ರಾಷ್ಟ್ರೀಯ ನ್ಯೂಸ್

ಇಂದು(ಆ.10)ವಯನಾಡಿನ ಭೂಕುಸಿತ ಪ್ರದೇಶಕ್ಕೆ ಪ್ರಧಾನಿ ಭೇಟಿ..!

(ನ್ಯೂಸ್ ಕಡಬ)newskadaba.com ನವದೆಹಲಿ, ಆ.10. ವಯನಾಡಿನ ಭೂಕುಸಿತಗೊಂಡ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಲಿದ್ದು, ಪರಿಹಾರ ಮತ್ತು ಪುನರ್ವಸತಿ ಪರಿಶೀಲಿಸಲಿದ್ದಾರೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಕಣ್ಣೂರು ತಲುಪಲಿದ್ದಾರೆ. ನಂತರ ವಯನಾಡಿನಲ್ಲಿ ಭೂಕುಸಿತ ಪೀಡಿತ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಬಳಿಕ ದುರಂತದಲ್ಲಿ ಬದುಕುಳಿದವರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅಧಿಕಾರಿಗಳು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ತಂಡಗಳ ಪ್ರಯತ್ನ ಹಾಗೂ ಇಲ್ಲಿನ ಸ್ಥಿತಿಗತಿಗಳ ಬಗ್ಗೆ ಅವರಿಗೆ ತಿಳಿಸುತ್ತೇವೆ ಎಂದು […]

ಇಂದು(ಆ.10)ವಯನಾಡಿನ ಭೂಕುಸಿತ ಪ್ರದೇಶಕ್ಕೆ ಪ್ರಧಾನಿ ಭೇಟಿ..! Read More »

ರಾಷ್ಟ್ರೀಯ ನ್ಯೂಸ್

ಒಲಿಂಪಿಕ್ಸ್ ನಲ್ಲಿ ಕಂಚು ಗೆದ್ದು ಇತಿಹಾಸ ಬರೆದ ಅಮನ್ ಸೆಹ್ರಾವತ್..!

(ನ್ಯೂಸ್ ಕಡಬ)newskadaba.com ಮಂಗಳೂರು, ಆ.10. ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವ ಮೂಲಕ ಭಾರತದ ಯುವ ಕುಸ್ತಿಪಟು ಅಮನ್ ಸೆಹ್ರಾವತ್ ಹೊಸ ಇತಿಹಾಸ ನಿರ್ಮಿಸಿದ್ದು. 21ನೇ ವಯಸ್ಸಿವರಾದ ಅಮನ್ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ ಎನ್ನಲಾಗಿದೆ. 57 ಕೆಜಿ ಪುರುಷರ ಫ್ರಿ ಸ್ಟೈಲ್‌ ವಿಭಾಗದಲ್ಲಿ ಅಮನ್‌ ನಿಗದಿತ ಸಮಯದಲ್ಲಿ 13-5 ಅಂಕಗಳಿಂದ ಪೋರ್ಟೊ ರಿಕೊದ ಡೇರಿಯನ್ ಡೋಯಿ ಕ್ರೂಜ್ ಅವರನ್ನು ಮಣಿಸಿದರು. ಈ ಮೂಲಕ ಭಾರತ ಪ್ಯಾರಿಸ್‌ ಒಲಿಂಪಿಕ್ಸ್ ನಲ್ಲಿ ಆರನೇ ಪದಕವನ್ನು ತನ್ನದಾಗಿಸಿಕೊಂಡಿದೆ. ಅಮನ್‌ ಈ ಬಾರಿಯ

ಒಲಿಂಪಿಕ್ಸ್ ನಲ್ಲಿ ಕಂಚು ಗೆದ್ದು ಇತಿಹಾಸ ಬರೆದ ಅಮನ್ ಸೆಹ್ರಾವತ್..! Read More »

ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್

ಅಬಕಾರಿ ನೀತಿ ಹಗರಣ         ಸುಪ್ರೀಂಕೋರ್ಟ್ ಜಾಮೀನು ಮಂಜೂರು

(ನ್ಯೂಸ್ ಕಡಬ)newskadaba.com ದೆಹಲಿ, ಆ.09. ಅಬಕಾರಿ ನೀತಿ ಹಗರಣದಲ್ಲಿ ಸೆರೆವಾಸ ಅನುಭವಿಸುತ್ತಿರುವ ಆಮ್ ಆದ್ಮಿ ಪಕ್ಷದ ನಾಯಕ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದೆ. ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಮನೀಶ್ ಸಿಸೋಡಿಯಾ ಅವರ ಜಾಮೀನು ಅರ್ಜಿಗಳ ಕುರಿತು ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆಸಲಾಗಿದ್ದು, ಇದೀಗ ಮಹತ್ವದ ತೀರ್ಪು ಪ್ರಕಟವಾಗಿದೆ. ಮನೀಶ್ ಸಿಸೋಡಿಯಾ ಅವರಿಗೆ ಜಾಮೀನು ಮಂಜೂರಾಗುವ ಮೂಲಕ 17 ತಿಂಗಳಿಗೂ ಹೆಚ್ಚು ಕಾಲ

ಅಬಕಾರಿ ನೀತಿ ಹಗರಣ         ಸುಪ್ರೀಂಕೋರ್ಟ್ ಜಾಮೀನು ಮಂಜೂರು Read More »

ರಾಷ್ಟ್ರೀಯ ನ್ಯೂಸ್

ಒಡಿಶಾದಲ್ಲಿ ಭಾರತದ ಮೊದಲ ಅಕ್ಕಿ ಎಟಿಎಂ ನಿರ್ಮಾಣ

(ನ್ಯೂಸ್ ಕಡಬ)newskadaba.comಒಡಿಶಾ, ಆ.09. ಭಾರತದ ಮೊದಲ ಅಕ್ಕಿ ಎಟಿಎಂ ಒಡಿಶಾದಲ್ಲಿ ನಿರ್ಮಾಣವಾಗಿದ್ದು, ಆಹಾರ ಸರಬರಾಜು ಮತ್ತು ಗ್ರಾಹಕರ ಕಲ್ಯಾಣ ಸಚಿವ ಕೃಷ್ಣ ಚಂದ್ರ ಪಾತ್ರ ಅವರು ಅಕ್ಕಿ ಎಟಿಎಂಗೆ ಚಾಲನೆ ನೀಡಿದರು ಎನ್ನಲಾಗಿದೆ. ಮಂಚೇಶ್ವರದಲ್ಲಿರುವ ಗೋದಾಮಿನಲ್ಲಿ ಅಕ್ಕಿ ಎಟಿಎಂ ಯಂತ್ರವನ್ನು ಅಳವಡಿಸಲಾಗಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್)ಯಲ್ಲಿ ಅಕ್ಕಿ ವಿತರಣೆಯನ್ನು ಸರಳೀಕರಿಸಲು ಈ ಯಂತ್ರವನ್ನು ವಿನ್ಯಾಸಗೊಳಿಸಲಾಗಿದೆ. ಅಕ್ಕಿ ಎಟಿಎಂ ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿ ಸಂಖ್ಯೆಯನ್ನು ಟಚ್‌ ಸ್ಕ್ರೀನ್ ನಲ್ಲಿ ನಮೂದಿಸಬೇಕು. ನಮೂದಿಸಿದಾಗ 25ಕೆಜಿವರೆಗೆ ಅಕ್ಕಿಯನ್ನು

ಒಡಿಶಾದಲ್ಲಿ ಭಾರತದ ಮೊದಲ ಅಕ್ಕಿ ಎಟಿಎಂ ನಿರ್ಮಾಣ Read More »

