ರಾಷ್ಟ್ರೀಯ ನ್ಯೂಸ್

ಜಮ್ಮು & ಕಾಶ್ಮೀರದಲ್ಲಿ ಬಾಂಬ್‌ ಸ್ಫೋಟ ನಡೆಸಿದ ಭಯೋತ್ಪಾದಕರು..! ➤ ಇಬ್ಬರು ಯೋಧರು ಹುತಾತ್ಮ, ನಾಲ್ವರಿಗೆ ಗಾಯ

(ನ್ಯೂಸ್ ಕಡಬ)Newskadaba.com ನವದೆಹಲಿ,ಮೇ.05 ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರು ನಡೆಸಿದ ಬಾಂಬ್‌ ಸ್ಫೋಟದಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದು, ಓರ್ವ ಅಧಿಕಾರಿ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ರಾಜೌರಿ ಸೆಕ್ಟರ್‌ನ ಕಂಡಿ ಅರಣ್ಯ ಪ್ರದೇಶದಲ್ಲಿ ಸೇನಾ ತಂಡ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಜಮ್ಮು ಪ್ರದೇಶದ ಭಟ ಧುರಿಯನ್‌ನ ತೋಟಾ ಗಲಿ ಪ್ರದೇಶದಲ್ಲಿ ಸೇನಾ ಟ್ರಕ್‌ಗೆ ಹೊಂಚುದಾಳಿ ನಡೆಸಿದ ಭಯೋತ್ಪಾದಕರ ಗುಂಪನ್ನು ಪತ್ತೆಹಚ್ಚಲು ಮತ್ತು ನಿರ್ಮೂಲನೆ ಮಾಡಲು ಗುಪ್ತಚರ ಆಧಾರಿತ ಕಾರ್ಯಾಚರಣೆಗಳನ್ನು ನಡೆಸುತ್ತಿದೆ […]

ಜಮ್ಮು & ಕಾಶ್ಮೀರದಲ್ಲಿ ಬಾಂಬ್‌ ಸ್ಫೋಟ ನಡೆಸಿದ ಭಯೋತ್ಪಾದಕರು..! ➤ ಇಬ್ಬರು ಯೋಧರು ಹುತಾತ್ಮ, ನಾಲ್ವರಿಗೆ ಗಾಯ Read More »

ರಾಷ್ಟ್ರೀಯ ನ್ಯೂಸ್

ಒಂಬತ್ತು ತಿಂಗಳ ಹಿಂದೆ ನಾಪತ್ತೆಯಾಗಿದ್ದ ವಿವಾಹಿತ ಮಹಿಳೆ…! ➤ಲಖ್ನೋದಲ್ಲಿ ಪತ್ತೆ…!

(ನ್ಯೂಸ್ ಕಡಬ)Newskadaba.com ಉತ್ತರ ಪ್ರದೇಶ,ಮೇ.05  ಒಂಬತ್ತು ತಿಂಗಳ ಹಿಂದೆ ನಾಪತ್ತೆಯಾಗಿದ್ದ ವಿವಾಹಿತ ಮಹಿಳೆ ಯುವಕನೊಂದಿಗೆ ಉತ್ತರ ಪ್ರದೇಶದ ಲಖ್ನೋದಲ್ಲಿ ಪತ್ತೆಯಾಗಿದ್ದಾರೆ.ಡಿವೈಎಸ್ಪಿ ಪಿ.ಕೆ ಸುಧಾಕರನ್ ನೇತೃತ್ವದ ತನಿಖಾ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಜೋಡಿಯನ್ನು ಉತ್ತರಪ್ರದೇಶದಲ್ಲಿ ಪತ್ತೆ ಹಚ್ಚಲಾಗಿದೆ. ಬಳಿಕ ಇಬ್ಬರನ್ನೂ ಕಾಸರಗೋಡಿಗೆ ಕರೆತರಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.ಪಾವೂರು ಮೂಲದ ಸದ್ಯ ಮಂಜೇಶ್ವರದ ಫ್ಲಾಟ್ನಲ್ಲಿ ವಾಸಿಸುತ್ತಿರುವ ಕುಂಞಿಬಿ ಅಲಿಯಾಸ್ ಝಾಹಿದಾ (33) ಉತ್ತರ ಪ್ರದೇಶದ ಯುವಕನೊಂದಿಗೆ ಪತ್ತೆಯಾದ ಮಹಿಳೆಯಾಗಿದ್ದಾರೆ.    

