ರಾಷ್ಟ್ರೀಯ ನ್ಯೂಸ್

ಕಾಲೇಜು ಶಿಕ್ಷಣ ಮುಗಿಸಿದ ವಿದ್ಯಾರ್ಥಿನಿಯರಿಗೆ ಭರ್ಜರಿ ಆಫರ್ ಘೋಷಣೆ ➤ ಪಿಯುಸಿ ಆದವರಿಗೆ 15 ಸಾವಿರ ಹಾಗೂ ಡಿಗ್ರಿ ಮುಗಿಸಿದವರಿಗೆ 25ಸಾವಿರದ ವಿಶೇಷ ಪ್ಯಾಕೇಜ್

(ನ್ಯೂಸ್ ಕಡಬ) newskadaba.com ಪಾಟ್ನಾ, ಫೆ. 04. ಪಿಯುಸಿ ತೇರ್ಗಡೆಯಾಗಿರುವ ಅವಿವಾಹಿತ ಹೆಣ್ಣು ಮಕ್ಕಳಿಗೆ ರೂ. 25 ಸಾವಿರ ಹಾಗೂ ಪದವಿ ಶಿಕ್ಷಣವನ್ನು ಮುಗಿಸಿದ ವಿವಾಹಿತ ಮತ್ತು ಅವಿವಾಹಿತ ಹೆಣ್ಣುಮಕ್ಕಳಿಗೆ 50 ಸಾವಿರ ರೂ. ನೀಡಲಾಗುವುದು ಎಂದು ಬಿಹಾರ ಸರ್ಕಾರ ಘೋಷಣೆ ಮಾಡಿದೆ. ಸ್ತ್ರೀಯರ ಆರ್ಥಿಕ ನೆರವು ಹಾಗೂ ವಿದ್ಯಾಭ್ಯಾಸ ಸೇರಿದಂತೆ 20 ಅಂಶಗಳ ಯೋಜನೆಗೆ ಜಾರಿಗೆ ನಿರ್ಧರಿಸಿರುವ ನಿತೀಶ್ ಕುಮಾರ್ ಸರ್ಕಾರ ಅವಿವಾಹಿತ ಮತ್ತು ವಿವಾಹಿತ ಸ್ತ್ರೀಯರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಬಿಹಾರದಲ್ಲಿ ಫೆ. 1 […]

ಕಾಲೇಜು ಶಿಕ್ಷಣ ಮುಗಿಸಿದ ವಿದ್ಯಾರ್ಥಿನಿಯರಿಗೆ ಭರ್ಜರಿ ಆಫರ್ ಘೋಷಣೆ ➤ ಪಿಯುಸಿ ಆದವರಿಗೆ 15 ಸಾವಿರ ಹಾಗೂ ಡಿಗ್ರಿ ಮುಗಿಸಿದವರಿಗೆ 25ಸಾವಿರದ ವಿಶೇಷ ಪ್ಯಾಕೇಜ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಭಾರತದ ಅತೀಕಿರಿಯ ಫೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕಾಶ್ಮೀರದ ಆಯೆಷಾ ಅಝೀಝ್

(ನ್ಯೂಸ್ ಕಡಬ) newskadaba.com ನವದೆಹಲಿ, ಫೆ. 04. ದೇಶದ ಅತೀ ಕಿರಿಯ ಪೈಲಟ್ ಎಂಬ ಹೆಗ್ಗಳಿಕೆಗೆ ಕಾಶ್ಮೀರದ 25 ವರ್ಷದ ಯುವತಿ ಆಯೆಷಾ ಅಝೀಝ್ ಎಮಬವರು ಪಾತ್ರರಾಗಿದ್ದಾರೆ. 2011ರಲ್ಲಿ ತನ್ನ ಹದಿನೈದನೇ ವಯಸ್ಸಿನಲ್ಲಿ ವಾಯುಯಾನ ಪರವಾನಗಿ ಪಡೆದುಕೊಂಡು ಈಕೆ ಕಿರಿಯ ವಿದ್ಯಾರ್ಥಿನಿ ಎಂಬ ಕೀರ್ತಿಗೂ ಪಾತ್ರರಾಗಿದ್ದರು. ರಷ್ಯಾದ ಸೊಕೊಲ್ ನಲ್ಲಿ ಮಿಗ್ 29 ಚಾಲನೆಯ ತರಬೇತಿ ಪಡೆದುಕೊಂಡು, ಬಾಂಬೆ ಫ್ಲೈಯಿಂಗ್ ಕ್ಲಬ್ ನಿಂದ ವಾಯುಯಾನದ ಪದವಿ ಪಡೆದಿರುವ ಇವರು 2017ರಲ್ಲಿ ವಾಣಿಜ್ಯ ಪರವಾನಗಿಯನ್ನು ಪಡೆದುಕೊಂಡಿದ್ದಾರೆ.

