ಕರಾವಳಿ

ಶಿಕ್ಷಕರಿಗೆ ಫೇಸ್, ಲೊಕೇಶನ್ ಹಾಜರಾತಿ ಕಡ್ಡಾಯ! ಶಾಲೆಗೆ ತಡವಾಗಿ ಬರುವ ಶಿಕ್ಷಕರಿಗೆ ಶಾಕ್

(ನ್ಯೂಸ್‌ ಕಡಬ) newskadaba.com,  ಮೇ.31: ಇನ್ನು ಮುಂದೆ ಸರ್ಕಾರಿ ಶಾಲೆ ಶಿಕ್ಷಕರು, ಸಿಬ್ಬಂದಿ ನಾನಾ ಕಾರಣವೊಡ್ಡಿ ಶಾಲೆಗೆ ತಡವಾಗಿ ಬರುವಂತಿಲ್ಲ. ಶಾಲೆಗೆ ಚಕ್ಕರ್ ಹೊಡೆದು ಅಲ್ಲಲ್ಲಿ ಓಡಾಡುವಂತಿಲ್ಲ. ರಾಜ್ಯ ಶಿಕ್ಷಣ ಇಲಾಖೆ ಪ್ರಸಕ್ತ ವರ್ಷದಿಂದ ರಾಜ್ಯದ ಎಲ್ಲ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರಿಗೆ ಲೊಕೇಶನ್, ಫೇಸ್ ಆಧರಿತ ಹಾಜರಾತಿ ವ್ಯವಸ್ಥೆ ಅಳವಡಿಸಿದೆ. ನಿರ್ದಿಷ್ಟ ಸಮಯ ಮೀರಿ ಶಾಲೆಗೆ ಹಾಜರಾದರೆ ಆ ದಿನ ಆಕಸ್ಮಿಕ ರಜೆಯೆಂದೇ ಪರಿಗಣಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಕರ್ನಾಟಕ ಅಡ್ವಾನ್ಸ್‌ ಅಟೆಂಡೆನ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಕೆಎಎಎಂಎಸ್‌) ಆ್ಯಪ್‌ […]

ಶಿಕ್ಷಕರಿಗೆ ಫೇಸ್, ಲೊಕೇಶನ್ ಹಾಜರಾತಿ ಕಡ್ಡಾಯ! ಶಾಲೆಗೆ ತಡವಾಗಿ ಬರುವ ಶಿಕ್ಷಕರಿಗೆ ಶಾಕ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಳ್ಳಾರೆ | ಅಕ್ರಮ ಗೋವಧೆ: ಮೂವರು ಆರೋಪಿಗಳ ಬಂಧನ

(ನ್ಯೂಸ್‌ ಕಡಬ) newskadaba.com,  ಮೇ.31: ಅಕ್ರಮವಾಗಿ ಗೋವಧೆ ನಡೆಸಿ ಮಾಂಸ ಮಾಡುತ್ತಿದ್ದ ಆರೋಪದಡಿ ಮೂವರನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದು, ಜಾನುವಾರು ಮಾಂಸ ಸೇರಿದಂತೆ ಇತರೆ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮೇ 29ರಂದು ಸಂಜೆ ಅಕ್ರಮ ಗೋವಧೆ ನಡೆಯುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣೆಯ ಉಪನಿರೀಕ್ಷಕ ಸಂತೋಷ್ ಬಿ.ಪಿ. ಅವರು ಸಿಬ್ಬಂದಿಗಳೊಂದಿಗೆ ಕಡಬ ತಾಲೂಕಿನ ಸವಣೂರು ಗ್ರಾಮದ ಮಾಂತೂರು ಮುಂಡತಡ್ಕ ಪ್ರದೇಶಕ್ಕೆ ದಾಳಿ ನಡೆಸಿದರು. ಈ ವೇಳೆ ತೋಟವೊಂದರಲ್ಲಿ ಜಾನುವಾರನ್ನು ವಧೆ ಮಾಡಿ ಮಾಂಸ

ಬೆಳ್ಳಾರೆ | ಅಕ್ರಮ ಗೋವಧೆ: ಮೂವರು ಆರೋಪಿಗಳ ಬಂಧನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಜೂನ್ 1 ರಿಂದ ಬೆಂಗಳೂರು-ಮಂಗಳೂರು ವಂದೇ ಭಾರತ್ ಪ್ರಾಯೋಗಿಕ ಸಂಚಾರ; 5 ಗಂಟೆಗೆ ಇಳಿಕೆಯಾಗಲಿದೆ ಪ್ರಯಾಣದ ಅವಧಿ

