ರಾಷ್ಟ್ರೀಯ ನ್ಯೂಸ್

60ರ ವಯಸ್ಸಿನಲ್ಲಿ ಎರಡನೇ ಮದುವೆಯಾದ ನಟ ಆಶಿಷ್ ವಿದ್ಯಾರ್ಥಿ

 (ನ್ಯೂಸ್ ಕಡಬ) newskadaba.com,ಮುಂಬೈ, ಮೇ.25. ಬಹುಭಾಷಾ ನಟ, ಹಾಗೂ ಜನಪ್ರಿಯ ಫೂಡ್ ವ್ಲಾಗರ್ ಆಶಿಷ್ ವಿದ್ಯಾರ್ಥಿ  ತಮ್ಮ 60ನೇ ವಯಸ್ಸಿನಲ್ಲಿ ಎರಡನೇ ಬಾರಿ ಮದುವೆಯಾಗಿದ್ದಾರೆ. ಇಂದು ಅಸ್ಸಾಮಿ ಮೂಲದ ರೂಪಾಲಿ ಬರುವ  ಎಂಬುವರನ್ನು ಸರಳವಾಗಿ ಆಶಿಷ್ ವಿದ್ಯಾರ್ಥಿ ವಿವಾಹವಾಗಿದ್ದಾರೆ. ಇಬ್ಬರು ಪರಸ್ಪರ ಹಾರಗಳನ್ನು ಬದಲಾಯಿಸಿಕೊಂಡಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ಜೀವನದ ಈ ಹಂತದಲ್ಲಿ ರೂಪಾಲಿಯೊಟ್ಟಿಗೆ ವಿವಾಹವಾಗಿರುವುದು ಬಹಳ ಖುಷಿಯಾಗಿದೆ ಎಂದು ಆಶಿಷ್ ವಿದ್ಯಾರ್ಥಿ ಹೇಳಿಕೊಂಡಿದ್ದಾರೆ.

60ರ ವಯಸ್ಸಿನಲ್ಲಿ ಎರಡನೇ ಮದುವೆಯಾದ ನಟ ಆಶಿಷ್ ವಿದ್ಯಾರ್ಥಿ Read More »

ರಾಷ್ಟ್ರೀಯ ನ್ಯೂಸ್

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೆ 2 ಚೀತಾ ಮರಿಗಳ ಸಾವು!

(ನ್ಯೂಸ್ ಕಡಬ) newskadaba.com. ಭೋಪಾಲ್, ಮೇ.25. ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿರುವ ಚೀತಾ ಜ್ವಾಲಾಳ ಎರಡು ಮರಿಗಳು ಸಾವನ್ನಪ್ಪಿವೆ.  ಜ್ವಾಲಾ ಮಾ.24 ರಂದು ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ನಾಲ್ಕು ಮರಿಗಳ ಪೈಕಿ ಇತ್ತೀಚೆಗೆ ಒಂದು ಮರಿ ಸಾವನ್ನಪ್ಪಿತ್ತು. ಇಂದು 2 ಮರಿಗಳು ಸಾವನ್ನಪ್ಪಿದ್ದು, ಮತ್ತೊಂದು ಚೀತಾ ಮರಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ರಾಷ್ಟ್ರೀಯ ಉದ್ಯಾನವನದ ಮೂಲಗಳು ತಿಳಿಸಿವೆ. ಮೊದಲ ಮರಿ ಬಲಹೀನತೆಯಿಂದ ಸಾವನ್ನಪ್ಪಿತ್ತು,  ಇಂದು 2 ಚೀತಾ ಮರಿಗಳು ಸಾವನ್ನಪ್ಪುವ ಮೂಲಕ 2 ತಿಂಗಳಲ್ಲಿ

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೆ 2 ಚೀತಾ ಮರಿಗಳ ಸಾವು! Read More »

