ರಾಷ್ಟ್ರೀಯ ನ್ಯೂಸ್

ಮಲಯಾಳಂ ನಟ ಮುಖೇಶ್ ವಿರುದ್ದ ಅತ್ಯಾಚಾರ ಪ್ರಕರಣ ದಾಖಲು..!

(ನ್ಯೂಸ್ ಕಡಬ) newskadaba.com ಕೊಚ್ಚಿ, ಆ. 29. ಮಲಯಾಳಂ ಚಿತ್ರರಂಗದಲ್ಲಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಕುರಿತಂತೆ ಹೇಮಾ ಕಮಿಟಿ ವರದಿ ಬಳಿಕ ಇದೀಗ ಮಲೆಯಾಳಂ ಸಿನಿಮಾ ರಂಗದಲ್ಲಿ ಅಲ್ಲೋಲ ಕಲ್ಲೋಲ ಎದ್ದಿದೆ. ಇದೀಗ ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಮೇಲೆ ಕೇರಳದ ಆಡಳಿತಾರೂಡ ಸಿಪಿಐ(ಎಂ) ಶಾಸಕ, ಮಲಯಾಳಂ ಚಿತ್ರರಂಗದ ಖ್ಯಾತ ನಟ ಮುಕೇಶ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಟಿಯೊಬ್ಬರು ಮುಕೇಶ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು […]

ಮಲಯಾಳಂ ನಟ ಮುಖೇಶ್ ವಿರುದ್ದ ಅತ್ಯಾಚಾರ ಪ್ರಕರಣ ದಾಖಲು..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಜಮ್ಮು ಕಾಶ್ಮೀರದಲ್ಲಿ  2 ಪ್ರತ್ಯೇಕ ಎನ್ ಕೌಂಟರ್ ನಡೆಸಿದ ಭಾರತೀಯ ಭದ್ರತಾ ಪಡೆ   ಮೂರು ಭಯೋತ್ಪಾದಕರ ಹತ್ಯೆ

(ನ್ಯೂಸ್ ಕಡಬ) newskadaba.com ಶ್ರೀನಗರ, ಆ. 29.  ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಎನ್ ಕೌಂಟರ್ ನಡೆಸಿದ ಭಾರತೀಯ ಭದ್ರತಾ ಪಡೆಗಳು ಮೂರು ಭಯೋತ್ಪಾದಕರನ್ನು ಹತ್ಯೆ ಮಾಡಿದೆ. 2 ಪ್ರತ್ಯೇಕ ಎನ್‌ ಕೌಂಟರ್ ನಡೆಸಿದ ಭದ್ರತಾ ಪಡೆಗಳು, ಕುಶಾಲ್ ಪೊಸ್ಟ್ ಕರ್ನಾಹನಲ್ಲಿ (ತಂಗಧಾರ್) ಇಬ್ಬರು ಮತ್ತು ಗುಲಾಬ್ ಪೊಸ್ಟ್ ನ ಕುಮಕಾರಿನ ಪಕ್ಕದಲ್ಲಿ ಒಬ್ಬ ಭಯೋತ್ಪಾಕನನ್ನು ಹತ್ಯೆ ಮಾಡಿದೆ. ಭಾರೀ ಮಳೆಯಿಂದಾಗಿ ಭದ್ರತಾ ಪಡೆಗೆ ಭಯೋತ್ಪಾದಕರ ಮೃತದೇಹಗಳನ್ನು ವಶಪಡಿಸಲು ಆಗಲಿಲ್ಲ ಎಂದು ವರದಿಯಾಗಿದೆ.

