ರಾಷ್ಟ್ರೀಯ ನ್ಯೂಸ್

2023 ರ ಏಷ್ಯಾಕಪ್‌- ತಂಡದ ಲಿಸ್ಟ್ ಪ್ರಕಟಿಸಿದ ಭಾರತ

(ನ್ಯೂಸ್ ಕಡಬ) newskadaba.com ನವದೆಹಲಿ, ಆ. 23.  2023ರ ಏಷ್ಯಾಕಪ್‌ ಟೂರ್ನಿಗೆ ಭಾರತ ತಂಡ ಪ್ರಕಟಿಸಲಾಗಿದ್ದು, ರೋಹಿತ್‌ ಶರ್ಮಾ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಟೀಮ್‌ ಇಂಡಿಯಾ ತಂಡ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಇಶಾನ್ ಕಿಶನ್, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಪ್ರಸಿಧ್‌ ಕೃಷ್ಣ ರಿಸರ್ವ್‌ ಆಟಗಾರ: […]

2023 ರ ಏಷ್ಯಾಕಪ್‌- ತಂಡದ ಲಿಸ್ಟ್ ಪ್ರಕಟಿಸಿದ ಭಾರತ Read More »

ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್

ಚೆಸ್ ವಿಶ್ವಕಪ್ ಫೈನಲ್ – 2ನೇ ಗೇಮ್ ಡ್ರಾ; ನಾಳೆ ಟೈಬ್ರೇಕರ್ ಪಂದ್ಯ

(ನ್ಯೂಸ್ ಕಡಬ) newskadaba.com ಬಾಕು, ಆ. 23. ಆರ್​. ಪ್ರಜ್ಞಾನಂದ  ಹಾಗೂ ಮ್ಯಾಗ್ನಸ್ ಕಾರ್ಲ್‌ಸೆನ್ ನಡುವೆ ಅಝರ್ ​ಬೈಜಾನ್​ನಲ್ಲಿ ನಡೆದ ಚೆಸ್ ವಿಶ್ವಕಪ್​ ಫೈನಲ್​ನ 2ನೇ ಗೇಮ್ ಕೂಡಾ ಡ್ರಾ’ನಲ್ಲಿ ಅಂತ್ಯಗೊಂಡಿದೆ. ಈ ಪಂದ್ಯದ ಮೊದಲ ಗೇಮ್​ ಕೂಡ ಡ್ರಾ ಆಗಿತ್ತು. ಇದೀಗ ಫೈನಲ್ ಪಂದ್ಯದ 2ನೇ ಕ್ಲಾಸಿಕ್ ಗೇಮ್ ಕೂಡಾ ಸಮಬಲದೊಂದಿಗೆ ಅಂತ್ಯವಾಗಿದ್ದು, ಹೀಗಾಗಿ ಮುಂದೆ ನಡೆಯಲಿರುವ ಟೈ ಬ್ರೇಕರ್ ಪಂದ್ಯದ​ ಮೂಲಕ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ. ಬುಧವಾರ ನಡೆದ 2ನೇ ಗೇಮ್​ನಲ್ಲಿ ಕಪ್ಪು ಕಾಯಿಗಳೊಂದಿಗೆ ಚದುರಂಗ

ಚೆಸ್ ವಿಶ್ವಕಪ್ ಫೈನಲ್ – 2ನೇ ಗೇಮ್ ಡ್ರಾ; ನಾಳೆ ಟೈಬ್ರೇಕರ್ ಪಂದ್ಯ Read More »

ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್

ಚಂದ್ರಯಾನ-3 ಯಶಸ್ಸಿಗೆ ದೇಶ- ವಿದೇಶಗಳಲ್ಲಿ ವಿಶೇಷ ಪ್ರಾರ್ಥನೆ

(ನ್ಯೂಸ್ ಕಡಬ) newskadaba.com ಬೆಂಗಳೂರು,ಆ. 23. ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3ರ ನೌಕೆ ಚಂದ್ರನ ಅಂಗಳಕ್ಕೆ ಕಾಲಿಡಲು ಇನ್ನೇನು ಕ್ಷಣಗಣನೆ ಆರಂಭವಾಗಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಚಂದ್ರಯಾನ-3 ಯೋಜನೆ ಯಶಸ್ವಿಯಾಗಿ ಪರಿಪೂರ್ಣಗೊಳ್ಳಲಿ ಎಂದು ದೇಶದಾದ್ಯಂತ ಪ್ರತಿಯೊಬ್ಬ ಭಾರತೀಯರೂ ಶುಭ ಹಾರೈಸುತ್ತಿದ್ದಾರೆ. ದೇಶದ ಮೂಲೆ ಮೂಲೆಯಲ್ಲೂ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಾರ್ಥನೆ, ಪೂಜೆ ಪುನಸ್ಕಾರಗಳ ಮೂಲಕ ಚಂದ್ರಯಾನ-3ರ ಯಶಸ್ಸಿಗೆ ಪ್ರಾರ್ಥಿಸಲಾಗುತ್ತಿದ್ದು, ಮಂದಿರ, ಮಸೀದಿ, ಚರ್ಚ್‌ ಎನ್ನದೇ ಸರ್ವಧರ್ಮೀಯರೂ ಶುಭ ಹಾರೈಸುತ್ತಿದ್ದಾರೆ. ಅತ್ತ ವಿದೇಶದಲ್ಲಿರುವ ಭಾರತೀಯರು ಕೂಡ ಚಂದ್ರಯಾನದ ಯಶಸ್ಸಿಗೆ ಪ್ರಾರ್ಥಿಸುತ್ತಿದ್ದಾರೆ. ಚಂದ್ರಯಾನ-

ಚಂದ್ರಯಾನ-3 ಯಶಸ್ಸಿಗೆ ದೇಶ- ವಿದೇಶಗಳಲ್ಲಿ ವಿಶೇಷ ಪ್ರಾರ್ಥನೆ Read More »

ತಂತ್ರಜ್ಞಾನ, ರಾಷ್ಟ್ರೀಯ ನ್ಯೂಸ್

ದಕ್ಷಿಣ ಆಫ್ರಿಕಾದಿಂದಲೇ ಚಂದ್ರಯಾನ ವೀಕ್ಷಿಸಲಿರುವ ಪ್ರಧಾನಿ ಮೋದಿ

(ನ್ಯೂಸ್ ಕಡಬ) newskadaba.com ನವದೆಹಲಿ, ಆ. 23. ಚಂದ್ರಯಾನ ಕುರಿತು ಭಾರತೀಯರಲ್ಲಿ ಕುತೂಹಲ ಹೆಚ್ಚಿಸಿದ್ದು, ದೇವಾಲಯ ಮಸೀದಿ ಹಾಗೂ ಚರ್ಚ್ ಗಳಲ್ಲಿ ಈ ಚಂದ್ರಯಾನಕ್ಕೆ ಯಶಸ್ಸು ಸಿಗಲಿ ಎಂದು ಪ್ರಾರ್ಥನೆ ನಡೆಯುತ್ತಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿಯವರು 15ನೇ ಬ್ರಿಕ್ಸ್ ಶೃಂಗಸಭೆಗಾಗಿ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್ ತಲುಪಿದ್ದಾರೆ. ಹೀಗಾಗಿ ದಕ್ಷಿಣ ಆಫ್ರಿಕಾದಿಂದಲೇ ಮೋದಿ ವರ್ಚುವಲ್ ಆಗಿ ಲ್ಯಾಂಡಿಂಗ್ ವೀಕ್ಷಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಬುಧವಾರ ಸಂಜೆ ಇಳಿಯಲಿರುವ ಚಂದ್ರಯಾನ-3 ನೌಕೆಯನ್ನು

