ಕರಾವಳಿ

ಪುತ್ತೂರು: ಚಲಿಸುತ್ತಿದ್ದ ಬಸ್ ನಲ್ಲಿ ಹಠಾತ್ತನೆ ಕಾಣಿಸಿಕೊಂಡ ಬೆಂಕಿ ➤ ತಪ್ಪಿದ ದುರಂತ

(ನ್ಯೂಸ್ ಕಡಬ) newskadaba.com ಪುತ್ತೂರು, ಜು. 06. ಚಲಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನ ಇಂಜಿನ್ ನಲ್ಲಿ ಹಠಾತ್ತನೆ ಬೆಂಕಿ ಕಾಣಿಸಿಕೊಂಡ ಘಟನೆ ಇಲ್ಲಿನ ಮುಖ್ಯರಸ್ತೆಯ ಮಯೂರ ಚಿತ್ರಮಂದಿರದ ಬಳಿ ನಡೆದಿದೆ.   ತಕ್ಷಣವೇ ಸಮೀಪದ ಟಾಟಾ ಸಂಸ್ಥೆಯ ಸಹಾಯದಿಂದ ಅಗ್ನಿಶಾಮಕ ದಳದ ಸಿಬ್ಬಂದಿಗಳ ಸಹಕಾರದಿಂದ ಇಂಜಿನ್ ನಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನಂದಿಸಿದ್ದಾರೆ ಎನ್ನಲಾಗಿದೆ. ಇಂಜಿನ್ ನಲ್ಲಿನ ಬ್ಯಾಟರಿ ಸಮಸ್ಯೆಯಿಂದಾಗಿ ಈ ಘಟನೆ ಸಂಭವಿಸಿದೆನ್ನಲಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಪುತ್ತೂರು: ಚಲಿಸುತ್ತಿದ್ದ ಬಸ್ ನಲ್ಲಿ ಹಠಾತ್ತನೆ ಕಾಣಿಸಿಕೊಂಡ ಬೆಂಕಿ ➤ ತಪ್ಪಿದ ದುರಂತ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು: ಫಾಸ್ಟ್ ಪುಡ್ ಅಂಗಡಿಯಲ್ಲಿ ಬೆಂಕಿ ಅವಘಡ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 06. ಇಲ್ಲಿನ ಮೇರಿಹಿಲ್ ಎಂಬಲ್ಲಿ ಫಾಸ್ಟ್ ಫುಡ್ ಅಂಗಡಿಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ವರದಿಯಾಗಿದೆ. ಚಂದು ಬಿರಿಯಾನಿ ಸ್ಪಾಟ್ ಎಂಬ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಮಂಗಳೂರು: ಫಾಸ್ಟ್ ಪುಡ್ ಅಂಗಡಿಯಲ್ಲಿ ಬೆಂಕಿ ಅವಘಡ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅರಂತೋಡು SKSBV ವತಿಯಿಂದ ಅನ್ನುಜೂಂ ಬಕ್ರೀದ್ ಹಬ್ಬದ ವಿಶೇಷಾಂಕ ಬಿಡುಗಡೆ

(ನ್ಯೂಸ್ ಕಡಬ) newskadaba.com ಅರಂತೋಡು, ಜು. 06. ಸಮಸ್ತ ಕೇರಳ ಸುನ್ನಿ ಬಾಲ ವೇದಿ ನುಸ್ರತುಲ್ ಇಸ್ಲಾಂ ಮದರಸ ಅರಂತೋಡು ಇದರ ವತಿಯಿಂದ ನುಸ್ರತುಲ್ ಇಸ್ಲಾಂ ಮದರಸ ಅಧ್ಯಾಪಕ ಸ-ಅದ್ ಫೈಝಿ ಸಂಪಾದಕತ್ವದ ಅನ್ನುಜೂಂ ಬಕ್ರೀದ್ ಹಬ್ಬದ ವಿಶೇಷಾಂಕವನ್ನು ಅರಂತೋಡು ತೆಕ್ಕಿಲ್ ಪ್ರತಿಷ್ಠಾನ ಸ್ಥಾಪಕಾಧ್ಯಕ್ಷರಾದ ಟಿ.ಎಮ್.ಶಹೀದ್ ತೆಕ್ಕಿಲ್ ಬಿಡುಗಡೆಗೊಳಿಸಿದರು. ಅರಂತೋಡು ಜುಮ್ಮಾ ಮಸೀದಿ ಖತೀಬರಾದ ಬಹು ಅಲ್ ಹಾಜ್ ಇಸ್ಹಾಖ್ ಬಾಖವಿ ದುವಾ ನೆರವೇರಿಸಿದರು. ಜಮಾಅತ್ ಅಧ್ಯಕ್ಷರಾದ ಅಶ್ರಫ್ ಗುಂಡಿ ಅಧ್ಯಕ್ಷತೆಯನ್ನು ವಹಿಸಿದ್ದರು. ಸದರ್ ಸಹದ್ ಫೈಝಿ

