎ ಅಭ್ಯರ್ಥಿಯೂ ಆಗಿರುವ ಮಹಾರಾಷ್ಟ್ರದ ಹಾಲಿ ರಾಜ್ಯಪಾಲ ಸಿ.ಪಿ ರಾಧಾಕೃಷ್ಣನ್‌  ಅವರು ನೂತನ ಉಪರಾಷ್ಟ್ರಪತಿ ಆಗಿ ಆಯ್ಕೆಯಾಗಿದ್ದಾರೆ. ಜಗದೀಪ್ ಧನ್ಕರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಉಪರಾಷ್ಟ್ರಪತಿ (Vice President) ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯುವ ಮೂಲಕ ಸಿ.ಪಿ ರಾಧಾಕೃಷ್ಣನ್‌ ಗೆಲುವು ಸಾಧಿಸಿದರು. ಈ ಮೂಲಕ 17ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾದರು. ಪ್ರತಿಸ್ಪರ್ಧಿಯಾಗಿದ್ದ ಇಂಡಿ ಅಭ್ಯರ್ಥಿ ಮತ್ತು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ. ಬಿ.ಸುದರ್ಶನ್ ರೆಡ್ಡಿ ಪರಾಭವಗೊಂಡರು. ಬಿಆರ್‌ಎಸ್‌,

ಸಿ.ಪಿ ರಾಧಕೃಷ್ಣನ್ ನೂತನ ಉಪ ರಾಷ್ಟ್ರಪತಿಯಾಗಿ ಆಯ್ಕೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಪ್ರತಿಭಟನೆ ಬೆನ್ನಲ್ಲೇ ನೇಪಾಳದಲ್ಲಿ ಸಾಮಾಜಿಕ ಜಾಲತಾಣ ನಿಷೇಧ ಹಿಂಪಡೆದ ಸರ್ಕಾರ

(ನ್ಯೂಸ್‌ ಕಡಬ) newskadaba.com ಸೆ. 09. ಯೂಟ್ಯೂಬ್, ಫೇಸ್‌ಬುಕ್, ಎಕ್ಸ್ ಸೇರಿ 26 ಸಾಮಾಜಿಕ ಜಾಲತಾಣಗಳ ಮೇಲೆ ನೇಪಾಳ ಸರ್ಕಾರ ಹೇರಿದ್ದ ನಿಷೇಧವನ್ನು ವಿರೋಧಿಸಿ ನೇಪಾಳದ ಜನರು ಭಾರೀ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಸರಕಾರ ನಿಷೇಧವನ್ನು ಹಿಂದಕ್ಕೆ ಪಡೆದಿದೆ.   ಸಚಿವ ಸಂಪುಟದ ತುರ್ತು ಸಭೆ ಕರೆದು ಸಾಮಾಜಿಕ ಜಾಲತಾಣಗಳ ಮೇಲಿನ ನಿಷೇಧವನ್ನು ವಾಪಾಸ್ ಪಡೆಯಲಾಗಿದೆ. ಇನ್ನು ಮುಂದೆ ಎಂದಿನಂತೆ ಸೋಷಿಯಲ್ ಮೀಡಿಯಾ ಕಾರ್ಯನಿರ್ವಹಿಸುತ್ತದೆ. ಅಲ್ಲದೇ ಈ ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸೂಕ್ತ ಪರಿಹಾರ ಹಾಗೂ ಗಾಯಾಳುಗಳಿಗೆ

ಪ್ರತಿಭಟನೆ ಬೆನ್ನಲ್ಲೇ ನೇಪಾಳದಲ್ಲಿ ಸಾಮಾಜಿಕ ಜಾಲತಾಣ ನಿಷೇಧ ಹಿಂಪಡೆದ ಸರ್ಕಾರ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಪತಿಯ ಜೊತೆ ಜಗಳ – ಜೀವಾಂತ್ಯಕ್ಕೆ ಯೋಚಿಸಿದಾಕೆಯ ಜೀವ ಉಳಿಸಿದ ಮೊಸಳೆ..!

(ನ್ಯೂಸ್‌ ಕಡಬ) newskadaba.com ಸೆ. 09. ಗಂಡನ ಜಗಳದಿಂದ ಮನನೊಂದು, ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯೊಬ್ಬರು ಮೊಸಳೆ ಕಣ್ಣಿಗೆ ಬಿದ್ದ ಕೂಡಲೇ ಮರ ಹತ್ತಿ ಜೀವ ಉಳಿಸಿಕೊಂಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಸುರೇಶ್ ಎಂಬವರ ಪತ್ನಿ ಮಾಲತಿ ಎಂಬವರು ಚಹಾ ತಯಾರಿಸಲು ಮನಸ್ಸಿಲ್ಲದ ಕಾರಣ ಗಂಡನಿಗೆ “ನೀವೇ ಮಾಡಿ” ಎಂದಿದ್ದರು. ಈ ಒಂದು ಮಾತು ದೊಡ್ಡ ಜಗಳಕ್ಕೆ ದಾರಿ ಮಾಡಿಕೊಟ್ಟಿತ್ತು. ಜಗಳದ ಬಳಿಕ ಕೋಪದಿಂದ ಮನೆಯಿಂದ ಹೊರಟ ಪತ್ನಿ ನೇರವಾಗಿ ಗಂಗಾ ಸೇತುವೆಯವರೆಗೆ ನಡೆದು ಹೋಗಿ,

ಪತಿಯ ಜೊತೆ ಜಗಳ – ಜೀವಾಂತ್ಯಕ್ಕೆ ಯೋಚಿಸಿದಾಕೆಯ ಜೀವ ಉಳಿಸಿದ ಮೊಸಳೆ..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ನಾಳೆ ಉಪರಾಷ್ಟ್ರಪತಿ ಚುನಾವಣೆ

(ನ್ಯೂಸ್‌ ಕಡಬ) newskadaba.com,  ಸೆ.08 :  ಮುಂದಿನ ಉಪರಾಷ್ಟ್ರಪತಿ ಯಾರಾಗುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಗೆಲ್ಲುವ ನಿರೀಕ್ಷೆ ಇದ್ದರೂ ಗೆಲುವಿನ ಅಂತರ ಕಡಿಮೆಯಾಗಬಹುದು ಎನ್ನಲಾಗುತ್ತಿದೆ. ಹೀಗಾಗಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿ ಕೂಟ ಪ್ರತಿ ಮತವನ್ನು ಕೂಡ ಲೆಕ್ಕ ಹಾಕುತ್ತಿದೆ. ಉಪರಾಷ್ಟ್ರಪತಿ ಚುನಾವಣೆಯು ರಹಸ್ಯ ಮತದಾನದ ಮೂಲಕ ನಡೆಯುತ್ತದೆ. ಹೀಗಾಗಿ ಎಲ್ಲ ಸಂಸದರು ತಮ್ಮ ಇಚ್ಛೆಯಂತೆ ಮತ ಚಲಾಯಿಸುತ್ತಾರೆ. ಹೀಗಾಗಿ ಇದು ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ.

ನಾಳೆ ಉಪರಾಷ್ಟ್ರಪತಿ ಚುನಾವಣೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top