ಕರಾವಳಿ

ಸುಳ್ಯ: ಕಾಡಾನೆ ಹಾವಳಿ ➤ ಅಪಾರ ಕೃಷಿ ನಾಶ- ಕೃಷಿಕರು ಹೈರಾಣು

(ನ್ಯೂಸ್ ಕಡಬ) newskadaba.com ಸುಳ್ಯ, ಡಿ. 22. ಇಲ್ಲಿನ ಗಡಿಪ್ರದೇಶವಾದ ಮಂಡೆಕೋಲು ಗ್ರಾಮದ ಮುರೂರಿನಲ್ಲಿ ಕಾಡಾನೆಗಳ ಹಿಂಡು ದಾಳಿ ನಡೆಸಿ ವ್ಯಾಪಕ ಕೃಷಿ ಹಾನಿಯುಂಟಾದ ಘಟನೆ ವರದಿಯಾಗಿದೆ. ಮುರೂರಿನ ಕೋಡೋತ್ ವಿಜಯನ್ ನಾಯರ್ ಎಂಬವರ ತೋಟಕ್ಕೆ ಕಳೆದ ರಾತ್ರಿ ನುಗ್ಗಿದ ಕಾಡಾನೆಗಳು ತೆಂಗಿನಮರ, ಅಡಿಕೆ ಮರ ಹಾಗೂ ಬಾಳೆಗಿಡಗಳನ್ನು ನಾಶಮಾಡಿದೆ. ಈ ಭಾಗದಲ್ಲಿ ಇತ್ತೀಚೆಗೆ ಬೀಡಿಬಿಟ್ಟಿರುವ ಕೃಷಿಯನ್ನು ನಾಶಪಡಿಸುತ್ತಿರುವುದರಿಂದ ಕೃಷಿಕರು ಹೈರಾಣಾಗಿದ್ದಾರೆ. ಈ ಪ್ರದೇಶದಲ್ಲಿ ಹಲವು ವರ್ಷಗಳಿಂದ ಕಾಡಾನೆಗಳು ನಿರಂತರ ದಾಳಿ ನಡೆಸುತ್ತಿದ್ದರೂ, ಅದನ್ನು ತಡೆಯಲು ಶಾಶ್ವತ […]

ಸುಳ್ಯ: ಕಾಡಾನೆ ಹಾವಳಿ ➤ ಅಪಾರ ಕೃಷಿ ನಾಶ- ಕೃಷಿಕರು ಹೈರಾಣು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸುಳ್ಯ: ಎಚ್ಚೆತ್ತ ಕಂದಾಯ ಇಲಾಖೆ ➤ ಅಕ್ರಮ ಮರಳು ಸಾಗಾಟದ 3 ಲಾರಿ ವಶಕ್ಕೆ

(ನ್ಯೂಸ್ ಕಡಬ) newskadaba.com ಸುಳ್ಯ, ಡಿ. 22. ಇತ್ತೀಚೆಗೆ ಅಕ್ರಮ ಗಣಿಗಾರಿಕೆ ಮತ್ತು ಮರಳು ಸಾಗಾಟದ ಮೇಲೆ ಅಧಿಕಾರಿಗಳ ದಾಳಿ ಮುಂದುವರೆದಿದ್ದು, ಮೂರು ಲಾರಿಗಳನ್ನು ವಶಪಡಿಸಿಕೊಂಡಿರುವ ಘಟನೆ ಸುಳ್ಯದಲ್ಲಿ ವರದಿಯಾಗಿದೆ. ಕಂದಾಯ ನಿರೀಕ್ಷಕರ ತಂಡದ ನೇತೃತ್ವದಲ್ಲಿ ಮರಳು ಸಾಗಾಟ ಮತ್ತು ಕೆಂಪು ಕಲ್ಲಿನ ಸಾಗಾಟದ ಲಾರಿಗಳ ಮೇಲೆ ದಿಢೀರ್ ದಾಳಿ ನಡೆದು ಮೂರು ಲಾರಿಗಳನ್ನು ವಶ ಪಡೆದುಕೊಳ್ಳಲಾಗಿದೆ. ಇದೀಗ ಸದ್ಯ ಮೂರು ವಾಹನಗಳನ್ನು ಕಂದಾಯ ನಿರೀಕ್ಷಕರ ಕಚೇರಿ ಬಳಿ ಇರಿಸಲಾಗಿದ್ದು ಮೇಲಿನ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.  