ಒಂಬತ್ತು ತಿಂಗಳ ಹಿಂದೆ ನಾಪತ್ತೆಯಾಗಿದ್ದ ವಿವಾಹಿತ ಮಹಿಳೆ…! ➤ಲಖ್ನೋದಲ್ಲಿ ಪತ್ತೆ…! Read More »

ರಾಷ್ಟ್ರೀಯ ನ್ಯೂಸ್

ರಿಯಾಝ್ ಮೌಲವಿ ಪರ ವಾದಿಸುತ್ತಿದ್ದ ವಕೀಲ ಎಂ.ಅಶೋಕನ್‌ ಮೃತದೇಹ ಪತ್ತೆ…!

(ನ್ಯೂಸ್ ಕಡಬ)Newskadaba.com ಕಾಸರಗೋಡು,ಮೇ.05 ಸಂಘಪರಿವಾರದಿಂದ ಹತ್ಯೆಗೀಡಾಗಿದ್ದ ರಿಯಾಝ್ ಮೌಲವಿ ಪರ ವಾದಿಸುತ್ತಿದ್ದ ಸ್ಪೆಷಲ್‌ ಪ್ರಾಸಿಕ್ಯೂಟರ್ ನಿಗೂಢವಾಗಿ ಮೃತಪಟ್ಟಿದ್ದು, ಅವರ ಮೃತದೇಹ ಕೊಚ್ಚಿಯ ಫ್ಲ್ಯಾಟೊಂದರಲ್ಲಿ ಪತ್ತೆಯಾಗಿದೆ. ಕಲ್ಲಿಕೋಟೆ ಐಎಂಎ ಹಾಲ್‌ ರಸ್ತೆ ನಡಕ್ಕಾವು ಮೂಲದ ಖ್ಯಾತ ವಕೀಲ ಎಂ.ಅಶೋಕನ್‌ ಅವರು ನಿಗೂಢವಾಗಿ ಮೃತಪಟ್ಟಿದ್ದು, ಹಲವಾರು ಸಂಶಯಗಳನ್ನು ಹುಟ್ಟು ಹಾಕಿದೆ.ನ್ಯಾ| ಅಶೋಕನ್ ಅವರು ಪ್ರಕರಣವೊಂದರಲ್ಲಿ ವಾದಿಸಲು ಎರ್ನಾಕುಳಂ ಜಿಲ್ಲೆಯ ಮಾವೇಲಿಕ್ಕರೆಗೆ ಹೋಗಿದ್ದರು. ಅಲ್ಲಿ ಅವರು ಫ್ಲ್ಯಾಟೊಂದರಲ್ಲಿ ತಂಗಿದ್ದು, ನಿಗೂಢವಾಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.      

ರಿಯಾಝ್ ಮೌಲವಿ ಪರ ವಾದಿಸುತ್ತಿದ್ದ ವಕೀಲ ಎಂ.ಅಶೋಕನ್‌ ಮೃತದೇಹ ಪತ್ತೆ…! Read More »

ರಾಷ್ಟ್ರೀಯ ನ್ಯೂಸ್

ಬೈಕ್ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ.! ➤ಯೂಟ್ಯೂಬರ್ ದುರಂತ ಅಂತ್ಯ

