ಕರಾವಳಿ

ಸಬಳೂರು: ತುಳುಸಂಸ್ಕೃತಿಯ ಪುನರುತ್ಥಾನಕ್ಕೆಮುನ್ನುಡಿ ಬರೆಯಬೇಕು – ಉಮೇಶ್ ಶೆಟ್ಟಿ

(ನ್ಯೂಸ್ ಕಡಬ) newskadaba.com ಕಡಬ, ಆ .14, ನಮ್ಮ ಹಿರಿಯರ ಕಾಲದಲ್ಲಿ ಬಡತನವಿದ್ದರೂ ಸಂಸ್ಕೃತಿಯ ಆಚರಣೆಯಲ್ಲಿ ವೈಭವವಿತ್ತು, ಆದರೆ ನಮಗೆ ಇಂದು ಸಿರಿತನ ವಿದ್ದರೂ ನಮ್ಮ ಸಂಸ್ಕೃತಿಯ ಆಚರಣೆಯಲ್ಲಿ ಬಡತನವಿದೆ ಎಂದು ನೂಜಿಬಾಳ್ತಿಲ ತೆಗರ್ ತುಳುಕೂಟದ ಸಂಚಾಲಕ ಉಮೇಶ್ ಶೆಟ್ಟಿ ಸಾಯಿರಾಂ ಹೇಳಿದರು. ಅವರು ಭಾನುವಾರ ಕೊೖಲ ಗ್ರಾಮದ ಸಬಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸಬಳೂರು ರಾಣಿ ಅಬ್ಬಕ್ಕ ಜ್ಞಾನವಿಕಾಸ ಕೇಂದ್ರದ ವತಿಯಿಂದ ನಡೆದ ಆಟಿಡೊಂಜಿ ದಿನ […]

ಸಬಳೂರು: ತುಳುಸಂಸ್ಕೃತಿಯ ಪುನರುತ್ಥಾನಕ್ಕೆಮುನ್ನುಡಿ ಬರೆಯಬೇಕು – ಉಮೇಶ್ ಶೆಟ್ಟಿ Read More »

ಕರಾವಳಿ

ಕುಟ್ರುಪಾಡಿ: ಗ್ರಾ.ಪಂ.ನಲ್ಲಿ ಪೈಪು ಖರೀದಿ ಅವ್ಯವಹಾರ ಪ್ರಕರಣ; ಹಿಂದಿನ ಪಿಡಿಒರವರಿಗೆ ನಿರೀಕ್ಷಣಾ ಜಾಮೀನು

(ನ್ಯೂಸ್ ಕಡಬ) newskadaba.com ಕಡಬ, ಆ .14. ಕುಟ್ರುಪಾಡಿ ಗ್ರಾಮ ಪಂಚಾಯತ್ನಲ್ಲಿ ಕಾಂಪೋಸ್ಟ್‌ ಪೈಪ್ ಖರೀದಿಯಲ್ಲಿ ನಡೆದಿರುವ ಅವ್ಯವಹಾರ ಪ್ರಕರಣದಲ್ಲಿ ಜಿಲ್ಲಾ ಭ್ರಷ್ಟಚಾರ ದಳದಿಂದ ಕೇಸು ದಾಖಲಿಸಿಲ್ಪಟ್ಟ ಅಂದಿನ ಪ್ರಭಾರ ಪಿಡಿಒ ವಸಂತಿಯವರಿಗೆ ಮಂಗಳೂರು 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಕುಟ್ರುಪಾಡಿ ಗ್ರಾ.ಪಂ.ನಲ್ಲಿ 2015ರಲ್ಲಿ ನಿರ್ಮಲ ಗ್ರಾಮ ಯೋಜನೆಯಡಿಯಲ್ಲಿ ಕಾಂಪೋಸ್ಟ್‌ ಪೈಪ್ ಖರೀದಿಯ ಸಂದರ್ಭದಲ್ಲಿ ನಕಲಿ ಬಿಲ್, ಟಿನ್ ನಂಬರ್ ಬಳಸಿ ಪೈಪ್ ಖರೀದಿಸಲಾಗಿದೆ ಎಂದು ಗ್ರಾ.ಪಂ. ಮಾಜಿ ಸದಸ್ಯ ಕ್ಷೇವಿಯರ್

