ರಾಷ್ಟ್ರೀಯ ನ್ಯೂಸ್

ದೆಹಲಿಯಲ್ಲಿ ಕಡಿಮೆ ಗೋಚರತೆ ಹಿನ್ನೆಲೆ 120ಕ್ಕೂ ಹೆಚ್ಚು ವಿಮಾನಗಳು ರದ್ದು

(ನ್ಯೂಸ್‌ ಕಡಬ) newskadaba.com,ಡಿ.16 ಬೆಳ್ತಂಗಡಿ: ಉತ್ತರ ಭಾರತದಲ್ಲಿ ಚಳಿಗಾಲದಲ್ಲಿ ಬೆಳಗಿನ ವೇಳೆ ಆಗಾಗ್ಗೆ ದಟ್ಟವಾದ ಮಂಜು ಕವಿದಿರುತ್ತದೆ. ಇದು ವಿಮಾನಗಳ ಚಲನೆಯನ್ನು ನಿಧಾನಗೊಳಿಸುತ್ತದೆ. ಇದೀಗ ಕಡಿಮೆ ಗೋಚರತೆಯ ಹಿನ್ನೆಲೆ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಒಟ್ಟು 49 ನಿರ್ಗಮನ ಮತ್ತು 77 ಆಗಮನ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂಡಿಗೋ ಏರ್ಲೈನ್ಸ್ ತನ್ನ ನೆಟ್‌ವರ್ಕ್‌ನಾದ್ಯಂತ 110 ವಿಮಾನಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದೆ. “ಕಡಿಮೆ ಗೋಚರತೆಯಿಂದಾಗಿ, ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಗಳ ಮೇಲೆ ತೀವ್ರ […]

ದೆಹಲಿಯಲ್ಲಿ ಕಡಿಮೆ ಗೋಚರತೆ ಹಿನ್ನೆಲೆ 120ಕ್ಕೂ ಹೆಚ್ಚು ವಿಮಾನಗಳು ರದ್ದು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ನವದೆಹಲಿಯಲ್ಲಿ ವಿಜಯ್ ದಿವಸ್ – 1971ರ ಯುದ್ಧ ವಿಜಯದ ವೀರಗಾಥೆ

(ನ್ಯೂಸ್‌ ಕಡಬ) newskadaba.com,ಡಿ.16  ನವದೆಹಲಿ: ಪ್ರತಿ ವರ್ಷ ಡಿಸೆಂಬರ್ 16ರಂದು ಭಾರತದಲ್ಲಿ ವಿಜಯ್ ದಿವಸ್ ಆಚರಿಸಲಾಗುತ್ತದೆ. 1971ರಲ್ಲಿ ಇದೇ ದಿನ ಭಾರತೀಯ ಸೇನೆ ಪಾಕಿಸ್ತಾನದ ವಿರುದ್ಧ ಐತಿಹಾಸಿಕ ವಿಜಯ ಸಾಧಿಸಿತು. ಈ ಯುದ್ಧದಲ್ಲಿ ಪಾಕಿಸ್ತಾನಿ ಸೇನೆ ಭಾರತೀಯ ಸೇನೆಯ ಶೌರ್ಯದ ಮುಂದೆ ಶರಣಾಗಿದ್ದು, ಪೂರ್ವ ಪಾಕಿಸ್ತಾನವು ಸ್ವಾತಂತ್ರ್ಯ ಪಡೆದು ಬಾಂಗ್ಲಾದೇಶವಾಗಿ ರೂಪುಗೊಂಡಿತು. ಈ ದಿನದಂದು, ಪ್ರತಿಯೊಬ್ಬ ಭಾರತೀಯನಿಗೆ ಸ್ಫೂರ್ತಿ ನೀಡುವ ಮತ್ತು ರಾಷ್ಟ್ರೀಯ ಹೆಮ್ಮೆಯ ಮೂಲವಾಗಿ ಉಳಿದಿರುವ ಆ ಧೀರ ಯೋಧರ ಅತ್ಯುನ್ನತ ತ್ಯಾಗವನ್ನು ರಾಷ್ಟ್ರವು ಸ್ಮರಿಸುತ್ತದೆ.

