ರಾಷ್ಟ್ರೀಯ ನ್ಯೂಸ್

ಸಿಕ್ಕಿಂನಲ್ಲಿ ಭಾರೀ ಹಿಮಪಾತ ➤ 6 ಪ್ರವಾಸಿಗರು ಮೃತ್ಯು, 11 ಮಂದಿಗೆ ಗಾಯ

(ನ್ಯೂಸ್ ಕಡಬ)newskadaba.com ಸಿಕ್ಕಿಂ, ಏ.05. ಸಿಕ್ಕಿಂನ ನಾಥು ಲಾ ಪರ್ವತ ಪಾಸ್‌‌ನಲ್ಲಿ ಸಂಭವಿಸಿದ ಭಾರಿ ಹಿಮಪಾತದಲ್ಲಿ ಹಲವಾರು ಪ್ರವಾಸಿಗರು ಸಿಲುಕಿಸಿ ಆರು ಮಂದಿ ಮೃತಪಟ್ಟು, 11 ಮಂದಿ ಗಾಯಗೊಂಡಿದ್ದಾರೆ ತಿಳಿದು ಬಂದಿದೆ. ಈ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದು, ಹಿಮಪಾತ ಸಂಭವಿಸಿದಾಗ 150ಕ್ಕೂ ಹೆಚ್ಚು ವಿಹಾರಿಗರು ಈ ಪ್ರದೇಶದಲ್ಲಿದ್ದರು ಎಂದು ವರದಿಯಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆ ತಂಡವನ್ನ ಸ್ಥಳ ತಲುಪಿದ್ದು, ರಕ್ಷಣಾ ಕಾರ್ಯ ಪ್ರಾರಂಭಿಸಿದೆ ಎಂದರು.

ಸಿಕ್ಕಿಂನಲ್ಲಿ ಭಾರೀ ಹಿಮಪಾತ ➤ 6 ಪ್ರವಾಸಿಗರು ಮೃತ್ಯು, 11 ಮಂದಿಗೆ ಗಾಯ Read More »

ರಾಷ್ಟ್ರೀಯ ನ್ಯೂಸ್

ಸರ್ವಿಸ್ ರಿವಾಲ್ವರ್‌ನಿಂದ ಪತ್ನಿ, ಮಗ, ಸಾಕು ನಾಯಿಯನ್ನು ಹತ್ಯೆಗೈದ ಪೊಲೀಸ್‌ ಅಧಿಕಾರಿ.!!   ➤ದೂರು ದಾಖಲು

(ನ್ಯೂಸ್ ಕಡಬ)Newskadaba.com ಪಂಜಾಬ್‌,ಏ.05  ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಸರ್ವಿಸ್ ರಿವಾಲ್ವರ್‌ನಿಂದ ಪತ್ನಿ, ಮಗ ಹಾಗೂ ಸಾಕು ನಾಯಿಯನ್ನು ಗುಂಡಿಕ್ಕಿ ಕೊಂದಿದ್ದಾರೆ. ಅಮೃತಸರ ಮೂಲದ ಎಎಸ್‌ಐ ಭೂಪಿಂದರ್ ಸಿಂಗ್ ತನ್ನ ಸರ್ವಿಸ್ ರಿವಾಲ್ವರ್‌ನಿಂದ ಪತ್ನಿ ಬಲ್ಜೀತ್ ಕೌರ್ (40) ಮತ್ತು ಮಗ ಲವ್‌ಪ್ರೀತ್ ಸಿಂಗ್ (19) ಅವರನ್ನು ಕೊಲೆ ಮಾಡಿದ್ದಾರೆ.ಅಷ್ಟೇ ಅಲ್ಲದೆ ತನ್ನ ಮುದ್ದಿನ ನಾಯಿಗೂ ಗುಂಡು ಹಾರಿಸಿ ಪರಾರಿಯಾಗಿದ್ದಾನೆ.        