ರಾಷ್ಟ್ರೀಯ ನ್ಯೂಸ್

ಟ್ರಕ್  ವಾಹನ CRPF ವಾಹನಕ್ಕೆ ಡಿಕ್ಕಿ.!➤ ಇಬ್ಬರು ಭದ್ರತಾ ಸಿಬ್ಬಂದಿಗೆ ಗಾಯ

(ನ್ಯೂಸ್ ಕಡಬ)newskadaba.com ಹೊಸದಿಲ್ಲಿ,ಮೇ.25 ಜಮ್ಮು -ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ  ವೇಗವಾಗಿ ಬಂದ ಟ್ರಕ್ ಸ್ಕಿಡ್ ಆಗಿ ರಸ್ತೆ ಬದಿ ನಿಂತಿದ್ದ CRPF ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಅಪಘಾತದ ದೃಶ್ಯ ಆ ಪ್ರದೇಶದಲ್ಲಿನ ಸಿಸಿಟಿವಿ ವಿಡಿಯೋದಲ್ಲಿ ದಾಖಲಾಗಿದೆ. CRPF ಒದಗಿಸಿದ ಆಘಾತಕಾರಿ ದೃಶ್ಯಾವಳಿಗಳಲ್ಲಿ, ರಸ್ತೆಯ ಪಕ್ಕದಲ್ಲಿ CRPF ವಾಹನವನ್ನು ನಿಲ್ಲಿಸಿರುವುದನ್ನು ತೋರಿಸುತ್ತದೆ. ವಿರುದ್ಧ ದಿಕ್ಕಿನಿಂದ ಬರುವ ಟ್ರಕ್ ಮತ್ತೊಂದು ವಾಹನವನ್ನು ಹಿಂದಿಕ್ಕಲು ಪ್ರಯತ್ನಿಸುತ್ತಿರುವಾಗ ಅದು ಸ್ಕಿಡ್ ಆಗಿ ಸಿಆರ್‌ಪಿಎಫ್ ವಾಹನಕ್ಕೆ ಬಲವಾಗಿ ಡಿಕ್ಕಿ

ಟ್ರಕ್  ವಾಹನ CRPF ವಾಹನಕ್ಕೆ ಡಿಕ್ಕಿ.!➤ ಇಬ್ಬರು ಭದ್ರತಾ ಸಿಬ್ಬಂದಿಗೆ ಗಾಯ Read More »

ರಾಷ್ಟ್ರೀಯ ನ್ಯೂಸ್

7 ನೇ ತರಗತಿ ಬಾಲಕಿ ಮೇಲೆ ಅಪ್ರಾಪ್ತ ವಿದ್ಯಾರ್ಥಿಗಳಿಂದ ಗ್ಯಾಂಗ್‌ ರೇಪ್.!

(ನ್ಯೂಸ್ ಕಡಬ)newskadaba.com ಚಂಡೀಗಢ,ಮೇ.25 11 ವರ್ಷದ ಬಾಲಕಿಯ ಮೇಲೆ ನಾಲ್ವರು ಅಪ್ರಾಪ್ತ ವಿದ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರವೆಸಗಿರೋ‌ ಆಘಾತಕಾರಿ ಘಟನೆ ಚಂಡೀಗಢದಲ್ಲಿ ನಡೆದಿದೆ. ಸಂತ್ರಸ್ತೆ 7 ನೇ ತರಗತಿ ವಿದ್ಯಾರ್ಥಿನಿಯಾಗಿದ್ದು ಶಂಕಿತರಲ್ಲಿ ಒಬ್ಬ ಆಕೆಯ ಸಹಪಾಠಿ. ಉಳಿದ ಮೂವರು ಆರೋಪಿಗಳು ಸರ್ಕಾರಿ ಶಾಲೆಯ 9ನೇ ತರಗತಿ ವಿದ್ಯಾರ್ಥಿಗಳು. ಆರೋಪಿಗಳು ಸಂತ್ರಸ್ತೆಗೆ ಬ್ಲಾಕ್ ಮೇಲ್ ಮಾಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನೆಯಿಂದ ಹುಡುಗಿ ಆಘಾತಕ್ಕೆ ಒಳಗಾಗಿದ್ದಳು. ಒಂದು ದಿನ ತನ್ನ ತಾಯಿಗೆ ಘಟನೆಯನ್ನು ಬಹಿರಂಗಪಡಿಸಿದ್ದಳು. ಸಂತ್ರಸ್ತೆಯ ತಾಯಿ ತರಗತಿ ಶಿಕ್ಷಕರನ್ನು

7 ನೇ ತರಗತಿ ಬಾಲಕಿ ಮೇಲೆ ಅಪ್ರಾಪ್ತ ವಿದ್ಯಾರ್ಥಿಗಳಿಂದ ಗ್ಯಾಂಗ್‌ ರೇಪ್.! Read More »

ರಾಷ್ಟ್ರೀಯ ನ್ಯೂಸ್

ಹೋಟೆಲ್‌ನ ಕೊಠಡಿಯೊಂದರಲ್ಲಿ ಚಲನಚಿತ್ರ ನಿರ್ದೇಶಕ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ.!

