ರಾಷ್ಟ್ರೀಯ ನ್ಯೂಸ್

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸದ ಬಳಿ ಡ್ರೋನ್ ಪತ್ತೆ

(ನ್ಯೂಸ್ ಕಡಬ)newskadaba.com ನವದೆಹಲಿ, ಏ.26. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಬಳಿ ಡ್ರೋನ್ ಪತ್ತೆಯಾಗಿದೆ ಎಂಬ ಮಾಹಿತಿ ಬಂದಿದೆ. ಅರವಿಂದ್ ಕೇಂಜ್ರಿವಾಲ್ ಅವರ ದೆಹಲಿಯ ನಿವಾಸದ ಬಳಿಯಲ್ಲಿ ಡ್ರೋನ್ ಒಂದು ಪತ್ತೆಯಾಗಿದ್ದು, ಈ ವಿಷಯ ತಿಳಿಯುತ್ತಿದ್ದಂತೆ ಅಲರ್ಟ್ ಆಗಿರುವಂತ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.  

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸದ ಬಳಿ ಡ್ರೋನ್ ಪತ್ತೆ Read More »

ರಾಷ್ಟ್ರೀಯ ನ್ಯೂಸ್

ವಾಟ್ಸಾಪ್ ಬಳಕೆದಾರರಿಗೆ ಗುಡ್ ನ್ಯೂಸ್   ➤ ಒಂದೇ ವಾಟ್ಸಾಪ್ ಖಾತೆಯನ್ನು ನಾಲ್ಕು ಫೋನ್ ಗಳಲ್ಲಿ ಬಳಸಲು ಅವಕಾಶ.!

(ನ್ಯೂಸ್ ಕಡಬ)Newskadaba.com ನವದೆಹಲಿ,ಏ.26  ಜನಪ್ರಿಯ ಜಾಲತಾಣವಾಗಿರುವ ವಾಟ್ಸಾಪ್ ಈ ಮೂಲಕ ಹೊಸ ಫೀಚರ್ ಪರಿಚಯಿಸಿದೆ. ಮೂಲ ಫೋನ್ ಗಳಲ್ಲಿ ಲಾಗ್ ಔಟ್ ಆಗದೆ ಡೆಸ್ಕ್ ಟಾಪ್ ಮತ್ತು ಲ್ಯಾಪ್ಟಾಪ್ ಗಳಲ್ಲಿ ಬಳಕೆ ಮಾಡುವ ರೀತಿಯಲ್ಲಿಯೇ ಇನ್ನು ಮುಂದೆ ಹಲವು ಮೊಬೈಲ್ ಗಳಲ್ಲಿಯೂ ವಾಟ್ಸಾಪ್ ಬಳಸಬಹುದಾಗಿದೆ. ಪ್ರಪಂಚದ ಯಾವ ಭಾಗದಿಂದಲಾದರೂ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸುವ ವ್ಯವಸ್ಥೆ ರೂಪಿಸಿದ್ದ ವಾಟ್ಸಾಪ್ ಅದನ್ನು ಮತ್ತಷ್ಟು ವಿಸ್ತರಿಸಿ ಹಲವು ಮೊಬೈಲ್ ಗಳಲ್ಲಿಯೂ ಒಂದೇ ಖಾತೆ ಬಳಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಲಾಗಿದೆ.ವಾಟ್ಸಾಪ್

ವಾಟ್ಸಾಪ್ ಬಳಕೆದಾರರಿಗೆ ಗುಡ್ ನ್ಯೂಸ್   ➤ ಒಂದೇ ವಾಟ್ಸಾಪ್ ಖಾತೆಯನ್ನು ನಾಲ್ಕು ಫೋನ್ ಗಳಲ್ಲಿ ಬಳಸಲು ಅವಕಾಶ.! Read More »

ರಾಷ್ಟ್ರೀಯ ನ್ಯೂಸ್

ಕಾಸರಗೋಡು: ದಾಖಲೆಗಳಿಲ್ಲದ 5.93 ಲಕ್ಷ ರೂ. ಹಣ ವಶ

(ನ್ಯೂಸ್ ಕಡಬ)newskadaba.com ಕಾಸರಗೋಡು, ಏ.26. ದಾಖಲೆ ಗಳಿಲ್ಲದ ಸುಮಾರು 5.93 ಲಕ್ಷ ರೂ. ಸಹಿತ ಓರ್ವನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಉದುಮ ದ ಮುಹಮ್ಮದ್ ಅನಾಸ್ (33) ಬಂಧಿತ ಆರೋಪಿಯಾಗಿದ್ದಾನೆ. ಕೋಟಚ್ಚೇರಿಯಲ್ಲಿ ರೈಲ್ವೆ ಮೇಲ್ಸೇತುವೆ ಸಮೀಪ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ದಾರಿಯಾಗಿ ಬಂದ ಸ್ಕೂಟರ್ ನ್ನು ತಪಾಸಣೆ ನಡೆಸಿದಾಗ ಹಣ ಪತ್ತೆಯಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.  

