ರಾಷ್ಟ್ರೀಯ ನ್ಯೂಸ್

ಡಿಸೆಂಬರ್ ತಿಂಗಳ ವೇಳೆಗೆ ಮೊದಲ ಗಗನಯಾನ- ಇಸ್ರೋ

(ನ್ಯೂಸ್ ಕಡಬ) newskadaba.com ಶ್ರೀಹರಿಕೋಟಾ, ಆ. 17. ಭಾರತ ದೇಶದ ಮೊದಲ ಗಗನಯಾನ ಯೋಜನೆಯನ್ನು ಈ ವರ್ಷದ ಡಿಸೆಂಬರ್‌ಗೆ ಆರಂಭಿಸಲು ಇಸ್ರೋ ನಿರ್ಧರಿಸಿದೆ ಎಂದು ಇಸ್ರೋ ಮುಖ್ಯಸ್ಥ ಸೋಮನಾಥ್ ಹೇಳಿದ್ದಾರೆ. ಮಾನವ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಸಂಬಂಧಿಸಿದ ರಾಕೆಟ್‌ನ ಕೆಲವು ಭಾಗ ಗಳು ಸತೀಶ್‌ ಧವನ್‌ ಸ್ಪೇಸ್‌ ಸೆಂಟರ್‌ ತಲುಪಿದ್ದು, ಮಾಡ್ನೂಲ್‌ ಜೋಡಣೆಯು ನಡೆದಿದೆ. ಸಿಬಂದಿ ಪಾರಾಗುವ ಹಾರ್ಡ್‌ವೇರ್‌ ಸಹ ಸಿದ್ಧವಾಗಿದೆ ಎಂದೂ ಅವರು ಹೇಳಿದ್ದಾರೆ.

ಡಿಸೆಂಬರ್ ತಿಂಗಳ ವೇಳೆಗೆ ಮೊದಲ ಗಗನಯಾನ- ಇಸ್ರೋ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಹೊಸ ರಕ್ಷಣಾ ಕಾರ್ಯದರ್ಶಿಯಾಗಿ ಆರ್ ಕೆ ಸಿಂಗ್ ಆಯ್ಕೆ

(ನ್ಯೂಸ್ ಕಡಬ) newskadaba.c0m ನವದೆಹಲಿ, ಆ. 17.  ಕ್ಯಾಬಿನೆಟ್ ನೇಮಕಾತಿ ಸಮಿತಿಯು ಹೊಸ ರಕ್ಷಣಾ ಕಾರ್ಯದರ್ಶಿಯಾಗಿ ಆರ್​ಕೆ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ. ಕೆ. ಶ್ರೀನಿವಾಸ್ ಅವರನ್ನು ವಸತಿ ಮತ್ತು ನಗರ ಕಾರ್ಯದರ್ಶಿಯಾಗಿ, ವಿವೇಕ್ ಜೋಶಿ ಅವರನ್ನು ಸಿಬ್ಬಂದಿ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಜಾರಿಗೆ ತಂದ ಅಧಿಕಾರಶಾಹಿ ಪುನರ್ರಚನೆಯ ಭಾಗವಾಗಿ ಹಿರಿಯ ಅಧಿಕಾರಿ ಪುಣ್ಯ ಸಲಿಲ ಶ್ರೀವಾಸ್ತವ ಅವರನ್ನು ಹೊಸ ಆರೋಗ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಪ್ರಸ್ತುತ ಪ್ರಧಾನಿ ಕಾರ್ಯಾಲಯದಲ್ಲಿ ವಿಶೇಷ ಕಾರ್ಯದರ್ಶಿಯಾಗಿರುವ ಶ್ರೀವಾಸ್ತವ ಅವರು ಸಿಬ್ಬಂದಿ ಸಚಿವಾಲಯದ ಆದೇಶದ

ಹೊಸ ರಕ್ಷಣಾ ಕಾರ್ಯದರ್ಶಿಯಾಗಿ ಆರ್ ಕೆ ಸಿಂಗ್ ಆಯ್ಕೆ Read More »

ರಾಷ್ಟ್ರೀಯ ನ್ಯೂಸ್

ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನ- ಮಹಿಳೆಯನ್ನು ರಕ್ಷಿಸಿದ ಟ್ಯಾಕ್ಸಿ ಚಾಲಕ