ನವದೆಹಲಿಯಲ್ಲಿ ವಿಜಯ್ ದಿವಸ್ – 1971ರ ಯುದ್ಧ ವಿಜಯದ ವೀರಗಾಥೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಚಾಕೊಲೇಟ್ ಆಮಿಷವೊಡ್ಡಿ ಬಾಲಕಿಯ ಅಪಹರಣ, ಅತ್ಯಾಚಾರ, ಕೊಲೆ: ಅಪರಾಧಿಯ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ರಾಷ್ಟ್ರಪತಿ

(ನ್ಯೂಸ್‌ ಕಡಬ) newskadaba.com,  ಡಿ.15: ಚಾಕೊಲೇಟ್ ನೀಡುವ ಆಮಿಷವೊಡ್ಡಿ ಎರಡು ವರ್ಷದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರವೆಸಗಿದ ಬಳಿಕ ಆಕೆಯನ್ನು ಕೊಲೆ ಮಾಡಿ ಜೈಲು ಶಿಕ್ಷೆಗೊಳಗಾದ ಅಪರಾಧಿಯ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಿರಸ್ಕರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2022ರ ಜುಲೈ 25 ರಂದು ಅಧಿಕಾರ ವಹಿಸಿಕೊಂಡ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಿರಸ್ಕರಿಸಿದ ಮೂರನೇ ಕ್ಷಮದಾನ ಅರ್ಜಿ ಇದಾಗಿದೆ. ಮಹಾರಾಷ್ಟ್ರದ ಜಲ್ನಾ ನಗರದ ಇಂದಿರಾನಗರ ಪ್ರದೇಶದಲ್ಲಿ 2012ರ ಮಾರ್ಚ್ 6 ರಂದು

ಚಾಕೊಲೇಟ್ ಆಮಿಷವೊಡ್ಡಿ ಬಾಲಕಿಯ ಅಪಹರಣ, ಅತ್ಯಾಚಾರ, ಕೊಲೆ: ಅಪರಾಧಿಯ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ರಾಷ್ಟ್ರಪತಿ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

MNREGA ಉದ್ಯೋಗ ಖಾತರಿ ಯೋಜನೆ ಹೆಸರು ಬದಲಾವಣೆ- ‘ಪೂಜ್ಯ ಬಾಪು ಗ್ರಾಮೀಣ ರೋಜ್ಗಾರ್ ಯೋಜನೆ’

(ನ್ಯೂಸ್‌ ಕಡಬ) newskadaba.com,  ಡಿ.15: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಹೆಸರನ್ನು ಬದಲಾಯಿಸುವ ಹೊಸ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆ ಮುಂದಿನಿಂದ ‘ಪೂಜ್ಯ ಬಾಪು ಗ್ರಾಮೀಣ ರೋಜ್‌ಗಾರ್ ಯೋಜನೆ’ ಎಂಬ ಹೆಸರಿನಲ್ಲಿ ಪರಿಚಿತವಾಗಲಿದೆ. ಹೊಸ ಮಸೂದೆಯಂತೆ, ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನೀಡಲಾಗುವ ಕೆಲಸದ ದಿನಗಳ ಸಂಖ್ಯೆಯನ್ನು ಪ್ರಸ್ತುತ ಇರುವ 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಜೊತೆಗೆ, ಕನಿಷ್ಠ ದಿನಗೂಲಿಯನ್ನು ರೂ. 240ಕ್ಕೆ

MNREGA ಉದ್ಯೋಗ ಖಾತರಿ ಯೋಜನೆ ಹೆಸರು ಬದಲಾವಣೆ- ‘ಪೂಜ್ಯ ಬಾಪು ಗ್ರಾಮೀಣ ರೋಜ್ಗಾರ್ ಯೋಜನೆ’ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