(ನ್ಯೂಸ್ ಕಡಬ)Newskadaba.com ನವದೆಹಲಿ,ಮೇ.05 ಯೂಟ್ಯೂಬ್​ ವಿಡಿಯೋಗಾಗಿ ಗಂಟೆಗೆ 300 ಕಿ.ಮೀ ವೇಗದಲ್ಲಿ ಬೈಕ್​ ಓಡಿಸುವಾಗ ನಿಯಂತ್ರಣ ತಪ್ಪಿ ಡಿವೈಡರ್​ಗೆ ಬೈಕ್​ ಡಿಕ್ಕಿಯಾಗಿ ಯೂಟ್ಯೂಬರ್​ ದುರಂತ ಸಾವಿಗೀಡಾಗಿರುವ ಘಟನೆ ಯುಮುನಾ ಎಕ್ಸ್​ಪ್ರೆಸ್​ವೇನಲ್ಲಿ ನಡೆದಿದೆ. ಮೃತ ಯೂಟ್ಯೂಬರ್​ನನ್ನು ಅಗಸ್ತ್ಯ ಚೌಹಾಣ್​ (22) ಎಂದು ಗುರುತಿಸಲಾಗಿದೆ. ಈತ ಉತ್ತರಾಖಂಡದ ಡೆಹ್ರಾಡೂನ್​ನ ಕನ್ನಾಟ್ ಪ್ಲೇಸ್ ನಿವಾಸಿ. ಬೈಕ್​ ರೈಡರ್​ ಹಾಗೂ ಯೂಟ್ಯೂಬರ್​​ ಆಗಿದ್ದ. ಈತ ವೃತ್ತಿಪರ ಬೈಕರ್​ ಆಗಿದ್ದ. ಆದರೆ, ದುರಾದೃಷ್ಟವಶಾತ್​ ಅದೇ ಬೈಕ್​ನಿಂದ ಇಂದು ಮರಳಿ ಬಾರದ ಲೋಕಕ್ಕೆ ಪಯಣಿಸಿದ್ದಾನೆ.

ಬೈಕ್ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ.! ➤ಯೂಟ್ಯೂಬರ್ ದುರಂತ ಅಂತ್ಯ Read More »

ರಾಷ್ಟ್ರೀಯ ನ್ಯೂಸ್

ನೀಟ್’ ದಿನವೇ ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರ ➤ವಿದ್ಯಾರ್ಥಿಗಳಿಗೆ ತೊಂದರೆಯಾಗುವ ಆತಂಕ.!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಮೇ.05  ದ್ವಿತೀಯ ಪಿಯು ಬಳಿಕ, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮಹತ್ವದ್ದಾದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ‘ನೀಟ್’ ಇದೇ 7ರಂದು (ಭಾನುವಾರ) ನಡೆಯಲಿದೆ. ರಾಜಕೀಯ ಪಕ್ಷಗಳು ಅದೇ ದಿನ ಚುನಾವಣಾ ಪ್ರಚಾರ ಕಾರ್ಯಕ್ರಮಗಳನ್ನೂ ವಿವಿಧೆಡೆ ಆಯೋಜಿಸಿವೆ. ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಕನಿಷ್ಠ ಎರಡು ತಾಸು ಮೊದಲೇ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕಾಗುತ್ತದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರ- ಪಟ್ಟಣಗಳಲ್ಲಿ ಪರೀಕ್ಷೆ ನಡೆಯಲಿದೆ. ವಿಶೇಷ ಭದ್ರತಾ

ನೀಟ್’ ದಿನವೇ ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರ ➤ವಿದ್ಯಾರ್ಥಿಗಳಿಗೆ ತೊಂದರೆಯಾಗುವ ಆತಂಕ.! Read More »

ರಾಷ್ಟ್ರೀಯ ನ್ಯೂಸ್

ಭೂಗತ ಪಾತಕಿ ಟಿಲ್ಲು ತಾಜ್ಪುರಿಯಾನನ್ನು ಹತ್ಯೆಗೈದ ನಾಲ್ವರು ಕೈದಿಗಳು..!