(ನ್ಯೂಸ್ ಕಡಬ) newskadaba.com ಮುಂಬೈ, ಆ. 17. ಸೇತುವೆಯಿಂದ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯೋರ್ವರನ್ನು ಕ್ಯಾಬ್‌ ಚಾಲಕ ಮತ್ತು ಪೊಲೀಸರು ಸಮಯಪ್ರಜ್ಞೆ ಮೆರೆದು ರಕ್ಷಣೆ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ.   ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನುಮುಂಬೈನ ಈಶಾನ್ಯ ಭಾಗದಲ್ಲಿರುವ ಮುಲುಂಡ್‌ ಪ್ರದೇಶದ ರೀಮಾ ಮುಖೇಶ್ ಪಟೇಲ್(56) ಎಂದು ಗುರುತಿಸಲಾಗಿದೆ. ಸೇತುವೆ ಮೇಲೆ ಹತ್ತಿದ ಮಹಿಳೆ ರೀಮಾ, ಏಕಾಏಕಿ ನೀರಿಗೆ ಹಾರಲು ಯತ್ನಿಸಿದ್ದು ಇದನ್ನು ಗಮನಿಸಿದ ಟ್ಯಾಕ್ಸಿ ಚಾಲಕ ಆಕೆ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ

ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನ- ಮಹಿಳೆಯನ್ನು ರಕ್ಷಿಸಿದ ಟ್ಯಾಕ್ಸಿ ಚಾಲಕ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಎಸ್ಸೆಸ್ಸೆಲ್ಸಿ ಪಾಸಾದವರಿಗೆ ಐಟಿಬಿಪಿಯಲ್ಲಿ ಉದ್ಯೋಗ – ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 16. ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್‌ನಲ್ಲಿ ಒಟ್ಟು 819 ಕಾನ್ಸ್‌ಟೇಬಲ್ ಹುದ್ದೆಗಳು ಖಾಲಿಯಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್‌ 01ರ ಒಳಗೆ ಅರ್ಜಿ ಸಲ್ಲಿಸಬೇಕಿದೆ. ಒಟ್ಟಾರೆ 819 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು, ಆಯ್ಕೆ ಆದವರು ತಿಂಗಳಿಗೆ 69,100 ರೂ.ವರೆಗೆ ಸಂಬಳ ಪಡೆಯಬಹುದಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಬಯಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 10ನೇ

ಎಸ್ಸೆಸ್ಸೆಲ್ಸಿ ಪಾಸಾದವರಿಗೆ ಐಟಿಬಿಪಿಯಲ್ಲಿ ಉದ್ಯೋಗ – ಅರ್ಜಿ ಆಹ್ವಾನ Read More »

ರಾಷ್ಟ್ರೀಯ ನ್ಯೂಸ್

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ – ಕಾಂತಾರ ಅಭಿನಯಕ್ಕಾಗಿ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಆ. 16. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಘೋಷಿಸಿದ್ದು ಸೂಪರ್‌ ಹಿಟ್‌ ಚಿತ್ರ ʼಕಾಂತಾರʼದಲ್ಲಿನ ನಟನೆಗಾಗಿ ರಿಷಬ್‌ ಶೆಟ್ಟಿ ಅವರನ್ನು ಅತ್ಯುತ್ತಮ ನಟ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ನಟ ಯಶ್‌ ಅಭಿನಯದ ʼಕೆಜಿಎಫ್‌ ಚಾಪ್ಟರ್‌ 2ʼ ಸಿನಿಮಾಗೆ ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿ ಸಿಕ್ಕಿದೆ. ಅಲ್ಲದೇ ಅದೇ ಚಿತ್ರವು ಅತ್ಯುತ್ತಮ ಸ್ಟಂಟ್ ಕೊರಿಯೋಗ್ರಫಿ ಪ್ರಶಸ್ತಿಯನ್ನೂ ಪಡೆದಿದೆ. ಅತ್ಯುತ್ತಮ ನಟಿ ಪ್ರಶಸ್ತಿ ನಿತ್ಯ ಮೆನನ್‌ ಹಾಗೂ ಮಾನಸಿ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ – ಕಾಂತಾರ ಅಭಿನಯಕ್ಕಾಗಿ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ Read More »

