ಕರಾವಳಿ

ಉದ್ಯೋಗದ ಆಮಿಷವೊಡ್ಡಿ 25 ಲಕ್ಷ ರೂ. ವಂಚನೆ..! ➤ ವ್ಯಕ್ತಿಯಿಂದ ದೂರು ದಾಖಲು

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 25. ಉದ್ಯೋಗದ ಆಮಿಷವೊಡ್ಡಿ 25,49,079ರೂ. ವಂಚನೆ ಮಾಡಿದ ಆರೋಪಕ್ಕೆ ಸಂಬಂಧಿಸಿ ತಂಡವೊಂದರ ವಿರುದ್ದ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ವ್ಯಕ್ತಿಯೋರ್ವರು sign.com ವೆಬ್‌ಸೈಟ್ ನಲ್ಲಿ ನೌಕರಿಯ ಬಗ್ಗೆ 2021ರ ಎಪ್ರಿಲ್ ನಲ್ಲಿ ಹೇಳಿಕೊಂಡಿದ್ದು, ಬಳಿಕ ಅಂಕುರ್ ದೇಸಾಯಿ ಎಂಬಾತ ವ್ಯಕ್ತಿಗೆ ಕರೆಮಾಡಿ ಸೆಕ್ಯುರ್ ಕ್ಯಾರಿಯರ್.ಕಾಮ್ ವೆಬ್‌ಸೈಟ್ ನಲ್ಲಿ ತಮ್ಮ ವೈಯಕ್ತಿಯ ವಿಚಾರಗಳನ್ನು ನೋಂದಾಯಿಸುವಂತೆ ತಿಳಿಸಿದ್ದ. ಅದರಂತೆ ವ್ಯಕ್ತಿಯು 2,358ರೂ. ಪಾವತಿಸಿ ನೋಂದಾಯಿಸಿದ್ದರು. ಬಳಿಕ ಆರೋಪಿಗಳ ತಂಡವು […]

ಉದ್ಯೋಗದ ಆಮಿಷವೊಡ್ಡಿ 25 ಲಕ್ಷ ರೂ. ವಂಚನೆ..! ➤ ವ್ಯಕ್ತಿಯಿಂದ ದೂರು ದಾಖಲು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸುಳ್ಯ: ಮಗನ ಎದೆಗೆ ಕತ್ತಿಯಿಂದ ಕಡಿದ ತಂದೆ…! ➤ ಮಗ ಗಂಭೀರ

(ನ್ಯೂಸ್ ಕಡಬ) newskadaba.com ಸುಳ್ಯ, ಜ. 25. ತಂದೆ ಮಗನ ನಡುವೆ ಮಾತಿಗೆ ಮಾತು ಬೆಳೆದು ಹೊಡೆದಾಟ ನಡೆದು ಬಳಿಕ ತಂದೆಯೇ ಮಗನ ಎದೆಗೆ ಕತ್ತಿಯಿಂದ ಇರಿದ ಘಟನೆ ತಾಲೂಕಿನ ಅಲೆಟ್ಟಿ ಗ್ರಾಮದ. ಗುಂಡ್ಯ ಎಂಬಲ್ಲಿ ನಡೆದಿದೆ. ಗಾಯಗೊಂಡವರನ್ನು ಜಯಪ್ರಕಾಶ್ ಎಂದು ಗುರುತಿಸಲಾಗಿದೆ. ತಂದೆ ಐತಪ್ಪ ನಾಯ್ಕ್ ಹಾಗೂ ಮಗ ಜಯಪ್ರಕಾಶ್ ನಡುವೆ ಮಾತಿನ ಚಕಮಕಿ ನಡುವೆ ಹೊಡೆದಾಟ ನಡೆದು, ತಂದೆಯೇ ಮಗನ ಎದೆಗೆ ಕತ್ತಿಯಿಂದ ಕಡಿದಿದ್ದು, ಪರಿಣಾಮ ಗಂಭೀರ ಗಾಯಗೊಂಡು ವಿಪರೀತ ರಕ್ತಸ್ರಾವಕ್ಕೊಳಗಾಗಿದ್ದು, ತಕ್ಷಣವೇ ಸುಳ್ಯದ