‘ಜ.6ಕ್ಕೆ ಡಿಕೆಶಿಗೆ ಪಟ್ಟಾಭಿಷೇಕ’- ಇಕ್ಬಾಲ್ ಹುಸೇನ್

(ನ್ಯೂಸ್‌ ಕಡಬ) newskadaba.com,  ಡಿ.13: ರಾಜ್ಯದಲ್ಲಿ ನಡೆಯುತ್ತಿರುವ ಕುರ್ಚಿ ಕಿತ್ತಾಟ ಹೊಸ ಹೊಸ ತಿರುವು ಪಡೆಯುತ್ತಿದೆ. ಜನವರಿ 6ಕ್ಕೆ ಡಿಕೆ ಶಿವಕುಮಾರ್ ಅವರಿಗೆ ಪಟ್ಟಾಭಿಷೇಕವಾಗಲಿದೆ ಎಂದು ಡಿಸಿಎಂ ಆಪ್ತ ಇಕ್ಬಾಲ್‌ ಹುಸೇನ್‌ ಹೇಳಿಕೆ ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕು, ಅವರಿಗೆ ಅವಕಾಶ ಸಿಗಬೇಕು.ಇದಕ್ಕೆ ಹೈಕಮಾಂಡ್ ಸ್ಪಂದಿಸುತ್ತಿದೆ. ಬಹುಶ: ಜ.6ರಂದು ಸ್ಥಾನ ಸಿಗುವ ಸ್ಥಾನ ಸಿಗುವ ಸಾಧ್ಯತೆಯಿದ್ದು ನನಗೆ ಶೇ.99ರಷ್ಟು ವಿಶ್ವಾಸ ಇದೆ ಎಂದು ಹೇಳಿದರು. ಡಿಕೆ ಶಿವಕುಮಾರ್‌

‘ಜ.6ಕ್ಕೆ ಡಿಕೆಶಿಗೆ ಪಟ್ಟಾಭಿಷೇಕ’- ಇಕ್ಬಾಲ್ ಹುಸೇನ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೊಂಚ ಇಳಿಕೆ ಕಂಡ ಚಿನ್ನದ ದರ

(ನ್ಯೂಸ್‌ ಕಡಬ) newskadaba.com, ಡಿ.13 ನವದೆಹಲಿ: ಚಿನ್ನದ ದರದಲ್ಲಿ ಕೆಲ ದಿನಗಳಿಂದ ಏರಿಳಿತ ಕಂಡು ಬರುತ್ತಿದ್ದು, ಇಂದು ಕೊಂಚ ಇಳಿಕೆಯಾಗಿದೆ. 22 ಕ್ಯಾರಟ್‌ ಚಿನ್ನದ ದರದಲ್ಲಿ ಇಳಿಕೆ 25 ರೂ. ಕಂಡು ಬಂದಿದ್ದು, 12,275 ರೂ. ಇದೆ. 24 ಕ್ಯಾರೆಟ್‌ ಚಿನ್ನದ ದರದಲ್ಲಿ 27 ರೂ. ಇಳಿಕೆ ಕಂಡು ಬಂದಿದ್ದು, 13,391 ರೂ. ಇದೆ. 22 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ 98,200 ರೂ. ಇದ್ದರೆ, 10 ಗ್ರಾಂಗೆ ನೀವು 1,22,750 ರೂ. ಇದೆ. ಹಾಗೂ

ಕೊಂಚ ಇಳಿಕೆ ಕಂಡ ಚಿನ್ನದ ದರ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಜನೌಷಧಿ ಕೇಂದ್ರಗಳಿಗೆ ಶಕ್ತಿ ತುಂಬಿದ ಕರ್ನಾಟಕ, ಕೇರಳ, ತಮಿಳುನಾಡು!

