ರಾಷ್ಟ್ರೀಯ ನ್ಯೂಸ್

ವರದಕ್ಷಿಣೆಯಾಗಿ ಟ್ರ್ಯಾಕ್ಟರ್​ ಕೇಳಿದ ವರನಿಗೆ ಬಿಗ್​ ಶಾಕ್​ ಕೊಟ್ಟ ವಧು

(ನ್ಯೂಸ್ ಕಡಬ)newskadaba.com ಮುಜಾಫರ್​ನಗರ, ಮಾ.16. ದುಬಾರಿ ವರದಕ್ಷಿಣೆ ಕೇಳಿದ ವರನಿಗೆ ವಧು, ಆಕೆಯ ಕುಟುಂಬ ಮತ್ತು ಗ್ರಾಮಸ್ಥರು ಸೇರಿಕೊಂಡು ಬುದ್ಧಿ ಕಲಿಸಿರುವ ಅಪರೂಪದ ಘಟನೆ ಉತ್ತರ ಪ್ರದೇಶದ ಮುಜಾಫರ್​ನಗರದಲ್ಲಿ ನಡೆದಿದೆ. ವರ ವಾಸಿಂ ಅಹ್ಮದ್​ ಎಂಬಾತ ವರದಕ್ಷಿಣೆಯಾಗಿ ಟ್ರ್ಯಾಕ್ಟರ್​ ನೀಡುವಂತೆ ವಧುವಿನ ಕುಟುಂಬವನ್ನು ಕೇಳಿದ್ದ. ಬಳಿಕ ಈ ವಾರದ ಆರಂಭದಲ್ಲಿ ತಮ್ಮ ಸಂಬಂಧಿಕರೊಂದಿಗೆ ಮದುವೆ ಮಂಟಪ್ಪಕ್ಕೆ ಬಂದಿದ್ದ. ಆತನನ್ನ ಮತ್ತು ಅವರ ಕುಟುಂಬವನ್ನು ಸ್ಥಳೀಯ ಜನರು ಒತ್ತೆಯಾಳಾಗಿರಿಸಿಕೊಂಡರು.  

ವರದಕ್ಷಿಣೆಯಾಗಿ ಟ್ರ್ಯಾಕ್ಟರ್​ ಕೇಳಿದ ವರನಿಗೆ ಬಿಗ್​ ಶಾಕ್​ ಕೊಟ್ಟ ವಧು Read More »

ರಾಷ್ಟ್ರೀಯ ನ್ಯೂಸ್

ಖ್ಯಾತ ಖಳನಾಯಕನಿಗೆ ವಿಷವುಣಿಸಿದ ಸಹೋದರ ➤ ಕಣ್ಣೀರಿಟ್ಟ ಪೊನ್ನಂಬಲಂ

(ನ್ಯೂಸ್ ಕಡಬ) newskadaba.com. ಚೆನ್ನೈ, ಮಾ 14. ಖಳನಾಯಕ ಪಾತ್ರದಲ್ಲಿ ಅಮೋಘ ಅಭಿನಯದ ಮೂಲಕ ತುಂಬಾ ಪ್ರಸಿದ್ಧಿ ಪಡೆದಿರುವ ಖಳನಟ ಪೊನ್ನಂಬಲಂ ಯೂಟ್ಯೂಬ್​ ಚಾನೆಲ್​ ಸಂದರ್ಶನವೊಂದರಲ್ಲಿ ತನ್ನ ಬದುಕಿನಲ್ಲಿ ಸಹೋದರನಿಂದಲೇ ನಡೆದ ದ್ರೋಹವನ್ನು ಬಿಚ್ಚಿಟ್ಟಿದ್ದಾರೆ. ಇತ್ತೀಚೆಗಷ್ಟೇ ಪೊನ್ನಂಬಲಂ ಕಿಡ್ನಿ ಕಸಿ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ತನ್ನ ಸಹೋದರ ತನಗೆ ವಿಷ ಹಾಕಲು ಯತ್ನಿಸಿದರು    ಎಂದು ಆರೋಪ ಮಾಡಿದ್ದಾರೆ. ನನ್ನ ಕುಡಿತ ಚಟದಿಂದ ನನ್ನ ಕಿಡ್ನಿಗಳು ಹಾನಿಯಾಗಿಲ್ಲ. ನನ್ನ ತಂದೆಗೆ ನಾಲ್ಕು ಹೆಂಡತಿಯರು. ತಂದೆಯ ಮೂರನೇ ಹೆಂಡತಿಯ ಮಗ ಹಾಗೂ