(ನ್ಯೂಸ್‌ ಕಡಬ) com,  ಮೇ.30: ಕರಾವಳಿ ಜನತೆಯ ಬಹುದಿನಗಳ ಕನಸಾದ ಬೆಂಗಳೂರು-ಮಂಗಳೂರು ವಂದೇ ಭಾರತ್ಎಕ್ಸ್‌ಪ್ರೆಸ್ ರೈಲು ಸಂಚಾರ ಕೊನೆಗೂ ಆರಂಭವಾಗುತ್ತಿದ್ದು, ಜೂನ್ 1 ರಿಂದ ಪ್ರಾಯೋಗಿಕ ಸಂಚಾರ ಆರಂಭವಾಗಲಿದೆ. ಪ್ರಸ್ತುತ ಶಿರಾಡಿ ಘಾಟ್ ರಸ್ತೆಯ ಮೂಲಕ ರಾಜ್ಯ ರಾಜಧಾನಿ ಮತ್ತು ಮಂಗಳೂರಿಗೆ ಪ್ರಯಾಣಿಸಲು ಬೇಕಾಗುವ 8 ರಿಂದ 10 ಗಂಟೆಗಳ ಸಮಯವನ್ನು, ಈ ವಂದೇ ಭಾರತ್ ರೈಲಿನಿಂದ ಕೇವಲ 5 ಗಂಟೆಗಳಿಗೆ ಇಳಿಕೆಯಾಗಲಿದೆ. ಸಂಶೋಧನಾ ವಿನ್ಯಾಸಗಳು ಮತ್ತು ಗುಣಮಟ್ಟ ಸಂಸ್ಥೆ’ಯ ತಂಡವು ಈ ಹೈ-ಸ್ಪೀಡ್ ಪ್ರಾಯೋಗಿಕ ಕಾರ್ಯಾಚರಣೆಯನ್ನು

ಜೂನ್ 1 ರಿಂದ ಬೆಂಗಳೂರು-ಮಂಗಳೂರು ವಂದೇ ಭಾರತ್ ಪ್ರಾಯೋಗಿಕ ಸಂಚಾರ; 5 ಗಂಟೆಗೆ ಇಳಿಕೆಯಾಗಲಿದೆ ಪ್ರಯಾಣದ ಅವಧಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅಪಘಾತ ತಡೆಗಟ್ಟಲು ವಿಶೇಷ ಕಾರ್ಯಾಚರಣೆ: ರಾಷ್ಟ್ರೀಯ ಹೆದ್ದಾರಿ 169 ರಸ್ತೆಗೆ ಹೆಚ್ಚುವರಿಯಾಗಿ ಹೈವೇ ಪೆಟ್ರೋಲ್ ವಾಹನದ ನಿಯೋಜನೆ

(ನ್ಯೂಸ್‌ ಕಡಬ) newskadaba.com,  ಮೇ.30: ರಸ್ತೆ ಅಪಘಾತಗಳನ್ನು ತಡೆಗಟ್ಟುವ ಹಾಗೂ ದ್ವಿಚಕ್ರ ವಾಹನ ಸವಾರರ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಪೊಲೀಸ್ ಇಲಾಖೆಯ ವತಿಯಿಂದ ಕಳೆದ ಒಂದು ವಾರದ ಅವಧಿಯಲ್ಲಿ ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುವವರು ಮತ್ತು Wrong Side ವಾಹನ ಚಲಾಯಿಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ಇತ್ತೀಚಿನ ದಿನಗಳಲ್ಲಿ ದ್ವಿಚಕ್ರ ವಾಹನಗಳಿಗೆ ಸಂಬಂಧಿಸಿದ ಅಪಘಾತಗಳಲ್ಲಿ ತಲೆಗೆ ಗಂಭೀರ ಗಾಯಗಳಾಗಿ ಸಾವನ್ನಪ್ಪುವ ಹಾಗೂ ಗಂಭೀರವಾಗಿ ಗಾಯಗೊಳ್ಳುವ ಪ್ರಕರಣಗಳು ಹೆಚ್ಚುತ್ತಿರುವುದಾಗಿದೆ. ಇದೇ ರೀತಿಯಾಗಿ, ಸಮಯ ಉಳಿಸುವ ಉದ್ದೇಶದಿಂದ ಅಥವಾ

