ಕರಾವಳಿ

Theft, crime, Robbery

ಸುಳ್ಯ: ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು- ನಗದು ಕಳವು ➤ ದೂರು ದಾಖಲು

(ನ್ಯೂಸ್ ಕಡಬ) newskadaba.com ಸುಳ್ಯ, ಜು. 03. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಮನೆಯ ಬೀಗ ಮುರಿದು ಒಳನುಗ್ಗಿರುವ ಕಳ್ಳರು, ಸಾವಿರಾರು ರೂ. ನಗದು ಕದ್ದೊಯ್ದ ಘಟನೆ ತಾಲೂಕಿನ ಜಾಲ್ಸೂರು ಗ್ರಾಮದ ಅಡ್ಕಾರು ಎಂಬಲ್ಲಿಂದ ವರದಿಯಾಗಿದೆ. ಅಡ್ಕಾರು ನಿವಾಸಿ ಮುಹಮ್ಮದ್ ನಜೀಬ್ ಅವರು ಜು. 01ರಂದು ಸಂಜೆ ತಮ್ಮ ಹೆಂಡತಿಯ ತವರು ಮನೆಗೆ ಬೀಗ ಹಾಕಿ ಕುಟುಂಬ ಸಮೇತ ತೆರಳಿದ್ದರೆನ್ನಲಾಗಿದೆ. ಮರುದಿನ ಜು. 02ರಂದು ಬೆಳಿಗ್ಗೆ ಪುತ್ತೂರಿನಿಂದ ಮರಳಿ ಮನೆಗೆ ಬಂದಾಗ ಮನೆಯ ಬಾಗಿಲಿನ ಲಾಕ್ ಮುರಿದಿದ್ದು, […]

ಸುಳ್ಯ: ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು- ನಗದು ಕಳವು ➤ ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ವಿಟ್ಲ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ

➤ ಚಾಲಕ ಪವಾಡಸದೃಶ ಪಾರು (ನ್ಯೂಸ್ ಕಡಬ) newskadaba.com ವಿಟ್ಲ, ಜು. 03. ವಿದ್ಯುತ್ ಕಂಬವೊಂದಕ್ಕೆ ಕಾರು ಢಿಕ್ಕಿ ಹೊಡೆದು, ಚಾಲಕ ಪವಾಡಸದೃಶ ಪಾರಾದ ಘಟನೆ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಪರ್ತಿಪ್ಪಾಡಿ ಎಂಬಲ್ಲಿ ನಡೆದಿದೆ. ವಿದ್ಯುತ್ ಕಂಬಕ್ಕೆ ಕಾರು ಗುದ್ದಿದ ರಭಸಕ್ಕೆ ಹೊಂಡದಲ್ಲಿದ್ದ ವಿದ್ಯುತ್ ಕಂಬ ಮೇಲಕ್ಕೆದ್ದು, ಕಾರಿನ ಮೇಲೆಯೇ ಮುರಿದು ಬಿದ್ದಿದೆ. ಚಾಲಕ ಯಾವುದೇ ಅಪಾಯವಿಲ್ಲದೇ ಪವಾಡ ಸದೃಶ ಪಾರಾಗಿದ್ದಾರೆ ಎನ್ನಲಾಗಿದೆ.

ವಿಟ್ಲ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ Read More »

ಕರಾವಳಿ, ಕ್ರೈಮ್ ನ್ಯೂಸ್

ಬೆಳ್ಳಾರೆ: ವಿದ್ಯಾರ್ಥಿಯ ಮೇಲೆ ಸುಳ್ಳಾರೋಪ

➤ ಉಪನ್ಯಾಸಕಿಯ ವಿರುದ್ದ ಪ್ರತಿಭಟನೆ (ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜು. 03. ಶಿಕ್ಷಕಿಯೋರ್ವರು ವಿದ್ಯಾರ್ಥಿಯೋರ್ವನ ಮೇಲೆ ಸುಳ್ಳು ಆರೋಪ ಹೊರಿಸಿ ಪೋಲೀಸರಿಗೆ ದೂರು ನೀಡಿದ್ದಾರೆಂದು ಪೆರುವಾಜೆಯ ಪದವಿ ಕಾಲೇಜಿನ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಉಪನ್ಯಾಸಕಿಯ ವಿರುದ್ಧ ಪ್ರತಿಭಟನೆ ನಡೆಸಿದ ಘಟನೆ ಇಂದು ನಡೆದಿದೆ. ದೀಕ್ಷಿತ್ ಎಂಬ ವಿದ್ಯಾರ್ಥಿ ತನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾನೆ ಎಂದು ವಾಣಿಜ್ಯ ವಿಭಾಗದ ಉಪನ್ಯಾಸಕಿ ಸುನಿತಾ ನಾಯಕ್ ಅವರು ದೂರು ನೀಡಿದ್ದು, ಇದು ಸುಳ್ಳು ಎಂದು ಖಂಡಿಸಿರುವ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಪ್ರತಿಭಟನೆ

