ಕರಾವಳಿ

ನೆಲ್ಯಾಡಿ: ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು ➤ ಲಕ್ಷಾಂತರ ರೂ. ಮೌಲ್ಯದ ನಗ- ನಗದು ಕಳವು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಸೆ. 02. ಇಲ್ಲಿನ ಗೋಳಿತ್ತೊಟ್ಟು ಗ್ರಾಮದ ಅರಂತಬೈಲು ನಿವಾಸಿ ರಮ್ಲತ್‌ ಎಂಬವರ ಮನೆಯಿಂದ ಕಳೆದ ರಾತ್ರಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳ್ಳತನಗೈದಿರುವ ಘಟನೆ ನಡೆದಿದೆ. ರಮ್ಲತ್‌ ಹಾಗೂ ಅವರ ಪತ್ನಿ ಖತೀಜಮ್ಮರವರು ದುಬೈಯಿಂದ ಬರುವ ತಮ್ಮ ಮಗನನ್ನು ಕರೆದುಕೊಂಡು ಬರಲು ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿದ್ದು, ತಡರಾತ್ರಿ ಮನೆಗೆ ಹಿಂತಿರುಗಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಡಿವೈಎಸ್ ಪಿ ಡಾ. ವೀರಯ್ಯ ಹಾಗೂ ಪೊಲೀಸ್‌ […]

ನೆಲ್ಯಾಡಿ: ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು ➤ ಲಕ್ಷಾಂತರ ರೂ. ಮೌಲ್ಯದ ನಗ- ನಗದು ಕಳವು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಇಂದು ಮಂಗಳೂರಿಗೆ ಪ್ರಧಾನಿ ಮೋದಿ ಭೇಟಿ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 02. ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರದಂದು ಮಂಗಳೂರಿಗೆ ಆಗಮಿಸಲಿದ್ದು ಸ್ವಾಗತಕ್ಕೆ ಕರಾವಳಿ ನಗರ ಸಜ್ಜುಗೊಂಡಿದೆ. ಈ ಸಂದರ್ಭದಲ್ಲಿ ಪ್ರಧಾನಿಯವರು ನವಮಂಗಳೂರು ಬಂದರು ಪ್ರಾಧಿಕಾರ ಹಾಗೂ ಎಂಆರ್‌ಪಿಎಲ್‌ ಒಳಗೊಂಡಂತೆ 3,800 ಕೋ.ರೂ. ಮೊತ್ತದ ವಿವಿಧ ಯೋಜನೆಗಳ ಲೋಕಾರ್ಪಣೆ ಹಾಗೂ ಶಿಲಾನ್ಯಾಸ ನೆರವೇರಿಸಿ ಸಮಾವೇಶದಲ್ಲಿ ಮಾತನಾಡುವರು. ಪ್ರಧಾನಿಯವರ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಹಾಗೂ ನವಮಂಗಳೂರು ಬಂದರು ಪ್ರಾಧಿಕಾರದಿಂದ ಸರ್ವಸಿದ್ಧತೆ ನಡೆದಿದ್ದು, ಸಮಾವೇಶಕ್ಕೆ ಗೋಲ್ಡ್‌ಫಿಂಚ್‌ ಸಿಟಿ ಮೈದಾನವು ಸಜ್ಜುಗೊಂಡಿದೆ. ಪ್ರಧಾನಿಯವರ ಭೇಟಿ ಹಿನ್ನೆಲೆ ಎನ್‌ಎಂಪಿಎ ಪ್ರದೇಶ,

ಇಂದು ಮಂಗಳೂರಿಗೆ ಪ್ರಧಾನಿ ಮೋದಿ ಭೇಟಿ Read More »

