ರಾಷ್ಟ್ರೀಯ ನ್ಯೂಸ್

ಬಿಹಾರದ ಶಾಲೆಯೊಂದರ ಬಿಸಿಯೂಟದಲ್ಲಿ ಹಲ್ಲಿ ಪತ್ತೆ ! ➤ 36 ವಿದ್ಯಾರ್ಥಿಗಳು ಅಸ್ವಸ್ಥ

(ನ್ಯೂಸ್ ಕಡಬ)newskadaba.com ಪಾಟ್ನಾ, ಮೇ.20. ಬಿಹಾರದ ಸರ್ಕಾರಿ ಶಾಲೆಯೊಂದರಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ 36 ಮಕ್ಕಳು ಅಸ್ವಸ್ಥರಾಗಿರುವ ಘಟನೆ ನಡೆದಿದೆ. ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು ಮಧ್ಯಾಹ್ನದ ಊಟ ಮಾಡುವ ವೇಳೆ ಈ ಘಟನೆ ನಡೆದಿದ್ದು, ವಿದ್ಯಾರ್ಥಿಯೊಬ್ಬ ತನ್ನ ತಟ್ಟೆಯಲ್ಲಿ ಹಲ್ಲಿ ಇರುವುದನ್ನು ಕಂಡು ತಕ್ಷಣ ಶಿಕ್ಷಕರಿಗೆ ಮಾಹಿತಿ ನೀಡಿದ್ದು ಬಳಿಕ ಶಾಲೆಯು ಮಧ್ಯಾಹ್ನದ ಊಟವನ್ನು ಸ್ಥಗಿತಗೊಳಿಸಿತು.

ಬಿಹಾರದ ಶಾಲೆಯೊಂದರ ಬಿಸಿಯೂಟದಲ್ಲಿ ಹಲ್ಲಿ ಪತ್ತೆ ! ➤ 36 ವಿದ್ಯಾರ್ಥಿಗಳು ಅಸ್ವಸ್ಥ Read More »

ರಾಷ್ಟ್ರೀಯ ನ್ಯೂಸ್

2,000 ರೂ.ಮುಖಬೆಲೆಯ ನೋಟುಗಳ ಚಲಾವಣೆ ಸ್ಥಗಿತಕ್ಕೆ RBI ಸೂಚನೆ

(ನ್ಯೂಸ್ ಕಡಬ)newskadaba.com ನವದೆಹಲಿ, ಮೇ.20. ಎರಡು ಸಾವಿರ ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌‌ಬಿಐ) ನಿರ್ಧರಿಸಿದೆ. ಈ ಕರೆನ್ಸಿ ನೋಟುಗಳು ಕಾನೂನಾತ್ಮಕವಾಗಿ ಸಿಂಧುವಾಗಿ ಮುಂದುವರಿಯಲಿದೆ ಎಂದು ಆರ್​ಬಿಐ ಹೇಳಿದೆ. ಇನನು 2,000 ರೂ ನೋಟು ಹೊಂದಿರುವವರು ಅದನ್ನು ಮರಳಿಸಲು ಸಮಯಾವಕಾಶ ಕೊಡಲಾಗುತ್ತದೆ. ಆರ್​ಬಿಐ ನೀಡಿರುವ ಮಾಹಿತಿ ಪ್ರಕಾರ 2023 ಸೆಪ್ಟಂಬರ್ 30ರೊಳಗೆ 2,000 ಮುಖಬೆಲೆಯ ನೋಟುಗಳನ್ನು ವಾಪಸ್ ಕೊಟ್ಟು ವಿನಿಮಯ ಮಾಡಿಕೊಳ್ಳಬಹುದಾಗಿದೆ.  

2,000 ರೂ.ಮುಖಬೆಲೆಯ ನೋಟುಗಳ ಚಲಾವಣೆ ಸ್ಥಗಿತಕ್ಕೆ RBI ಸೂಚನೆ Read More »

