ಕರಾವಳಿ

ಪುತ್ತೂರು: ಬೈಕ್ ಢಿಕ್ಕಿ- ಬಾಲಕನಿಗೆ ಗಾಯ ➤ ಮಾನವೀಯತೆ ಮೆರೆದ ಕಾಂಗ್ರೆಸ್ ವಲಯಾಧ್ಯಕ್ಷ

(ನ್ಯೂಸ್ ಕಡಬ) newskadaba.com ಪುತ್ತೂರು, ಜ. 06. ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಗೆ ಬೈಕ್ ಡಿಕ್ಕಿ ಹೊಡೆದು ಬಾಲಕ ಗಾಯಗೊಂಡ ಘಟನೆ ಕುಂಬ್ರದಲ್ಲಿ ನಡೆದಿದೆ. ಗಾಯಗೊಂಡ ಬಾಲಕನನ್ನು ಕೊಯಿಲತ್ತಡ್ಕ ಜನತಾ ಕಾಲನಿ ನಿವಾಸಿ ಖೈರುನ್ನಿಸಾ ಎಂಬವರ ಪುತ್ರ ಶಿಹಾಬ್ ಎಂದು ಗುರುತಿಸಲಾಗಿದೆ. ಈತ ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ವೇಳೆ ಅತಿವೇಗದಿಂದ ಬಂದ ಕೇರಳ ನೋಂದಣಿಯ ಬೈಕ್ ಡಿಕ್ಕಿ ಹೊಡೆದು ಗಾಯಗೊಂಡಿದ್ದ ಈತನನ್ನು ಕುಂಬ್ರ ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿ ತಕ್ಷಣವೇ ಆಸ್ಪತ್ರೆಗೆ […]

ಪುತ್ತೂರು: ಬೈಕ್ ಢಿಕ್ಕಿ- ಬಾಲಕನಿಗೆ ಗಾಯ ➤ ಮಾನವೀಯತೆ ಮೆರೆದ ಕಾಂಗ್ರೆಸ್ ವಲಯಾಧ್ಯಕ್ಷ Read More »

ಕರಾವಳಿ

ನಾಳೆ (ಜ. 06): ಜಿಲ್ಲಾ ಗ್ರಾಮೀಣ ಮಟ್ಟದ ಕ್ರೀಡಾಕೂಟ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 05. ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಗ್ರಾಮೀಣ ಕ್ರೀಡಾಕೂಟವು ಜ. 06ರ ಶುಕ್ರವಾರದಂದು ಬೆಳಗ್ಗೆ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನಿಲ್ ಕುಮಾರ್ ಅವರು ಕಾರ್ಯಕ್ರಮ ಉದ್ಘಾಟಿಸುವರು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ನಾಳೆ (ಜ. 06): ಜಿಲ್ಲಾ ಗ್ರಾಮೀಣ ಮಟ್ಟದ ಕ್ರೀಡಾಕೂಟ Read More »

ಕರಾವಳಿ, ಕರ್ನಾಟಕ

ವಾಹನ ಪಲ್ಟಿ ➤ ನಾಲ್ವರಿಗೆ ಗಂಭೀರ ಗಾಯ

(ನ್ಯೂಸ್ ಕಡಬ) newskadaba.com ಸವಣೂರು, ಜ. 05. ಶವಸಂಸ್ಕಾರಕ್ಕೆ ತೆರಳುತ್ತಿದ್ದ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ನಾಲ್ವರು ಗಂಭೀರ ಗಾಯಗೊಂಡು ಪ್ರಾಣಾಪಾಯದಿಂದ ಪಾರಾದ ಘಟನೆ ಪಟ್ಟಣದ ಕಾರಡಗಿ ರಸ್ತೆಯ ತಿರುವಿನಲ್ಲಿ ಸಂಭವಿಸಿದೆ. ಗಂಭೀರ ಗಾಯಗೊಂಡವರನ್ನು ಚಾಲಕ ಮುಸ್ತಾಕ್ ಅಹಮದ್ ಚೀಲಪಟೇದ (27), ಲಾಲ್ ಸಾಬ್ ಬುಡ್ಡಿಮನಿ (62), ಮೆಹಬೂಸಾದ್ ಕುಂದಗೋಳ (52), ರಹಬ್ಬಾನಿ ಹವಾಲ್ದಾರ್ (52) ಎಂದು ಗುರುತಿಸಲಾಗಿದೆ. ಇವರು ಕುಂದಗೋಳ ತಾಲೂಕಿನ ಕಮಡೊಳ್ಳಿ ಸವಣೂರು ಮಾರ್ಗವಾಗಿ ಹಾವೇರಿ ತಾಲೂಕಿನ ಹಂದಿಗನೂರ ಗ್ರಾಮಕ್ಕೆ

ವಾಹನ ಪಲ್ಟಿ ➤ ನಾಲ್ವರಿಗೆ ಗಂಭೀರ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್

ಬಜ್ಪೆ : ಪ್ಲ್ಯಾಟ್ ನಲ್ಲಿ ಬೆಂಕಿ ➤ 30 ಮಂದಿಯ ರಕ್ಷಣೆ…!!!        

