ರಾಷ್ಟ್ರೀಯ ನ್ಯೂಸ್

ನಂದಿಗ್ರಾಮ ಚುನಾವಣಾ ಫಲಿತಾಂಶದಲ್ಲಿ ಬಿಗ್ ಟ್ವಿಸ್ಟ್..‼️ ➤ ದೀದಿಯನ್ನು ಮಣಿಸಿದ ಅಧಿಕಾರಿ..⁉️

(ನ್ಯೂಸ್ ಕಡಬ) newskadaba.com ಪಶ್ಚಿಮ ಬಂಗಾಳ, ಮೇ.02. ಭಾರೀ ಜಿದ್ದಾ ಜಿದ್ದಿನ ಕಣವಾಗಿದ್ದ ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಫಲಿತಾಂಶದ ಬಗ್ಗೆ ಗೊಂದಲ ಸೃಷ್ಟಿಯಾಗಿದ್ದು, ಬಿಜೆಪಿಯ ಸುವೇಂದು ಅಧಿಕಾರಿ ಜಯಗಳಿಸಿದ್ದಾರೆ ಎಂದು ಘೋಷಿಸಲಾಗಿದೆ. ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿಯವರು ಸುವೆಂದು ಅಧಿಕಾರಿಯನ್ನು 1200 ಮತಗಳಿಂದ ಸೋಲಿಸಿದ್ದಾರೆ ಎಂದು ಬಹುತೇಕ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಇದೀಗ ಚುನಾವಣಾ ಆಯೋಗವು ಬಿಜೆಪಿಯ ಸುವೆಂದು ಅಧಿಕಾರಿಯವರು ಮಮತಾರನ್ನು 1957 ಮತಗಳಿಂದ ಮಣಿಸಿದ್ದಾರೆ ಎಂದು ಹೇಳಿದ್ದಾಗಿ ವರದಿಯಾಗಿದೆ.    

ನಂದಿಗ್ರಾಮ ಚುನಾವಣಾ ಫಲಿತಾಂಶದಲ್ಲಿ ಬಿಗ್ ಟ್ವಿಸ್ಟ್..‼️ ➤ ದೀದಿಯನ್ನು ಮಣಿಸಿದ ಅಧಿಕಾರಿ..⁉️ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕ್ಲೈಮ್ಯಾಕ್ಸ್ ಗೆ ತೆರೆ ಎಳೆದ ಅಂಗಡಿ ➤ ರೋಚಕ ಕದನದಲ್ಲಿ ಮಂಗಳಾ ಅಂಗಡಿ ಜಯಭೇರಿ

ಬೆಳಗ್ಗೆಯಿಂದಲೂ ರೋಚಕತೆಯನ್ನು ಸೃಷ್ಟಿಸಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮಂಗಳಾ ಅಂಗಡಿ ಗೆಲುವಿನ ನಗೆ ಬೀರಿದ್ದಾರೆ. ಮಾಜಿ ಸಂಸದ ದಿ. ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಅವರ ಪತ್ನಿ ಮಂಗಳಾ ಅಂಗಡಿ ಬಿಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್ ನ ಸತೀಶ್ ಜಾರಕೀಹೊಳಿಯವರ ವಿರುದ್ಧ ಜಯ ಸಾಧಿಸಿದ್ದಾರೆ. ಈ ಮೂಲಕ ಬೆಳಗ್ಗಿನಿಂದ ನಡೆಯುತ್ತಿದ್ದ ರೋಚಕ ಕದನಕ್ಕೆ ಅಂತಿಮ ತೆರೆ ಬಿದ್ದಿದೆ.      