ಕುಟ್ರುಪಾಡಿ: ಗ್ರಾ.ಪಂ.ನಲ್ಲಿ ಪೈಪು ಖರೀದಿ ಅವ್ಯವಹಾರ ಪ್ರಕರಣ; ಹಿಂದಿನ ಪಿಡಿಒರವರಿಗೆ ನಿರೀಕ್ಷಣಾ ಜಾಮೀನು Read More »

ಕರಾವಳಿ

ಕಡಬ: ಅಖಂಡ ಭಾರತ ಸಂಕಲ್ಪ ದಿನ – ಪಂಜಿನ ಮೆರವಣಿಗೆ

(ನ್ಯೂಸ್ ಕಡಬ) newskadaba.com ಕಡಬ, ಆ .14, ಹಿಂದು ಜಾಗರಣ ವೇದಿಕೆ ಕಡಬ ತಾಲೂಕು ವತಿಯಿಂದ ದೇಶ ವಿಭಜನೆಯ ಕರಾಳ ದಿನವನ್ನು ನೆನಪಿಸುವ ಅಖಂಡ ಭಾರತ ಸಂಕಲ್ಪ ದಿನ-ಪಂಜಿನ ಮೆರವಣಿಗೆ ಕಾರ್ಯಕ್ರಮ ಆದಿತ್ಯವಾರ ರಾತ್ರಿ ಕಡಬದಲ್ಲಿ ನಡೆಯಿತು. ಕಡಬ ಎಪಿಎಂಸಿ ಸಂತೆ ಮಾರುಕಟ್ಟೆ ಬಳಿಯಿಂದ ಪ್ರಾರಂಭವಾದ ಪಂಜಿನ ಮೆರವಣಿಗೆ ಕಡಬ ಪೇಟೆಯಲ್ಲಿ ಸಾಗಿ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಮೈದಾನದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮವನ್ನು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ವಿಟ್ಲ ತಾಲೂಕು ಹಿಂದೂ

ಕಡಬ: ಅಖಂಡ ಭಾರತ ಸಂಕಲ್ಪ ದಿನ – ಪಂಜಿನ ಮೆರವಣಿಗೆ Read More »

ಕರಾವಳಿ

ಪುತ್ತೂರು: ನವವಿವಾಹಿತ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಪುತ್ತೂರು, ಆ.14. ಕಳೆದ ಎಪ್ರಿಲ್ ತಿಂಗಳಿನಲ್ಲಿ ಮದುವೆಯಾಗಿದ್ದ ನವ ವಿವಾಹಿತ ವ್ಯಕ್ತಿಯೊಬ್ಬರು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿಗೆ ಸಮೀಪದ ಬೀರುಮಲೆ ಗುಡ್ಡದಲ್ಲಿ ಭಾನುವಾರದಂದು ಕಂಡುಬಂದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಕೋಡಿಂಬಾಡಿ ಗ್ರಾಮದ ನಿಡ್ಯ ನಿವಾಸಿ ಕೇಶವ ಗೌಡ (30) ಎಂದು ಗುರುತಿಸಲಾಗಿದೆ. ಬಡಗಿ ಕೆಲಸ ಮಾಡುತ್ತಿದ್ದ ಕೇಶವ ಕೆಲಸದ ನಿಮಿತ್ತ ಶನಿವಾರದಂದು ಬೆಳಗ್ಗೆ ಮನೆಯಿಂದ ಹೊರ ಹೋದವರು ರಾತ್ರಿಯಾದರೂ ಮನೆಗೆ ಆಗಮಿಸಿದೇ ಇದ್ದಾಗ ಮನೆಯವರು ಹುಡುಕಾಟ ಆರಂಭಿಸಿದ್ದರು. ಭಾನುವಾರದಂದು ಬೆಳಗ್ಗೆ

ಪುತ್ತೂರು: ನವವಿವಾಹಿತ ಆತ್ಮಹತ್ಯೆ Read More »