ಸರ್ವಿಸ್ ರಿವಾಲ್ವರ್‌ನಿಂದ ಪತ್ನಿ, ಮಗ, ಸಾಕು ನಾಯಿಯನ್ನು ಹತ್ಯೆಗೈದ ಪೊಲೀಸ್‌ ಅಧಿಕಾರಿ.!!   ➤ದೂರು ದಾಖಲು Read More »

ರಾಷ್ಟ್ರೀಯ ನ್ಯೂಸ್

5 ವರ್ಷದ ಹಿಂದೆ ನಡೆದಿದ್ದ ಬುಡಕಟ್ಟು ಯುವಕನ ಕೊಲೆ ಪ್ರಕರಣ ➤ 14 ಮಂದಿ ದೋಷಿ

 (ನ್ಯೂಸ್ ಕಡಬ)newskadaba.com ಕೇರಳ, ಏ.05. 5 ವರ್ಷಗಳ ಹಿಂದೆ ಕೇರಳದಲ್ಲಿ ನಡೆದಿದ್ದ ಬುಡಕಟ್ಟು ಯುವಕನೊಬ್ಬನ ಕೊಲೆಗೆ ಸಂಬಂಧಿಸಿದಂತೆ 14 ಮಂದಿ ಆರೋಪಿಗಳನ್ನು ದೋಷಿಗಳೆಂದು ಪರಿಗಣಿಸಿ ಕೇರಳದ ಪಾಲಕ್ಕಾಡ್‌ನ ಮನ್ನಾರ್‌ಕಾಡ್‌ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. ಮಧು ಎಂಬ ಬುಡಕಟ್ಟು ಯುವಕನನ್ನು ಫೆ. 22, 2018 ರಂದು ಕೊಲೆಗೈದ ಕಾರಣಕ್ಕೆ ಒಟ್ಟು 16 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಖುಲಾಸೆಗೊಳಿಸಿರುವ ನ್ಯಾಯಾಲಯ 14 ಮಂದಿಯನ್ನು ದೋಷಿಗಳೆಂದು ಹೇಳಿದೆ.

5 ವರ್ಷದ ಹಿಂದೆ ನಡೆದಿದ್ದ ಬುಡಕಟ್ಟು ಯುವಕನ ಕೊಲೆ ಪ್ರಕರಣ ➤ 14 ಮಂದಿ ದೋಷಿ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

50 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಪಲ್ಟಿ.!!   ➤ ಹಲವರಿಗೆ ಗಂಭೀರ ಗಾಯ

(ನ್ಯೂಸ್ ಕಡಬ)Newskadaba.com ಅಜ್ಮೀರ್‌,ಏ.05  ಅಜ್ಮೀರ್‌ನಿಂದ 50 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಬಸ್ ರಾಷ್ಟ್ರ ರಾಜಧಾನಿ ಪ್ರದೇಶದ ಗುರುಗ್ರಾಮ್ ಬಳಿಯ ರಾಜೋಕ್ರಿ ಎಂಬಲ್ಲಿ ಪಲ್ಟಿಯಾಗಿದೆ.ದೆಹಲಿ ವಿಮಾನ ನಿಲ್ದಾಣದ ಬಳಿಯ ರಾಜೋಕ್ರಿ ಮೇಲ್ಸೇತುವೆ ಬಳಿ  ಈ ಘಟನೆ ನಡೆದಿದೆ. ಮಹಿಳೆ ಮತ್ತು ಮಗು ಸೇರಿದಂತೆ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ.ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.      

50 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಪಲ್ಟಿ.!!   ➤ ಹಲವರಿಗೆ ಗಂಭೀರ ಗಾಯ Read More »

ರಾಷ್ಟ್ರೀಯ ನ್ಯೂಸ್

ಅಪ್ರಾಪ್ತನ ಬಿಡುಗಡೆಗೆ 30 ಸಾವಿರ ರೂಪಾಯಿ ಲಂಚ ಕೇಳಿದ ಪೊಲೀಸರು   ➤ಠಾಣೆಗೆ ಟವೆಲ್‌ ಕಟ್ಟಿಕೊಂಡು ಬಂದ ತಂದೆ..!!

