ಕರಾವಳಿ

ಬೆಳ್ಳಾರೆ: ಅಂಚೆ ಕಛೇರಿಯಲ್ಲಿ 73ನೇ ಗಣರಾಜ್ಯೋತ್ಸವ ಆಚರಣೆ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜ. 26. ಇಲ್ಲಿನ ಆಟೋ ನಿಲ್ದಾಣದ ಬಳಿ ಕಾರ್ಯಾಚರಿಸುತ್ತಿರುವ ಅಂಚೆ ಕಚೇರಿಯಲ್ಲಿ ಗಣರಾಜ್ಯೋತ್ಸವ ಆಚರಣೆ ಹಾಗೂ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಸುಳ್ಯ ಅಂಚೆ ನಿರೀಕ್ಷಕ ಸುದೀಪ್ ಕುಮಾರ್ ಬಿ ಹಾಗೂ ಅಂಚೆ ಪಾಲಕ ಲಕ್ಷ್ಮಣ್ ನಾಯ್ಕ ಧ್ವಜಾರೋಹಣ ನೆರವೇರಿಸಿ, ಬಳಿಕ ಅಂಚೆ ನಿರೀಕ್ಷಕರಾದ ಸುದೀಪ್ ಕುಮಾರ್ ಬಿ ಗಣರಾಜ್ಯೋತ್ಸವ ದಿನದ ಮಹತ್ವತೆ ಕುರಿತು ಸವಿಸ್ತಾರವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಅಂಚೆ ಸಿಬ್ಬಂದಿಗಳಾದ ರವಿ , ರವಿರಾಜ್, ಬಾಲಕೃಷ್ಣ, ಅನಂತಕೃಷ್ಣ ಪ್ರಭು, ಬಾಲಕೃಷ್ಣ, […]

ಬೆಳ್ಳಾರೆ: ಅಂಚೆ ಕಛೇರಿಯಲ್ಲಿ 73ನೇ ಗಣರಾಜ್ಯೋತ್ಸವ ಆಚರಣೆ Read More »

ಕರಾವಳಿ, ಕರ್ನಾಟಕ

73ನೇ ಗಣರಾಜ್ಯೋತ್ಸವ ಪ್ರಯುಕ್ತ ಎಸ್ಡಿಪಿಐ ಕುಂಟಿನಿ ಬೂತ್ ಸಮಿತಿ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜ. 26. 73ನೇ ಗಣರಾಜ್ಯೋತ್ಸವದ ಪ್ರಯುಕ್ತ ಎಸ್.ಡಿ.ಪಿ.ಐ ಕುಂಟಿನಿ ಬೂತ್ ಸಮಿತಿ ವತಿಯಿಂದ ಕುಂಟಿನಿ ಜಂಕ್ಷನ್ ಬಳಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಎಸ್.ಡಿ.ಪಿ.ಐ ಬೆಳ್ತಂಗಡಿ ವಿಧಾನಸಭಾ ಕಾರ್ಯದರ್ಶಿ ನಿಜಾಮ್ ಗೇರುಕಟ್ಟೆ ಧ್ವಜಾರೋಹಣ ನೆರವೇರಿಸಿ, ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಲಾಯಿಲಾ ಗ್ರಾಮ ಪಂಚಾಯತ್ ಸದಸ್ಯರುಗಳಾದ ಸಲೀಂ ಕುಂಟಿನಿ, ಶಮಾ ಮಹಮ್ಮದ್ ಆಲಿ, ಕುಂಟಿನಿ ಬೂತ್ ಸಮಿತಿ ಅಧ್ಯಕ್ಷರಾದ ರಫೀಕ್ ಕುಂಟಿನಿ ಹಾಗೂ ಪಕ್ಷದ ಕಾರ್ಯಕರ್ತರು ಮತ್ತು ಹಿತೈಶಿಗಳು ಉಪಸ್ಥಿತರಿದ್ದರು. ಎಸ್.ಡಿ.ಪಿ.ಐ ಬೆಳ್ತಂಗಡಿ

73ನೇ ಗಣರಾಜ್ಯೋತ್ಸವ ಪ್ರಯುಕ್ತ ಎಸ್ಡಿಪಿಐ ಕುಂಟಿನಿ ಬೂತ್ ಸಮಿತಿ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ Read More »

