ಕರಾವಳಿ

ಉಡುಪಿ: ಮೊಬೈಲ್ ಲಿಂಕ್ ಕಳುಹಿಸಿ ಸಾವಿರಾರು ರೂ. ವಂಚನೆ

(ನ್ಯೂಸ್ ಕಡಬ)newskadaba.com ಉಡುಪಿ, ಫೆ.13. ವ್ಯಕ್ತಿಯೋರ್ವರಿಗೆ ಆನ್‌ಲೈನ್‌ ಮೂಲಕ 99,999 ರೂ. ವಂಚಿಸಿದ ಘಟನೆ ಉಡುಪಿಯಲ್ಲಿ ವರದಿಯಾಗಿದೆ. ಅವರ ಇಲಾಖೆಯ ಕೆ.ಜಿ.ಐ.ಡಿ. ಹಣ ಬ್ಯಾಂಕ್‌ಗೆ ಜಮೆಗೊಂಡಿರುವುದನ್ನು ಗಮನಿಸಿದ ಅಪರಿಚಿತ ವ್ಯಕ್ತಿಗಳು ಅವರ ಮೊಬೈಲ್‌ಗೆ ಲಿಂಕ್‌ ಕಳುಹಿಸಿ ಬ್ಯಾಂಕ್‌ ವಿವರ ಪಡೆದು ಖಾತೆಯಿಂದ 1,499 ರೂ., 98,500 ರೂ.ಸಹಿತ ಒಟ್ಟು 99,999 ರೂ.ಗಳನ್ನು ಆನ್‌ಲೈನ್‌ ಮೂಲಕ ವರ್ಗಾಯಿಸಿಕೊಂಡಿದ್ದಾರೆ. ಈ ಮೂಲಕ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.  

ಉಡುಪಿ: ಮೊಬೈಲ್ ಲಿಂಕ್ ಕಳುಹಿಸಿ ಸಾವಿರಾರು ರೂ. ವಂಚನೆ Read More »

ಕರಾವಳಿ

ಪುತ್ತೂರು: ರೈಲ್ವೇ ಟ್ರ್ಯಾಕ್ ಬಳಿ ಮಹಿಳೆಯೋರ್ವರ ಮೃತದೇಹ ಪತ್ತೆ      

(ನ್ಯೂಸ್ ಕಡಬ)newskadaba.com ಪುತ್ತೂರು, ಫೆ.13. ರೈಲ್ವೇ ಟ್ರ್ಯಾಕ್ ಬಳಿ ಮಹಿಳೆಯೋರ್ವರ ಮೃತದೇಹ ಪತ್ತೆಯಾದ ಘಟನೆ ಪುತ್ತೂರಿನಲ್ಲಿ ಸಂಭವಿಸಿದೆ.   ಮೇಲ್ನೋಟಕ್ಕೆ ಇದು ಮಹಿಳೆಯ ಮೃತದೇಹ ಎಂದು ತಿಳಿಸಿದ್ದಾರೆ.  

ಪುತ್ತೂರು: ರೈಲ್ವೇ ಟ್ರ್ಯಾಕ್ ಬಳಿ ಮಹಿಳೆಯೋರ್ವರ ಮೃತದೇಹ ಪತ್ತೆ       Read More »

ಕರಾವಳಿ, ಕ್ರೈಮ್ ನ್ಯೂಸ್

ಸುರತ್ಕಲ್: ಕಾರ್ಮಿಕರ ನಡುವೆ ಹೊಡೆದಾಟ     ➤  ಓರ್ವ ಮೃತ್ಯು.!

(ನ್ಯೂಸ್ ಕಡಬ)newskadaba.com ಸುರತ್ಕಲ್, ಫೆ.13. ಕ್ಷುಲಕ ಕಾರಣಕ್ಕೆ ಕಾರ್ಮಿಕರ ಮಧ್ಯೆ ಹೊಡೆದಾಟ ನಡೆದು ಓರ್ವ ಮೃತಪಟ್ಟು, ಮತ್ತಿಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕುಳಾಯಿ ಬಳಿ ಸಂಭವಿಸಿದೆ. ಮೃತ ಯುವಕನ್ನು ಬಿಹಾರ ಮೂಲದ ಚೋಟು ಕುಮಾರ್ (21) ಎಂದು ಗುರುತಿಸಲಾಗಿದೆ. ಮೃತ ಯುವಕ ಮತ್ತು ಆರೋಪಿಗಳು ಕುಳಾಯಿಯ ಮಾರ್ಬಲ್‌ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಊಟಕ್ಕೆ ಸಂಬಂಧಿಸಿಂತೆ ಮೂವರ ಮಧ್ಯೆ ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.  