ಭಾರತದ ಅತೀಕಿರಿಯ ಫೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕಾಶ್ಮೀರದ ಆಯೆಷಾ ಅಝೀಝ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸಿಎಂ ಕಾರ್ಯಕ್ರಮದಲ್ಲಿ ಬಿರಿಯಾನಿ ಸೇವಿಸಿದ 145 ಮಂದಿ ಅಸ್ವಸ್ಥ

(ನ್ಯೂಸ್ ಕಡಬ) newskadaba.com ಅಸ್ಸಾಂ, ಫೆ. 04. ಅಸ್ಸಾಂನ ಸಿಎಂ ಭಾಗವಹಿಸಿದ್ದರೆನ್ನಲಾದ ಕಾರ್ಯಕ್ರಮವೊಂದರಲ್ಲಿ ಬಿರಿಯಾನಿ ಸೇವಿಸಿದ ಸಚಿವರು ಸೇರಿದಂತೆ 145 ಜನರು ಅಸ್ವಸ್ಥರಾಗಿರುವ ಘಟನೆ ಅಸ್ಸಾಮಿನ ಕರ್ಬಿ ಅಂಗ್ಲಾಂಗ್ ಜಿಲ್ಲೆಯಲ್ಲಿ ನಡೆದಿದೆ. ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಕೋರ್ಸ್ ನ ಶೈಕ್ಷಣಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಆಹಾರ ಸೇವಿಸಿ ಅಸ್ವಸ್ಥಗೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರ ಪೈಕಿ 145 ಮಂದಿ ಗುವಾಹಟಿಯ ಆಸ್ಪತ್ರೆಗೆ ದಾಖಲಾಗಿದ್ದಾರೆನ್ನಲಾಗಿದೆ. ಕಾರ್ಯಕ್ರಮದಲ್ಲಿ ಪ್ಯಾಕ್ ಮಾಡಲಾಗಿದ್ದ ಬಿರಿಯಾನಿಯನ್ನು ಹಂಚಲಾಗಿತ್ತು. ಒಟ್ಟು 8 ಸಾವಿರ

ಸಿಎಂ ಕಾರ್ಯಕ್ರಮದಲ್ಲಿ ಬಿರಿಯಾನಿ ಸೇವಿಸಿದ 145 ಮಂದಿ ಅಸ್ವಸ್ಥ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಾಸರಗೋಡು: ಟಿವಿ ಮೈಮೇಲೆ ಬಿದ್ದು ಎರಡು ವರ್ಷದ ಮಗು ಮೃತ್ಯು

(ನ್ಯೂಸ್ ಕಡಬ) newskadaba.com ಕಾಸರಗೋಡು, ಫೆ. 04. ಟಿವಿ ಮೈಮೇಲೆ ಬಿದ್ದ ಎರಡು ವರ್ಷದ ಮೃತಪಟ್ಟ ಘಟನೆ ಬೋವಿಕಾನ ಎಂಬಲ್ಲಿ ನಡೆದಿದೆ. ತೆಕ್ಕಿಲ್ ಉಕ್ರಂಪಾಡಿಯ ನಿಸಾರ್ ಹಾಗೂ ಫಾಯಿಝ ದಂಪತಿಯ ಪುತ್ರ ಮುಹಮ್ಮದ್ ಶಾಕಿರ್(2) ಎಂದು ಗುರುತಿಸಲಾಗಿದೆ. ಮಗುವು ಆಟವಾಡುತ್ತಾ ಟಿವಿಯ ಕೇಬಲ್ ವಯ್ ಎಳೆದ ಸಂದರ್ಭ ಸ್ಟ್ಯಾಂಡ್ ಸಹಿತ ಟಿವಿ ಮೈಮೇಲೆ ಬಿದ್ದಿದ್ದು, ಶಬ್ದ ಕೇಳಿ ಮನೆಯವರು ಧಾವಿಸಿ ಬಂದಾಗ ಮಗುವಿನ ಮೇಲೆ ಟಿವಿ ಸ್ಟ್ಯಾಂಡ್ ಬಿದ್ದಿರುವುದು ಕಂಡುಬಂದಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಿ ಮಗು