(ನ್ಯೂಸ್ ಕಡಬ) newskadaba.com  ಬಜ್ಪೆ, ಜ.05. ಕಂದಾವರ ಗ್ರಾಮ ಪಂಚಾಯತ್‌ ಬಳಿ ಫ್ಲ್ಯಾಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ರಾತ್ರಿ ಸುಮಾರು 9.45ರ ವೇಳೆ ನೆಲ ಮಹಡಿಯಲ್ಲಿ ಬೆಂಕಿ ಉಂಟಾಗಿ ದಟ್ಟವಾಗಿ ಹೊಗೆ ಮೇಲಿನ ಮಹಡಿಗೆ ಆವರಿಸಿದೆ ಎಂದು ತಿಳಿದುಬಂದಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಸಿಲುಕಿದ್ದ 30 ಮಂದಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ ಎನ್ನಲಾಗಿದೆ. ಫ್ಲ್ಯಾಟ್‌ ಪೂರ್ತಿ ಹೊಗೆ ಆವರಿಸಿದ್ದರಿಂದ ಅಲ್ಲಿದ್ದವರನ್ನು ರಕ್ಷಿಸುವುದು ಸವಾಲಿನ ಕೆಲಸವಾಗಿತ್ತು. ಕೂಡಲೇ ಗುರುಪುರದ ರಫೀಕ್‌ ಅವರನ್ನು ಕರೆಸಿ ಸ್ಥಳೀಯರೂ ಜೊತೆ ಸೇರಿ ಅಪಾಯಕ್ಕೆ ಸಿಲುಕಿದ್ದ ಎಲ್ಲ

ಬಜ್ಪೆ : ಪ್ಲ್ಯಾಟ್ ನಲ್ಲಿ ಬೆಂಕಿ ➤ 30 ಮಂದಿಯ ರಕ್ಷಣೆ…!!!         Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ದಂಧೆ ಆರೋಪ  ➤ ಇಬ್ಬರ ಬಂಧನ, ಓರ್ವ ಪರಾರಿ…!!!                         

(ನ್ಯೂಸ್ ಕಡಬ) newskadaba.com ಉಡುಪಿ, ಜ. 05. ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಸಮೀಪದ ಲಾಡ್ಜ್ ವೊಂದಕ್ಕೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಬಂಧಿತ ಆರೋಪಿಗಳನ್ನು ಜಯಂತ್ ಸಾಲಿಯಾನ್ (46) ಹಾಗೂ ಹೆಬ್ರಿಯ ದಿನೇಶ್ ಎಸ್ (42) ಎಂದು ಗುರುತಿಸಲಾಗಿದೆ. ಈ ವೇಳೆ ಶೇಖರ್ ಎಂಬಾತ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಉಡುಪಿಯ ಶಾಂಭವಿ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆಯನ್ನು ನಡೆಸುತ್ತಿರುವ ಬಗ್ಗೆ ದೂರು ಕೇಳಿಬಂದ ಹಿನ್ನೆಲೆ ಉಡುಪಿ ಉಪವಿಭಾಗದ ಪೊಲೀಸ್

ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ದಂಧೆ ಆರೋಪ  ➤ ಇಬ್ಬರ ಬಂಧನ, ಓರ್ವ ಪರಾರಿ…!!!                          Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬೆಳ್ತಂಗಡಿ : ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ      ➤ ಗರ್ಭಪಾತ ಮಾಡಿಸಿದ ಆರೋಪದಡಿ ನಾಲ್ವರ ವಿರುದ್ದ ದೂರು ದಾಖಲು…!!!            