(ನ್ಯೂಸ್ ಕಡಬ)Newskadaba.com ನವದೆಹಲಿ,ಮೇ.05 ನವದೆಹಲಿಯ ತಿಹಾರ್ ಜೈಲಿನ ಆಘಾತಕಾರಿ ಸಿಸಿಟಿವಿ ದೃಶ್ಯಾವಳಿಗಳು ಬೆಳಕಿಗೆ ಬಂದಿದ್ದು, ಅಲ್ಲಿ ಕೆಲವು ನಾಲ್ವರು ಕೈದಿಗಳು ಭೂಗತ ಪಾತಕಿ ಟಿಲ್ಲು ತಾಜ್ಪುರಿಯಾ ನನ್ನು ಆತನ ಸೆಲ್ನಿಂದ ಹೊರಗೆ ಎಳೆದೊಯ್ದು ಕ್ರೂರವಾಗಿ ಇರಿದು ಕೊಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವೀಡಿಯೊದಲ್ಲಿ, ದಾಳಿಕೋರರು ಜೈಲಿನ ಸಂಕೀರ್ಣದೊಳಗೆ ಹರಿತವಾದ ಸುಧಾರಿತ ಶಸ್ತ್ರಾಸ್ತ್ರಗಳನ್ನು ಬಳಸಿ ತಾಜ್ಪುರಿಯಾ ಅವರ ತಲೆ, ಬೆನ್ನು, ಮುಖ ಮತ್ತು ಕುತ್ತಿಗೆಗೆ ಅನೇಕ ಬಾರಿ ಇರಿದಿದ್ದಾರೆ.  ಆರೋಪಿಗಳ ಬೆಡ್ ಶೀಟ್ ಗಳು, ರಕ್ತಸಿಕ್ತ ಬಟ್ಟೆಗಳು ಮತ್ತು

ಭೂಗತ ಪಾತಕಿ ಟಿಲ್ಲು ತಾಜ್ಪುರಿಯಾನನ್ನು ಹತ್ಯೆಗೈದ ನಾಲ್ವರು ಕೈದಿಗಳು..! Read More »

ರಾಷ್ಟ್ರೀಯ ನ್ಯೂಸ್

ಪಂಜಾಬ್‌ ಮುಖ್ಯಮಂತ್ರಿ ಬಿಯಾಂತ್‌ ಹಂತಕನಿಗೆ ಗಲ್ಲು ಶಿಕ್ಷೆ ಖಾಯಂ..!

(ನ್ಯೂಸ್ ಕಡಬ)Newskadaba.com ಹೊಸದಿಲ್ಲಿ,ಮೇ.04 ಪಂಜಾಬ್‌ನ ಮುಖ್ಯಮಂತ್ರಿಯಾಗಿದ್ದ ಬಿಯಾಂತ್‌ ಸಿಂಗ್‌ ಅವರನ್ನು 1995ರಲ್ಲಿ ಹತ್ಯೆ ಮಾಡಿದ ಆರೋಪಿ ಬಲ್ವಂತ್‌ ಸಿಂಗ್‌ ರಜೋವನಿಗೆ ವಿಧಿಸಲಾಗಿರುವ ಗಲ್ಲು ಶಿಕ್ಷೆ ರದ್ದು ಮಾಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.ಈ ಬಗ್ಗೆ ಸೂಕ್ತ ಪ್ರಾಧಿಕಾರವೇ ನಿರ್ಣಯ ಕೈಗೊಳ್ಳಲಿದೆ ಎಂದು ನ್ಯಾ| ಬಿ.ಆರ್‌.ಗವಾಯಿ, ನ್ಯಾ| ವಿಕ್ರಂನಾಥ್‌ ಮತ್ತು ನ್ಯಾ| ಸಂಜಯ ಕರೋಲ್‌ ನೇತೃತ್ವದ ಪೀಠ ಸ್ಪಷ್ಟಪಡಿಸಿದೆ. ಇಪ್ಪತ್ತಾರು ವರ್ಷಗಳಿಂದ ಜೈಲಲ್ಲಿ ಇರುವ ರಜೋವ, ತನಗೆ ವಿಧಿಸಲಾಗಿರುವ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತನೆ ಮಾಡಬೇಕು ಎಂದು ಅರಿಕೆ