ಅರಂತೋಡು SKSBV ವತಿಯಿಂದ ಅನ್ನುಜೂಂ ಬಕ್ರೀದ್ ಹಬ್ಬದ ವಿಶೇಷಾಂಕ ಬಿಡುಗಡೆ Read More »

ಕರಾವಳಿ, ಕರ್ನಾಟಕ

ಕಡಬ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ➤ ಇಬ್ಬರು ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಜು.06. ಚಾಲಕನ ನಿಯಂತ್ರಣ ತಪ್ಪಿದ ಮಾರುತಿ ಸೆಲೆರಿಯೋ ಕಾರೊಂದು ಪಲ್ಟಿಯಾದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ಸಮೀಪದ ಹಳೇಸ್ಟೇಷನ್ ಎಂಬಲ್ಲಿ ಬುಧವಾರದಂದು ನಡೆದಿದೆ. ಗಾಯಾಳುಗಳನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.    

ಕಡಬ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ➤ ಇಬ್ಬರು ಗಂಭೀರ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಮಂಗಳೂರು: ಜು. 16ರಂದು ಬೃಹತ್ “ಗರ್ಲ್ಸ್ ಕಾನ್ಫರೆನ್ಸ್” ಸಮಾವೇಶ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 06. ದೇಶವು ಸ್ವತಂತ್ರಗೊಂಡು 75ನೇ ವರ್ಷದ ಆಚರಣೆಯ ಹೊಸ್ತಿಲಲ್ಲಿ ನಾವಿದ್ದೇವೆ. ಈ ಸಂದರ್ಭದಲ್ಲಿ, ದೇಶದ ಸಂವಿಧಾನವನ್ನು ಪ್ರತಿಪಾದಿಸುವ ಮೂಲ ಮೌಲ್ಯಗಳನ್ನು ಅಧಿಕಾರದಲ್ಲಿರುವ ಸರಕಾರವೇ ನಾಶಪಡಿಸಲು ಪಣತೊಟ್ಟಿದೆ. ಅಧಿಕಾರದಲ್ಲಿರುವ ಬಿಜೆಪಿ ಕೇವಲ ಧರ್ಮದ, ಜಾತಿಯ ಹೆಸರಲ್ಲಿ ಕೋಮುವಾದವನ್ನು ಬಿತ್ತಿ ಜನರ ಮನಸ್ಸುಗಳನ್ನು ಕಲುಷಿತಗೊಳಿಸಿ ತನ್ನ ರಾಜಕೀಯ ಅಸ್ತಿತ್ವವನ್ನು ಭದ್ರಗೊಳಿಸಲು ಹಪಹಪಿಸುತ್ತಿದೆ. ಒಂದು ಜವಾಬ್ದಾರಿಯುತ ಸರಕಾರದ ಇಂತಹ ಅವಿವೇಕ, ಅಸಂವಿಧಾನಿಕ ಮತ್ತು ಬೇಜವಾಬ್ದಾರಿತನದ ನಡೆಯಿಂದ ಹೆಚ್ಚಾಗಿ ಅನ್ಯಾಯಕ್ಕೊಳಗಾಗೋದು, ಬಲಿಪಶುಗಳಾಗೋದು ಮಹಿಳೆಯರು. ದೇಶದ ಉದ್ದಗಲಕ್ಕೂ

ಮಂಗಳೂರು: ಜು. 16ರಂದು ಬೃಹತ್ “ಗರ್ಲ್ಸ್ ಕಾನ್ಫರೆನ್ಸ್” ಸಮಾವೇಶ Read More »

ಕರಾವಳಿ, ಕರ್ನಾಟಕ

ನೇತ್ರಾವತಿ ನದಿಯಲ್ಲಿ ನೀರುಪಾಲಾದ ಯುವಕನ ಮೃತದೇಹ ಉಳ್ಳಾಲದಲ್ಲಿ ಪತ್ತೆ..!!