ಸುಳ್ಯ: ಮಗನ ಎದೆಗೆ ಕತ್ತಿಯಿಂದ ಕಡಿದ ತಂದೆ…! ➤ ಮಗ ಗಂಭೀರ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಇತ್ತೀಚೆಗೆ ನಡೆದ ಗ್ರಾಮ ಸಭೆಯನ್ನು ಅಮಾನ್ಯಗೊಳಿಸಿ ಮತ್ತೊಮ್ಮೆ ಗ್ರಾಮ ಸಭೆ ನಡೆಸುವಂತೆ ಎಸ್ಡಿಪಿಐ ಸಂಪಾಜೆ ಗ್ರಾಮ ಸಮಿತಿ ವತಿಯಿಂದ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗೆ ಮನವಿ

(ನ್ಯೂಸ್ ಕಡಬ) newskadaba.com ಸಂಪಾಜೆ, ಜ. 25. ಜನವರಿ 11 ರಂದು ಸಂಪಾಜೆ ಗ್ರಾಮ ಪಂಚಾಯತ್ ನಡೆಸಿದ ಗ್ರಾಮ ಸಭೆಯು ಪಂಚಾಯತ್ ರಾಜ್ ಅಧಿನಿಯಮದಂತೆ ಸಾರ್ವಜನಿಕರ ಪ್ರಶ್ನೆಗಳಿಗೆ ಅವಕಾಶ ನೀಡಿರುವುದಿಲ್ಲ. ವರದಿ ವಾಚನದ ನಂತರ ವರದಿಗೆ ಸಂಬಂಧಪಟ್ಟ ವಿಷಯದ ಬಗ್ಗೆ ಮಾತ್ರ ಪ್ರಶ್ನೆಗಳನ್ನು ಕೇಳಲು ಸಾರ್ವಜನಿಕರಿಗೆ (ಗ್ರಾಮಸ್ಥರಿಗೆ) ಅವಕಾಶ ನೀಡಿ ಆದರ ನಂತರ ಇಲಾಖಾಧಿಕಾರಿಗಳಲ್ಲಿ ಪ್ರಶ್ನೆಗಳನ್ನು ಕೇಳಲು ಹಾಗೂ ಗ್ರಾಮಸ್ಥರ ಸಮಸ್ಯೆಗಳನ್ನು ಕೇಳಲು ನೋಡಲ್ ಅಧಿಕಾರಿಗಳು ಅವಕಾಶ ಕೊಡಲಿಲ್ಲ. ಕೆಲವು ಗ್ರಾಮಸ್ಥರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವ ಸೌಜನ್ಯತೆ

ಇತ್ತೀಚೆಗೆ ನಡೆದ ಗ್ರಾಮ ಸಭೆಯನ್ನು ಅಮಾನ್ಯಗೊಳಿಸಿ ಮತ್ತೊಮ್ಮೆ ಗ್ರಾಮ ಸಭೆ ನಡೆಸುವಂತೆ ಎಸ್ಡಿಪಿಐ ಸಂಪಾಜೆ ಗ್ರಾಮ ಸಮಿತಿ ವತಿಯಿಂದ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗೆ ಮನವಿ Read More »

ಕರಾವಳಿ, ಕರ್ನಾಟಕ

ಸಂಪಾಜೆ ಗ್ರಾಮ ಪಂಚಾಯತ್ ವತಿಯಿಂದ ನೀರಿನ ಟ್ಯಾಂಕ್ ವಿತರಣೆ

(ನ್ಯೂಸ್ ಕಡಬ) newskadaba.com ಸಂಪಾಜೆ, ಜ. 25. ಸಂಪಾಜೆ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ 62 ಫಲಾನುಭವಿಗಳಿಗೆ 500 ಲೀಟರ್ ಸಾಮರ್ಥ್ಯದ ಸಿಂಟೆಕ್ಸ್ ಡ್ರಮ್ ವಿತರಣಾ ಕಾರ್ಯಕ್ರಮವನ್ನು ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸೋಮಶೇಖರ್ ಕೊಇಂಗಾಜೆ ಡ್ರಮ್ ವಿತರಿಸುವ ಮೂಲಕ ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿ ಅವರು, ಕುಡಿಯುವ ನೀರನ್ನು ಮಿತವಾಗಿ ಬಳಸಿ. ಈ ಡ್ರಮ್ ಮಾರಾಟ ಮಾಡದೇ ಉತ್ತಮ