ಕ್ಲೈಮ್ಯಾಕ್ಸ್ ಗೆ ತೆರೆ ಎಳೆದ ಅಂಗಡಿ ➤ ರೋಚಕ ಕದನದಲ್ಲಿ ಮಂಗಳಾ ಅಂಗಡಿ ಜಯಭೇರಿ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ ಬೆಳಗಾವಿ ಕ್ಷೇತ್ರದ ಮತ ಎಣಿಕೆ ➤ ಜಿದ್ದಾ ಜಿದ್ದಿನ ಕಣದಲ್ಲಿ ಮಂಗಳಾ ಅಂಗಡಿ vs ಸತೀಶ್ ಜಾರಕಿಹೊಳಿ

ಇಡೀ ದೇಶವೇ ತೀವ್ರ ಕುತೂಹಲದಿಂದ ಗಮನಿಸುತ್ತಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆಯು ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ. ಆರಂಭದಲ್ಲಿ ಹತ್ತು ಸಾವಿರದಷ್ಟು ಮತಗಳ ಅಂತರದಿಂದ ಮುನ್ನಡೆಯಲ್ಲಿದ್ದ ಬಿಜೆಪಿಯ ಮಂಗಳಾ ಅಂಗಡಿಯವರು 40 ನೇ ಸುತ್ತಿನ ವೇಳೆಗೆ ಹಿನ್ನಡೆ ಅನುಭವಿಸಿದ್ದರು. ನಂತರ 10 ಸಾವಿರದಷ್ಟು ಮತಗಳ ಅಂತರದಿಂದ ಮುನ್ನಡೆಯಲ್ಲಿದ್ದ ಕಾಂಗ್ರೆಸ್ ನ ಸತೀಶ್ ಜಾರಕಿಹೊಳಿ ಇದೀಗ ಎರಡು ಸಾವಿರ ಮತಗಳ ಅಂತರದಲ್ಲಿದ್ದಾರೆ. ಮತ ಎಣಿಕೆಯು ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ್ದು, ಬೆಳಗಾವಿಯ ಜನತೆ ಯಾರ ಕೈ ಹಿಡೀತಾರೆ ಅನ್ನೋದು

ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ ಬೆಳಗಾವಿ ಕ್ಷೇತ್ರದ ಮತ ಎಣಿಕೆ ➤ ಜಿದ್ದಾ ಜಿದ್ದಿನ ಕಣದಲ್ಲಿ ಮಂಗಳಾ ಅಂಗಡಿ vs ಸತೀಶ್ ಜಾರಕಿಹೊಳಿ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಕೇರಳದಲ್ಲಿ ಶೂನ್ಯ ಸಾಧನೆ ತೋರಿದ ಬಿಜೆಪಿ ➤ ಎರಡೂ ಸ್ಥಾನಗಳಲ್ಲಿ ಸೋತ ಬಿಜೆಪಿ ರಾಜ್ಯಾಧ್ಯಕ್ಷ

ಕೇರಳ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಸೂನ್ಯ ಸಾಧನೆ ತೋರಿದ್ದು, ಕಳೆದ ಬಾರಿ ಗಳಿಸಿದ್ದ ಒಂದು ಸ್ಥಾನವನ್ನು ಕೂಡಾ ಈ ಬಾರಿಯ ಚುನಾವಣೆಯಲ್ಲಿ ಕಳೆದುಕೊಂಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸುರೇಂದ್ರನ್ ಮಂಜೇಶ್ವರ ಮತ್ತು ಕೋನಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರಾದರೂ ಎರಡೂ ಕ್ಷೇತ್ರಗಳಲ್ಲಿ ಸೋಲನುಭವಿಸಿ ಭಾರೀ ಮುಖಭಂಗಕ್ಕೆ ಒಳಗಾಗಿದ್ದಾರೆ. ಮೆಟ್ರೋ ಮ್ಯಾನ್ ಶ್ರೀಧರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರು ಗೆಲ್ಲುತ್ತಾರೆಂಬ ವಿಶ್ವಾಸ ಬಿಜೆಪಿಗೆ ಇತ್ತಾದರೂ ಕೊನೆ ಕ್ಷಣದಲ್ಲಿ ಉಲ್ಟಾ ಹೊಡೆದಿದೆ.    