ಸುಳ್ಯ: ಎಚ್ಚೆತ್ತ ಕಂದಾಯ ಇಲಾಖೆ ➤ ಅಕ್ರಮ ಮರಳು ಸಾಗಾಟದ 3 ಲಾರಿ ವಶಕ್ಕೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ನಗದು ಕಳವು ಪ್ರಕರಣ ➤ ಆರೋಪಿಗಳಿಗೆ ನ್ಯಾಯಾಂಗ ಬಂಧನ

(ನ್ಯೂಸ್ ಕಡಬ) newskadaba.com ಕಾರ್ಕಳ, ಡಿ. 22. ಮನೆಯೊಂದರಲ್ಲಿ ನಡೆದ ಲಕ್ಷಾಂತರ ರೂ ಮೌಲ್ಯದ ನಗದನ್ನು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿದ ಕಾರ್ಕಳ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಘಟನೆ ಕಾರ್ಕಳದಲ್ಲಿ ಸಂಭವಿಸಿದೆ. ಬಂಧಿತರನ್ನು ಬಂಟ್ವಾಳ ತಾಲೂಕು ಕಾಂತರಬೆಟ್ಟು, ಅರಂಬೋಡಿ ಗ್ರಾಮದ ನಿವಾಸಿ ಪ್ರಸಾದ್(34) ಹಾಗೂ ಕಾರ್ಕಳ ತಾಲೂಕಿನ ಕಲ್ಯಾ ಗಗ್ರಾಮದ ನಿವಾಸಿ ಶಿಬಾ (39) ಎಂದು ಗುರುತಿಸಲಾಗಿದೆ. ಇವರು ಉಷಾ ಜಗದೀಶ್ ಅಂಚನ್ ಎಂಬವರ ಮನೆಯ ಬಾಗಿಲನ್ನು ಮುರಿದು ಮನೆಯ ಒಳಗೆ ನುಗ್ಗಿ ಗೋದ್ರೇಜಿನ

ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ನಗದು ಕಳವು ಪ್ರಕರಣ ➤ ಆರೋಪಿಗಳಿಗೆ ನ್ಯಾಯಾಂಗ ಬಂಧನ Read More »

ಕರಾವಳಿ, ಕರ್ನಾಟಕ
shashikumar

ಮಂಗಳೂರು: ರಸ್ತೆ ಕಾಮಗಾರಿ ಹಿನ್ನೆಲೆ ➤ ಬದಲಿ ಮಾರ್ಗ ಸೂಚಿಸಿ ಕಮಿಷನರ್ ಆದೇಶ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 22. ನಗರದ ಜಪ್ಪು ಮಹಾಕಾಳಿ ಪಡ್ಪು ಕೆನರಾ ಪಿಂಟೋ ಗ್ಯಾರೇಜ್ ಬಳಿಯಿಂದ ನೇತ್ರಾವತಿ ರೈಲ್ವೆ ಲೆವೆಲ್ ಕ್ರಾಸಿಂಗ್ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದರಿಂದ ಸದ್ರಿ ರಸ್ತೆಯಲ್ಲಿ ತಾತ್ಕಾಲಿಕ ವಾಹನ ಸಂಚಾರ ನಿಷೇಧ ಆದೇಶ ಹೊರಡಿಸುವುದರ ಜೊತೆಗೆ ಸಾರ್ವಜನಿಕರ ಓಡಾಟಕ್ಕೆ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಬದಲಿ ಮಾರ್ಗದ ವ್ಯವಸ್ಥೆ ಮಾಡಿ ಕಾಮಗಾರಿ ಮುಕ್ತಾಯವಾಗುವವರೆಗೆ ಅಪರ ದಂಡಾಧಿಕಾರಿಗಳೂ ಆಗಿರುವ ಪೊಲೀಸ್ ಆಯುಕ್ತರಾದ ಶಶಿಕುಮಾರ್ ಎನ್. ಅವರು ಮೋಟಾರ್ ವಾಹನ ಕಾಯಿದೆ1988ರ