ರಾಷ್ಟ್ರೀಯ ನ್ಯೂಸ್

ಶಿರಾಡಿ ಘಾಟ್‌ ರಸ್ತೆ ಅಭಿವೃದ್ಧಿ ಭರವಸೆ

(ನ್ಯೂಸ್ ಕಡಬ)newskadaba.comನವದೆಹಲಿ, ಆ.09. ಶಿರಾಡಿ ಘಾಟ್‌ ರಸ್ತೆಯನ್ನು ಅಭಿವೃದ್ಧಿಪಡಿಸುವ ಬಗ್ಗೆ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ಕೇಂದ್ರದ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಜತೆ ಮಾತುಕತೆ ನಡೆಸಿದರು. ಮಾಜಿ ಪ್ರಧಾನಿಗಳ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು; ಕರ್ನಾಟಕ ಸರಕಾರ ಅಲ್ಪ ಪ್ರಮಾಣದ ಅರಣ್ಯ ಭೂಮಿ ನೀಡಿದರೆ ಶಿರಾಡಿ ಘಾಟ್‌ ರಸ್ತೆಯನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರಕಾರ ಸಿದ್ಧವಿದೆ ಎಂದು ತಿಳಿಸಿದರು.  

ಶಿರಾಡಿ ಘಾಟ್‌ ರಸ್ತೆ ಅಭಿವೃದ್ಧಿ ಭರವಸೆ Read More »

ರಾಷ್ಟ್ರೀಯ ನ್ಯೂಸ್

‘ವಕ್ಫ್ ಭೂಮಿ ಮಾಫಿಯಾ ಪಾಲು’            ವಿರೋಧ ಪಕ್ಷಗಳಿಗೆ ಕಿರಣ್ ರಿಜಿಜು ತರಾಟೆ

(ನ್ಯೂಸ್ ಕಡಬ)newskadaba.comನವದೆಹಲಿ, ಆ.09. ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ 2024 ಮಂಡನೆ ನಂತರ ವಿರೋಧ ಪಕ್ಷದ ನಾಯಕರು ಎತ್ತಿರುವ ಆಕ್ಷೇಪಗಳಿಗೆ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಉತ್ತರ ನೀಡಿದರು. ಈ ಮಸೂದೆಯು ಭಾರತೀಯ ಸಂವಿಧಾನದ ಒಂದೇ ಒಂದು ಷರತ್ತನ್ನು ಉಲ್ಲಂಘಿಸುವುದಿಲ್ಲ ಎಂದು ಪ್ರತಿಪಾದಿಸಿದ ಅವರು, ”ವಕ್ಫ್ ಮಂಡಳಿಯು ಸಂವಿಧಾನದ 25 ಮತ್ತು 26 ನೇ ಪರಿಚ್ಛೇದದ ವ್ಯಾಪ್ತಿಗೆ ಬರುವುದಿಲ್ಲ ಎಂದು ಅವರು ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿದರು.    

‘ವಕ್ಫ್ ಭೂಮಿ ಮಾಫಿಯಾ ಪಾಲು’            ವಿರೋಧ ಪಕ್ಷಗಳಿಗೆ ಕಿರಣ್ ರಿಜಿಜು ತರಾಟೆ Read More »

ರಾಷ್ಟ್ರೀಯ ನ್ಯೂಸ್

‘ಹರ್ ಘರ್ ತಿರಂಗಾ’ ಅಭಿಯಾನ            ಜನತೆಗೆ ಪ್ರಧಾನಿ ಮೋದಿ ಕರೆ         

(ನ್ಯೂಸ್ ಕಡಬ)newskadaba.com ನವದೆಹಲಿ, ಆ.09. ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇಶದಾದ್ಯಂತ ‘ಹರ್ ಘರ್ ತಿರಂಗಾ’ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಸಾಮಾಜಿಕ ಜಾಲತಾಣ ಖಾತೆಗಳ ಪ್ರೊಫೈಲ್ ಚಿತ್ರಗಳಲ್ಲಿ ತ್ರಿವರ್ಣ ಧ್ವಜ ಹಾಕುವಂತೆ ಮನವಿ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ಈ ವರ್ಷದ ಸ್ವಾತಂತ್ರ್ಯ ದಿನಾಚರಣೆ ಹತ್ತಿರ ಬರುತ್ತಿದ್ದು, ಮತ್ತೊಮ್ಮೆ ಹರ್ ಘರ್ ತಿರಂಗಾವನ್ನು ಸಾಮೂಹಿಕ ಅಭಿಯಾನವನ್ನಾಗಿ ಮಾಡೋಣ. ನಾನು ನನ್ನ ಪ್ರೊಫೈಲ್ ಚಿತ್ರವನ್ನು ಬದಲಾಯಿಸುತ್ತಿದ್ದೇನೆ. ನೀವೂ ನಿಮ್ಮ ಸಾಮಾಜಿಕ ಮಾಧ್ಯಮ