ಕರಾವಳಿ

ಕಣಜದ ಹುಳು ಕಡಿದು ಗಂಭೀರ ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಫಲಿಸದೇ ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಸೆ. 02. ಬಾಲಕನೋರ್ವ ಕಣಜದ ಹುಳ ಕಡಿದು ಗಂಭೀರ ಗಾಯಗೊಂಡ ಬಾಲಕನೋರ್ವ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ತಾಲೂಕಿನ ಅಮ್ಮುಂಜೆ ಗ್ರಾಮದ ಕಲಾಯಿ ಎಂಬಲ್ಲಿ ಗುರುವಾರ ರಾತ್ರಿ ಸಂಭವಿಸಿದೆ. ಮೃತ ಬಾಲಕನನ್ನು ಅಮ್ಮುಂಜೆ ಗ್ರಾಮದ ಕಲಾಯಿ- ತಾಳಿಪ್ಪಾಡಿ ನಿವಾಸಿ ಹಕೀಂ ಎಂಬವರ ಪುತ್ರ ಮಾಝಿನ್ (9) ಎಂದು ಗುರುತಿಸಲಾಗಿದೆ. ಈತ ಗುರುವಾರದಂದು ಸಂಜೆ ಶಾಲೆ ಬಿಟ್ಟು ಮನೆಗೆ ಬಂದು, ಬಳಿಕ ಅಂಗಡಿಗೆಂದು ತೆರಳಿದ್ದ ವೇಳೆ ಕಣಜದ ಹುಳಗಳು ದಾಳಿ ನಡೆಸಿ ಬಾಲಕನ

ಕಣಜದ ಹುಳು ಕಡಿದು ಗಂಭೀರ ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಫಲಿಸದೇ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಪ್ರಧಾನಿಯನ್ನು ಹತ್ತಿರದಿಂದ ಕಾಣಲು ಆಸೆ ವ್ಯಕ್ತಪಡಿಸಿದ ಬಂಟ್ವಾಳದ ಮುಹಮ್ಮದ್ ಗೆ VVIP ಪಾಸ್

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 01. ನಾಳೆ (ಸೆ. 02) ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿದ್ದು, ಭರದ ಸಿದ್ದತೆ ಜೊತೆಗೆ ಭದ್ರತೆಯನ್ನೂ ಕೂಡಾ ಹೆಚ್ಚಳ ಮಾಡಲಾಗಿದೆ. ಇದರ ನಡುವೆ ಮೋದಿಯನ್ನು ಹತ್ತಿರದಿಂದ ಕಾಣಬೇಕು ಎಂದು ನಮ್ಮ ಕುಡ್ಲ ವಾಹಿನಿಯ ಪ್ರೈಮ್‌ ಕಾರ್ಯಕ್ರಮದಲ್ಲಿ ಆಸೆ ವ್ಯಕ್ತಪಡಿಸಿದ ಬಂಟ್ವಾಳದ ಮಹಮ್ಮದ್‌ ಎಂಬವರಿಗೆ VVIP ಪಾಸ್‌ ದೊರಕಿದೆ. ಮಹಮ್ಮದ್ ಅವರು ಆ. 28 ರಂದು ನಮ್ಮ ಕುಡ್ಲ ವಾಹಿನಿಯಲ್ಲಿ ನಡೆದ ‘ಕರಾವಳಿಗೆ ವಿಶ್ವನಾಯಕ..!’ ಎಂಬ ಪ್ರೈಮ್‌ ಕಾರ್ಯಕ್ರಮಕ್ಕೆ

ಪ್ರಧಾನಿಯನ್ನು ಹತ್ತಿರದಿಂದ ಕಾಣಲು ಆಸೆ ವ್ಯಕ್ತಪಡಿಸಿದ ಬಂಟ್ವಾಳದ ಮುಹಮ್ಮದ್ ಗೆ VVIP ಪಾಸ್ Read More »

ಕರಾವಳಿ, ಕರ್ನಾಟಕ

ಮಾಣಿ: ಕಾರು ಹಾಗೂ ಟ್ಯಾಂಕರ್ ನಡುವೆ ಢಿಕ್ಕಿ ➤ ನಾಲ್ವರು ಗಂಭೀರ

(ನ್ಯೂಸ್ ಕಡಬ) newskadaba.com ವಿಟ್ಲ, ಸೆ. 01. ಕಾರು ಹಾಗೂ ಟ್ಯಾಂಕರ್ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ನಾಲ್ವರು ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬುಡೋಳಿ ಎಂಬಲ್ಲಿ ಗುರುವಾರದಂದು ಸಂಜೆ ನಡೆದಿದೆ. ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಟ್ಯಾಂಕರ್ ಹಾಗೂ ಬೆಂಗಳೂರು ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಕಾರಿನ ನಡುವೆ ಈ ಅಪಘಾತ ಸಂಭವಿಸಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.  

