ಕೊಂಬಾರು ಗ್ರಾಮಸ್ಥರಿಗೆ ಕೊನೆಗೂ ಬಂತು ನೆಟ್ವರ್ಕ್ ಭಾಗ್ಯ ➤ ಕೊಂಬಾರು ಹಾಗೂ ಸಿರಿಬಾಗಿಲಿನಲ್ಲಿ ಜಿಯೋ ಟವರ್ ಗೆ ಸಾಂಕೇತಿಕ ಚಾಲನೆ
(ನ್ಯೂಸ್ ಕಡಬ) newskadaba.com ಕಡಬ, ಜ.11. ಕಡಬ ತಾಲೂಕಿನ ಕುಗ್ರಾಮವಾಗಿದ್ದ ಕೊಂಬಾರಿನಲ್ಲಿ ಕೊನೆಗೂ ಜಿಯೋ ಕಂಪೆನಿಯ ಮೊಬೈಲ್ ಟವರ್ ಸೋಮವಾರದಿಂದ ಸಾಂಕೇತಿಕವಾಗಿ ಆರಂಭಗೊಂಡಿದ್ದು, ನೆಟ್ವರ್ಕ್ ಸಮಸ್ಯೆಯಿಂದ ಪರದಾಡುತ್ತಿದ್ದ ಕೊಂಬಾರು ಗ್ರಾಮದ ಜನತೆ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ತಾಲೂಕಿನಲ್ಲೇ ಹಿಂದುಳಿದ ಗ್ರಾಮವಾಗಿದ್ದ ಕೊಂಬಾರು ಗ್ರಾಮ ಪಂಚಾಯತ್ ನ ಕೊಂಬಾರು ಹಾಗೂ ಸಿರಿಬಾಗಿಲು ಗ್ರಾಮದ ಜನತೆ ನೆಟ್ವರ್ಕ್ ಸಿಗಬೇಕೆಂದರೆ ಕಿಲೋಮೀಟರ್ ದೂರ ನಡೆದು ನೆಟ್ವರ್ಕ್ ಹುಡುಕುವ ಪ್ರಮೇಯ ಎದುರಾಗಿತ್ತು. ಲಾಕ್ ಡೌನ್ ವೇಳೆ ಆನ್‌ಲೈನ್ ತರಗತಿಗಾಗಿ ನೆಟ್ವರ್ಕ್ ಸಿಗದೆ ವಿದ್ಯಾರ್ಥಿಗಳು […]