ಜಮ್ಮು ಕಾಶ್ಮೀರದಲ್ಲಿ  2 ಪ್ರತ್ಯೇಕ ಎನ್ ಕೌಂಟರ್ ನಡೆಸಿದ ಭಾರತೀಯ ಭದ್ರತಾ ಪಡೆ   ಮೂರು ಭಯೋತ್ಪಾದಕರ ಹತ್ಯೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

2ನೇ ಪ್ರಯತ್ನದಲ್ಲಿ IAS ಅಧಿಕಾರಿಯಾದ ಅನುಪಮಾ ಅಂಜಲಿ

(ನ್ಯೂಸ್ ಕಡಬ) newskadaba.com ನವದೆಹಲಿ, ಆ. 29. ಕೆಲವರಿಗೆ ತಮ್ಮ ಹೆತ್ತವರೇ ಸ್ಪೂರ್ತಿಯಾಗಿರುತ್ತಾರೆ. ತಮ್ಮ ಕನಸುಗಳನ್ನು ನನಸಾಗಿಸಲು ತಮ್ಮ ಜೀವನದಲ್ಲಿ ಅಪಾಯಗಳನ್ನು ತೆಗೆದುಕೊಳ್ಳಲು ಸಿದ್ಧರಿರುವುದರಿಂದ ಅವರಂತೆಯೇ ಯಶಸ್ಸನ್ನು ಸಾಧಿಸುತ್ತಾರೆ. ಅಂತಹ ಒಂದು ಪ್ರೇರಕ ಯಶಸ್ಸಿನ ಕಥೆ. 2018 ರ ಬ್ಯಾಚ್‌ನ IAS ಅಧಿಕಾರಿ ಅನುಪಮಾ ಅಂಜಲಿ. ಅನುಪಮಾ ದೆಹಲಿಗೆ ಸೇರಿದವರು, ಅಲ್ಲಿ ಅವರು ತಮ್ಮ ಶಾಲಾ ಶಿಕ್ಷಣವನ್ನು ಮುಗಿಸಿದರು ಮತ್ತು ನಂತರ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. ಆಕೆಯ ತಂದೆ ಐಪಿಎಸ್ ಅಧಿಕಾರಿಯಾಗಿದ್ದು, 37 ವರ್ಷಗಳಿಂದ ಸರ್ಕಾರದಲ್ಲಿ

2ನೇ ಪ್ರಯತ್ನದಲ್ಲಿ IAS ಅಧಿಕಾರಿಯಾದ ಅನುಪಮಾ ಅಂಜಲಿ Read More »

ರಾಷ್ಟ್ರೀಯ ನ್ಯೂಸ್

ಐಪಿಎಲ್ ಗೆ ಮರಳಿದ ಝಹೀರ್ ಖಾನ್..??

(ನ್ಯೂಸ್ ಕಡಬ) newskadaba.com  ಬೆಂಗಳೂರು, ಆ. 28. ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್)ಗೆ ವಿಶ್ವಕಪ್‌ ವಿಜೇತ ಬೌಲರ್‌ ಝಹೀರ್‌ಖಾನ್‌ ಅವರು ಮರು ಎಂಟ್ರಿಯಾಗಿದ್ದಾರೆ. 2018 ರಿಂದ 2022ರವರೆಗೂ ಐದು ಬಾರಿ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದ ರೋಹಿತ್‌ ಶರ್ಮಾ ಸಾರಥ್ಯದ ಮುಂಬೈ ಇಂಡಿಯನ್ಸ್ ತಂಡದ ಪ್ರತಿಭಾನ್ವೇಷಕರಾಗಿದ್ದ ಝಹೀರ್‌ಖಾನ್‌, ಕಳೆದೆರಡು ವರ್ಷಗಳಿಂದ ಐಪಿಎಲ್‌ ಟೂರ್ನಿಯಿಂದ ಹೊರಗುಳಿದಿದ್ದರು. ಆದರೆ 2025ರ ಐಪಿಎಲ್‌ ನಿಮಿತ್ತ ಡಿಸೆಂಬರ್‌ನಲ್ಲಿ ಮೆಗಾ ಹರಾಜು ನಡೆಯಲಿದ್ದು ಲಕ್ನೋ ಸೂಪರ್‌ ಜಯಂಟ್ಸ್ ತಂಡದ ಮೆಂಟರ್‌ ಆಗಿ ಜಾಹೀರ್‌ಖಾನ್‌ ಅವರು ಮತ್ತೆ

ಐಪಿಎಲ್ ಗೆ ಮರಳಿದ ಝಹೀರ್ ಖಾನ್..?? Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ನದಿಗೆ ಹಸುಗಳನ್ನು ಎಸೆದ ವೀಡಿಯೋ ವೈರಲ್..! ನಾಲ್ವರ ವಿರುದ್ಧ ಪ್ರಕರಣ ದಾಖಲು..! 

