ರಾಷ್ಟ್ರೀಯ ನ್ಯೂಸ್

ದೇಶದಲ್ಲಿ ಕೋವಿಡ್ ಹೆಚ್ಚಳ ಹಿನ್ನಲೆ ➤ ಇಂದು ಉನ್ನತ ಮಟ್ಟದ ಸಭೆ ಕರೆದ ಪ್ರಧಾನಿ ಮೋದಿ

(ನ್ಯೂಸ್ ಕಡಬ)Newskadaba.com ನವದೆಹಲಿ, ಮಾ .22 ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕ ಆರೋಗ್ಯ ಸಿದ್ದತೆ ಹಾಗೂ ಪರಿಸ್ಥಿತಿ ಪರಿಶೀಲನೆಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ಸಂಜೆ 4:30ಕ್ಕೆ ಉನ್ನತ ಮಟ್ಟದ ಸಭೆ ಕರೆದಿದ್ದಾರೆ. ದೇಶದಲ್ಲಿ ಒಂದೇ ದಿನ 1,134 ಕೋವಿಡ್ ಪ್ರಕರಣ ಕಂಡು ಬಂದಿದ್ದು, ಈವರೆಗಿನ ಸೋಂಕಿತರ ಸಂಖ್ಯೆ 4,46,98,118ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 5,30,813 ಆಗಿದೆ.ಕಳೆದ ಕೆಲ ದಿನಗಳಿಂದ ಕೋವಿಡ್ ಪ್ರಕರಣ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಈ […]

ದೇಶದಲ್ಲಿ ಕೋವಿಡ್ ಹೆಚ್ಚಳ ಹಿನ್ನಲೆ ➤ ಇಂದು ಉನ್ನತ ಮಟ್ಟದ ಸಭೆ ಕರೆದ ಪ್ರಧಾನಿ ಮೋದಿ Read More »

ರಾಷ್ಟ್ರೀಯ ನ್ಯೂಸ್

ಪ್ರಧಾನಿ ಮೋದಿ ವಿರುದ್ದ ಆಕ್ಷೇಪಾರ್ಹ ಪೋಸ್ಟರ್      ➤ 6 ಮಂದಿ ಬಂಧನ, 100ಕ್ಕೂ FIR..!

(ನ್ಯೂಸ್ ಕಡಬ)newskadaba.com  ನವದೆಹಲಿ, ಮಾ.22. ಪ್ರಧಾನಿ ನರೇಂದ್ರ ಮೋದಿ ವಿರುದ್ದ ದೆಹಲಿ ನಗರಾದ್ಯಂತ ಆಕ್ಷೇಪಾರ್ಹ ಪೋಸ್ಟರ್ ಅಂಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ. ಪ್ರಕರಣ ಸಂಬಂಧ 100ಕ್ಕೂ ಎಫ್‌ಐಆರ್ ದಾಖಲಾಗಿದೆ. ಪ್ರಿಂಟಿಂಗ್ ಪ್ರೆಸ್ ಆಕ್ಟ್ & ಡಿಫೇಸ್ಮೆಂಟ್ ಆಫ್ ಪ್ರಾಪರ್ಟಿ ಆಕ್ಟ್‌ನಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ವ್ಯಾನ್‌ವೊಂದು ಆಮ್ ಆದ್ಮಿ ಪಕ್ಷದ ಕಚೇರಿಯಿಂದ ಹೊರಟಿದ್ದು, ಕೂಡಲೇ ಆ ವ್ಯಾನ್‌ನ್ನು ಅಡ್ಡಗಟ್ಟಿ ಕೆಲವು ಪೋಸ್ಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.