ಕರಾವಳಿ, ಕರ್ನಾಟಕ

ಕಡಬ: ತಹಶೀಲ್ದಾರ್ ಕಚೇರಿ ಆವರಣದಲ್ಲಿ 73ನೇ ಗಣರಾಜ್ಯೋತ್ಸವ ಆಚರಣೆ

ನ್ಯೂಸ್ ಕಡಬ) newskadaba.com ಕಡಬ, ಜ. 26. ಕಡಬ ತಾಲೂಕು ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ತಾಲೂಕು ಕಚೇರಿ ಆವರಣದಲ್ಲಿ 73ನೇ ಗಣರಾಜ್ಯೋತ್ಸವ ದಿನವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಕಡಬ ತಹಶೀಲ್ದಾರ್ ಅನಂತ್ ಶಂಕರ್ ಅವರು ನೆರವೇರಿಸಿ ಗಣರಾಜ್ಯೋತ್ಸವದ ಬಗ್ಗೆ ಸಂದೇಶವನ್ನು ನೀಡಿದರು. ಕಡಬ ಠಾಣಾ ಎಸ್.ಐ ರುಕ್ಮನಾಯಕ್ ಮತ್ತು ಸಿಬ್ಬಂದಿಗಳು ಕವಾಯತು ನಡೆಸಿದರು. ಈ ಸಂದರ್ಭದಲ್ಲಿ ಉಪತಹಶೀಲ್ದಾರ್ ಕೆ.ಟಿ ಮನೋಹರ್, ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ, ಪ.ಪಂ. ಅಧಿಕಾರಿಗಳು, ಸಿಬ್ಬಂದಿಗಳು, ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.    

ಕಡಬ: ತಹಶೀಲ್ದಾರ್ ಕಚೇರಿ ಆವರಣದಲ್ಲಿ 73ನೇ ಗಣರಾಜ್ಯೋತ್ಸವ ಆಚರಣೆ Read More »

ಕರಾವಳಿ, ಕರ್ನಾಟಕ

Breaking News ➤ ಕಡಬ: ಕಾಡಾನೆ ದಾಳಿ- ವ್ಯಕ್ತಿ ಗಂಭೀರ..!

(ನ್ಯೂಸ್ ಕಡಬ) newskadaba.com ಕಡಬ, ಜ. 26. ಇಲ್ಲಿನ ಅರಣ್ಯ ಪ್ರದೇಶದ ನೆಡುತೋಪಿನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವರ ಮೇಲೆ ಏಕಾಏಕಿ ಕಾಡಾನೆ ದಾಳಿ ನಡೆಸಿದ ಪರಿಣಾಮ ತಲೆ ಹಾಗೂ ಸೊಂಟಕ್ಕೆ ಗಂಭೀರ ಗಾಯವಾದ ಘಟನೆ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಬಳಕ್ಕ ಎಂಬಲ್ಲಿ ನಡೆದಿದೆ. ಗಾಯಗೊಂಡ ವ್ಯಕ್ತಿಯನ್ನು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ರೇವಪ್ಪ ಎಂದು ಗುರುತಿಸಲಾಗಿದೆ. ಇವರು ನೆಡುತೋಪಿನಲ್ಲಿ ಗಿಡ ನೆಡುವ ಕೆಲಸ ಮಾಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಅರಣ್ಯ ಸಿಬ್ಬಂದಿಗಳು, ಗ್ರಾಮ

Breaking News ➤ ಕಡಬ: ಕಾಡಾನೆ ದಾಳಿ- ವ್ಯಕ್ತಿ ಗಂಭೀರ..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಸಂಭ್ರಮದ ಗಣರಾಜ್ಯೋತ್ಸವ ಆಚರಣೆ ➤ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಅಮೈ ಮಹಾಲಿಂಗ ಭಾಗಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 26. ದ.ಕ ಜಿಲ್ಲಾಡಳಿತದ ವತಿಯಿಂದ 73ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ನೆಹರೂ ಮೈದಾನದಲ್ಲಿ ಆಚರಿಸಲಾಯಿತು. ಧ್ವಜಾರೋಹಣವನ್ನು ನೆರವೇರಿಸಿದ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನೀಲ್ ಕುಮಾರ್ ಅವರು, ಗೌರವ ವಂದನೆ ಸ್ವೀಕರಿಸಿ, ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ ಡಾ. ರಾಜೇಂದ್ರಕೆ.ವಿ, ನಗರ ಪೊಲೀಸ್ ಆಯುಕ್ತ

