ಅಂತರ್ರಾಷ್ಟ್ರೀಯ ನ್ಯೂಸ್

3 ಸಾವಿರ ಗಡಿ ದಾಟಿದ ಕೊರೋನಾ ಸಾವಿನ ಸಂಖ್ಯೆ

60 ದೇಶಗಳಿಗೆ ವ್ಯಾಪಿಸಿರುವ ಡೆಡ್ಲಿ ವೈರಸ್ ಬೀಜಿಂಗ್, ಮಾ.4: ಚೀನಾದಲ್ಲಿ ಪ್ರಾರಂಭವಾದ ಮಾರಕ ಕೊರೋನಾ ವೈರಸ್ ಇದೀಗ 60 ದೇಶಗಳಿಗೂ ವ್ಯಾಪಿಸಿದ್ದು, ಜಾಗತಿಕವಾಗಿ ಮೃತಪಟ್ಟವರ ಸಂಖ್ಯೆ ಸೋಮವಾರ 3,000 ಗಡಿ ದಾಟಿದೆ. ಇದಲ್ಲದೆ ಜಾಗತಿಕವಾಗಿ ಸುಮಾರು 87 ಸಾವಿರ ಮಂದಿಗೆ ಸೋಂಕು ತಗುಲಿದ್ದು, ಇವರೆಲ್ಲರೂ ನಿಗಾದಲ್ಲಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ಹೊಸ ವರದಿಯಲ್ಲಿ ತಿಳಿಸಿದೆ. ಚೀನಾವೊಂದರಲ್ಲೇ 2,912 ಮಂದಿ ಈವರೆಗೆ ಕೊರೊನಾ ವೈರಸ್‌ಗೆ ಬಲಿಯಾಗಿದ್ದು, 79,824 ಸೋಂಕಿತರಿದ್ದಾರೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ […]

3 ಸಾವಿರ ಗಡಿ ದಾಟಿದ ಕೊರೋನಾ ಸಾವಿನ ಸಂಖ್ಯೆ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಟರ್ಕಿಯಲ್ಲಿ ಭೂಕಂಪ: 9 ಮಂದಿ ಮೃತ್ಯು

ಅಂಕಾರಾ, ಫೆ.24: ಪಶ್ಚಿಮ ಇರಾನ್‌ನಲ್ಲಿ ರವಿವಾರ ಬೆಳಗ್ಗೆ ಸಂಭವಿಸಿದ ಭೂಕಂಪದಲ್ಲಿ 9 ಮಂದಿ ಸಾವಿಗೀಡಾಗಿರುವ ಬಗ್ಗೆ ವರದಿಯಾಗಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.7ರಷ್ಟಿತ್ತು. ಇರಾನ್‌ನ ಖೋಯ್ ಮತ್ತು ಟರ್ಕಿಯ ವ್ಯಾನ್ ಪ್ರಾಂತ್ಯದಲ್ಲಿ ಈ ಸಾವುನೋವು ಸಂಭವಿಸಿದೆ ಎಂದು ತಿಳಿದು ಬಂದಿದೆ. ಮೃತರಲ್ಲಿ ಮೂವರು ಮಕ್ಕಳೂ ಸೇರಿದ್ದು, ಇವರು ಟರ್ಕಿಯ ಬಸ್ಕಾಲೆ ಜಿಲ್ಲೆಯವರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಟರ್ಕಿಯಲ್ಲಿ ಭೂಕಂಪ: 9 ಮಂದಿ ಮೃತ್ಯು Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕೊರಾನಾ ವೈರಸ್‌ಗೆ ಆಸ್ಪತ್ರೆಯ ಮಾಲಕ ಬಲಿ