ಬೆಳ್ಳಾರೆ: ವಿದ್ಯಾರ್ಥಿಯ ಮೇಲೆ ಸುಳ್ಳಾರೋಪ Read More »

ಕರಾವಳಿ

ಬೈಕ್ ಹಾಗೂ ಕಾರು ಅಪಘಾತ ➤ ಮಹಿಳೆ ಗಂಭೀರ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಜು. 03. ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ ಹೊಡೆದ ಪರಿಣಾಮ ಮಹಿಳೆ ಗಂಭೀರ ಗಾಯಗೊಂಡಿರುವ ಘಟನೆ ಕನ್ಯಾಡಿಯಲ್ಲಿ ನಡೆದಿದೆ. ಗಾಯಗೊಂಡವರನ್ನು ಬೆಳ್ತಂಗಡಿಯ ದೇವಸ್ಥಾನವೊಂದರ ಸಹ ಅರ್ಚಕ ಅಮೇಯ ಭಟ್‌ ಎಂಬವರ ಪತ್ನಿ ಶ್ರೀರಕ್ಷಾಕಿಣಿ ಎಂದು ಗುರುತಿಸಲಾಗಿದೆ. ರಕ್ಷಾಕಿಣಿಯವರು ತನ್ನ ತಾಯಿ ಮನೆಗೆ ತೆರಳಿದ್ದು, ಅಲ್ಲಿಂದ ಹಿಂದಿರುಗುತ್ತಿದ್ದ ವೇಳೆ ಉಜಿರೆ ಕಡೆಯಿಂದ ಬರುತ್ತಿದ್ದ ಕಾರು ದ್ವಿಚಕ್ರ ವಾಹನಕ್ಕೆ ಹಾಗೂ ಇನ್ನೊಂದು ಕಾರಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಸ್ಕೂಟರ್‌ ಇಬ್ಭಾಗವಾಗಿ ಸಂಪೂರ್ಣ ಜಖಂಗೊಂಡಿದ್ದು, ಸವಾರೆ

ಬೈಕ್ ಹಾಗೂ ಕಾರು ಅಪಘಾತ ➤ ಮಹಿಳೆ ಗಂಭೀರ Read More »

ಕರಾವಳಿ

ಮದುವೆಯ ಹಿಂದಿನ ದಿನವೇ ವರನ ತಂದೆ ನಾಪತ್ತೆ

(ನ್ಯೂಸ್ ಕಡಬ)news kadaba.com ಪುತ್ತೂರು, ಜು. 3. ಮದುವೆಯ ಹಿಂದಿನ ದಿನವೇ ವರನ ತಂದೆ ನಾಪತ್ತೆಯಾಗಿರುವ ಘಟನೆ ಒಳಮೊಗ್ರು ಗ್ರಾಮದ ಕುಂಬ್ರದಲ್ಲಿ ನಡೆದಿದೆ. ನಾಪತ್ತೆಯಾದ ನಿವಾಸಿ ಉಮ್ಮರ್‌ ಎಂಬವರು, ಜು.1ರಂದು ಮಧ್ಯಾಹ್ನ 3 ಗಂಟೆಯವರೆಗೆ ಪುತ್ತೂರಿನಲ್ಲಿದ್ದರು ಆ ಬಳಿಕ ನಾಪತ್ತೆಯಾಗಿದ್ದು, ಮೊಬೈಲ್‌ ಸ್ವಿಚ್‌ ಆಫ್‌ ಆಗಿದೆ.ಮಗನ ಮದುವೆ ಇಂದು ನಡೆಯಬೇಕಾಗಿತ್ತು. ನಿನ್ನೆ ಮದರಂಗಿ ಶಾಸ್ತ್ರ ನಿಗದಿಯಾಗಿತ್ತು. ಈಗ ತಂದೆ ನಾಪತ್ತೆಯಾಗಿರುವ ಕಾರಣ ಮದುವೆ ರದ್ದು ಮಾಡಲಾಗಿದೆ. ಮನೆಯವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ, ಮೊಬೈಲ್‌ ಲೊಕೇಶನ್‌ ಆಧಾರದಲ್ಲಿ