ರಾಷ್ಟ್ರೀಯ ನ್ಯೂಸ್

ಡಿಕೆಶಿಗೆ ಡಿಸಿಎಂ ಸ್ಥಾನ ಕೊಟ್ಟಿರೋದು ನನಗೆ ತೃಪ್ತಿ ಇಲ್ಲ..!➤ ಡಿಕೆ ಸುರೇಶ್

(ನ್ಯೂಸ್ ಕಡಬ)newskadaba.com ನವದೆಹಲಿ,ಮೇ.19 ರಾಜ್ಯದ ಮುಖ್ಯಮಂತ್ರಿ ಪಟ್ಟದ ವಿವಾದ ಕೊನೆಗೂ ಬಗೆಹರಿದಿದೆ. ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ ಹಾಗೂ ಡಿಕೆ ಶಿವಕುಮಾರ್ ರವರಿಗೆ ಉಪಮುಖ್ಯಮಂತ್ರಿ ಸ್ಥಾನ ದೊರಕಿದೆ. ಆದರೆ ಡಿಕೆಶಿ ಅವರ ಸೋದರ ಡಿಕೆ ಸುರೇಶ್ ‘ಇದು ನನಗೆ ತೃಪ್ತಿ ತಂದಿಲ್ಲ’ ಎಂದಿದ್ದಾರೆ. ರಾಜ್ಯದ ಹಿತ ದೃಷ್ಟಿಯಿಂದ ಹೈಕಮಾಂಡ್ ನಿರ್ಧಾರವನ್ನು ಒಪ್ಪಿಕೊಳ್ಳಲೇಬೇಕು. ಡಿಕೆಶಿಗೆ ಡಿಸಿಎಂ ಸ್ಥಾನ ಕೊಟ್ಟಿರೋದು ನನಗೆ ತೃಪ್ತಿ ಇಲ್ಲ. ಅವರು ಸಿಎಂ ಆಗಬೇಕೆಂಬುದೇ ನನ್ನ ಆಸೆಯಾಗಿತ್ತು. ಆದರೆ ಆ ಆಸೆ ಈಡೇರಲಿಲ್ಲ ಎಂದು ಡಿಕೆ ಸುರೇಶ ನುಡಿದಿದ್ದಾರೆ.

ಡಿಕೆಶಿಗೆ ಡಿಸಿಎಂ ಸ್ಥಾನ ಕೊಟ್ಟಿರೋದು ನನಗೆ ತೃಪ್ತಿ ಇಲ್ಲ..!➤ ಡಿಕೆ ಸುರೇಶ್ Read More »

ರಾಷ್ಟ್ರೀಯ ನ್ಯೂಸ್

ಸಚಿವ ಸ್ಥಾನದಿಂದ ಕಿರಣ್ ರಿಜಿಜುಗೆ ಗೇಟ್ ಪಾಸ್..!➤ಕಾನೂನು ಸಚಿವರಾಗಿ ಅರ್ಜುನ್ ಮೇಘವಾಲ್ ನೇಮಕ *

(ನ್ಯೂಸ್ ಕಡಬ)newskadaba.com ಹೊಸದಿಲ್ಲಿ,ಮೇ.19 ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜುಗೆ ಗೇಟ್ ಪಾಸ್ ನೀಡಲಾಗಿದೆ. ಕೇಂದ್ರ ಕಾನೂನು ಸಚಿವ ಸ್ಥಾನದಿಂದ ಕಿರಣ್ ರಿಜಿಜು ಗೇಟ್ ಪಾಸ್ ನೀಡಲಾಗಿದ್ದು, ಕಾನೂನು ಸಚಿವರಾಗಿ ಅರ್ಜುನ್ ಮೇಘವಾಲ್ ನೇಮಕ ಮಾಡಲಾಗಿದೆ. ಕಿರಣ್ ಅವರನ್ನು ಭೂ ವಿಜ್ಞಾನ ಸಚಿವಾಲಯಕ್ಕೆ ನಿಯೋಜಿಸಲಾಗಿದೆ.  

ಸಚಿವ ಸ್ಥಾನದಿಂದ ಕಿರಣ್ ರಿಜಿಜುಗೆ ಗೇಟ್ ಪಾಸ್..!➤ಕಾನೂನು ಸಚಿವರಾಗಿ ಅರ್ಜುನ್ ಮೇಘವಾಲ್ ನೇಮಕ * Read More »