ಖ್ಯಾತ ಖಳನಾಯಕನಿಗೆ ವಿಷವುಣಿಸಿದ ಸಹೋದರ ➤ ಕಣ್ಣೀರಿಟ್ಟ ಪೊನ್ನಂಬಲಂ Read More »

ರಾಷ್ಟ್ರೀಯ ನ್ಯೂಸ್

ಪರೀಕ್ಷೆಗೆ ತೆರೆಳುವಾಗ ಅಪಘಾತ ➤ ಆಸ್ಪತ್ರೆಯ ಬೆಡ್‌‌ನಲ್ಲೇ ಪರೀಕ್ಷೆ ಬರೆದ ವಿದ್ಯಾರ್ಥಿ…!

(ನ್ಯೂಸ್ ಕಡಬ)newskadaba.com ಕೊಲ್ಕತ್ತಾ, ಮಾ.16. ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಪರೀಕ್ಷೆ ಬರೆಯಲು ಹೋಗುವಾಗ ಅಪಘಾತವಾಗಿ ಯುವಕನೊಬ್ಬ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರೂ, ಆಸ್ಪತ್ರೆಯ ಬೆಡ್‌ ನಲ್ಲೇ ಕೂತು ಪರೀಕ್ಷೆ ಬರೆದಿರುವ ಘಟನೆ ನಡೆದಿದೆ. ಅಲಿನಗರ ಯಾಸಿನ್ ಮಲಿಕ್ ಪ್ರೌಢಶಾಲೆಯ ಸಂದೀಪ್ ಮಾಝಿ(15 ) ಪರೀಕ್ಷೆ ಬರೆಯಲು ತನ್ನ ತಂದೆಯ ಬೈಕ್‌ ನಲ್ಲಿ ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದು, ಈ ವೇಳೆ ಸಂದೀಪ್‌ ಅವರ ಬೈಕ್‌ ಗೆ ಮತ್ತೊಂದು ಬೈಕ್‌ ವೇಗವಾಗಿ ಬಂದು ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಸಂದೀಪ್‌

ಪರೀಕ್ಷೆಗೆ ತೆರೆಳುವಾಗ ಅಪಘಾತ ➤ ಆಸ್ಪತ್ರೆಯ ಬೆಡ್‌‌ನಲ್ಲೇ ಪರೀಕ್ಷೆ ಬರೆದ ವಿದ್ಯಾರ್ಥಿ…! Read More »

ರಾಷ್ಟ್ರೀಯ ನ್ಯೂಸ್

ನಕಲಿ ವೈದ್ಯನಿಂದ ಸರ್ಜರಿ ➤ಮಗು ಮೃತ್ಯು..!

(ನ್ಯೂಸ್ ಕಡಬ) newskadaba.com. ಉತ್ತರ ಪ್ರದೇಶ, ಮಾ 14.  ಎರಡೂವರೆ ವರ್ಷದ ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ಮಗು ಮೃತಪಟ್ಟಿರುವ ಘಟನೆ  ಉತ್ತರಪ್ರದೇಶದಲ್ಲಿ  ನಡೆದಿದೆ. ವೈದ್ಯನ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ನಕಲಿ ವೈದ್ಯನ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ. ತಿಲಕ್ ಸಿಂಗ್ ಎಂಬ ನಕಲಿ ವೈದ್ಯ ಮಗುವಿಗೆ ಸರ್ಜರಿ ನಡೆಸಿದ ನಂತರ ಭಾರೀ ಪ್ರಮಾಣದಲ್ಲಿ ರಕ್ತ ಹರಿದು ಹೋದ ಪರಿಣಾಮ ಮಗು ಮೃತಪಟ್ಟಿದೆ. ಎಂದು ತಿಳಿದು ಬಂದಿದೆ.

