ಅಂತರ್ರಾಷ್ಟ್ರೀಯ ನ್ಯೂಸ್

ಮಂಗಳೂರು: ವಿಮಾನ ದುರಂತಕ್ಕೆ ಸಂದಿತು 10 ವರುಷ ➤ ಜಗತ್ತನ್ನೇ ಬೆಚ್ಚಿ ಬೀಳಿಸಿದ ಕರಾವಳಿಯ ಭೀಕರ ದುರಂತ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.22. ಅಂತರ್ರಾಷ್ಟ್ರೀಯ ವಿಮಾನವೊಂದು ಪೈಲಟ್‌ ನ ಅಚಾತುರ್ಯದಿಂದಾಗಿ ನೆಲಕ್ಕಪ್ಪಳಿಸಿ 159 ಮಂದಿ ಸಜೀವ ದಹನವಾಗುವುದರೊಂದಿಗೆ ಜಗತ್ತನ್ನೇ ಬೆಚ್ಚಿಬೀಳಿಸಿದ ಆ ಘೋರ ದುರಂತಕ್ಕೆ ಇಂದಿಗೆ 10 ವರ್ಷ ತುಂಬಿದೆ. 2010 ಮೇ 22ನೇ ತಾರೀಕು ಮುಂಜಾನೆ 6:14 ರ ಸಮಯ. ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನವು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇನ್ನೇನು ಲ್ಯಾಂಡ್ ಆಗಬೇಕು ಎನ್ನುವಷ್ಟರಲ್ಲಿ ಪೈಲಟ್ ನ ಅಚಾತುರ್ಯದಿಂದಾಗಿ ಕ್ಷಣಾರ್ಧದಲ್ಲಿ ರನ್ ವೇಗೆ ಅಪ್ಪಳಿಸಿ 8 ಮಂದಿ […]

ಮಂಗಳೂರು: ವಿಮಾನ ದುರಂತಕ್ಕೆ ಸಂದಿತು 10 ವರುಷ ➤ ಜಗತ್ತನ್ನೇ ಬೆಚ್ಚಿ ಬೀಳಿಸಿದ ಕರಾವಳಿಯ ಭೀಕರ ದುರಂತ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕರಾವಳಿ

ಕೊರೋನಾಕ್ಕೆ ಬೆಚ್ಚಿಬಿದ್ದ ಕಡಲತಡಿ ➤ ಒಂದೇ ದಿನ ಮಂಗಳೂರಿನಲ್ಲಿ 16 ಮಂದಿಗೆ ಕೊರೋನಾ ದೃಢ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.15. ದುಬೈನಿಂದ ಮಂಗಳೂರಿಗೆ ಬಂದಿದ್ದ ಬರೋಬ್ಬರಿ 16 ಪ್ರಯಾಣಿಕರಲ್ಲಿ ಕೊರೊನಾ ವೈರಸ್​ ಇರುವುದು ದೃಢಪಟ್ಟಿದೆ. ಪ್ರಯಾಣಿಕರನ್ನು ಪರೀಕ್ಷೆಗೊಳಪಡಿಸಿದಾಗ ಪಾಸಿಟಿವ್​ ಬಂದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಜನತೆಯನ್ನು ಆತಂಕ ಮೂಡಿಸಿದೆ. ಎರಡು ತಿಂಗಳ ಹಿಂದೆಯಷ್ಟೇ ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ 177 ಪ್ರಯಾಣಿಕರನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಎಲ್ಲರ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಪ್ರಯಾಣಿಕರನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿತ್ತು. ಇದೀಗ 16 ಪ್ರಯಾಣಿಕರಲ್ಲಿ ಕೊರೊನಾ ವೈರಸ್​ ಇರುವುದು ದೃಢಪಟ್ಟಿದೆ.