ಕಾಸರಗೋಡು: ದಾಖಲೆಗಳಿಲ್ಲದ 5.93 ಲಕ್ಷ ರೂ. ಹಣ ವಶ Read More »

ರಾಷ್ಟ್ರೀಯ ನ್ಯೂಸ್

ಗೂಗಲ್ ಪ್ಲೇ ಸ್ಟೋರ್ ಡೌನ್ ➤ ಬಳಕೆದಾರರ ಪರದಾಟ

(ನ್ಯೂಸ್ ಕಡಬ)newskadaba.com ನವದೆಹಲಿ, ಏ.25. ಜಾಗತಿಕ ಮಟ್ಟದಲ್ಲಿ ಸಾವಿರಾರು ಬಳಕೆದಾರರಿಗೆ ಗೂಗಲ್ ಪ್ಲೇ ಸ್ಟೋರ್ ಡೌನ್ ಆಗಿದ್ದು, ಬಳಕೆದಾರರು ಪರದಾಡುವಂತಾಗಿದೆ. ಅನೇಕ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್ ನ ಅಪ್ಲಿಕೇಶನ್ ಸ್ಟೋರ್ ಅನ್ನು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ ಎಂದು ವರದಿ ಮಾಡಿದ್ದಾರೆ.

ಗೂಗಲ್ ಪ್ಲೇ ಸ್ಟೋರ್ ಡೌನ್ ➤ ಬಳಕೆದಾರರ ಪರದಾಟ Read More »

ರಾಷ್ಟ್ರೀಯ ನ್ಯೂಸ್

ದೇಶದ ನಾಲ್ಕು ಸಹಕಾರಿ ಬ್ಯಾಂಕ್‌ಗಳಿಗೆ ದಂಡ ವಿಧಿಸಿದ RBI ➤44 ಲಕ್ಷ ರೂಪಾಯಿ ದಂಡ..!

(ನ್ಯೂಸ್ ಕಡಬ)Newskadaba.com ನವದೆಹಲಿ,ಏ.25 ಚೆನ್ನೈ ಮೂಲದ ತಮಿಳುನಾಡು ಸ್ಟೇಟ್ ಅಪೆಕ್ಸ್ ಕೋ-ಆಪರೇಟಿವ್ ಬ್ಯಾಂಕ್‌ಗೆ 16 ಲಕ್ಷ ರೂಪಾಯಿ ದಂಡ ಸೇರಿದಂತೆ ದೇಶದ ನಾಲ್ಕು ಸಹಕಾರಿ ಬ್ಯಾಂಕ್‌ಗಳಿಗೆ ರಿಸರ್ವ್ ಬ್ಯಾಂಕ್ ಒಟ್ಟು 44 ಲಕ್ಷ ರೂಪಾಯಿ ದಂಡ ವಿಧಿಸಿದೆ. ನಿಗದಿತ ಅವಧಿಯಲ್ಲಿ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿಗೆ ಅರ್ಹ ಮೊತ್ತವನ್ನು ವರ್ಗಾಯಿಸಲು ವಿಫಲವಾದ ಕಾರಣ ಬಾಂಬೆ ಮರ್ಕೆಂಟೈಲ್ ಕೋ-ಆಪರೇಟಿವ್ ಬ್ಯಾಂಕ್‌ಗೆ 13 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗಿದೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ. ‘ಠೇವಣಿಗಳ ಮೇಲಿನ ಬಡ್ಡಿ

ದೇಶದ ನಾಲ್ಕು ಸಹಕಾರಿ ಬ್ಯಾಂಕ್‌ಗಳಿಗೆ ದಂಡ ವಿಧಿಸಿದ RBI ➤44 ಲಕ್ಷ ರೂಪಾಯಿ ದಂಡ..! Read More »