ನಕಲಿ ವೈದ್ಯನಿಂದ ಸರ್ಜರಿ ➤ಮಗು ಮೃತ್ಯು..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಭಾರತಕ್ಕೆ ನೂತನ ರಾಯಭಾರಿಯಾಗಿ ʻಎರಿಕ್ ಗಾರ್ಸೆಟ್ಟಿʼ ಆಯ್ಕೆ

(ನ್ಯೂಸ್ ಕಡಬ)newskadaba.com ನವದೆಹಲಿ, ಮಾ.16. ಲಾಸ್ ಏಂಜಲೀಸ್‌ನ ಮಾಜಿ ಮೇಯರ್ ಎರಿಕ್ ಗಾರ್ಸೆಟ್ಟಿ ಅವರು ಭಾರತಕ್ಕೆ ಹೊಸ ಯುಎಸ್ ರಾಯಭಾರಿಯಾಗಲಿದ್ದಾರೆ. US ಸೆನೆಟ್ ಗಾರ್ಸೆಟ್ಟಿಯ ನಾಮನಿರ್ದೇಶನವನ್ನು ದೃಢಪಡಿಸಿದೆ. ಭಾರತಕ್ಕೆ US ರಾಯಭಾರಿಯಾಗಿ ಅವರ ನಾಮನಿರ್ದೇಶನವನ್ನು ಸೆನೆಟ್‌ನಲ್ಲಿ 52-42 ರಿಂದ ಅಂಗೀಕರಿಸಲಾಯಿತು. ಮಾಜಿ ಮೇಯರ್ ಅವರ ನಾಮನಿರ್ದೇಶನವು ಜುಲೈ 2021 ರಿಂದ US ಕಾಂಗ್ರೆಸ್‌ಗೆ ಬಾಕಿ ಉಳಿದಿತ್ತು. ಅವರು ಬೈಡನ್ ಅವರಿಂದ ಪ್ರತಿಷ್ಠಿತ ರಾಜತಾಂತ್ರಿಕ ಪೋಸ್ಟಿಂಗ್‌ಗೆ ನಾಮನಿರ್ದೇಶನಗೊಂಡರು.  

ಭಾರತಕ್ಕೆ ನೂತನ ರಾಯಭಾರಿಯಾಗಿ ʻಎರಿಕ್ ಗಾರ್ಸೆಟ್ಟಿʼ ಆಯ್ಕೆ Read More »

ರಾಷ್ಟ್ರೀಯ ನ್ಯೂಸ್

ಪತ್ನಿ, ಮಗನನ್ನು ಕೊಂದು ಆತ್ಮಹತ್ಯೆಗೆ ಶರಣಾದ ಟೆಕ್ಕಿ ➤ ಕಾರಣ ನಿಗೂಢ…!

(ನ್ಯೂಸ್ ಕಡಬ)newskadaba.com ಪುಣೆ, ಮಾ.16. 44 ವರ್ಷದ ಸಾಫ್ಟ್‌ವೇರ್ ವೃತ್ತಿಪರ, ಆತನ ಪತ್ನಿ ಮತ್ತು ಎಂಟು ವರ್ಷದ ಮಗ ಪುಣೆಯ ಔಂಧ್ ಪ್ರದೇಶದಲ್ಲಿನ ಅವರ ಫ್ಲಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಟೆಕ್ಕಿ ಮೊದಲು ತನ್ನ ಹೆಂಡತಿ ಮತ್ತು ಮಗನನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಂತೆ ತೋರುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಸುದೀಪ್ತೋ ಗಂಗೂಲಿ, ಅವರ ಪತ್ನಿ ಪ್ರಿಯಾಂಕಾ ಮತ್ತು ಪುತ್ರ ತನಿಷ್ಕಾ ಎಂದು ಗುರುತಿಸಲಾಗಿದೆ.