ಪ್ರಧಾನಿ ಮೋದಿ ವಿರುದ್ದ ಆಕ್ಷೇಪಾರ್ಹ ಪೋಸ್ಟರ್      ➤ 6 ಮಂದಿ ಬಂಧನ, 100ಕ್ಕೂ FIR..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಅಪರಾದಿಗಳನ್ನು ಗಲ್ಲಿಗೇರಿಸುವುದು ಬಿಟ್ಟು ಮರಣದಂಡನೆಗೆ ಅನ್ಯ ಮಾರ್ಗ ಹುಡುಕಿ ➤ ಸುಪ್ರೀಂ ಕೋರ್ಟ್

(ನ್ಯೂಸ್ ಕಡಬ) newskadaba.com. ನವದೆಹಲಿ, ಮಾ 22. ನೇಣು ಹಾಕುವ ಮೂಲಕ ಮರಣದಂಡನೆ ವಿಧಿಸುವಿಕೆ ಅತಿ ಸೂಕ್ತ ಮತ್ತು ನೋವು ರಹಿತ ವಿಧಾನವೇ ಎಂಬುದನ್ನು ಪರಿಶೀಲಿಸಲು ತಜ್ಞರ ಸಮಿತಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ಈ ಕುರಿತು ವಕೀಲ ರಿಷಿ ಮಲ್ಹೋತ್ರಾ ಅವರು ಸಲ್ಲಿಸಿದ್ದ ಮನವಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು. ಗಲ್ಲಿಗೇರಿಸುವ ಸಂದರ್ಭದಲ್ಲಿ ಉಂಟಾಗುವ ಪರಿಣಾಮ ಮತ್ತು ನೋವಿನ ಬಗ್ಗೆ ಯಾವುದೇ ಅಧ್ಯಯನ ನಡೆದಿದೆಯೇ ಮತ್ತು ಪ್ರಸಕ್ತ ಲಭ್ಯ ಇರುವ ಅತ್ಯಂತ ಸೂಕ್ತ

ಅಪರಾದಿಗಳನ್ನು ಗಲ್ಲಿಗೇರಿಸುವುದು ಬಿಟ್ಟು ಮರಣದಂಡನೆಗೆ ಅನ್ಯ ಮಾರ್ಗ ಹುಡುಕಿ ➤ ಸುಪ್ರೀಂ ಕೋರ್ಟ್ Read More »

ರಾಷ್ಟ್ರೀಯ ನ್ಯೂಸ್

ಭಾರತದ ರಾಷ್ಟ್ರಧ್ವಜ ಮೇಲೆ ಆಟೋಗ್ರಾಫ್ ಹಾಕಿದ ಅಫ್ರಿದಿ ➤ನೆಟ್ಟಿಗರ ಕಿಡಿ

(ನ್ಯೂಸ್ ಕಡಬ) newskadaba.com.ನವದೆಹಲಿ, ಮಾ 22. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಭಾರತದ ರಾಷ್ಟ್ರಧ್ವಜದ ಮೇಲೆ ಸಹಿ ಹಾಕಿ ಟೀಕೆಗೆ ಗುರಿಯಾಗಿದ್ದಾರೆ. ದೋಹಾದಲ್ಲಿ ನಡೆದ ಟಿ20 ಪಂದ್ಯಾವಳಿಯ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಆಕ್ಷನ್-ಪ್ಯಾಕ್ಡ್ ಸೀಸನ್‌ನಲ್ಲಿ ಅಭಿಮಾನಿಗಳ ಆಸೆಯನ್ನು ಪೂರೈಸುವ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಇತ್ತೀಚೆಗೆ ಭಾರತೀಯ ಧ್ವಜದ ಮೇಲೆ ಅಭಿಮಾನಿಯೊಬ್ಬರಿಗೆ ತಮ್ಮ ಹಸ್ತಾಕ್ಷರವನ್ನು ನೀಡುತ್ತಿರುವುದು ಕಂಡುಬಂದಿದೆ.ಅಭಿಮಾನಿಯ ಮನವಿಗೆ ಸ್ಪಂದಿಸಿದ ಅಫ್ರಿದಿ ಅಭಿಮಾನಿಗೆ ಶುಭಾಶಯ ಕೋರಿದ್ದು, ಭಾರತದ ಧ್ವಜದ ಮೇಲೆ ತಮ್ಮ ಹಸ್ತಾಕ್ಷರವನ್ನೂ ನೀಡಿದ್ದಾರೆ.