ಸುರತ್ಕಲ್: ಕಾರ್ಮಿಕರ ನಡುವೆ ಹೊಡೆದಾಟ     ➤  ಓರ್ವ ಮೃತ್ಯು.! Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ವಿಮಾನ ನಿಲ್ದಾಣದಲ್ಲಿ 2.60 ಕೋಟಿ ರೂ. ಮೌಲ್ಯದ ವಜ್ರ ವಶ

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.13. ಭಾರತದಿಂದ ದುಬೈಗೆ ಅಕ್ರಮವಾಗಿ ವಿಮಾನದಲ್ಲಿ 2.60 ಕೋಟಿ ರೂ. ಮೌಲ್ಯದ ವಜ್ರ ಸಾಗಿಸುತ್ತಿದ್ದ ಇಬ್ಬರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಭಾರತೀಯ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ದುಬೈಗೆ ಪ್ರಯಾಣ ಬೆಳೆಸಿದ್ದ ಭಟ್ಕಳದ ಅನಸ್ ಮತ್ತು ಅಮ್ಮರ್ ಎಂಬ ಪ್ರಯಾಣಿಕರು ತಮ್ಮ ಶೂ ಮತ್ತು ಬ್ಯಾಗ್ ಅಡಿಯಲ್ಲಿ ಅನುಮಾನ ಬಾರದಂತೆ ವಜ್ರವನ್ನು ಅಡಗಿಸಿಟ್ಟು ಸಾಗಾಟ ಮಾಡುತ್ತಿದ್ದರು. ಈ ವಜ್ರಗಳನ್ನು ಮುಂಬಯಿಯಿಂದ ತಂದಿದ್ದರು ಎನ್ನಲಾಗಿದೆ.    

ಮಂಗಳೂರು: ವಿಮಾನ ನಿಲ್ದಾಣದಲ್ಲಿ 2.60 ಕೋಟಿ ರೂ. ಮೌಲ್ಯದ ವಜ್ರ ವಶ Read More »

ಕರಾವಳಿ, ಕ್ರೈಮ್ ನ್ಯೂಸ್

ಮೆಟ್ಟಿಲು ಬಳಸದೆ 2 ಗಂಟೆಗಳಲ್ಲಿ ಜಮಲಾಬಾದ್ ಪರ್ವತ ಏರಿದ ಕೋತಿರಾಜ್

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಫೆ.13. ಸಮುದ್ರ ಮಟ್ಟದಿಂದ 1700 ಅಡಿ ಎತ್ತರವಿರುವ ಜಮಲಾಬಾದ್ ಪರ್ವತವನ್ನು ಮೆಟ್ಟಿಲುಗಳನ್ನು ಬಳಸದೆ ಕೇವಲ ಎರಡು ಗಂಟೆಗಳಲ್ಲಿ ಏರುವ ಮೂಲಕ ಚಿತ್ರದುರ್ಗದ ಕೋತಿರಾಜ್ ಖ್ಯಾತಿಯ ಜ್ಯೋತಿರಾಜ್ ಸಾಹಸ ಮೆರೆದಿದ್ದಾರೆ. 2800 ಮೆಟ್ಟಿಲುಗಳಿರುವ ಜಮಲಾಬಾದ್ ಪರ್ವತ (ಗಡಾಯಿಕಲ್ಲು) ವನ್ನು ಕೇವಲ ಕೈಗಳ ಸಹಾಯದಿಂದ ಹತ್ತಿದ ಜ್ಯೋತಿರಾಜ್, ಮಾಮೂಲು ಮೆಟ್ಟಿಲಿನ ಮೂಲಕ ಕೆಳಗಿಳಿದು ಬಂದರು. ಸುರಕ್ಷತೆಯ ದೃಷ್ಟಿಯಿಂದ ಸೊಂಟಕ್ಕೆ ರೋಪ್ ಅಳವಡಿಸಿಕೊಂಡಿದ್ದ ಅವರು, ಪರ್ವತ ಹತ್ತುವ ನಡುವೆ ನಾಲ್ಕು ಕಡೆ ಕಲ್ಲಿನ ಪೊಟರೆ ಹಾಗೂ