ರಾಷ್ಟ್ರೀಯ ನ್ಯೂಸ್

ಭೂ ವೀಕ್ಷಣಾ ಉಪಗ್ರಹ ಇಒಎಸ್-08 ಅನ್ನು ಯಶಸ್ವಿಯಾಗಿ ಉಡಾಯಿಸಿದ ಇಸ್ರೋ

(ನ್ಯೂಸ್ ಕಡಬ) newskadaba.com ಶ್ರೀಹರಿಕೋಟಾ, ಆ. 16. ಇಸ್ರೋ ಇಂದು ತನ್ನ ಭೂ ವೀಕ್ಷಣಾ ಮತ್ತು ಎಸ್‌ಆರ್-ಒ ಡೆಮೋಸ್ಯಾಟ್‌ ಉಪಗ್ರಹಗಳನ್ನು ಯಶಸ್ವಿಯಾಗಿ ತನ್ನ ಉದ್ದೇಶಿತ ಕಕ್ಷೆಯಲ್ಲಿ ಇರಿಸಿದೆ. ಭೂ ವೀಕ್ಷಣಾ ಉಪಗ್ರಹ ಇಒಎಸ್-08 ಅನ್ನು ಹೊತ್ತ ತನ್ನ ಮೂರನೇ ಮತ್ತು ಅಂತಿಮ ಡೆವಲೆಪ್‌ಮೆಂಟಲ್‌ ಫ್ಲೈಟ್‌, ಸ್ಮಾಲ್‌ ಸ್ಯಾಟಿಲೈಟ್‌ ಲಾಂಚ್‌ ವೆಹಿಕಲ್-‌ಡಿ3 ಅನ್ನು ಇಸ್ರೋ ಇಂದು ಉಡಾಯಿಸಿದೆ. ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ಸ್ಥಳದಿಂದ ರಾಕೆಟ್‌ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಮೈಕ್ರೊಸ್ಯಾಟಿಲೈಟ್ ವಿನ್ಯಾಸ ಮತ್ತು ಅಭಿವೃದ್ಧಿ,

ಭೂ ವೀಕ್ಷಣಾ ಉಪಗ್ರಹ ಇಒಎಸ್-08 ಅನ್ನು ಯಶಸ್ವಿಯಾಗಿ ಉಡಾಯಿಸಿದ ಇಸ್ರೋ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಧ್ವಜ ಸ್ತಂಭದ ಮೇಲಿಂದ ಬಿದ್ದು 3ನೇ ತರಗತಿ ವಿದ್ಯಾರ್ಥಿ ಮೃತ್ಯು

(ನ್ಯೂಸ್ ಕಡಬ) newskadaba.com ತಾವರಗೇರಾ, ಆ. 16. ಧ್ವಜಸ್ತಂಭದ ಮೇಲಿಂದ ಬಿದ್ದು ಮೂರನೇ ತರಗತಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಕಳಮಳ್ಳಿ ತಾಂಡಾದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಪ್ರಕಾಶ (9) ಎಂದು ಗುರುತಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಶಿಕ್ಷಕರು ಶಾಲೆಯ ಗೇಟ್ ಹಾಕಿ ತೆರಳಿದ್ದರು. ಬಳಿಕ ವಿದ್ಯಾರ್ಥಿಯು ಸ್ಥಳೀಯ ಬಾಲಕರೊಂದಿಗೆ ಕಾಂಪೌಂಡ್ ಹಾರಿ ಆಟವಾಡಲು ಶಾಲೆಯ ಮೈದಾನಕ್ಕೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ,. ಮೃತ ವಿದ್ಯಾರ್ಥಿಯ

ಧ್ವಜ ಸ್ತಂಭದ ಮೇಲಿಂದ ಬಿದ್ದು 3ನೇ ತರಗತಿ ವಿದ್ಯಾರ್ಥಿ ಮೃತ್ಯು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಆರ್.ಜಿ.ಕರ್ ಆಸ್ಪತ್ರೆ ದಾಳಿ ಪ್ರಕರಣ – 19 ಮಂದಿ ಅರೆಸ್ಟ್…!

(ನ್ಯೂಸ್ ಕಡಬ) newskadaba.com ಕೋಲ್ಕತ್ತಾ, ಆ. 16. ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ದಾಳಿ, ಹಿಂಸಾಚಾರ ಮತ್ತು ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 19 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳಿ ತಿಳಿಸಿವೆ. ಬಂಧಿತರನ್ನು ನಗರದ ನ್ಯಾಯಾಲಯವು ಆಗಸ್ಟ್ 22ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರ್‌.ಜಿ.ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆವರಣಕ್ಕೆ ಬುಧವಾರದಂದು ತಡರಾತ್ರಿ ನುಗ್ಗಿದ ದುಷ್ಕರ್ಮಿಗಳು, ಆಸ್ಪತ್ರೆಯ ಕಟ್ಟಡ, ತುರ್ತು ವಿಭಾಗ, ಶುಶ್ರೂಷಾ ಕೇಂದ್ರ, ವೈದ್ಯಕೀಯ ಯಂತ್ರೋಪಕರಣ,