ಸಂಪಾಜೆ ಗ್ರಾಮ ಪಂಚಾಯತ್ ವತಿಯಿಂದ ನೀರಿನ ಟ್ಯಾಂಕ್ ವಿತರಣೆ Read More »

ಕರಾವಳಿ, ಕರ್ನಾಟಕ

ಎಸ್ಡಿಪಿಐ ರಾಜ್ಯಾಧ್ಯಕ್ಷರಿಗೆ ಕಲ್ಲುಗುಂಡಿಯಲ್ಲಿ ಅದ್ದೂರಿ ಸ್ವಾಗತ

(ನ್ಯೂಸ್ ಕಡಬ) newskadaba.com ಸಂಪಾಜೆ, ಜ. 25. ಬೆಂಗಳೂರಿನಿಂದ ಮಂಗಳೂರು ಪ್ರಯಾಣದಲ್ಲಿದ್ದ ಎಸ್ ಡಿ ಪಿ ಐ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ರವರನ್ನು ಕಲ್ಲುಗುಂಡಿಯ ಕೂಲಿಷೆಡ್ ಬಳಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಮತ್ತು ಸಾರ್ವಜನಿಕರು ಸೇರಿ ಸ್ವಾಗತಿಸಿದರು. ರಾಜ್ಯಾಧ್ಯಕ್ಷರಿಗೆ ರಿವೈಸ್, ರಿಯಾಝ್ ಎಸ್.ಎಂ, ವಾಹಿದ್ ರವರು ಹೂಗುಚ್ಛ ನೀಡಿ, ಎಸ್.ಡಿ.ಪಿ.ಐ ಸಂಪಾಜೆ ಗ್ರಾಮ ಸಮಿತಿ ಕಾರ್ಯದರ್ಶಿ ಶರೀಫ್ ಸೆಟ್ಟಿಯಡ್ಕ ಶಾಲು ಹೊದಿಸಿ, ಸ್ವಾಗತಿಸಿದರು. ಈ ಸಂದರ್ಭದಲ್ಲಿ ಎಸ್ಡಿಪಿಐ ಸಂಪಾಜೆ ಗ್ರಾಮ ಸಮಿತಿಯ ಉಪಾಧ್ಯಕ್ಷರಾದ ಉದೈಫ್ ಧಂಡಕಜೆ,

ಎಸ್ಡಿಪಿಐ ರಾಜ್ಯಾಧ್ಯಕ್ಷರಿಗೆ ಕಲ್ಲುಗುಂಡಿಯಲ್ಲಿ ಅದ್ದೂರಿ ಸ್ವಾಗತ Read More »

ಕರಾವಳಿ, ಕರ್ನಾಟಕ

ಚಿನ್ನ ಕೋಟಿಂಗ್ ವಿಚಾರದಲ್ಲಿ ಪರಸ್ಪರ ಹಲ್ಲೆ…! ➤ ಓರ್ವ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಸುಳ್ಯ, ಜ. 24. ಬೆಳ್ಳಿ ಆಭರಣಕ್ಕೆ ಚಿನ್ನದ ಕೋಟಿಂಗ್ ಮಾಡಿಸಲು ಜ್ಯುವೆಲ್ಲರಿ ಶಾಪ್ ಗೆ ಹೋದ ವ್ಯಕ್ತಿ ಹಾಗೂ ಜ್ಯುವೆಲ್ಲರಿ ಶಾಪ್ ಮಾಲಕರ ನಡುವೆ ಪರಸ್ಪರ ಹಲ್ಲೆ ನಡೆದು ಓರ್ವ ಆಸ್ಪತ್ರೆಗೆ ದಾಖಲಾದ ಘಟನೆ ಸುಳ್ಯದಲ್ಲಿ ನಡೆದಿದೆ.   ಜಾಲ್ಸೂರಿನ ವಿಮಲೇಶ್ ಜ್ಯುವೆಲರಿ ಶಾಪ್ ಮಾಲಕ ಗೋಪಾಲ್ ಶೇಟ್ ಎಂಬವರು ಸುಳ್ಯದ ರಾಮ್ ಬಾರ್ ಸಮೀಪವಿರುವ ಜ್ಯುವೆಲ್ಲರಿ ಅಂಗಡಿಗೆ ಹೋಗಿ ಅಲ್ಲಿನ ಮಾಲಕ ಉತ್ತಮ್ ಶೇಟ್ ಜೊತೆ ಬೆಳ್ಳಿಗೆ ಚಿನ್ನದ ಕೋಟಿಂಗ್ ಮಾಡಲು