(ನ್ಯೂಸ್ ಕಡಬ) newskadaba.com ಉಳ್ಳಾಲ, ಜು. 06. ಸಜಿಪಪಡು ಗ್ರಾಮದ ತಲೆಮೊಗರು ಎಂಬಲ್ಲಿ ನೇತ್ರಾವತಿ ನದಿಯಲ್ಲಿ ಭಾನುವಾರ ಸಂಜೆ ಸ್ನೇಹಿತರೊಂದಿಗೆ ಈಜಲು ಹೋಗಿ ನೀರುಪಾಲಾಗಿದ್ದ ಯುವಕನ ಮೃತದೇಹವು ಉಳ್ಳಾಲದ ಕೋಟೆಪುರ ಕೋಡಿಯ ಸಮುದ್ರ ತೀರದಲ್ಲಿ ಬುಧವಾರದಂದು ಪತ್ತೆಯಾಗಿದೆ. ಮೃತ ಯುವಕನನ್ನು ಅಶ್ವಿತ್(19) ಎಂದು ಗುರುತಿಸಲಾಗಿದೆ. ಈತ ಸಜಿಪಪಡುವಿನ ತಲೆಮೊಗರು ನಾಗೇಶ್ ಗಾಣಿಗ ಎಂಬವರ ಮನೆಯಲ್ಲಿ ಮಗುವಿನ ತೊಟ್ಟಿಲು ತೂಗುವ ಸಮಾರಂಭದಲ್ಲಿ ಪಾಲ್ಗೊಂಡು, ಬಳಿಕ ಹರ್ಷ ಎಂಬಾತನೊಂದಿಗೆ ಸಮೀಪದ ನೇತ್ರಾವತಿ ನದಿಗೆ ಈಜಲು ತೆರಳಿದ್ದು, ಈ ವೇಳೆ ಅಶ್ವಿತ್

ನೇತ್ರಾವತಿ ನದಿಯಲ್ಲಿ ನೀರುಪಾಲಾದ ಯುವಕನ ಮೃತದೇಹ ಉಳ್ಳಾಲದಲ್ಲಿ ಪತ್ತೆ..!! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮರವೂರು ಸೇತುವೆ ಮೇಲೆ ಕೀ, ಹೆಲ್ಮೆಟ್ ಸಹಿತ ಬೈಕ್ ಪತ್ತೆ..!! ➤ ಆತ್ಮಹತ್ಯೆ ಶಂಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 06. ಇಲ್ಲಿನ ವಿಮಾನ ನಿಲ್ದಾಣ ರಸ್ತೆಯ ಮರವೂರು ಸೇತುವೆ ಮೇಲೆ ಇಂದು ಬೆಳಗ್ಗೆ ಬೈಕ್, ಕೀ ಮತ್ತು ಹಲ್ಮೆಟ್ ಪತ್ತೆಯಾಗಿದ್ದು, ಯಾರೋ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸೇತುವೆ ಮೇಲೆ ಬೈಕ್, ಕೀ ಮತ್ತು ಹೆಲ್ಮೆಟ್ ಕಂಡುಬಂದಿದ್ದು, ತುಂಬಾ ಹೊತ್ತಾದರೂ ಯಾರೂ ಬೈಕ್ ಕೊಂಡೊಯ್ಯಲು ಬಾರದೇ ಇದ್ದುದರಿಂದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೈಕ್ ನ್ನು ಸೇತುವೆ ಮೇಲೆ ನಿಲ್ಲಿಸಿ ಸವಾರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಮರವೂರು ಸೇತುವೆ ಮೇಲೆ ಕೀ, ಹೆಲ್ಮೆಟ್ ಸಹಿತ ಬೈಕ್ ಪತ್ತೆ..!! ➤ ಆತ್ಮಹತ್ಯೆ ಶಂಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬ: ತಾಲೂಕು ವಿಕಲಚೇತನರ ವೈದ್ಯಕೀಯ ಶಿಬಿರ