ಆರ್.ಜಿ.ಕರ್ ಆಸ್ಪತ್ರೆ ದಾಳಿ ಪ್ರಕರಣ – 19 ಮಂದಿ ಅರೆಸ್ಟ್…! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಅತ್ಯಾಚಾರವೆಸಗಿ ವೈದ್ಯೆಯ ಕೊಲೆ ನಾಳೆ ರಾಷ್ಟ್ರವ್ಯಾಪಿ OPD, ಶಸ್ತ್ರಚಿಕಿತ್ಸೆ ಬಂದ್

(ನ್ಯೂಸ್ ಕಡಬ) newskadaba.com ನವದೆಹಲಿ, ಆ. 16. ಸರ್ಕಾರಿ ಸ್ವಾಮ್ಯದ ಆರ್ ಜಿ ಕರ್ ಆಸ್ಪತ್ರೆಯಲ್ಲಿ ತರಬೇತಿ ನಿರತರಾಗಿದ್ದ ಮಹಿಳಾ ವೈದ್ಯೆಯ ಹತ್ಯೆ ಹಾಗೂ ಆಸ್ಪತ್ರೆ ಧ್ವಂಸ ಮಾಡಿದ ಆರೋಪದ ವಿರುದ್ಧ ಪ್ರತಿಭಟನೆ ನಡೆಸಲು ಭಾರತೀಯ ವೈದ್ಯಕೀಯ ಸಂಘವು ನಾಳೆ ಬೆಳಿಗ್ಗೆ 6 ಗಂಟೆಯಿಂದ 24 ಗಂಟೆಗಳ ಕಾಲ ರಾಷ್ಟ್ರವ್ಯಾಪಿ ತುರ್ತು ಸೇವೆಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದೆ. ಈ ಸಂದರ್ಭ ಅಗತ್ಯ ಸೇವೆಗಳನ್ನು ನಿರ್ವಹಿಸಲಾಗುವುದು ಮತ್ತು ಅಪಘಾತದ ವಾರ್ಡ್ ಗಳು ಕಾರ್ಯನಿರ್ವಹಿಸಲಿವೆ ಎಂದು ವೈದ್ಯಕೀಯ ಸಂಸ್ಥೆ ತಡರಾತ್ರಿ ಹೊರಡಿಸಿದ

ಅತ್ಯಾಚಾರವೆಸಗಿ ವೈದ್ಯೆಯ ಕೊಲೆ ನಾಳೆ ರಾಷ್ಟ್ರವ್ಯಾಪಿ OPD, ಶಸ್ತ್ರಚಿಕಿತ್ಸೆ ಬಂದ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

‘ಅಗ್ನಿ ಕ್ಷಿಪಣಿ’ ಪಿತಾಮಹ ರಾಮ್ ನಾರಾಯಣ್ ಅಗರ್ವಾಲ್ ಮೃತ್ಯು                                                                       

(ನ್ಯೂಸ್ ಕಡಬ) newskadaba.c0m ನವದೆಹಲಿ, ಆ. 16.  ಭಾರತದ ಅಗ್ನಿ ಕ್ಷಿಪಣಿಯ ಪಿತಾಮಹ ಖ್ಯಾತ ಡಿಆರ್‌ಡಿಒ ಕ್ಷಿಪಣಿ ವಿಜ್ಞಾನಿ ಪದ್ಮಭೂಷಣ ಪುರಸ್ಕೃತ ರಾಮ್ ನಾರಾಯಣ್ ಅಗರ್ವಾಲ್ (84) ಮೃತಪಟ್ಟಿದ್ದಾರೆ. ದೇಶವನ್ನು ಪ್ರಮುಖ ಕ್ಷಿಪಣಿ ಶಕ್ತಿಯನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಭಾರತದ ದೀರ್ಘ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ ಯೋಜನೆಯಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದರು. ಅಗರ್ವಾಲ್ ಕ್ಷಿಪಣಿಗಳ ಮೊದಲ ಕಾರ್ಯಕ್ರಮದ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದರು.  

‘ಅಗ್ನಿ ಕ್ಷಿಪಣಿ’ ಪಿತಾಮಹ ರಾಮ್ ನಾರಾಯಣ್ ಅಗರ್ವಾಲ್ ಮೃತ್ಯು                                                                        Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top