ಕರಾವಳಿ

ಅರ್ಕುಳ: ಬೈಕ್, ರಿಕ್ಷಾ ಬೆಂಕಿಗಾಹುತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.12. ಇಲ್ಲಿಗೆ ಸಮೀಪದ ಅರ್ಕುಳ ಎಂಬಲ್ಲಿ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಆಟೋ ರಿಕ್ಷಾ ಹಾಗೂ ಬೈಕ್ ಬೆಂಕಿಗಾಹುತಿಯಾದ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಅರ್ಕುಳ ಕೋಟೆಪುರ ನಿವಾಸಿ ಎ.ಕೆ.ರಹ್ಮತುಲ್ಲಾ ಎಂಬವರಿಗೆ ಸೇರಿದ ಅಟೋರಿಕ್ಷಾ ಮತ್ತು ಅವರ ಸಹೋದರರಾದ ಎ.ಕೆ.ಅನ್ಸಾರ್ ಅಲಿ, ಎಕೆ ಹಾಶಿರ್ ಅಲಿ ಎಂಬವರಿಗೆ ಸೇರಿದ ದ್ವಿಚಕ್ರ ವಾಹನಗಳು ಸಂಪೂರ್ಣ ಬೆಂಕಿಗಾಹುತಿಯಾಗಿವೆ. ಅವರು ಎಂದಿನಂತೆ ತಮ್ಮ ಮನೆಯ ಅಂಗಳದಲ್ಲಿ ಪಾರ್ಕ್ ಮಾಡಿದ್ದರೆನ್ನಲಾಗಿದೆ. ತಡರಾತ್ರಿ ನೆರೆಕರೆಯವರು ವಾಹನಕ್ಕೆ ಬೆಂಕಿ ಹೊತ್ತಿದ್ದನ್ನು ಕಂಡು

ಅರ್ಕುಳ: ಬೈಕ್, ರಿಕ್ಷಾ ಬೆಂಕಿಗಾಹುತಿ Read More »

ಕರಾವಳಿ

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಡಬ ವಲಯದ ಕ್ರಿಡೋತ್ಸವ

(ನ್ಯೂಸ್ ಕಡಬ) newskadaba.com ಕಡಬ, ಆ.12. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಡಬ ವಲಯದ ವತಿಯಿಂದ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಈದ್-ಮಿಲನ್ (ಕ್ರಿಡೋತ್ಸವ) ಕಾರ್ಯಕ್ರಮವು ಕಳಾರದ ಮೈದಾನದಲ್ಲಿ ಇತ್ತೀಚೆಗೆ ಜರಗಿತು. ಕಾರ್ಯಕ್ರಮದಲ್ಲಿ ಹಗ್ಗ ಜಗ್ಗಾಟ, ಕೆಸರಿನಲ್ಲಿ ಓಟ ಸೇರಿದಂತೆ ಸುಮಾರು ಎಂಟು ರೀತಿಯ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಪಿಎಫ್ಐ ಸದಸ್ಯರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕಾರ್ಯಕ್ರಮವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಡಬ ವಲಯಾಧ್ಯಕ್ಷರಾದ ಬಶೀರ್ ಕೊರುಂದೂರು ಫಾತಿಹಾದೊಂದಿಗೆ ಉದ್ಘಾಟಿಸಿದರು. ಪಿಎಫ್ಐ ನೆಲ್ಯಾಡಿ ವಿಭಾಗದ ಅಧ್ಯಕ್ಷರು ಸಾದಿಕ್ ಅತ್ತಾಜೆ ವಂದಿಸಿದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಡಬ ವಲಯದ ಕ್ರಿಡೋತ್ಸವ Read More »