ದಕ್ಷಿಣ ಆಫ್ರಿಕಾದಿಂದಲೇ ಚಂದ್ರಯಾನ ವೀಕ್ಷಿಸಲಿರುವ ಪ್ರಧಾನಿ ಮೋದಿ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ನಿರ್ಮಾಣ ಹಂತದ ರೈಲ್ವೇ ಸೇತುವೆ ಕುಸಿತ- 17 ಮಂದಿ ಮೃತ್ಯು

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಆ. 23. ನಿರ್ಮಾಣ ಹಂತದ ರೈಲ್ವೇ ಸೇತುವೆ ಕುಸಿದು ಬಿದ್ದ ಪರಿಣಾಮ 17 ಮಂದಿ ಮೃತಪಟ್ಟಿರುವ ಘಟನೆ ಮಿಝೋರಾಂನ ಸಾಯಿರಾಂಗ್ ಪ್ರದೇಶದಲ್ಲಿ ಬುಧವಾರದಂದು ನಡೆದಿದೆ. ಘಟನಾ ಸ್ಥಳದಲ್ಲಿ ಇನ್ನೂ ಹಲವರು ಸಿಲುಕಿರುವ ಶಂಕೆಯಿದ್ದು, ಅವರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ಸೇತುವೆ ಕುಸಿಯುವ ವೇಳೆ ಸುಮಾರು 35 ರಿಂದ 40 ಕಟ್ಟಡ ಕಾರ್ಮಿಕರು ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಗೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, ಅಪಘಾತದಲ್ಲಿ

ನಿರ್ಮಾಣ ಹಂತದ ರೈಲ್ವೇ ಸೇತುವೆ ಕುಸಿತ- 17 ಮಂದಿ ಮೃತ್ಯು Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಚಂದ್ರಯಾನ- 3 ಯಶಸ್ಸಿಗೆ ಕ್ಷಣಗಣನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 23.‌ ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ- 3, ಇಂದು ಚಂದ್ರನ ಅಂಗಳದಲ್ಲಿ ಇಳಿಯುವ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಕೊನೆಯ ಆ. 20 ನಿಮಿಷಗಳು ಪ್ರತಿಯೊಬ್ಬ ಭಾರತೀಯರ ಎದೆಬಡಿತ ಹೆಚ್ಚಾಗಿರುತ್ತದೆ ಎಂದೇ ಹೇಳಬಹುದು. ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ-3 ನೌಕೆಯ ವಿಕ್ರಮ್ ಲ್ಯಾಂಡರ್ ಅನ್ನು ಇಳಿಸುವ ಈ ಮಹತ್ವದ ಕ್ಷಣಕ್ಕಾಗಿ ಜನ ಕಾತುರದಿಂದ ಕಾಯುತ್ತಿದ್ದಾರೆ. 2019ರ ಸೆಪ್ಟೆಂಬರ್ 6ರಂದು ಕೊನೇ ಕ್ಷಣದಲ್ಲಿ ಉಂಟಾದ ಆಘಾತ, ನೋವು

ಚಂದ್ರಯಾನ- 3 ಯಶಸ್ಸಿಗೆ ಕ್ಷಣಗಣನೆ Read More »

