ರಾಷ್ಟ್ರೀಯ ನ್ಯೂಸ್

ಐಒಎ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಪಿ.ಟಿ ಉಷಾ ಆಯ್ಕೆ…!

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ. 09. ನಾಳೆ ನಡೆಯಲಿರುವ ಆಡಳಿತ ಮಂಡಳಿ ಚುನಾವಣೆಯಲ್ಲಿ ಭಾರತೀಯ ಒಲಿಂಪಿಕ್ ಅಸೋಸಿಯೇಶನ್ ನ ಮೊದಲ ಮಹಿಳಾ ಅಧ್ಯಕ್ಷರಾಗಿ ಪಿ.ಟಿ ಉಷಾ ಅವರು ಅಧಿಕೃತವಾಗಿ ಆಯ್ಕೆಯಾಗಲಿದ್ದಾರೆ‌.   ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ಹಾಗೂ 1984ರ ಲಾಸ್ ಏಂಜಲೀಸ್ ಒಲಿಂಪಿಕ್ 400 ಮೀ. ಹರ್ಡಲ್ಸ್ ಫೈನಲ್ಸ್ ನಲ್ಲಿ ನಾಲ್ಕನೇ ಸ್ಥಾನ ಗಳಿಸಿರುವ ಇವರು, ಸುಪ್ರೀಂ ಕೋರ್ಟ್ ನೇಮಿಸಿದ ನಿವೃತ್ತ ನ್ಯಾಯಾಧೀಶ ಎಲ್. ನಾಗೇಶ್ವರ ರಾವ್ ಮೇಲ್ವಿಚಾರಣೆಯಲ್ಲಿ ನಡೆಯುವ ಚುನಾವಣೆಯಲ್ಲಿ ಅವಿರೋಧವಾಗಿ […]

ಐಒಎ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಪಿ.ಟಿ ಉಷಾ ಆಯ್ಕೆ…! Read More »

ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮತ್ತೆ ಕರ್ನಾಟಕದಿಂದ – ಮಹಾರಾಷ್ಟ್ರಕ್ಕೆ ಶುರುವಾದ ಬಸ್ ಸಂಚಾರ

(ನ್ಯೂಸ್ ಕಡಬ) newskadaba.com ಬೆಳಗಾವಿ, ಡಿ. 09. ಮಹಾರಾಷ್ಟ್ರ ಗಡಿ ಪರಿಸ್ಥಿತಿ ನಿಯಂತ್ರಣಕ್ಕೆ ಮತ್ತೆ ಕೆಎಸ್ಆರ್ ಟಿಸಿ ಬಸ್ಸು ಗಳ ಸಂಚಾರ ಆರಂಭವಾಗಿದೆ. ಬೆಳಗಾವಿಯ ವಿವಿಧ ಭಾಗಗಳಿಂದ 400ಕ್ಕಿಂತಲೂ ಹೆಚ್ಚುಬಸ್ಸು ಗಳು ಶುಕ್ರವಾರದಂದು ತೆರಳಿದ್ದು, ಇದೇ ವೇಳೆ ಮಹಾರಾಷ್ಟ್ರದಿಂದಲೂ ಬೆಳಗಾವಿಗೆ ಹೆಚ್ಚುಬಸ್ಸು ಗಳು ಬಂದಿವೆ. ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಇದ್ದುದರಿಂದ ಎರಡೂ ರಾಜ್ಯಗಳಿಗೂ  ಬಸ್ ಸಂಚಾರ ಸ್ಥಗಿತವಾಗಿತ್ತು. ಈಗ  ಕೊಲ್ಲಾಪುರ, ಪುಣೆ, ಮುಂಬೈ , ಮಿರತ್,ಸಾಂಗ್ಲಿ ಸೇರಿದಂತೆ ಹಲವು ನಗರಗಳಿಗೆ ಕರ್ನಾಟಕದಿಂದ ಬಸ್ಸುಗಳು ತೆರಳಿವೆ. ಚಿಕ್ಕೋಡಿಯಿಂದ ಪ್ರತಿದಿನ

ಮತ್ತೆ ಕರ್ನಾಟಕದಿಂದ – ಮಹಾರಾಷ್ಟ್ರಕ್ಕೆ ಶುರುವಾದ ಬಸ್ ಸಂಚಾರ Read More »