ರಾಷ್ಟ್ರೀಯ ನ್ಯೂಸ್

ಮದುವೆ ಮನೆಯಲ್ಲಿ ಆಸಿಡ್ ದಾಳಿ ಕೇಸ್ ಗೆ ಟ್ವಿಸ್ಟ್    ➤ ಯುವತಿಯೋರ್ವಳಿಂದ ನಡೆಯಿತಾ ಕೃತ್ಯ

(ನ್ಯೂಸ್ ಕಡಬ)newskadaba.com ಛತ್ತೀಸ್ ಘಡ, ಏ.25. ಮದುವೆಯ ವೇದಿಕೆಯೊಂದರಲ್ಲಿ ನಡೆದ ಆಸಿಡ್ ದಾಳಿ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿ ಯುವತಿಯೋರ್ವಳ ಬಂಧನವಾಗಿದೆ. ತನ್ನನ್ನು ಬಿಟ್ಟು ಬೇರೆಯವಳೊಂದಿಗೆ ಮದುವೆಯಾಗಲು ಹೊರಟಿದ್ದ ತನ್ನ ಮಾಜಿ ಗೆಳೆಯನ ಮೇಲೆ ಯುವತಿಯೊಬ್ಬಳು ಆಸಿಡ್ ದಾಳಿ ನಡೆಸಿದ ಭೀಕರ ಘಟನೆ ಛತ್ತಿಸ್‌ಗಡ ರಾಜ್ಯದ ಬಸ್ತಾರ್ ಜಿಲ್ಲೆಯಲ್ಲಿ ನಡೆದಿದೆ.  

ಮದುವೆ ಮನೆಯಲ್ಲಿ ಆಸಿಡ್ ದಾಳಿ ಕೇಸ್ ಗೆ ಟ್ವಿಸ್ಟ್    ➤ ಯುವತಿಯೋರ್ವಳಿಂದ ನಡೆಯಿತಾ ಕೃತ್ಯ Read More »

ರಾಷ್ಟ್ರೀಯ ನ್ಯೂಸ್

ರಿಯಾದ್ ನಲ್ಲಿ ಕಾರು ಅಪಘಾತ ➤ ಮಗು ಸೇರಿ ಇಬ್ಬರು ಮೃತ್ಯು

(ನ್ಯೂಸ್ ಕಡಬ)newskadaba.com ಸೌದಿ ಅರೇಬಿಯಾ, ಏ.25. ರಿಯಾದ್ ನಲ್ಲಿ ನಡೆದ ಕಾರು ಅಪಘಾತದಲ್ಲಿ ಕೇರಳ ಮಲಪ್ಪುರಂ ನಿವಾಸಿ ತಾಯಿ ಮಗು ಮೃತಪಟ್ಟ ಘಟನೆ ನಡೆದಿದೆ. ಮಲಪ್ಪುರಂ ಕೊಡಕ್ಕಾಡ್ ಮೊಹ್ಮದ್ ರಪೀ ಅವರ ಪತ್ನಿ ಮೊಹ್ಸಿನಾ ಹಾಗೂ ಮಲಪ್ಪುರಂ ಮುಂಡಿಯಂಕಾವ್ ನ ಇಶಾನ್ ಮತ್ತು ಫಾತಿಮಾ ರೂಬಿ ದಂಪತಿಯ ಪುತ್ರಿ ಸೈಷಾ ಮೃತರು ಎಂದು ಗುರುತಿಸಲಾಗಿದೆ.  

ರಿಯಾದ್ ನಲ್ಲಿ ಕಾರು ಅಪಘಾತ ➤ ಮಗು ಸೇರಿ ಇಬ್ಬರು ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಪ್ರೀತಿಸಿದ ಹುಡುಗಿಯ ಮೇಲೆ ಕುದಿಯುವ ಎಣ್ಣೆ ಸುರಿದ ಯುವಕ..! 