ತಂತ್ರಜ್ಞಾನ, ರಾಷ್ಟ್ರೀಯ ನ್ಯೂಸ್

ಇನ್ನುಮುಂದೆ ಶಾಲಾ ಪಠ್ಯಕ್ರಮದಲ್ಲಿ ಲೈಂಗಿಕ ಶಿಕ್ಷಣ ಜಾರಿ- ಸರಕಾರದ ಆದೇಶ

(ನ್ಯೂಸ್ ಕಡಬ) newskadaba.com ಮಹಾರಾಷ್ಟ್ರ, ಆ. 23. ಶಾಲಾ- ಕಾಲೇಜುಗಳ ಪಠ್ಯಪುಸ್ತಕಗಳಲ್ಲಿ ಸಾಮಾನ್ಯವಾಗಿ ಕವಿಗಳ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಪಠ್ಯ ನೀಡಲಾಗಿರುತ್ತದೆ. ಆದರೆ, ಇದೀಗ ಮಹಾರಾಷ್ಟ್ರ ಸರ್ಕಾರವು ಪಠ್ಯಕ್ರಮದಲ್ಲಿ ಲೈಂಗಿಕ ಶಿಕ್ಷಣ ಜಾರಿಗೆ ತರಲು ಮುಂದಾಗಿದೆ ಎನ್ನಲಾಗಿದೆ. ಮಹಾರಾಷ್ಟ್ರದ ಉಲ್ಹಾಸ್‌ ನಗರದಲ್ಲಿರುವ ಶೈಕ್ಷಣಿಕ ಸಂಘವೊಂದು ಲೈಂಗಿಕ ಶಿಕ್ಷಣವನ್ನು ಸೇರಿಸುವಲ್ಲಿ ಮೊದಲಿಗರಾಗಿದೆ. ಈ ಪಠ್ಯಕ್ರಮ ಸೇರ್ಪಡೆಗೆ ಕಾರಣ ಕಳೆದ ವಾರ ಬಿಡುಗಡೆಯಾದ ಅಕ್ಷಯ್ ಕುಮಾರ್, ಪಂಕಜ್ ತ್ರಿಪಾಠಿ ಮತ್ತು ಯಾಮಿ ಗೌತಮ್ ಅಭಿನಯದ ‘OMG 2’ ಸಿನೆಮಾ.

ಇನ್ನುಮುಂದೆ ಶಾಲಾ ಪಠ್ಯಕ್ರಮದಲ್ಲಿ ಲೈಂಗಿಕ ಶಿಕ್ಷಣ ಜಾರಿ- ಸರಕಾರದ ಆದೇಶ Read More »

ರಾಷ್ಟ್ರೀಯ ನ್ಯೂಸ್

ಚಂದ್ರಯಾನ-3 ಲ್ಯಾಂಡಿಂಗ್ ವೀಕ್ಷಣೆಗೆ ಶಾಲಾ ಅವಧಿ ವಿಸ್ತರಣೆ- ಶಿಕ್ಷಣ ಇಲಾಖೆ

(ನ್ಯೂಸ್ ಕಡಬ) newskadaba.com ಉತ್ತರಪ್ರದೇಶ, ಆ. 22. ಭಾರತೀಯ ಇಸ್ರೋ ಸಂಸ್ಥೆಯ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ-3 ನಾಳೆ ಚಂದ್ರನ ಅಂಗಳದಲ್ಲಿ ಚಂದ್ರಯಾನ 3 ರ ಲ್ಯಾಂಡರ್ ಕಾಲಿಡಲಿದ್ದು, ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ಸ್ಥಾಪನೆಗೆ ನಾಳೆ ಸಂಜೆ ಇಡೀ ದೇಶವೇ ಸಾಕ್ಷಿಯಾಗಲಿದೆ. ಈ ಐತಿಹಾಸಿಕ ಕ್ಷಣವನ್ನು ವೀಕ್ಷಿಸಲು ಉತ್ತರಪ್ರದೇಶದ ಎಲ್ಲಾ ಶಾಲೆಗಳನ್ನು ಆಗಸ್ಟ್ 23 ರಂದು ಸಂಜೆ 5:15 ರಿಂದ 6:15 ರವರೆಗೆ ತೆರೆದಿಡಲು ಶಿಕ್ಷಣ ಇಲಾಖೆ ಆದೇಶಿಸಿದೆ. ಈ ಬಗ್ಗೆ ಸೂಚನೆ ನೀಡಿರುವ ಶಾಲಾ ಶಿಕ್ಷಣ