(ನ್ಯೂಸ್ ಕಡಬ)Newskadaba.com ಛತ್ತೀಸ್‌ಗಢ,ಏ.05  ಛತ್ತೀಸ್‌ಗಢದ ಕೊರ್ಬಾದಲ್ಲಿ ವ್ಯಕ್ತಿಯೊಬ್ಬ ದರಿ ಪೊಲೀಸ್ ಠಾಣೆಯ ಪೊಲೀಸರು ತಮ್ಮ 14 ವರ್ಷದ ಮಗನನ್ನು ಬಿಡುಗಡೆ ಮಾಡಲು ಪೊಲೀಸರು 30 ಸಾವಿರ ರೂಪಾಯಿ ಲಂಚ ಕೇಳುತ್ತಿರುವುದಾಗಿ ಆರೋಪಿಸಿದ್ದಾರೆ. ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿ ಪೊಲೀಸರು ಬಾಲಕನನ್ನು ವಶಕ್ಕೆ ಪಡೆದಿದ್ದಾರೆ, ಆತನನ್ನು ಬಿಡುಗಡೆ ಮಾಡಲು ಪೋಲೀಸರು ಲಂಚ ಕೇಳುತ್ತಿರುವುದಾಗಿ ಆರೋಪಿಸಿದ್ದಾರೆ.      

ಅಪ್ರಾಪ್ತನ ಬಿಡುಗಡೆಗೆ 30 ಸಾವಿರ ರೂಪಾಯಿ ಲಂಚ ಕೇಳಿದ ಪೊಲೀಸರು   ➤ಠಾಣೆಗೆ ಟವೆಲ್‌ ಕಟ್ಟಿಕೊಂಡು ಬಂದ ತಂದೆ..!! Read More »

ರಾಷ್ಟ್ರೀಯ ನ್ಯೂಸ್

ರೈಲಿನಲ್ಲಿ ಬೆಂಕಿ ಹಚ್ಚಿ ಮೂವರ ಹತ್ಯೆ ➤ ಆರೋಪಿ ಸೆರೆ

(ನ್ಯೂಸ್ ಕಡಬ)newskadaba.com  ಮುಂಬೈ, ಏ.05.  ಕೋಯಿಕ್ಕೋಡ್‌ ನಲ್ಲಿ ಚಲಿಸುತ್ತಿದ್ದ ರೈಲಿನ ಬೋಗಿಯೊಳಗೆ ಬೆಂಕಿ ಹಚ್ಚಿ ಮೂವರು ಪ್ರಯಾಣಿಕರ ಸಾವಿಗೆ ಕಾರಣವಾಗಿದ್ದ ಪ್ರಮುಖ ಆರೋಪಿ ಶಾರುಖ್ ಸೈಫಿಯನ್ನು ಮಹಾರಾಷ್ಟ್ರ ಪೊಲೀಸ್ ಮತ್ತು ಕೇಂದ್ರ ಗುಪ್ತಚರ ದಳ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬಂಧಿಸಿವೆ. ಈ ಭೀಕರ ಪ್ರಕರಣದಲ್ಲಿ ಮೂವರ ಸಾವು ಮಾತ್ರವಲ್ಲದೇ 9 ಜನರು ಗಾಯಗೊಂಡಿದ್ದರು. ಕೊಯಿಕ್ಕೋಡ್‌ ನಲ್ಲಿ ಅಳಪುಳಾ- ಕಣ್ಣೂರ್ ಎಕ್ಸ್ ಪ್ರೆಸ್ ರೈಲಿನಲ್ಲಿ ಸಹ ಪ್ರಯಾಣಿಕರಿಗೆ ಬೆಂಕಿ ಹಚ್ಚಿದ ಆರೋಪಿ ಅಲ್ಲಿಂದ ತಪ್ಪಿಸಿಕೊಂಡಿದ್ದ. ಈತನ ಪತ್ತೆಗೆ ವಿಶೇಷ