ರಾಷ್ಟ್ರೀಯ ನ್ಯೂಸ್

ಮದುವೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ ➤ ನಾಲ್ವರು ಮೃತ್ಯು

(ನ್ಯೂಸ್ ಕಡಬ) newskadaba.com ಜೋಧ್ ಪುರ, ಡಿ. 09. ಮದುವೆ ಮನೆಯಲ್ಲಿ ಅಡುಗೆ ಅನಿಲದ ಸಿಲಿಂಡರ್ ಸ್ಫೋಟಗೊಂಡು ನಾಲ್ಕು ಮಂದಿ ಮೃತಪಟ್ಟು, ಸುಮಾರು 60 ಮಂದಿ ಗಾಯಗೊಂಡ ಘಟನೆ ರಾಜಸ್ಥಾನದ ಜೋಧಪುರದಿಂದ ವರದಿಯಾಗಿದೆ.   ಮನೆಯಲ್ಲಿಟ್ಟಿದ್ದ ಗ್ಯಾಸ್ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡಿದ್ದರಿಂದ ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಿಮಾಂಶು ಗುಪ್ತಾ ಮಾಹಿತಿ ನೀಡಿದ್ದಾರೆ.

ಮದುವೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ ➤ ನಾಲ್ವರು ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಹೊಸವರ್ಷದಿಂದ ಕಾರುಗಳ ಬೆಲೆಗಳಲ್ಲಿ ಏರಿಕೆ…!!!

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ ಡಿ.08  ಹೊಸವರ್ಷದ ಮೊದಲನೇಯ ದಿನದಿಂದ ಕಾರುಗಳ ಬೆಲೆ ಏರಿಕೆಯಾಗಲಿದೆಯೆಂದು ಮರ್ಸಿಡಿಸ್-ಬೆನ್ಜ್, ಆಡಿ, ರಿನಾಲ್ಟ್, ಕಿಯಾ ಇಂಡಿಯಾ ಮತ್ತು ಎಂಜಿ ಮೋಟರ್ ಕಂಪೆನಿಗಳು ಬುಧವಾರದಂದು ಘೋಷಿಸಿದೆ. ತಯಾರಿಕ ವೆಚ್ಚ ಹೆಚ್ಚಳವಾಗಿರುವ ಪರಿಣಾಮವಾಗಿ ಬೆಲೆ ಏರಿಕೆ ಕ್ರಮಕ್ಕೆ ಮುಂದಾಗಿರುವುದಾಗಿ ಕಂಪೆನಿಗಳು ತಿಳಿಸಿದೆ. ಕೆಲವು ದಿನಗಳ ಹಿಂದೆಯಷ್ಟೆ ಮಾರುತಿ ಸುಜುಕಿ ಹಾಗೂ ಟಾಟಾ ಮೋಟರ್ ಕಂಪೆನಿಗಳು ಜನವರಿಯಿಂದ ಕಾರುಗಳ ಬೆಲೆ ಏರಿಕೆಯಾಗಲಿದೆ ಎಂದು ತಿಳಿಸಿತ್ತು. ಆಡಿ ಕಾರುಗಳ ಬೆಲೆಯಲ್ಲಿ ಶೇ.1.7ರಷ್ಟು, ಮರ್ಸಿಡಿಸ್ ಬೆನ್ಜ್ ಕಾರುಗಳ ಬೆಲೆಯಲ್ಲಿ

ಹೊಸವರ್ಷದಿಂದ ಕಾರುಗಳ ಬೆಲೆಗಳಲ್ಲಿ ಏರಿಕೆ…!!! Read More »