(ನ್ಯೂಸ್ ಕಡಬ) newskadaba.com ಸತ್ನಾ, ಆ. 28. ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ಹಲವಾರು ಹಸುಗಳನ್ನು ವ್ಯಕ್ತಿಗಳ ಗುಂಪೊಂದು ನದಿಗೆ ಎಸೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ನಾಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ಸಂಭವಿಸಿದ ಘಟನೆಯಲ್ಲಿ 15 ರಿಂದ 20 ಹಸುಗಳು ಸಾವನ್ನಪ್ಪಿವೆ, ಆದರೆ ಮಾಹಿತಿಯನ್ನು ಇನ್ನೂ ಪರಿಶೀಲಿಸಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಡಿಯೋವನ್ನು ಅರಿತು, ಮಾಹಿತಿ ಸಂಗ್ರಹಿಸಲು ಪೊಲೀಸ್ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ,

ನದಿಗೆ ಹಸುಗಳನ್ನು ಎಸೆದ ವೀಡಿಯೋ ವೈರಲ್..! ನಾಲ್ವರ ವಿರುದ್ಧ ಪ್ರಕರಣ ದಾಖಲು..!  Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಐಸಿಸಿ ನೂತನ ಅಧ್ಯಕ್ಷರಾಗಿ ಜಯ್ ಶಾ ಅವಿರೋಧ ಆಯ್ಕೆ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಆ. 28. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ನೂತನ ಅಧ್ಯಕ್ಷರಾಗಿ ಜಯ್ ಶಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಭಾರತೀಯ ಕ್ರಿಕೆಟ್ ಮಂಡಳಿ ಕಾರ್ಯದರ್ಶಿಯಾಗಿರುವ ಜಯ್ ಶಾ ಅವರು ಜಾಗತಿಕ ಕ್ರಿಕೆಟ್ ಆಡಳಿತ ಮಂಡಳಿಯ ಮುಖ್ಯಸ್ಥರಾಗಿರುವ ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದಾರೆ. ಡಿಸೆಂಬರ್ 1, 2024 ರಿಂದ ಜಯ್ ಶಾ ICCಯ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಜಯ್ ಶಾ ಅವರು ಒಬ್ಬರೇ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಐಸಿಸಿ ನೂತನ ಅಧ್ಯಕ್ಷರಾಗಿ ಜಯ್ ಶಾ ಅವಿರೋಧ ಆಯ್ಕೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ನಟ ಸಿದ್ದೀಖ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ತಿರುವನಂತಪುರಂ, ಆ. 28. ಮಲಯಾಳಂ ನಟ ಸಿದ್ದೀಕ್‌ ಅವರು 2016ರಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ನಟಿ ಆರೋಪಿಸಿದ ಹಿನ್ನೆಲೆಯಲ್ಲಿ, ಸಿದ್ದೀಕ್‌ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮ್ಯೂಸಿಯಂ ಪೊಲೀಸ್ ಠಾಣೆಯಲ್ಲಿ ಸಿದ್ದೀಕ್‌ ವಿರುದ್ಧ ಸೆಕ್ಷನ್ 376 (ಅತ್ಯಾಚಾರ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಪರಾಧವು 2016ರಲ್ಲಿ ನಡೆದಿರುವ ಕಾರಣ ಐಪಿಸಿ ಅಡಿಯಲ್ಲಿ ಪ್ರಕರಣ

ನಟ ಸಿದ್ದೀಖ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು Read More »

ರಾಷ್ಟ್ರೀಯ ನ್ಯೂಸ್

23ನೇ ವಯಸ್ಸಿಗೆ IFS ಅಧಿಕಾರಿಯಾದ ತಮಾಲಿ ಸಹಾ..!