ರೈಲಿನಲ್ಲಿ ಬೆಂಕಿ ಹಚ್ಚಿ ಮೂವರ ಹತ್ಯೆ ➤ ಆರೋಪಿ ಸೆರೆ Read More »

ರಾಷ್ಟ್ರೀಯ ನ್ಯೂಸ್

SSLC ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ   ➤ಇಬ್ಬರ ಬಂಧನ

(ನ್ಯೂಸ್ ಕಡಬ)Newskadaba.com ನವದೆಹಲಿ, ಏ.05 10ನೇ ತರಗತಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ಬಂಡಿ ಸಂಜಯ್ ಅವರನ್ನು ಬಂಧಿಸಲಾಗಿದೆ. ಬಂಧನದ ವೇಳೆ ಕರೀಂನಗರದಲ್ಲಿರುವ ಸಂಸದ ಸಂಜಯ್ ಅವರ ನಿವಾಸದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಕಾರ್ಯಕರ್ತರು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ಬಿಗುವಿನ ವಾತಾವರಣ ನಿರ್ಮಾಣವಾಗಿದೆ.ತಮ್ಮ ನಾಯಕನನ್ನು ಏಕೆ ಬಂಧಿಸಲಾಗುತ್ತಿದೆ ಎಂದು ಬಿಜೆಪಿ ಕಾರ್ಯಕರ್ತರು ಸಿಐ ದಾಮೋದರ್ ಅವರನ್ನು ಪ್ರಶ್ನಿಸಿದರು. ಏತನ್ಮಧ್ಯೆ, ಸಂಜಯ್‌ಗೆ 151 ಸಿಆರ್‌ಪಿಸಿ ನೋಟಿಸ್‌ಗಳನ್ನು ನೀಡಲಾಗಿದೆ.

SSLC ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ   ➤ಇಬ್ಬರ ಬಂಧನ Read More »

ರಾಷ್ಟ್ರೀಯ ನ್ಯೂಸ್

ಮದುವೆ ಉಡುಗೊರೆಯಾಗಿ ನೀಡಿದ್ದ ಮ್ಯೂಸಿಕ್‌ ಸಿಸ್ಟಮ್‌ನಲ್ಲಿ ಬಾಂಬ್‌..! ➤ ನವ ವಿವಾಹಿತ ಸೇರಿ ಇಬ್ಬರು ಬಲಿ

(ನ್ಯೂಸ್ ಕಡಬ)newskadaba.com  ಛತ್ತೀಸ್ ಗಢ, ಏ.05. ಮದುವೆಗೆ ನಾನಾ ರೀತಿಯ ಉಡುಗೊರೆಗಳು ಬರೋದು ಸಾಮಾನ್ಯವಾಗಿದ್ದು, ಸಂತಸದ ಸಮಾರಂಭದಲ್ಲಿ ಸೂತಕದ ವಾತಾವರಣ ಏರ್ಪಟ್ಟಿದೆ. ಛತ್ತೀಸ್‌ಗಢದಲ್ಲಿ ದುರಂತ ಘಟನೆ ನಡೆದಿದೆ. ಮದುವೆ ಉಡುಗೊರೆಯಾಗಿ ಪಡೆದ ಹೋಮ್ ಥಿಯೇಟರ್ ಮ್ಯೂಸಿಕ್ ಸಿಸ್ಟಮ್ ಮನೆಯಲ್ಲೇ ಸ್ಫೋಟಗೊಂಡಿದೆ. ಈ ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು ಮತ್ತು ನಾಲ್ವರು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮದುವೆ ಉಡುಗೊರೆಯಾಗಿ ನೀಡಿದ್ದ ಮ್ಯೂಸಿಕ್‌ ಸಿಸ್ಟಮ್‌ನಲ್ಲಿ ಬಾಂಬ್‌..! ➤ ನವ ವಿವಾಹಿತ ಸೇರಿ ಇಬ್ಬರು ಬಲಿ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಗಳ ಮೇಲೆ ಅತ್ಯಾಚಾರವೆಸಗಿದ ತಂದೆಯನ್ನು ಬಂಧಿಸಿದ ಪೊಲೀಸರು