ರಾಷ್ಟ್ರೀಯ ನ್ಯೂಸ್

ವಾಯುಭಾರ ಕುಸಿತ- ಭಾರೀ ಮಳೆ ಸಾಧ್ಯತೆ

(ನ್ಯೂಸ್ ಕಡಬ) newskadaba.com ಚೆನೈ, ಡಿ. 08. ಮತ್ತೊಮ್ಮೆ ಚಂಡಮಾರುತದ ಪ್ರಭಾವದಿಂದ ಭಾರೀ ಮಳೆಯಾಗುವ ಸಾಧ್ಯತೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತ ಮತ್ತಷ್ಟು ತೀವ್ರಗೊಂಡಿದೆ. ಚೆನೈ ಕರಾವಳಿಯಿಂದ 750 ಕಿ.ಮೀ ದೂರದಲ್ಲಿ ಕೇಂದ್ರೀಕೃತವಾಗಿದ್ದು, ಡಿ. 10ರಂದು ಪುದುಚೇರಿ ಹಾಗೂ ಶ್ರೀಹರಿಕೋಟಾ ನಡುವೆ ಅಪ್ಪಳಿಸುವ ಸಾಧ್ಯತೆ ಇದೆಯೆಂದು ಹವಾಮಾನ ಇಲಾಖೆ ತಿಳಿಸಿದೆ.

ವಾಯುಭಾರ ಕುಸಿತ- ಭಾರೀ ಮಳೆ ಸಾಧ್ಯತೆ Read More »

ರಾಷ್ಟ್ರೀಯ ನ್ಯೂಸ್

ಕುತ್ತಿಗೆಗೆ ಉರುಳುಬಿಗಿದ ಸ್ಥಿತಿಯಲ್ಲಿ ಹುಲಿಯ ಶವ ಪತ್ತೆ ➤ ಅರಣ್ಯಾಧಿಕಾರಿಗಳಿಂದ ತನಿಖೆ

(ನ್ಯೂಸ್ ಕಡಬ) newskadaba.com ಮಧ್ಯಪ್ರದೇಶ, ಡಿ. 08. 2 ವರ್ಷದ ಹುಲಿಯ ಶವವೊಂದು ಕುತ್ತಿಗೆಗೆ ಉರುಳು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ.   ಈ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಹುಲಿಯ ಕಳೇಬರವನ್ನು ಮರಣೋತ್ತರ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಇನ್ನು ಯಾರೋ ಕಾಡು ಪ್ರಾಣಿ ಬೇಟೆಗೆ ಉರುಳು ಇಟ್ಟಿದ್ದು ಅದಕ್ಕೆ ಹುಲಿ ಸಿಲುಕಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಕುತ್ತಿಗೆಗೆ ಉರುಳುಬಿಗಿದ ಸ್ಥಿತಿಯಲ್ಲಿ ಹುಲಿಯ ಶವ ಪತ್ತೆ ➤ ಅರಣ್ಯಾಧಿಕಾರಿಗಳಿಂದ ತನಿಖೆ Read More »

ರಾಷ್ಟ್ರೀಯ ನ್ಯೂಸ್

ದೆಹಲಿ ಮಹಾನಗರ ಪಾಲಿಕೆ ಚುನಾವಣೆ ➤ AAP ಭರ್ಜರಿ ಗೆಲುವು

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ. 07. ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) 134 ಸ್ಥಾನಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದೆ. ಬಿಜೆಪಿ 103 ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್ 10 ಸ್ಥಾನಗಳನ್ನು ಪಡೆದುಕೊಂಡಿದೆ. ಡಿಸೆಂಬರ್ 4 ರಂದು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.

ದೆಹಲಿ ಮಹಾನಗರ ಪಾಲಿಕೆ ಚುನಾವಣೆ ➤ AAP ಭರ್ಜರಿ ಗೆಲುವು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ರೆಪೊ ದರವನ್ನು ಏರಿಸಿದ ಆರ್ ಬಿಐ

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ. 07. ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ರೆಪೊ ದರ ಶೀಘ್ರದಲ್ಲಿ  ಶೇ.0.35ರಷ್ಟು ಹೆಚ್ಟಳ ಮಾಡಲಾಗಿದೆ. ಈ ಕುರಿತು ಆರ್ ಬಿಐನಲ್ಲಿ ನಡೆದ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ರೆಪೊ ದರವನ್ನು 36 ಮೂಲಾಂಶ, ಅಂದರೆ  ಶೇ 6.25 ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದು ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.   ರೆಪೊ ದರವನ್ನು ಆರ್ ಬಿಐನಲ್ಲಿ ಈಗಾಲೇ ಮೂರು ಬಾರಿ  ಶೇ .0.50 ಹೆಚ್ಚಿಸಿದೆ. ಆರ್ಥಿಕ ಬೆಳವಣಿಗೆಗೆ ಉತ್ತೇಜನ ಹಾಗೂ ಚಿಲ್ಲರೆ ಹಣದುಬ್ಬರವನ್ನು

