ಕರಾವಳಿ

ಬಿಸಿಲಿನ ಕಾವು ಹೆಚ್ಚಳದ ಸಾಧ್ಯತೆ ➤ ದ.ಕ ಜಿಲ್ಲಾಧಿಕಾರಿಯಿಂದ ಆರೋಗ್ಯ ರಕ್ಷಣೆಗೆ ಮಾರ್ಗಸೂಚಿ ಪ್ರಕಟ

(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.09. ಕಳೆದ ಕೆಲ ದಿನಗಳಿಂದ ಬಿಸಿಲಿನ ಕಾವು ಹೆಚ್ಚಾಗಿದೆ. ವೈರಲ್ ಜ್ವರಗಳು ಕೂಡ ಹೆಚ್ಚಳವಾಗಿದೆ. ಬೇಸಿಗೆಯಲ್ಲಿ ಆಹಾರ ಮತ್ತು ನೀರಿನ ಮೂಲಕ ಹೆಚ್ಚಾಗಿ ರೋಗಗಳು ಹರಡುತ್ತದೆ. ಇದರಿಂದಾಗಿ ಉಪಾಹಾರ ಗೃಹಗಳು, ಕ್ಯಾಂಟೀನ್ಗಳು, ಹೊಟೇಲ್ಗಳು, ಬಾರ್ಗಳು, ಬೇಕರಿಗಳಿಗೆ ಸಾರ್ವಜನಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಜಿಲ್ಲಾಧಿಕಾರಿ ರವಿಕುಮಾರ್ ಸೂಚನೆಯನ್ನು ಹೊರಡಿಸಿದ್ದಾರೆ. ಹೊಟೇಲ್ಗಳಲ್ಲಿ ಆಹಾರ ಅಥವಾ ಅಡುಗೆ ತಯಾರಕರು ವೈಯಕ್ತಿಕ ಶುಚಿತ್ವ ಖಚಿತ ಪಡಿಸಿಕೊಳ್ಳಬೇಕು. ಅನಾರೋಗ್ಯದ ವೇಳೆ ಆಹಾರವನ್ನು ತಯಾರಿಸುವ, ಸರಬರಾಜು ಮಾಡುವ ಮತ್ತು ಬಡಿಸುವ ಕಾರ್ಯ […]

ಬಿಸಿಲಿನ ಕಾವು ಹೆಚ್ಚಳದ ಸಾಧ್ಯತೆ ➤ ದ.ಕ ಜಿಲ್ಲಾಧಿಕಾರಿಯಿಂದ ಆರೋಗ್ಯ ರಕ್ಷಣೆಗೆ ಮಾರ್ಗಸೂಚಿ ಪ್ರಕಟ Read More »

ಕರಾವಳಿ

ಮಂಗಳೂರು ವಿವಿ MBA ಪರೀಕ್ಷೆ    ➤ ಅವಿಷ್ಮಾ ಆಳ್ವಾರಿಗೆ ಪ್ರಥಮ ರ್ಯಾಂಕ್

(ನ್ಯೂಸ್ ಕಡಬ)newskadaba.com   ಮಂಗಳೂರು, ಮಾ.09. ಮಂಗಳೂರು ವಿಶ್ವವಿದ್ಯಾಲಯದ ಎಂಬಿಎ ಪರೀಕ್ಷೆಯಲ್ಲಿ ಮಂಗಳೂರು ಮನೇಲ್ ಶ್ರೀನಿವಾಸ್ ನಾಯಕ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ವಿದ್ಯಾರ್ಥಿನಿಯಾಗಿರುವ ಆವಿಷ್ಮಾ ಆಳ್ವಾ ಬಿ. ಅವರು ಪ್ರಥಮ ರ್ಯಾಂಕ್  ಪಡೆದುಕೊಂಡಿದ್ದಾರೆ. ಆವಿಷ್ಮಾ ಆಳ್ವಾ ಬಿ. ಅವರು ಶಾಲಾ ಮತ್ತು ಪಿಯುಸಿ ವಿದ್ಯಾಭ್ಯಾಸವನ್ನು ಪುತ್ತೂರಿನ ವಿವೇಕಾನಂದ ಸಂಸ್ಥೆಯಲ್ಲಿ ಮಾಡಿದ್ದು, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ.97% ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದರು.