(ನ್ಯೂಸ್ ಕಡಬ) newskadaba.com    ಬೆಳ್ತಂಗಡಿ, ಜ.05. ಬಾಲಕಿ ಮೇಲೆ ನೆರೆಮನೆಯ ಯುವಕನೋರ್ವ ಲೈಂಗಿಕ ದೌರ್ಜನ್ಯ ನಡೆಸಿದ್ದಲ್ಲದೇ, ಆಕೆ ಗರ್ಭವತಿಯಾಗಿರುವುದನ್ನು ತಿಳಿದು, ಗರ್ಭಪಾತ ಮಾಡಿಸಿದ ಆರೋಪದಡಿ ನಾಲ್ವರ ವಿರುದ್ದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ. ಮಕ್ಕಳ ಕಲ್ಯಾಣ ಸಮಿತಿಯವರು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಸುಧೀರ್, ಪಾರ್ವತಿ, ಮನೋಹರ್, ಮಾದು ಎಂಬವರು ಈ ಆರೋಪಕ್ಕೆ ಬಳಗಾಗಿದ್ದಾರೆ ಎನ್ನಲಾಗಿದೆ. ನೊಂದ ಬಾಲಕಿ ಶಾಲಾ ರಜಾ ದಿನಗಳಲ್ಲಿ ಸುಧೀರ್ ಎಂಬಾತನ ಮನೆಗೆ ಆಗಾಗ

ಬೆಳ್ತಂಗಡಿ : ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ      ➤ ಗರ್ಭಪಾತ ಮಾಡಿಸಿದ ಆರೋಪದಡಿ ನಾಲ್ವರ ವಿರುದ್ದ ದೂರು ದಾಖಲು…!!!             Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬೆಂಗಳೂರು: 30 ಲಕ್ಷ ಬೂಸ್ಟರ್‌ ಡೋಸ್‌ಗಾಗಿ ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 05.   ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆದಷ್ಟು ಬೇಗ ಬೂಸ್ಟರ್ ಡೋಸ್ ತೆಗೆದುಕೊಳ್ಳುವಂತೆ ಜನತೆಗೆ ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿದೆ. ಆದರೆ, ಈ ನಡುವೆ ರಾಜ್ಯದಲ್ಲಿ ಕೋವಿಶೀಲಡ್ ಮತ್ತು ಕಾರ್ಬೆವ್ಯಾಕ್ಸ್‌ ಕೊರತೆ ಎದುರಾಗಿದೆ ಎಂದು ತಿಳಿದುಬಂದಿದೆ. ರಾಜ್ಯದಲ್ಲಿ 6.87 ಲಕ್ಷ ಡೋಸ್ ಕೋವಾಕ್ಸಿನ್ ಲಭ್ಯವಿತ್ತು. ರಾಜ್ಯದ ಬಹುಪಾಲು ಜನರು ಕೋವಿಶೀಲ್ಡ್ ಅನ್ನು ತೆಗೆದುಕೊಂಡಿದ್ದರು. ಬೂಸ್ಟರ್ ಡೋಸ್ ಲಸಿಕೆ ಕುರಿತು ಜನರಲ್ಲಿ ಮಿಶ್ರ ಪ್ರತಿಕ್ರಿಯೆ ಇದೆ.

ಬೆಂಗಳೂರು: 30 ಲಕ್ಷ ಬೂಸ್ಟರ್‌ ಡೋಸ್‌ಗಾಗಿ ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ Read More »

ಕರಾವಳಿ

ಕಡಬ: ಮನವಿ ಕೊಟ್ಟ ಕೂಡಲೇ ಕೆಲಸ ಆಗುವುದಿಲ್ಲ, ಸರಕಾರ ಹಣ ಕೊಡಬೇಕು ➤ ಸಚಿವ ಎಸ್.ಅಂಗಾರ…!!!                                        

(ನ್ಯೂಸ್ ಕಡಬ) newskadaba.com ಕಡಬ, ಡಿ. 05. ಕಾಮಗಾರಿಗಳ ಶಿಲಾನ್ಯಾಸಕ್ಕೆ ಆಗಮಿಸಿದ ಮೀನುಗಾರಿಕಾ ಸಚಿವ ಎಸ್.ಅಂಗಾರ ಅವರಿಗೆ ಗ್ರಾಮಸ್ಥರು ಮನವಿ ಕೊಟ್ಟಾಗ ಸಚಿವರ ಪ್ರತಿಕ್ರಿಯೆ ಕಂಡು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ಬಲ್ಯ ಗ್ರಾಮದಲ್ಲಿ ಸಂಭವಿಸಿದೆ. ಮನವಿ ಕೊಟ್ಟ ಕೂಡಲೇ ಕೆಲಸ ಆಗುವುದಿಲ್ಲ. ಸರಕಾರ ಹಣ ಕೊಡಬೇಕು. ನೀವು ಮನವಿ ಕೊಡಿ, ಬಿಡಿ ಎಂದು ಶಾಸಕ ಅಂಗಾರ ಹೇಳಿದ್ದಾರೆ. ಇದರಿಂದ ಜನರು ಕೋಪಗೊಂಡು ಸ್ಥಳದಿಂದ ತೆರಳಿ ಸಚಿವರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಇದರ ನಡುವೆ ಬಲ್ಯ ಗ್ರಾಮದ