(ನ್ಯೂಸ್ ಕಡಬ) newskadaba.com ಪಶ್ಷಿಮ ಬಂಗಾಳ, ಆ. 28. ಪರಿಶ್ರಮ ಮತ್ತು ಶ್ರದ್ಧೆಯೊಂದಿದ್ದರೆ ಯಾವ ವಯಸ್ಸಿನಲ್ಲಾದರೂ ಅಸಾಧ್ಯವಾದುದನ್ನು ಸಾಧಿಸಬಹುದಾಗಿದೆ. ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಗೆ ಸೇರಿದ ತಮಾಲಿ ಸಹಾ ಎಂಬಾಕೆ, 23ನೇ ವಯಸ್ಸಿಗೆ ಐಎಫ್ ಎಸ್ ಅಧಿಕಾರಿಯಾಗಿದ್ದಾರೆ. ತನ್ನ ಶಾಲಾ ಶಿಕ್ಷಣವನ್ನು ಉತ್ತರ 24 ಪರಗಣ ಜಿಲ್ಲೆಯಲ್ಲಿ ಮಾಡಿ ಬಳಿಕ ಕೋಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿ ಪ್ರಾಣಿಶಾಸ್ತ್ರದಲ್ಲಿ ಪದವಿ ಮುಗಿಸಿದ್ದರು. ತಮಾಲಿ ಸಹಾ ಅವರು ತನ್ನ ಪದವಿ ಶಿಕ್ಷಣ ಪಡೆಯುವ ವೇಳೆ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಲು

23ನೇ ವಯಸ್ಸಿಗೆ IFS ಅಧಿಕಾರಿಯಾದ ತಮಾಲಿ ಸಹಾ..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೋಲ್ಕತ್ತಾ ಅತ್ಯಾಚಾರ-ಕೊಲೆ ಸಂತ್ರಸ್ತರಿಗೆ ವಿದ್ಯಾರ್ಥಿ ಘಟಕದ ಸಂಸ್ಥಾಪನಾ ದಿನವನ್ನು ಅರ್ಪಿಸಿದ ಮಮತಾ ಬ್ಯಾನರ್ಜಿ

(ನ್ಯೂಸ್ ಕಡಬ) newskadaba.com ನವದೆಹಲಿ, ಆ. 28.  ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಇಂದು ಕೋಲ್ಕತ್ತಾ ಅತ್ಯಾಚಾರ-ಕೊಲೆ ಸಂತ್ರಸ್ತರಿಗೆ ಪಕ್ಷದ ವಿದ್ಯಾರ್ಥಿ ಘಟಕದ ಸಂಸ್ಥಾಪನಾ ದಿನವನ್ನು ಅರ್ಪಿಸಿದ್ದಾರೆ. ಟಿಎಂಸಿಪಿ ಎಂದು ಜನಪ್ರಿಯವಾಗಿರುವ ತೃಣಮೂಲ ಛತ್ರ ಪರಿಷತ್ತು ತೃಣಮೂಲ ಕಾಂಗ್ರೆಸ್‌ನ ವಿದ್ಯಾರ್ಥಿ ವಿಭಾಗವಾಗಿದೆ. “ಕ್ರೂರವಾಗಿ ಚಿತ್ರಹಿಂಸೆಗೆ ಒಳಗಾದ ಸಹೋದರಿಯ ಕುಟುಂಬಕ್ಕೆ ನಮ್ಮ ಸಂತಾಪಗಳು ಮತ್ತು ನಾವು ಅವಳಿಗೆ ತ್ವರಿತ ನ್ಯಾಯವನ್ನು ಕೋರುತ್ತಿದ್ದೇವೆ ಮತ್ತು ಭಾರತದಾದ್ಯಂತ ಇಂತಹ ಅಮಾನವೀಯ ಕೃತ್ಯಗಳಿಗೆ ಒಳಗಾದ ಎಲ್ಲಾ

ಕೋಲ್ಕತ್ತಾ ಅತ್ಯಾಚಾರ-ಕೊಲೆ ಸಂತ್ರಸ್ತರಿಗೆ ವಿದ್ಯಾರ್ಥಿ ಘಟಕದ ಸಂಸ್ಥಾಪನಾ ದಿನವನ್ನು ಅರ್ಪಿಸಿದ ಮಮತಾ ಬ್ಯಾನರ್ಜಿ Read More »

ರಾಷ್ಟ್ರೀಯ ನ್ಯೂಸ್
Scroll to Top