ಮದುವೆಯ ಹಿಂದಿನ ದಿನವೇ ವರನ ತಂದೆ ನಾಪತ್ತೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಉಪ್ಪಿನಂಗಡಿ: ಕಾರಿಗೆ ಢಿಕ್ಕಿ ಹೊಡೆದು ರಿಕ್ಷಾ ಪಲ್ಟಿ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜೂ. 03. ಆಟೋ ರಿಕ್ಷಾವೊಂದು ಕಾರೊಂದಕ್ಕೆ ಢಿಕ್ಕಿ ಹೊಡೆದು ಮಗುಚಿ ಬಿದ್ದ ಘಟನೆ ಉಪ್ಪಿನಂಗಡಿಯ ಬಸ್ ನಿಲ್ದಾಣದ ಬಳಿ ಭಾನುವಾರ ರಾತ್ರಿ ನಡೆದಿದೆ. ಉಪ್ಪಿನಂಗಡಿಯಿಂದ ಗುರುವಾಯನಕೆರೆ ಕಡೆಗೆ ಹೋಗುತ್ತಿದ್ದ ಅಟೋ ರಿಕ್ಷಾ, ವಿರುದ್ದ ದಿಕ್ಕಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಈ ಸಂದರ್ಭ ರಿಕ್ಷಾವು ಮಗುಚಿ ಬಿದ್ದಿದೆ. ರಿಕ್ಷಾದಲ್ಲಿ ಚಾಲಕ ಮಾತ್ರವಿದ್ದು, ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಕಾರಿನ ಹಾಗೂ ರಿಕ್ಷಾದ ಮುಂಭಾಗ ಜಖಂಗೊಂಡಿವೆ. ರಿಕ್ಷಾ ಚಾಲಕನ ಅಜಾಗರೂಕತೆ,

ಉಪ್ಪಿನಂಗಡಿ: ಕಾರಿಗೆ ಢಿಕ್ಕಿ ಹೊಡೆದು ರಿಕ್ಷಾ ಪಲ್ಟಿ Read More »

ಕರಾವಳಿ, ಕರ್ನಾಟಕ

ಯುವತಿಯನ್ನು ಅಡ್ಡಗಟ್ಟಿ ಕಿರುಕುಳ ನೀಡಿದ ಯುವಕ

➤ ದೂರು ದಾಖಲು (ನ್ಯೂಸ್ ಕಡಬ) newskadaba.com ಸುರತ್ಕಲ್, ಜು. 03. ಬೈಕಿನಲ್ಲಿ ಬಂದ ಅನ್ಯಕೋಮಿನ ಯುವಕನೋರ್ವ ಯುವತಿಯೋರ್ವಳನ್ನು ರಸ್ತೆ ಮಧ್ಯೆ ಅಡ್ಡಗಟ್ಟಿ ಚುಡಾಯಿಸಿ ಕಿರುಕುಳ ನೀಡಿ, ಹಣದ ಆಮಿಷ ತೋರಿಸಿ ನನ್ನ ಜತೆ ಬಾ ಎಂದು ಹೇಳಿ ಅನುಚಿತವಾಗಿ ವರ್ತಿಸಿದ ಘಟನೆ ಕೃಷ್ಣಾಪುರ 8 ಎ ಬ್ಲಾಕ್ ನಲ್ಲಿ ನಡೆದಿದೆ. ಘಟನೆಯಿಂದ ಭಯಭೀತಳಾದ ಯುವತಿ ಕಿರುಚಿದಾಗ ಸ್ಥಳದಲ್ಲಿ ಸ್ಥಳೀಯರು ಜಮಾಯಿಸಿದ್ದು, ಇದನ್ನು ಕಂಡ ಯುವಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ ಎನ್ನಲಾಗಿದೆ. ಈ ಕುರಿತು ಯುವತಿಯ ಮನೆಯವರು ಸುರತ್ಕಲ್

ಯುವತಿಯನ್ನು ಅಡ್ಡಗಟ್ಟಿ ಕಿರುಕುಳ ನೀಡಿದ ಯುವಕ Read More »