ಚಿನ್ನ ಕೋಟಿಂಗ್ ವಿಚಾರದಲ್ಲಿ ಪರಸ್ಪರ ಹಲ್ಲೆ…! ➤ ಓರ್ವ ಆಸ್ಪತ್ರೆಗೆ ದಾಖಲು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಪುತ್ತೂರು: ರೋಗಿಯನ್ನು ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ಪಲ್ಟಿ…!

(ನ್ಯೂಸ್ ಕಡಬ) newskadaba.com ಪುತ್ತೂರು, ಜ. 24. ರೋಗಿಯೊಬ್ಬರನ್ನು ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ಪಲ್ಟಿಯಾದ ಘಟನೆ ಕಲ್ಲರ್ಪೆ ಎಂಬಲ್ಲಿ ಆದಿತ್ಯವಾರ ಮಧ್ಯರಾತ್ರಿ ನಡೆದಿದೆ. ಕುಂಬ್ರ ಕಡೆಯಿಂದ ಪುತ್ತೂರು ಕಡೆಗೆ ರೋಗಿಯನ್ನು ಸಾಗಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಲ್ಲರ್ಪೆ ಬಸ್ಸು ತಂಗುದಾಣದ ಬಳಿ ಪಲ್ಟಿಯಾಗಿದೆ ಎನ್ನಲಾಗಿದೆ.    

ಪುತ್ತೂರು: ರೋಗಿಯನ್ನು ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ಪಲ್ಟಿ…! Read More »

ಕರಾವಳಿ, ಕರ್ನಾಟಕ

ಮಸೀದಿಯ ಗೇಟು ಹಾರಿ ಹರಕೆ ಡಬ್ಬಿ ಕಳ್ಳತನ..! ➤ ದೃಶ್ಯ ಸಿಸಿಟಿವಿಯಲ್ಲಿ ಸೆರೆ- ದೂರು ದಾಖಲು

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 24. ಇಲ್ಲಿನ ಪ್ರಸಿದ್ದ ಜೆಪ್ಪು ಮುಹಿಯುದ್ದೀನ್ ಜುಮಾ ಮಸೀದಿಯಿಂದ ಹರಕೆ ಡಬ್ಬಿ ಕಳ್ಳತನಗೈದ ಘಟನೆ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. ತಡರಾತ್ರಿಯಲ್ಲಿ ಕಳ್ಳನೋರ್ವ ಗೇಟನ್ನು ಹಾರಿ ಮಸೀದಿಯ ಆವರಣ ಪ್ರವೇಶಿಸಿ ಅಲ್ಲಿದ್ದ ಹರಕ್ಎ ಡಬ್ಬಿಯನ್ನು ಹೊತ್ತೊಯ್ದಿದ್ದು, ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಕುರಿತು ಮಸೀದಿ ಆಡಳಿತ ಮಂಡಳಿ ಕಾರ್ಯದರ್ಶಿ ಮುಝಮ್ಮಿಲ್ ಹುಸೈನ್ ಅವರು ಪ್ರಕರಣ ದಾಖಲಿಸಿದ್ದಾರೆ.    