ರಾಷ್ಟ್ರೀಯ ನ್ಯೂಸ್

ಜ್ಞಾನವಾಪಿ ಮಸೀದಿಯಲ್ಲಿನ ಶಿವಲಿಂಗ ಪರೀಕ್ಷೆ ➤ ಇಂದು ತುರ್ತು ಅರ್ಜಿ ವಿಚಾರಣೆ ಸಾದ್ಯತೆ

(ನ್ಯೂಸ್ ಕಡಬ) newskadaba.com.ದೆಹಲಿ , ಮೇ.19. ವಾರಾಣಸಿಯ ಜ್ಞಾನವಾಪಿ ಮಸೀದಿಯಲ್ಲಿ ದೊರೆತಿರುವ ‘ಶಿವಲಿಂಗ’ ಎಷ್ಟು ವರ್ಷ ಹಳೆಯದು ಎಂದು ತಿಳಿಯಲು ಕಾರ್ಬನ್‌ ಡೇಟಿಂಗ್‌ ಪರೀಕ್ಷೆ ಹಾಗೂ ವೈಜ್ಞಾನಿಕ ಸರ್ವೇಗೆ ಅಲಹಾಬಾದ್‌ ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ಮುಸ್ಲಿಂ ಸಮುದಾಯದ ಪರ ಸಲ್ಲಿಕೆಯಾಗಿರುವ ಅರ್ಜಿಯ ತುರ್ತು ವಿಚಾರಣೆ ಇಂದು ನಡೆಯಲಿದೆ. ಮಸೀದಿ ಪರವಾಗಿ ಉಸ್ತುವಾರಿ ಹೊತ್ತಿರುವ ಅಂಜುಮಾನ್ ಇಂತೆಝಾಮಿಯ ಮಸೀದಿ ವಾರಣಾಸಿ ಪರವಾಗಿ ಮುಖ್ಯ ನ್ಯಾಯಧೀಶ ಡಿ.ವೈ.ಚಂದ್ರಚೂಡ್‌ ನೇತೃತ್ವದ ನ್ಯಾಯಪೀಠದ ಎದುರು ಹಾಜರಾದ ಹಿರಿಯ ವಕೀಲ ಹುಝೇಪ್ ಹ ಅಹ್ಮದಿ

ಜ್ಞಾನವಾಪಿ ಮಸೀದಿಯಲ್ಲಿನ ಶಿವಲಿಂಗ ಪರೀಕ್ಷೆ ➤ ಇಂದು ತುರ್ತು ಅರ್ಜಿ ವಿಚಾರಣೆ ಸಾದ್ಯತೆ Read More »

ರಾಷ್ಟ್ರೀಯ ನ್ಯೂಸ್

ವೃದ್ಧನ ಜೇಬಲ್ಲಿದ್ದ ಮೊಬೈಲ್ ಸ್ಫೋಟ.!➤ ಅದೃಷ್ಟವಶಾತ್ ಅಪಾಯದಿಂದ ಪಾರು

(ನ್ಯೂಸ್ ಕಡಬ)newskadaba.com ಕೇರಳ,ಮೇ.19 ಕೇರಳದ ತ್ರಿಶೂರು ಜಿಲ್ಲೆಯಲ್ಲಿ ವೃದ್ಧರೊಬ್ಬರ ಜೇಬಲ್ಲಿದ್ದ ಮೊಬೈಲ್ ಸ್ಫೋಟಗೊಂಡಿದ್ದು, ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.ಶರ್ಟ್ ಜೇಬಲ್ಲಿ ಮೊಬೈಲ್ ಇಟ್ಟುಕೊಂಡು ಹೋಟೆಲ್ ನಲ್ಲಿ ಟೀ ಕುಡಿಯುತ್ತಿದ್ದ ವೇಳೆ ಏಕಾಏಕಿ ಮೊಬೈಲ್ ಸ್ಪೋಟಗೊಂಡಿದೆ. ಕೂಡಲೇ ಅದನ್ನು ಕೆಳಗೆ ಎಸೆದಿದ್ದಾರೆ. ಮೊಬೈಲ್ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಸಮಯ ಪ್ರಜ್ಞೆಯಿಂದಾಗಿ ವೃದ್ಧ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.  

ವೃದ್ಧನ ಜೇಬಲ್ಲಿದ್ದ ಮೊಬೈಲ್ ಸ್ಫೋಟ.!➤ ಅದೃಷ್ಟವಶಾತ್ ಅಪಾಯದಿಂದ ಪಾರು Read More »

ರಾಷ್ಟ್ರೀಯ ನ್ಯೂಸ್

ಭೂಮಿಯಂತಿರುವ ಮತ್ತೊಂದು ಗ್ರಹವನ್ನು ಪತ್ತೆಹಚ್ಚಿದ ಖಗೋಳಶಾಸ್ತ್ರಜ್ಞರು.!