ಮೆಟ್ಟಿಲು ಬಳಸದೆ 2 ಗಂಟೆಗಳಲ್ಲಿ ಜಮಲಾಬಾದ್ ಪರ್ವತ ಏರಿದ ಕೋತಿರಾಜ್ Read More »

ಕರಾವಳಿ, ಕರ್ನಾಟಕ

8 ವರ್ಷಗಳಿಂದ ದ್ವಿಪತ್ನಿತ್ವ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ                

(ನ್ಯೂಸ್ ಕಡಬ)newskadaba.com ಕಾಸರಗೋಡು, ಫೆ.12. ಮೊದಲ ಪತ್ನಿಗೆ ತಿಳಿಯದಂತೆ ಎರಡನೇ ಮದುವೆಯಾಗಿದ್ದ ದ್ವಿಪತ್ನಿತ್ವ ಪ್ರಕರಣದಲ್ಲಿ ಎಂಟು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪುತ್ತೂರಿನ ದರ್ಬೆ ನಿವಾಸಿ ಅಬ್ದುಲ್ ಹಮೀದ್ (50) ಎಂಬಾತನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಅಬ್ದುಲ್ ಹಮೀದ್ ಅವರ ಮೊದಲ ಪತ್ನಿ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದರು. ಬಳಿಕ ಅಬ್ದುಲ್ 2014ರಲ್ಲಿ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದ. ಈ ಸಂಬಂಧ ಅಬ್ದುಲ್‌ನ ಮೊದಲ ಪತ್ನಿ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಬ್ದುಲ್‌ಗಾಗಿ ಹುಡುಕಾಟ ನಡೆಸಿದ್ದರು. ಅಬ್ದುಲ್‌ ಮೇಲೆ

8 ವರ್ಷಗಳಿಂದ ದ್ವಿಪತ್ನಿತ್ವ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ                 Read More »

ಕರಾವಳಿ, ಕ್ರೈಮ್ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲೆಯ ನಿವೃತ್ತ ನ್ಯಾಯಮೂರ್ತಿ ಎಸ್.ಅಬ್ದುಲ್ ನಝೀರ್ ಗವರ್ನರ್ ಆಗಿ ನೇಮಕ !       

(ನ್ಯೂಸ್ ಕಡಬ)newskadaba.com ನವದೆಹಲಿ, ಫೆ.12. ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶ ಎಸ್.ಅಬ್ದುಲ್ ನಝೀರ್ ಅವರನ್ನು ಆಂಧ್ರಪ್ರದೇಶದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ‌. ಆಂಧ್ರಪ್ರದೇಶದ ಹಾಲಿ ರಾಜ್ಯಪಾಲ ಬಿಸ್ವ ಭೂಷಣ ಹರಿಚಂದನ್ ಅವರನ್ನು ಛತ್ತೀಸ್‌ಗಢದ ರಾಜ್ಯಪಾಲರನ್ನಾಗಿ ವರ್ಗಾಯಿಸಲಾಗಿದೆ. ನೇಮಕಾತಿಗೆ ರಾಷ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯವರಾದ ನ್ಯಾಯಮೂರ್ತಿ ನಝೀರ್ ನಿವೃತ್ತರಾಗಿದ್ದರು.ಅವರು ಕರ್ನಾಟಕ ಹೈಕೋರ್ಟ್ ನಲ್ಲೂ ಜಡ್ಜ್ ಆಗಿ ಕೆಲಸ ಮಾಡಿದ್ದರು ಎನ್ನಲಾಗಿದೆ.  

ದಕ್ಷಿಣ ಕನ್ನಡ ಜಿಲ್ಲೆಯ ನಿವೃತ್ತ ನ್ಯಾಯಮೂರ್ತಿ ಎಸ್.ಅಬ್ದುಲ್ ನಝೀರ್ ಗವರ್ನರ್ ಆಗಿ ನೇಮಕ !        Read More »

ಕರಾವಳಿ

ಮಂಗಳೂರು: ಬೈಕ್  ಅಪಘಾತ; ಯುವಕನೋರ್ವ ಮೃತ್ಯು !  