ಕರಾವಳಿ

ಕಲ್ಲಡ್ಕ ಭಟ್ ಅಧೀನದ ಶಾಲಾ ಅನುದಾನ ರದ್ದು ► ರಾಜ್ಯ ಸರಕಾರದ ವಿರುದ್ಧ ತಟ್ಟೆ ಹಿಡಿದು ವಿದ್ಯಾರ್ಥಿಗಳಿಂದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಆ.11. ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರ ಮತ್ತು ಪುಣಚ ಶ್ರೀದೇವಿ ಶಾಲೆಗಳಿಗೆ ಕೊಲ್ಲೂರು ಮೂಕಾಂಬಿಕಾ ದೇವಾಲಯದಿಂದ ದತ್ತು ಯೋಜನೆಯಡಿ ನೀಡಲಾಗುತ್ತಿದ್ದ ಅನುದಾನವನ್ನು ರದ್ದುಗೊಳಿಸಿರುವ ರಾಜ್ಯ ಸರಕಾರದ ನಿಲುವನ್ನು ಖಂಡಿಸಿ ಶುಕ್ರವಾರದಂದು ವಿದ್ಯಾರ್ಥಿಗಳು ಮತ್ತು ಪೋಷಕರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ಮುಂಭಾಗದಲ್ಲಿ ಬಟ್ಟಲು ಹಿಡಿದು ಪ್ರತಿಭಟನೆಗೆ ಕುಳಿತ ವಿದ್ಯಾರ್ಥಿಗಳಿಗೆ ಪೋಷಕರು, ಸಂಘಟನೆಯ ಮುಖಂಡರು ಸಾಥ್ ನೀಡಿದರು. ವಿವಿಧ ತರಗತಿಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮಾತನಾಡಿ ಸಿದ್ದರಾಮಯ್ಯ ಸರಕಾರದ

ಕಲ್ಲಡ್ಕ ಭಟ್ ಅಧೀನದ ಶಾಲಾ ಅನುದಾನ ರದ್ದು ► ರಾಜ್ಯ ಸರಕಾರದ ವಿರುದ್ಧ ತಟ್ಟೆ ಹಿಡಿದು ವಿದ್ಯಾರ್ಥಿಗಳಿಂದ ಪ್ರತಿಭಟನೆ Read More »

ಕರಾವಳಿ

ಬೋಳಿಯಾರು: ಬಿಜೆಪಿ ಸಭೆಯಲ್ಲಿ ಮುಸ್ಲಿಂ ಧರ್ಮಗುರುಗಳು ಭಾಗಿ ► ಭಾಷಣ ಮಾಡಿದ ಧರ್ಮಗುರುಗಳಿಗೆ ಜೀವ ಬೆದರಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.11. ಸ್ವಾಮೀಜಿಗಳು, ಯೋಗಿಗಳು ಮುಖ್ಯಮಂತ್ರಿಯಾಗುತ್ತಾರೆ. ಆದರೆ ಮುಸ್ಲಿಮರಲ್ಲಿರುವ ಉಸ್ತಾದರುಗಳು, ಧಾರ್ಮಿಕ ಮುಂದಾಳುಗಳು ಕನಿಷ್ಠ ಗ್ರಾಮ ಪಂಚಾಯತ್ ಹಂತಕ್ಕೆ ಕೂಡಾ ತಲುಪುತ್ತಿಲ್ಲ. ಇದು ನಿಜಕ್ಕೂ ವಿಷಾದನೀಯವಾಗಿದ್ದು, ಇದಕ್ಕಾಗಿ ನಿಮಗೆ ಭಾರತೀಯ ಜನತಾ ಪಾರ್ಟಿಯು ವೇದಿಕೆ ಕಲ್ಪಿಸಿ ಕೊಡುತ್ತದೆ ಎಂದು ಫಝಲ್ ಅಸೈಗೋಳಿ ಹೇಳಿದರು. ಅವರು ಗುರುವಾರದಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಛಾ ವತಿಯಿಂದ ಬೋಳಿಯಾರಿನಲ್ಲಿ ನಡೆದ ಮುಸ್ಲಿಮ್ ಧಾರ್ಮಿಕ ಗುರುಗಳ ಸಭೆಯಲ್ಲಿ ಮಾತನಾಡುತ್ತಿದ್ದರು. ಮುಸ್ಲಿಮರಿಗೆ ಬಿಜೆಪಿ ಎಂದರೆ ಆಗುವುದಿಲ್ಲ. ಕಾಂಗ್ರೆಸ್ ಅಂಥಹಾ ಒಂದು ಮನೋಭಾವವನ್ನು