ಪತ್ನಿ, ಮಗನನ್ನು ಕೊಂದು ಆತ್ಮಹತ್ಯೆಗೆ ಶರಣಾದ ಟೆಕ್ಕಿ ➤ ಕಾರಣ ನಿಗೂಢ…! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಆಧಾರ್ ವಿಳಾಸ ಆನ್‌ಲೈನ್ ಪರಿಷ್ಕರಣೆ ಜೂ. 14ರ ವರೆಗೆ ಉಚಿತ

(ನ್ಯೂಸ್ ಕಡಬ)newskadaba.com ಹೊಸದಿಲ್ಲಿ, ಮಾ. 16. ಭಾರತೀಯ ನಿವಾಸಿಗಳು ತಮ್ಮ ಆಧಾರ್ ವಿವರಗಳನ್ನು ಜೂನ್ 14ರ ವರೆಗೆ ಉಚಿತವಾಗಿ ಪರಿಷ್ಕರಿಸಬಹುದು ಎಂದು ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ ಬುಧವಾರ ಘೋಷಿಸಿದೆ. ಈ ಸೌಲಭ್ಯ ಮೈಆಧಾರ್ ಪೋರ್ಟಲ್‌ನಲ್ಲಿ ಲಭ್ಯವಿರಲಿದೆ ಅಂಚೆ ಕಚೇರಿಯಂತಹ ಭೌತಿಕ ಪರಿಷ್ಕರಣ ಕೇಂದ್ರಗಳು ವಿವರಗಳನ್ನು ಪರಿಷ್ಕರಿಸಲು 50 ರೂ. ಶುಲ್ಕ ವಿಧಿಸುವುದನ್ನು ಮುಂದವರಿಸಲಿದೆ ಎಂದು ಯುಐಡಿಎಐ ಪತ್ರಿಕಾ ಹೇಳಿಕೆ ತಿಳಿಸಿದೆ.

ಆಧಾರ್ ವಿಳಾಸ ಆನ್‌ಲೈನ್ ಪರಿಷ್ಕರಣೆ ಜೂ. 14ರ ವರೆಗೆ ಉಚಿತ Read More »

ರಾಷ್ಟ್ರೀಯ ನ್ಯೂಸ್

33 ಕೊಲೆ ಪ್ರಕರಣ ಆರೋಪಿಗೆ 1,310 ವರ್ಷ ಜೈಲುಶಿಕ್ಷೆ

(ನ್ಯೂಸ್ ಕಡಬ)newskadaba.com ಸ್ಯಾನ್‍ಸಲ್ವದೋರ್, ಮಾ.16. 33 ಕೊಲೆ, 9 ಕೊಲೆ ಸಂಚು ಹಾಗೂ ಇತರ 7 ಅಪಾಯಕಾರಿ ಕ್ರಿಮಿನಲ್ ಕೃತ್ಯ ಎಸಗಿದ ಅಪರಾಧಕ್ಕಾಗಿ ಕುಖ್ಯಾತ ಗ್ಯಾಂಗ್‍ಸ್ಟರ್ ವಿಲ್ಮರ್ ಸೆಗೋವಿಯಾಗೆ ಎಲ್‍ಸಾಲ್ವದೋರ್‍ನ ನ್ಯಾಯಾಲಯ 1,310 ಜೈಲುಶಿಕ್ಷೆ ವಿಧಿಸಿದೆ. ಎಲ್‍ಸಲ್ವದೋರ್‍ನಲ್ಲಿ ಘೋರ ಅಪರಾಧ ಕೃತ್ಯಗಳಿಂದಾಗಿ ಕುಖ್ಯಾತವಾಗಿರುವ ಮರಾ ಸಲ್ವಟ್ರುಚ ಗ್ಯಾಂಗ್‍ನ ಶಲ್ಟನ್ ಘಟಕದ ಸದಸ್ಯನಾಗಿರುವ ವಿಲ್ಮರ್ ದೀರ್ಘಾವಧಿಯಿಂದ ಪಾತಕಕೃತ್ಯ ನಡೆಸಿ ಜನತೆಯಲ್ಲಿ ಭೀತಿ ಹುಟ್ಟಿಸಿದ್ದ. ಮತ್ತೊಬ್ಬ ಕ್ರಿಮಿನಲ್ ಮಿಗುವೆಲ್ ಆಯಂಗೆಲ್ ಪೋರ್ಟಿಲೊಗೆ 22 ಕೊಲೆ ಪ್ರಕರಣ, ಹಾಗೂ ಹಲವಾರು ಕೊಲೆಯತ್ನ,