ಕರಾವಳಿ, ಕ್ರೈಮ್ ನ್ಯೂಸ್

ತಿರುಪತಿ ಸಮೀಪದ ಜಲಪಾತದಲ್ಲಿ ಮುಳುಗಿ ಮಂಗಳೂರಿನ ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಸುರತ್ಕಲ್, ಜು. 03. ತಿರುಪತಿ ಸಮೀಪದ ಜಲಪಾತವೊಂದಕ್ಕೆ ಪ್ರವಾಸಕ್ಕೆಂದು ತೆರಳಿದ್ದ ಮಂಗಳೂರಿನ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಮೃತ ಯುವಕನನ್ನು ಸುರತ್ಕಲ್ ಸಮೀಪದ ಹೊನ್ನಕಟ್ಟೆಯ ನಿವಾಸಿ ಸುಮಂತ್ ಅಮೀನ್ (23) ಎಂದು ಗುರುತಿಸಲಾಗಿದೆ. ಈತ ಪ್ರವಾಸಿಗನಾಗಿ ತಿರುಪತಿಗೆ ಭೇಟಿ ನೀಡಿ, ಬಳಿಕ ಅಲ್ಲಿಂದ ಸಮೀಪದ ಜಲಪಾತಕ್ಕೆ ತೆರಳಿ ಅಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ನೀರಿನಲ್ಲಿ ಧುಮುಕಿ ಬಳಿಕ ಮೇಲೆ ಏರಲಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಚೆನ್ನೈಯ ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದಲ್ಲಿ ಎಂಎಸ್ಸಿ

ತಿರುಪತಿ ಸಮೀಪದ ಜಲಪಾತದಲ್ಲಿ ಮುಳುಗಿ ಮಂಗಳೂರಿನ ಯುವಕ ಮೃತ್ಯು Read More »

ಕರಾವಳಿ

ಕಡಬ: ಬೈಕ್ ಗಳ ನಡುವೆ ಢಿಕ್ಕಿ ➤ ಮೂವರಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಜು.01. ಬೈಕ್ ಗಳ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಮೂವರು ಗಾಯಗೊಂಡ ಘಟನೆ ಶನಿವಾರದಂದು ಕಡಬ ಪೇಟೆಯಲ್ಲಿ ನಡೆದಿದೆ. ಕಡಬದ ಫೆಡರಲ್ ಬ್ಯಾಂಕ್ ಮುಂಭಾಗ ಶನಿವಾರದಂದು ಶಾಲಾ ಬಾಲಾಕಿಯೋರ್ವಳು ಹಠಾತ್ ರಸ್ತೆ ದಾಟಿದಾಗ ಬಾಲಕಿಗೆ ಢಿಕ್ಕಿಯಾಗುವುದನ್ನು ಬೈಕ್ ಸವಾರ ತಪ್ಪಿಸಿದ ವೇಳೆ ವಿರುದ್ಧ ದಿಕ್ಕಿನಿಂದ ಬೈಕ್ ನಡುವೆ ಢಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಕಲ್ಲುಗುಡ್ಡೆ ನಿವಾಸಿ ಪವನ್ ಗಂಭೀರವಾಗಿ ಗಾಯಗೊಂಡಿದ್ದು, ಕೋಡಿಂಬಾಳ ನಿವಾಸಿ ಹರ್ಷಿತ್ ಹಾಗೂ ಎಡಮಂಗಲ ನಿವಾಸಿ ಮೋಹನ್ ಸಣ್ಣಪುಟ್ಟ ಗಾಯಗಳೊಂದಿಗೆ

ಕಡಬ: ಬೈಕ್ ಗಳ ನಡುವೆ ಢಿಕ್ಕಿ ➤ ಮೂವರಿಗೆ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್

ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು

➤ ವೈದ್ಯ ಮೃತ್ಯು (ನ್ಯೂಸ್ ಕಡಬ) newskadaba.com ಮಣಿಪಾಲ, ಜು. 01. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಪಲ್ಟಿಯಾದ ಪರಿಣಾಮ ವೈದ್ಯರೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನ ಮಣಿಪಾಲ ರಜತಾದ್ರಿ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ಶುಕ್ರವಾರದಂದು ತಡರಾತ್ರಿ ಸಂಭವಿಸಿದೆ. ಮೃತ ವೈದ್ಯರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಯ ಡಾ. ಸೂರ್ಯನಾರಾಯಣ ಎಂದು ಗುರುತಿಸಲಾಗಿದೆ. ಜೊತೆಗಿದ್ದ ಅವರ ಗೆಳೆಯರಾದ ಕೇರಳದ ಸಂಗೀತ್ ಮತ್ತು ಉತ್ತರಪ್ರದೇಶದ ದಿವಿತ್ ಸಿಂಗ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಶುಕ್ರವಾರದಂದು ರಾತ್ರಿ ಊಟ ಮುಗಿಸಿ ತಮ್ಮ ಫ್ಲ್ಯಾಟ್ ಗೆ

ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು Read More »

ಕರಾವಳಿ
Scroll to Top