ಕೊರೋನಾಕ್ಕೆ ಬೆಚ್ಚಿಬಿದ್ದ ಕಡಲತಡಿ ➤ ಒಂದೇ ದಿನ ಮಂಗಳೂರಿನಲ್ಲಿ 16 ಮಂದಿಗೆ ಕೊರೋನಾ ದೃಢ Read More »

ಅಂತರ್ರಾಷ್ಟ್ರೀಯ ನ್ಯೂಸ್

ಲಾಕ್‌ಡೌನ್ ಜಾರಿ ಬಳಿಕ ಮಂಗಳೂರಿಗೆ ಬಂದಿಳಿದ ಮೊದಲ ವಿಮಾನ ➤ 176 ಅನಿವಾಸಿ ಕನ್ನಡಿಗರನ್ನು ಹೊತ್ತು ಮಂಗಳೂರಿಗೆ ಆಗಮನ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.13. ದೇಶಾದ್ಯಂತ ಲಾಕ್‌ಡೌನ್ ಜಾರಿಯಾದ ಬಳಿಕ‌ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅನಿವಾಸಿ ಕನ್ನಡಿಗರನ್ನು ಹೊತ್ತು ವಿದೇಶದಿಂದ ಆಗಮಿಸಿದ ಮೊದಲ ವಿಮಾನವು ಬುಧವಾರ ರಾತ್ರಿ ಲ್ಯಾಂಡ್ ಆಯಿತು. ದುಬೈನಿಂದ 176 ಪ್ರಯಾಣಿಕರು ಆಗಮಿಸಿದ್ದು, ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಹಣ ವರ್ಗಾವಣೆ, ಸಿಮ್ ವಿತರಣೆ, ಆರೋಗ್ಯ ಕಿಟ್ ವಿತರಣೆ, ಉಪಹಾರ ವ್ಯವಸ್ಥೆ ಮಾಡಲಾಯಿತು. ನಂತರ ಆರೋಗ್ಯ ಇಲಾಖೆಯ ತಪಾಸಣಾ ತಂಡದಿಂದ ಪ್ರತೀ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಲಾಯಿತು. ವಿಮಾನದಲ್ಲಿದ್ದ 176 ಪ್ರಯಾಣಿಕರನ್ನು

ಲಾಕ್‌ಡೌನ್ ಜಾರಿ ಬಳಿಕ ಮಂಗಳೂರಿಗೆ ಬಂದಿಳಿದ ಮೊದಲ ವಿಮಾನ ➤ 176 ಅನಿವಾಸಿ ಕನ್ನಡಿಗರನ್ನು ಹೊತ್ತು ಮಂಗಳೂರಿಗೆ ಆಗಮನ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಸೌದಿ ಅರೇಬಿಯಾದಲ್ಲಿ ತಿಂಗಳ ಹಿಂದೆ ರಸ್ತೆ ಅಪಘಾತ ➤ ಗಂಭೀರ ಗಾಯಗೊಂಡು ಕೋಮಾದಲ್ಲಿದ್ದ ಸುಳ್ಯದ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಸುಳ್ಯ, ಮೇ.11. ವಾಹನ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿದ್ದ ಸುಳ್ಯದ ವ್ಯಕ್ತಿಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಭಾನುವಾರದಂದು ಸೌದಿ ಅರೇಬಿಯಾದಲ್ಲಿ ನಡೆದಿದೆ. ಸೌದಿ ಅರೇಬಿಯಾದ ಅಲ್‌ – ಕೋಬಾರ್‌ ಎಂಬಲ್ಲಿ ಉದ್ಯೋಗದಲ್ಲಿದ್ದ ಸುಳ್ಯ ತಾಲೂಕಿನ ಅರಂತೋಡು ನಿವಾಸಿ ಅಬ್ದುಲ್ ಸತ್ತಾರ್ (45) ಎಂಬವರು ಸುಮಾರು ಒಂದು ತಿಂಗಳ ಹಿಂದೆ ವಾಹನ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಕೋಮಾ ಸ್ಥಿತಿಯಲ್ಲಿ ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಭಾನುವಾರದಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಸೌದಿ ಅರೇಬಿಯಾದಲ್ಲಿ ತಿಂಗಳ ಹಿಂದೆ ರಸ್ತೆ ಅಪಘಾತ ➤ ಗಂಭೀರ ಗಾಯಗೊಂಡು ಕೋಮಾದಲ್ಲಿದ್ದ ಸುಳ್ಯದ ವ್ಯಕ್ತಿ ಮೃತ್ಯು Read More »