ರೆಪೊ ದರವನ್ನು ಏರಿಸಿದ ಆರ್ ಬಿಐ Read More »

ರಾಷ್ಟ್ರೀಯ ನ್ಯೂಸ್

ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕೊಳವೆ ಬಾವಿಗೆ ಬಿದ್ದ ಬಾಲಕ ➤ ಮುಂದುವರಿದ ರಕ್ಷಣಾ ಕಾರ್ಯಾಚರಣೆ

(ನ್ಯೂಸ್ ಕಡಬ) newskadaba.com ಮಧ್ಯಪ್ರದೇಶ, ಡಿ. 07. ಮೈದಾನದಲ್ಲಿ ಆಟವಾಡುತ್ತಿದ್ದ ಬಾಲಕನೋರ್ವನು ಆಕಸ್ಮಿಕವಾಗಿ ಕೊಳವೆಬಾವಿಗೆ ಬಿದ್ದ ಆತಂಕಕಾರಿ ಘಟನೆ ಬುಧವಾರದಂದು ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ ಮಾಂಡವಿ ಗ್ರಾಮದಲ್ಲಿ ನಡೆದಿದೆ.   ಕೊಳವೆಬಾವಿಗೆ ಬಿದ್ದ ಬಾಲಕ ತನ್ಮಯ್ ಎಂದು ಗುರುತಿಸಲಾಗಿದೆ. ಈತ ಆಟವಾಡುತ್ತಿದ್ದ ವೇಳೆ ಕೊಳವೆಬಾವಿಗೆ ಬಿದ್ದಿದ್ದಾನೆ ಎನ್ನಲಾಗಿದೆ. ಬಾಲಕನ ರಕ್ಷಣಾ ಕಾರ್ಯಚರಣೆ ನಡೆಸಲಾಗುತ್ತಿದ್ದು, ಆಕ್ಸಿಜನ್ ಒದಗಿಸುವ ವ್ಯವಸ್ಥೆಯು ಸಹ ನಡೆಯುತ್ತಿದೆ ಎಂದು ವರದಿ ತಿಳಿಸಿದೆ..  

ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕೊಳವೆ ಬಾವಿಗೆ ಬಿದ್ದ ಬಾಲಕ ➤ ಮುಂದುವರಿದ ರಕ್ಷಣಾ ಕಾರ್ಯಾಚರಣೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ನಾಪತ್ತೆಯಾಗಿದ್ದ ಬಾಲಕನ ಮೃತದೇಹ ವಿರೂಪಗೊಂಡ ಸ್ಥಿತಿಯಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಡಿ.07. ನಾಪತ್ತೆಯಾಗಿದ್ದ  ಬಾಲಕನ ಮೃತದೇಹ ವಿರೂಪಗೊಂಡ ಸ್ಥಿತಿಯಲ್ಲಿ  ಪತ್ತೆಯಾದ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ  ನಡೆದಿದೆ.   16 ವರ್ಷದ ಬಾಲಕನನ್ನು  ಆತನ ನಿವಾಸದಿಂದ ಅಪಹರಿಸಿದ ನಂತರ ಹತ್ಯೆ ಮಾಡಲಾಗಿದ್ದು, ಈ ಕೃತ್ಯವನ್ನು ನರಬಲಿಗಾಗಿ ಬಾಲಕನ ನೆರೆಮನೆಯಾತ ಮಾಡಿದ್ದಾನೆಂದು ಶಂಕಿಸಲಾಗಿದೆ.  ಈ ಕುರಿತು ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ, ಆರೋಪಿಯು ಬಾಲಕನನ್ನು ಕೊಲೆ ಮಾಡಿ ಮೀರತ್ನ ಕಬ್ಬಿನ ಗದ್ದೆಯಲ್ಲಿ ಬಿಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ. ನಂತರ ಘಟನಾ ಸ್ಥಳಕ್ಕೆ ತೆರಳಿದ

ನಾಪತ್ತೆಯಾಗಿದ್ದ ಬಾಲಕನ ಮೃತದೇಹ ವಿರೂಪಗೊಂಡ ಸ್ಥಿತಿಯಲ್ಲಿ ಪತ್ತೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top