(ನ್ಯೂಸ್ ಕಡಬ)newskadaba.com ಹೊಸದಿಲ್ಲಿ,ಮೇ.19 ಭೂಮಿಯ ಗಾತ್ರ ಇರುವ ಗ್ರಹವೊಂದನ್ನು ಖಗೋಳಶಾಸ್ತ್ರಜ್ಞರು ಪತ್ತೆಹಚ್ಚಿದ್ದಾರೆ. ಇದಕ್ಕೆ “ಎಲ್‌ಪಿ 791-18ಡಿ” ಎಂದು ನಾಮಕರಣ ಮಾಡಿದ್ದಾರೆ.ಈ ಗ್ರಹವು ಜ್ವಾಲಾಮುಖೀಗಳಿಂದ ಕೂಡಿದ್ದು, ಇಲ್ಲಿ ಮಾನವರು ಜೀವನ ನಡೆಸಲು ಅನುಕೂಲವಾಗಿರುವ ವಾತಾವರಣ ಇರಬಹುದು ಎಂದು ಖಗೋಳಶಾಸ್ತ್ರಜ್ಞರು ಅಂದಾಜಿಸಿದ್ದಾರೆ. ಈ ಗ್ರಹವು ತನ್ನಿಂದ 90 ಜ್ಯೋತಿರ್ವರ್ಷ ದೂರವಿರುವ ಕೆಂಪು ಕುಬ್ಜ ನಕ್ಷತ್ರವನ್ನು ಸುತ್ತುತ್ತಿದೆ. ಈ ನಕ್ಷತ್ರದ ಹೆಸರು “ಕ್ರೇಟರ್‌”. ಈ ಗ್ರಹದಲ್ಲಿ ಅಗ್ಗಿಂದಾಗೆ ಜ್ವಾಲಾಮುಖೀಗಳು ಸ್ಫೋಟಗೊಳ್ಳುತ್ತಿವೆ ಎಂದು ಅಮೆರಿಕದ ಹಾರ್ವರ್ಡ್‌ ವಿವಿ ಮತ್ತು ಸ್ಮಿತ್‌ಸೋನಿಯನ್‌ ಸಂಸ್ಥೆಯ ಖಗೋಳ

ಭೂಮಿಯಂತಿರುವ ಮತ್ತೊಂದು ಗ್ರಹವನ್ನು ಪತ್ತೆಹಚ್ಚಿದ ಖಗೋಳಶಾಸ್ತ್ರಜ್ಞರು.! Read More »

ರಾಷ್ಟ್ರೀಯ ನ್ಯೂಸ್

ಪತ್ನಿ ಹಾಗೂ ಮಕ್ಕಳ ಮೇಲೆ ಚಾಕು ಇರಿತ.!➤ ಬಳಿಕ ಪತಿ ನೇಣಿಗೆ ಶರಣು

(ನ್ಯೂಸ್ ಕಡಬ)newskadaba.com ದೆಹಲಿ,ಮೇ.18 ಮೆಟ್ರೋ ರೈಲು ನಿಗಮ (ಡಿಎಂಆರ್‌ಸಿ) ನ ಉದ್ಯೋಗಿಯಾಗಿದ್ದ 43 ವರ್ಷದ ವ್ಯಕ್ತಿಯೊಬ್ಬರು, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಇರಿದು, ತಾವೂ ನೇಣಿಗೆ ಶರಣಾಗಿರುವ ಘಟನೆ, ಶಹದಾರಾದಲ್ಲಿರುವ ಜ್ಯೋತಿ ಕಾಲೋನಿಯಲ್ಲಿ ನಡೆದಿದೆ.ಸುಶೀಲ್ ಕುಮಾರ್ ಎನ್ನುವವರು ನೇಣಿಗೆ ಶರಣಾಗಿರುವ ದುರ್ದೈವಿ. ಈ ಘಟನೆಯಲ್ಲಿ ಪತ್ನಿ ಅನುರಾಧಾ (40), ಪುತ್ರಿ ಅದಿತಿ (6) ಮೃತಪಟ್ಟಿದ್ದಾರೆ. ಅದೃಷ್ಟವಶಾತ್ 13 ವರ್ಷದ ಪುತ್ರ ಬದುಕುಳಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.ದೆಹಲಿಯ ಪೂರ್ವ ವಿನೋದ ನಗರ ಡಿಪೋದಲ್ಲಿ ಸುಶೀಲ್ ಕುಮಾರ್ ನಿರ್ವಹಣಾ ಮೇಲ್ವಿಚಾರಕರಾಗಿ

ಪತ್ನಿ ಹಾಗೂ ಮಕ್ಕಳ ಮೇಲೆ ಚಾಕು ಇರಿತ.!➤ ಬಳಿಕ ಪತಿ ನೇಣಿಗೆ ಶರಣು Read More »

ರಾಷ್ಟ್ರೀಯ ನ್ಯೂಸ್

ಗುಂಡು ಹಾರಿಸಿ ಯುವಕನನ್ನು ಹತ್ಯೆಗೈದ ದುಷ್ಕರ್ಮಿಗಳು.!