ಕೇರಳದಲ್ಲಿ ಶೂನ್ಯ ಸಾಧನೆ ತೋರಿದ ಬಿಜೆಪಿ ➤ ಎರಡೂ ಸ್ಥಾನಗಳಲ್ಲಿ ಸೋತ ಬಿಜೆಪಿ ರಾಜ್ಯಾಧ್ಯಕ್ಷ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸುವೇಂದು ಅಧಿಕಾರಿಯನ್ನು ಸೋಲಿಸಿ ಗೆಲುವಿನ ನಗೆ ಬೀರಿದ ದೀದಿ ➤ ತೀವ್ರ ಕುತೂಹಲ ಕೆರಳಿಸಿದ್ದ ಪಶ್ಚಿಮ ಬಂಗಾಳದ ನಂದಿಗ್ರಾಮ

(ನ್ಯೂಸ್ ಕಡಬ) newskadaba.com ಪಶ್ಚಿಮ ಬಂಗಾಳ, ಮೇ.02. ತೀವ್ರ ಕುತೂಹಲ ಕೆರಳಿಸಿದ್ದ ಪಶ್ಚಿಮ ಬಂಗಾಳದ ನಂದಿ ಗ್ರಾಮ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ದೀದಿ ಗೆಲುವಿನ ನಗೆ ಬೀರಿದ್ದಾರೆ. ಮಮತಾ ಬ್ಯಾನರ್ಜಿಯ ಬಲಗೈ ಬಂಟ ಎಂದೇ ಗುರುತಿಸಿಕೊಂಡಿದ್ದ ಸುವೇಂದು ಅಧಿಕಾರಿ ತನ್ನ ಪರಿವಾರದೊಂದಿಗೆ ಸಾಮೂಹಿಕವಾಗಿ ಬಿಜೆಪಿ ಸೇರಿ ದೀದಿ ವಿರುದ್ಧ ಗುಡುಗಿದ್ದರು. ತಾನೇ ಸಾಕಿದ ಗಿಣಿ ಕುಕ್ಕುವುದನ್ನು ಅರಿತ ಮಮತಾ ಬ್ಯಾನರ್ಜಿಯವರು ಸುವೇಂದು ಅಧಿಕಾರಿಯವರ ವಿರುದ್ಧವಾಗಿ ನಿಂತು 1200 ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ. ಮಮತಾ ಬ್ಯಾನರ್ಜಿಯವರನ್ನು

ಸುವೇಂದು ಅಧಿಕಾರಿಯನ್ನು ಸೋಲಿಸಿ ಗೆಲುವಿನ ನಗೆ ಬೀರಿದ ದೀದಿ ➤ ತೀವ್ರ ಕುತೂಹಲ ಕೆರಳಿಸಿದ್ದ ಪಶ್ಚಿಮ ಬಂಗಾಳದ ನಂದಿಗ್ರಾಮ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಆಕ್ಸಿಜನ್ ಕೊರತೆಯ ನಡುವೆ ಮನೆಯಲ್ಲೇ ಅಕ್ರಮ ಆಕ್ಸಿಜನ್ ಸಿಲಿಂಡರ್ ಮಾರಾಟ ➤ ಆರೋಪಿ ಅಂದರ್, 48 ಸಿಲಿಂಡರ್ ವಶ

(ನ್ಯೂಸ್ ಕಡಬ) newskadaba.com ನವದೆಹಲಿ, ಎ. 24. ಮನೆಯಲ್ಲೇ ಅಕ್ರಮವಾಗಿ ಆಮ್ಲಜನಕ ಸಿಲಿಂಡರ್‌ಗಳನ್ನು ಸಂಗ್ರಹಿಸಿಟ್ಟು ಹೆಚ್ಚಿನ ಬೆಲೆಗೆ ವ್ಯಾಪಾರ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೆಳಕಿಗೆ ಬಂದಿದೆ. ಬಂಧಿತ ಆರೋಪಿಯನ್ನು ಅನಿಲ್ ಕುಮಾರ್​​ ಎಂದು ಗುರುತಿಸಲಾಗಿದೆ. ಈ ಕುರಿತಂತೆ ನಿಖರ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದಾಗ ದೆಹಲಿಯ ದಶರತ್​ಪುರ ಪ್ರದೇಶದ ಮನೆಯೊಂದರಲ್ಲಿ ತಲಾ 67 ಲೀಟರ್ ಸಾಮರ್ಥ್ಯವುಳ್ಳ 32 ದೊಡ್ಡ ಹಾಗೂ ತಲಾ 10 ಲೀಟರ್​ ಸಾಮರ್ಥ್ಯದ 16 ಸಣ್ಣ ಆಕ್ಸಿಜನ್​