ಬೀಜಿಂಗ್, ಫೆ.18: ಕೊರಾನಾ ವೈರಸ್‌ಗೆ ಚೀನಾದ ವುಹಾನ್ ಆಸ್ಪತ್ರೆಯ ಮಾಲಕ ಲಿಯು ಝಿಮಿಂಗ್ ಸಾವನ್ನ್ನಪ್ಪಿರುವ ಬಗ್ಗೆ ಸರಕಾರಿ ಮಾಧ್ಯಮಗಳು ವರದಿ ಮಾಡಿದೆ. ಚೀನಾದ ವುಹಾನ್ ಕೊರೊನಾ ವೈರಸ್‌ನ ಮೂಲ ಸ್ಥಳವಾಗಿದ್ದು, ದೇಶಾದ್ಯಂತ ಮರಣಮೃದಂಗ ಬಾರಿಸುತ್ತಿರುವ ನೂತನ ವೈರಸ್ ದಾಳಿಗೆ ನಿರ್ದೇಶಕ ಲಿಯು ಸಾವನ್ನಪ್ಪಿದ್ದಾರೆ. ಕೋವಿಡ್ 19 ವೈರಸ್ ಕಳೆದ ವರ್ಷ ವುಹಾನ್‌ನಲ್ಲಿ ಮೊದಲು ಪತ್ತೆಯಾಗಿರುವುದಾಗಿ ನಂಬಲಾಗಿದೆ. ಈ ವೈರಸ್‌ಗೆ ಈವರೆಗೆ 1,900ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 72 ಸಾವಿರ ಮಂದಿ ವೈರಸ್‌ಗೆ ತುತ್ತಾಗಿದ್ದಾರೆ ಎಂದು ವರದಿ ತಿಳಿಸಿದೆ.

ಕೊರಾನಾ ವೈರಸ್‌ಗೆ ಆಸ್ಪತ್ರೆಯ ಮಾಲಕ ಬಲಿ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ➤➤ ಪತ್ನಿಯನ್ನು ರಕ್ಷಿಸಿದ್ದ ಪತಿ ಮೃತ್ಯು

(ನ್ಯೂಸ್ ಕಡಬ) newskadaba.com, ದುಬೈ . ಫೆ.17. ಕಳೆದ ವಾರ ಅಬುಧಾಬಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ಹೆಂಡತಿಯನ್ನು ರಕ್ಷಿಸಲು ಹೋಗಿ ಗಾಯಗೊಂಡಿದ್ದ ಪತಿ ಮೃತಪಟ್ಟಿದ್ದಾರೆ. ಕೇರಳ ಮೂಲದ ಅಬುಧಾಬಿ ನಿವಾಸಿ ಅನಿಲ್ ನಿನಾನ್ ತಮ್ಮ ಪತ್ನಿಯನ್ನು ಬೆಂಕಿಯಿಂದ ರಕ್ಷಿಸಲು ಹೋದಾಗ ಗಾಯಗೊಂಡಿದ್ದರು. ಸದ್ಯ ನಿನಾನ್ ಅವರ ಪತ್ನಿಯ ಸ್ಥಿತಿ ಸುಧಾರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಶಾರ್ಟ್ ಸಕ್ರ್ಯೂಟ್ನಿಂದ ಬೆಂಕಿ ಅವಘಡ ಸಂಭವಿಸಿತ್ತು. ಅಲ್ಲಿ ನಡೆದ ಅವಘಡದ ಬಗ್ಗೆ ನಮಗೆ ಪೂರ್ಣ ಮಾಹಿತಿ

ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ➤➤ ಪತ್ನಿಯನ್ನು ರಕ್ಷಿಸಿದ್ದ ಪತಿ ಮೃತ್ಯು Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ದೆಹಲಿ ಎನ್ ಕೌಂಟರ್ ಗೆ ಇಬ್ಬರು ಬಲಿ