(ನ್ಯೂಸ್ ಕಡಬ)newskadaba.com ದೆಹಲಿ,ಮೇ.18 ದೆಹಲಿಯ ಜಾಮಾ ಮಸೀದಿ ಬಳಿ ದುಷ್ಕರ್ಮಿಗಳು ಗುಂಡು ಹಾರಿಸಿ ಯುವಕನನ್ನು ಹತ್ಯೆ ಮಾಡಿದ್ದಾರೆ. ಮೃತಪಟ್ಟವರನ್ನು ಚಾವ್ರಿ ಬಜಾರ್ ನಿವಾಸಿ ಸಮೀರ್ ಎಂದು ಗುರುತಿಸಲಾಗಿದೆ. ಸಮೀರ್ ಹೋಟೆಲ್​ವೊಂದರಲ್ಲಿ ಕೆಲಸ ಮಾಡುತ್ತಿದ್ದರು, ಕೆಲವು ಕಿಡಿಗೇಡಿಗಳು ಹೋಟೆಲ್ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಜಗಳದ ವೇಳೆ ಸಮೀರ್ ಮಧ್ಯ ಪ್ರವೇಶಿಸಿದ್ದರು, ಆದರೆ ದುಷ್ಕರ್ಮಿಗಳು ಅಲ್ಲಿಯೇ ಗುಂಡು ಹಾರಿಸಲು ಶುರು ಮಾಡಿದ್ದರು. ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಸಮೀರ್ ತಲೆಗೆ ಗುಂಡು ತಗುಲಿತ್ತು. ಗಾಯಗೊಂಡಿದ್ದ ಸಮೀರ್​ನನ್ನು ಜಯಪ್ರಕಾಶ್

ಗುಂಡು ಹಾರಿಸಿ ಯುವಕನನ್ನು ಹತ್ಯೆಗೈದ ದುಷ್ಕರ್ಮಿಗಳು.! Read More »

ರಾಷ್ಟ್ರೀಯ ನ್ಯೂಸ್

ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆ➤ ರಸ್ತೆಯಲ್ಲಿ ಕೆಟ್ಟುನಿಂತ ಆರ್‌ಬಿಐಯ ಟ್ರಕ್.!

(ನ್ಯೂಸ್ ಕಡಬ)newskadaba.com ಚೆನ್ನೈ,ಮೇ.18 ಚೆನ್ನೈನಲ್ಲಿರುವ ರಿಸರ್ವ್ ಬ್ಯಾಂಕ್ ಕಚೇರಿಯಿಂದ 1,070 ಕೋಟಿ ರೂ.ನಗದನ್ನು ಸಾಗಿಸುತ್ತಿದ್ದ ಎರಡು ಕಂಟೇನರ್ ಟ್ರಕ್ ಗಳನ್ನು ಕೆಲಕಾಲ ಚೆನ್ನೈನ ತಾಂಬರಂ ರಸ್ತೆಯಲ್ಲಿ ನಿಲ್ಲಿಸಿದ ಘಟನೆ ನಡೆದಿದೆ. ಚೆನ್ನೈನಲ್ಲಿರುವ ರಿಸರ್ವ್ ಬ್ಯಾಂಕ್ ಕಚೇರಿಯಿಂದ ಜಿಲ್ಲೆಯ ಬ್ಯಾಂಕ್‌ಗಳಿಗೆ ಕರೆನ್ಸಿ ತಲುಪಿಸಲು ವಿಲ್ಲುಪುರಂಗೆ ಬರುತ್ತಿತ್ತು. ಈ ವೇಳೆ 535 ಕೋಟಿ ರೂಪಾಯಿ ನಗದು ಸಾಗಿಸುತ್ತಿದ್ದ ಒಂದು ಕಂಟೈನರ್ ಟ್ರಕ್ ಚೆನ್ನೈನಲ್ಲಿ ಕೆಟ್ಟು ನಿಂತಿದೆ. ಒಂದು ಟ್ರಕ್ ನಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಎರಡೂ ಲಾರಿಗಳನ್ನು

ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆ➤ ರಸ್ತೆಯಲ್ಲಿ ಕೆಟ್ಟುನಿಂತ ಆರ್‌ಬಿಐಯ ಟ್ರಕ್.! Read More »

ರಾಷ್ಟ್ರೀಯ ನ್ಯೂಸ್
Scroll to Top