ಬೋಳಿಯಾರು: ಬಿಜೆಪಿ ಸಭೆಯಲ್ಲಿ ಮುಸ್ಲಿಂ ಧರ್ಮಗುರುಗಳು ಭಾಗಿ ► ಭಾಷಣ ಮಾಡಿದ ಧರ್ಮಗುರುಗಳಿಗೆ ಜೀವ ಬೆದರಿಕೆ Read More »

ಕರಾವಳಿ

ಕಳಾರ: ಬೈಕ್ – ಆ್ಯಕ್ಟಿವಾ ಢಿಕ್ಕಿ ► ಸವಾರರಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಆ.09. ಉಪ್ಪಿನಂಗಡಿ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಳಾರ ಎಂಬಲ್ಲಿ ಬೈಕ್ ಹಾಗೂ ಹೋಂಡಾ ಆ್ಯಕ್ಟಿವಾ ಮಧ್ಯೆ ಢಿಕ್ಕಿ ಸಂಭವಿಸಿ ಸವಾರರಿಬ್ಬರು ಗಾಯಗೊಂಡ ಘಟನೆ ಬುಧವಾರ ಅಪರಾಹ್ನ ನಡೆದಿದೆ. ಘಟನೆಯಲ್ಲಿ ಹೋಂಡಾ ಆ್ಯಕ್ಟಿವಾ ಸವಾರ ಕಡಬ ಕುಟ್ರುಪ್ಪಾಡಿ ನಿವಾಸಿ ಪದ್ಮಯ್ಯ ಗೌಡ(48) ಹಾಗೂ ಬೈಕ್ ಸವಾರ ಕಾಣಿಯೂರು ಸಮೀಪದ ಬರೆಪ್ಪಾಡಿ ಕಾೖಮಣ ನಿವಾಸಿ ಪದ್ಮಯ್ಯ(55) ರವರು ಗಾಯಗೊಂಡಿದ್ದು, ಪುತ್ತೂರಿನ ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕಳಾರ: ಬೈಕ್ – ಆ್ಯಕ್ಟಿವಾ ಢಿಕ್ಕಿ ► ಸವಾರರಿಗೆ ಗಾಯ Read More »

ಕರಾವಳಿ

ಕಾವ್ಯಾ ಸಾವಿಗೆ ನ್ಯಾಯ ದೊರಕಿಸುವಂತೆ ಆಗ್ರಹ ► ಜಿಲ್ಲಾಧಿಕಾರಿ ಕಛೇರಿ ಮುಂದೆ ಬೃಹತ್ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.09. ಮೂಡಬಿದಿರೆ ಆಳ್ವಾಸ್ ಕಾಲೇಜು ವಿದ್ಯಾರ್ಥಿನಿ ಕಾವ್ಯಾ ಪೂಜಾರಿಯ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿ 30ಕ್ಕೂ ಅಧಿಕ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ‘ಜಸ್ಟೀಸ್ ಫಾರ್ ಕಾವ್ಯಾ’ ಹೋರಾಟ ಸಮಿತಿ ದ.ಕ. ಜಿಲ್ಲೆಯ ವತಿಯಿಂದ ಮಂಗಳೂರಿನಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರದಂದು ಬೃಹತ್ ಪ್ರತಿಭಟನೆ ನಡೆಯಿತು. ಜ್ಯೋತಿ ವೃತ್ತದಿಂದ ಡಿಸಿ ಕಚೇರಿವರೆಗೆ ನಡೆದ ಮೆರವಣಿಗೆಯಲ್ಲಿ ಹಲವು ಕಾಲೇಜುಗಳ ವಿದ್ಯಾರ್ಥಿಗಳು, ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ಕಾವ್ಯಾ ಸಾವಿನ ಪ್ರಕರಣದ

ಕಾವ್ಯಾ ಸಾವಿಗೆ ನ್ಯಾಯ ದೊರಕಿಸುವಂತೆ ಆಗ್ರಹ ► ಜಿಲ್ಲಾಧಿಕಾರಿ ಕಛೇರಿ ಮುಂದೆ ಬೃಹತ್ ಪ್ರತಿಭಟನೆ Read More »

ಕರಾವಳಿ
Scroll to Top