ಕಾಸರಗೋಡು: ಟಿವಿ ಮೈಮೇಲೆ ಬಿದ್ದು ಎರಡು ವರ್ಷದ ಮಗು ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಫೆ. 06 ರಂದು ಇಂಟರ್ನೆಟ್ ನಿಷೇಧ ವಿರೋಧಿಸಿ ರಸ್ತೆ ಬಂದ್ ಗೆ ರೈತ ಸಂಘಟನೆ ಕರೆ

(ನ್ಯೂಸ್ ಕಡಬ) newskadaba.com ನವದೆಹಲಿ, ಫೆ. 02. ಕೇಂದ್ರ ಸರ್ಕಾರ ಜಾರಿಗೊಳಿಸಿದ ಕೃಷಿ ಮಸೂದೆಯ ವಿರುದ್ದ ರೈತರು ಪ್ರತಿಭಟನೆಯಲ್ಲಿ ನಿರತರಾಗಿರುವ ಸ್ಥಳೀಯ ಪ್ರದೇಶಗಳಲ್ಲಿ ಇಂಟರ್ನೆಟ್ ನಿಷೇಧ ಹಾಗೂ ಅಧಿಕಾರಿಗಳು ತಮಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ರೈತ ಸಂಘಟನೆಗಳು, ದೇಶಾದ್ಯಂತ ರಸ್ತೆ ಬಂದ್ ಘೋಷಿಸಿವೆ. ಈ ಕುರಿತು ಇಂಟರ್ನೆಟ್ ನಿಷೇಧವನ್ನು ವಿರೋಧಿಸಿ ಫೆಬ್ರುವರಿ 6 ರಂದು ಮಧ್ಯಾಹ್ನ 12 ರಿಂದ ಮಧ್ಯಾಹ್ನ 3 ರ ತನಕ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು ಮೂರು ಗಂಟೆಗಳ ಕಾಲ ಬಂದ್

ಫೆ. 06 ರಂದು ಇಂಟರ್ನೆಟ್ ನಿಷೇಧ ವಿರೋಧಿಸಿ ರಸ್ತೆ ಬಂದ್ ಗೆ ರೈತ ಸಂಘಟನೆ ಕರೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಈ ರಾಜ್ಯದಲ್ಲಿ ಬಿಜೆಪಿಗೆ ಟಿಕೆಟ್ ಸಿಗಲ್ಲ..!

(ನ್ಯೂಸ್ ಕಡಬ) newskadaba.com ಗುಜರಾತ್, ಫೆ. 02. ಬಿಜೆಪಿ ಘಟಕ ಸ್ಥಳೀಯ ಹಾಗೂ ನಾಗರಿಕ ಚುನಾವಣೆಯಲ್ಲಿ ಪಕ್ಷದಿಂದ ನೀಡಲಾಗುವ ಟಿಕೆಟ್ ಪಡೆಯಬೇಕೆಂದರೆ ಕೆಲ ಮಾನದಂಡಗಳನ್ನ ವಿಧಿಸಿದ್ದು, ಇದರನ್ವಯ 60 ವರ್ಷಕ್ಕಿಂತ ಮೇಲ್ಪಟ್ಟವರು, ಮೂರು ಬಾರಿ ಚುನಾವಣೆಯಲ್ಲಿ ಆಯ್ಕೆಯಾದವರು ಹಾಗೂ ರಾಜಕಾರಣಿಗಳ ಸಂಬಂಧಿಗಳಿಗೆ ಬಿಜೆಪಿ ಟಿಕೆಟ್ ಸಿಗೋದಿಲ್ಲ ಎಂದು ಹೇಳಿದೆ. ಈ ಬಗ್ಗೆ ಸ್ವತಃ ಗುಜರಾತ್ ಬಿಜೆಪಿ ಅಧ್ಯಕ್ಷ ಸಿ.ಆರ್. ಪಾಟೀಲ್ ಅಧಿಕೃತ ಮಾಹಿತಿ ನೀಡಿದ್ದಾರೆ. ಮುಂಬರುವ ಮುನ್ಸಿಪಾಲ್ ಕಾರ್ಪೋರೇಷನ್ ಚುನಾವಣೆ ಸಂಬಂಧ ನಡೆಸಲಾದ ಸಭೆಯಲ್ಲಿ ಬಿಜೆಪಿ ಮುಖಂಡರು