ಭಾರತದ ರಾಷ್ಟ್ರಧ್ವಜ ಮೇಲೆ ಆಟೋಗ್ರಾಫ್ ಹಾಕಿದ ಅಫ್ರಿದಿ ➤ನೆಟ್ಟಿಗರ ಕಿಡಿ Read More »

ರಾಷ್ಟ್ರೀಯ ನ್ಯೂಸ್

ಉಗ್ರರೊಂದಿಗೆ ಗುಂಡಿನ ಚಕಮಕಿ ➤ ಐಎಸ್‌ಐ ಟಾಪ್ ಬ್ರಿಗೇಡಿಯರ್ ಹತ್ಯೆ

(ನ್ಯೂಸ್ ಕಡಬ)newskadaba.com  ನವದೆಹಲಿ, ಮಾ.22. ಪಾಕಿಸ್ತಾನದ ದಕ್ಷಿಣ ವಜಿರಿಸ್ತಾನದ ಅಂಗೂರ್ ಅಡ್ಡಾದಲ್ಲಿ ಹಾರ್ಡ್‌ಕೋರ್ ಭಯೋತ್ಪಾದಕರ ಜೊತೆಗಿನ ಎನ್‌ ಕೌಂಟರ್‌ ನಲ್ಲಿ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್(ಐಎಸ್‌ಐ) ನ ಬ್ರಿಗೇಡಿಯರ್ ಮುಸ್ತಫಾ ಕಮಲ್ ಬಾರ್ಕಿ ಕೊಲ್ಲಲ್ಪಟ್ಟರು ಎಂದು ಪಾಕಿಸ್ತಾನ ಮಿಲಿಟರಿ ಮಾಧ್ಯಮ ವಿಭಾಗ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್‌ಪಿಆರ್) ತಿಳಿಸಿದೆ. ಎರಡು ಕಡೆಯ ನಡುವೆ ತೀವ್ರವಾದ ಗುಂಡಿನ ಚಕಮಕಿ ನಡೆದಿದೆ ಎಂದು ISPR ಹೇಳಿಕೆಯಲ್ಲಿ ತಿಳಿಸಿದ್ದು, ಮುಂಭಾಗದಿಂದ ಎನ್‌ಕೌಂಟರ್ ಮುನ್ನಡೆಸುತ್ತಿರುವಾಗ ಬ್ರಿಗೇಡಿಯರ್ ಮುಸ್ತಫಾ ಕಮಾಲ್ ಬಾರ್ಕಿಯನ್ನು ಕೊಲ್ಲಲಾಗಿದೆ. 7 ಮಂದಿ ಗಾಯಗೊಂಡಿದ್ದು,

ಉಗ್ರರೊಂದಿಗೆ ಗುಂಡಿನ ಚಕಮಕಿ ➤ ಐಎಸ್‌ಐ ಟಾಪ್ ಬ್ರಿಗೇಡಿಯರ್ ಹತ್ಯೆ Read More »

ರಾಷ್ಟ್ರೀಯ ನ್ಯೂಸ್

ಕೆ.ಸಿ.ಎಫ್ ಖತ್ತರ್ ರಾಷ್ಟ್ರೀಯ ಸಮಿತಿ ವತಿಯಿಂದ  ಪ್ರತಿಭೋತ್ಸವ 2K23

(ನ್ಯೂಸ್ ಕಡಬ)newskadaba.com ದೋಹಾ, ಮಾ.22. ಅರಳುವ ಕನಸು ಉತ್ಸಾಹದ ಬೆಳಕು ಎಂಬ ಘೋಷವಾಕ್ಯದೊಂದಿಗೆ ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಖತ್ತರ್ ಸಮಿತಿ ವತಿಯಿಂ ಪ್ರತಿಭೋತ್ಸವ 2k23  ದಿನಾಂಕ 17-03-2023 ರಂದು ದೋಹಾದ ಐಐಸಿಸಿ  ಸಭಾಂಗಣದಲ್ಲಿ ನಡೆಯಿತು. ಕೆ.ಸಿ.ಎಫ್  ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಹನೀಫ್ ಪಾತೂರು ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು,  ಐಸಿಎಫ್ ನಾಯಕರಾದ ಸಲಾಂ ಹಾಜಿ ಪಾಪಿನಶ್ಯೇರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೆಸಿಎಫ್ ನಡೆಸುವ ಕಾರ್ಯಚಟುವಟಿಕೆಗಳು ಶ್ಲಾಘನೀಯವಾಗಿದ್ದು ಅನಿವಾಸಿ ಪ್ರತಿಭೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಕೊಲ್ಲಿ