(ನ್ಯೂಸ್ ಕಡಬ)Newskadaba.com ಆಂಧ್ರಪ್ರದೇಶ,ಏ.25 ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಲೆ ಪ್ರೀತಿಸಿದ ಯುವಕ ಕುದಿಯುವ ಎಣ್ಣೆ ಸುರಿದ ಪರಿಣಾಮ ಆಕೆ ಗಂಭೀರವಾಗಿ ಗಾಯಗೊಂಡಿದ್ದಾಳೆ. ಆಂಧ್ರಪ್ರದೇಶದ ಕಾಕಿನಾಡದಲ್ಲಿರುವ ಜವಾಹರಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯದ (ಜೆಎನ್‌ಟಿಯು) ವಿದ್ಯಾರ್ಥಿನಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲೂರು ಜಿಲ್ಲೆಯ ತನ್ನ ಮನೆಯ ಕೊಠಡಿಯಲ್ಲಿ ಯುವಕ ಆಕೆಯ ಕೈ ಮತ್ತು ಕಾಲುಗಳ ಮೇಲೆ ಕುದಿಯುವ ಎಣ್ಣೆಯನ್ನು ಸುರಿದಿದ್ದ.ಸಂತ್ರಸ್ತೆ ಮುಂಜಾನೆ ತಪ್ಪಿಸಿಕೊಂಡು ಪೊಲೀಸರಿಗೆ ದೂರು ನೀಡಿದ ಬಳಿಕ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಆಕೆಯನ್ನು ಏಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.  

ಪ್ರೀತಿಸಿದ ಹುಡುಗಿಯ ಮೇಲೆ ಕುದಿಯುವ ಎಣ್ಣೆ ಸುರಿದ ಯುವಕ..!  Read More »

ರಾಷ್ಟ್ರೀಯ ನ್ಯೂಸ್

ಸ್ವಿಮ್ಮಿಂಗ್‌ಪೂಲ್‌ಗೆ ಮೇಲಿಂದ ಜಿಗಿದ ಯುವಕ ➤ ಈಜುತ್ತಿದ್ದ ವೃದ್ಧ ಮೃತ್ಯು

(ನ್ಯೂಸ್ ಕಡಬ)newskadaba.com ಮುಂಬೈ, ಏ.25. ಮುಂಬೈನ ಗೋರೆಗಾಂವ್ ಪ್ರದೇಶದ ಓಝೋನ್ ಈಜುಕೊಳಕ್ಕೆ ಯುವಕನೊಬ್ಬ ಎತ್ತರದಿಂದ ಹಾರಿದ ಪರಿಣಾಮ 72 ವರ್ಷದ ವೃದ್ಧರೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ವಿಷ್ಣು ಸಮಂತ್ ಎಂದು ಗುರುತಿಸಲಾಗಿದೆ. ಇನ್ನು ವಿಷ್ಣು ಸಮಂತ್ ಅವರು ಈಜುತ್ತಿದ್ದ ವೇಳೆ 20 ವರ್ಷದ ಯುವಕನೊಬ್ಬ ಎತ್ತರದಿಂದ ಕೊಳಕ್ಕೆ ಹಾರಿದಾಗ ವೃದ್ಧನ ಮೇಲೆ ಬಿದ್ದ ಪರಿಣಾಮ ಈ ದುರ್ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ವಿಮ್ಮಿಂಗ್‌ಪೂಲ್‌ಗೆ ಮೇಲಿಂದ ಜಿಗಿದ ಯುವಕ ➤ ಈಜುತ್ತಿದ್ದ ವೃದ್ಧ ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಕೇರಳದ ಮೊದಲ ವಂದೇ ಭಾರತ್‌ಗೆ ಚಾಲನೆ

(ನ್ಯೂಸ್ ಕಡಬ)newskadaba.com ಕೇರಳ, ಏ.25. ಕೇರಳದ ಮೊದಲ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ತಿರುವನಂತಪುರದಿಂದ ಕಾಸರಗೋಡಿನವರೆಗಿನ ಈ ಹೊಸ ಮೆಟ್ರೊ ರೈಲು ಸೇವೆಯಿಂದ ಗಡಿಭಾಗದ ಕನ್ನಡಿಗರಿಗೂ ಹೆಚ್ಚಿನ ಅನುಕೂಲವಾಗಲಿದೆ. ಎರಡು ದಿನಗಳ ಕೇರಳ ಪ್ರವಾಸಕ್ಕೆ ಆಗಮಿಸಿರುವ ಮೋದಿ ಕೊಚ್ಚಿಯಲ್ಲಿ ತಂಗಿದ್ದು ಮೆಟ್ರೊ ರೈಲು ಸೇರಿ ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.  

ಕೇರಳದ ಮೊದಲ ವಂದೇ ಭಾರತ್‌ಗೆ ಚಾಲನೆ Read More »

ರಾಷ್ಟ್ರೀಯ ನ್ಯೂಸ್
Scroll to Top