60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಈ ರಾಜ್ಯದಲ್ಲಿ ಬಿಜೆಪಿಗೆ ಟಿಕೆಟ್ ಸಿಗಲ್ಲ..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಪೊಲಿಯೋ ಬದಲು ಸ್ಯಾನಿಟೈಸರ್ ನೀಡಿದ ಆರೋಗ್ಯ ಸಿಬ್ಬಂದಿ ➤ 12 ಮಕ್ಕಳು ಅಸ್ವಸ್ಥ

(ನ್ಯೂಸ್ ಕಡಬ) newsladaba.com ಮುಂಬೈ, ಫೆ. 02. 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಬದಲಿಗೆ ಸ್ಯಾನಿಟೈಸರ್ ನೀಡಿದ ದುರದೃಷ್ಟಕರ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಸ್ಯಾನಿಟೈಸರ್ ನೀಡಿದ್ದರಿಂದಾಗಿ 12 ಮಕ್ಕಳು ಅಸ್ವಸ್ಥರಾಗಿದ್ದು, ಮಕ್ಕಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯವತ್ಮಲ್ ಜಿಲ್ಲೆಯ 5 ವರ್ಷದೊಳಗಿನ ಮಕ್ಕಳಿಗೆ ಆರೋಗ್ಯ ಸಿಬ್ಬಂದಿ ಪೋಲಿಯೋ ಲಸಿಕೆ ಹಾಕುವ ಬದಲು ಯಡವಟ್ಟು ಮಾಡಿ ಹ್ಯಾಂಡ್ ಸ್ಯಾನಿಟೈಸರ್ ನೀಡಿದ್ದಾರೆ. ಅಸ್ವಸ್ಥ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನಂತರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಲೋಪವೆಸಗಿದ ಮೂವರು

ಪೊಲಿಯೋ ಬದಲು ಸ್ಯಾನಿಟೈಸರ್ ನೀಡಿದ ಆರೋಗ್ಯ ಸಿಬ್ಬಂದಿ ➤ 12 ಮಕ್ಕಳು ಅಸ್ವಸ್ಥ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಪೆಟ್ರೋಲ್ ಡೀಸೆಲ್ ಬೆಲೆ ಮತ್ತಷ್ಟು ದುಬಾರಿ..!

(ನ್ಯೂಸ್ ಕಡಬ) newskadaba.com ನವದೆಹಲಿ, ಫೆ. 01. ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಳವಾಗುತ್ತಲೇ ಇದ್ದು, ಇಂದು ಪ್ರತೀ ಲೀಟರ್ ಪೆಟ್ರೋಲ್ ಗೆ 2.50 ಪೈಸೆ ಹೆಚ್ಚಳ ಮಾಡಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಯ ವೇಳೆ ತಿಳಿಸಿದ್ದಾರೆ. ಹಾಗೆಯೇ ಡೀಸೆಲ್ ಬೆಲೆಯೂ ಲೀಟರ್ ಗೆ 4ರೂ. ಏರಿಕೆಯಾಗಿದ್ದು, ಎರಡೂ ತೈಲ ಉತ್ಮನ್ನಗಳ ಮೇಲೆ ಕೃಷಿ ಸೆಸ್ ವಿಧಿಸಲಾಗಿದೆ. ಈ ಮೂಲಕ ಆರ್ಥಿಕ ಸಂಪನ್ಮೂಲ ಸಂಗ್ರಹಕ್ಕೆ ಕೇಂದ್ರ ಸರಕಾರ ಸಿದ್ದವಾಗಿದೆ.