ಮಂಗಳೂರು ವಿವಿ MBA ಪರೀಕ್ಷೆ    ➤ ಅವಿಷ್ಮಾ ಆಳ್ವಾರಿಗೆ ಪ್ರಥಮ ರ್ಯಾಂಕ್ Read More »

ಕರಾವಳಿ

ಮಹಿಳೆಯರಿಗೆ ತಂತ್ರಜ್ಞಾನದ ಅರಿವು ಅವಶ್ಯ ➤ ಡಾ. ಶ್ರೀದೇವಿ ಸರಳಾಯ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 09. ಡಿಜಿಟಲ್ ತಂತ್ರಜ್ಞಾನದ ಮುನ್ನುಡಿಯೊಂದಿಗೆ ಊಹಿಸಲಾಗದ ಸಾಮಾಜಿಕ ಬದಲಾವಣೆಗಳು ಕಂಡು ಬಂದಿವೆ. ಅವುಗಳ ಒಳಿತು ಹಾಗೂ ಕೆಡುಕುಗಳನ್ನು ಅವಶ್ಯವಾಗಿ ತಿಳಿದುಕೊಳ್ಳುವಂತೆ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ವಿಭಾಗದ ಮುಖ್ಯಸ್ಥೆ ಹಾಗೂ ಪ್ರಾಧ್ಯಾಪಕಿ ಡಾ. ಶ್ರೀದೇವಿ ಸರಳಾಯ ಕರೆ ನೀಡಿದರು. ಅವರು ಬುಧವಾರದಂದು ಧರ್ಮಜ್ಯೋತಿ ಸಮಾಜ ಸೇವಾ ಕೇಂದ್ರ ಮತ್ತು ವಾಮಂಜೂರಿನ ಸೌಹಾರ್ದ ಮಹಿಳಾ ಒಕ್ಕೂಟದ ಸಹಕಾರದಲ್ಲಿ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ‘ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ’ ಕಾರ್ಯಕ್ರಮದಲ್ಲಿ

ಮಹಿಳೆಯರಿಗೆ ತಂತ್ರಜ್ಞಾನದ ಅರಿವು ಅವಶ್ಯ ➤ ಡಾ. ಶ್ರೀದೇವಿ ಸರಳಾಯ Read More »

ಕರಾವಳಿ, ಕರ್ನಾಟಕ
Theft, crime, Robbery

ಬಂಟ್ವಾಳ: ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ನಗ ನಗದು ಕಳವು

(ನ್ಯೂಸ್ ಕಡಬ)newskadaba.com ಬಂಟ್ವಾಳ, ಮಾ. 09. ಮನೆಯ ಬೀಗ ತೆಗೆದು ಲಕ್ಷಾಂತರ ರೂ ಮೌಲ್ಯದ ನಗ ನಗದು ಕಳವು ಮಾಡಿದ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಇರಾದಲ್ಲಿ ನಡೆದಿದೆ. ಒಟ್ಟು 3,11,550 ರೂ. ಮೌಲ್ಯದ ಚಿನ್ನಾಭರಣ ಕಳವುವಾಗಿದ್ದು, ಸಣ್ಣ ಪ್ಲಾಸಿಕ್ ಬಾಕ್ಸ್ನಲ್ಲಿ ಇಟ್ಟಿದ್ದ ಕಿವಿಯ ಬೆಂಡೋಳೆ ಅಂದಾಜು 10 ಗ್ರಾಂ, 3 ಉಂಗುರಗಳು ಅಂದಾಜು ತೂಕ 8 ಗ್ರಾಂ, ಹವಳದ ಸರ ಅಂದಾಜು ತೂಕ 20 ಗ್ರಾಂ ಹಾಗೂ ಅದರ ಪಕ್ಕದಲ್ಲಿ ಇಟ್ಟಿದ್ದ ಕರಿಮಣಿ ಸರ,

ಬಂಟ್ವಾಳ: ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ನಗ ನಗದು ಕಳವು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸಂಚಾರ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 09. 2023 ನೇ ಸಾಲಿನ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯು ಇಂದಿನಿಂದ ಮಾ.29 ರ ಬುಧವಾರದವರೆಗೆ ಜಿಲ್ಲೆಯ 52 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಪರೀಕ್ಷಾ ದಿನಗಳಂದು ಯಾವುದೇ ವಿದ್ಯಾರ್ಥಿಗಳ ಸಂಚಾರಕ್ಕೆ ತೊಂದರೆಯಾಗದಂತೆ ಬಸ್ಸುಗಳ ವ್ಯವಸ್ಥೆಯನ್ನು ಕಲ್ಪಿಸಿಕೊಡಲು ಮತ್ತು ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರವೇಶ ಪತ್ರಗಳನ್ನು ತೋರಿಸಿದಲ್ಲಿ  ಉಚಿತವಾಗಿ ಪ್ರಯಾಣಿಸಲು ಅನುವು ಮಾಡಿಕೊಡುವಂತೆ ಜಿಲ್ಲೆಯ ಎಲ್ಲಾ ಮಾಲಕರಿಗೆ, ಚಾಲಕರಿಗೆ, ನಿರ್ವಾಹಕರಿಗೆ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಉಪ ಸಾರಿಗೆ ಆಯುಕ್ತರು ಸೂಚಿಸಿದ್ದಾರೆ.