ಅಂತರ್ರಾಷ್ಟ್ರೀಯ ನ್ಯೂಸ್

ನಾಳೆ ಯುಎಇಯಿಂದ 177 ಪ್ರಯಾಣಿಕರು ಮಂಗಳೂರಿಗೆ

ಮಂಗಳೂರು, ಮೇ 11: ಯುಎಇಯಿಂದ ಅನಿವಾಸಿ ಕನ್ನಡಿಗರನ್ನು ಮಂಗಳೂರಿಗೆ ಕರೆತರಲು ಮೊದಲ ವಿಮಾನ ಮೇ 12 ರಂದು ರಾತ್ರಿ 10ರ ಸುಮಾರಿಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ ಎಂದು ಐಎಎಸ್ ಅಧಿಕಾರಿ ರಾಹುಲ್ ಶಿಂಧೆ ತಿಳಿಸಿದ್ದಾರೆ. ಅವರು ಸೋಮವಾರ ಮಂಗಳೂರು ಮಹಾನಗರಪಾಲಿಕೆ ಮಂಗಳಾ ಸಭಾಂಗಣದಲ್ಲಿ ಈ ಕುರಿತು ನಡೆದ ಸಭೆಯಲ್ಲಿ ಮಾತನಾಡುತ್ತಾ, ವಿದೇಶದಲ್ಲಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರಲು ಜಿಲ್ಲಾಡಳಿತವು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ವಿಮಾನ ನಿಲ್ದಾಣದಲ್ಲೇ ಪ್ರಯಾಣಿಕರಿಗೆ ಆರೋಗ್ಯ ತಪಾಸಣೆ ಮಾಡಲಾಗುವುದು ಎಂದರು. ಯುಎಇನಿಂದ ಮಂಗಳೂರಿಗೆ

ನಾಳೆ ಯುಎಇಯಿಂದ 177 ಪ್ರಯಾಣಿಕರು ಮಂಗಳೂರಿಗೆ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ವಿದೇಶದಿಂದ ಜಿಲ್ಲೆಗೆ ಬರುವವರಿಗೆ ಮಂಗಳೂರಿನಲ್ಲಿ ಕ್ವಾರಂಟೈನ್ ವ್ಯವಸ್ಥೆ ➤ 06 ಹಾಸ್ಟೆಲ್, 18 ಲಾಡ್ಜ್ ಸಜ್ಜು

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.10. ವಿದೇಶಗಳಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುವ ಅನಿವಾಸಿ ಭಾರತೀಯರನ್ನು ಕ್ವಾರಂಟೈನ್‌ನಲ್ಲಿ ಇರಿಸಲು ಜಿಲ್ಲಾಡಳಿತವು ಸಕಲ ವ್ಯವಸ್ಥೆಯನ್ನು ಮಾಡಿಕೊಂಡಿದ್ದು, 6 ಹಾಸ್ಟೆಲ್‌ ಹಾಗೂ 18 ಖಾಸಗಿ ಹೊಟೇಲ್‌ ಮತ್ತು ಲಾಡ್ಜ್‌ಗಳನ್ನು ಸಿದ್ಧಪಡಿಸಲಾಗಿದೆ. ಮೇ 12 ರಂದು ದುಬೈನಿಂದ 170 ಪ್ರಯಾಣಿಕರನ್ನು ಹೊತ್ತ ಮೊದಲ ವಿಮಾನವು ಮಂಗಳೂರಿಗೆ ಆಗಮಿಸಲಿದ್ದು, ಅದರಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಜನರನ್ನು ಮಾತ್ರ ಮಂಗಳೂರಿನಲ್ಲಿ 14 ದಿನಗಳ ಕಾಲ ಕ್ವಾರಂಟೈನ್‌ ಮಾಡಲಾಗುತ್ತದೆ. ಉಡುಪಿ, ಉತ್ತರ ಕನ್ನಡ ಹಾಗೂ ಕಾಸರಗೋಡು

ವಿದೇಶದಿಂದ ಜಿಲ್ಲೆಗೆ ಬರುವವರಿಗೆ ಮಂಗಳೂರಿನಲ್ಲಿ ಕ್ವಾರಂಟೈನ್ ವ್ಯವಸ್ಥೆ ➤ 06 ಹಾಸ್ಟೆಲ್, 18 ಲಾಡ್ಜ್ ಸಜ್ಜು Read More »