ಪೆಟ್ರೋಲ್ ಡೀಸೆಲ್ ಬೆಲೆ ಮತ್ತಷ್ಟು ದುಬಾರಿ..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ತೆರಿಗೆಯಿಂದ ವಿನಾಯಿತಿ ನೀಡಿದ ಕೇಂದ್ರ ಸರ್ಕಾರ..!

(ನ್ಯೂಸ್ ಕಡಬ) newskadaba.com ನವದೆಹಲಿ, ಫೆ. 01. ಕೊರೋನಾದಿಂದಾಗಿ ಕಂಗೆಟ್ಟ ಆರ್ಥಿಕ ವ್ಯವಸ್ಥೆಯನ್ನು ಮೇಲೆತ್ತುವ ಸಲುವಾಗಿ 2021 ರ ಬಜೆಟ್ ಇಂದು ಮಂಡಿಸಲಾಗಿದ್ದು, ಹಿರಿಯ ನಾಗರಿಕರಿಗೆ ವಿನಾಯಿತಿ ನೀಡಲಾಗಿದೆ. ಬಜೆಟ್ ಮಂಡನೆ ಮಾಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆದಾಯ ತೆರಿಗೆ ವಿನಾಯಿತಿಯಲ್ಲಿ ಯಾವುದೇ ಬದಲಾವಣೆಯಿಲ್ಲ, ಆದಾಯ ತೆರಿಗೆ ಯಥಾ ಸ್ಥಿತಿಯಲ್ಲೇ ಮುಂದುವರೆಯಲಿದೆ. ಇದೇ ವೇಳೆ 75 ವರ್ಷಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರು, ಪಿಂಚಣಿಯಿಂದ ಬರುವ ಆದಾಯ, ಠೇವಣಿ ಮೇಲಿನ ಬಡ್ಡಿಗೆ ಐಟಿ ರಿಟರ್ನ್ಸ್ ಸಲ್ಲಿಸುವುದರಿಂದ

75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ತೆರಿಗೆಯಿಂದ ವಿನಾಯಿತಿ ನೀಡಿದ ಕೇಂದ್ರ ಸರ್ಕಾರ..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸ್ನಾನಕ್ಕೆಂದು ಹೊಳೆಗಿಳಿದ ಇಬ್ಬರು ಸಹೋದರರು ಮೃತ್ಯು

(ನ್ಯೂಸ್ ಕಡಬ) newskadaba.com ಕಾಸರಗೋಡು, ಫೆ. 01. ಸ್ನಾನಕ್ಕೆಂದು ಹೊಳೆಗೆ ಇಳಿದ ಸಹೋದರರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ರವಿವಾರ ಸಂಜೆ ಕುಂಬಳೆ ಸಮೀಪದ ಬಂಬ್ರಾಣ ಎಂಬಲ್ಲಿ ನಡೆದಿದೆ. ಮೃತಪಟ್ಟವರನ್ನು ಇಚ್ಲಂಗೋಡಿನ ಶರೀಫ್ ಎಂಬವರ ಪುತ್ರರಾದ ಶದಾದ್ (12) ಮತ್ತು ಶಿಯಾಝ್ (8) ಎಂದು ಗುರುತಿಸಲಾಗಿದೆ. ಇವರಿಬ್ಬರು ಬಂಬ್ರಾಣ ಆಣೆಕಟ್ಟು ಸಮೀಪದ ಹೊಳೆಯಲ್ಲಿ ಪರಿಸರದ ಮಕ್ಕಳೊಂದಿಗೆ ಸ್ನಾನಕ್ಕಿಳಿದಿದ್ದು, ಈ ಸಂದರ್ಭ ಸಹೋದರರಿಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಈ ವೇಳೆ ಜೊತೆಗಿದ್ದ ಮಕ್ಕಳು ಬೊಬ್ಬೆ ಹಾಕಿದ್ದು, ವಿಷಯ ತಿಳಿದ

ಸ್ನಾನಕ್ಕೆಂದು ಹೊಳೆಗಿಳಿದ ಇಬ್ಬರು ಸಹೋದರರು ಮೃತ್ಯು Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top