ಮಂಗಳೂರು: ರಸ್ತೆ ಕಾಮಗಾರಿ ಹಿನ್ನೆಲೆ ➤ ಬದಲಿ ಮಾರ್ಗ ಸೂಚಿಸಿ ಕಮಿಷನರ್ ಆದೇಶ Read More »

ಕರಾವಳಿ, ಕರ್ನಾಟಕ

ಬಂಟ್ವಾಳ: ನಿಯಂತ್ರಣ ತಪ್ಪಿ ರಸ್ತೆಗೆ ಅಡ್ಡಲಾಗಿ ನಿಂತ ಲಾರಿ..! ➤ ಕೆಲಕಾಲ ಸಂಚಾರ ವ್ಯತ್ಯಯ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ. 22. ಲಾರಿಯೊಂದು ತಿರುಗಿಸುವ ಸಂದರ್ಭದಲ್ಲಿ ರಸ್ತೆಯಲ್ಲಿ ಅಡ್ಡಲಾಗಿ ನಿಂತು ಟ್ರಾಫಿಕ್ ಜಾಮ್ ಉಂಟಾದ ಘಟನೆ ಬಂಟ್ವಾಳದ ಬೈಪಾಸ್ ನ ತುಂಬೆ ಜಂಕ್ಷನ್ ಬಳಿ ಸಂಭವಿಸಿದೆ. ಬಂಟ್ವಾಳ – ಮೂಡುಬಿದಿರೆ ರಸ್ತೆಯ ತುಂಬೆ ಜಂಕ್ಷನ್ ಬಳಿ ಅಂಗಡಿಯೊಂದಕ್ಕೆ ಸರಕು ತಂದ 12 ಚಕ್ರಗಳ ಲಾರಿಯನ್ನು ತಿರುಗಿಸುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಈ ವೇಳೆ ರಸ್ತೆಯ ಎರಡೂ ಭಾಗದಲ್ಲಿ ವಾಹನಗಳು ಸರತಿಯಲ್ಲಿ ನಿಂತು ಸಂಚಾರ ವ್ಯತ್ಯಯ ಉಂಟಾಗಿತ್ತು ಎಂದು ತಿಳಿದು ಬಂದಿದೆ.

ಬಂಟ್ವಾಳ: ನಿಯಂತ್ರಣ ತಪ್ಪಿ ರಸ್ತೆಗೆ ಅಡ್ಡಲಾಗಿ ನಿಂತ ಲಾರಿ..! ➤ ಕೆಲಕಾಲ ಸಂಚಾರ ವ್ಯತ್ಯಯ Read More »

ಕರಾವಳಿ, ಕರ್ನಾಟಕ

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಟ್ಯಾಬ್ ವಿತರಣೆ ➤ ಅರ್ಹರಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 22. ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮೂಲಕ ಜಿಲ್ಲೆಯ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಟ್ಯಾಬ್ ನೀಡಲು 2023ನೇ ಜನವರಿ 6ರೊಳಗೆ ಅರ್ಜಿ ಆಹ್ವಾನಿಸಲಾಗಿದೆ. ಮಂಡಳಿಯ ಅರ್ಹ ನೋಂದಾಯಿತ ಕಟ್ಟಡ ಕಾರ್ಮಿಕರು ಅರ್ಜಿ ಸಲ್ಲಿಸಬಹುದು. ನೋಂದಣಿಯ ಹಿರಿತನದ ಆಧಾರದಲ್ಲಿ ಟ್ಯಾಬ್ ವಿತರಿಸಲಾಗುವುದು. ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿರುವ ಫಲಾನುಭವಿಯ ಒಂದು ಮಗುವಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು. ದಾಖಲೆಗಳು: ಅರ್ಜಿ ನಮೂನೆ, ನೋಂದಾಯಿತ ಕಾರ್ಮಿಕರ ಗುರುತಿನ