(ನ್ಯೂಸ್‌ ಕಡಬ) newskadaba.com,  ಡಿ.13: ದಕ್ಷಿಣ ರಾಜ್ಯಗಳು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಯೋಜನೆಯ(PMBJP) ಪರಿಣಾಮಕಾರಿಯಾಗಿ ಬೆಳವಣಿಗೆ ಸಾಧಿಸುತ್ತಿದೆ. ಆದರೆ ಇತರ ರಾಜ್ಯಗಳು ಗಮನಾರ್ಹವಾಗಿ ಕಡಿಮೆ ವ್ಯಾಪಾರ ಕಾರ್ಯಕ್ಷಮತೆಯನ್ನು ತೋರಿಸುತ್ತವೆ. ಇದರಿಂದ ಕೈಗೆಟುಕುವ ಜೆನೆರಿಕ್ ಔಷಧಿಗಳ ಲಭ್ಯತೆ ಮತ್ತು ಬಳಕೆಯಲ್ಲಿ ದೇಶದಲ್ಲಿ ಮಿಶ್ರ ಪ್ರತಿಕ್ರೆಯ ವ್ಯಕ್ತವಾಗುತ್ತಿದೆ. ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಜನೌಷಧಿ ಕೇಂದ್ರ(JAK) ಸಾಂದ್ರತೆ ಮತ್ತು ವ್ಯವಹಾರದ ಪ್ರಮಾಣದಲ್ಲಿ ಮುಂಚೂಣಿಯಲ್ಲಿವೆ. ಆದರೆ ಮಧ್ಯಪ್ರದೇಶ ಮತ್ತು ತೆಲಂಗಾಣದಂತಹ ರಾಜ್ಯಗಳು ಜನಸಂಖ್ಯಾ ಅಥವಾ ಆರ್ಥಿಕ ಬಲದ ಹೊರತಾಗಿಯೂ ಹಿಂದುಳಿದಿವೆ.

ಜನೌಷಧಿ ಕೇಂದ್ರಗಳಿಗೆ ಶಕ್ತಿ ತುಂಬಿದ ಕರ್ನಾಟಕ, ಕೇರಳ, ತಮಿಳುನಾಡು! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಗೃಹಲಕ್ಷ್ಮೀ ಯೋಜನೆ ಹಣ ಬಾಕಿ ಇದ್ರೆ ಕೂಡಲೇ ಬಿಡುಗಡೆ: ಸಿಎಂ ಸಿದ್ದರಾಮಯ್ಯ ಭರವಸೆ

(ನ್ಯೂಸ್‌ ಕಡಬ) newskadaba.com,  ಡಿ.13 ವಿಧಾನಸಭೆ : ಗೃಹಲಕ್ಷ್ಮೀ ಹಣವನ್ನು ಆಗಸ್ಟ್‌ ತಿಂಗಳವರೆಗೆ ನೀಡಲಾಗಿದೆ. ಒಂದು ವೇಳೆ ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಹಣ ಫಲಾನುಭವಿಗಳ ಖಾತೆಗಳಿಗೆ ಹೋಗಿಲ್ಲ ಎನ್ನುವುದಾದರೆ ಕೂಡಲೇ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಅಲ್ಲದೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಪ್ರಶ್ನೋತ್ತರ ಅವಧಿ ಬಳಿಕ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ಈ ವಿಷಯ ಪ್ರಸ್ತಾಪಿಸಿದರು. ಆಗ ಸಿದ್ದರಾಮಯ್ಯ,

ಗೃಹಲಕ್ಷ್ಮೀ ಯೋಜನೆ ಹಣ ಬಾಕಿ ಇದ್ರೆ ಕೂಡಲೇ ಬಿಡುಗಡೆ: ಸಿಎಂ ಸಿದ್ದರಾಮಯ್ಯ ಭರವಸೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಜುಬೀನ್ ಗಾರ್ಗ್ ನಿಗೂಢ ಸಾವು ಪ್ರಕರಣ: ಕೋರ್ಟ್‌ಗೆ 3,500 ಪುಟಗಳ ಆರೋಪಪಟ್ಟಿ ಸಲ್ಲಿಕೆ