ಪಂಜಾಬ್‌ ಮುಖ್ಯಮಂತ್ರಿ ಬಿಯಾಂತ್‌ ಹಂತಕನಿಗೆ ಗಲ್ಲು ಶಿಕ್ಷೆ ಖಾಯಂ..! Read More »

ರಾಷ್ಟ್ರೀಯ ನ್ಯೂಸ್

ಆದಾಯ ಕಡಿಮೆಯಾದ ಹಿನ್ನೆಲೆ ➤3,500 ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾದ ಕಾಗ್ನಿಜೆಂಟ್..!

(ನ್ಯೂಸ್ ಕಡಬ)Newskadaba.com ನವದೆಹಲಿ,ಮೇ.04 ಐಟಿ ಸಂಸ್ಥೆ ಕಾಗ್ನಿಜೆಂಟ್ 2023ರಲ್ಲಿ ತನ್ನ ಆದಾಯವು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ 3,500 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಹೇಳಿದೆ.ಕಾಗ್ನಿಜೆಂಟ್ ತನ್ನ ಕಾರ್ಯಾಚರಣಾ ಮಾದರಿಯನ್ನು ಸರಳೀಕರಿಸುವ ಗುರಿಯನ್ನು ಹೊಂದಿರುವ ‘NextGen’ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಕಾರ್ಪೊರೇಟ್ ಕಾರ್ಯಗಳನ್ನು ಉತ್ತಮಗೊಳಿಸುವುದು ಮತ್ತು ಸಾಂಕ್ರಾಮಿಕ ನಂತರದ ಹೈಬ್ರಿಡ್ ಕೆಲಸದ ವಾತಾವರಣವನ್ನು ಪ್ರತಿಬಿಂಬಿಸಲು ಕಚೇರಿ ಸ್ಥಳವನ್ನು ಕ್ರೋಢೀಕರಿಸುವುದು ಮತ್ತು ಮರುಹೊಂದಿಸುವುದು ಇದರಲ್ಲಿ ಸೇರಿದೆ.ಕಂಪೆನಿಯ ಕೈಗೊಂಡಿರುವ ಈ ಕ್ರಮದಿಂದ ಸರಿಸುಮಾರು 3,500 ಉದ್ಯೋಗಿಗಳ ಮೇಲೆ ಅಥವಾ ಕಂಪೆನಿಯ ಸರಿಸುಮಾರು 1 ಪ್ರತಿಶತದ ಮೇಲೆ ಪರಿಣಾಮ

ಆದಾಯ ಕಡಿಮೆಯಾದ ಹಿನ್ನೆಲೆ ➤3,500 ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾದ ಕಾಗ್ನಿಜೆಂಟ್..! Read More »

ರಾಷ್ಟ್ರೀಯ ನ್ಯೂಸ್

ಜಮ್ಮು ಕಾಶ್ಮೀರದಲ್ಲಿ ಸೇನಾ ಹೆಲಿಕಾಪ್ಟರ್ ಪತನ➤ ಆಫೀಸರ್ ಸೇರಿ ಮೂವರು ಗಂಭೀರ!

