ಕರಾವಳಿ

ರಿಕ್ಷಾ ಚಾಲಕನಿಂದ ಅಪ್ರಾಪ್ತ ವಿದ್ಯಾರ್ಥಿನಿಗೆ ಕಿರುಕುಳ – ದೂರು ದಾಖಲು

(ನ್ಯೂಸ್ ಕಡಬ)newskadaba.com ಉಳ್ಳಾಲ, ಜು.29. ಅಪ್ರಾಪ್ತ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ರಿಕ್ಷಾ ಚಾಲಕನ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿ ತಿಳಿಸಿದೆ. ಆರೋಪಿಯು ಪರಾರಿಯಾಗಿದ್ದು, ಆರೋಪಿಯನ್ನು ಇಕ್ಬಾಲ್ ಎಂದು ಗುರುತಿಸಲಾಗಿದೆ. ಬಸ್ಸಿಗಾಗಿ ಕಾಯುವ ವೇಳೆ ಮಾತನಾಡಿಸಲು ಯತ್ನಿಸಿದ್ದ ರಿಕ್ಷಾ ಚಾಲಕ ವಿದ್ಯಾರ್ಥಿನಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಕುರಿತು ವಿದ್ಯಾರ್ಥಿನಿ ಹೆತ್ತವರಲ್ಲಿ ತಿಳಿಸಿದ್ದಳು ಎನ್ನಲಾಗಿದೆ.    

ರಿಕ್ಷಾ ಚಾಲಕನಿಂದ ಅಪ್ರಾಪ್ತ ವಿದ್ಯಾರ್ಥಿನಿಗೆ ಕಿರುಕುಳ – ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಸೂರಿಕುಮೇರು ಎಸ್‌ವೈಎಸ್ ನಿಂದ ಅನುಪಯುಕ್ತ ವಸ್ತುಗಳ ಸಂಗ್ರಹ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಾಣಿ, ಜು. 29. ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್‌ವೈಎಸ್ ದ.ಕ ಈಸ್ಟ್ ಜಿಲ್ಲಾ ಸಮಿತಿಯ ವತಿಯಿಂದ ನಡೆಯುವ ಅಲ್ ಅರ್ಖಮಿಯ್ಯ ಏಕದಿನ ಕ್ಯಾಂಪ್ ಸಹಾಯಾರ್ಥ  “ಸಹಾಯದಿಂದ ಸಮೃದ್ಧಿ” ಧ್ಯೇಯ ವಾಕ್ಯದಡಿ ನಡೆಯುತ್ತಿರುವ ಅನುಪಯುಕ್ತ ವಸ್ತುಗಳ ಸಂಗ್ರಹ ಅಭಿಯಾನದ  ಕಾರ್ಯಕ್ರಮವು ಎಸ್‌ವೈಎಸ್ ಸೂರಿಕುಮೇರು ಯುನಿಟ್ ವತಿಯಿಂದ ಸಂಜರಿ ಕಾಂಪ್ಲೆಕ್ಸ್ ನಲ್ಲಿ ನಡೆಯಿತು. ಅಲ್ ಮುರ್ಶಿದ್ ಇಸ್ಲಾಮಿಕ್ ಅಕಾಡೆಮಿ ಕುದುಂಬ್ಲಾಡಿ ಕೆದಿಲ ಇದರ ಪ್ರೊಫೆಸರ್ ಅಬ್ದುಲ್ ರಝಾಕ್ ಮದನಿ ಅಲ್ ಕಾಮಿಲ್ ಸಖಾಫಿ

ಸೂರಿಕುಮೇರು ಎಸ್‌ವೈಎಸ್ ನಿಂದ ಅನುಪಯುಕ್ತ ವಸ್ತುಗಳ ಸಂಗ್ರಹ ಕಾರ್ಯಕ್ರಮ Read More »