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಟ್ಯಾಬ್ ವಿತರಣೆ ➤ ಅರ್ಹರಿಂದ ಅರ್ಜಿ ಆಹ್ವಾನ Read More »

ಕರಾವಳಿ, ಕರ್ನಾಟಕ

ಉಚಿತ ಅಲ್ಪಾವಧಿ ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 22. ಕೌಶಲ್ಯ ಕರ್ನಾಟಕ ಯೋಜನೆಯಡಿ ಸಿಸ್ಕೊ ಸರ್ಟಿಫೈಡ್ ನೆಟ್‍ವರ್ಕ್ ಅಸೋಸಿಯೇಟ್ (ಸಿ.ಸಿ.ಎನ್.ಎ), ಸಿಸ್ಕೊ ಐ.ಟಿ. ಎಸೆನ್ಸಿಯಲ್ಸ್, ಬೇಸಿಕ್ ವೆಲ್ಡಿಂಗ್, ಟಿಗ್ ವೆಲ್ಡಿಂಗ್, ಮಿಗ್ ವೆಲ್ಡಿಂಗ್, ರೆಫ್ರಿಜರೇಶನ್ ಮತ್ತು ಏರ್ ಕಂಡೀಷನಿಂಗ್ ಟೆಕ್ನಿಷಿಯನ್, ಟ್ಯಾಲಿ, ಇಆರ್.ಪಿ, ಪ್ರೈಮ್ ಕೋರ್ಸ್‍ಗಳಲ್ಲಿ ಉಚಿತ ಅಲ್ಪಾವಧಿ ಕೌಶಲ್ಯ ತರಬೇತಿ ಪಡೆಯಲು ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೆ.ಜಿ.ಟಿ.ಟಿ.ಐ. ಕಚೇರಿಯಿಂದ ಅರ್ಜಿ ಪಡೆದು ಭರ್ತಿ ಮಾಡಿ ತರಬೇತಿಗೆ

ಉಚಿತ ಅಲ್ಪಾವಧಿ ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನ Read More »

ಕರಾವಳಿ, ಕರ್ನಾಟಕ

ಆಧಾರ್ ನೋಂದಣಿದಾರರ ದಾಖಲೆಗಳ ನವೀಕರಣ ಕಡ್ಡಾಯ ➤ ಡಿಸಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 22. ಕಳೆದ 10 ವರ್ಷಗಳಿಗೂ ಹಿಂದೆ ವಿಶಿಷ್ಟ ಗುರುತಿನ ಸಂಖ್ಯೆ ಪಡೆದ, ಆಧಾರ್ ನೋಂದಣಿದಾರರು ತಮ್ಮ ದಾಖಲೆಗಳ ನವೀಕರಣ ಮಾಡಿಸಿಕೊಳ್ಳಬೇಕು ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು (ಯುಐಡಿಎಐ) ಸೂಚಿಸಿದೆ. ಯುಐಡಿಎಐ ಆಧಾರ್ ಕಾರ್ಡ್‍ಗೆ ನೀಡಲಾದ ಪ್ರಮುಖ ದಾಖಲೆಗಳಾದ ನಿವಾಸದ ವಿಳಾಸ ದೃಢೀಕರಣ ಪತ್ರ, ವ್ಯಕ್ತಿಯ ಗುರುತಿನ ದಾಖಲೆಗಳ ಜತೆಗೆ ಇತರೆ ಪ್ರಮುಖ ಮಾಹಿತಿಗಳನ್ನು ಸದ್ಯದ ದಾಖಲೆಗಳಿಗೆ ಅನುಗುಣವಾಗಿ ತಿದ್ದುಪಡಿ ಮಾಡಿಕೊಳ್ಳಬೇಕು. ಎಲ್ಲಾ ಹಳೆಯ ಆಧಾರ್ ನೋಂದಣಿದಾರರು ತಮ್ಮ ದಾಖಲೆಗಳಲ್ಲಿನ