ಮಂಗಳೂರು: ಸಂಭ್ರಮದ ಗಣರಾಜ್ಯೋತ್ಸವ ಆಚರಣೆ ➤ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಅಮೈ ಮಹಾಲಿಂಗ ಭಾಗಿ Read More »

ಕರಾವಳಿ, ಕರ್ನಾಟಕ

ಎಸ್‌ವೈ‌ಎಸ್ ಮಾಣಿ ಸೆಂಟರ್ ನಿಂದ ಗಣರಾಜ್ಯೋತ್ಸವ ಆಚರಣೆ

(ನ್ಯೂಸ್ ಕಡಬ) newskadaba.com ಮಾಣಿ, ಜ. 26. ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್‌ವೈ‌ಎಸ್ ಮಾಣಿ ಸೆಂಟರ್ ಹಾಗೂ ಎಸ್ಸೆಸ್ಸೆಫ್ ಎಸ್‌ವೈ‌ಎಸ್ ಸೂರಿಕುಮೇರು ಇದರ ವತಿಯಿಂದ ಇಲ್ಲಿನ ಸಂಜರಿ ಕಾಂಪ್ಲೆಕ್ಸ್ ವಠಾರದಲ್ಲಿ ದೇಶದ 73 ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಹೈದರ್ ಸಖಾಫಿ ಶೇರಾ ದುಆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಎಸ್‌ವೈ‌ಎಸ್ ಮಾಣಿ ಸೆಂಟರ್ ಅಧ್ಯಕ್ಷ ಸುಲೈಮಾನ್ ಸಅದಿ ಪಾಟ್ರಕೋಡಿ ಸ್ವಾಗತಿಸಿ, ಗಣರಾಜ್ಯೋತ್ಸವ ಭಾಷಣ ಮಾಡಿದರು. ಕೆಸಿಎಫ್ ರಿಯಾದ್ ಝೋನ್ ಸಂಘಟನಾ ಕಾರ್ಯದರ್ಶಿ ಮುಸ್ತಫಾ ಸಅದಿ ಸೂರಿಕುಮೇರು

ಎಸ್‌ವೈ‌ಎಸ್ ಮಾಣಿ ಸೆಂಟರ್ ನಿಂದ ಗಣರಾಜ್ಯೋತ್ಸವ ಆಚರಣೆ Read More »

ಕರಾವಳಿ, ಕರ್ನಾಟಕ

ಕಾರು- ಆಟೋ ರಿಕ್ಷಾ ನಡುವೆ ಅಪಘಾತ ➤ ಇಬ್ಬರು ಗಂಭೀರ..!

(ನ್ಯೂಸ್ ಕಡಬ) newskadaba.com ಕಾರ್ಕಳ, ಜ. 26. ಕಾರು ಹಾಗೂ ಆಟೋರಿಕ್ಷಾ ನಡುವೆ ಪರಸ್ಪರ ಢಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಮಿಯ್ಯಾರು ಚರ್ಚ್ ಬಳಿ ಬುಧವಾರದಂದು ಬೆಳಗ್ಗೆ ಸಂಭವಿಸಿದೆ. ಗಾಯಗೊಂಡ ಆಟೋ ಚಾಲಕ ಶೇಖರ್ ಮಡಿವಾಳ ಹಾಗೂ ಮತ್ತೋರ್ವ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ತೀವ್ರತೆಗೆ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನ ಮುಂಭಾಗಕ್ಕೆ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಕಾರ್ಕಳ ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  

ಕಾರು- ಆಟೋ ರಿಕ್ಷಾ ನಡುವೆ ಅಪಘಾತ ➤ ಇಬ್ಬರು ಗಂಭೀರ..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಗೂನಡ್ಕ: ಮುಹಿಯದ್ದೀನ್ ಜುಮ್ಮಾ ಮಸೀದಿಯಲ್ಲಿ ಗಣರಾಜ್ಯೋತ್ಸವ ಆಚರಣೆ