‘ಹರ್ ಘರ್ ತಿರಂಗಾ’ ಅಭಿಯಾನ            ಜನತೆಗೆ ಪ್ರಧಾನಿ ಮೋದಿ ಕರೆ          Read More »

ರಾಷ್ಟ್ರೀಯ ನ್ಯೂಸ್

‘ಕುಸ್ತಿ ನನ್ನ ವಿರುದ್ದ ಗೆದ್ದಿದೆ’            ಕುಸ್ತಿಪಟು ವಿನೇಶ್ ಫೋಗಟ್‌

(ನ್ಯೂಸ್ ಕಡಬ)newskadaba.com ನವದೆಹಲಿ, ಆ.08. ಪ್ಯಾರಿಸ್ ಒಲಿಂಪಿಕ್ಸ್‌ ನ ಕುಸ್ತಿ ಫೈನಲ್‌ ನಿಂದ ಅನರ್ಹಗೊಂಡ ಬೆನ್ನಲ್ಲೇ ವಿನೇಶ್ ಫೋಗಟ್ ಕುಸ್ತಿಗೆ ವಿದಾಯ ಹೇಳಿದ್ದಾರೆ. ಫೈನಲ್‌ ಪ್ರವೇಶಿಸಿ ಇತಿಹಾಸ ಬರೆಯಬೇಕಿದ್ದ ಭಾರತದ ಹೆಮ್ಮೆಯ ಪುತ್ರಿ ಕುಸ್ತಿಪಟು ವಿನೇಶ್‌ ಫೋಗಾಟ್‌ ಕೇವಲ 100 ಗ್ರಾಂ ತೂಕ ಹೆಚ್ಚಳವಾದ ಕಾರಣ ಒಲಿಂಪಿಕ್ಸ್‌ನಿಂದ ಅನರ್ಹಗೊಳಿಸಲಾಗಿತ್ತು. ವಿನೇಶ್ ಫೋಗಟ್ ಟ್ವೀಟ್ ಮಾಡಿ ನಿವೃತ್ತಿ ಘೋಷಣೆ ಮಾಡಿದ್ದಾರೆ, “ಕುಸ್ತಿ ನನ್ನ ವಿರುದ್ದ ಗೆದ್ದಿದೆ. ನಾನು ಸೋತಿದ್ದೇನೆ. ನಿಮ್ಮ ಕನಸು ಹಾಗೂ ನನ್ನ ಧೈರ್ಯ ಎಲ್ಲವೂ ನುಚ್ಚುನೂರಾಯಿತು

‘ಕುಸ್ತಿ ನನ್ನ ವಿರುದ್ದ ಗೆದ್ದಿದೆ’            ಕುಸ್ತಿಪಟು ವಿನೇಶ್ ಫೋಗಟ್‌ Read More »

ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬಜೆಟ್ ಗೆ ವ್ಯಾಪಕ ಟೀಕೆ            ಆಸ್ತಿಗಳ ಮೇಲೆ LTCG ತೆರಿಗೆ ಪರಿಷ್ಕರಿಸಿದ ಕೇಂದ್ರ ಸರ್ಕಾರ

