ರಾಷ್ಟ್ರೀಯ ನ್ಯೂಸ್

ದೊಡ್ಡಮ್ಮನನ್ನು ಕೊಲೆ ಮಾಡಿ, ದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಿದ ಭೂಪ

(ನ್ಯೂಸ್ ಕಡಬ) newskadaba.com  ಜೈಪುರ, ಡಿ.18   ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಶ್ರದ್ದಾ ವಾಲಕರ್ ಹತ್ಯೆ ಪ್ರಕರಣವನ್ನೇ ಹೋಲುವ ಮತ್ತೊಂದು ಪ್ರಕರಣ ರಾಜಸ್ಥನದ ಜೈಪುರದಲ್ಲಿ ಸಂಭವಿಸಿದೆ. ವ್ಯಕ್ತಿಯೊಬ್ಬ ತನ್ನ ದೊಡ್ಡಮ್ಮನನ್ನು ಕೊಲೆ ಮಾಡಿ, ದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಿ ಇಲ್ಲಿಗೆ ಸಮೀಪದ ಹೆದ್ದಾರಿಯ ವಿವಿಧೆಡೆ ಎಸೆದ ಘಟನೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಸರೋಜ್ ಶರ್ಮಾ (65) ಎಂದು ಗುರುತಿಸಲಾಗಿದೆ. ಆರೋಪಿಯನ್ನು ಅಂಜು ಶರ್ಮಾ ಅಲಿಯಾಸ್ ಅಚಿಂತ್ಯ ಗೋವಿಂದ ದಾಸ್ (33) ಎಂದು ಗುರುತಿಸಲಾಗಿದೆ.  

ದೊಡ್ಡಮ್ಮನನ್ನು ಕೊಲೆ ಮಾಡಿ, ದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಿದ ಭೂಪ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Crime

ಬಂದೂಕಿನೊಂದಿಗೆ ಮಕ್ಕಳ ಆಟ..!!!!  ➤ ಗುಂಡು ತಗುಲಿ ತಮ್ಮ ಮೃತ್ಯು .!!!                

(ನ್ಯೂಸ್ ಕಡಬ) newskadaba.com  ದೆಹಲಿ, ಡಿ.18   ಮಕ್ಕಳು ಆಡುವಾಡುತ್ತಿರುವಾಗ ನಾಡಬಂದೂಕಿನ ಗುಂಡು ಆಕಸ್ಮಿಕವಾಗಿ ತಗುಲಿ ಬಾಲಕ ಸಾವನ್ನಪ್ಪಿರೋ ಘಟನೆ ಕನಕಪುರ ಎಂಬಲ್ಲಿ ಸಂಭವಿಸಿದೆ. ಉತ್ತರಪ್ರದೇಶ ಮೂಲದ ಶಮಾ (7) ಮೃತ ಬಾಲಕ. ಶಮಾನ ಸಹೋದರ ಸಾಜೀದ್  (16) ಬಂದೂಕಿನ ಟ್ರಿಗರ್ ಅನ್ನು ಒತ್ತಿದ್ದಾನೆ. ಈ ವೇಳೆ ಗುಂಡು ಶಮಾನಿಗೆ ತಗುಲಿ ಮೃತಪಟ್ಟಿದ್ದಾರೆ. ಮಲ್ಲೇಶ್ ತೋಟದ ಮನೆಯಲ್ಲಿ ನಾಡಬಂದೂಕನ್ನು ತೆಗೆದುಕೊಂಡು ಶಮಾ ಮತ್ತು ಸಾಜೀದ್ ಆಟವಾಡಲು ಮುಂದಾಗಿದ್ದ ವೇಳೆ ಗುಂಡು ತಗುಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.  

ಬಂದೂಕಿನೊಂದಿಗೆ ಮಕ್ಕಳ ಆಟ..!!!!  ➤ ಗುಂಡು ತಗುಲಿ ತಮ್ಮ ಮೃತ್ಯು .!!!                 Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಆಕಾಶದಲ್ಲಿ ಗೋಚರಿಸಿದ ನಿಗೂಢ ಬೆಳಕು..!!