33 ಕೊಲೆ ಪ್ರಕರಣ ಆರೋಪಿಗೆ 1,310 ವರ್ಷ ಜೈಲುಶಿಕ್ಷೆ Read More »

ರಾಷ್ಟ್ರೀಯ ನ್ಯೂಸ್

ದ್ವಿತೀಯ ಪಿಯು ಪರೀಕ್ಷೆ ಮಧ್ಯೆಯೇ ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಉತ್ತರ ಕನ್ನಡ, ಮಾ. 16. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ಶಿಲ್ಪಾಗೌಡ(17) ಎಂದು ಗುರುತಿಸಲಾಗಿದೆ. ಪಿಯುಸಿ ವಾಣಿಜ್ಯ ವಿಭಾಗದ ವ್ಯಾಸಂಗ ಮಾಡುತ್ತಿದ್ದ ಈಕೆ ಎರಡು ಪರೀಕ್ಷೆಯನ್ನು ಬರೆದಿದ್ದಳು. ಆದರೆ ಪೋಷಕರು ಕೂಲಿ ಕೆಲಸಕ್ಕೆ ಅಂತಾ ಹೋಗಿದ್ದಾಗ ಆಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

ದ್ವಿತೀಯ ಪಿಯು ಪರೀಕ್ಷೆ ಮಧ್ಯೆಯೇ ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ Read More »

ರಾಷ್ಟ್ರೀಯ ನ್ಯೂಸ್

ಗೀಸರ್‌ ಗ್ಯಾಸ್ ಸೋರಿಕೆಯಿಂದ ಉಸಿರುಗಟ್ಟಿ ದಂಪತಿ ಮೃತ್ಯು   ➤ 5 ವರ್ಷದ ಮಗು ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ)newskadaba.com ಜೈಪುರ, ಮಾ.16. ಗೀಸರ್‌ ಗ್ಯಾಸ್ ಸೋರಿಕೆಯಿಂದ ಉಸಿರುಗಟ್ಟಿ ದಂಪತಿಗಳಿಬ್ಬರು ಮೃತಪಟ್ಟು, 5 ವರ್ಷದ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ದಾರುಣ ಘಟನೆ ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ ನಡೆದಿದೆ. ಶಹಾಪುರ ನಿವಾಸಿಗಳಾದ ಶಿವನಾರಾಯಣ ಜಾನ್ವಾರ್ (37), ಅವರ ಪತ್ನಿ ಕವಿತಾ ಜಾನ್ವರ್ (35) ಮೃತ ದಂಪತಿಗಳಾಗಿದ್ದು, ಮಗ ವಿಹಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ.  

ಗೀಸರ್‌ ಗ್ಯಾಸ್ ಸೋರಿಕೆಯಿಂದ ಉಸಿರುಗಟ್ಟಿ ದಂಪತಿ ಮೃತ್ಯು   ➤ 5 ವರ್ಷದ ಮಗು ಆಸ್ಪತ್ರೆಗೆ ದಾಖಲು Read More »

ರಾಷ್ಟ್ರೀಯ ನ್ಯೂಸ್
Scroll to Top