(ನ್ಯೂಸ್ ಕಡಬ)newskadaba.com  ನವದೆಹಲಿ, ಆ.07.  ಮೊದಲು ಮನೆಗಳನ್ನು ಖರೀದಿಸಿದ ವ್ಯಕ್ತಿಗಳಿಗೆ ಭೂಮಿ ಮಾರಾಟದ ಮೇಲಿನ LTCG (ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ಸ್ ) ತೆರಿಗೆಗೆ ದೀರ್ಘಾವಧಿಯ ಬಂಡವಾಳ ಲಾಭದ ಮೇಲೆ ಎರಡು ತೆರಿಗೆ ದರಗಳ ನಡುವೆ ಆಯ್ಕೆ ನೀಡುವ ಮೂಲಕ ಸರ್ಕಾರವು ಮಹತ್ವದ ಪರಿಹಾರವನ್ನು ನಾಗರಿಕರಿಗೆ ಕಲ್ಪಿಸಿದೆ. ಬಜೆಟ್ 2024-25 ಎಲ್ ಟಿಜಿಸಿಯನ್ನು ಶೇಕಡಾ 20ರಿಂದ ಶೇಕಡಾ 12.5ಕ್ಕೆ ಇಳಿಸಲು ಪ್ರಸ್ತಾಪಿಸಿದ್ದು, ಸೂಚ್ಯಂಕ ಪ್ರಯೋಜನಗಳು(indexation benefits) ತೆಗೆದು ಹಾಕಿತು. ಹೊಸ ದರಗಳು ಜಾರಿಗೆ ಬಂದಿದೆ.

ಬಜೆಟ್ ಗೆ ವ್ಯಾಪಕ ಟೀಕೆ            ಆಸ್ತಿಗಳ ಮೇಲೆ LTCG ತೆರಿಗೆ ಪರಿಷ್ಕರಿಸಿದ ಕೇಂದ್ರ ಸರ್ಕಾರ Read More »

ರಾಷ್ಟ್ರೀಯ ನ್ಯೂಸ್

‘ಇಂಧನ ಅಭಿವೃದ್ಧಿ ನಮ್ಮ ಧ್ಯೇಯ’          ಪ್ರಲ್ಹಾದ್ ಜೋಶಿ ಘೋಷಣೆ       

(ನ್ಯೂಸ್ ಕಡಬ)newskadaba.com ನವದೆಹಲಿ, ಆ.07. ಅಭಿವೃದ್ಧಿ ಹೊಂದಿದ ಭಾರತ ನಮ್ಮ ಧ್ಯೇಯ, ಇಂಧನ ಅಭಿವೃದ್ಧಿ ನಮ್ಮ ಧ್ಯೇಯ ಎಂದು ಕೇಂದ್ರ ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಘೊಷಿಸಿದ್ದಾರೆ.ಅವರು ಇಂದು ರಾಜ್ಯಸಭೆಯಲ್ಲಿ ಇಂಧನ ಸಚಿವಾಲಯದ ಕಾರ್ಯವನ್ನು ಎತ್ತಿ ತೋರಿಸಿದ್ದಾರೆ. ನವೀಕರಿಸಬಹುದಾದ ಇಂಧನವು ಕೇವಲ ಒಂದು ಆಯ್ಕೆಯಲ್ಲ, ಅದು ರಾಷ್ಟ್ರದ ಸ್ಥಿರತೆಗೆ ಅವಶ್ಯಕವಾಗಿದೆ. ಇದು ದೇಶದ ಪ್ರಗತಿ ಮತ್ತು ಅಭಿವೃದ್ಧಿಗೆ ಕಾರಣವಾಗುತ್ತದೆ. ವಿಶ್ವದ ದೊಡ್ಡ ಆರ್ಥಿಕತೆ ಹೊಂದಿರುವ ಎಲ್ಲಾ ದೇಶಗಳಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರವು ವಿಶೇಷ

‘ಇಂಧನ ಅಭಿವೃದ್ಧಿ ನಮ್ಮ ಧ್ಯೇಯ’          ಪ್ರಲ್ಹಾದ್ ಜೋಶಿ ಘೋಷಣೆ        Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್
Scroll to Top