ಮಸೀದಿಯ ಗೇಟು ಹಾರಿ ಹರಕೆ ಡಬ್ಬಿ ಕಳ್ಳತನ..! ➤ ದೃಶ್ಯ ಸಿಸಿಟಿವಿಯಲ್ಲಿ ಸೆರೆ- ದೂರು ದಾಖಲು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕರ್ನಾಟಕ ಪ್ಯಾರಾ ಮೆಡಿಕಲ್ ಬೋರ್ಡ್ ಫಲಿತಾಂಶ ಪ್ರಕಟ ➤ ಮನ್ಶರ್ ಕಾಲೇಜು ವಿದ್ಯಾರ್ಥಿನಿಯರ ವಿಶಿಷ್ಟ ಸಾಧನೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜ. 24. ಕರ್ನಾಟಕದ ಪ್ಯಾರಾ ಮೆಡಿಕಲ್ ಬೋರ್ಡ್ 2010-21 ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ವಿಶಿಷ್ಟ ಸಾಧನೆ ಮಾಡಿದ್ದಾರೆ. ಪ್ರಥಮ ವರ್ಷದ ಡಿಎಂಐಟಿ ಹಾಗೂ ತೃತೀಯ ವರ್ಷದ ಡಿಎಮ್.ಎಲ್.ಟಿಯ ಎಲ್ಲಾ ವಿದ್ಯಾರ್ಥಿಗಳ ಉತ್ತೀರ್ಣತೆಯೊಂದಿಗೆ ಕಾಲೇಜಿಗೆ ಶೆ.‌100 ಫಲಿತಾಂಶ ದೊರೆತಿದೆ. ಇದಲ್ಲದೇ ಪ್ರಥಮ ವರ್ಷದ ಡಿಎಂಐಟಿ ವಿದ್ಯಾರ್ಥಿನಿಗಳಾಗಿರುವ ಮರಿಯಮ್ಮ ಬೀವಿ ಭೌತಶಾಸ್ತ್ರ100/100, ರಸಾಯನಶಾಸ್ತ್ರ 100/100, ಜೀವಶಾಸ್ತ್ರ 94/100, ಸಫೀನಾ ಭೌತಶಾಸ್ತ್ರ 94/100, ಇಂಗ್ಲಿಷ್

ಕರ್ನಾಟಕ ಪ್ಯಾರಾ ಮೆಡಿಕಲ್ ಬೋರ್ಡ್ ಫಲಿತಾಂಶ ಪ್ರಕಟ ➤ ಮನ್ಶರ್ ಕಾಲೇಜು ವಿದ್ಯಾರ್ಥಿನಿಯರ ವಿಶಿಷ್ಟ ಸಾಧನೆ Read More »

ಕರಾವಳಿ, ಕರ್ನಾಟಕ

ಸುಳ್ಯ: ದ್ವಿಚಕ್ರ ವಾಹನಗಳ ನಡುವೆ ಢಿಕ್ಕಿ ➤ ಓರ್ವನಿಗೆ ಗಾಯ..

(ನ್ಯೂಸ್ ಕಡಬ) newskadaba.com ಸುಳ್ಯ, ಜ. 24. ಬೈಕ್ ಹಾಗೂ ಸ್ಕೂಟರ್ ನಡುವೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಾಯಗೊಂಡ ಘಟನೆ ಸುಳ್ಯದಲ್ಲಿ ನಡೆದಿದೆ. ಗಾಯಗೊಂಡ ಬೈಕ್ ಸವಾರನನ್ನು ಪ್ರೀತೇಶ್ ಕಾಡುಸೊರಂಜ ಎಂದು ಗುರುತಿಸಲಾಗಿದೆ. ಇವರು ಸುಳ್ಯದಿಂದ ಹಳೆಗೇಟು ಕಡೆಗೆ ತೆರಳುತ್ತಿದ್ದ ಸಂದರ್ಭ ವಿರುದ್ದ ದಿಕ್ಕಿನಿಂದ ಬಂದ ಸ್ಕೂಟರ್ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.    

ಸುಳ್ಯ: ದ್ವಿಚಕ್ರ ವಾಹನಗಳ ನಡುವೆ ಢಿಕ್ಕಿ ➤ ಓರ್ವನಿಗೆ ಗಾಯ.. Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top