ಮಾಣಿ: ಕಾರು ಹಾಗೂ ಟ್ಯಾಂಕರ್ ನಡುವೆ ಢಿಕ್ಕಿ ➤ ನಾಲ್ವರು ಗಂಭೀರ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಾಣಿ ವಲಯ SBS ಸಮಿತಿ ರಚನೆ

(ನ್ಯೂಸ್ ಕಡಬ) bewskadaba.com ಮಾಣಿ, ಸೆ. 01. ಇಸ್ಲಾಮಿಕ್ ಎಜುಕೇಶನ್ ಬೋರ್ಡ್ ಆಫ್ ಇಂಡಿಯಾ ಇದರ ಅಧೀನದಲ್ಲಿ ಕಾರ್ಯಾಚರಿಸುವ ಮದ್ರಸಗಳ ವಿದ್ಯಾರ್ಥಿ ಸಂಘ ಸುನ್ನಿ ಬಾಲ ಸಂಘ ಇದರ ನೂತನ ವಲಯ ಸಮಿತಿ ಮಾಣಿ ರೇಂಜ್ ಒಳಗೊಂಡ 12 ಮದ್ರಸಗಳ ವಿದ್ಯಾರ್ಥಿ ನಾಯಕರನ್ನು ಸೇರಿಸಿಕೊಂಡು ಮಂಗಳವಾರದಂದು ಮಾಣಿ ದಾರುಲ್ ಇರ್ಶಾದ್ ಹಾಲ್ ನಲ್ಲಿ ರೇಂಜ್ ಅಧ್ಯಕ್ಷರಾದ ಯೂನುಸ್ ಸಅದಿ ಪೇರಮೊಗರು ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಮಿಷನರಿ ಟ್ರೈನಿಂಗ್ ವಿಭಾಗದ ಕಾರ್ಯದರ್ಶಿ ರಫೀಕ್ ಮದನಿ ಪಾಟ್ರಕೋಡಿ ಸ್ವಾಗತಿಸಿದರು.

ಮಾಣಿ ವಲಯ SBS ಸಮಿತಿ ರಚನೆ Read More »

ಕರಾವಳಿ, ಕರ್ನಾಟಕ

ನೆಲ್ಯಾಡಿ: ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಕಾರು ➤‌ ನಾಲ್ವರಿಗೆ ಗಾಯ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಸೆ. 01. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಸೇತುವೆಯಿಂದ ಕಂದಕಕ್ಕೆ ಬಿದ್ದು, ನಾಲ್ವರು ಗಾಯಗೊಂಡ ಘಟನೆ ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದ ಕಟ್ಟೆಮಜಲು ಎಂಬಲ್ಲಿ ನಡೆದಿದೆ. ಗಾಯಗೊಂಡವರನ್ನು ಚಾಲಕ ಕಟ್ಟೆಮಜಲು ನಿವಾಸಿ ರಜನೀಶ್, ಪ್ರಯಾಣಿಕರಾದ ದಯಾನಂದ್, ಭವಿತಾ ಹಾಗೂ ಚೇತನಾ ಎಂದು ಗುರುತಿಸಲಾಗಿದೆ. ಇವರೆಲ್ಲ ನೆಲ್ಯಾಡಿಯಲ್ಲಿ ನಡೆದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ.

ನೆಲ್ಯಾಡಿ: ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಕಾರು ➤‌ ನಾಲ್ವರಿಗೆ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್

ಆಲಂಕಾರು: ಸಿಡಿಲು ಬಡಿದು ದನ ಮೃತ್ಯು

(ನ್ಯೂಸ್ ಕಡಬ) newskadaba.com ಆಲಂಕಾರು, ಸೆ. 01. ಆಲಂಕಾರು ಗ್ರಾಮದ ಕೇಪುಳು ಜನಾರ್ಧನ ಪೂಜಾರಿಯವರ ಹಟ್ಟಿಗೆ ಆ. 31 ರಂದು ಸಂಜೆ ಸಿಡಿಲು ಬಡಿದ ಪರಿಣಾಮ ದನವೊಂದು ಮೃತಪಟ್ಟ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಆಲಂಕಾರು ಗ್ರಾ.ಪಂ ಅಧ್ಯಕ್ಷರಾದ ಸದಾನಂದ ಆಚಾರ್ಯ, ಗ್ರಾಮ ಸಹಾಯಕರಾದ ವಿಶ್ವನಾಥ ಹಾಗು ಪಶುಸಂಗೋಪನೆ ಇಲಾಖೆಯ ವೈದ್ಯರಾದ ಡಾ|ಅಜಿತ್, ಆಲಂಕಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ಗಣೇಶ್ ರೈ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆಲಂಕಾರು: ಸಿಡಿಲು ಬಡಿದು ದನ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕೊಕ್ಕಡ: ಮಹಿಳೆ ಅನುಮಾನಾಸ್ಪದ ಸಾವು ➤‌ ಪತಿ ಕೊಲೆಗೈದಿರುವ ಶಂಕೆ