(ನ್ಯೂಸ್ ಕಡಬ) newskadaba.com ಸುಳ್ಯ, ಜ. 26. ಗಣರಾಜ್ಯೋತ್ಸವದ ಅಂಗವಾಗಿ ಮುಹಿಯದ್ದೀನ್ ಜುಮ್ಮಾ ಮಸ್ಜಿದ್ ವಠಾರದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಜಮಾಅತ್ ಖತೀಬರಾದ ಬಹು. ರಿಯಾಝ್ ಫೈಝಿ ಉಸ್ತಾದರು ದು:ವಾ ನೆರವೇರಿಸಿ ಗಣರಾಜ್ಯೋತ್ಸವದ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಸಹ ಅಧ್ಯಾಪಕರಾದ ಬಹು. ನೂರುದ್ದೀನ್ ಅನ್ಸಾರಿ ಉಸ್ತಾದರು, ಮದ್ರಸ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು, ಜಮಾಅತ್ ಪ್ರ. ಕಾರ್ಯದರ್ಶಿ ಟಿ.ಎಂ.ಅಬ್ದುಲ್ ರಝಾಕ್ ಹಾಜಿ, ಆಡಳಿತ ಕಮಿಟಿ ಸದಸ್ಯರುಗಳಾದ ಕಾರ್ಯದರ್ಶಿ ಜಿ.ಎಂ.ಇಬ್ರಾಹೀಂ ಪೇರಡ್ಕ, ಟಿ.ಬಿ.ಹನೀಫ್ ತೆಕ್ಕಿಲ್, ಹಕೀಂ ದರ್ಖಾಸ್, ಜಮಾಅತ್ ಸದಸ್ಯರುಗಳಾದ

ಗೂನಡ್ಕ: ಮುಹಿಯದ್ದೀನ್ ಜುಮ್ಮಾ ಮಸೀದಿಯಲ್ಲಿ ಗಣರಾಜ್ಯೋತ್ಸವ ಆಚರಣೆ Read More »

ಕರಾವಳಿ, ಕರ್ನಾಟಕ

ಕಡಬ: ಎಂಡೋಪೀಡಿತ ಯುವಕ ನಿಧನ

(ನ್ಯೂಸ್ ಕಡಬ) newskadaba.com ಕಡಬ, ಜ. 26. ಎಂಡೋಪೀಡಿತ ಸಂತ್ರಸ್ತ ಯುವಕನೋರ್ವ ಅನಾರೋಗ್ಯದಿಂದ ಮೃತಪಟ್ಟ ಘಟನೆ ವರದಿಯಾಗಿದೆ. ಮೃತ ಯುವಕನನ್ನು ಪೆರಾಬೆ ಗ್ರಾಮದ ಮನವಳಿಕೆ ನಿವಾಸಿ ಚಂದ್ರಾವತಿ ರೈ ಎಂಬವರ ಪುತ್ರ ಶಶಾಂಕ್ ಎಂದು ಗುರುತಿಸಲಾಗಿದೆ. ಈತ ಬಾಲ್ಯದಿಂದಲೇ ಎಂಡೋಪೀಡಿತನಾಗಿ ಹಾಸಿಗೆ ಹಿಡಿದಿದ್ದರೆನ್ನಲಾಗಿದೆ. ಮೃತರು ತಮ್ಮ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.  

ಕಡಬ: ಎಂಡೋಪೀಡಿತ ಯುವಕ ನಿಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ದುಬೈನಿಂದ ಮಂಗಳೂರಿಗೆ ಅಕ್ರಮ ಚಿನ್ನ ಸಾಗಾಟ ➤ ಆರೋಪಿ ಸಹಿತ ಚಿನ್ನ ವಶಕ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 26. ದುಬೈಯಿಂದ ಮಂಗಳೂರಿಗೆ ಬಂದ ಪ್ರಯಾಣಿಕನೋರ್ವ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದುದನ್ನು ತಪಾಸಣೆಯ ವೇಳೆ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ಪೇಸ್ಟ್ ರೂಪಕ್ಕೆ ಪರಿವರ್ತಿಸಿದ 29,14,160ರೂ. ಮೌಲ್ಯದ ಚಿನ್ನಾಭರಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.  

ದುಬೈನಿಂದ ಮಂಗಳೂರಿಗೆ ಅಕ್ರಮ ಚಿನ್ನ ಸಾಗಾಟ ➤ ಆರೋಪಿ ಸಹಿತ ಚಿನ್ನ ವಶಕ್ಕೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top