(ನ್ಯೂಸ್ ಕಡಬ) newskadaba.com, ಹೊಸದಿಲ್ಲಿ. ಫೆ.17. ಇಂದು ಬೆಳ್ಳಂಬೆಳಗ್ಗೆ ಸುಮಾರು 5 ಗಂಟೆ ವೇಳೆ ದೆಹಲಿಯ ಪ್ರಹ್ಲಾದ್ ಪುರ ಪ್ರದೇಶದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಪೊಲೀಸರು ಇಬ್ಬರು ಕ್ರಿಮಿನಲ್ ಗಳನ್ನು ಹೊಡೆದುರುಳಿಸಿದ್ದಾರೆ. ಹತ್ಯೆಯಾದವರನ್ನು ರಾಜಾ ಖುರೇಷಿ ಮತ್ತು ರಮೇಶ್ ಬಹದ್ದೂರ್ ಎಂದು ಗುರುತಿಸಲಾಗಿದೆ. ಈ ಇಬ್ಬರು ಆರೋಪಿಗಳು ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದವರು ಎನ್ನಲಾಗಿದ್ದು, ಹಾಗೂ ಇತ್ತೀಚೆಗೆ ದಿಲ್ಲಿಯ ಕರವಾಲ್ ನಗರದಲ್ಲಿ ನಡೆದ ಕೊಲೆ ಪ್ರಕರಣದಲ್ಲೂ ಈ ಆರೋಪಿಗಳು ಭಾಗಿಯಾಗಿದ್ದರು ಎನ್ನಲಾಗಿದೆ. ಈ ವರದಿಯ ಪ್ರಕಾರ

ದೆಹಲಿ ಎನ್ ಕೌಂಟರ್ ಗೆ ಇಬ್ಬರು ಬಲಿ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 1,523ಕ್ಕೆ ಏರಿಕೆ

ವುಹಾನ್, ಫೆ.15: ಚೀನಾದಲ್ಲಿ ಮಹಾ ಮಾರಿ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 1,523ಕ್ಕೆ ಏರಿಕೆಯಾಗಿದೆ. ಜಗತ್ತಿನಾದ್ಯಂತ ಶುಕ್ರವಾರ ಒಂದೇ ದಿನ 143 ಜನರು ಸಾವನ್ನಪ್ಪಿದ್ದಾರೆ ಎಂದು ಇಂಡಿಯಾ ಟುಡೇ ವರದಿ ತಿಳಿಸಿದೆ. ಕೊರೊನಾ ವೈರಸ್ ನ ಮೂಲ ಹುಬೈ ಪ್ರಾಂತ್ಯದಲ್ಲಿ ಮತ್ತೆ 2,420 ಜನರಿಗೆ ಸೋಂಕು ತಗುಲಿರುವುದು ಧೃಢಪಟ್ಟಿದೆ. ಮಾತ್ರವಲ್ಲದೆ ಶುಕ್ರವಾರ ಈ ಪ್ರಾಂತ್ಯದಲ್ಲಿ  139 ಜನರು ಮೃತಪಟ್ಟಿದ್ದಾರೆ ಎಂದು ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. ಇಂದಿನ ವರದಿಯ ಪ್ರಕಾರ ಒಟ್ಟಾರೆ ಸೋಂಕು ತಗುಲಿದವರ

ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 1,523ಕ್ಕೆ ಏರಿಕೆ Read More »