ಆಧಾರ್ ನೋಂದಣಿದಾರರ ದಾಖಲೆಗಳ ನವೀಕರಣ ಕಡ್ಡಾಯ ➤ ಡಿಸಿ Read More »

ಕರಾವಳಿ

ಮಾದಕ ವಸ್ತು ನೀಡಿ ಸಾಮೂಹಿಕ ಅತ್ಯಾಚಾರ   ➤ ಮೂವರು ಆರೋಪಿಗಳ ಬಂಧನ 

(ನ್ಯೂಸ್ ಕಡಬ) newskadaba.com  ಕಾಸರಗೋಡು, ಡಿ.21  19 ರ ಹರೆಯದ ಯುವತಿಗೆ ಮಾದಕ ವಸ್ತು ನೀಡಿ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ವಿದ್ಯಾನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮೂವರನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ ಬಂಧಿತ ಆರೋಪಿಗಳನ್ನು ಮಧೂರು ಪಟ್ಲ ದ.ಜೆ. ಶೈನಿತ್ ಕುಮಾರ್ (30), ಉಪ್ಪಳ ಮಂಗಲ್ಪಾಡಿಯ ಮೋಕ್ಷಿತ್ ಶೆಟ್ಟಿ(43) ಮತ್ತು ಉಳಿಯತ್ತಡ್ಕ ದ.ಎನ್ ಪ್ರಶಾಂತ್(27) ಎಂದು ಗುರುತಿಸಲಾಗಿದೆ.  ಕಾಸರಗೋಡು ಮಹಿಳಾ ಠಾಣಾ ಇನ್ಸ್ ಪೆಕ್ಟರ್ ಪಿ. ಚಂದ್ರಿಕಾ ನೇತೃತ್ವದ ತಂಡವು ಇವರನ್ನು

ಮಾದಕ ವಸ್ತು ನೀಡಿ ಸಾಮೂಹಿಕ ಅತ್ಯಾಚಾರ   ➤ ಮೂವರು ಆರೋಪಿಗಳ ಬಂಧನ  Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ವಿಟ್ಲ: ಅಪರಿಚಿತ ಮೃತದೇಹದ ಗುರುತು ಪತ್ತೆ..!

(ನ್ಯೂಸ್ ಕಡಬ) newskadaba.com ವಿಟ್ಲ, ಡಿ. 21. ಗುಡ್ಡದಲ್ಲಿ ಪತ್ತೆಯಾಗಿದ್ದ ಅಪರಿಚಿತ ಕೊಳೆತ ಮೃತದೇಹದ ಗುರುತು ಪತ್ತೆಯಾಗಿದೆ. ಮೃತರನ್ನು ಪುಣಚ ಗ್ರಾಮದ ಕೆದುಮೂಲೆ ದಿ. ವೀರಪ್ಪ ನಾಯ್ಕ್ ಎಂಬವರ ಪುತ್ರ ಕಮಲಾಕ್ಷ ಎಂದು ಗುರುತಿಸಲಾಗಿದೆ. ಮನೆಯಿಂದ ಕೆಲಸಕ್ಕೆಂದು ತೆರಳುತ್ತಿದ್ದ ಕಮಲಾಕ್ಷ ರವರು ತುಂಬಾ ಸಮಯದವರೆಗೆ ಮನೆಗೆ ಮರಳಿ ಬರುತ್ತಿರಲಿಲ್ಲ. ಹೀಗೇ ಮಾಡುತ್ತಿದ್ದ ಇವರು ಕೆಲದಿನಗಳ ಹಿಂದೆ ಕೆಲಸಕ್ಕೆಂದು ತೆರಳಿ ಬಳಿಕ ಮನೆಗೆ ಹಿಂತಿರುಗಿ ಬರಲಿಲ್ಲ ಎಂದು ಮನೆಯವರು ಮಾಹಿತಿ ನೀಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಕುರಿತು

ವಿಟ್ಲ: ಅಪರಿಚಿತ ಮೃತದೇಹದ ಗುರುತು ಪತ್ತೆ..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top