ಕರಾವಳಿ

ಜೀವಹಾನಿ ತಡೆಗಟ್ಟಲು ಜಿಲ್ಲಾಡಳಿತ ಸನ್ನದ್ದ- ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 29. ಮಳೆಗಾಲದಲ್ಲಿ ಸಂಭವಿಸುವ ಪ್ರಾಕೃತಿಕ ವಿಕೋಪಗಳಿಂದ ಜೀವ ಹಾನಿಯನ್ನು ತಡೆಗಟ್ಟಲು ಜಿಲ್ಲಾಡಳಿತ ಸರ್ವ ರೀತಿಯಲ್ಲಿ ಸನ್ನದ್ದವಾಗಿದ್ದು, ಹಲವಾರು ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ತಿಳಿಸಿದರು. ಅವರು ಶುಕ್ರವಾರದಂದು ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮಳೆಗಾಲದಲ್ಲಿ ಜನರ ಜೀವ ರಕ್ಷಿಸಲು ಜಿಲ್ಲೆಯಲ್ಲಿ ನಿರ್ಬಂಧ ಹೇರಲಾದ ಪ್ರದೇಶಗಳಿಗೆ ಪ್ರವಾಸಿಗರು ಸೇರಿದಂತೆ ಸಾರ್ವಜನಿಕರು ತೆರಳಬಾರದು. ಈಗಾಗಲೇ ಜಿಲ್ಲೆಯ ಸಮುದ್ರ ಕಿನಾರೆಗಳು, ದೇವಸ್ಥಾನದ ಹತ್ತಿರದ ನದಿಗಳು,

ಜೀವಹಾನಿ ತಡೆಗಟ್ಟಲು ಜಿಲ್ಲಾಡಳಿತ ಸನ್ನದ್ದ- ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ Read More »

ಕರಾವಳಿ

3 ವಿದ್ಯುತ್ ತಂತಿಗಳ ಕಳ್ಳತನ

(ನ್ಯೂಸ್ ಕಡಬ)newskadaba.com ನೆಲ್ಯಾಡಿ, ಜು.29. ಪಿಕಪ್ ವಾಹನದಲ್ಲಿ ತುಂಬಿಸಿದ್ದ 5 ಬಂಡಲ್ ವಿದ್ಯುತ್ ತಂತಿಗಳ ಪೈಕಿ 3 ಬಂಡಲ್ ವಿದ್ಯುತ್ ತಂತಿ ಕಳವುಗೈದಿರುವ ಘಟನೆ ವರದಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ನಿವಾಸಿ ರಾಘವೇಂದ್ರ ನಾಯ್ಕ್ ಎಂಬವರು ರಾತ್ರಿ ವೇಳೆ ನೆಲ್ಯಾಡಿಯಲ್ಲಿರುವ ಈಗಲ್ ಸಂಸ್ಥೆಗೆ ಸೇರಿದ ಗೋದಾಮಿನಿಂದ 5 ಬಂಡಲ್ ವಿದ್ಯುತ್ ತಂತಿಗಳನ್ನು ಪಡೆದುಕೊಂಡು ಅವರ ಬೊಲೆರೋ ಪಿಕಪ್ ವಾಹನದಲ್ಲಿ ತುಂಬಿಸಿಕೊಂಡು ಹೋಗಿದ್ದು ರಾತ್ರಿ 10.30ರ ವೇಳೆಗೆ ಕಡಬ ತಾಲೂಕು ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿರುವ

3 ವಿದ್ಯುತ್ ತಂತಿಗಳ ಕಳ್ಳತನ Read More »

ಕರಾವಳಿ, ಕ್ರೈಮ್ ನ್ಯೂಸ್

ಕಲಿಕಾ ಕ್ರಿಯಾಶೀಲತೆಯನ್ನು ಉದ್ದೇಪಿಸಬೇಕು- ಯಾದವ್

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 29. ಕಲಿಕೆ ಎಂಬುದು ಸಮಗ್ರವಾದ ಸಂತೋಷ ನೀಡುವ, ಕ್ರಿಯಾಶೀಲತೆಯನ್ನು ಉದ್ದೇಪಿಸುವ ಚಟುವಟಿಕೆಯಾಗಿರಬೇಕು, ಇದೇ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಆಶಯ ಎಂದು ಎಕ್ಕೂರಿನಲ್ಲಿರುವ ಕೇಂದ್ರೀಯ ವಿದ್ಯಾಲಯ ನಂ-2ರ ಪ್ರಾಂಶುಪಾಲ ಎನ್.ಎಸ್. ಯಾದವ್ ಅವರು ಹೇಳಿದರು. ಅವರು ಶುಕ್ರವಾರದಂದು ಎಕ್ಕೂರಿನಲ್ಲಿರುವ ಕೇಂದ್ರೀಯ ವಿದ್ಯಾಲಯ ನಂ-2ರಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಮೂರನೆಯ ವಾರ್ಷಿಕೋತ್ಸವದಲ್ಲಿ ಮಾತನಾಡಿದರು. ಜಿಲ್ಲೆಯ ಸಿಬಿಎಸ್‍ಇ ಮತ್ತು ಇತರೆ ವಿದ್ಯಾಲಯಗಳ ಪ್ರಾಂಶುಪಾಲರು ಹಾಗೂ ಮುಖ್ಯ ಶಿಕ್ಷಕರು ಭಾಗವಹಿಸಿದ್ದರು. ಶಾಲೆಯ ಹಿರಿಯ ಪ್ರಾಥಮಿಕ