ಅಪಘಾತ ತಡೆಗಟ್ಟಲು ವಿಶೇಷ ಕಾರ್ಯಾಚರಣೆ: ರಾಷ್ಟ್ರೀಯ ಹೆದ್ದಾರಿ 169 ರಸ್ತೆಗೆ ಹೆಚ್ಚುವರಿಯಾಗಿ ಹೈವೇ ಪೆಟ್ರೋಲ್ ವಾಹನದ ನಿಯೋಜನೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ತಾಯಿ-ಮಗುವಿನ ಪ್ರಾಣ ಉಳಿಸಿದ ಸಿಟಿ ಬಸ್ ಸಿಬ್ಬಂದಿ; ಮಾನವೀಯತೆಗೆ ಸಾರ್ವಜನಿಕರ ಮೆಚ್ಚುಗೆ

(ನ್ಯೂಸ್‌ ಕಡಬ) newskadaba.com,  ಮೇ.30: ಚಲಿಸುತ್ತಿದ್ದ ಬಸ್ಸಿನಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದ ತಾಯಿ ಮತ್ತು ಮಗುವನ್ನು ಸಕಾಲದಲ್ಲಿ ಆಸ್ಪತ್ರೆಗೆ ಸಾಗಿಸುವ ಮೂಲಕ ಸಿಟಿ ಬಸ್ ಚಾಲಕ ಹಾಗೂ ನಿರ್ವಾಹಕರು ಮಾನವೀಯತೆ ಮೆರೆದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಅವರ ಈ ಸಮಯೋಚಿತ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಗರದ ಮರಕಡ ಜಂಕ್ಷನ್ ಸಮೀಪ ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿದ್ದ ಬಸ್ಸಿನಿಂದ ತಾಯಿ ಮತ್ತು ಮಗು ರಸ್ತೆಗೆ ಬಿದ್ದಿದ್ದರು. ಬಿದ್ದ ರಭಸಕ್ಕೆ ಇಬ್ಬರೂ ಯಾವುದೇ ಪ್ರತಿಕ್ರಿಯೆ

ತಾಯಿ-ಮಗುವಿನ ಪ್ರಾಣ ಉಳಿಸಿದ ಸಿಟಿ ಬಸ್ ಸಿಬ್ಬಂದಿ; ಮಾನವೀಯತೆಗೆ ಸಾರ್ವಜನಿಕರ ಮೆಚ್ಚುಗೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪ್ರವಾಸೋದ್ಯಮದಲ್ಲಿ ಎಐ ತಂತ್ರಜ್ಞಾನ, ವಿಮಾನ, ಹೋಟೆಲ್ ಬುಕ್ಕಿಂಗ್ ಇನ್ಮುಂದೆ ಮತ್ತಷ್ಟು ಸುಲಭ!

(ನ್ಯೂಸ್‌ ಕಡಬ) newskadaba.com,  ಮೇ.30: ಪ್ರಸ್ತುತ ಜಗತ್ತಿನಾದ್ಯಂತ ಕೃತಕ ಬುದ್ಧಿಮತ್ತೆ (Artificial Intelligence – AI) ತಂತ್ರಜ್ಞಾನವು ಹೊಸ ಅಲೆ ಸೃಷ್ಟಿಸುತ್ತಿದೆ. ಇದೀಗ ಇದೇ ಹಾದಿಯಲ್ಲಿ ಜಾಗತಿಕ ಪ್ರಯಾಣ ಮತ್ತು ಪ್ರವಾಸೋದ್ಯಮ (Travel and Tourism) ಕ್ಷೇತ್ರವನ್ನು ಸಂಪೂರ್ಣವಾಗಿ ಎಐ ಯುಗಕ್ಕೆ ಕೊಂಡೊಯ್ಯಲು ಜಾಗತಿಕ ಟೆಕ್ ದೈತ್ಯ ಸಂಸ್ಥೆ ‘ಕಾಗ್ನಿಜೆಂಟ್’ (Cognizant), ಪ್ರಮುಖ ಟ್ರಾವೆಲ್ ಮೂಲಸೌಕರ್ಯ ಒದಗಿಸುವ ‘ಟ್ರಾವೆಲ್‌ಪೋರ್ಟ್’ (Travelport) ಹಾಗೂ ಪ್ರಸಿದ್ಧ ಎಐ ಸಂಶೋಧನಾ ಸಂಸ್ಥೆ ‘ಆಂಥ್ರೋಪಿಕ್’ (Anthropic) ಕೈಜೋಡಿಸಿವೆ. ಹಳೆಯ ಮತ್ತು ಸಾಂಪ್ರದಾಯಿಕ ಟ್ರಾವೆಲ್