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸಂಚಾರ Read More »

ಕರಾವಳಿ, ಕರ್ನಾಟಕ

ಭಾರತೀಯ ಸಂಸ್ಕೃತಿ, ಪರಂಪರೆಯಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನವಿದೆ ➤ ಡಾ.ಕುಮಾರ್

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 09. ನಮ್ಮ ಕುಟುಂಬ ಹಾಗೂ ಸಮಾಜವನ್ನು ಬೆಳಗುವ ಶಕ್ತಿ ಇರುವುದು ಮಹಿಳೆಗೆ ಮಾತ್ರ, ಇಡೀ ವಿಶ್ವವೇ ಆರೋಗ್ಯವಾಗಿರಬೇಕು ಎಲ್ಲರೂ ಸಂತೋಷ, ನೆಮ್ಮದಿಯಿಂದಿರಬೇಕು ಎಂದರೆ ಅದು ಮಹಿಳೆಯಿಂದ ಸಾಧ್ಯ. ಹಾಗಾಗಿ ಸ್ತ್ರೀಯರಿಗೆ ವಿಶೇಷ ಗೌರವ ಕೊಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಅವರು ಅಭಿಪ್ರಾಯ ಪಟ್ಟರು. ಇವರು ಬುಧವಾರದಂದು ನಗರದ ಕರಾವಳಿ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕೀಡಾ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್

ಭಾರತೀಯ ಸಂಸ್ಕೃತಿ, ಪರಂಪರೆಯಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನವಿದೆ ➤ ಡಾ.ಕುಮಾರ್ Read More »

ಕರಾವಳಿ, ಕರ್ನಾಟಕ

ಮಾನಸಿಕವಾಗಿ ಮಹಿಳೆಯರೇ ಬಲಿಷ್ಠರು ➤ ಡಾ|| ಚೂಂತಾರು

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 09. ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಹಿರಿಯ ಗೃಹರಕ್ಷಕಿಯರಾದ ಶ್ರೀಮತಿ ಕಮಲಾ, ಮೆಟಲ್ ಸಂಖ್ಯೆ 925, ಶ್ರೀಮತಿ ಸುಮಿತ್ರಾ, ಮೆಟಲ್ ಸಂಖ್ಯೆ 145, ಹಾಗೂ ರಂಜನಿ, ಮೆಟಲ್ ಸಂಖ್ಯೆ 924 ಇವರನ್ನು ಜಿಲ್ಲಾ ಗೃಹರಕ್ಷಕ ದಳ, ಮೇರಿಹಿಲ್, ಮಂಗಳೂರು ಕಛೇರಿಯಲ್ಲಿ ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದÀ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು, ವಿಶ್ವ ಮಹಿಳಾ ದಿನಾಚರಣೆ ಕೇವಲ ಒಂದು

ಮಾನಸಿಕವಾಗಿ ಮಹಿಳೆಯರೇ ಬಲಿಷ್ಠರು ➤ ಡಾ|| ಚೂಂತಾರು Read More »

ಕರಾವಳಿ, ಕರ್ನಾಟಕ

ಮಂಗಳೂರಿನಲ್ಲಿ ದೇಶದಲ್ಲಿಯೇ ಗರಿಷ್ಠ ತಾಪಮಾನ    ➤ 38.8 ಡಿ.ಸೆ ದಾಖಲು

(ನ್ಯೂಸ್ ಕಡಬ)newskadaba.com  ಮಂಗಳೂರು, ಮಾ.09. ರಾಜ್ಯದಲ್ಲಿ ಬೇಸಿಗೆಯ ಬಿಸಿಲು ಏರಿಕೆಯಾಗುತ್ತಿದ್ದು, ಕರಾವಳಿ ಭಾಗದಲ್ಲಿ ಮತ್ತೊಮ್ಮೆ ತಾಪಮಾನ ದೇಶದಲ್ಲೇ ದಾಖಲೆಯ ಮಟ್ಟಕ್ಕೆ ತಲುಪಿದೆ. ಮಂಗಳೂರಿನಲ್ಲಿ ಗರಿಷ್ಠ ತಾಪಮಾನ 38.8 ಡಿ.ಸೆ. ದಾಖಲಾಗಿದ್ದು ಇದು ದೇಶದಲ್ಲಿಯೇ ಗರಿಷ್ಟ ತಾಪಮಾನವಾಗಿದೆ. ಈ ಬಾರಿ ಬೇಸಿಗೆಯು ವಾಡಿಕೆಗಿಂತ ಮೊದಲೇ ಪ್ರಾರಂಭವಾಗಿದೆ. ಇನ್ನು ಮಾರ್ಚ್‌ ಎರಡನೇ ವಾರದಿಂದ ಬಿಸಿಲ ತೀವ್ರತೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ರಾಜ್ಯದ ಕೆಲವು ಕಡೆ ಸಾಮಾನ್ಯಕ್ಕಿಂತ 3 ಡಿಗ್ರಿ ಗರಿಷ್ಠ ಉಷ್ಣಾಂಶ ದಾಖಲಾಗುವ ಸಾಧ್ಯತೆಗಳಿವೆ ಎಂದು