ಚಂದ್ರಯಾನ-3 ಲ್ಯಾಂಡಿಂಗ್ ವೀಕ್ಷಣೆಗೆ ಶಾಲಾ ಅವಧಿ ವಿಸ್ತರಣೆ- ಶಿಕ್ಷಣ ಇಲಾಖೆ Read More »

ತಂತ್ರಜ್ಞಾನ, ರಾಷ್ಟ್ರೀಯ ನ್ಯೂಸ್

ಚಂದ್ರಯಾನ-3 ಬಗ್ಗೆ ಅವಹೇಳನಕಾರಿ ಪೋಸ್ಟ್ – ನಟ ಪ್ರಕಾಶ್ ರಾಜ್ ವಿರುದ್ದ ದೂರು ದಾಖಲು

(ನ್ಯೂಸ್ ಕಡಬ) newskadaba.com ಮುಂಬೈ, ಆ. 22. ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಿರುವ ನಟ ಪ್ರಕಾಶ್ ರಾಜ್ ಇದೀಗ ಚಂದ್ರಯಾನ-3 ಬಗ್ಗೆ ವ್ಯಂಗ್ಯವಾಡಲು ಹೋಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದೆಡೆ ನೆಟ್ಟಿಗರು ಅವರ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ ಇನ್ನೊಂದೆಡೆ ಅವರ ವಿರುದ್ದ ಬಾಗಲಕೋಟೆಯ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಹಿಂದೂ ಸಂಘಟನೆ ಮುಖಂಡ ನಂದು ಗಾಯಕವಾಡ ಮತ್ತಿತರರು ದೂರು ನೀಡಿದ್ದಾರೆ. ಪ್ರಕಾಶ್ ರಾಜ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಕೂಡಲೇ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಚಂದ್ರಯಾನ-3 ಬಗ್ಗೆ ಅವಹೇಳನಕಾರಿ ಪೋಸ್ಟ್ – ನಟ ಪ್ರಕಾಶ್ ರಾಜ್ ವಿರುದ್ದ ದೂರು ದಾಖಲು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಭಾರತದ ಹಿರಿಯ ಆನೆ 89 ವರ್ಷದ ಬಿಜುಲಿ ಪ್ರಸಾದ್ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ಅಸ್ಸಾಂ, ಆ. 22. ಅಸ್ಸಾಂನಲ್ಲಿದ್ದ ಭಾರತದ ಅತ್ಯಂತ ಹಿರಿಯ ಸಾಕಾನೆ ಬಿಜುಲಿ ಪ್ರಸಾದ್ ನಿನ್ನೆ ಸಾವನ್ನಪ್ಪಿದೆ. ಅಸ್ಸಾಂನ ಸೋನಿತ್ ಪುರ ಜಿಲ್ಲೆಯ ಬೆಹಾಲಿ ಟೀ ಎಸ್ಟೇಟ್ ನಲ್ಲಿದ್ದ ಈ ಆನೆಗೆ 89 ವರ್ಷ ವಯಸ್ಸಾಗಿತ್ತು. ವಯೋ ಸಹಜ ಸಮಸ್ಯೆಯಿಂದಾಗಿ ಬಿಜುಲಿ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಿ ವಿಲಿಯಮ್ಸನ್ ಮಾಗೊರ್ ಗ್ರೂಪ್ ಕಂಪೆನಿಗೆ ಸೇರಿದ ಬೆಹಾಲಿ ಟೀ ಎಸ್ಟೇಟ್ ನಲ್ಲಿ ಈ ಆನೆ ಹಲವು ವರ್ಷಗಳಿಂತ ವಾಸವಾಗಿತ್ತು.

ಭಾರತದ ಹಿರಿಯ ಆನೆ 89 ವರ್ಷದ ಬಿಜುಲಿ ಪ್ರಸಾದ್ ಇನ್ನಿಲ್ಲ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top