(ನ್ಯೂಸ್ ಕಡಬ)newskadaba.com ಹರಿಯಾಣ, ಏ.05. 16 ವರ್ಷದ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗಿದ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.  ಕಳೆದ ಎರಡು ವರ್ಷಗಳಲ್ಲಿ ಪತಿ ಮಗಳ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆಯ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಒಮ್ಮೆ ತನ್ನ ಪತಿ ಅಪ್ರಾಪ್ತ ಬಾಲಕಿಯ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ತಡೆದಿದ್ದೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ. ತನ್ನ ಮಗಳೊಂದಿಗೆ ತನ್ನ ಸ್ವಗ್ರಾಮದಿಂದ ಹಿಂದಿರುಗಿದಾಗ, ಆರೋಪಿಯು ಮತ್ತೆ ಮಗಳ ಮೇಲೆ

ಮಗಳ ಮೇಲೆ ಅತ್ಯಾಚಾರವೆಸಗಿದ ತಂದೆಯನ್ನು ಬಂಧಿಸಿದ ಪೊಲೀಸರು Read More »

ರಾಷ್ಟ್ರೀಯ ನ್ಯೂಸ್

ಕಾಶ್ಮೀರ ಕಣಿವೆಯ RSS ನಾಯಕರ ಹಿಟ್‌ಲಿಸ್ಟ್‌ ಬಿಡುಗಡೆ ಮಾಡಿದ ಉಗ್ರರು

 (ನ್ಯೂಸ್ ಕಡಬ)newskadaba.com ಶ್ರೀನಗರ, ಏ.05. ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆರೆಸ್ಸೆಸ್‌ ಪ್ರಮುಖ ನಾಯಕರು ಹಾಗೂ ಕಾರ‍್ಯಕರ್ತರ ರಕ್ತ ಹರಿಸುತ್ತೇವೆ ಎಂದು ಸ್ಥಳೀಯ ಉಗ್ರ ಸಂಘಟನೆ ‘ದಿ ರೆಸಿಸ್ಟೆನ್ಸ್‌ ಫ್ರಂಟ್‌’ (ಟಿಆರ್‌ಎಫ್‌) ಜೀವ ಬೆದರಿಕೆ ಹಾಕಿದೆ. ಪಾಕ್‌ ಪೋಷಿತ ಲಷ್ಕರೆ ತಯ್ಬಾ ಉಗ್ರ ಸಂಘಟನೆಯ ಅಂಗಸಂಸ್ಥೆ ‘ಟಿಆರ್‌ಫ್‌’ಅನ್ನು ಸರಕಾರ ಜನವರಿಯಲ್ಲಿಯೇ ನಿಷೇಧಿಸಿದೆ. ”ನಿಮ್ಮನ್ನು ಸುಮ್ಮನೇ ಬಿಡುವುದಿಲ್ಲ, ನಿಮ್ಮ ರಕ್ತ ಹರಿಸುತ್ತೇವೆ,” ಎಂದು 30 ಆರೆಸ್ಸೆಸ್‌ ನಾಯಕರು ಹಾಗೂ ಕಾರ‍್ಯಕರ್ತರ ‘ಟಾರ್ಗೆಟ್‌ ಲಿಸ್ಟ್‌’ಅನ್ನು ಟಿಆರ್‌ಎಫ್‌ ಬಿಡುಗಡೆ ಮಾಡಿದೆ.

ಕಾಶ್ಮೀರ ಕಣಿವೆಯ RSS ನಾಯಕರ ಹಿಟ್‌ಲಿಸ್ಟ್‌ ಬಿಡುಗಡೆ ಮಾಡಿದ ಉಗ್ರರು Read More »

ರಾಷ್ಟ್ರೀಯ ನ್ಯೂಸ್
Scroll to Top