ಕಣಜದ ಹುಳು ಕಡಿದು ಗಂಭೀರ ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಫಲಿಸದೇ ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಸೆ. 02. ಬಾಲಕನೋರ್ವ ಕಣಜದ ಹುಳ ಕಡಿದು ಗಂಭೀರ ಗಾಯಗೊಂಡ ಬಾಲಕನೋರ್ವ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ತಾಲೂಕಿನ ಅಮ್ಮುಂಜೆ ಗ್ರಾಮದ ಕಲಾಯಿ ಎಂಬಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.

ಮೃತ ಬಾಲಕನನ್ನು ಅಮ್ಮುಂಜೆ ಗ್ರಾಮದ ಕಲಾಯಿ- ತಾಳಿಪ್ಪಾಡಿ ನಿವಾಸಿ ಹಕೀಂ ಎಂಬವರ ಪುತ್ರ ಮಾಝಿನ್ (9) ಎಂದು ಗುರುತಿಸಲಾಗಿದೆ. ಈತ ಗುರುವಾರದಂದು ಸಂಜೆ ಶಾಲೆ ಬಿಟ್ಟು ಮನೆಗೆ ಬಂದು, ಬಳಿಕ ಅಂಗಡಿಗೆಂದು ತೆರಳಿದ್ದ ವೇಳೆ ಕಣಜದ ಹುಳಗಳು ದಾಳಿ ನಡೆಸಿ ಬಾಲಕನ ದೇಹದ ವಿವಿಧ ಭಾಗಗಳಿಗೆ ಚುಚ್ಚಿ ಗಾಯಗೊಳಿಸಿತ್ತು. ಅದಾಗಲೇ ಮನೆ ಮಂದಿ ಬಾಲಕನನ್ನು ಸ್ಥಳೀಯ ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ ಸ್ಥಳೀಯ ವೈದ್ಯರು ವಿಷಕಾರಿ ನೊಣದ ಅಪಾಯದ ಬಗ್ಗೆ ತಿಳಿಸದೆ ಇದ್ದುದರಿಂದ ಮನೆ ಮಂದಿ ಹೆಚ್ಚಿನ ಗಮನ ಹರಿಸದೆ ವೈದ್ಯರು ನೀಡಿದ ಮುಲಾಮು ಹಚ್ಚಿ ಸುಮ್ಮನಾಗಿದ್ದರು ಎನ್ನಲಾಗಿದೆ. ಆದರೆ ರಾತ್ರಿ ಹತ್ತು ಗಂಟೆಯ ಬಳಿಕ ಗಾಯ ಉಲ್ಭಣಗೊಂಡು ಬಾಲಕ ತೀವ್ರ ಅಸ್ವಸ್ಥಗೊಂಡ ಹಿನ್ನೆಲೆ ತಡರಾತ್ರಿಯ ಬಳಿಕ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಬಾಲಕ ಮಾಝಿನ್ ಮೃತಪಟ್ಟಿದ್ದಾನೆ ಎನ್ನಲಾಗಿದೆ.

Scroll to Top