ಆಕ್ಸಿಜನ್ ಕೊರತೆಯ ನಡುವೆ ಮನೆಯಲ್ಲೇ ಅಕ್ರಮ ಆಕ್ಸಿಜನ್ ಸಿಲಿಂಡರ್ ಮಾರಾಟ ➤ ಆರೋಪಿ ಅಂದರ್, 48 ಸಿಲಿಂಡರ್ ವಶ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಆಸ್ಪತ್ರೆಯ ಐಸಿಯುನಲ್ಲಿ ಬೆಂಕಿ ಅವಘಡ ➤ 13 ಕೊರೋನಾ ರೋಗಿಗಳು ಮೃತ್ಯು

(ನ್ಯೂಸ್ ಕಡಬ) newskadaba.com ಮಹಾರಾಷ್ಟ್ರ, ಎ. 23. ಇಲ್ಲಿನ ಪಾಲ್ಘರ್ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕದಲ್ಲಿ ಅಗ್ನಿ ಅವಘಢ ಸಂಭವಿಸಿದ ಪರಿಣಾಮ 13 ಮಂದಿ ಕೊರೋನಾ ರೋಗಿಗಳು ಮೃತಪಟ್ಟ ಘಟನೆ ಸಂಭವಿಸಿದೆ. ಬೆಳಗ್ಗಿನ ಜಾವ 3 ಗಂಟೆಯ ಬಳಿಕ ವಿರಾರ್‌ನ ನಾಲ್ಕು ಅಂತಸ್ತಿನ ವಿಜಯ್ ವಲ್ಲಭ್ ಆಸ್ಪತ್ರೆಯ ಎರಡನೇ ಮಹಡಿಯಲ್ಲಿ ಐಸಿಯುನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದು, ಮುಂಜಾನೆ 5.20ರ ವೇಳೆಗೆ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ ಎನ್ನಲಾಗಿದೆ. ತೀವ್ರ ನಿಗಾ

ಆಸ್ಪತ್ರೆಯ ಐಸಿಯುನಲ್ಲಿ ಬೆಂಕಿ ಅವಘಡ ➤ 13 ಕೊರೋನಾ ರೋಗಿಗಳು ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಎಡಪಕ್ಷ ನಾಯಕ ಸೀತಾರಾಂ ಯೆಚೂರಿಯವರ ಪುತ್ರ ಕೊರೋನಾಗೆ ಬಲಿ

(ನ್ಯೂಸ್ ಕಡಬ) newskadaba.com ನವದೆಹಲಿ, ಎ. 22. ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರ ಹಿರಿಯ ಮಗ ಆಶಿಶ್ ಎಂಬವರು ಗುರುವಾರದಂದು ನಿಧನರಾಗಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಸೀತಾರಾಂ ಯೆಚೂರಿ, ಜೂನ್ 9ರಂದು 35 ನೇ ವರ್ಷಕ್ಕೆ ಕಾಲಿಡಬೇಕಿದ್ದ ಆಶಿಶ್, ಗುರಗಾಂವ್‌ನ ಮೆಡಂತಾ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದರು. ಎರಡು ವಾರಗಳ ಕೊರೋನಾ ಜೊತೆಗಿನ ಹೋರಾಟದ ಬಳಿಕ ಇಂದು ಮುಂಜಾನೆ 5.30ರ ವೇಳೆಗೆ ಹಠಾತ್ ಮರಣವನ್ನು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