ಪ್ರವಾಸೋದ್ಯಮದಲ್ಲಿ ಎಐ ತಂತ್ರಜ್ಞಾನ, ವಿಮಾನ, ಹೋಟೆಲ್ ಬುಕ್ಕಿಂಗ್ ಇನ್ಮುಂದೆ ಮತ್ತಷ್ಟು ಸುಲಭ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು: 23 ವರ್ಷದ ಕಾರ್ಮಿಕ ಮುಡಿಪುವಿನಿಂದ ನಾಪತ್ತೆ – ಮಾಹಿತಿಗಾಗಿ ಪೊಲೀಸರ ಮನವಿ

(ನ್ಯೂಸ್‌ ಕಡಬ) newskadaba.com,  ಮೇ.30: ಮುಡಿಪುವಿನಲ್ಲಿ ತನ್ನ ಕೆಲಸದ ಸ್ಥಳದಿಂದ ಹೊರಟ ಬಳಿಕ ನಾಪತ್ತೆಯಾಗಿರುವ 23 ವರ್ಷದ ವ್ಯಕ್ತಿಯ ಬಗ್ಗೆ ಮಾಹಿತಿ ಕೋರಿ ಕೊಣಾಜೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪೀರಪ್ಪ ಸಲ್ಲಿಸಿರುವ ದೂರಿನ ಪ್ರಕಾರ, ಅವರ ಕಿರಿಯ ಸಹೋದರ ಸುರೇಶ್ ಮಂಗಳೂರಿನ ಮುಡಿಪುವಿನಲ್ಲಿ ಶ್ರೀ ಶುಭ ಸೇಲ್ಸ್ ವಾಟರ್ ಸಪ್ಲೈನಲ್ಲಿ ನೀರು ಶುದ್ಧೀಕರಣ ಕೆಲಸದಲ್ಲಿ ಕೆಲಸ ಮಾಡುತ್ತಿದ್ದರು. ಮೇ 16 ರ ಸಂಜೆ, ಸುರೇಶ್ ತನ್ನ ಸಹೋದ್ಯೋಗಿ ಫಕೀರಪ್ಪ ಅವರಿಗೆ ತನ್ನ ಊರಿಗೆ ಹೋಗುತ್ತಿರುವುದಾಗಿ ತಿಳಿಸಿದ್ದರು. ಮರುದಿನ, ಮೇ

ಮಂಗಳೂರು: 23 ವರ್ಷದ ಕಾರ್ಮಿಕ ಮುಡಿಪುವಿನಿಂದ ನಾಪತ್ತೆ – ಮಾಹಿತಿಗಾಗಿ ಪೊಲೀಸರ ಮನವಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

NEET ಪ್ರಶ್ನೆ ಪತ್ರಿಕೆ ಸಾಗಿಸಲು ಭಾರತೀಯ ವಾಯುಪಡೆ ಬಳಕೆ! ಇತಿಹಾಸದಲ್ಲೇ ಮೊದಲ ಬಾರಿಗೆ ಏರ್‌ಫೋರ್ಸ್‌ ಬಳಕೆ

ನಮ್ಮ ದೇಶದಲ್ಲಿ ಒಂದು ಫೇರ್ ಆದ, ಯಾವುದೇ ರೀತಿಯ ಕಳ್ಳಾಟವಿಲ್ಲದ ಎಕ್ಸಾಮ್ ಮಾಡೋದು ಇಷ್ಟೊಂದು ಕಷ್ಟದ ಕೆಲಸನಾ? ಈ ಪ್ರಶ್ನೆ ಈಗ ಪ್ರತಿಯೊಬ್ಬರ ಮನಸ್ಸಲ್ಲೂ ಕಾಡ್ತಾ ಇದೆ. ಮೇ 3ರಂದು ನಡೆದಿದ್ದ ನೀಟ್‌-ಯುಜಿ ಮೆಡಿಕಲ್ ಎಂಟ್ರೆನ್ಸ್ ಎಕ್ಸಾಮ್ ಪೇಪರ್ ಲೀಕ್ ಆಗಿ, ಪರೀಕ್ಷೆ ರದ್ದಾಗಿ, ಬರೋಬ್ಬರಿ 23 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿತ್ತು. ದೇಶಾದ್ಯಂತ ದೊಡ್ಡ ಮಟ್ಟದ ಪ್ರೊಟೆಸ್ಟ್ ಕೂಡ ನಡೀತು. ಇದರ ಬೆನ್ನಲ್ಲೇ ಈಗ ಜೂನ್ 21ಕ್ಕೆ NEET ಮರುಪರೀಕ್ಷೆ ನಡೆಸಲು ದಿನಾಂಕ ಫಿಕ್ಸ್