(ನ್ಯೂಸ್ ಕಡಬ) newskadaba.com ಕೋಲ್ಕತ್ತಾ, ಡಿ. 17. ಸುಮಾರು ಐದು ನಿಮಿಷಗಳ ಕಾಲ ಕೋಲ್ಕತ್ತಾದ ಆಕಾಶದಲ್ಲಿ ಚಲಿಸುತ್ತಿರುವ ನಿಗೂಢ ಬೆಳಕೊಂದು ಕಾಣಿಸಿಕೊಂಡಿದೆ. ಬೆಳಕಿನ ಮೂಲವನ್ನು ಇದುವರೆಗೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ವರದಿ ತಿಳಿಸಿದೆ. ಇದು ಉಲ್ಕೆಯ ಭಾಗವೇ, ಉಪಗ್ರಹವೇ ಅಥವಾ ಕ್ಷಿಪಣಿಯೇ ಎಂಬುವುದರ ಬಗ್ಗೆ ತಜ್ಞರಿಗೆ ಇನ್ನೂ ಖಚಿತ ಮಾಹಿತಿ ತಿಳಿದು ಬಂದಿಲ್ಲ. ಸಂಜೆ 5.50 ರಿಂದ 5.55 ರವರೆಗೆ ಕೋಲ್ಕತ್ತಾದಲ್ಲಿ ಮಾತ್ರವಲ್ಲದೇ ಬಂಕುರಾ, ಪೂರ್ವ ಮತ್ತು ಪಶ್ಚಿಮ ಮಿಡ್ನಾಪುರ, ಉತ್ತರ ಮತ್ತು ದಕ್ಷಿಣದ 24

ಆಕಾಶದಲ್ಲಿ ಗೋಚರಿಸಿದ ನಿಗೂಢ ಬೆಳಕು..!! Read More »

ರಾಷ್ಟ್ರೀಯ ನ್ಯೂಸ್

ಗಡಿ ವಿವಾದ: ಮುಂಬೈಯಲ್ಲಿ ಬೃಹತ್ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಮುಬೈ, ಡಿ. 17. ಮುಂಬೈ ಕರ್ನಾಟಕದ ಬೆಳಗಾವಿಯಲ್ಲಿ ಮರಾಠಿ ಭಾಷಿಕರ ಮೇಲೆ ದೌರ್ಜನ್ಯ ನಡೆಯುತ್ತಿದೆ ಆದರೆ ಈ ವಿಷಯದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಎನ್ ಸಿ.ಪಿ ಕಾಂಗ್ರೆಸ್ , ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣ ಬೃಹತ್ ಹೋರಾಟ ನಡೆಸಲು ನಿರ್ಧರಿಸಿದೆ.

ಗಡಿ ವಿವಾದ: ಮುಂಬೈಯಲ್ಲಿ ಬೃಹತ್ ಪ್ರತಿಭಟನೆ Read More »

ರಾಷ್ಟ್ರೀಯ ನ್ಯೂಸ್

ಪಾಟ್ನಾ ಕಳ್ಳ ಬಟ್ಟಿ ದುರಂತ ➤ ಐವರು ಮೃತ್ಯು

(ನ್ಯೂಸ್‌ ಕಡಬ) newskadaba.com ಬಿಹಾರ, ಡಿ. 17. ಬಿಹಾರದ ಸಿವಾನ್ ಜಿಲ್ಲೆಯಲ್ಲಿ ವಿಷಪೂರಿತ ಮದ್ಯ ಸೇವಿಸಿ ಐದು ಮಂದಿ ಮೃತಪಟ್ಟ ಘಟನೆ ನಡೆದಿದೆ. ಮೃತರೆಲ್ಲರು ಭಗವಾನ್ ಪುರ ಹಾತ್ ಪೊಲೀಸ್ ಠಾಣೆ ವ್ಯಾಪ್ತಿಯ ಬ್ರಹ್ಮಸ್ಥಾನ ಮತ್ತು ಸೊಂಧನಿ ಗ್ರಾಮದವರು ಎಂದು ತಿಳಿದು ಬಂದಿದೆ. ಈ ಅವಘಡದಲ್ಲಿ ಐವರು ಮೃತಪಟ್ಟಿದ್ದು, ಶಿವಕುಮಾರ್ (25) ಮತ್ತು ದೀಪಕ್ (15) ಚಿಕ್ಕಿತ್ಸೆ ಪಡೆಯುತ್ತಿದ್ದಾರೆ. ಎರಡು ರಾಸಾಯನಿಕ ಬಾಟಲಿಗಳನ್ನು ವಶಪಡಿಸಿಕೊಂಡು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