(ನ್ಯೂಸ್ ಕಡಬ)newskadaba.com ಉತ್ತರ ಪ್ರದೇಶ,ಮೇ.25 ಭೋಜ್‌ಪುರಿ ಚಲನಚಿತ್ರ ನಿರ್ದೇಶಕ ಸುಭಾಷ್ ಚಂದ್ರ ತಿವಾರಿ ಅವರು ಉತ್ತರ ಪ್ರದೇಶದ ಸೋನ್‌ಭದ್ರಾದಲ್ಲಿರುವ ಹೋಟೆಲ್ನ ಕೊಠಡಿಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಾರಾಷ್ಟ್ರ ಮೂಲದ ಸುಭಾಷ್ ಅವರು ತಮ್ಮ ತಂಡದೊಂದಿಗೆ ಸೋನ ಭದ್ರಾದಲ್ಲಿರುವ ಹೋಟೆಲ್ ತಿರುಪತಿಯಲ್ಲಿ ಚಲನಚಿತ್ರ ಚಿತ್ರೀಕರಣಕ್ಕಾಗಿ ತಂಗಿದ್ದರು. ಈ ವೇಳೆ ಅವರು ಮೃತಪಟ್ಟಿರುವುದಾಗಿ ತಿಳಿದಿದೆ. ಆದರೆ. “ಅವರ ಸಾವಿನ ಕಾರಣವನ್ನು ಖಚಿತಪಡಿಸಿಕೊಳ್ಳಲು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಯನ್ನು ಪಡೆದ ನಂತರ ಹೆಚ್ಚಿನ ತನಿಖೆ

ಹೋಟೆಲ್‌ನ ಕೊಠಡಿಯೊಂದರಲ್ಲಿ ಚಲನಚಿತ್ರ ನಿರ್ದೇಶಕ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ.! Read More »

ರಾಷ್ಟ್ರೀಯ ನ್ಯೂಸ್

3 ವರ್ಷದ ಮಗುವಿನ ಮೇಲೆ ಹರಿದ ಕಾರು.!➤ಪ್ರಕರಣ ದಾಖಲು

(ನ್ಯೂಸ್ ಕಡಬ)newskadaba.com ಹೈದರಾಬಾದ್,ಮೇ.25  ಪಾರ್ಕಿಂಗ್‌ ಏರಿಯಾದಲ್ಲಿ ಮಲಗಿದ್ದ 3 ವರ್ಷದ ಮಗುವಿನ ಮೇಲೆ ಎಸ್ ಯುವಿ ಕಾರು ಹರಿದು ಮಗು ಮೃತಪಟ್ಟಿರುವ ಘಟನೆ ಹೈದರಬಾದ್‌ ನಲ್ಲಿ ನಡೆದಿರುವುದು ವರದಿಯಾಗಿದೆ. ಕಲಬುರಗಿಯ ಶಹಬಾದ್‌ ಮೂಲದ ಮಹಿಳೆಯಾಗಿರುವ ಕವಿತಾ ತನ್ನ ಎರಡು ಮಕ್ಕಳೊಂದಿಗೆ ಕೆಲಸ ಹುಡುಕಿಕೊಂಡು ಹೈದರಬಾದ್‌ ಗೆ ಬಂದಿದ್ದಾರೆ.ಪಾರ್ಕಿಂಗ್‌ ಏರಿಯಾದಲ್ಲಿ ಮಗುವನ್ನು ಮಲಗಿಸಿದ್ದ ವೇಳೆ ಎಸ್ ಯುವಿ ಕಾರು ಪಾರ್ಕ್‌ ಮಾಡುವ ನಿಟ್ಟಿನಲ್ಲಿ ಬಂದು ಮಲಗಿದ್ದ ಮಗುವಿನ ಮೇಲೆ ಹರಿದು ಮತ್ತೆ ಹಿಂದಕ್ಕೆ ಹೋಗಿದೆ. ತಲೆಗೆ ತೀವ್ರತರದ ಏಟಾಗಿ

3 ವರ್ಷದ ಮಗುವಿನ ಮೇಲೆ ಹರಿದ ಕಾರು.!➤ಪ್ರಕರಣ ದಾಖಲು Read More »