(ನ್ಯೂಸ್‌ ಕಡಬ) newskadaba.com,  ಡಿ.13 : ಜನಪ್ರಿಯ ಗಾಯಕ ಜುಬೀನ್ ಗಾರ್ಗ್ ಅವರ ಸಾವಿನ ಕುರಿತು ತನಿಖೆ ನಡೆಸುತ್ತಿದ್ದ ವಿಶೇಷ ತನಿಖಾ ತಂಡ ಗುವಾಹಟಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವಿವರವಾದ ಆರೋಪಪಟ್ಟಿಯನ್ನು ಸಲ್ಲಿಸಿದೆ. 3,500 ಪುಟಗಳಿಗೂ ಹೆಚ್ಚು ಇರುವ ಈ ದಾಖಲೆಯನ್ನು ನ್ಯಾಯಾಲಯಕ್ಕೆ ತರಲು, ಒಂಬತ್ತು ಸದಸ್ಯರ ಎಸ್‌ಐಟಿ ತಂಡವು ನಾಲ್ಕು ದೊಡ್ಡ ಟ್ರಂಕ್‌ಗಳಲ್ಲಿ ಸಾಕ್ಷ್ಯಗಳನ್ನು ಹೊತ್ತು ಆರು ವಾಹನಗಳ ಬೆಂಗಾವಲು ಪಡೆಯಲ್ಲಿ ಆಗಮಿಸಿದ್ದು ವಿಶೇಷವಾಗಿತ್ತು. ಸೆಪ್ಟೆಂಬರ್ 19 ರಂದು ಸಿಂಗಾಪುರದಲ್ಲಿ ಗಾರ್ಗ್ ನಿಧನರಾದ ನಂತರ, ಅಸ್ಸಾಂ ಸರ್ಕಾರವು

ಜುಬೀನ್ ಗಾರ್ಗ್ ನಿಗೂಢ ಸಾವು ಪ್ರಕರಣ: ಕೋರ್ಟ್‌ಗೆ 3,500 ಪುಟಗಳ ಆರೋಪಪಟ್ಟಿ ಸಲ್ಲಿಕೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಇಂಡಿಗೋ ವಿಮಾನ ರದ್ದಾದ ಕಾರಣ ಆನ್ ಲೈನ್ ಮೂಲಕ ವಧು-ವರರ ಆರತಕ್ಷತೆ ಕಾರ್ಯಕ್ರಮ

(ನ್ಯೂಸ್‌ ಕಡಬ) newskadaba.com, ಡಿ.06 : ನವೆಂಬರ್ 23ರಂದು ಭುವನೇಶ್ವರದಲ್ಲಿ ಮದುವೆಯಾಗಿದ್ದ ಮೇಧಾ ಕ್ಷೀರಸಾಗರ ಮತ್ತು ಸಂಗಮ ದಾಸ್‌ ಅವರಿಗಾಗಿ ನಗರದಲ್ಲಿ ಬುಧವಾರ ದೊಡ್ಡ ಗುಜರಾತ್ ಭವನದಲ್ಲಿ ಆರತಕ್ಷತೆ ಆಯೋಜಿಸಲಾಗಿತ್ತು. ಆದರೆ ವಧು-ವರರು ಕಾರ್ಯಕ್ರಮಕ್ಕೆ ಆಗಮಿಸಲಿಲ್ಲ. ಇದಕ್ಕೆಲ್ಲ ಕಾರಣ ಇಂಡಿಗೋ ಎಂದು ಪೋಷಕರು ಕಿಡಿಕಾರಿದ್ಧಾರೆ. ಭುವನೇಶ್ವರದಿಂದ ಹುಬ್ಬಳ್ಳಿಗೆ ವಧು-ವರರು ವಿಮಾನ ಪ್ರಯಾಣ ಮಾಡಲು ಟಿಕೆಟ್‌ ಬುಕ್ ಮಾಡಿಕೊಂಡಿದ್ದರು. ಆದರೆ, ಇಂಡಿಗೋ ಏರ್‌ಲೈನ್ಸ್‌ ವಿಮಾನ ರದ್ದು ಮತ್ತು ವಿಳಂಬದ ಕಾರಣ ಅವರು ಹುಬ್ಬಳ್ಳಿಗೆ ತಲುಪಲಾಗಲಿಲ್ಲ. ಡಿಸೆಂಬರ್ 2ರಿಂದ 3ರವರೆಗೆ

ಇಂಡಿಗೋ ವಿಮಾನ ರದ್ದಾದ ಕಾರಣ ಆನ್ ಲೈನ್ ಮೂಲಕ ವಧು-ವರರ ಆರತಕ್ಷತೆ ಕಾರ್ಯಕ್ರಮ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top