ಪಾಟ್ನಾ ಕಳ್ಳ ಬಟ್ಟಿ ದುರಂತ ➤ ಐವರು ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ತಡರಾತ್ರಿ ಭೀಕರ ಬೆಂಕಿ ಅವಘಢ  ➤ ಒಂದೇ ಕುಟುಂಬದ 6 ಮಂದಿ ಸಜೀವ ದಹನ     

(ನ್ಯೂಸ್ ಕಡಬ) newskadaba.com ಹೈದರಾಬಾದ್, ಡಿ. 17. ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆಯ ಯಜಮಾನ ಸೇರಿದಂತೆ ಒಂದೇ ಕುಟುಂಬದ ಆರು ಜನರು ಮೃತಪಟ್ಟ ಘಟನೆ ತೆಲಂಗಾಣದಲ್ಲಿ ವರದಿಯಾಗಿದೆ. ಮೃತಪಟ್ಟವರನ್ನು ಮನೆಯ ಯಜಮಾನ ಶಿವಯ್ಯ (50), ಪತ್ನಿ ಪದ್ಮಾ (45) ಹಾಗೂ ಇಬ್ಬರು ಮಕ್ಕಳು, ಪದ್ಮಾರವರ ಅಕ್ಕನ ಮಗಳು ಮೌನಿಕ ಸೇರಿ ಶಾಂತಯ್ಯ ಎಂಬವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ತಡರಾತ್ರಿ ಭೀಕರ ಅಗ್ನಿ ಅವಘಢ ಸಂಭವಿಸಿದ ಪರಿಣಾಮ ಈ ದುರ್ಘಟನೆ ನಡೆದಿದೆ. ಮಾಹಿತಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ

ತಡರಾತ್ರಿ ಭೀಕರ ಬೆಂಕಿ ಅವಘಢ  ➤ ಒಂದೇ ಕುಟುಂಬದ 6 ಮಂದಿ ಸಜೀವ ದಹನ      Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಉಗ್ರರ ದಾಳಿ ➤ ಇಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ಶ್ರೀನಗರ, ಡಿ. 16. ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿರುವ ಸೇನಾ ಶಿಬಿರದ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ ಪರಿಣಾಮ ಇಬ್ಬರು ನಾಗರಿಕರು ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ. ಪೊಲೀಸರು, ರಕ್ಷಣಾ ಪಡೆಗಳು ಮತ್ತು ನಾಗರಿಕ ಆಡಳಿತ ಅಧಿಕಾರಿ ಸ್ಥಳದಲ್ಲಿದ್ದರು ಎಂದು ಸೇನಾ ಘಟಕ ಮಾಹಿತಿ ನೀಡಿದೆ.

ಉಗ್ರರ ದಾಳಿ ➤ ಇಬ್ಬರು ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

4 ಕಾಲುಗಳಿರುವ ಹೆಣ್ಣುಮಗುವಿಗೆ ಜನ್ಮನೀಡಿದ ತಾಯಿ….!

(ನ್ಯೂಸ್ ಕಡಬ) newskadaba.com ಮಧ್ಯಪ್ರದೇಶದ, ಡಿ. 16. ಮಹಿಳೆಯೊಬ್ಬರು ನಾಲ್ಕು ಕಾಲುಗಳಿರುವ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ನಡೆದಿದೆ. ಆರತಿ ಕುಶ್ವಾಹ ಎಂಬ ಮಹಿಳೆಯು ನಾಲ್ಕು ಕಾಲುಗಳುಳ್ಳ ಮಗುವಿಗೆ ಜನ್ಮ ನೀಡಿದ್ದು, ಜನನದ ನಂತರ ಮಗುವಿನ ತೂಕ 2.3 ಕೆ.ಜಿಯಷ್ಟಿದ್ದು, ಶಿಶು ಆರೋಗ್ಯವಾಗಿದೆ ಎನ್ನಲಾಗಿದೆ. ಈ ಕುರಿತು ಸೂಪರಿಂಟೆಂಡೆಂಟ್ ಡಾ.ಆರ್.ಕೆ.ಎಸ್.ಧಕಡ್ ಮಾತನಾಡಿ, “ಮಗುವಿಗೆ ನಾಲ್ಕು ಕಾಲುಗಳಿದ್ದು, ಆಕೆಗೆ ದೈಹಿಕ ವಿಕಲತೆ ಇದೆ. ಬೆಳವಣಿಗೆ ಸಂದರ್ಭದಲ್ಲಿ ಕೆಲವು ಭ್ರೂಣಗಳು ಹೆಚ್ಚುವರಿಯಾಗುತ್ತವೆ, ಇದನ್ನು ವೈದ್ಯಕೀಯ