(ನ್ಯೂಸ್ ಕಡಬ) newskadaba.com. ನವದೆಹಲಿ, ಮೇ 04. ಜಮ್ಮು ಮತ್ತು ಕಾಶ್ಮೀರದ ಕಿಶ್​ತ್ವಾರ್ ಜಿಲ್ಲೆಯ ಮರ್ವಾಹ್ ತೆಹಸಿಲ್‌ನ ಮಚ್ನಾ ಗ್ರಾಮದ ಬಳಿ ಸೇನಾ ಕಾಪ್ಟರ್ ಎಎಲ್​ಎಚ್​ ಧ್ರುವ​ ಪತನಗೊಂಡ ಪರಿಣಾಮ ಕಾಪ್ಟರ್​ನಲ್ಲಿ ಕಮಾಂಡಿಂಗ್ ಆಫೀಸರ್ ​ಸೇರಿ ಮೂವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಇಂದು ಬೆಳಗ್ಗೆ ಕಾಪ್ಟರ್​ ಮರ್ವಾ ಕಡೆಗೆ ತೆರಳುತ್ತಿದ್ದಾಗ ಇಂದು ಬೆಳಗ್ಗೆ 9.40 ಕ್ಕೆ ಪತನಗೊಂಡಿದೆ. ಸೇನೆಯ ಸುಧಾರಿತ ಲಘು ಹೆಲಿಕಾಪ್ಟರ್ ಇದಾಗಿದ್ದು, ಪತನಕ್ಕೆ ನಿಖರ ಕಾರಣ ಏನೆಂಬುದು ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಜಮ್ಮು ಕಾಶ್ಮೀರದಲ್ಲಿ ಸೇನಾ ಹೆಲಿಕಾಪ್ಟರ್ ಪತನ➤ ಆಫೀಸರ್ ಸೇರಿ ಮೂವರು ಗಂಭೀರ! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸೀಟ್​ ಬೆಲ್ಟ್ ಧರಿಸಿದ ಕಾರಣಕ್ಕೆ ಬೈಕ್​ ಸವಾರನಿಗೆ ದಂಡ..!  ➤ನಗೆಪಾಟಲಿಗೀಡಾದ ಸಂಚಾರಿ ಪೊಲೀಸರು

(ನ್ಯೂಸ್ ಕಡಬ)Newskadaba.com ಬಿಹಾರ,ಮೇ.04 ಪ್ರತಿಯೊಂದು ರಾಜ್ಯದಲ್ಲೂ ಸಂಚಾರ ನಿಯಮವನ್ನು ಪಾಲಿಸದೇ ಇದ್ದರೆ ಫೈನ್​ ಕಟ್ಟಲೇಬೇಕು. ಸೀಟ್​ ಬೆಲ್ಟ್ ಧರಿಸಿಲ್ಲ ಅನ್ನೋಕಾರಣಕ್ಕೆ ಬೈಕ್​ ಸವಾರರೊಬ್ಬರಿಗೆ ಸಂಚಾರಿ ಪೊಲೀಸರು ದಂಡ ಪಾವತಿಸಲು ನೋಟೀಸ್​ ನೀಡಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಸಮತಿಪುರದ ಕೃಷ್ಣಕುಮಾರ್ ಎಂಬುವವರಿಗೆ ಪೊಲೀಸರು ದಂಡದ ನೋಟೀಸ್ ಕಳುಹಿಸಿ ಎಡವಟ್ಟು ಮಾಡಿಕೊಂಡಿದ್ದಾರೆ. 2020ರಲ್ಲಿ ನಿಯಮ ಉಲ್ಲಂಘನೆ ಮಾಡಿರುವುದಾಗಿ ನೋಟೀಸ್​​ನಲ್ಲಿ ಉಲ್ಲೇಖವಾಗಿದೆ. ನಿಯಮ ಉಲ್ಲಂಘಿಸಿದ್ದಕ್ಕೆ ಸ್ಕೂಟರ್ ಸವಾರ ಕೃಷ್ಣಕುಮಾರ್ ಅವರಿಗೆ 1000 ರೂ. ದಂಡ ಪಾವತಿಸುವಂತೆ ನೋಟೀಸ್​ನಲ್ಲಿ ತಿಳಿಸಿಲಾಗಿದೆ.ಆದರೆ ಈ ಘಟನೆಯಲ್ಲಿ

ಸೀಟ್​ ಬೆಲ್ಟ್ ಧರಿಸಿದ ಕಾರಣಕ್ಕೆ ಬೈಕ್​ ಸವಾರನಿಗೆ ದಂಡ..!  ➤ನಗೆಪಾಟಲಿಗೀಡಾದ ಸಂಚಾರಿ ಪೊಲೀಸರು Read More »

ರಾಷ್ಟ್ರೀಯ ನ್ಯೂಸ್
Scroll to Top