ಮಂಗಳೂರಿನಲ್ಲಿ ದೇಶದಲ್ಲಿಯೇ ಗರಿಷ್ಠ ತಾಪಮಾನ    ➤ 38.8 ಡಿ.ಸೆ ದಾಖಲು Read More »

ಕರಾವಳಿ

ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ ➤ ದ.ಕ ಜಿಲ್ಲೆಯಲ್ಲಿ 52 ಪರೀಕ್ಷಾ ಕೆಂದ್ರ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 08. ದ.ಕ.ಜಿಲ್ಲೆಯಲ್ಲಿ ನಾಳೆಯಿಂದ (ಮಾ. 09) ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲಿದ್ದು, ದ.ಕ. ಜಿಲ್ಲೆಯಲ್ಲಿ 52 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಪರೀಕ್ಷೆ ಬರೆಯಲು ಜಿಲ್ಲೆಯ 34,340 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದಾರೆ. ಪರೀಕ್ಷೆಯು ಬೆಳಗ್ಗೆ 10:15ಕ್ಕೆ ಆರಂಭಗೊಂಡು 1:15ಕ್ಕೆ ಮುಕ್ತಾಯಗೊಳ್ಳಲಿದೆ. ರೆಗ್ಯುಲರ್ 15,171 (ಬಾಲಕರು), 16,051 (ಬಾಲಕಿಯರು) ಸಹಿತ 31,222 ಮತ್ತು ಖಾಸಗಿ 1,342 (ಬಾಲಕರು), 674 ಬಾಲಕಿಯರು ಸಹಿತ 2,016 ಹಾಗೂ ಪುನರಾವರ್ತಿತ 733 (ಬಾಲಕರು), 369 (ಬಾಲಕಿಯರು) ಸಹಿತ

ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ ➤ ದ.ಕ ಜಿಲ್ಲೆಯಲ್ಲಿ 52 ಪರೀಕ್ಷಾ ಕೆಂದ್ರ Read More »

ಕರಾವಳಿ, ಕರ್ನಾಟಕ

ಜೂನ್ 23ರಂದು ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ನಿರ್ದೇಶನದ ‘ಸರ್ಕಸ್’ ತೆರೆಗೆ

(ನ್ಯೂಸ್ ಕಡಬ)newskadaba.com  ಮಂಗಳೂರು, ಮಾ.08. ಬಿಗ್ ಬಾಸ್ ಒಟಿಟಿ ಹಾಗು ಸೀಸನ್ 9ರ ವಿನ್ನರ್ ರೂಪೇಶ್ ಶೆಟ್ಟಿಯವರ ಬಹು ನಿರೀಕ್ಷಿತ ತುಳು ಚಿತ್ರ “ಸರ್ಕಸ್” ಬಿಡುಗಡೆಗೆ ದಿನಾಂಕ ನಿಗದಿಯಾಗಿದ್ದು, ಜೂನ್ 23 ರಂದು ಅದ್ಧೂರಿಯಾಗಿ ಚಿತ್ರ ಬಿಡುಗಡೆಯಾಗಲಿದೆ. ಉಪ್ಪಿನಂಗಡಿಯ ಉಬಾರ್ ಉತ್ಸವದ ಕಾರ್ಯಕ್ರಮದಲ್ಲಿ ಬಿಡುಗಡೆ ದಿನಾಂಕವನ್ನು ಅನಾವರಣಗೊಳಿಸಲಾಯಿತು. ತುಳು ಭಾಷೆಯ ಅತಿ ದೊಡ್ಡ ಹಿಟ್ ಚಿತ್ರ ಗಿರಿಗಿಟ್ ತಂಡದ ಮುಂದಿನ ಚಿತ್ರವಾಗಿದೆ ಸರ್ಕಸ್. ಹಾಗು ಗಿರಿಗಿಟ್ ನಂತರ ರೂಪೇಶ್ ಶೆಟ್ಟಿ ನಿರ್ದೇಶನದ ಚಿತ್ರವಾಗಿದೆ.  

ಜೂನ್ 23ರಂದು ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ನಿರ್ದೇಶನದ ‘ಸರ್ಕಸ್’ ತೆರೆಗೆ Read More »

ಕರಾವಳಿ
Scroll to Top