ಕಲಿಕಾ ಕ್ರಿಯಾಶೀಲತೆಯನ್ನು ಉದ್ದೇಪಿಸಬೇಕು- ಯಾದವ್ Read More »

ಕರಾವಳಿ

ಮಹಿಳಾ ಪಾಲಿಟೆಕ್ನಿಕ್‍ ನಲ್ಲಿ ಡಿಪ್ಲೊಮಾ ಪ್ರವೇಶಕ್ಕೆಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 29. ನಗರದ ಬೋಂದೆಲ್‍ ನ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‍ ನಲ್ಲಿ ಡಿಪ್ಲೊಮಾ ಪ್ರವೇಶಕ್ಕೆ ಎಸ್.ಎಸ್.ಎಲ್.ಸಿ/ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಂದ ಆ. 08ರೊಳಗೆ ಅರ್ಜಿ ಆಹ್ವಾನಿಸಲಾಗಿದೆ. ಇಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್, ಕಮರ್ಷಿಯಲ್ ಪ್ರಾಕ್ಟೀಸ್ (ಇ), ಕಮರ್ಷಿಯಲ್ ಪ್ರಾಕ್ಟೀಸ್(ಕ) ಹಾಗೂ ಲೈಬ್ರೆರಿ ಅಂಡ್ ಇನ್ಫಾರ್ಮೇಷನ್ ಸೈನ್ಸ್ ಕೋರ್ಸ್‍ ನ ಪ್ರಥಮ ವರ್ಷದ ಡಿಪ್ಲೊಮಾ ಪ್ರವೇಶಕ್ಕೆ ಉಳಿದಿರುವ ಸೀಟುಗಳನ್ನು ತುಂಬಲು ಆಫ್‍ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಪ್ರವೇಶ ಪ್ರಕ್ರಿಯೆಯಲ್ಲಿ ಮೊದಲು ಬಂದವರಿಗೆ

ಮಹಿಳಾ ಪಾಲಿಟೆಕ್ನಿಕ್‍ ನಲ್ಲಿ ಡಿಪ್ಲೊಮಾ ಪ್ರವೇಶಕ್ಕೆಅರ್ಜಿ ಆಹ್ವಾನ Read More »

ಕರಾವಳಿ

ಆ. 08ರಂದು ಗ್ರಾಮ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 29. ಉಳ್ಳಾಲ ತಾಲೂಕಿನ ಅಂಬ್ಲಮೊಗರು ಗ್ರಾಮ ಪಂಚಾಯತ್ ನ 2023-24ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆ ಆ. 08ರ ಶನಿವಾರ ಬೆಳಿಗ್ಗೆ 11 ಗಂಟೆಗೆ ಅಂಬ್ಲಮೊಗರು ಗ್ರಾಮ ಪಂಚಾಯತ್ ವಠಾರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪಿಡಿಒ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆ. 08ರಂದು ಗ್ರಾಮ ಸಭೆ Read More »

ಕರಾವಳಿ

ಪಡಿತರ ಚೀಟಿಯಿಂದ ಮೃತರ ಹೆಸರನ್ನು ತೆಗೆಯಲು ಜಿಲ್ಲಾಧಿಕಾರಿ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 29. ಜಿಲ್ಲೆಯಲ್ಲಿನ ಕೆಲವೊಂದು ಕುಟುಂಬಗಳ ಸದಸ್ಯರು ಮೃತರಾಗಿದ್ದರೂ, ಅವರ ಹೆಸರು ಪಡಿತರದಲ್ಲಿ ತೆಗೆದು ಹಾಕಿರುವುದಿಲ್ಲ. ಈ ರೀತಿಯ 13,133 ಫಲಾನುಭವಿಗಳ ಹೆಸರು ಪಡಿತರ ಚೀಟಿಯಲ್ಲಿ ಉಳಿಸಿರುವುದು ಅಕ್ರಮವಾಗಿದೆ. ಅಂತಹ ಪಡಿತರ ಚೀಟಿದಾರರು ಮೃತಪಟ್ಟವರ ದಾಖಲಾತಿಯನ್ನು ತಾಲೂಕು ಕಚೇರಿಗೆ ಸಲ್ಲಿಸಿ ಪಡಿತರ ಚೀಟಿಯಿಂದ ಮೃತಪಟ್ಟವರ ಹೆಸರನ್ನು ತೆಗೆಸುವಂತೆ ಸೂಚಿಸಲಾಗಿದೆ. ಮೃತರ ಹೆಸರನ್ನು ಚೀಟಿಯಿಂದ ತೆಗೆಯದೇ ಇರುವುದು ಅಪರಾಧ. ಅಂತಹವರನ್ನು ನಿಯಾಮಾನುಸಾರ ಅನರ್ಹಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಯವರ ಕಚೇರಿ ಪ್ರಕಟಣೆ ತಿಳಿಸಿದೆ.