ಅಂತರ್ರಾಷ್ಟ್ರೀಯ ನ್ಯೂಸ್

ಕೊರೊನೊ ವೈರಸ್ ➤ 20,000 ಕ್ಕೂ ಅಧಿಕ ರೋಗಿಗಳ ಸಾಮೂಹಿಕ ಹತ್ಯೆಗೆ ಮುಂದಾದ ಚೀನಾ

(ನ್ಯೂಸ್ ಕಡಬ)newskadaba.com, ಚೀನಾ. ಫೆ.7. ಮಾರಕವಾಗಿ ಪರಿಣಮಿಸುತ್ತಿರುವ ಮಾರಣಾಂತಿಕ ಕೊರೊನೊ ವೈರಸ್ ಇನ್ನಷ್ಟು ಹರಡುವುದನ್ನು ತಪ್ಪಿಸಲು 20,000ಕ್ಕೂ ಅಧಿಕ ಕೊರೊನೊ ವೈರಸ್ ಬಾಧಿತ ರೋಗಿಗಳನ್ನು ಸಾಮೂಹಿಕವಾಗಿ ಹತ್ಯೆ ಮಾಡಲು ಚೀನಾ ಸರಕಾರ ನ್ಯಾಯಾಲಯದ ಅನುಮತಿಗೆ ಕಾಯುತ್ತಿದೆ ಎಂಬ ಬೆಚ್ಚಿಬೀಳಿಸುವ ಆತಂಕಕಾರಿ ಸುದ್ದಿ ಬಹಿರಂಗವಾಗಿದೆ. ಕೊರೊನೊ ವೈರಸ್ ಗೆ ಒಳಗಾದ ರೋಗಿಗಳನ್ನು ಸಾಮೂಹಿಕವಾಗಿ ಹತ್ಯೆ ಮಾಡಲು ಚೀನಾದ ಅತ್ಯುನ್ನತ ಮಟ್ಟದ ನ್ಯಾಯಾಲಯ, ಸುಪ್ರೀಂ ಪೀಪಲ್ಸ್ ಕೋರ್ಟ್ ಇಂದು ಅನುಮತಿ ನೀಡುವ ನಿರೀಕ್ಷೆಯಿದೆ. ವೈರಸ್ ವಿರುದ್ಧದ ಹೋರಾಟದಲ್ಲಿ ಯಾವುದೇ ಭರವಸೆಯಿಲ್ಲದ

ಕೊರೊನೊ ವೈರಸ್ ➤ 20,000 ಕ್ಕೂ ಅಧಿಕ ರೋಗಿಗಳ ಸಾಮೂಹಿಕ ಹತ್ಯೆಗೆ ಮುಂದಾದ ಚೀನಾ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕೊರೊನಾ ಪರಿಣಾಮದಿಂದ ಭಾರತಕ್ಕೆ ಬರಲಾಗದೆ ಕಂಗಾಲಾದ ಚೀನಾ ದಂಪತಿ

(ನ್ಯೂಸ್ ಕಡಬ) newskadaba.com, ಮಿಡ್ನಾಪುರ್, ಫೆ.6. ಕೊರೋನಾ ವೈರಸ್ ಪರಿಣಾಮದಿಂದ ಮಗಳ ಮದುವೆಗೆ ಚೀನಾದಿಂದ ಭಾರತಕ್ಕೆ ಬರಲಾಗದೆ ಪೋಷಕರು ಹತಾಶರಾದ ಘಟನೆ ನಡೆದಿದೆ. 7 ವರ್ಷಗಳ ಹಿಂದೆ ಭಾರತದ ಯುವಕನಿಗೂ , ಚೀನಾದ ಯುವತಿಗೂ ಪ್ರೇಮಾಂಕುರವಾಗಿ ಫೆಬ್ರವರಿ 5 ರಂದು ವಿವಾಹವಾಗಲು ನಿಶ್ಚಯಿಸಿದ್ದರು.ಇದಕ್ಕಾಗಿ ಬಂಗಾಳದ, ಪೂರ್ವ ಮಿಡ್ನಾಪೂರ್ ನ ಯುವಕನ ಮನೆಯಲ್ಲಿ ಭರ್ಜರಿ ಸಿದ್ದತೆಯೂ ನಡೆದಿತ್ತು. ಆದರೆ ಚೀನಾದಲ್ಲಿದ್ದ ಯುವತಿ ಪೋಷಕರರಿಗೆ ಕೊರೋನಾ ವೈರಸ್ ಕಾರಣದಿಂದ ಮದುವೆ ಸಮಾರಂಭಕ್ಕೆ ಭಾರತಕ್ಕೆ ಬರಲಾಗದೇ ಹತಾಶರಾಗಿದ್ದಾರೆ. ಕೊರೊನಾ ವೈರಸ್ ಕಾರಣದಿಂದ

ಕೊರೊನಾ ಪರಿಣಾಮದಿಂದ ಭಾರತಕ್ಕೆ ಬರಲಾಗದೆ ಕಂಗಾಲಾದ ಚೀನಾ ದಂಪತಿ Read More »