ರಾಷ್ಟ್ರೀಯ ನ್ಯೂಸ್

TMC ಕಚೇರಿಯನ್ನು ಅಕ್ರಮವಾಗಿ ನಿರ್ಮಿಸಿರುವ ಹಿನ್ನೆಲೆ.!➤ಧ್ವಂಸಗೊಳಿಸುವಂತೆ ಹೈಕೋರ್ಟ್‌ ಆದೇಶ

(ನ್ಯೂಸ್ ಕಡಬ)newskadaba.com ಕೋಲ್ಕತ,ಮೇ.25  ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿರುವ ತೃಣಮೂಲ ಕಾಂಗ್ರೆಸ್‌ ಪಕ್ಷದ (ಟಿಎಂಸಿ) ಕಚೇರಿಯನ್ನು ಜಿಲ್ಲಾಡಳಿತ ಬುಲ್ಡೋಜರ್‌ ಬಳಸಿ ಧ್ವಂಸಗೊಳಿಸಿದೆ. ಟಿಎಂಸಿ ಆಡಳಿತಾರೂಢ ಸರ್ಕಾರವಿರುವ ರಾಜ್ಯದಲ್ಲಿ ಅದೇ ಪಕ್ಷದ ಕಚೇರಿಯನ್ನು ಧ್ವಂಸಗೊಳಿಸಿರುವ ಘಟನೆ ಇದೇ ಮೊದಲಬಾರಿಗೆ ವರದಿಯಾಗಿದೆ. ಬುರುವಾ ಪ್ರದೇಶದಲ್ಲಿ ಟಿಎಂಸಿ ಕಚೇರಿಯನ್ನು ಅಕ್ರಮವಾಗಿ ನಿರ್ಮಿಸಿರುವ ಹಿನ್ನೆಲೆ ಇತ್ತೀಚೆಗಷ್ಟೇ ಕೋಲ್ಕತ ಹೈಕೋರ್ಟ್‌ ಕಟ್ಟಡ ಧ್ವಂಸಗೊಳಿಸುವಂತೆ ಜಿಲ್ಲಾಡಳಿತಕ್ಕೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳ ಸಮ್ಮುಖದಲ್ಲಿಯೇ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ.  

TMC ಕಚೇರಿಯನ್ನು ಅಕ್ರಮವಾಗಿ ನಿರ್ಮಿಸಿರುವ ಹಿನ್ನೆಲೆ.!➤ಧ್ವಂಸಗೊಳಿಸುವಂತೆ ಹೈಕೋರ್ಟ್‌ ಆದೇಶ Read More »

ರಾಷ್ಟ್ರೀಯ ನ್ಯೂಸ್

ಹಣ ವರ್ಗಾವಣೆ ಪ್ರಕರಣ ➤ ವಿದೇಶ ಪ್ರಯಾಣಕ್ಕೆ ನಟಿ ಜಾಕ್ವೆಲಿನ್‌ಗೆ ದೆಹಲಿ ಕೋರ್ಟ್ ಅನುಮತಿ

(ನ್ಯೂಸ್ ಕಡಬ)newskadaba.com ನವದೆಹಲಿ, ಮೇ.24. 200 ಕೋಟಿ ರೂ. ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಬಾಲಿವುಡ್‌ ನಟಿ ಜಾಕ್ವೆಲಿನ್‌ ಫೆರ್ನಾಂಡಿಸ್‌ ಅವರಿಗೆ ವಿದೇಶಿ ಪ್ರಯಾಣ ಕೈಗೊಳ್ಳಲು ದೆಹಲಿ ಕೋರ್ಟ್ ಅನುಮತಿ ನೀಡಿದೆ. ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣದ ತನಿಖೆ ನಡೆಯುತ್ತಿರುವ ಹಿನ್ನೆಲೆ ಜಾಕ್ವೆಲಿನ್‌ ವಿದೇಶಕ್ಕೆ ಪ್ರಯಾಣಿಸುವಂತಿಲ್ಲವೆಂದು ನಿರ್ಬಂಧ ಹೇರಲಾಗಿತ್ತು. ಆದರೆ ಐಐಎಫ್ಎ ಅವಾರ್ಡ್‌ ಸಮಾಂಭದಲ್ಲಿ ಭಾಗಿಯಾಗಬೇಕಿರುವ ಹಾಗೂ ಶೂಟಿಂಗ್‌ ಇರುವ ಹಿನ್ನೆಲೆ ನಟಿ ವಿದೇಶಿ ಪ್ರಯಾಣಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು.