NEET ಪ್ರಶ್ನೆ ಪತ್ರಿಕೆ ಸಾಗಿಸಲು ಭಾರತೀಯ ವಾಯುಪಡೆ ಬಳಕೆ! ಇತಿಹಾಸದಲ್ಲೇ ಮೊದಲ ಬಾರಿಗೆ ಏರ್‌ಫೋರ್ಸ್‌ ಬಳಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಐಟಿ ದಾಳಿ ಪ್ರಕರಣ: ಡಿಕೆ ಶಿವಕುಮಾರ್ಗೆ ಕೋರ್ಟ್ ಬಿಗ್ ರಿಲೀಫ್

(ನ್ಯೂಸ್‌ ಕಡಬ) newskadaba.com,  ಮೇ.29:  ತೆರಿಗೆ ವಂಚನೆ ಸಂಬಂಧ ಐಟಿ ದಾಳಿ ಪ್ರಕರಣದಲ್ಲಿ ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ವಿಧಿಸಲಾಗಿದ್ದ ಜಾಮೀನು ಷರತ್ತನ್ನು ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯ ಸಡಿಲಿಸಿದೆ. ಕೋರ್ಟ್ ಅನುಮತಿ ಇಲ್ಲದೇ ದೇಶ ಬಿಟ್ಟು ತೆರಳುವಂತಿಲ್ಲವೆಂದು ವಿಧಿಸಲಾಗಿದ್ದ ಷರತ್ತು ಸಡಿಲಿಕೆ ಮಾಡಿದೆ. ಸಚಿವರಾಗಿ ಅಧಿಕೃತ ಕೆಲಸ ಹಾಗೂ ವೈಯಕ್ತಿಕ ಉದ್ಯಮದ ನಿಮಿತ್ತ ಮುಂದಿನ ಎರಡು ವರ್ಷಗಳ ಕಾಲ ವಿವಿಧ ದೇಶಗಳಿಗೆ ಪ್ರವಾಸ ಕೈಗೊಳ್ಳಲು ಅನುಮತಿ ನೀಡಿದೆ. ಆದರೆ, ಪ್ರತಿ ಬಾರಿಯೂ ಪ್ರವಾಸದ ಸಂಪೂರ್ಣ

ಐಟಿ ದಾಳಿ ಪ್ರಕರಣ: ಡಿಕೆ ಶಿವಕುಮಾರ್ಗೆ ಕೋರ್ಟ್ ಬಿಗ್ ರಿಲೀಫ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಧರ್ಮಸ್ಥಳ| ಯಾತ್ರಾರ್ಥಿ ವೃದ್ಧೆಗೆ ಪ್ರಜ್ಞೆ ತಪ್ಪುವ ಪದಾರ್ಥ ನೀಡಿ 10 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ

(ನ್ಯೂಸ್‌ ಕಡಬ) newskadaba.com,  ಮೇ.29:  ಧರ್ಮಸ್ಥಳದಲ್ಲಿ ಯಾತ್ರಾರ್ಥಿ ವೃದ್ಧೆಗೆ ಪ್ರಜ್ಞೆ ತಪ್ಪುವ ಔಷಧಿ ನೀಡಿ ದರೋಡೆ ಮಾಡಿರುವ ಘಟನೆ ನಡೆದಿದೆ. 70 ವರ್ಷದ ಮಹಿಳೆಯಿಂದ 10 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ. ಬೆಂಗಳೂರು ಬನ್ನೇರುಘಟ್ಟ ಮೂಲದ ಪ್ರೇಮಾ ಕೆ. ಮೋಸ ಹೋದ ವೃದ್ಧೆ. ಅಪರಿಚಿತರು ಪ್ರಸಾದ, ಜ್ಯೂಸ್ ನೀಡಿ ಪರಿಚಯ ಬೆಳೆಸಿ ಕೃತ್ಯ ಎಸಗಿದ್ದಾರೆ. 112 ಗ್ರಾಂ ಚಿನ್ನಾಭರಣ, 7 ಸಾವಿರ ನಗದು ಕಳವು ಮಾಡಲಾಗಿದೆ. ದೇವಸ್ಥಾನದ ಮುಖ್ಯದ್ವಾರದ ಬಸ್ ನಿಲ್ದಾಣದ ಬಳಿ ಘಟನೆ ನಡೆದಿದೆ…

ಧರ್ಮಸ್ಥಳ| ಯಾತ್ರಾರ್ಥಿ ವೃದ್ಧೆಗೆ ಪ್ರಜ್ಞೆ ತಪ್ಪುವ ಪದಾರ್ಥ ನೀಡಿ 10 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top