ಅಂತರ್ರಾಷ್ಟ್ರೀಯ ನ್ಯೂಸ್

ಚೀನಾ: ಕೊರಾನಾ ವೈರಸ್‌ಗೆ ಬಲಿಯಾದವರ ಸಂಖ್ಯೆ 106 ಕ್ಕೇರಿಕೆ

ಬೀಜಿಂಗ್, ಜ.28: ವಿಶ್ವದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿರುವ ಕೊರೊನಾ ವೈರಸ್ ತನ್ನ ಕರಾಳ ಬೇಟೆಯನ್ನು ಮತ್ತಷ್ಟು ಹೆಚ್ಚಿಸಿದೆ. ಚೀನಾದಲ್ಲಿ ಕೊರೊನಾ ವೈರಸ್ ಗೆ ಬಲಿಯಾದವರ ಸಂಖ್ಯೆ ಸುಮಾರು 106ಕ್ಕೆ ತಲುಪಿದೆ ಎಂದು ವರದಿಯಾಗಿದೆ. ಚೀನಾದ ಹುಬೈ ಪ್ರಾಂತ್ಯದಲ್ಲಿ ಕಳೆದ ರಾತ್ರಿ ಈ ಮಾರಣಾಂತಿಕ ವೈರಸ್ ಗೆ 24 ಜನರು ಬಲಿಯಾಗಿದ್ದಾರೆ. ಚೀನಾದಲ್ಲಿ ಕೊರೊನಾ ವೈರಸ್ ಗೆ ಬಲಿಯಾದವರ ಸಂಖ್ಯೆ ಏರುತ್ತಲೇ ಇದೆ. ಚೀನಾದಲ್ಲಿ ಈವರೆಗೆ ಸುಮಾರು 106 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ದೇಶದಲ್ಲಿ ಸುಮಾರು 4000

ಚೀನಾ: ಕೊರಾನಾ ವೈರಸ್‌ಗೆ ಬಲಿಯಾದವರ ಸಂಖ್ಯೆ 106 ಕ್ಕೇರಿಕೆ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕರೋನಾ ವೈರಸ್‌ಗೆ ಚೀನಾ ತತ್ತರ: ಸಾವಿನ ಸಂಖ್ಯೆ 25 ಕ್ಕೇರಿಕೆ

ಬೀಜಿಂಗ್, ಜ.24: ಮಾರಕ ಕರೋನಾ ವೈರಸ್ ಗೆ ಚೀನಾ ತತ್ತರಿಸಿದ್ದು ಸಾವನ್ನಪ್ಪಿದವರ ಸಂಖ್ಯೆ 25ಕ್ಕೆ ಏರಿದೆ. ಅಂದಾಜು 830 ಜನರು ಈ ಭೀಕರ ವೈರಸ್ ಗೆ ತುತ್ತಾಗಿದ್ದಾರೆ ಎಂದು ಚೀನಾ ಸರಕಾರ ತಿಳಿಸಿದೆ. ಮೊದಲ ಬಾರಿಗೆ ವೈರಸ್ ಪತ್ತೆಯಾದ ವುಹಾನ್ ನಗರದಲ್ಲೇ 1,072 ಜನರು  ಈ ಮಾರಾಣಾಂತಿಕ ವೈರಾಣು ವಿಗೆ  ತುತ್ತಾಗಿದ್ದಾರೆ ಎನ್ನುವ ಶಂಕೆ ವ್ಯಕ್ತಪಡಿಸಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಚೀನಾ ಸರ್ಕಾರ ತುರ್ತು ಕ್ರಮಗಳನ್ನು ಘೋಷಣೆ

ಕರೋನಾ ವೈರಸ್‌ಗೆ ಚೀನಾ ತತ್ತರ: ಸಾವಿನ ಸಂಖ್ಯೆ 25 ಕ್ಕೇರಿಕೆ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top