(ನ್ಯೂಸ್ ಕಡಬ) newskadaba.com ಕಡಬ, ಜು. 06. ವಿಕಲಚೇತನರ ಕಡಬ ತಾಲೂಕು ಮಟ್ಟದ ವೈದ್ಯಕೀಯ ಶಿಬಿರವು ಕಡಬ ಸರಕಾರಿ ಸಮುದಾಯ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸುಚಿತ್ರಾ ರಾವ್‌ ನೇತೃತ್ವದಲ್ಲಿ ನಡೆಯಿತು. ಎಲುಬು ತಜ್ಞ ಡಾ.ಪದ್ಮನಾಭ ಭಟ್, ಕಣ್ಣಿನ ತಜ್ಞೆ ಅರ್ಚನಾ, ಇಎನ್‌ಟಿ ತಜ್ಞ ಝೈನಬ್ ಸುನು ಅಲಿರವರು ವಿಕಲಚೇತನರನ್ನು ತಪಾಸಣೆ ಮಾಡಿ ಗುರುತಿನ ಚೀಟಿ ನೀಡಿದರು. ಕಡಬ ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿಕಲಚೇತನ ಫಲಾನುಭವಿಗಳು ಶಿಬಿರದ ಪ್ರಯೋಜನ ಪಡೆದುಕೊಂಡರು. ಕಡಬ ತಾಲೂಕು ವಿವಿಧೋದ್ದೇಶ ಪುನರ್ವಸತಿ

ಕಡಬ: ತಾಲೂಕು ವಿಕಲಚೇತನರ ವೈದ್ಯಕೀಯ ಶಿಬಿರ Read More »

ಕರಾವಳಿ, ಕರ್ನಾಟಕ

ಗುಂಡ್ಯ: ಬಸ್ ಹಾಗೂ ಸ್ವಿಫ್ಟ್ ಕಾರು ನಡುವೆ ಢಿಕ್ಕಿ ➤ ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಗುಂಡ್ಯ, ಜು. 06. ಕಾರು ಮತ್ತು ಬಸ್ಸು ನಡುವೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಚಾಲಕ ಹಾಗೂ ಮಗುವಿಗೆ ಗಾಯಗಳಾದ ಘಟನೆ ರಾ ಹೆ. 75ರ ಗುಂಡ್ಯ ಸಮೀಪದ ಬರ್ಚಿನ ಹಳ್ಳ ಎಂಬಲ್ಲಿ ನಡೆದಿದೆ. ಗಾಯಗೊಂಡವರನ್ನು ಇಕ್ಬಾಲ್ ಹಾಗೂ ನಿಹಾಲ್ ಎಂದು ಗುರುತಿಸಲಾಗಿದೆ. ಧರ್ಮಸ್ಥಳದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಬಸ್ಸಿಗೆ ಹಾಸನದಿಂದ ಮಂಗಳೂರಿಗೆ ಬರುತ್ತಿದ್ದ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದಿದ್ದು, ಪರಿಣಾಮ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಒಟ್ಟು ಐದು ಪ್ರಯಾಣಿಕರಿದ್ದು ಉಳಿದವರು ಅಪಾಯದಿಂದ ಪಾರಾಗಿದ್ದಾರೆ.

ಗುಂಡ್ಯ: ಬಸ್ ಹಾಗೂ ಸ್ವಿಫ್ಟ್ ಕಾರು ನಡುವೆ ಢಿಕ್ಕಿ ➤ ಇಬ್ಬರಿಗೆ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬಿಸಿರೋಡ್: ಚೂರಿಯಿಂದ ಇರಿದು ಯುವಕನ ಕೊಲೆ ಪ್ರಕರಣ ➤ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜು. 06. ಶಾಂತಿಅಂಗಡಿ ನಿವಾಸಿ ಮಹಮ್ಮದ್ ಆಸೀಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ‌. ಬಂಧಿತರನ್ನು ಬಂಟ್ವಾಳ ಮಾರಿಪಳ್ಳ ನಿವಾಸಿಗಳಾದ ಮಹಮ್ಮದ್ ನೌಫಾಲ್ ಹಾಗೂ ಮಹಮ್ಮದ್ ನೌಶೀರ್ ಎಂದು ಗುರುತಿಸಲಾಗಿದೆ. ಮಹಮ್ಮದ್ ಆಸಿಫ್ ಹಾಗೂ ಆರೋಪಿಗಳು ಸ್ನೇಹಿತರಾಗಿದ್ದು, ಸೋಮವಾರ ಮಧ್ಯರಾತ್ರಿ 1 ಗಂಟೆಯ ವೇಳೆಗೆ ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಚೂರಿಯಿಂದ ಇರಿದು‌ ಆಸಿಪೊ್ ಎಂಬಾತನನ್ನು ಕೊಲೆ ಮಾಡಲಾಗಿತ್ತು.

ಬಿಸಿರೋಡ್: ಚೂರಿಯಿಂದ ಇರಿದು ಯುವಕನ ಕೊಲೆ ಪ್ರಕರಣ ➤ ಇಬ್ಬರ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top