(ನ್ಯೂಸ್ ಕಡಬ) newskadaba.com ಕೊಕ್ಕಡ, ಆ. 31. ಇಲ್ಲಿನ ವಿವಾಹಿತ ಮಹಿಳೆಯೋರ್ವರು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ನಡೆದಿದ್ದು, ಪತಿಯೇ ಕೊಲೆಗೈದಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಮೃತರನ್ನು ಕೊಕ್ಕಡ ಗ್ರಾಮದ ಅಗರ್ತ ನಿವಾಸಿ ಗಣೇಶ್‌ ಗೌಡ ಅವರ ಪತ್ನಿ ಮೋಹಿನಿ(36) ಎಂದು ಗುರುತಿಸಲಾಗಿದೆ. ಇವರ ಪತಿ ಗಣೇಶ ಗೌಡನಿಗೆ ಕುಡಿತದ ಚಟವಿದ್ದು, ಪತ್ನಿ ಜತೆ ಜಗಳ ನಡೆದು ಗಲಾಟೆ ವಿಕೋಪಕ್ಕೆ ತಿರುಗಿ ಹಲ್ಲೆಗೈದ ಪರಿಣಾಮ ಮೋಹಿನಿ ಮೃತಪಟ್ಟಿರುವುದಾಗಿ ಶಂಕಿಸಲಾಗಿದ್ದು, ಮಹಿಳೆ ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಿಕೊಂಡಿರುವ ಧರ್ಮಸ್ಥಳ ಪಿಎಸ್‌ಐ

ಕೊಕ್ಕಡ: ಮಹಿಳೆ ಅನುಮಾನಾಸ್ಪದ ಸಾವು ➤‌ ಪತಿ ಕೊಲೆಗೈದಿರುವ ಶಂಕೆ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಡಬ: ಎಲೈಟ್ ಮೊಬೈಲ್ಸ್ ನಲ್ಲಿ ಲಕ್ಕೀ ಕೂಪನ್ ಡ್ರಾ ➤‌ ಅದೃಷ್ಟಶಾಲಿಗಳಿಗೆ ಬಹುಮಾನ ವಿತರಣೆ

(ನ್ಯೂಸ್‌ ಕಡಬ) newskadaba.com ಕಡಬ, ಆ.27. ಕಡಬದ ಸೈಂಟ್ ಜೋಕಿಮ್ಸ್ ಚರ್ಚ್ ಮುಂಭಾಗದ ಮಹಾಗಣಪತಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಎಲೈಟ್ ಮೊಬೈಲ್ಸ್ ನಲ್ಲಿ ಆಯೋಜಿಸಲಾಗಿದ್ದ ಲಕ್ಕೀ ಕೂಪನ್ ಹಾಗೂ ವಾಟ್ಸ್ಅಪ್ ಸ್ಟೇಟಸ್ ಗಾಗಿ ಆಯೋಜಿಸಲಾಗಿದ್ದ ಅದೃಷ್ಟಶಾಲಿಗಳ ಡ್ರಾ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು. ಲಕ್ಕೀ ಕೂಪನ್ ನ ಪ್ರಥಮ ಬಹುಮಾನ ಸ್ಯಾಮ್‌ಸಂಗ್‌ ಎ03 ಮೊಬೈಲನ್ನು ಮನ್ವಿತ್ ಬಾಳುಗೋಡು ಪಡೆದುಕೊಂಡರು. ದ್ವಿತೀಯ ಬಹುಮಾನ ನೋಕಿಯಾ 105 ಮೊಬೈಲನ್ನು ಕುಟ್ರುಪ್ಪಾಡಿ ನಿವಾಸಿ ವರ್ಗೀಸ್ ತನ್ನದಾಗಿಸಿಕೊಂಡರು. 3 ಆಕರ್ಷಕ ಬಹುಮಾನ ಬ್ಲೂಟೂಥ್ ನೆಕ್

ಕಡಬ: ಎಲೈಟ್ ಮೊಬೈಲ್ಸ್ ನಲ್ಲಿ ಲಕ್ಕೀ ಕೂಪನ್ ಡ್ರಾ ➤‌ ಅದೃಷ್ಟಶಾಲಿಗಳಿಗೆ ಬಹುಮಾನ ವಿತರಣೆ Read More »

ಕರಾವಳಿ
Scroll to Top