(ನ್ಯೂಸ್ ಕಡಬ)newskadaba.com ವಿಟ್ಲ, ಫೆ.12. ಮಂಗಳೂರಿನ ಅಡ್ಯಾರ್ ಬಳಿ ನಡೆದ ಬೈಕ್ ಅಪಘಾತದಲ್ಲಿ ಮಾಣಿಲ ನಿವಾಸಿ ಯುವಕನೋರ್ವ ಮೃತಪಟ್ಟ ಘಟನೆ ವಿಟ್ಲದಲ್ಲಿ ವರದಿಯಾಗಿದೆ. ಗೋಪಾಲಕೃಷ್ಣ ಮಣಿಯಾಣಿರವರ ಪುತ್ರ ಕಾರ್ತಿಕ್ (24) ಮೃತರು ಎಂದು ಗುರುತಿಸಲಾಗಿದೆ.  ಈತ ಮಂಗಳೂರಿನಲ್ಲಿ ಡೆಕೋರೇಷನ್ ಕೆಲಸ ನಿರ್ವಹಿಸುತ್ತಿದ್ದು, ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಅಡ್ಯಾರ್ ಬಳಿ ಅಪಘಾತ ನಡೆದಿದೆ.

ಮಂಗಳೂರು: ಬೈಕ್  ಅಪಘಾತ; ಯುವಕನೋರ್ವ ಮೃತ್ಯು !   Read More »

ಕರಾವಳಿ, ಕ್ರೈಮ್ ನ್ಯೂಸ್

ಸುಳ್ಯ: ಈಜಲು ನೀರಿಗಿಳಿದ ಯುವಕರಿಬ್ಬರು ಮೃತ್ಯು!     

(ನ್ಯೂಸ್ ಕಡಬ)newskadaba.com ಸುಳ್ಯ, ಫೆ.12. ಈಜಲು ನೀರಿಗಿಳಿದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಅಜ್ಜಾವರ ಪಯಸ್ವಿನಿ ನದಿಯಲ್ಲಿ ಸಂಭವಿಸಿದೆ. ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಯುವಕರ ಗುಂಪು ಪಕ್ಕದಲ್ಲೇ ಇದ್ದ ಪಯಸ್ವಿನಿ ನದಿಗೆ ಈಜಲು ತೆರಳಿದ್ದು, ಈ ವೇಳೆ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಬಳಿಕ ಮೃತದೇಹವನ್ನು ಹೊರತೆಗೆದು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ಸುಳ್ಯ: ಈಜಲು ನೀರಿಗಿಳಿದ ಯುವಕರಿಬ್ಬರು ಮೃತ್ಯು!      Read More »

ಕರಾವಳಿ, ಕ್ರೈಮ್ ನ್ಯೂಸ್

➤ ಪುತ್ತೂರಿನ ಹನುಮಗಿರಿಗೆ ಆಗಮಿಸಿದ ಗೃಹಸಚಿವ ಅಮಿತ್‌ ಶಾ

(ನ್ಯೂಸ್ ಕಡಬ) newskadaba.com. ಪುತ್ತೂರು.  ಫೆ.11. ಕೇರಳದ ಕಣ್ಣೂರಿನ ಏರ್‌ಪೋರ್ಟ್‌ನಿಂದ ಕರಾವಳಿಯ ಗಜಾನನ ಶಾಲೆಯ ಆವರಣಕ್ಕೆ ಗೃಹಸಚಿವ ಅಮಿತ್‌ ಶಾ ಆಗಮಿಸಿದ್ದಾರೆ. ಭಾರತೀಯ ವಾಯುಸೇನೆ ಹೆಲಿಕಾಪ್ಟರ್‌ನಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಹನುಮಗಿರಿ ಬಳಿಯ ಗಜಾನನ ಶಾಲೆಯ ಹೆಲಿಪ್ಯಾಡ್‌ಗೆ ಆಗಮಿಸಿದ್ದಾರೆ. ಅಮಿತ್‌ ಶಾ ಮಂಗಳೂರಿಗೆ ಆಗಮಿಸುತ್ತಿದ್ದಂತೆ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವರಿಂದ ಭರ್ಜರಿ ಸ್ವಾಗತ ಮಾಡಲಾಗಿದೆ. ಹುನುಮಗಿರಿ ದೇವಸ್ಥಾನಕ್ಕೆ ಆಗಮಿಸಿ, ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಅಮಿತ್‌ ಶಾ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿಮಾಜಿ ಸಿಎಂ ಯಡಿಯೂರಪ್ಪ,

➤ ಪುತ್ತೂರಿನ ಹನುಮಗಿರಿಗೆ ಆಗಮಿಸಿದ ಗೃಹಸಚಿವ ಅಮಿತ್‌ ಶಾ Read More »

ಕರಾವಳಿ, ಕರ್ನಾಟಕ
Scroll to Top