ಕೆ.ಸಿ.ಎಫ್ ಖತ್ತರ್ ರಾಷ್ಟ್ರೀಯ ಸಮಿತಿ ವತಿಯಿಂದ  ಪ್ರತಿಭೋತ್ಸವ 2K23 Read More »

ರಾಷ್ಟ್ರೀಯ ನ್ಯೂಸ್

ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ ಐವರು ಆರೋಪಿಗಳು ಅರೆಸ್ಟ್..!

(ನ್ಯೂಸ್ ಕಡಬ)newskadaba.com ಲಕ್ನೋ, ಮಾ, 22. ಕಳೆದ ಕೆಲ ಸಮಯದಿಂದ ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ ಐವರು ಬಾಂಗ್ಲಾದೇಶದ ಪ್ರಜೆಗಳನ್ನು ಭಯೋತ್ಪಾದನಾ ನಿಗ್ರಹ ದಳ ಮತ್ತು ಯುಪಿ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಆಗ್ರಾದ ತಾಜ್‌ಗಂಜ್ ಟೋರಾ ಚೌಕಿ ಪ್ರದೇಶದಲ್ಲಿ ಬಂಧಿಸಲಾಗಿದೆ. ಕಳೆದ ಮೂರು ವರ್ಷಗಳಿಂದ ಇವರು ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಇಬ್ರಾಹಿಂ ಶೇಖ್, ಮೊಹಮ್ಮದ್ ಅಜೀಜುರ್ ಗಾಜಿ, ರಾಜು ಶೇಖ್, ಜನ್ನತ್ ಬೇಗಂ ಮತ್ತು ಮುಕ್ತಾ ಶೇಖ್ ಬಂಧಿತರು ಎಂದು ಗುರುತಿಸಲಾಗಿದೆ. ಇನ್ನು ನಕಲಿ ಆಧಾರ್ ಕಾರ್ಡ್‌ಗಳು, ಬಾಂಗ್ಲಾದೇಶದ

ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ ಐವರು ಆರೋಪಿಗಳು ಅರೆಸ್ಟ್..! Read More »

ರಾಷ್ಟ್ರೀಯ ನ್ಯೂಸ್

ಇಂದು(ಮಾ.22) 8 ಕನ್ನಡಿಗರು ಸೇರಿ 106 ಪುರಸ್ಕೃತರಿಗೆ ಪದ್ಮಪ್ರಶಸ್ತಿ ಪ್ರಧಾನ

(ನ್ಯೂಸ್ ಕಡಬ)newskadaba.com ನವದೆಹಲಿ, ಮಾ.22. 2023ನೇ ಸಾಲಿನಲ್ಲಿ ಪದ್ಮ ಪ್ರಶಸ್ತಿಗೆ ಭಾಜನರಾದ 106 ಮಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ, ಸಾಹಿತಿ ಎಸ್‌.ಎಲ್‌.ಭೈರಪ್ಪ ಸೇರಿದಂತೆ ಹಲವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ. 2023ನೇ ಸಾಲಿನಲ್ಲಿ 6 ಪದ್ಮವಿಭೂಷಣ, 9 ಪದ್ಮಭೂಷಣ ಮತ್ತು 91 ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗಿತ್ತು. ರಾಷ್ಟ್ರಪತಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ  ಅವರು ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದು,

ಇಂದು(ಮಾ.22) 8 ಕನ್ನಡಿಗರು ಸೇರಿ 106 ಪುರಸ್ಕೃತರಿಗೆ ಪದ್ಮಪ್ರಶಸ್ತಿ ಪ್ರಧಾನ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಸರ್ಕಾರದ ಅಂತಿಮ ಸೂಚನೆ ➤ 10 ದಿನದಲ್ಲಿ ಈ ಕೆಲಸ ಪೂರ್ಣಗೊಳಿಸದಿದ್ರೆ ನಿಮಗೆ ತೊಂದರೆ ಖಚಿತ