ಹಣ ವರ್ಗಾವಣೆ ಪ್ರಕರಣ ➤ ವಿದೇಶ ಪ್ರಯಾಣಕ್ಕೆ ನಟಿ ಜಾಕ್ವೆಲಿನ್‌ಗೆ ದೆಹಲಿ ಕೋರ್ಟ್ ಅನುಮತಿ Read More »

ರಾಷ್ಟ್ರೀಯ ನ್ಯೂಸ್

ಅಬಕಾರಿ ಅಧಿಕಾರಿಗಳು ಮತ್ತು  ಗ್ರಾಮಸ್ಥರ ನಡುವೆ ವಾಗ್ವಾದ.!➤ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ

(ನ್ಯೂಸ್ ಕಡಬ)newskadaba.com ಬಿಹಾರ,ಮೇ.24 ಅಕ್ರಮ ಮದ್ಯದ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳೆದುರು ಸ್ಥಳೀಯರು ವಾಗ್ವಾದ ನಡೆಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಅಧಿಕಾರಿಗಳು ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆ ಬಿಹಾರದ ಬೇಗುಸರಾಯ್‌ನಲ್ಲಿ ನಡೆದಿದೆ. ವರದಿಗಳ ಪ್ರಕಾರ, ಅಬಕಾರಿ ಇಲಾಖೆಯ ವಾಹನವು ಪಿಪ್ರಾ ಸಂಸಾ ಪಿಡಬ್ಲ್ಯೂಡಿ ಮಾರ್ಗದಲ್ಲಿ ಸಂಚರಿಸುತ್ತಿದ್ದಾಗ, ಮದ್ಯ ಸೇವಿಸಿದ ಶಂಕಿತ ವ್ಯಕ್ತಿಗಳನ್ನು ತನಿಖೆ ಮಾಡಲು ಅಧಿಕಾರಿಗಳು ಕಾರಿನಿಂದ ಇಳಿದಿದ್ದಾರೆ.ಈ ವೇಳೆ ಗ್ರಾಮಸ್ಥರು ಮತ್ತು ಪೊಲೀಸರ ನಡುವೆ ವಾಗ್ವಾದ ಉಂಟಾಗಿ ವಿಕೋಪಕ್ಕೆ ತಿರುಗಿದೆ. ಗ್ರಾಮಸ್ಥರು

ಅಬಕಾರಿ ಅಧಿಕಾರಿಗಳು ಮತ್ತು  ಗ್ರಾಮಸ್ಥರ ನಡುವೆ ವಾಗ್ವಾದ.!➤ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ Read More »

ರಾಷ್ಟ್ರೀಯ ನ್ಯೂಸ್

ಜಮ್ಮು ಕಾಶ್ಮೀರದಲ್ಲಿ ರಸ್ತೆ ಅಪಘಾತ ➤ ಏಳು ಮಂದಿ ಮೃತ್ಯು

(ನ್ಯೂಸ್ ಕಡಬ)newskadaba.com ಶ್ರೀನಗರ, ಮೇ.24. ಪಾಕಲ್ ದುಲ್ ಪ್ರಾಜೆಕ್ಟ್‌ನ ಕ್ರೂಸರ್ ವಾಹನವು ಜಮ್ಮು-ಕಾಶ್ಮೀರದ ಕಿಶ್ತ್‌ವಾರ್‌ನಲ್ಲಿ ಅಪಘಾತಕ್ಕೀಡಾಗಿ ಕನಿಷ್ಠ ಏಳು ಮಂದಿ ಸಾವನ್ನಪ್ಪಿ ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ದಂಗದೂರು ಅಣೆಕಟ್ಟು ಸಮೀಪ ನಡೆದಿದೆ. ಓರ್ವ ಗಂಭೀರ ಗಾಯಗೊಂಡಿದ್ದು, ಗಾಯಾಳನ್ನು ಕಿಶ್ತ್ವಾ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಕಿಶ್ತ್ವಾರ್ ಉಪ ಆಯುಕ್ತ ಡಾ.ದೇವಾಂಶ್ ಯಾದವ್ ತಿಳಿಸಿದ್ದಾರೆ. ಇನ್ನು ಕೇಂದ್ರ ವಿಜ್ಞಾನ ಹಾಗೂ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ರಸ್ತೆ

ಜಮ್ಮು ಕಾಶ್ಮೀರದಲ್ಲಿ ರಸ್ತೆ ಅಪಘಾತ ➤ ಏಳು ಮಂದಿ ಮೃತ್ಯು Read More »

ರಾಷ್ಟ್ರೀಯ ನ್ಯೂಸ್
Scroll to Top