ಎಡಪಕ್ಷ ನಾಯಕ ಸೀತಾರಾಂ ಯೆಚೂರಿಯವರ ಪುತ್ರ ಕೊರೋನಾಗೆ ಬಲಿ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ದೇಶದಲ್ಲಿ ಕೊರೋನಾ ಮರಣ ಮೃದಂಗ ➤ ರಾತ್ರಿ 8.45ಕ್ಕೆ ದೇಶವನ್ನು ಉದ್ದೇಶಿಸಿ ಪ್ರಧಾನಿ ಮಾತು

(ನ್ಯೂಸ್ ಕಡಬ) newskadaba.com ನವದೆಹಲಿ, ಎ.20. ದೇಶದಲ್ಲಿ ಕೊರೋನಾ ಮರಣ ಮೃದಂಗ ಬಾರಿಸುತ್ತಿರುವುದರ ನಡುವೆಯೇ ರಾಜ್ಯದಲ್ಲಿ ಲಾಕ್‍ಡೌನ್ ಮಾಡುವ ಬಗ್ಗೆ ಚರ್ಚೆ ನಡೆದಿದೆ. ರಾಜ್ಯಪಾಲರ ನೇತೃತ್ವದಲ್ಲಿ ಸರ್ವ ಪಕ್ಷ ಸಭೆ ನಡೆದಿದ್ದು, ಲಾಕ್‍ಡೌನ್ ಮಾಡುವ ಬಗ್ಗೆ ಬಹುತೇಕ ನಾಯಕರು ಒಲವನ್ನು ವ್ಯಕ್ತಪಡಿಸಿದ್ದಾರೆ. ಈ ನಡುವೆಯೇ ಪ್ರಧಾನಿ ನರೇಂದ್ರ ಮೋದಿಯವರು ಇಂದು ರಾತ್ರಿ 8.45 ಕ್ಕೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನಿಯ ಮಾತಿನತ್ತ ಇದೀಗ ಎಲ್ಲರ ಚಿತ್ತ ಹರಿದಿದ್ದು, ಲಾಕ್‍ಡೌನ್ ವಿಚಾರವಾಗಿ ಪ್ರಮುಖ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.  

ದೇಶದಲ್ಲಿ ಕೊರೋನಾ ಮರಣ ಮೃದಂಗ ➤ ರಾತ್ರಿ 8.45ಕ್ಕೆ ದೇಶವನ್ನು ಉದ್ದೇಶಿಸಿ ಪ್ರಧಾನಿ ಮಾತು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ತಮಿಳು ಹಾಸ್ಯನಟ ವಿವೇಕ್ ವಿಧಿವಶ

(ನ್ಯೂಸ್ ಕಡಬ) newskadaba.com ಚೆನ್ನೈ, ಎ.17. ತಮಿಳು ಚಿತ್ರರಂಗದ ಖ್ಯಾತ ಹಾಸ್ಯನಟ ವಿವೇಕ್ (59) ಹೃದಯ ಸಂಬಂಧಿ ಅನಾರೋಗ್ಯದಿಂದಾಗಿ ಶನಿವಾರದಂದು ಮೃತಪಟ್ಟಿದ್ದಾರೆ‌. ಶುಕ್ರವಾರ ಸಂಜೆ ಹೃದಯಾಘಾತಕ್ಕೊಳಗಾದ ಹಿನ್ನೆಲೆಯಲ್ಲಿ ವಿವೇಕ್ ರನ್ನು ವದಪಳನಿಯಲ್ಲಿರುವ ಎಸ್ಐಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿವೇಕ್ ಅವರ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಆರೋಗ್ಯ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಆ್ಯಂಜಿಯೋಗ್ರಾಮ್ ಚಿಕಿತ್ಸೆಗಾಗಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಇಂದು ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.    

ತಮಿಳು ಹಾಸ್ಯನಟ ವಿವೇಕ್ ವಿಧಿವಶ Read More »

ರಾಷ್ಟ್ರೀಯ ನ್ಯೂಸ್
Scroll to Top