(ನ್ಯೂಸ್ ಕಡಬ) newskadaba.com. ನವದೆಹಲಿ, ಮಾ. 22. ಹಣಕಾಸು ವರ್ಷ 2022-23 ಕೊನೆಗೊಳ್ಳಲು ಕೆಲವೇ ದಿನಗಳು ಉಳಿದಿವೆ. 2022-23ರ ಆರ್ಥಿಕ ವರ್ಷವು 31 ಮಾರ್ಚ್ 2023ರಂದು ಕೊನೆಗೊಳ್ಳುತ್ತದೆ. ಇದರೊಂದಿಗೆ ಮಾರ್ಚ್ 31ರೊಳಗೆ ಮಾಡಬೇಕಾದ ಹಲವು ಕೆಲಸಗಳು ಬಹಳ ಮುಖ್ಯ. ಈ ಮಹತ್ವದ ಕೆಲಸಗಳನ್ನ ಮಾರ್ಚ್ 31ರೊಳಗೆ ಪೂರ್ಣಗೊಳಿಸಿದರೆ ಮುಂದಿನ ದಿನಗಳಲ್ಲಿ ಜನರಿಗೆ ಯಾವುದೇ ತೊಂದರೆಯಾಗದು. ಅದೇ ಸಮಯದಲ್ಲಿ, ಮಾರ್ಚ್ 31, 2023ರೊಳಗೆ ಪೂರ್ಣಗೊಳಿಸಲು ಬಹಳ ಮುಖ್ಯವಾದ ಪ್ಯಾನ್ ಕಾರ್ಡ್‌ಗೆ ಸಂಬಂಧಿಸಿದ ಕೆಲಸವೂ ಇದೆ. ಮಾರ್ಚ್ 31ರೊಳಗೆ ಈ ಕಾಮಗಾರಿ

ಸರ್ಕಾರದ ಅಂತಿಮ ಸೂಚನೆ ➤ 10 ದಿನದಲ್ಲಿ ಈ ಕೆಲಸ ಪೂರ್ಣಗೊಳಿಸದಿದ್ರೆ ನಿಮಗೆ ತೊಂದರೆ ಖಚಿತ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಭಾರತದ ಹಲವೆಡೆ ಲಘು ಭೂಕಂಪನ

(ನ್ಯೂಸ್ ಕಡಬ)newskadaba.com ನವದೆಹಲಿ, ,ಮಾ.22. ದೆಹಲಿ-ಎನ್ಸಿಆರ್ ಪ್ರದೇಶ ಸೇರಿದಂತೆ ಉತ್ತರ ಭಾರತದಲ್ಲಿ ಪ್ರಬಲ ಭೂಕಂಪದ ಅನುಭವವಾಗಿದ್ದು, ಭೂ ಕಂಪನದಿಂದ ಭಯಗೊಂಡ ಜನ ಮನೆಯಿಂದ ಹೊರ ಬಂದಿದ್ದಾರೆ ಎನ್ನಲಾಗಿದೆ. ಭಾರತ, ಕಜಕಿಸ್ತಾನ್, ಪಾಕಿಸ್ತಾನ, ತಜಕಿಸ್ತಾನ್, ಉಜ್ಬೇಕಿಸ್ತಾನ್, ಚೀನಾ, ಅಫ್ಘಾನಿಸ್ತಾನ ಮತ್ತು ಕಿರ್ಗಿಸ್ತಾನ್ ಸೇರಿದಂತೆ ದೇಶಗಳಲ್ಲಿ ರಿಕ್ಟರ್ ಮಾಪಕದಲ್ಲಿ 7.7 ರಷ್ಟು ಭೂಕಂಪ ಸಂಭವಿಸಿದೆ ಎಂದು ವರದಿ ತಿಳಿಸಿದೆ.  

ಭಾರತದ ಹಲವೆಡೆ ಲಘು ಭೂಕಂಪನ Read More »

ರಾಷ್ಟ್ರೀಯ ನ್ಯೂಸ್
Scroll to Top