4 ಕಾಲುಗಳಿರುವ ಹೆಣ್ಣುಮಗುವಿಗೆ ಜನ್ಮನೀಡಿದ ತಾಯಿ….! Read More »

ರಾಷ್ಟ್ರೀಯ ನ್ಯೂಸ್

ದೇಶದ ಅತಿ ಉದ್ದದ ರೈಲ್ವೇ ಸುರಂಗ ಮಾರ್ಗ ನಿರ್ಮಾಣ

(ನ್ಯೂಸ್ ಕಡಬ) newskadaba.com ಜಮ್ಮು , ಡಿ. 16. ಭಾರತದ ಅತಿ ಉದ್ದದ ರೈಲ್ವೇ ಸುರಂಗ ಎಂಬ ಖ್ಯಾತಿಗೆ ಪಾತ್ರವಾಗಿದ್ದ ನಿರ್ಮಾಣ ಹಂತದಲ್ಲಿದ್ದ 111 ಕಿ.ಮೀ. ದೂರದ ಬನಿಹಾಲ್ –ಕಟ್ರಾ ರೈಲ್ವೇ ಮಾರ್ಗದಲ್ಲಿ 12.89 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು. ಇದೊಂದು ರಕ್ಷಣಾ ಸುರಂಗ ಮಾರ್ಗವಾಗಿದ್ದು, ಇದು ತುರ್ತು ಸಂದರ್ಭಗಳಲ್ಲಿ ಬಳಸಲ್ಪಡುತ್ತದೆ. ಉದಮ್ ಪುರ- ಶ್ರೀನಗರ –ಬಾರಾಮುಲ್ಲಾ ರೈಲ್ವೆ ಯೋಜನೆಯ ಭಾಗವಾಗಿರುವ  ಮಾರ್ಗದಲ್ಲಿ ಈಗಾಗಲೇ ನಿರ್ಮಾಣ ಮಾಡಿರುವ 12.75 ಕಿ.ಮೀ. ಉದ್ದದ ಟಿ-49

ದೇಶದ ಅತಿ ಉದ್ದದ ರೈಲ್ವೇ ಸುರಂಗ ಮಾರ್ಗ ನಿರ್ಮಾಣ Read More »

ರಾಷ್ಟ್ರೀಯ ನ್ಯೂಸ್

ರಸ್ತೆ ದಾಟುವಾಗ ವೃದ್ಧನಿಗೆ ಬಸ್ ಢಿಕ್ಕಿ  ➤ ಪ್ರಾಣಪಾಯದಿಂದ ಪಾರು          

(ನ್ಯೂಸ್ ಕಡಬ) newskadaba.com  ಮುಂಬೈ, ಡಿ. 15.  ಬಸ್ಸೊಂದು ವೃದ್ಧನಿಗೆ ಡಿಕ್ಕಿ ಹೊಡೆದು ಅವರ ಮೇಲೆ ಚಲಿಸಿರುವ ಘಟನೆ ಮುಂಬೈನ ಪೂವೈ ಎಂಬಲ್ಲಿ ಸಂಭವಿಸಿದ್ದು, ಯಾವುದೇ ಅಪಾಯವಾಗಿಲ್ಲ ಎಂದೆನ್ನಲಾಗಿದೆ. ಡಿಕ್ಕಿ ಹೊಡೆದ ಪರಿಣಾಮವಾಗಿ ಅವರು ಕೆಳಗೆ ಬಿದ್ದಿದ್ದು, ಬಸ್ ಅವರ ಮೇಲೆ ಹರಿದು ಹೋಗಿದೆ ಎಂದು ತಿಳಿದುಬಂದಿದೆ. ಇದನ್ನು ನೋಡಿದ ಸಾರ್ವಜನಿಕರು ಗಾಬರಿಗೊಂಡಿದ್ದು,  ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.    

ರಸ್ತೆ ದಾಟುವಾಗ ವೃದ್ಧನಿಗೆ ಬಸ್ ಢಿಕ್ಕಿ  ➤ ಪ್ರಾಣಪಾಯದಿಂದ ಪಾರು           Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top