ಅಂತರ್ರಾಷ್ಟ್ರೀಯ ನ್ಯೂಸ್, ಕರಾವಳಿ

ವಿಶ್ವದಲ್ಲಿ ಕೊರೋನಗೆ 2.25 ಲಕ್ಷ ಮಂದಿ ಬಲಿ, 31.8 ಲಕ್ಷಕ್ಕೇರಿದ ಸೋಂಕಿತರ ಸಂಖ್ಯೆ

ಲಂಡನ್, ಎ.30: ವಿಶ್ವದೆಲ್ಲೆಡೆ ಕೊರೋನ ವೈರಸ್ ರಣಕೇಕೆ ಹಾಕುತ್ತಿದ್ದು, ಮಹಾಮಾರಿಗೆ ವಿವಿಧ ರಾಷ್ಟ್ರಗಳಲ್ಲಿ 2.25 ಲಕ್ಷ ಮಂದಿ ಬಲಿಯಾಗಿದ್ದಾರೆ. ಅಲ್ಲದೆ, 31.8 ಲಕ್ಷ ಮಂದಿ ಸೋಂಕಿಗೊಳಗಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ಮಹಾಮಾರಿಗೆ 7,708 ಮಂದಿ ಬಲಿಯಾಗಿದ್ದು, ಹೊಸದಾಗಿ 49,950 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 31,86,458ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 2,26,000ಕ್ಕೆ ಏರಿಕೆಯಾಗಿದೆ. ವಿಶ್ವದ ದೊಡ್ಡಣ್ಣ ಎಂದೇ ಕರೆಯಲಾಗುವ ಅಮೆರಿಕಾ ಒಂದೇ ರಾಷ್ಟ್ರದಲ್ಲಿ ಈ ವರೆಗೂ 60,853 ಬಲಿಯಾಗಿದ್ದಾರೆ. ಅಲ್ಲದೆ, 10,48,800 ಮಂದಿಯಲ್ಲಿ ಸೋಂಕು

ವಿಶ್ವದಲ್ಲಿ ಕೊರೋನಗೆ 2.25 ಲಕ್ಷ ಮಂದಿ ಬಲಿ, 31.8 ಲಕ್ಷಕ್ಕೇರಿದ ಸೋಂಕಿತರ ಸಂಖ್ಯೆ Read More »

ಅಂತರ್ರಾಷ್ಟ್ರೀಯ ನ್ಯೂಸ್

ಕೊರೋನ ಸೋಂಕಿಗೆ ಭಾರತೀಯ ಮೂಲದ ಯುಕೆ ವೈದ್ಯ ಬಲಿ

ಲಂಡನ್, ಎ.21:  ಇಂಗ್ಲೇಂಡ್ ನಲ್ಲಿರುವ ಭಾರತೀಯ ಮೂಲದ ವೈದ್ಯ ಮಂಜೀತ್ ಸಿಂಗ್  ರಿಯಾದ್ ಕೋವಿಡ್ 19 ಮಹಾಮಾರಿಗೆ ಬಲಿಯಾಗಿದ್ದಾರೆ. ತುರ್ತು ಔಷಧ ಸಲಹೆಗಾರರಾಗಿದ್ದಇವರಿಗೆ ಡರ್ಬಿಶೈರ್ ನಲ್ಲಿ  ಸಹೋದ್ಯೋಗಿಗಳು ಮತ್ತು ರೋಗಿಗಳಿಂದ ಭಾರೀ ಗೌರವವಿತ್ತು. 1992 ರಲ್ಲಿ ಲೀಸೆಸ್ಟರ್ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಪದವಿ  ಪಡೆದ ರಿಯಾತ್, ಅಪಘಾತ ಮತ್ತು ರಾಷ್ಟ್ರೀಯ ಆರೋಗ್ಯ ಸೇವೆಯ ಮೊದಲ ಸಿಖ್  ತುರ್ತು ಸಲಹೆಗಾರರಾಗಿದ್ದರು. ಆ ಮೂಲಕ ವೈರಸ್‌ಗೆ ಬಲಿಯಾದ  ಭಾರತೀಯ ಮೂಲದ ವೃತ್ತಿಪರ ವೈದ್ಯರೆನಿಸಿಕೊಂಡಿದ್ದಾರೆ. ಈ ಕುರಿತು ಮಾತನಾಡಿದ  ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ

ಕೊರೋನ ಸೋಂಕಿಗೆ ಭಾರತೀಯ ಮೂಲದ ಯುಕೆ ವೈದ್ಯ ಬಲಿ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ಯುಎಇ: ಕೇರಳದಲ್ಲಿ ನಡೆದ ಮಗನ ಅಂತ್ಯಸಂಸ್ಕಾರವನ್ನು ಫೇಸ್‌ಬುಕ್‌ನಲ್ಲಿ ನೋಡಿದ ಹೆತ್ತವರು