ಕಡಬ: ಮನವಿ ಕೊಟ್ಟ ಕೂಡಲೇ ಕೆಲಸ ಆಗುವುದಿಲ್ಲ, ಸರಕಾರ ಹಣ ಕೊಡಬೇಕು ➤ ಸಚಿವ ಎಸ್.ಅಂಗಾರ…!!!                                         Read More »

ಕರಾವಳಿ, ಕರ್ನಾಟಕ

ವಿಟ್ಲ : ರಸ್ತೆ ಬದಿ ನಿಂತಿದ್ದ ಬಾಲಕಿಗೆ ಬೈಕ್ ಢಿಕ್ಕಿ    ➤ ಗಂಭೀರ ಗಾಯ…!!!               

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜ.05. ರಸ್ತೆ ಬಳಿ ನಿಂತಿದ್ದ ಬಾಲಕಿಗೆ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ಬಾಲಕಿ ಗಂಭೀರ ಗಾಯಗೊಂಡಿರುವ ಘಟನೆ ವಿಟ್ಲದಲ್ಲಿ ವರದಿಯಾಗಿದೆ. ಗಾಯಾಳು ವಿದ್ಯಾರ್ಥಿನಿಯನ್ನು ವಿಟ್ಲ ನಿವಾಸಿ ಬಶೀರ್ ಎಂಬವರ ಪುತ್ರಿ ಫಾತಿಮತ್ ನಿದಾ ಎಂದು ಗುರುತಿಸಲಾಗಿದೆ. ಈಕೆ ವಿಟ್ಲ ಸರಕಾರಿ ಮಾದರಿ ಶಾಲೆಯ 5 ನೇ ತರಗತಿ ವಿದ್ಯಾರ್ಥಿಯಾಗಿದ್ದು, ಶಾಲೆಗೆ ಹೋಗಲು ಆಟೋ ರಿಕ್ಷಾಕ್ಕೆ ಕಾಯುತ್ತಿದ್ದ ವೇಳೆ ವಿಟ್ಮ ಕಡೆಯಿಂದ ಬಂದ ಬೈಕ್ ಢಿಕ್ಕಿಯಾಗಿ ಬಾಲಕಿಯನ್ನು ಎಳೆದುಕೊಂಡು ಹೋಗಿದೆ ಎಂದು ತಿಳಿದುಬಂದಿದೆ. ತಕ್ಷಣವೇ

ವಿಟ್ಲ : ರಸ್ತೆ ಬದಿ ನಿಂತಿದ್ದ ಬಾಲಕಿಗೆ ಬೈಕ್ ಢಿಕ್ಕಿ    ➤ ಗಂಭೀರ ಗಾಯ…!!!                Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬೆಳ್ತಂಗಡಿ: ಅಕ್ರಮ ಗೋ ಸಾಗಾಟ ಐವರ ಬಂಧನ

 (ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜ.05.  ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದ ಐವರನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳ್ತಂಗಡಿ ತಾಲೂಕು ಬಡಗಕಾರಂದೂರು ಗ್ರಾಮದ ನಡಾಯಿ ನಮನ ಡಾಬಾ ನಾರಾವಿ-ಗುರುವಾಯನಕೆರೆ ಬಳಿ ವದಿಯಾಗಿದೆ. ಬಂಧಿತರನ್ನು ಬೆಳ್ತಂಗಡಿ ನಿವಾಸಿ ತೌಸೀಫ್ (32), ಉಸ್ಮಾನ್ (55), ಇಕ್ಬಾಲ್ (34), ಇರ್ಫಾನ್ (25) ಮತ್ತು ಅನಾಸ್ ಎಂದು ಗುರುತಿಸಲಾಗಿದೆ. 5 ಜನ ಆರೋಪಿಗಳನ್ನು ವಶಕ್ಕೆ ಪಡೆದು ಅಕ್ರಮ ಸಾಗಾಟ ಮಾಡುತ್ತಿದ್ದ 5 ಜಾನುವಾರುಗಳನ್ನು ಹಾಗೂ ಅಕ್ರಮ ಸಾಗಾಟಕ್ಕೆ ಉಪಯೋಗಿಸಿದ ಮಾರುತಿ ಒಮ್ನಿ ಕಾರು ಮತ್ತು ದ್ವಿಚಕ್ರ

ಬೆಳ್ತಂಗಡಿ: ಅಕ್ರಮ ಗೋ ಸಾಗಾಟ ಐವರ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top