ಪಡಿತರ ಚೀಟಿಯಿಂದ ಮೃತರ ಹೆಸರನ್ನು ತೆಗೆಯಲು ಜಿಲ್ಲಾಧಿಕಾರಿ ಸೂಚನೆ Read More »

ಕರಾವಳಿ

ಮಂಗಳೂರು ಮಹಾನಗರ ಪಾಲಿಕೆಗೆ ಪ್ರಶಸ್ತಿಯ ಗರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 29. “ನನ್ನ ಜೀವನ-ನನ್ನ ಸ್ವಚ್ಚ ನಗರ” ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ಅನುಷ್ಠಾನಗೊಳಿಸಿರುವ ಮಂಗಳೂರು ಮಹಾನಗರ ಪಾಲಿಕೆಗೆ ಪ್ರಶಸ್ತಿ ಲಭಿಸಿದೆ.  ] ಜು.27ರಂದು ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೌರಾಡಳಿತ ಸಚಿವರಾದ ರಹೀಂ ಖಾನ್ ಅವರು ಮಂಗಳೂರು ಮಹಾನಗರ ಪಾಲಿಕೆಯ ಉಪ ಆಯುಕ್ತ (ಆಡಳಿತ) ರವಿಕುಮಾರ್ ಅವರಿಗೆ ಪ್ರಶಸ್ತಿ ನೀಡಿದರು. ಕೇಂದ್ರ ಸರ್ಕಾರದ ಮೇರಿ ಲೈಫ್ ಮೇರಾ ಸ್ಪಚ್ಛಾ ಶೆಹರ್ (Meri Life Mera Swachha Shehar) ಅಭಿಯಾನದಡಿ “ನನ್ನ ಜೀವನ, ನನ್ನ ಸ್ವಚ್ಚ

ಮಂಗಳೂರು ಮಹಾನಗರ ಪಾಲಿಕೆಗೆ ಪ್ರಶಸ್ತಿಯ ಗರಿ Read More »

ಕರಾವಳಿ

ಮನೆಯ ಮೇಲೆ ಕುಸಿದು ಬಿದ್ದ ಮರ – ಮಹಿಳೆ ಅಪಾಯದಿಂದ ಪಾರು !!

(ನ್ಯೂಸ್ ಕಡಬ)newskadaba.com ಪುತ್ತೂರು, ಜು.29. ಮನೆಯ ಮೇಲೆ ಮರ ಬಿದ್ದು ಮನೆ ಭಾಗಶಃ ಹಾನಿಯಾಗಿರುವ ಘಟನೆ ಸರ್ವೆ ಗ್ರಾಮದ ರೆಂಜಿಲಾಡಿಯಲ್ಲಿ ರಾತ್ರಿ ಸಂಭವಿಸಿದೆ ಎನ್ನಲಾಗಿದೆ. ರೆಂಜಿಲಾಡಿ ನಿವಾಸಿ ಸರಕಾರಿ ಪ್ರೌಢ ಶಾಲೆಯಲ್ಲಿ ಅಡುಗೆ ಸಿಬ್ಬಂದಿಯಾಗಿರುವ ಮೋಹಿನಿ ಎಂಬವರ ಮನೆಗೆ ರಾತ್ರಿ ವೇಳೆ ಮರ ಮುರಿದು ಬಿದ್ದಿದ್ದು, ಮನೆಯ ಹಿಂಭಾಗದ ಗೋಡೆ, ಶೀಟ್ ಸಂಪೂರ್ಣ ಕುಸಿದು ಬಿದ್ದಿದೆ ಎನ್ನಲಾಗಿದೆ. ಮನೆಯಲ್ಲಿ ಮೋಹಿಣಿ ಮಾತ್ರ ವಾಸವಾಗಿದ್ದು, ತನ್ನ ತಾಯಿಯ ಮನೆಗೆ ಹೋಗಿದ್ದ ವೇಳೆ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.  

ಮನೆಯ ಮೇಲೆ ಕುಸಿದು ಬಿದ್ದ ಮರ – ಮಹಿಳೆ ಅಪಾಯದಿಂದ ಪಾರು !! Read More »

ಕರಾವಳಿ
Scroll to Top