ದುಬೈ, ಎ. 18: ಕ್ಯಾನ್ಸರ್‌ನಿಂದಾಗಿ ಮೃತಪಟ್ಟ ಮಗನ ಅಂತ್ಯಕ್ರಿಯೆ ಕೇರಳದಲ್ಲಿ ನಡೆದಾಗ ಯುಎಇಯಲ್ಲಿರುವ ಹೆತ್ತವರು ಅದನ್ನು ಫೇಸ್‌ಬುಕ್ ಲೈವ್ ಮೂಲಕ ನೋಡಬೇಕಾಯಿತು ಎಂದು ‘ಗಲ್ಫ್ ನ್ಯೂಸ್’ ವರದಿ ಮಾಡಿದೆ. ಕೊರೋನ ವೈರಸ್ ಹಿನ್ನೆಲೆಯಲ್ಲಿ ಪ್ರಯಾಣ ನಿರ್ಬಂಧಗಳು ಜಾರಿಯಲ್ಲಿರುವಾಗ ಮಗನ ಶವದ ಜೊತೆಗೆ ಹೆತ್ತವರಿಗೆ ಕೇರಳಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಜೋಯಲ್ ಜಿ. ಜೋಮಯ್ ಎಪ್ರಿಲ್ 11ರಂದು 16ನೇ ವರ್ಷಕ್ಕೆ ಕಾಲಿಡುವವರಿದ್ದರು. ಆದರೆ, ಏಳು ವರ್ಷಗಳಿಂದ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಿದ ಅವರು ಒಂದು ದಿನ ಮುಂಚೆ ದುಬೈಯ ಆಸ್ಪತ್ರೆಯೊಂದರಲ್ಲಿ

ಯುಎಇ: ಕೇರಳದಲ್ಲಿ ನಡೆದ ಮಗನ ಅಂತ್ಯಸಂಸ್ಕಾರವನ್ನು ಫೇಸ್‌ಬುಕ್‌ನಲ್ಲಿ ನೋಡಿದ ಹೆತ್ತವರು Read More »

ಅಂತರ್ರಾಷ್ಟ್ರೀಯ ನ್ಯೂಸ್

ಕೊರೋನ ವೈರಸ್‌ಗೆ ಒಂದೇ ದಿನ ಅಮೆರಿಕಾದಲ್ಲಿ 2,600 ಜನ ಬಲಿ, ಸೋಂಕಿತರ ಪ್ರಮಾಣವೂ ಹೆಚ್ಚಳ

ನ್ಯೂಯಾರ್ಕ್, ಎ.16: ವಿಶ್ವದ ದೊಡ್ಡಣ್ಣ  ಕೋವಿಡ್ -19 ರುದ್ರ ನರ್ತನಕ್ಕೆ ನಲುಗಿ ಹೋಗಿದ್ದು 24 ಗಂಟೆಗಳ ಅವಧಿಯಲ್ಲಿ ಸುಮಾರು 2,600 ಜನ ಬಲಿಯಾಗಿದ್ದಾರೆ. ಅಮೆರಿಕಾದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದ ಸಾವು ಸಂಭವಿಸಿದ್ದು ದುರಂತ ದಾಖಲೆಯಾಗಿದೆ. ಆ ಮೂಲಕ ಜಗತ್ತಿನಲ್ಲೇ ಅತೀ ಹೆಚ್ಚು ಕೋವಿಡ್ 19 ಪ್ರಕರಣಗಳು ದಾಖಲಾದ ದೇಶ ಎನಿಸಿಕೊಂದಿದೆ. ಈ ದೇಶದಲ್ಲಿ 6,44,089 ಜನರು ಸೋಂಕಿಗೆ ತುತ್ತಾಗಿದ್ದು ಒಟ್ಟಾರೆ ಸಾವಿನ ಪ್ರಮಾಣ 28,529ರ ಗಡಿ ದಾಟಿದೆ.  ಈ ಕುರಿತು ಮಾತನಾಡಿದ ಅಧ್ಯಕ್ಷ ಡೊನಾಲ್ಡ್

ಕೊರೋನ ವೈರಸ್‌ಗೆ ಒಂದೇ ದಿನ ಅಮೆರಿಕಾದಲ್ಲಿ 2,600 ಜನ ಬಲಿ, ಸೋಂಕಿತರ ಪ್ರಮಾಣವೂ ಹೆಚ್ಚಳ Read More »

ಅಂತರ್ರಾಷ್ಟ್ರೀಯ ನ್ಯೂಸ್
Scroll to Top